ಕರ್ಮದ ಫಲ
ಕರ್ಮದ ಫಲ
ಒಬ್ಬ ಮೇಲಾಧಿಕಾರಿಗೆ ಮನೆಯಿಂದ ಹೊರಡೋವಾಗ ತಮ್ಮ ಪತ್ನಿ ಯ ಮಾತಿನಿಂದ ತಲೆ ಬಿಸಿಯಾಗಿತ್ತು. ಕಚೇರಿಗೆ ಹೋಗಿ ತನ್ನ ಸೆಕ್ರೆಟರಿ ಮೇಲೆ ರೇಗಾಡಿ ಕೋಪ ತೀರಿಸಿ ಕೊಂಡರು . ಸೆಕ್ರೆಟರಿ ಸಂಜೆ ಮನೆಗೆ ಹೋಗೋವರೆಗೂ ಯಾರ ಹತ್ತಿರಾನು ಮಾತಾಡ್ದೆ ಇದ್ದು, ಮನೆಗೆ ಬಂದು ಹೆಂಡತಿ ಮೇಲೆ ಕಾರಣವೇ ಇಲ್ಲದೆ ಜಗಳ ತೆಗೆದು ತಮ್ಮ ಕೋಪ ತೀರಿಸಿಕೊಂಡರು. ಹೆಂಡತಿಯ ತಲೆ ಕೆಟ್ಟು ಬೇಜಾರಾಗಿದ್ದಾಗ ಸ್ಕೂಲ್ ನಿಂದ ಆಗತಾನೆ ಮನೆಗೆ ಬಂದ ಮಗನ ಮೇಲೆ ಏನೋ ಕೇಳಿದ್ದಕ್ಕೆ ಸರಿಯಾಗಿ ಉತ್ತರ ಕೊಡ್ಲಿಲ್ಲ ಅಂತ ಕೋಪದಲ್ಲಿ ನಾಲ್ಕು ಏಟು ಕೊಟ್ಟು ತಮ್ಮ ಕೋಪ ತೀರಿಸಿಕೊಂಡ್ರು . ಮಗ ಅಳ್ತಾ ಹೊರಗೆ ಹೋದ. ಅವನನ್ನು ಸ್ನೇಹಿತರು ಮಾತಾಡಿಸಿದರೂ ಮಾತಾಡ್
ದೆ ಕೋಪ ಮಾಡ್ಕೊಂಡಿದ್ದ. ಕಾರಣ ಕೇಳಿದ್ದಕ್ಕೆ ಅವರ ಮೇಲೆ ರೇಗಾಡಿ ಕೋಪ ತೀರಿಸಿಕೊಂಡ. ಆ ಸಮಯಕ್ಕೆ ಒಂದು ನಾಯಿ ಅಲ್ಲಿಗೆ ಬಂತು ಕೋಪ ಇನ್ನೂ ಕಡಿಮೆ ಆಗಿರಲಿಲ್ಲ. ಆ ಬಡಪಾಯಿ ನಾಯಿ ಮೇಲೆ ಕಲ್ಲು ಹೊಡೆದು ತೀರಿಸ್ಕೊಂಡ. ನಾಯಿ ಕುಯ್ ಕುಯ್ ಅಂತ ಓಡಿ ಹೋಗೋವಾಗ ಒಂದು ಸ್ಕೂಟರ್ ಗೆ ಅಡ್ಡಬಂದು ಸವಾರ ಕೆಳಗೆ ಬಿದ್ದ. ನಾಯಿ ಅವನ ಕಾಲು ಕಚ್ಚಿ ಬಿಡ್ತು.ನಾಯಿ ಕೋಪ ತಣ್ಣಗಾಯ್ತು. ಆದರೆ ಕೆಳಗೆ ಬಿದ್ದು ಗಾಯ ಮಾಡ್ಕೊಂಡಿದ್ದರ ಜೊತೆಗೆ ಸವಾರನಿಗೆ ನಾಯಿಯೂ ಕಚ್ಚಿತ್ತು . ಆ ಸವಾರ ಮತ್ಯಾರು ಅಲ್ಲ ಅದೇ ಬಾಸ್ ಆಗಿದ್ದ. ಏನಾಶ್ಚರ್ಯ !
.