ಇಂಗು ತಿಂದ ಮಂಗ
ಇಂಗು ತಿಂದ ಮಂಗ
ಅವತ್ತು ಒಂದು ದಿನ ಬೇರೆ ಊರಿನ ಸಂಬಂಧಿಕರ ಫೋನು ಬಂದಿತ್ತು. ಅದು ಸಾವಿನ ಸುದ್ದಿ ಆಗಿತ್ತು.
ಮನೆಯವರಿಗೆಲ್ಲ ತಿಳಿಸಿದೆ, ಅಲ್ಲಿ ಅಜ್ಜ ತೀರಿಕೊಂಡಿದ್ದಾರೆ ಎಂದು. ಮನೆಯವರು ಎಲ್ಲರೂ ದೂರದ ಊರು ತಡಮಾಡಿದರೆ ಕೊನೆಯ ಮುಖ ಸಿಗಲ್ಲ ಅಂತ ಅವಸರವಾಗಿ ಊರಿಗೆ ಹೋದರು ಅಂತಿಮ ದರ್ಶನಕ್ಕೆ.
ಸತ್ತವರ ಮನೆ ಸಮೀಪ ಆದಂತೆ ಅಜ್ಜಾ... ಎಂದು ಕೂಗಿ ಅಳಲು ಶುರು ಮಾಡಿದ್ದಾರೆ ನಮ್ಮ ಅತ್ತೆ. ಮನೆಗೆ ಹೋಗಿ ನೋಡಿದರೆ ಅಲ್ಲಿ ಇದಿದ್ದು ಅಜ್ಜಿಯ ಶವ, ಅಜ್ಜ ಜಗುಲಿ ಮೇಲೆ ಕುಳಿತು ಅಳುತ್ತಿದ್ದರು.
ಅಲ್ಲಿ ಇದ್ದವರು ನಮ್ಮ ಅತ್ತೆ ಅವರನ್ನು ತಿರುಗಿ ತಿರುಗಿ ನೋಡುತ್ತಿದ್ದರು.
ಸಂಬಂಧಿಕರು ಅಜ್ಜಿ ತೀರಿಕೊಂಡಿದ್ದಾರೆ ಎಂದು ಹೇಳಿದ್ದನ್ನು ನಾನು ಅಜ್ಜ ಎಂದು ತಪ್ಪಾಗಿ ಕೇಳಿಸಿಕೊಂಡು ಮನೆಯವರಿಗೆ ಅವಸರದಲ್ಲಿ ಅಜ್ಜ ಎಂದು ಹೇಳಿ ಬಿಟ್ಟಿದ್ದೆ.
ನಾನು ಏನೋ ಮಾಡಲು ಹೋಗಿ, ನನ್ನ ಮನೆಯವರೆಲ್ಲ ಮುಜುಗರ ಅನುಭವಿಸುವಂತೆ ಮಾಡಿ ಬಿಟ್ಟಿದ್ದೆ.
ಇಂಗು ತಿಂದಿದ್ದು ನಾನು ಮಂಗಾ ಆಗಿದ್ದು ಅವರು.
