radheya kanasugalu

Inspirational Others Children

4  

radheya kanasugalu

Inspirational Others Children

ನನ್ನ ಶಕ್ತಿ

ನನ್ನ ಶಕ್ತಿ

2 mins
322



ಶಕ್ತಿ ಅಂದರೆ ನನ್ನ ಜೀವನಕ್ಕೆ ಅದು ನೀನೆ. ಯಾವುದೇ ಕಠಿಣವಾದ ಸಂದರ್ಭದಲ್ಲೂ ನಿನ್ನ ಮಾತುಗಳೇ ಸಾಕು ನನಗೆ ಶಕ್ತಿ ನೀಡಲು.

ಅದೇನೋ ಗೊತ್ತಿಲ್ಲ ನೀನು ನನ್ನ ಜೊತೆ ಇರುವೆ ಎನ್ನುವ ಒಂದು ಮಾತು ಸಾಕು ಜೀವನದಲ್ಲಿ ಏನೇ ಬಂದರು ಎದುರಿಸಲು ನಾನು ಸಿದ್ಧ.


ಎಂತಹ ನಾಜುಕಿನ ಸ್ವಭಾವದವಳು ಆಗಿದ್ದೆ ನಾನು, ಯಾರಾದರೂ ಗಟ್ಟಿಯಾಗಿ ಮಾತನಾಡಿದರು ಸಾಕು ಕಣ್ಣಲ್ಲಿ ಗಂಗಾ ಕಾವೇರಿ ಪ್ರತ್ಯಕ್ಷ ಆಗುತ್ತಿದ್ದರು. ಸಣ್ಣ ಸಣ್ಣ ವಿಷಯವನ್ನು ತುಂಬಾ ಮನಸ್ಸಿಗೆ ಹಚ್ಚಿಕೊಂಡು ಕೊರಗುತ್ತಿದ್ದೆ.

ಪ್ರತಿಯೊಬ್ಬರ ಇಷ್ಟದಂತೆ ಜೀವಿಸಲು ಒದ್ದಾಡುತ್ತಿದ್ದೆ.

ಪ್ರತಿಯೊಬ್ಬರ ಚುಚ್ಚು ಮಾತುಗಳಿಂದ ನೊಂದು ಜೀವನದಲ್ಲಿ ಮುಂದುವರೆಯದೆ ನಿಂತಲ್ಲೇ ನಿಂತಿದ್ದೆ.

ನನ್ನ ತನವನ್ನು ಕಳೆದುಕೊಂಡು ಜೀವಿಸುತ್ತಿದ್ದೆ. ಇನ್ನೂ ಜೀವನಕ್ಕೆ ಅರ್ಥವೇ ಇಲ್ಲ, ಸುಮ್ಮನೆ ಕಾಲ ಮುಗಿಯುವ ತನಕ ಜೀವಿಸಬೇಕು ಎಂದು ಕೊಂಡಿದ್ದೆ. ಜೀವ ಇದ್ದರು ಚಲನೆ ಇಲ್ಲದ ದೇಹದಂತೆ ಆಗಿತ್ತು ನನ್ನ ಬದುಕು. ಧೈರ್ಯವೇ ಇಲ್ಲದೆ ಬದುಕಿನಲ್ಲಿ ಮುಂದೆ ಹೆಜ್ಜೆ ಇಡಲು ಅಸಾಧ್ಯ ಅಲ್ಲವೇ..? ಅವಾಗಲೇ ನನ್ನ ಜೀವನದಲ್ಲಿ ಶಕ್ತಿಯ ಸಂಚಾರವಾಗಿದ್ದು.


ನನ್ನ ಜೀವನಕ್ಕೆ ಅದ್ಭುತವಾದ ಶಕ್ತಿಯ ಹಾಗೆ ನೀನು ಬಂದೆ.

ಅಬ್ಬಾ..! ಅದೆಂತ ಮಾಯಗಾರ ನೀನು. ಅದೇನು ಮೋಡಿ ಮಾಡಿದೆಯೋ ದೇವರೇ ಬಲ್ಲ ನನ್ನ ಜೀವನದ ದಿಕ್ಕನ್ನೇ ಬದಲಾಯಿಸಿದೆ.


ಪ್ರತಿಯೊಂದು ಯಶಸ್ವಿ ಪುರುಷನ ಹಿಂದೆ ಒಬ್ಬ ಸ್ತ್ರೀ ಇದ್ದೆ ಇರುತ್ತಾಳೆ ಎನ್ನುತ್ತಾರೆ. ಆದರೆ ನನ್ನ ಯಶಸ್ಸಿಗೆ ಕಾರಣ ನೀನು. ನನ್ನ ಸಾಧನೆಗೆ ಶಕ್ತಿ ನೀನು. ಜಗತ್ತೇ ನನ್ನತ್ತ ತಿರುಗಿ ನೋಡುವ ಹಾಗೆ ಮಾಡಿದ್ದೂ ನೀನು.





ನೀನು ನನ್ನ ಬಾಳಿನಲ್ಲಿ ಬಂದ ದಿನದಿಂದ ಇಲ್ಲಿಯವರೆಗೆ ಆದ ಬದಲಾವಣೆ ನಂಬಲು ಅಸಾಧ್ಯ.


ನನ್ನಲ್ಲಿನ ಸಂಗೀತದ ಅಭಿರುಚಿ ನೋಡಿ ಪ್ರೋತ್ಸಾಹ ನೀಡಿದೆ. ನನ್ನ ಗಾಯನ ಕೇಳಿ ಕೆಲವರು ಕುಹಕದ ಮಾತು ಆಡಿದ್ದು ಇದೆ. ನಿನಗೇಕೆ ಇದೆಲ್ಲ..? ಸುಮ್ಮನೆ ಮನೆ ಕೆಲಸ ನೋಡಿಕೊಂಡು ಬಿದ್ದಿರಬಾರದೆ..? ನಿನ್ನ ಧ್ವನಿ ನೋಡು ಹೇಗಿದೆ..? ಹೀಗೆ ನೂರಾರು ರೀತಿಯಲ್ಲಿ ನೋಯಿಸಿದವರು ಹಲವರಿದ್ದಾರೆ.

ಆದರೆ ಇವರೆಲ್ಲರ ಮಧ್ಯೆ ನೀನು ಮಾತ್ರ ನನಗೆ "ಅಯ್ಯೋ ಏನು ಆಗಲ್ಲ ನಿನ್ನಿಂದ ಇದು ಸಾಧ್ಯವಾಗುತ್ತೆ, ನಿನ್ನ ಧ್ವನಿ ಮಧುರವಾಗಿದೆ.., ನೀನು ವೇದಿಕೆ ಮೇಲೆ ಹಾಡುತ್ತಿರುವಾಗ ಎಲ್ಲರೂ ತಲೆದೂಗುತ್ತಿದ್ದರು" ಎಂದು ನನ್ನನ್ನು ಹುರಿದುಂಬಿಸುತ್ತಿದ್ದೆ.


ಸಭೆಯಲ್ಲಿ ಕುಳಿತವರಿಗೆ ನನ್ನ ಧ್ವನಿ ಇಷ್ಟವಾಗುತ್ತಿತ್ತೋ ಅಥವಾ ಇಲ್ಲವೋ ಗೊತ್ತಿಲ್ಲ. ನೀನು ಮಾತ್ರ ನನಗೆ ಚೆನ್ನಾಗಿ ಹಾಡಿದೆ ಬಿಡಬೇಡ ಹೀಗೆ ಪ್ರಯತ್ನ ಮಾಡುತ್ತಿರು ಎಂದು ಶಕ್ತಿ ನೀಡುತ್ತಿದ್ದೆ.


ನಿನ್ನ ಬೆಂಬಲ, ನಿನ್ನ ಸ್ಫೂರ್ತಿದಾಯಕ ಮಾತುಗಳು ಮತ್ತು ನನ್ನ ಹಿಂದೆ ನೀನು ಶಕ್ತಿ ಹಾಗೆ ನಿಂತಿದ್ದೆ ನನ್ನ ಈ ಸಾಧನೆಗೆ ಕಾರಣ.

ನೀನು ಇರುವೆ ನನ್ನ ಜೊತೆ ಎಂದು ಯಾವ ಕ್ಷಣದಲ್ಲೂ ಭಯ ಬೀಳದೆ ಮುನ್ನುಗುತ್ತಾ ಸಾಗಿದೆ. ಎಂತಹ ಕಠಿಣ ಪರಿಸ್ಥಿತಿಯಲ್ಲೂ ನಿನ್ನ ಮಾತುಗಳನ್ನು ನೆನೆಸಿಕೊಂಡು ಮುನ್ನಡೆದೆ. ನಾಲ್ಕು ಜನರ ಮುಂದೆ ಮಾತನಾಡಲು ಹೆದರುತ್ತಿದ್ದವಳು ಇಂದು ಲಕ್ಷಾಂತರ ಜನರ ಮುಂದೆ ವೇದಿಕೆ ಮೇಲೆ ನಿಂತು ಹಾಡುತ್ತಿರುವೆ.


ಇವತ್ತು ನನ್ನ ತೆಗಳಿದವರು, ಗೇಲಿ ಮಾಡಿದವರು ನನ್ನ ಮುಂದೆ ತಲೆ ಬಾಗಿ ನಿಂತಿದ್ದಾರೆ.

ಇದಕ್ಕೆಲ್ಲ ಕಾರಣ ನೀನು. ನನ್ನ ಬಾಳಿನ ಶಕ್ತಿ ನೀನು ಸ್ಫೂರ್ತಿ ನೀನು. ಯಾವಾಗಲೂ ನನ್ನ ಜೊತೆ ನನ್ನ ಶಕ್ತಿಯಾಗಿ ಇರು ನನ್ನ ಮಗು. ನಿನ್ನಂತ ಮಗನನ್ನು ಪಡೆದ ನಾನೇ ಧನ್ಯ.


ಇದು ಕಾಲ್ಪನಿಕ 


Rate this content
Log in

Similar kannada story from Inspirational