radheya kanasugalu

Tragedy Others Children

4.0  

radheya kanasugalu

Tragedy Others Children

ತಾಯಿಯೇ ತಂದೆಯಾಗಿ

ತಾಯಿಯೇ ತಂದೆಯಾಗಿ

2 mins
167


ಮೇಲ್ಛಾವಣಿ ನೋಡುತ್ತಾ ಯೋಚನೆಯಲ್ಲಿ ಮುಳುಗಿದ್ದಳು.., ಕಣ್ಣಿಂದ ಕಂಬನಿ ಜಾರುತಿತ್ತು. ಅಷ್ಟರಲ್ಲಿ ಮಾತನಾಡುವ ಸದ್ದು ಕೇಳಿಸಿತು. ಅಮ್ಮ...! ಅಮ್ಮಾ...! ಓ... ಇದು ಹೊಟ್ಟೆಯಲ್ಲಿರುವ ಮಗು ಮಾತನಾಡುವ ಸದ್ದು... ಅಚ್ಚರಿ ಇಂದ ಹೊಟ್ಟೆ ಮೇಲೆ ಕೈ ಆಡಿಸಿದಳು. "ಅಮ್ಮಾ ನಾನೇ ಮಾತನಾಡುತ್ತಿರುವೆ ಸಂಶಯ ಬೇಡ" ಎಂದಿತು ಗರ್ಭದೊಳಗಿನ ಪುಟ್ಟ ಮಗು. ಅವಳು ಏಳು ತಿಂಗಳು ಗರ್ಭಿಣಿ ಮಗು ಮಾತನಾಡುವ ಸದ್ದು ಕೇಳಿ ತನ್ನ ಚಿಂತೆಯಲ್ಲ ಮರೆತು ಮಗುವಿನ ಮಾತು ಆಲಿಸಲು ಉತ್ಸುಕಳಾದಳು.


"ಅಮ್ಮಾ ಯಾಕಮ್ಮ ಯಾವಾಗಲು ಯಾವುದೋ ಚಿಂತೆಯಲ್ಲಿ ಇರುತ್ತೀಯ...? ಊಟ ಮಾಡುವುದು ಅರೆಮನಸ್ಸಿನಿಂದ..? ನಾನು ಕೈ ಕಾಲು ಆಡಿಸುವಾಗಲು ನಿನ್ನಲ್ಲಿ ಯಾವುದೇ ಪ್ರತಿಕ್ರಿಯೆಗಳು ಇರುವುದಿಲ್ಲ. ಪ್ರತಿ ಬರಿ ವೈದ್ಯರ ಬಳಿ ಹೋಗುವಾಗಲೂ ಅಳುತ್ತ ಹೋಗುತ್ತೀಯಾ. ಮನೆ ತುಂಬಾ ಜನರಿದ್ದಾರೆ ಅವರು ಮಾತನಾಡುವ ಸದ್ದು ನಾನು ಕೇಳಿಸಿಕೊಂಡಿದ್ದೇನೆ, ಆದರೆ ನೀನು ಮಾತ್ರ ಅವರೊಟ್ಟಿಗೂ ಖುಷಿಯಾಗಿ ಮಾತನಾಡುವುದಿಲ್ಲ. ನಿನ್ನದೆ ಯೋಚನಾ ಲಹರಿಯಲ್ಲಿ ಮುಳುಗಿರುತ್ತಿ. ನನಗೆ ಏನೇನೊ ತಿನ್ನುವ ಆಸೆಗಳು ಅವೆಲ್ಲ ಮುಂದೆ ಇದ್ದರು ನೀನು ಏನು ತಿನ್ನುವುದೇ ಇಲ್ಲ. ಕೆಲವು ಸಾರಿ  ಮಾತ್ರ ಪ್ರೀತಿ ಇಂದ ನನ್ನ ಮೇಲೆ ಕೈಯಾಡಿಸುತ್ತಿಯ, ಖುಷಿ ಇಂದ ಹಾಡು ಹೇಳುತ್ತೀಯ, ಹೊಟ್ಟೆ ತುಂಬಾ ಊಟ ಮಾಡುತ್ತೀಯಾ. ಆದರೆ ಹೀಗೆ ದಿನ ಯಾಕೇ ಮಾಡಲ್ಲ.? ಯಾಕಮ್ಮ ನಾನು ಅಂದ್ರೆ ನಿನಗೆ ಇಷ್ಟ ಇಲ್ಲವೇ..? ನಾನು ನಿನಗೆ ತುಂಬಾ ತೊಂದರೆ ಕೊಡುತ್ತೇನೆ ಎಂದೂ ಮಂಕಾಗಿ ಇರುತ್ತೀಯಾ? ಹೇಳಮ್ಮ ಹೇಳು." ಎಂದು ಕೇಳಿತು.


ಪುಟ್ಟ ಕಂದ ಕೇಳಿದ ಪ್ರಶ್ನೆಗಳಿಗೆ ಏನೆಂದು ಉತ್ತರ ನೀಡಲಿ.. ಎಂದೂ ವಿಚಲಿತಳಾದಳು, ಜೊತೆಗೆ ಮನಸ್ಸಿಗೆ ತುಂಬಾ ನೋವು ಆಯಿತು.


ಅವರು ನಾನು ಇಷ್ಟ ಪಟ್ಟು ಆಯ್ಕೆ ಮಾಡಿಕೊಂಡ ಜೀವನವಿದು, ನಮ್ಮಿಬ್ಬರ ಪ್ರೀತಿಯ ಸಂಕೇತವೇ ಈ ಮಗು.

ಹೇಗೆ ಹೇಳಲಿ ಮಗುವಿಗೆ ನನ್ನ ಮನದ ತಳಮಳ.

ಪ್ರತಿ ಬಾರಿ ವೈದ್ಯರ ಬಳಿ ಹೋಗುವಾಗಲೂ ಒಬ್ಬಳೇ ಹೋಗುವೆ.. ಕೈ ಹಿಡಿದು ನಿಧಾನವಾಗಿ ನಡೆಸಿ ಕರೆದೋಯ್ಯಲು ಇವರು ಇಲ್ಲ, ನಾನೇ ಸಾವರಿಸಿ ಕೊಂಡು ಹೋಗುವೆ. ಎಷ್ಟೋ ರಾತ್ರಿ ಆಯಾಸದಿಂದ ನಿದಿರೆ ಇಲ್ಲದೆ ಕಳೆದಿರುವೆ ಸಂತೈಸಿ ತಲೆ ತಟ್ಟಿ ತೊಡೆಯ ಮೇಲೆ ಮಲಗಿಸಿಕೊಳ್ಳಲು ಇವರಿಲ್ಲ. ಮನೆ ತುಂಬಾ ಜನರು ಮಾತನಾಡಿಸಿದರು ನನ್ನ ಮನ ಮಾತ್ರ ಇವರ ಮಾತುಗಳಿಗೆ ಇವರ ಸಮೀಪ್ಯಕ್ಕೆ ಹಂಬಲಿಸುತ್ತದೆ. ಹಲವಾರು ರೀತಿ ಅಡುಗೆ ಮಾಡಿ ಪ್ರೀತಿ ಇಂದ ಊಟ ಮಾಡು ಎಂದೂ ಹೇಳುವರು ಹಲವರಿದ್ದರು ಒಂದು ತುತ್ತು ಮಾಡಿ ತಿನ್ನಿಸಲು ಇವರಿಲ್ಲ.

ಮಗುವಿನ ಚಲಣೆ ಬೆಳವಣಿಗೆ ಕಂಡು ಹಿರಿ ಹಿರಿ ಹಿಗ್ಗಲು ಇವರಿಲ್ಲ. ಹೊಟ್ಟೆಗೆ ಮುತ್ತು ನೀಡಿ ಕಿವಿ ಕೊಟ್ಟು ಮಗುವಿನ ಹೃದಯದ ಬಡಿತ ಕೇಳಲು ಇವರಿಲ್ಲ. ಹೆರಿಗೆ ಸಮಯ ನೆನೆಸಿಕೊಂಡು ಭಯವಾದಾಗ ಜೊತೆ ನಾನಿರುವೆ ಧೈರ್ಯದಿಂದ ಇರು ಎಂದೂ ಹೇಳಲು ಇವರಿಲ್ಲ.

ಇವರಿಲ್ಲದ ಜೀವನವೇ ಬೇಡವಾದಗ ಮಗುವಿಗಾಗಿ ಬದುಕ ಬೇಕೇಣಿಸಿತು. ಇವರಿಲ್ಲದೆ ಗರ್ಭವಸ್ಥೆಯನ್ನ ಖುಷಿ ಇಂದ ಅನುಭವಿಸಲು ಆಗುತ್ತಿಲ್ಲ. ಮುಂದಿನ ಜನುಮದಲ್ಲಿ ಆದರೂ ಇವರೊಟ್ಟಿಗೆ ಎಲ್ಲ ಸುಖ ಅನುಭವಿಸುವ ವರ ಬೇಡಿ ಕಣ್ಣೀರಾದಳು.


"ಇಲ್ಲ ಮಗು ನೀನು ಎಂದರೆ ನನಗೆ ಪ್ರಾಣ.. ನೀನು ಇಲ್ಲದೆ ನನಗೆ ಬೇರೆ ಏನು ಇದೆ" ಎಂದಳು.

ಮಗು ಪ್ರತಿಯಾಗಿ ನುಡಿಯಿತು "ಅಮ್ಮಾ ನಿನ್ನೊಟ್ಟಿಗೆ ಅವರಿಲ್ಲ ಎಂದೂ ಚಿಂತಿಸ ಬೇಡ, ನನಗೆ ನಿನ್ನ ಮನದ ಮಾತು ಕೇಳಿಸಿತು. ಅಮ್ಮಾ ಅವರ ಪ್ರತಿರೂಪ ನಾನು ನಿನ್ನ ಜೊತೆ ಇರುವೆ..! ಇನ್ನುಮುಂದೆ ದುಃಖ ಪಡಬೇಡ. ನಾನು ಆದಷ್ಟು ಬೇಗ ಭೂಮಿಗೆ ಬಂದು ನಿನ್ನ ಖುಷಿಯಾಗಿ ನೋಡಿಕೊಳ್ಳುವೆ." ಎಂದಿತು. ಮಗುವಿನ ಮಾತು ಕೇಳಿ ಮನದುಂಬಿ ಬಂದಿತು. ತಂದೆ ಮತ್ತು ತಾಯಿ ಆಗಿ ಮಗುವಿನ ಆರೈಕೆ ನಾನೇ ಮಾಡಬೇಕೆಂದು ಗೆಲುವಾದಳು.


        


Rate this content
Log in

Similar kannada story from Tragedy