STORYMIRROR

radheya kanasugalu

Classics Inspirational Others

4  

radheya kanasugalu

Classics Inspirational Others

ಸರಳತೆಯ ಸಾಧಕಿ ಸುಧಾ ಅಮ್ಮ

ಸರಳತೆಯ ಸಾಧಕಿ ಸುಧಾ ಅಮ್ಮ

2 mins
389

ಸಮಾಜದಲ್ಲಿ ನಡೆಯುವ ಕೆಲವು ಘಟನೆಗಳಿಗೆ ನಾವೆಲ್ಲರೂ ಮೂಕ ಪ್ರೇಕ್ಷರು. ನಮ್ಮಿಂದ ಸಮಾಜಕ್ಕಾಗಿ ಮಾಡುವ ಕಾರ್ಯ ಎಷ್ಟೋ ಇದ್ದರು ಅದರಲ್ಲಿ ಪ್ರತಿಶತ 10ರಷ್ಟು ಭಾಗವು ನಾವು ಮಾಡುವುದಿಲ್ಲ. ಕಾರಣ ಇಷ್ಟೆ ಇಲ್ಲ ಸಲ್ಲದ ಉಸಾಬರಿ ನಮಗೇಕೆ ಎನ್ನುವ ಧೋರಣೆ. ನಾಗರಿಕ ಸಮಾಜದಲ್ಲಿ ಅಕ್ಷರಸ್ಥರು, ಉತ್ತಮರು, ಎನಿಸಿಕೊಂಡ ನಾವುಗಳೆ ಆ ಕಾರ್ಯಗಳನ್ನ ಮಾಡದಿದ್ದರೆ ಸಮಾಜದಲ್ಲಿ ನಮ್ಮ ಉಪಸ್ಥಿತಿಯ ಅವಶ್ಯಕತೆಯೇ ಇಲ್ಲ. ಮಡಿವಂತಿಕೆಯ ಸಮಾಜದಲ್ಲಿ ಯಾವ ಜನರು ಅಂತಹ ಸ್ಥಳಗಳಿಗೆ ಹೋಗಲು ಇಚ್ಛಿಸುವುದಿಲ್ಲವೋ, ಅಲ್ಲಿನ ಜನರೊಂದಿಗೆ ಮಾತಾಡಲೂ ಸಹ ಹಿಂದೆಟು ಹಾಕುವರೋ, ಅಂತಹ ಜನರೊಂದಿಗೆ ಬೆರೆತು ಅವರ ಕಷ್ಟಗಳಿಗೆ ಮನದ ಆಸೆಗಳಿಗೆ ಸ್ಪಂದಿಸಿ ಅವರ ಜೀವನದಲ್ಲಿ ಬೆಳಕು ತಂದ ದೇವತೆಯ ಬಗ್ಗೆ ನನ್ನ ಮಾತುಗಳು. "ನೀವು ಎಲ್ಲರಂತೆ ಜೀವನ ನಡೆಸಬಹುದು, ಸಮಾಜದಲ್ಲಿ ತಲೆ ಎತ್ತಿ ಬದುಕುವ ಹಕ್ಕಿದೆ",

 ಎಂದು ತಿಳಿಸಿ ಕೊಟ್ಟವರು. "ಜೀವನ ನಡೆಸಲು ಅನೇಕ ಮಾರ್ಗಗಳಿವೆ ಇಂತಹ ಅನೈತಿಕ ಮಾರ್ಗವನ್ನ ಬಿಡಿ" ಎಂದು ವಾದಿಸಿ ಛಲದಿಂದ ಎಷ್ಟೊ ಹೆಣ್ಣು ಮಕ್ಕಳ ಜೀವನ ಸುಧಾರಿಸಿದ ನಮ್ಮೆಲ್ಲರ ಹೆಮ್ಮೆಯ ಇನ್ಫೋಸಿಸ್ನ ಒಡತಿ ಅಮ್ಮಾ ಸುಧಾಮೂರ್ತಿಯವರು. ಅವರು ನಮ್ಮ ಕರ್ನಾಟಕದವರು ಎನ್ನುವುದೆ ದೊಡ್ಡ ಹೆಮ್ಮೆ. ಅವರ ಬಾಯಿಯಿಂದ ನಮ್ಮ ಉತ್ತರಕರ್ನಾಟಕದ ಭಾಷೆ ಕೇಳೊದೆ ಒಂದು ಚೆಂದ. ಜ್ಞಾನ ಬಂಢಾರ ಅಪರಿಮಿತವಾಗಿದ್ದರು ಅವರ ಸರಳತೆಗೆ ಅವರೆ ಸಾಟಿ. ಇವಾಗಿನ ದಿನದಲ್ಲಿ ಯುವಜನತೆ ಇಂಜಿನಿಯರಿಂಗಲ್ಲಿ ಒಳ್ಳೆ ಅಂಕಗಳನ್ನ ಗಳಿಸಿದರೆ ಸಾಕು ವಿದೇಶಕ್ಕೆ ಹಾರಿ ನಮ್ಮ ದೇಶವನ್ನ ಲೆಕ್ಕಕೆ ಹಿಡಿಯಲ್ಲ. ನಮ್ಮ ದೇಶವೆಂದರೆ ವರ್ಷಕ್ಕೊಂದು ಬಾರಿ ಹಬ್ಬದ ಆಚರಣೆಗೆ ಮಾತ್ರ ಮೀಸಲು ಇಡುವರು. ರಾಜ್ಯಕ್ಕೆ ಮೊದಲನೇ ಸ್ಥಾನಗಳಿಸಿ ಬಂಗಾರದ ಪದಕ ಪಡೆದರು ನನ್ನ ದೇಶ, ನನ್ನ ರಾಜ್ಯ, ನನ್ನ ಜನ ಅಂತ ಜನರಿಗೆ ಸಹಾಯ ಮಾಡುತ್ತ ನಮ್ಮ ಸಮಾಜಕ್ಕೆ ಹಲವಾರು ಕೊಡಗೆ ನೀಡುತ್ತಾ ಇರುವವರು ಸುಧಾಮೂರ್ತಿಯವರು. ಇವಾಗಿನ ಯುವ ಪೀಳಿಗೆಗೆ ಮಾದರಿ. ಅವರು ಮಾಡಿದ ಹಲವಾರು ಕೆಲಸಗಳಲ್ಲಿ ದೇವದಾಸಿ ಪದ್ಧತಿ ನಿರ್ಮೂಲನೆಗೆ ಪಣ ತೊಟ್ಟಿರುವುದು ಒಂದು.

ಮನೆಯ ಸಮಸ್ಯೆ, ಬಡತನ, ಯಾರ ಮೋಸದ ಜಾಲಕ್ಕೊ, ಅರಿಯದ ವಯಸ್ಸಿನಲ್ಲಿ ಮಾಡಿದ ತಪ್ಪಿಗೊ, ಮನೆಯವರ ಸ್ವಾರ್ಥಕ್ಕೊ ಅಥವಾ ದೇವರ ಹೆಸರಿನಲ್ಲೊ ದೇವದಾಸಿಯರಾದ ಹೆಣ್ಣು ಮಕ್ಕಳ ಕಥೆ ತುಂಬಾ ಹೀನಾಯವಾಗಿರತ್ತೆ. ನಾವೆಲ್ಲರೂ ಇಂತಹ ಹೆಂಗಸರು ಸಮಾಜಕ್ಕೆ ಪೀಡುಗು ದರಿದ್ರರು ಅವರು ಸಮಾಜದಲ್ಲಿ ಇರಲು ಅರ್ಹತೆ ಇಲ್ಲದವರೆಂದು ನಾವು ನಾವೆ ಅಂದುಕೊಂಡು ಬಿಡುತ್ತೆವೆ. ಆದರೆ ಯಾರೊಬ್ಬರು ಅವರು ಯಾಕಾಗಿ ಆ ಕಸುಬ ಮಾಡಲು ಬಂದರು ಅವರ ಜೀವನದ ವ್ಯಥೆ ಅದರ ಹಿಂದಿನ ಕಥೆ ತಿಳಿದಿಕೊಳ್ಳದೆ ಅವರ ಬಗ್ಗೆ ಕೀಳಾಗಿ ಮಾತನಾಡುತ್ತೆವೆ. ಅವರ ಆಸೆ, ಕನಸುಗಳು, ಎಲ್ಲರಂತೆ ಸಮಾಜದಲ್ಲಿ ನಾವು ಬದುಕು ಬೇಕು ಎನ್ನುವ ಹಂಬಲ ಮತ್ತು ತಮ್ಮ ಮಕ್ಕಳನ್ನು ಸಮಾಜದಲ್ಲಿ ಒಳ್ಳೆಯ ಪ್ರಜೆಗಳನ್ನಾಗಿ ಮಾಡುವ ಆಸೆ ಅವರಲ್ಲಿ ಕಮರಿ ಹೋಗುತ್ತವೆ. ಇದಕ್ಕೆ ಕಾರಣ? ನಮ್ಮ ಸಮಾಜ. ಅವರ ಕನಸುಗಳಿಗೆ ಬಣ್ಣ ಹಚ್ಚಿದವರು ಸುಧಾಮೂರ್ತಿ ಅಮ್ಮಾ. ಎಷ್ಟೊ ಹೆಣ್ಣು ಮಕ್ಕಳನ್ನ ಆ ಕೂಪದಿಂದ ಹೊರತಂದು ಅವರಿಗೂ ಸ್ವಾಸ್ಥ ಬದುಕು ಕಟ್ಟಿಕೊಟ್ಟವುರು. ದೇಣಿಗೆ ನೀಡುವುದರಿಂದ ಅವರ ಸಮಸ್ಯ ಪರಿಹಾರ ಆಗುತ್ತಾ? ಇಲ್ಲ. ಅದಕ್ಕಾಗಿ ಸುಧಾಮೂರ್ತಿಯವರು ಅವರಲ್ಲಿ ಮೊದಲು ತಮ್ಮ ತಪ್ಪಿನ ಅರಿವು ಮೂಡಿಸಿದರು, ಜೀವನ ನಡೆಸುವ ಹಲವು ದಾರಿಗಳ ಬಗ್ಗೆ ತಿಳುವಳಿಕೆ ನೀಡಿದರು, ಅವರ ಮಕ್ಕಳ ಭವಿಷ್ಯದ ಬಗ್ಗೆ ತಿಳಿಹೇಳಿದರು, ಬೇರೆ ಬೇರೆ ಉದ್ಯೋಗದ ಬಗ್ಗೆ ಮಾಹಿತಿ ನೀಡಿದರು. ಒಟ್ಟಾರೆ ಅವರ ಜೀವನದ ಪಥ ಬದಲಾಯಿಸಿದರು. ಬರಿ ದುಡ್ಡು ನೀಡಿದ್ದರೆ ಅವರ ಜೀವನ ಸುಧಾರಿಸುತ್ತಿರಲಿಲ್ಲಾ ಅದರ ಬದಲಾಗಿ ಸುಧಾಮೂರ್ತಿಯವರು ತಮ್ಮ ಅಮೂಲ್ಯವಾದ ಸಮಯ ಅವರೊಂದಿಗೆ ವ್ಯಯಿಸಿದರು, ತಮ್ಮ ಅಪೂರ್ವ ಜ್ಞಾನದ ಹಂಚಿಕೆ ಮಾಡಿದರು. ಮನೆಯಲ್ಲಿಯೇ ಕುಳಿತುಕೊಂಡು ಮಾಡಬಹುದಾದ ಉದ್ಯೋಗದ ಮಾಹಿತಿ ನೀಡಿದರು. ಅಕ್ಷರದ ಜ್ಞಾನ ನೀಡಿದರು ಅವರ ಮಕ್ಕಳ ಶಿಕ್ಷಣದ ಹೊಣೆ ಹೊತ್ತರು. ಸುಧಾಮೂರ್ತಿ ಅಮ್ಮನವರ ಹಾಗೆ ಇದನ್ನ ಯಾರು ಮಾಡಲು ಸಾಧ್ಯವಿಲ್ಲಾ! ದುಡ್ಡಿಗಿಂತ ಮಾನವೀಯತೆ, ಪ್ರೀತಿ, ವಿಶ್ವಾಸ ದೊಡ್ಡದು ಎಂದು ತೋರಿಸಿ ಕೊಟ್ಟರು. ಸರಳತೆಯಿಂದ ಪ್ರತಿಯೊಂದು ಬದಲಾಯಿಸಬಹುದೂ ಎಂದು ನಿರೂಪಿಸಿ ಬಿಟ್ಟರು. ಸಮಾಜದಲ್ಲಿ ಅವರು ಎಲ್ಲರಂತೆ ಬಾಳುತ್ತಿದ್ದಾರೆ ಎಂದರೆ ಕಾರಣ ಸುಧಾಮೂರ್ತಿ ಅಮ್ಮಾ. ಹೆಣ್ಣಿಗೆ ಹೆಣ್ಣೆ ಶತ್ರು ಎಂಬ ಮಾತನ್ನು ಸುಳ್ಳು ಮಾಡಿ ಎಷ್ಟೊ ಮಹಿಳೆಯರ ಬಾಳಿಗೆ ಆಶಾಕಿರಣವಾಗಿದ್ದಾರೆ. ಇಂತಹ ಮಹಿಳೆ ನಿಜಕ್ಕೂ ನಮ್ಮ ಸಮಾಜಕ್ಕೆ ಕೀರಿಟವಿದ್ದಂತೆ ಇವರು ನಮ್ಮ ಹೆಮ್ಮೆ. ನಮ್ಮ ಯುವ ಜನತೆ ಸುಧಾಮೂರ್ತಿ ಅಮ್ಮನವರಿಂದ ಕಲಿತು ಸಮಾಜದ ಸುಧಾರಣೆಗೆ ಕೈ ಜೋಡಿಸಬೇಕು. ಸ್ವಾಸ್ಥ್ಯ ಸಮಾಜದ ಹೊಣೆ ನಮ್ಮೆಲ್ಲರದೂ. 



Rate this content
Log in

Similar kannada story from Classics