STORYMIRROR

radheya kanasugalu

Romance Classics Inspirational

4  

radheya kanasugalu

Romance Classics Inspirational

ಆರಂಭ

ಆರಂಭ

2 mins
348

ಪ್ರಾರಂಭವಾಗಿದ್ದು ಅರಿವಾಗಲೇ ಇಲ್ಲ, ಅದು ಹೇಗೆ ಅವಳಿಗೆ ಅವನ ಮೇಲೆ ಒಲವೂ ಶುರುವಾಯಿತು. ಪ್ರೀತಿಯ ಪ್ರಾರಂಭ ಆಗಿದ್ದು ಎಲ್ಲಿ ಹೇಗೆ ಅದರ ಅರಿವು ಅವರಿಬ್ಬರಿಗೂ ಇಲ್ಲ.

ಪ್ರೀತಿಯಲ್ಲಿ ಮುಳುಗಿ ಲೋಕದ ಪರಿವೆ ಇಲ್ಲದಂತೆ ಸುಖಿಸುತ್ತಿರುವರು. ಅವನೋ ಮೌನಿ.. ಇವಳೋ ಅವನ ತದ್ವಿರುದ್ಧ ವಾಚಾಳಿ.

ಅವನೊಟ್ಟಿಗೆ ಸಂಬಂಧ ಶುರುವಾಗಿದ್ದೆ ಜಗಳದಿಂದ. ದಿನಕ್ಕೆ ಒಂದು ಬಾರಿಯಾದರೂ ಅವನೊಟ್ಟಿಗೆ ವಾದ ಮಾಡಿ ಅದರಲ್ಲಿ ಇವಳು ಗೆಲ್ಲದಿದ್ದರೆ ತುತ್ತು ಗಂಟಲಿಗೆ ಇಳಿಯುತ್ತಿರಲಿಲ್ಲ.

ಇವಳು ಜಗಳಗಂಟಿ ಸೋಲೋಪ್ಪದಿದ್ದಲ್ಲಿ ನನ್ನ ಬಿಡಳು ಎಂದು ಮೊದಲೇ ಶರಣಾಗುತ್ತಿದ್ದ. ಇಬ್ಬರು ಶತ್ರುಗಳಂತೆ ಕಾದಡಿದ್ದ ಅನೇಕ ಉದಾಹರಣೆಗಳು ಇವೆ. ಒಬ್ಬರ ಮುಖ ಮತ್ತೊಬ್ಬರು ಇನ್ನೆಂದು ನೋಡುವುದು ಬೇಡ ಎಂದು ಜಗಳವಾಗಿದ್ದು ಇದೆ.


ಜಗಳದಲ್ಲೇ ಇವಳು ಅವನ ಮನ ಸೇರಿಯಾಗಿತ್ತು. ಇವಳಿಗೆ ಗೊತ್ತಿಲ್ಲದೆಯೇ ಅವನ ಪ್ರೀತಿ ತೆಕ್ಕೆಗೆ ಬಿದ್ದಾಗಿತ್ತು. ಅವನ ನಗು ಕಣ್ತುಂಬಿ ಕೊಳ್ಳುವುದೇ ಇವಳಿಗೆ ಸ್ವರ್ಗ. ಅವನ ಪೆದ್ದುತನ, ಇವಳ ಮುಂದೆ ಸೋಲುವ ಗುಣ, ಇವಳಿಗಾಗಿ ಪರಿತಪಿಸುವ ಅವನ ಮನ, ಯಾರಿದ್ದರು ಇವಳೆ ಬೇಕೆನ್ನುವ ಅವನ ಹಠಕ್ಕೆ ಮತ್ತೆ ಮತ್ತೆ ಸೋಲುತ್ತಿದ್ದಳು. ಅವಳ ಹೃದಯ ಅರೆಕ್ಷಣವೂ ಇವನ ಧ್ಯಾನದಿಂದ ಕದಲುತ್ತಿರಲಿಲ್ಲ. ಅವನೊಟ್ಟಿಗೆ ಅವನ ಕೈ ಹಿಡಿದು ಇಡೀ ಜಗತ್ತು ಸುತ್ತುವಾಸೆ ಅವಳಿಗೆ. ಇವಳ ವಿನಹ ಬೇರೆ ಯಾರಿಗೂ ಪ್ರಾಮುಖ್ಯತೆ ನೀಡಬಾರದು ಎನ್ನುವ ದುರಾಸೆ ಇವಳದು. ಜಗತ್ತಿನ ಖುಷಿಎಲ್ಲ ಕಾಣುವಾಸೆ ಅವಳಿಗೆ.


ಅವಳಿಗೆ ದಿನ ಪ್ರಾರಂಭವಾಗುವುದು ಅವನಿಂದನೆ. ಅದಕ್ಕೆ ತಕ್ಕಂತೆ ಅವನು ಅವಳ ಆಸೆ ಕನಸು ಎಲ್ಲವೂ ಪೂರ್ತಿ ಮಾಡುವತ್ತಲೇ ಅವನ ಗಮನ. ಅವಳ ಖುಷಿಯಲ್ಲೇ ಸುಖ ಕಾಣುವ ಹುಚ್ಚು ಪ್ರೇಮಿ. ಅವಳು ಅವನನ್ನು ಉತ್ಕಟವಾಗಿ ಪ್ರೀತಿಸುತ್ತಿದ್ದಳು. ಇಬ್ಬರು ಒಂದು ಜೀವ ಎರಡು ದೇಹದಂತೆ ಇದ್ದರು. ಒಬ್ಬರ ಮನ ಒಬ್ಬರು ದೂರದಲ್ಲಿದ್ದರು ಓದುತ್ತಿದ್ದರು. ಪ್ರೀತಿ ಅಂದರೆ ಜಗಳ, ಜಗಳ ಎಂದರೇ ಪ್ರೀತಿ. ಇಬ್ಬರ ಮಧ್ಯೆ ಜಗಳವು ಕಮ್ಮಿ ಇರಲಿಲ್ಲ. ಅವನ ಬಿಟ್ಟು ಒಂದು ರಾತ್ರಿ ಇರುವ ಶಕ್ತಿ ಇವಳಲ್ಲಿ ಇರಲಿಲ್ಲ ಆದರೂ ಇವಳ ಸೊಕ್ಕು ಕಡಿಮೇ ಇರಲಿಲ್ಲ. ಪ್ರತಿ ಬಾರಿ ಜಗಳ ಆದಾಗಲು ಸಂಬಂಧ ಮುಗಿದೇ ಹೋಯಿತು ಎನ್ನುವ ರೀತಿ ಆಡುತ್ತಿದ್ದಳು.ಮತ್ತೆ ಅವನು ರಮಿಸುವ ಕ್ಷಣಕ್ಕಾಗಿ ಕಾಯುವಳು. ಅವನು ರಮಿಸಿ ಮುದ್ದಿಸಿದರೆ ಸಾಕು ಅವನ ಬಾಹು ಬಂಧನದಲ್ಲಿ ಕರಗಿ, ಅವನ ಮುತ್ತಿನ ಹೊಳೆಯಲ್ಲಿ ತೇಲಾಡುತ್ತಿದ್ದಳು, ಅವನ ಬಿಸಿ ಅಪ್ಪುಗೆಯಲ್ಲಿ ತನ್ನ ತನವನ್ನೇ ಮರೆಯುತ್ತಿದ್ದಳು. ಒಬ್ಬರ ಉಸಿರು ಮತ್ತೊಬ್ಬರಿಗೆ ಕೇಳಿಸುವಷ್ಟು ಹತ್ತಿರ. ಹಾಸಿಗೆಯೇ ನಾಚುವಂತೆ ಮುದ್ದಾಡಿ ರಸ ರಾತ್ರಿಯಲ್ಲಿ ವಿರಸ ಮುಗಿಯುತಿತ್ತು. ಯುದ್ಧ ಗೆದ್ದ ಸಂತೋಷ ಅವನದಾದರೆ.. ಮತ್ತೊಮ್ಮೆ ಅವನ ಮುಂದೆ ಸೋತಿದ್ದಕ್ಕೆ ಅವಳ ಕೆನ್ನೆ ರಂಗೇರುತಿತ್ತು.


ಅವನ ವಿನಹ ಇವಳಿಗೆ ಬೇರೆ ಜಗತ್ತೇ ತಿಳಿದಿಲ್ಲ. ಅವಳ ಕಲ್ಪನೆಗೆ ಬಣ್ಣ ತುಂಬಿದ ಕಲೆಗಾರ ಇವನು. ಅವಳ ಆಸೆಗಳಿಗೆ ರೆಕ್ಕೆ ನೀಡಿದ ಮಾಯಾಗರ. ಇವನೇ ಅವಳ ಪುಟ್ಟ ಕನಸಿನ ಲೋಕವಾಗಿದ್ದ. ಕನಸಲ್ಲೂ ಇವನ ಅಗಲಿ ಕ್ಷಣ ಕಾಲ ಇರಲಾರಳು. ಅವಳ ತನು ಮನವೆಲ್ಲ ಇವನಿಗಾಗಿ ಮೀಸಲಿಟ್ಟಿದ್ದಳು. ಒಬ್ಬರಿಗೊಬ್ಬರು ಎನ್ನುವಂತೆ ಪ್ರೀತಿಯಲ್ಲಿ ಜೊತೆಯಾಗಿದ್ದರು. ಹಾವು ಮುಂಗುಸಿಯಂತೆ ಕಾದಾಡಿದವರ ಮಧ್ಯೆ ಪ್ರೇಮ ಪ್ರಾರಂಭವಾಗಿದ್ದು ಸೋಜಿಗವೆ ಸರಿ. ವೈರಿಗಳಿಬ್ಬರು ಶ್ವಾಸ ಮತ್ತು ಉಸಿರನ ಹಾಗೆ ಹತ್ತಿರವಾಗಿದ್ದು ಪ್ರೀತಿ ಇಂದ. ಅನಿರೀಕ್ಷಿತವಾದ ಪ್ರೀತಿಯ ಪ್ರಾರಂಭ ಅವರ ಬಾಳಲ್ಲಿ ಅವರು ಅಪೇಕ್ಷಿಸಿದಂತೆಯೇ ಸಾಗಲಿ.


Rate this content
Log in

Similar kannada story from Romance