murali nath

Drama Others

3  

murali nath

Drama Others

ಎಲ್ಲಾ ಹೊಟ್ಟೆಗಾಗಿ

ಎಲ್ಲಾ ಹೊಟ್ಟೆಗಾಗಿ

2 mins
27ಬಹಳ ಹಿಂದಿನ ಒಂದು ನೆನೆಪು.ಒಬ್ಬ ಮಧ್ಯಮ ವಯಸ್ಸಿನ ವ್ಯಕ್ತಿ .ಕಾಲಲ್ಲಿ ಚಪ್ಪಲಿ ಖಾದಿ ಬಿಳಿ ಜುಬ್ಬಾ . ಕೈಯ್ಯಲೊಂದು ಬ್ಯಾಗ್. SSLC ಫೇಲು. ಆದರೆ ಚಾಣಾಕ್ಷ ಮತಿ .ಎಷ್ಟು ಜನಕ್ಕೆ ಸರ್ಕಾರಿ ಹುದ್ದೆ ಕೊಡಿಸಿದ್ದಾರೋ ಯಾರಿಗೂ ಗೊತ್ತಿಲ್ಲ. ಆದರೆ ಅವರ ಹಿಂದೆ ಮುಂದೆ ಕೆಲಸವಿಲ್ಲದ ಯುವಕರು ಸದಾ ಓಡಾಡುವುದು ಕಂಡರೆ ಮತ್ತು ಇವರಿಗೆ ಅನೇಕ ಮಂತ್ರಿಗಳು ಚಿರಪರಿಚಿತ ಅನ್ನುವ ಹಾಗೆ ಮಾತನಾಡುವುದನ್ನು ಕಂಡರೆ ಎಂತಹವರೂ ನಂಬಲೇ ಬೇಕು. ಬೆಳಗ್ಗೆ ಒಂಭತ್ತು ಹತ್ತು ಗಂಟೆಗೆ ಮನೇಬಿಟ್ಟು ಹೊರಟರೆ ಮತ್ತೆ ರಾತ್ರಿ ಮನೆಗೆ ಬರುವ ಸಮಯ ಹೆಂಡತಿ ಮಕ್ಕಳಿಗೂ ಗೊತ್ತಿಲ್ಲ. ಬೆಳಗ್ಗೆ ಬಸ್ ಹತ್ತಿದರೆ ಯಾರಾದರೂ ಇವರಿಗೆ ಟಿಕೆಟ್ ತೋಗೊಳ್ತಾರೆ ಅನ್ನೋ ಗ್ಯಾರಂಟಿ. ವಿಧಾನಸೌಧ stop ನಲ್ಲಿ ಇಳಿದ ತಕ್ಷಣ KGID canteen ಅಥವಾ high court canreen ನಲ್ಲಿ ಯಾರ ಹೆಗಲ ಮೇಲೆ ಕೈ ಹಾಕ್ತಾರೋ ಅವರು ತಿಂಡಿ ಕಾಫಿ ಕೊಡಿಸಲೆ ಬೇಕು. ಕೊಡಿಸೇ ಕೊಡಿಸ್ತಾರೆ ಅನ್ನೋ ಗ್ಯಾರಂಟಿ. ಈಗಿನಂತೆ ಆಗ ವಿಧಾನಸೌಧಕ್ಕೆ ಇಷ್ಟೊಂದು ಸೆಕ್ಯೂರಿಟಿ ಇರಲಿಲ್ಲ. ಬಹಳ ಜನ ಪೊಲೀಸರು ಇವರ ಸಹಾಯಕ್ಕೆ ಎಂದಾದರೂ ಕೈ ಚಾಚಿದವರೇ ಆದ್ದರಿಂದ ಅವರೇ ಇವರಿಗೆ salute ಮಾಡಿ ಒಳಗೆ ಬಿಡುವುದು ಬಹಳ ಜನಕ್ಕೆ ತಿಳಿದಿತ್ತು.ಇವರು ಯಾರೆಂದು ಯಾವ ಮಂತ್ರಿ ಮಹೋದಯರಿಗೂ ಗೊತ್ತಿಲ್ಲದಿದ್ದರೂ ಇವರಿಗೆ ಮಾತ್ರ ಅವರ ಖಾಸಗಿ ಬದುಕಿನಿಂದ ಕಛೇರಿ ಕಾರ್ಯವೈಖರಿಯನ್ನು ಇಚಿಂಚೂ ಕಲೆ ಹಾಕಿ ಅಳೆದು ಹೇಳುವ ಚಾಣಾಕ್ಷರು. ಇವರಿಗೆ ಹೆಚ್ಚು ಪರಿಚಯ ಅಂದರೆ ಬಾಗಿಲಲ್ಲಿ ಕಾಯುವ ಸೆಕ್ಯೂರಿಟಿ , ಕಾರ್ ಚಾಲಕರು ಮತ್ತು ಕೆಲವು, PA ಗಳು. ಮಾತ್ರ. ರಾಜ್ಯಸರ್ಕಾರದ ನೌಕರರು ಆಗ LDC ಇಂದ UDC ಆಗಿ ಪ್ರಮೋಷನ್ ಆಗಬೇಕಾದರೆ ಪರೀಕ್ಷೆ ಪಾಸ್ ಮಾಡಲೇಬೇಕಿತ್ತು . ಅದು ಬಹಳ ನೌಕರರಿಗೆ ಕಷ್ಟ ಅನ್ನುವ ಒಂದು ನಂಬಿಕೆ ಹುಟ್ಟುಹಾಕಿದ್ದರು. ಹಣ ಕೊಡದೆ ಪಾಸ್ ಆಗಲ್ಲ ಎನ್ನುವ ನಂಬಿಕೆ ಬಲವಾಗಿತ್ತು. ಹಾಗಾಗಿ ಇದು ಇಂತಹವರಿಗೆ ಹಣ ಮಾಡಲು ಸುಲಭ ರಹದಾರಿ ಯಾಗಿತ್ತು. ಪಾಸ್ ಆದರೆ ಇಂತಿಷ್ಟು ಹಣ ಕೊಡಿ ಇಲ್ಲದಿದ್ದರೆ ಬೇಡ ಅನ್ನುವ ನಂಬಿಸುವ ಮಹಾನ್ ಉಪಾಯ. ಬಹಳ ನೌಕರರು ಪಾಸ್ ಆದರೆ ಹಣ್ಣು ಹಣ ಬಾಟಲ್ ಸಮೇತ ತಪ್ಪದೆ ಹುಡುಕಿಕೊಂಡು ಹೋಗಿ ಪ್ರಾಮಾಣಿಕವಾಗಿ ಇವರಿಗೆ ಕೊಡ್ತಿದ್ರು. ಫೇಲ್ ಆದೋರು ಏನ್ ಸಾರ್ ನೀವು help ಮಾಡ್ಲಿಲ್ಲ ಅಂದರೆ, ಹೆದರಬೇಡಿ next time ಖಂಡಿತ ಪಾಸ್ ಆಗತ್ತೆ ನಿಮ್ಮ ಹೆಸರು ಹೇಗೆ ಮಿಸ್ ಆಯ್ತೋ ಗೊತ್ತಿಲ್ಲ.ಅಂತ ಹೇಳಿ ಸಮಾಧಾನ ಮಾಡ್ತಿದ್ರು. .ನಿಜ ಹೇಳಬೇಕೆಂದರೆ ಇವರು ಹೀಗೆ ಯಾರ ಬಳಿಯೂ ಹೋಗದೆ ಕೂತಲ್ಲೇ ಸುಲಭವಾಗಿ ಸಂಪಾದನೆ ಮಾಡ್ತಾರೆ ಅನ್ನೋದು ಬಹಳ ಜನರ ತಲೆಗೆ ಹೋಗದೆ ಇರೋದೇ ಆಶ್ಚರ್ಯ.. ಹೀಗೆ ಅನೇಕರು ವಿಧಾನ ಸೌಧ ಸುತ್ತು ಮುತ್ತ ಈಗಲೂ ಇರಬಹದೇನೋ ಗೊತ್ತಿಲ್ಲ ! ಉದರ ನಿಮಿತ್ತ ಬಹು ಕೃತ ವೇಷ!!!


Rate this content
Log in

Similar kannada story from Drama