Kalpana Nath

Tragedy Inspirational Others

4  

Kalpana Nath

Tragedy Inspirational Others

ದೇವರ ಆನೆ

ದೇವರ ಆನೆ

1 min
39



ಇದು 1976ರಲ್ಲಿ ನಡೆದ ಒಂದು ಸತ್ಯಘಟನೆ. ಕೇರಳದಲ್ಲಿನ ದೇವಾಲಯಗಳಲ್ಲಿ ಎಲ್ಲರಿಗೂ ತಿಳಿದ ಹಾಗೆ ಆನೆಗಳಿಗೆ ಹೆಚ್ಚು ಪ್ರಾಮುಖ್ಯತೆ. ಅದರಂತೆ ಗುರುವಾಯೂರ್ ನಲ್ಲೂ ಆನೆಗಳ ವಿವಿಧ ಸೇವೆಗಳು ಜನರಿಗೆ ಆಕರ್ಷಣೆ. ಪ್ರತಿ ವರ್ಷ ಇಲ್ಲಿ ಆನೆಗಳ ಓಟದ ಸ್ಪರ್ಧೆ ಇರುತ್ತೆ. ಸ್ಪರ್ಧೆಯಲ್ಲಿ ಗೆದ್ದ ಆನೆಯನ್ನ ದೇವರನ್ನು ಹೊತ್ತು ಮೆರವಣಿಗೆ ಮಾಡುವುದಕ್ಕೂ ಮತ್ತು ಇತರ ದೇವಾಲಯದ ನಿತ್ಯದ ಕೈಂಕರ್ಯಗಳಿಗೂ ಉಪಯೋಗಿಸಿಕೊಳ್ಳುತ್ತಾರೆ. 


 ಒಂದು ಆನೆ ಹೆಸರು ಕೇಶವನ್. ಇದು ಸುಮಾರು ಐವತ್ತು ವರ್ಷಗಳು ಸತತವಾಗಿ ಸ್ಪರ್ಧೆಯಲ್ಲಿ ಮೊದಲು ಬರುತ್ತಿತ್ತು. ಆದ್ದರಿಂದ ದೇವಾಲಯದ ಸಿಬ್ಬಂದಿಗೆ ಬಹಳ ಅಚ್ಚು ಮೆಚ್ಚು. ಆನೆಯೂ ಸಹಾ ಅಷ್ಟೇ ನಿಷ್ಠೆಯಿಂದ ಎಲ್ಲಾ ಕೆಲಸ ಮಾಡುತ್ತಿತ್ತು. ವಿಚಿತ್ರವೆಂದರೆ ಇತರರಂತೆ ಈ ಮೂಕಪ್ರಾಣಿ ಏಕಾದಶಿಗಳಂದು ಏನೂ ಆಹಾರ ಸ್ವೀಕರಿಸುತ್ತಿರಲಿಲ್ಲ. ಮತ್ತು ಬಹಳ ಸೂಕ್ಷ್ಮ ಮತಿಯಾಗಿತ್ತು. ಮಾವುತ ಹೇಳುವ ಮೊದಲೇ ದಿನನಿತ್ಯದ ಕೆಲಸಗಳನ್ನ ಗ್ರಹಿಸಿ ಮಾಡುತ್ತಿತ್ತು. ಪ್ರತಿದಿನ ಬೆಳಗ್ಗೆ ಸ್ನಾನದ ನಂತರ ದೇವಾಲಯವನ್ನ ಮೂರು ಪ್ರದಕ್ಷಿಣೆ ಹಾಕಿದ ಮೇಲೆಯೇ ಉಳಿದ ಕೆಲಸ. ದೇವಾಲಯಕ್ಕೆ ಬರುವ ಭಕ್ತರಿಗೆ ಕೇಶವನ್ ಅಂದರೆ ದೊಡ್ಡ ಆಕರ್ಷಣೆ ಯಾಗಿತ್ತು. 


 ಒಮ್ಮೆ ದೇವಾಲಯದ ಆಡಳಿತ ವರ್ಗ ಐವತ್ತು ವರ್ಷ ಸತತವಾಗಿ ದುಡಿದಿರುವ ಈ ಆನೆಯನ್ನ ಬಳಸುವುದುಬೇಡ ಎನ್ನುವ ನಿರ್ಧಾರಕ್ಕೆ ಬಂದರು. ಒಂದು ದಿನ ಉಳಿದ ಆನೆಗಳ ಓಟದ ಸ್ಪರ್ಧೆ ಏರ್ಪಾಡಾಯ್ತು.  ಕೇಶವನನ್ನ ದೂರದಲ್ಲಿ ಮರಕ್ಕೆ ಸರಪಳಿಯಿಂದ ಮರಕ್ಕೆ ಕಟ್ಟಿಹಾಕಿದ್ದರು. ಓಡುವ ಸಮಯಕ್ಕೆ ಸರಿಯಾಗಿ ಕಾಲಿಗೆ ಕಟ್ಟಿದ್ದ ಸರಪಳಿಯನ್ನ ಕಿತ್ತುಕೊಂಡು ಬಂದು ತಾನೂ ಇತರ ಆನೆಗಳ ಜೊತೆ ಓಡಿ ಮೊದಲು ಬಂತು .ಎಲ್ಲರಿಗೂ ಆಶ್ಚರ್ಯ. ಕೊನೆಗೆ ಅದೇ ಆನೆ ಆ ವರ್ಷವೂ ಪೂಜಾಕೈಂಕರ್ಯ ಮತ್ತು ಮೆರವಣಿಗೆಗೆ ಅರ್ಹವಾಯ್ತು. ಆದರೆ ವಯಸ್ಸಾಗಿದ್ದಕಾರಣ ಹೆಚ್ಚು ಕೆಲಸ ಮಾಡಿಸಲು ಸಿಬ್ಬಂದಿಗೆ ಇಷ್ಟ ವಿರಲಿಲ್ಲ. ಹಾಗಾಗಿ ಅಲ್ಲಿನ ಪದ್ದತಿಯಂತೆ ದೈವ ಪ್ರಶ್ನೆ ಹಾಕಿದರು. ಅದರಂತೆ ದೇವರನ್ನು ಕೇಶವನ್ ಹೊರುವುದು ಬೇಡ ಎನ್ನುವ ನಿರ್ಧಾರವಾಗಿ ಅಂದಿನಿಂದ ಮುಖ್ಯವಾದ ದೇವರ ಕೆಲಸಗಳನ್ನ ಬೇರೊಂದು ಆನೆ ಮಾಡುತ್ತಿತ್ತು.. ಕೆಲವು ದಿನಗಳು ಹೀಗೆ ಮುಂದುವರೆದು ಯಾವುದೋ ಖಾಯಿಲೆಯಿಂದ ಬಹಳ ನರಳಿ ಸುಸ್ತಾಗಿತ್ತು. ನಂತರ ಆಹಾರ ತಿನ್ನೋದು ಕಡಿಮೆ ಆಗಿ ನಿತ್ರಾಣವಾಗಿದ್ದರೂ ದೇವಾಲಯದ ಮುಂದೆ ಪ್ರತಿದಿನ ಮಂಗಳಾರತಿ ಸಮಯಕ್ಕೆ ಸರಿಯಾಗಿ ಬರುವುದು ಮಾತ್ರ ತಪ್ಪಲಲ್ಲಿ. ಒಂದು ದಿನ ದೇವಾಲಯದ ಒಳ ಪ್ರಾಕಾರದಲ್ಲಿ ಕೇಶವನಿಗೆ ನಡೆಯಲು ಶಕ್ತಿ ಇಲ್ಲದಾಗಿ ಮಲಗಿಬಿಟ್ಟಿತು. ಅದರ ಮಾವುತನಿಗೆ ಅರ್ಥವಾದರೂ ಏನೂ ಮಾಡುವಂತಿರಲಿಲ್ಲ . ಅಲ್ಲಿ ಅಕಸ್ಮಾತ್ ಇದರ ಪ್ರಾಣ ಹೋದರೆ ಇಡೀ ದೇವಾಲಯವನ್ನ ಶುಚಿಗೊಳಿಸಬೇಕಾಗುತ್ತೆ ಅಂತ ಕೆಲವರು ಮಾತನಾಡಿಕೊಂಡರು. ಇದನ್ನ ಕೇಳಿದ ತಕ್ಷಣ ಬಹಳ ಪ್ರಯಾಸದಿಂದ ಹೇಗೋ ಎದ್ದು ನಿಂತು ನಿಧಾನ ವಾಗಿ ಒಂದೊಂದೇ ಹೆಜ್ಜೆ ಇಟ್ಟು ಹೊರಗಡೆ ಬಂದು ದೇವರ ಕಡೆ ತಿರುಗಿ ಸೊಂಡಿಲೆತ್ತಿ ಕೂಗಿ ಪ್ರಾಣ ಬಿಟ್ಟವಿಷಯ ಇಂದಿಗೂ ಅಲ್ಲಿನ ಜನಮನದಲ್ಲಿದೆ. ಈ ದೇವಾಲಯದಲ್ಲಿ ಕೇಶವನ್ ನ ದಂತ ಅದರ ದೊಡ್ಡ ಚಿತ್ರದ ಪಕ್ಕದಲ್ಲಿ ಇದೆ. ಅದನ್ನ ಸಮಾಧಿ ಮಾಡಿದ ಸ್ಥಳದಲ್ಲಿ ಅಷ್ಟೇ ದೊಡ್ಡ ಆನೆಯ ಆಕೃತಿಯನ್ನೂ ಕಾಣಬಹುದು. ಇದು ಆಶ್ಚರ್ಯ ವಾದರೂ ಸತ್ಯ ಘಟನೆ.


Rate this content
Log in

Similar kannada story from Tragedy