STORYMIRROR

Shridevi Patil

Comedy Drama Others

3  

Shridevi Patil

Comedy Drama Others

ಡಾಕ್ಟರ್ ತಲೆಯಲ್ಲಿ ಕೂದಲೇ ಇಲ್ಲ

ಡಾಕ್ಟರ್ ತಲೆಯಲ್ಲಿ ಕೂದಲೇ ಇಲ್ಲ

1 min
204

ಆಸ್ಪತ್ರೆಯಲ್ಲಿ ವೈದ್ಯರು ಯಾವುದರಲ್ಲಿ ನಿಪುಣರು ಎಂದು ಬರೆದು ಒಂದು ಬಿತ್ತಿಪತ್ರವನ್ನು ಅಂಟಿಸಿದ್ದರು. ನನ್ನ ಮಗಳು ಓದಿ ಅಮ್ಮ ತಲೆಯಲ್ಲಿ ಕೂದಲು ಇಲ್ಲದವರಿಗೆ ಈ ಡಾಕ್ಟ್ರು ಕೂದಲು ಹುಟ್ಟಿಸುತ್ತಾರೆಯೇ ಎಂದು ಕೇಳಿದಳು. ನಾನು ಅಲ್ಲಿರುವುದನ್ನು ಓದಿ ಹಾ, ಹೌದು ಕೂದಲು ಬರೋ ಹಾಗೆ ಮಾಡ್ತಾರಂತೆ ಅಂದೆ..

ಅದಕ್ಕವಳು ಹೌದಾ ಕೂದಲು ಇಲ್ಲದವರು ದುಡ್ಡು ಕೊಟ್ರೆ ಕೂದಲು ಬರಿಸುತ್ತಾರಾ, ಹಾಗಾದರೆ ಆ ಡಾಕ್ಟರ್ ತಲೆ ಯಾಕೆ ಬೋಳಾಗಿದೆ, ಕೂದಲು ಯಾಕೆ ಬಂದಿಲ್ಲ, ಅವರ ಕಡೆ ದುಡ್ಡು ಇಲ್ಲವಾ, ನಮಗೆ ಕೂದಲು ಬರೋ ಹಾಗೆ ಮಾಡೋರು ಅವರ ತಲೆಯಲ್ಲಿ ಕೂದಲು ಯಾಕೆ ಬರಿಸಿಕೊಂಡಿಲ್ಲ ಅಂತ ಪ್ತಶ್ನೆಗಳ ಸುರಿಮಳೆ ಸುರಿಸಿದಳು.


ಅದು ನಿಜವೂ ಸಹ.. ಡಾಕ್ಟರ್ ತಲೆ ನುಣು ನುಣು ಅಂತ ಹೊಳಿತಿತ್ತು...


Rate this content
Log in

Similar kannada story from Comedy