murali nath

Drama Inspirational

3.6  

murali nath

Drama Inspirational

ಬಶೀರ್

ಬಶೀರ್

2 mins
73



ಬಹಳ ವರ್ಷಗಳ ಹಿಂದೆ ಕೇರಳರಾಜ್ಯದ ಕಲ್ಲಿಕೋಟೆಯಲ್ಲಿ ಒಬ್ಬ ಸಾಹುಕಾರ .ಹೆಸರು ಬಶೀರ್.ಇಡೀ ಊರಲ್ಲಿ ಇವರು ಚಿರಪರಿಚಿತರು. ಒಂದು ಆಟೋ ನಿಲ್ಲಿಸಿ ಬಶೀರ್ ಮನೆಗೆ ಹೋಗಬೇಕೆಂದರೆ, ನಮ್ಮ ಭಾಷಾ ಮನೇನಾ ಅಂತ ಪ್ರೀತಿಯಿಂದ ಕೇಳಿ ಸಂತೋಷದಿಂದ ಕರೆದುಕೊಂಡು ಹೋಗುತ್ತಿದ್ದರಂತೆ. ಅಷ್ಟು ಚಿರಪರಿಚಿತ ಹೆಸರು. ಅವರು ಸಾಹುಕಾರ ನೆಂದಲ್ಲ ಅವರೊಬ್ಬ ಖ್ಯಾತ ಮಲೆಯಾಳಿ ಸಾಹಿತಿ ಅಂತ. ಸಾಮಾನ್ಯವಾಗಿ ಸಾಹಿತಿ, ಕವಿಗಳು ಶ್ರೀಮಂತರೆಂದರೆ ನಂಬಲಸಾಧ್ಯ. ಆದರೆ ಲಕ್ಷ್ಮೀ ಸರಸ್ವತಿ ಯರಿಬ್ಬರೂ ಒಂದೇ ಮನೆಯಲ್ಲಿ! ಅಪರೂಪದ ಸಂಭವವೆಂದೇ ಹೇಳಬೇಕು. ಇವರು ಎರಡು ಕಾಲೇಜುಗಳ ಒಡೆಯನಾಗಿದ್ದರೂ ಬಹಳ ಸರಳ ಜೀವಿಯಾಗಿ ,ಬಡವರ ಬಂಧುವಾಗಲು ಇವರ ಜೀವನದಲ್ಲಿ ನಡೆದ ಒಂದು ವಿಚಿತ್ರ ಘಟನೆ ಕಾರಣವಾಯ್ತು. ಒಮ್ಮೆ ಕಾರ್ಯನಿಮಿತ್ತ ಬೇರೆ ಊರಿಗೆ ಹೋಗಿದ್ದಾಗ ಹೋಟೆಲ್ ಒಂದರಲ್ಲಿ ತಿಂಡಿ ತಿಂದು ಹಣ ಕೊಡಲು ಜುಬ್ಬದ ಪಾಕೆಟ್ ಗೆ ಕೈ ಹಾಕಿದಾಗ ಪರ್ಸ್ ಕಾಣಲಿಲ್ಲ. ಒಂದು ನಿಮಿಷ ಏನು ಮಾಡಬೇಕೆಂದು ತೋಚದೇ .ತಮ್ಮ ಬಗ್ಗೆ ಹೇಳಿಕೊಳ್ಳಲು ಹೋಟೆಲ್ ಯಜಮಾನ ನಂಬುವ ಸ್ಥಿತಿಯಲ್ಲಿರಲಿಲ್ಲ . ತಕ್ಷಣ ತರಕಾರಿ ಹೆಚ್ಚು ಅಂತಾನೋ , ಇಡ್ಲಿ ಹಿಟ್ಟು ರಬ್ಬು ಅಂತಾನೋ , ಹೇಳಿದರೆ ಎನು ಗತಿ ಅಂತ ಭಯವಾಯಿತು.


ಆದರೆ ಯಜಮಾನ ಜುಬ್ಬ ಬಿಚ್ಚು ಅಂದ. ವಿಧಿ ಇಲ್ಲದೇ ಬಿಚ್ಚಿದರು.ಮತ್ತೆ ಲುಂಗಿ ಬಿಚ್ಚಲು ಹೇಳಿದಾಗ ಕಣ್ಣಲ್ಲಿ ನೀರು. ಯಜಮಾನನಿಗೆ ಮಾತ್ರ ಇದೆಲ್ಲ ಮಾಮೂಲಿ ನಂತಿತ್ತು. ಸುಮಾರು ಮೂವತ್ತು ನಲವತ್ತು ಜನ ತಿಂಡಿ ತಿನ್ನುತ್ತಿರುವರ ಎದುರು ಇಂತ ಅವಮಾನ.ಇನ್ನೇನು ಲುಂಗಿ ಬಿಚ್ಚ ಬೇಕೆನ್ನುವಷ್ಟ ರಲ್ಲಿ ಒಬ್ಬ ಅಲ್ಲಿಗೆ ಬಂದು ಬೇಡ ಬೇಡ ನಾನು ಹಣ ಕೊಡ್ತೀನಿ. ಜುಬ್ಬ ಹಾಕಿಕೊಳ್ಳಿ ಅಂದ. ದೇವರೇ ಪ್ರತ್ಯಕ್ಷ ವಾದ ಅನುಭವ ಇವನಿಗೆ. ಕಾಲಿಗೆ ಬೀಳಲು ಹೋದಾಗ ಕೈಚೀಲದಿಂದ ನಾಲ್ಕೈದು ಪರ್ಸ್ ಗಳನ್ನು ತೆಗೆದು ಇದರಲ್ಲಿ ನಿಂದು ಯಾವುದು ತೆಗೆದುಕೋ ಅಂದ. ಅವನ ಪರ್ಸ್ ತೆಗೆದು ನೋಡಿದ ಪೂರ್ತಿ ಹಣ ಹಾಗೇ ಇದೆ.  ಆಗ ಹೋಟೆಲ್ ಯಜಮಾನನಿಗೆ ಪರಿಸ್ಥಿತಿ ಅರ್ಥವಾಯ್ತು. ಕುಳಿತು ಕೊಳ್ಳಲು ಹೇಳಿ ಪೊಲೀಸ್ ಗೆ ಫೋನ್ ಮಾಡಿದ. ಆದರೆ ಬೇಡವೆಂದು ತಡೆದು . ಅವನು ಪಿಕ್ ಪಾಕೆಟ್ ಮಾಡಿರಬಹುದು ಆದರೆ ಇಂದು ನನ್ನ ಪಾಲಿಗೆ ದೇವರು.ಅವನನ್ನ ನನ್ನೊಂದಿಗೆ ಕರೆದುಕೊಂಡು ಹೋಗಿ ಒಳ್ಳೆಯ ಕೆಲಸ ಕೊಡ್ತೀನಿ ಅಂತ ಹೇಳಿದ.ಅಷ್ಟರಲ್ಲಿ ಫೋನ್ ಮಾಡಿದ್ದ ಕಾರಣ ಪೊಲೀಸ್ ಬಂದರು ಮುಖ ನೋಡಿದ ತಕ್ಷಣವೇ ಅವನು ಮಾಮೂಲಿ ಕಳ್ಳನಾದ್ದರಿಂದ ಕೈಗೆ ಬೇಡಿ ಹಾಕಲು ಮುಂದಾದಾಗ ಸಾಹುಕಾರ ಬೇಡವೆಂದು ತಡೆದ. ಆಗ ಅಲ್ಲಿಗೆ ಬಂದ ಪೊಲೀಸ್ ಇನ್ಸ್ಪೆಕ್ಟರ್ ಬಶೀರ್ ನ ಗುರುತು ಹಿಡಿದು ದೊಡ್ಡ ಸಲ್ಯೂಟ್ ಮಾಡಿದ ಅಲ್ಲಿದ್ದವರಿಗೆಲ್ಲಾ ಯಾವುದೋ ಸಿನಿಮಾ ನೋಡಿದ ಅನುಭವ. ಹೋಟೆಲ್ ಯಜಮಾನನಿಗೆ ಬಶೀರ್ ಬಗ್ಗೆ ಹೇಳಿದಾಗ ಎದ್ದುನಿಂತು ತಪ್ಪಾಯಿತು ಕ್ಷಮಿಸಿ ಎಂದ. ಅಲ್ಲೇ ಇದ್ದ ಕಳ್ಳನ ಬಗ್ಗೆ ಇನ್ಸ್ಪೆಕ್ಟರ್ ಹೇಳಿದರು ಬೇಡ ಸಾರ್ ಇವರೆಲ್ಲಾ ಬದಲಾಗಲ್ಲ. ನೀವು ಹೊರಡಿ ಎಂದರು.ಅವರ ಮಾತು ಕೇಳದೆ ಇವನ ಹತ್ತಿರ ಇದ್ದ ಉಳಿದ ಪರ್ಸ್ ಗಳನ್ನ ಪೊಲೀಸರಿಗೆ ಕೊಟ್ಟು ಮನೆಗೆ ಕರೆದು ಕೊಂಡುಬಂದು ಅವರ ಕಾಲೇಜಿನಲ್ಲಿ ಮೊದಲು ಕಾವಲುಗಾರನ ಕೆಲಸ ಕೊಟ್ಟು ಊಟ ತಿಂಡಿ ಮನೆ ಎಲ್ಲ ವ್ಯವಸ್ಥೆ ಮಾಡಿದರು. ನಂತರ ಅವನು ವಿಧ್ಯಾ ವಂತನೆಂದು ತಿಳಿದ ಮೇಲೆ ತಮ್ಮ ಖಾಸಗಿ ಕೆಲಸಗಳನ್ನ ನೋಡಿಕೊಳ್ಳಲು ಹೇಳಿದರು. ಇದು ಅವರ ಜೀವನದಲ್ಲಿ ದೊಡ್ಡ ತಿರುವು ಪಡೆಯಲು ಕಾರಣ ವಾಯಿತು.ಅಂದಿನಿಂದ ಬಹಳ ಸರಳ ವ್ಯಕ್ತಿತ್ವವನ್ನು ರೂಢಿಸಿಕೊಂಡು ಬಡವರ ಕಷ್ಟಗಳಿಗೆ ಸ್ಪಂದಿಸುತ್ತಾ ಜನಾನುರಾಗಿಯಾದರು ಬಶೀರ್.



Rate this content
Log in

Similar kannada story from Drama