ಕೃಷ್ಣ ಕುಟೀರ ಭಾಗ 10 ಚಕ್ರವರ್ತಿ ಆಗಮನ
ಕೃಷ್ಣ ಕುಟೀರ ಭಾಗ 10 ಚಕ್ರವರ್ತಿ ಆಗಮನ
ಅಂದು ಜಗನ್ನಾಥ್ ಕೃಷ್ಣ ಭಜನೆ ಮುಗಿಸಿಕೊಂಡು ಮನೆಗೆ ಹಿಂತಿರುಗುತ್ತಿದ್ದನು ಅದೇ ಸಮಯದಲ್ಲಿ ಪೋಲೀಸ್ ಗಾಡಿ ಹಾಗೂ ಮೆಂಟಲ್ ಆಸ್ಪತ್ರೆಯ ಗಾಡಿ ಒಬ್ಬ ದೊಡ್ಡ ಆಕಾರದ ವ್ಯಕ್ತಿಯನ್ನು ಬೆನ್ನಟ್ಟು ಬರ್ತಾ ಇತ್ತು ಕೊನೆಗೆ ಆ ವ್ಯಕ್ತಿಯನ್ನು ಪೋಲಿಸಾಗು ಮೆಂಟಲ್ ಹಾಸ್ಪಿಟಲ್ಯ ಸಿಬ್ಬಂದಿ ಹಿಡಿದುಕೊಂಡರು ಆದರೆ ಆ ವ್ಯಕ್ತಿ ಅವರನ್ನೆಲ್ಲ ದೂಡಿ ಓಡಲಾರಂಭಿಸಿದ ಕೊನೆಗೆ ಅವರು ಅವನನ್ನು ಮತ್ತೆ ಹಿಡಿದು ಹದ್ದು ಬಸ್ದಲ್ಲಿ ಮಾಡಿಕೊಂಡರು ಆ ವ್ಯಕ್ತಿ ಜೋರಾಗಿ ಕಿರುಚಲು ಪ್ರಾರಂಭಿಸಿದರು ಆಗ ಅಲ್ಲಿಗೆ ಜಗನ್ನಾಥ್ ಬಂದು
ಜಗನ್ನಾಥ್ : ರೀ ಯಾಕ್ರೀ ಈ ಮನುಷ್ಯನ ಹೀಗೆ ಪೀಡಿಸ್ತಾ ಇದ್ದೀರಾ ನೀವೆಲ್ಲ ಮನುಷ್ಯರು ಅಥವಾ ರಾಕ್ಷಸರ
ಆವಾಗ ಜಗನ್ನಾಥನ ಪರಿಚಯವಿದ್ದ ಇನ್ಸ್ಪೆಕ್ಟರ್ ಮುರುಗನ್ ಜಗನ್ನಾಥ್ ವಾರೆ ಇವನೊಬ್ಬ ಹುಚ್ಚ ಕೇವಲ 18 ವರ್ಷದಲ್ಲಿ ಮೂರು ಕೊಲೆ ಮಾಡಿರುವ ಅಪರಾಧಿ ತನ್ನ ತಂಗಿಯನ್ನು ಕೆಡಿಸಿದ ಮೂವರನ್ನು ಕಡೆದು ಹಾಕಿದ್ದಾನೆ ಏಳು ವರ್ಷ ಶಿಕ್ಷೆ ಕೂಡ ಅನುಭವಿಸಿದ್ದಾನೆ ಆದರೆ ಆ ಜೈಲಿನಲ್ಲಿ ಇದ್ದು ಮತ್ತು ತನ್ನ ತಂಗಿ ಕಣ್ಮುಂದೆ ಸತ್ತಿರುವ ಘಟನೆಯನು ನೆನೆಸಿಕೊಂಡು ನೆನೆಸಿಕೊಂಡು ಹುಚ್ಚನಾಗಿದ್ದಾನೆ ಜೈಲಿನಿಂದ ಬಿಡುಗಡೆಯಾದ ಮೇಲೆ ಅಲ್ಲಿಯ ಜೈಲರ್ ಇವನನ್ನು ಮೆಂಟಲ್ ಆಸ್ಪತ್ರೆಗೆ ಸೇರಿಸಬೇಕೆಂದು ನಿರ್ಧರಿಸಿದರು ಆದರೆ ಇವನು ಅಲ್ಲಿಂದ ಕೇವಲ ಎರಡು ದಿನದಲ್ಲಿ ತಪ್ಪಿಸಿಕೊಂಡು ಈ ಊರಿನ ವರೆಗೆ ಓಡಿ ಬಂದಿದ್ದಾನೆ
ಈಗ ಇವನನ್ನು ಹಿಡಿದು ಮೆಂಟಲ್ ಹಾಸ್ಪಿಟಲ್ ಗೆ ಹಾಕುವ ಜವಾಬ್ದಾರಿಯನ್ನು ಜೈಲರ್ ನನಗೆ ಕೊಟ್ಟಿದಾರೆ
ಮತ್ತೊಂದ್ ವಿಷಯ ಇವನು ಆವಾಗಾವಾಗ ತಂಗಿ ಸತ್ತ ವಿಷಯ ಯೋಚಿಸಿ ತುಂಬಾ ಹಿಂಸಾತ್ಮಕ ಆಗ್ತಾನೆ ಕೇವಲ ಎರಡೇ ದಿನದಲ್ಲಿ ಏಳು ಮೆಂಟಲ್ ಆಸ್ಪತ್ರೆ ಸಿಬ್ಬಂದಿಗಳನ್ನು ಗಂಭೀರವಾಗಿ ಗಾಯಗೊಳಿಸಿದ್ದಾನೆ
ಆಗ ಅಲ್ಲೇ ಇದ್ದ ಮೆಂಟಲ್ ಆಸ್ಪತ್ರೆಯ ಡಾಕ್ಟರ್: ಸರ್, ಇವನ ತುಂಬಾ ಹಿಂಸಾತ್ಮಕ ವ್ಯಕ್ತಿ ಇವನಿಗೆ ಶಾಕ್ ಟ್ರೀಟ್ಮೆಂಟ್ ಒಂದೇ ಮದ್ದು ಕೆಲವು ಸರಿ ಟ್ರೀಟ್ಮೆಂಟ್ ಕೊಟ್ರೆ ಸರಿಯಾಗ್ತಾರೆ ಅಥವಾ ಬ್ರೈನ್ ಡೆಡ್ ಆಗಬಹುದು
ಜಗನ್ನಾಥ : ರೀ ಡಾಕ್ಟ್ರೇ ಈತ ಮೊದಲೇ ಜೀವನದಲ್ಲಿ ಸೋತಿದ್ದಾನೆ ಆತನನ್ನು ಶಾಕ್ ಕೊಟ್ಟು ಸಾಯಿಸಬೇಕಂತೆ ಇದ್ದೀರಾ ನಿಮಗೆ ಇಷ್ಟು ಕಷ್ಟವಾದರೆ ನಾನೇ ಇವನನ್ನು ಕರ್ಕೊಂಡು ಹೋಗಿ ಸಾಕ್ತಿನಿ
ಮುರುಗನ್ : ಸರ್ ಅಂತ ತಪ್ಪನ್ನು ಮಾಡಬೇಡಿ ಈತ ತುಂಬಾ ವೈಲೆಂಟ್ ಹದ ತಪ್ಪಿದ್ರೆ ಜೀವವು ತೆಗೀಬಹುದು
ಜಗನ್ನಾಥ : ರೀ ಇನ್ಸ್ಪೆಕ್ಟರ್ ಎಂಥ ಹಿಂಸಾತ್ಮಕ ಆದರೂ ಮನುಷ್ಯನ ತಾನೆ ಮೃಗಾ ಅಲ್ಲ ಅಲ್ವಾ ನಾನು ನಿಮ್ಮನ್ನು ಇವನನ್ನು ಇಲ್ಲಿಂದ ಕರ್ಕೊಂಡು ಹೋಗಲಿಕ್ಕೆ ಬಿಡಲ್ಲ
ಡಾಕ್ಟರ್ : ಹಾಗಾದರೆ ನೀವು ಈ form ಸಹಿ ಹಾಕಿ thumb impression ಕೊಡಿ ಈ formn ನೀವು ಅವರ ಸಂಬಂಧಿಕರು ಈ ಹುಚ್ಚನ ಸಂಪೂರ್ಣ ಜವಾಬ್ದಾರಿ ತಾವು ತಗೊಳ್ತೀರಾ ಹಾಗೂ ಈ ಹುಚ್ಚನಿಂದ ನಿಮಗೆ ಏನಾದರು ಕೇಡಾದರೆ ಅದಕ್ಕೆ ಕಾರಣ ನೀವೇ ಆಸ್ಪತ್ರೆಯವರು ಯಾವುದಕ್ಕೂ ಜವಾಬ್ದಾರಿ ಅಲ್ಲ
ಜಗನ್ನಾಥ : ರೀ ಡಾಕ್ಟ್ರೇ ಕೊಡಿ ಫಾರ್ಮ್ ಎಂದು ಹೇಳಿ form ಸಹಿ ಮಾಡಿದನು ಹಾಗೂ ಚಕ್ರಪತಿಯ ರಟ್ಟೆಯನ್ನು ಹಿಡಿದು ತನ್ನೊಂದಿ ಕರೆದೊಯ್ದನು
ಜಗನ್ನಾಥ ಮನೆಗೆ ತಲುಪಿದಾಗ
ಜಗನ್ನಾಥ : ವಿಭಾ ಎಂದು ಕೂಗಿದನು ಆವಾಗ ಅಲ್ಲಿಗೆ ವಿಭಾ ಚುಂಬಲ್ಲಿ ನೀರು ತಂದಳು ಜಗನ್ನಾಥನು ಅದರಲ್ಲಿ ತನ್ನ ಕೈ ಕಾಲು ತೊಳೆದು ಹಾಗೂ ಚಕ್ರಪತಿಯ ಕೈ ಮತ್ತೆ ಕಾಳನ್ನು ತೊಳೆದನು
ವಿಭಾ ಚಕ್ರವರ್ತಿಯನ್ನು ಮೇಲಿಂದ ಕೆಳಗಡೆ ನೋಡಿ
ಜಗನ್ನಾಥನ ಕುರಿತು
ವಿಭ : ಯಾರ್ರೀ ಈ ಹುಚ್ಚ ನೀವ್ ಕರ್ಕೊಂಡ್ ಬಂದಿರೋದು
ಆವಾಗ ಅಲ್ಲಿಗೆ ಧಾವಿಸಿದ ತಿಮ್ಮ ಅಕ್ಕ ಇನ್ಸ್ಪೆಕ್ಟರ್ ಮುರುಗನ್ನವ್ರು ಇವನ ಬಗ್ಗೆ ಹೇಳಿದರು ಇವನು ಮೂರು ಕೊಲೆ ಮಾಡಿ ಜೈಲು ಶಿಕ್ಷೆಗೆ ಒಳಗಾಗಿದ್ದಾನೆ ಹಾಗೂ ಮೆಂಟಲ್ ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದಾನೆ ಈಗ ಅಂತವನನ್ನು ಜಗನ್ನಾಥರು ತಮ್ಮ ಮನೆಯಲ್ಲಿ ಇಟ್ಕೊಳ್ತಾರಂತ ಇವನು ಇಲ್ಲಿದ್ದಾರೆ ನಾನಿಲ್ಲಿ ಇರಲ್ಲಕ್ಕ ಇವನ ದೇಹ ಮತ್ತು ಮುಖ ನೋಡಿದ್ರೆನೇ ಭಯವಾಗುತ್ತದೆ
ವಿಭ : ರೀ ನಿಮಗೆನಾದ್ರೂ ತಲೆ ಕೆಟ್ಟಿದೆಯಾ ಇಂತ ಹುಚ್ಚನನ್ನು ಮನೆಗೆ ಕರ್ಕೊಂಡು ಬಂದಿದ್ದೀರಲ್ಲ ಸುಮ್ಮನೆ ಪೋಲಿಸ್ ಸ್ಟೇಷನ್ ಗೆ ಹೋಗಿ ಇವನನ್ನು ಬಿಟ್ಟು ಬನ್ನಿ
ಇವನಿದ್ರೆ ನಾನು ಮನೆಯಲ್ಲಿ ಇರಲ್ಲ
ಜಗನ್ನಾಥ : ಲೇ ವಿಭ ಇವನನ್ನು ಆಸ್ಪತ್ರೆಗೆ ಕಳಿಸಿದರೆ ಅವರ ಸಾಯಿಸ್ಬಿಡ್ತಾರೆ ಕಾಣೆ ಇವನ ನೋಡಿದರೆ ಪಾಪ ಎಣಿಸಲ್ವಾ ನಿನಗೆ
ವಿಭ : ಅದು ಅವನ ಕರ್ಮರಿ ಮೊದಲೇ ಹುಚ್ಚ, ನಮ್ಮದು ತುಂಬಿದ ಕುಟುಂಬ ಯಾರಿಗಾದರೂ ಈತನು ಹುಚ್ಚು ಜಾಸ್ತಿಯಾಗಿ ಏನಾದರೂ ಕೆಡುಕು ಮಾಡಿದರೆ ನಾವೆಲ್ಲಿರಿ ಹೋಗುವುದು ಬೇಡ ಇವನನ್ನು ಪೊಲೀಸ್ ಸ್ಟೇಷನಿಗೆ ಒಪ್ಪಿಸಿ ಬನ್ನಿ
ಜಗನ್ನಾಥ : ನೋಡು ಇವನು ಮನೆಯಲ್ಲಿ ಇಲ್ಲದಿದ್ದರೆ ನಾನು ಸಹ ಇರಲ್ಲ ನಾನು ಕೂಡ ಇವನ ಜೊತೆ ಹೋಗ್ ಬಿಡ್ತೀನಿ
ಆವಾಗ ಅಲ್ಲಿಗೆ ಶೇಷ ಮತ್ತು ಸುರೇಂದ್ರ ಧಾವಿಸಿದ
ಸುರೇಂದ್ರ : ಅಪ್ಪ ಇವನನ್ನು ನೋಡಿದರೆ ನನಗೆ ಭಯವಾಗುತ್ತದೆ ಅಂತದ್ರಲ್ಲಿ ಇವನನ್ನು ಮನೆಯಲ್ಲಿ ಇಟ್ಟುಕೊಳ್ಳುವುದೇ ಬೇಡಪ್ಪ
ಆವಾಗ್ಲೇ ಶೇಷನ ಮೊಬೈಲ್ ಗೆ ಒಂದು ಕಾಲ್ ಬಂತು ಶೇಷ ಫೋನನ್ನು ಎತ್ತಿ ಹಲೋ ಎಂದನು ಫೋನನ್ನು ಕೇಳುತ್ತಾ ಜೋರಾಗಿ ಒಮ್ಮೆ ದೊಡ್ಡಪ್ಪ ಎಂದು ಗಟ್ಟಿಯಾಗಿ ಕಿರುಚಿ ಅಳಲಾರಂಸಿದನು
ವಿಭ: ಶೇಷ ಏನಾಯ್ತು ಯಾಕೆ ಹೀಗೆ ಅಳ್ತಾ ಇದ್ಯಾ ಹೇಳೋ ಬೇಗ
ಶೇಷ : ದೊಡ್ಡಪ್ಪನಿಗೆ ಆಕ್ಸಿಡೆಂಟ್ ಆಯ್ತು
ಅದನ್ನು ಕೇಳಿ ವಿಭಾ ಮತ್ತು ಜಗನ್ನಾಥನ್ನು ಇಬ್ಬರು ಬೆಚ್ಚಿಬಿದ್ದರೂ
ಜಗನ್ನಾಥ : ಅಪ್ಪ ಈಗ ಹೇಗಿದ್ದಾರಂತೆ
ಶೇಷ : ಆಸ್ಪತ್ರೆಯಲ್ಲಿದ್ದಾರಂತೆ ಪರಿಸ್ಥಿತಿ ಗಂಭೀರವಾಗಿದೆಯಂತೆ
ವಿಭ : ರೀ ಬನ್ರೀ ನಾವು ಬೇಗನೆ ಆಸ್ಪತ್ರೆಗೆ ಹೋಗೋಣ ಎಂದು ಹೇಳಿ
ಶೇಷನು ತನ್ನ ಗಾಡಿಯನ್ನು ತೆಗೆದನು ಆವಾಗ ಜಗನ್ನಾಥನ್ನು ತಿಮ್ಮನನ್ನು ಕುರಿತು ತಿಮ್ಮ ನೀನು ಚಕ್ರವರ್ತಿಯನ್ನು ನೋಡ್ಕೋ ನಾವು ಆಸ್ಪತ್ರೆಗೆ ಹೋಗಿ ಬರುತ್ತೇವೆ
ತಿಮ್ಮ ಭಯದಿಂದ : ಏನು ಈ ಈ ದಾಂಡಿಗನ ನಾ ನೋಡಿಕೊಳ್ಳುವುದು ಅಯ್ಯೋ ಬೇಡ
ಜಗನ್ನಾಥ : ಲೋ ಏನಾಗಲ್ವೋ ಸುಮ್ನೆ ಹೇಳಿದಷ್ಟು ಮಾಡು ಎಂದು ಹೇಳಿ ಕಾರಲ್ಲಿ ಜಗನ್ನಾಥನ ಸಂಪೂರ್ಣ ಕುಟುಂಬ ಆಸ್ಪತ್ರೆ ಹೋದರು
ಆಸ್ಪತ್ರೆಗೆ ಧಾವಿಸಿದಾಗ ನಿಂಗಿ ಅಳುತ್ತಾ ನಿಂತಿದ್ಳು ಹಾಗೂ ಆಸ್ಪತ್ರೆ ಕೊಠಡಿಗೆ ಹೋದಾಗ ವಿಶ್ವನಾಥನ ಪ್ರಾಣ ಪಕ್ಷಿಯು ಹಾರಿಹೋಗಿತ್ತು
ಜಗನ್ನಾಥನ ಕುಟುಂಬವು ಗೊಳ್ ಅಂತ ಅತ್ತರು
ವಿಶ್ವನಾಥನ ದೇಹವನ್ನು ಊರಿಗೆ ತೆಗೆದುಕೊಂಡು ಹೋಗಿ ಅಲ್ಲಿ ಅಂತಿಮ ಸಂಸ್ಕಾರ ಮಾಡಿದರು ಇಡೀ ಊರಿಗೆ ಊರೇ ಅಂದು ದುಃಖದಲ್ಲಿ ಮುಳುಗಿತ್ತು.
ಇಡೀ ಊರೇ ತನ್ನ ತಂದೆಯನ್ನು ಕಳೆದಂತೆ ದುಃಖಿಸುತ್ತಿದ್ದರು
ಕೃಷ್ಣ ಕುಟೀರ ಮನೆಯವರಿಗೆ ತಮ್ಮ ಬೆನ್ನೆಲುಬೆ ಕಳೆದಂತಾಯಿತು ಮುಂದಿನ ಒಂದು ವಾರ ವೈಕುಂಠಪುರವು ನಿಶಬ್ದವಾಗಿತ್ತು.
ಆದರೆ ಚಕ್ರವರ್ತಿ ಒಂದು ವಾರವಾದರೂ ಮನೆಯ ಹೊರಗಡೆಯೇ ಇದ್ದನು ತಿಮ್ಮನು ಅವಾಗವಾಗ ಆತನಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದನು ಈ ಒಂದು ವಾರದಲ್ಲಿ ಅವನು ಯಾವತ್ತೂ ಹಿಂಸಾತ್ಮಕ ಆಗುವುದಾಗಲಿ, ಕಿರುಚುವುದಾಗಲಿ ಮಾಡಲಿಲ್ಲ ವೈಕುಂಠ ಪುರದ ದುಃಖದಲ್ಲಿ ಅವನು ಮುಳುಗಿದ ಹಾಗೆ ಬಸವವಾಗುತ್ತಿತ್ತು
ಜಗನ್ನಾಥನ ತನ್ನ ಅಪ್ಪನನ್ನು ಕಳೆದುಕೊಂಡು ತುಂಬಾ ಕುಗ್ಗಿ ಹೋಗಿದ್ದಾನೆ ಅವನು ಗಂಟೆಗಟ್ಟಲೆ ಕೂತಲ್ಲೇ ಕೂತು ಏನು ಕಳೆದಂತೆ ಗಾಢವಾದ ಯೋಚನೆಯನ್ನು ಮಾಡಲು ತೊಡಗಿದನು ಬೆಳಗಾದರೆ ತೋಟದ ಕಡೆ ಹೋಗಿ ಸಂಜೆವರೆಗೆ ಅಲ್ಲಿ ದುಡಿದು ಹಿಂದಿರುಗುವವನು ಒಂದು ವಾರವಾದರೂ ಗದ್ದೆ ಕಡೆ ಹೋಗಲಿಲ್ಲ
ಒಂದು ಸಂಜೆ ಎಂದಿನಂತೆ ಜಗಲಿ ಮೇಲೆ ಕೂತು ವ್ಯಥೆಪಡುತ್ತಿದ್ದನು ಆವಾಗ್ಲೇ ವಿಭಾ ಕಿರುಚುದನ್ನು ಕೇಳು ಬಂತು
ವಿಭಾ : ಶೇಷ ತಿಮ್ಮ ಬಾರೋ ಇಲ್ಲಿ ಅಲ್ಲೇ ಕೂತಿದ್ದ ಚಕ್ರವರ್ತಿಯನ್ನು ತೋರಿಸುತ್ತಾ ಈ ಅನಿಷ್ಠ ವನ್ನು ಇಲ್ಲಿಂದ ಓಡಿಸಿ ಎಷ್ಟು ದಿನದಿಂದ ಇವನು ಮನೆಯ ಹೊರಗಡೆ ಕೂತಿದ್ದಾ
ನೆ ಕಾಲಿಟ್ಟ ಕ್ಷಣದಲ್ಲಿ ನಮ್ಮ ಮಾವ ತೀರಿಕೊಂಡರು ಇನ್ನು ಇವನು ಇಲ್ಲೇ ಇದ್ದಾರೆ ಏನೇನು ಅಪಶಕುನಗಳಾಗ್ತವು
ಅದನ್ನು ಕೇಳಿದ ಜಗನ್ನಾಥಕ್ಷನಲ್ಲಿಗೆ ಬಂದು
ಜಗನ್ನಾಥ : ವಿಭಾ ಯಾಕೆ ಅದಕ್ಕೆಲ್ಲ ಈ ಬಡಪಾಯಿ ಮೇಲೆ ಹಾಕುತ್ತಿದ್ದೀಯಾ ಏನು ತಿಳಿಯದ ಮುಗ್ಧ ಇವನು
ವಿಭ : ನಿಮಗೆ ಇದೆಲ್ಲ ತಿಳಿಯದುರಿ ಕೆಲವರು ಕಾಲಿಟ್ಟ ಗಲ್ಲಿಗೆ ಅಷ್ಟು ಅಪಶಕುನವಾಗಿರುತ್ತದೆ ಇವನು ಕಾಲಿಟ್ಟಿದೆ ಇಟ್ಟಿದ್ದು ನಮ್ಮವ ತೀರಿಕೊಂಡರು ಇವನು ಯಾವುದೇ ಕಾರಣಕ್ಕೂ ಮನೆಯ ಹೊರಗಡೆ ಇರಬಾರದು ಒಂದು ವಾರದಿಂದ ಎಲ್ಲೂ ಹೋಗದೆ ಇಲ್ಲೇ ಜಂಡ ಕುಡಿದಾನೆ ಶೇಷ ತಿಮ್ಮ ಓಡಿಸಿ ಈ ಅನಿಷ್ಟ ಇಲ್ಲಿಂದ
ಶೇಷ : ಆ ಇನ್ಸ್ಪೆಕ್ಟರ್ ಗೆ ಫೋನ್ ಮಾಡಿ ಇವನನ್ನು ಕರ್ಕೊಂಡು ಹೋಗಲಿಕ್ಕೆ ಹೇಳ್ತೀನಿ ,ಅಮ್ಮ ನೀನು ಸಮಾಧಾನ ಮಾಡ್ಕೋ
ಜಗನ್ನಾಥ : ಯಾರಾದರೂ ಇವನನ್ನು ಮುಟ್ಟಿದರೆ ಜೋಕೆ ಇವನ ಜವಾಬ್ದಾರಿ ನಾನು ತಗೊಂಡಿದೀನಿ ಈಗ ಮತ್ತೆ ಇನ್ಸ್ಪೆಕ್ಟರ್ ಗೆ ಇವನನ್ನು ಕರ್ಕೊಂಡು ಹೋಗಿ ಅಂತ ಹೇಳಿದರೆ ನನಗೆ ಏನಿರುತ್ತೆ ಮರ್ಯಾದೆ
ವಿಭಾ : ಅಂತ ಹೇಳಿ ಇವನನ್ನು ಎಲ್ಲಾದರೂ ಮನೆ ಒಳಗಡೆ ಸೇರಿಸಿದರೆ ನಾನು ನನ್ನ ಮಕ್ಕಳನ್ನು ಕರ್ಕೊಂಡು ಮನೆ ಬಿಟ್ಟು ಹೋಗ್ತೀನಿ
ಜಗನ್ನಾಥ : ವಿಭಾ, ಯಾಕೆ ಹೀಗೆ ಆಡ್ತಾ ಇದ್ಯಾ ಅರ್ಥಮಾಡಿಕೊಳ್ಳೆ
ವಿಭ : ನೀವು ಸುಮ್ಮನಿರಿ ಚಕ್ರವರ್ತಿಯನ್ನು ಕುರಿತು ಹೇ ಹುಚ್ಚ ಹೋಗು ಇಲ್ಲಿಂದ ನಿಲ್ಲು ನೀನು ಹೀಗೆಲ್ಲ ಕೇಳಲ್ಲ ನಿನಗೆ ನಮ್ ಲಕ್ಕಿನೆ ಸರಿ ಲಕ್ಕಿ ಲಕ್ಕಿ ಅಂತ ಜೋರಾಗಿ ಕೂಗಿದಳು ಲಕ್ಕಿ ಓಡೋಡಿ ಬಂತು ಚಕ್ರವರ್ತಿಯನ್ನು ತೋರಿಸುತ್ತಾ ಹೋಗು ಹಿಡಿ ಅವನನ್ನು ಲಕ್ಕಿ ಬೊಗಳುತ ಚಕ್ರವರ್ತಿ ಮೇಲೆ ಜಿಗಿತು ಹಾಗೂ ಚಕ್ರವರ್ತಿ ಮೇಲೆ ಪ್ರಹಾರ ಮಾಡಲು ಪ್ರಾರಂಭಿಸಿ ಚಕ್ರವರ್ತಿ ಹೆದರಿ ಹಿಂಜರಿದನು ಹಾಗೂ ಲಕ್ಕಿ ಮತ್ತೆ ಅವನ ಮೇಲೆ ಜಿಗಿಯಿತು
ಜಗನ್ನಾಥ : ಏ ಲಕ್ಕಿ ಬೇಡ ಬಿಟ್ಟುಬಿಡು ಅವನನ್ನು ಎಂದು ಹೇಳಿ ಲಕ್ಕಿಯನ್ನು ತಡೆಯಲು ಮುಂದಾದನು ಆವಾಗ ಶೇಷ ಮತ್ತು ತಿಮ್ಮ ಜಗನ್ನಾಥನನ್ನು ಬಿಗಿಯಾಗಿ ಹಿಡ್ಕೊಂಡ್ರು
ಲಕ್ಕಿ ಪುನ ಜಿಗಿದು ಚಕ್ರವರ್ತಿಯನ್ನು ಬೀಳಿಸಿತು ಹಾಗೂ ಚಕ್ರವರ್ತಿಯ ಕುತ್ತಿಗೆಯನ್ನು ಹಿಡಿಯಲು ಮುಂದಾಯಿತು ಆದರೆ ಚಕ್ರವರ್ತಿಯು ಅದನ್ನು ತನ್ನ ಕೈಯಲ್ಲಿ ತಡೆದು ಹಿಡಿದನು ತಕ್ಷಣ ಲಕ್ಕಿ ಚಕ್ರವರ್ತಿಯ ಕಣ್ಣಲ್ಲಿ ಕಣ್ಣಿಟ್ಟು ನೋಡತೊಡಗಿತ್ತು ಹಾಗೂ ಬೊಗಳುತ್ತಾ ಬೊಗಳುತ್ತಾ ಅದು ಒಮ್ಮೆಲೇ ಶಾಂತವಾಯಿತು ಹಾಗೂ ಚಕ್ರವರ್ತಿಯನ್ನು ನೆಕ್ಕಲು ಶುರು ಮಾಡಿತು
ಅದನ್ನು ನೋಡಿದ ಶೇಷಾ ವಿಭ ತಿಮ್ಮ ಹಾಗೂ ಜಗನ್ನಾಥನು ಆಶ್ಚರ್ಯ ಚಕಿತರಾದರು.
ಜಗನ್ನಾಥ ಶೇಷ ಮತ್ತು ತಿಮ್ಮ ನನ್ನ ಪಕ್ಕಕ್ಕೆ ದೂಡಿ ನೆಲದಲ್ಲಿ ಬಿದ್ದ ಚಕ್ರವರ್ತಿಯನ್ನು ಎಬ್ಬಿಸಿ ಹೇ ವಿಭಾ ನಿನಗೆ ಏನಾದರೂ ತಲೆ ಕೆಟ್ಟಿದೆಯಾ ಲಕ್ಕಿ ಎಲ್ಲಾದರೂ ಇವನ ಕುತ್ತಿಗೆಗೆ ಬಾಯಿ ಹಾಕಿದ್ರೆ ಏನ್ ಗತಿ
ವಿಭ : ಹೌದ್ರೀ ಹುಚ್ಚು ಹಿಡಿದಿದೆ ನನಗೆ ಈ ಅನಿಷ್ಟ ನ ಮುಖ ಯಾವಾಗ ನೋಡ್ತೀನಿ ಹುಚ್ಚು ಹಿಡಿದಾಗ ಆಗ್ತದೆ ಮೊದಲು ಇಲ್ಲಿಂದ ಅವನನ್ನು ತೊಲಗಿಸಿ
ಜಗನ್ನಾಥ : ಇವನು ಹೋದರೆ ನಾನು ಇವನ ಜೊತೆ ಹೋಗ್ತೀನಿ
ವಿಭ : ಇವನು ಮನೆಯೊಳಗೆ ಬಂದರೆ ನಾನು ಮನೆಯಲ್ಲಿ ಬಿಟ್ಟುಬಿಡುತ್ತೇನೆ
ಜಗನ್ನಾಥ : ಇವರ ಮನೆಯೊಳಗೆ ಬಾರಬಾರದು ತಾನೇ, ನಿನಗೆ ಹಾಗಾದರೆ ಆಯ್ತು ಇವನಿಗೆ ನಮ್ಮ ದನದ ಕೊಟ್ಟಿಗೆಯಲ್ಲಿ ನೆಲೆಸಲು ವ್ಯವಸ್ಥೆ ಮಾಡ್ತೀನಿ
ದನದ ಕೊಟ್ಟಿಗೆಯು ಕೃಷ್ಣ ಕುಟೀರ ಮನೆಯ ಹಿಂಭಾಗವೇ ಇತ್ತು ಅಲ್ಲಿಗೆ ಜಗನ್ನಾಥನು ಚಕ್ರವರ್ತಿಯನ್ನು ಕರ್ಕೊಂಡು ಬಂದು ಅಲ್ಲೇ ಒಂದು ಕೋಟಾಡಿ ಮಾಡಿ ಅಲ್ಲೇ ನೆಲೆಸಲು
ವ್ಯವಸ್ಥೆ ಮಾಡಿದ
ಜಗನ್ನಾಥ : ಚಕ್ರವರ್ತಿ ವಿಭಾ ತುಂಬಾ ಒಳ್ಳೆಯವಳು ಏನು ಅಪ್ಪ ತೀರಿಕೊಂಡಿದರಿಂದ ಬೇಸತ್ತಿದ್ದಾಳೆ ಅದಕ್ಕೆ ಹೀಗೆ ಆಡ್ತಿದ್ದಾಳೆ ಅವಳು ಶಾಂತವಾಗುವವರೆಗೆ ನೀನು ಸ್ವಲ್ಪ ದಿನ ಇಲ್ಲೇ ಇರು ಆಮೇಲೆ ನಿನ್ನನ್ನು ಮನೆಯೊಳಗೆ ಕರೆಸಿಕೊಳ್ಳುತ್ತೇನೆ ಎಂದು ಹೇಳಿ ಚಕ್ರವರ್ತಿಗೆ ಜಗನ್ನಾಥನು ಊಟ ತಂದುಕೊಟ್ಟನು
ಚಕ್ರವರ್ತಿ ದೊಡ್ಡ ಹೊಟ್ಟೆ ಪಾಕ ಜಗನ್ನಾಥನು ಕೊಟ್ಟ ಊಟವನ್ನು ಉಂಡು ಮತ್ತೆ ಬೇಕೆಂದು ಸನ್ನೆ ಮಾಡತೊಡಗಿನ ಜಗನ್ನಾಥನು ನಗುತ್ತಾ ಮತ್ತೆ ಊಟ ತಂದು ಕೊಟ್ಟನು
ಜಗನ್ನಾಥನ ಚಕ್ರವರ್ತಿಯನ್ನು ಮನೆ ಒಳಗಡೆ ಕರೆದುಕೊಂಡು ಬಂದು ಒಂದು ಮೂರು ದಿನವಾಗಿತ್ತು ಅಂದು ರಾತ್ರಿ ಒಂದು ಗಂಟೆ ಚಕ್ರವರ್ತಿಯು ಒಂದೇ ಸಮನೆ ಕಿರುಚಲು ಪ್ರಾರಂಭಿಸಿದನು ಅವನ ಕಿರಿಚನ್ನು ಕೇಳಿ ಕೊಟ್ಟಿಗೆಯಲ್ಲಿದ್ದ ದನ ಕಾರುಗಳು ಕಂಗಾಲಾದ ಹಾಗೂ ಕಟ್ಟನ್ನು ಬಿಚ್ಚಿ ಓಡಲು ಪ್ರಯತ್ನಿಸಿತು
ಕಿರುಚನ್ನು ಕೇಳಿದ ಮನೆ ಮಂದಿಯವರೆಲ್ಲ ಕೊಟ್ಟಿಗೆ ಯತ್ರ ಓಡತೊಡಗಿದರು.
ಚಕ್ರವರ್ತಿ ಉಗ್ರ ರೂಪ ತಾಳಿದನು ತನಗೆ ಸಿಕ್ಕಿದನೆಲ್ಲ ಎತ್ತಿ ಬಿಸಾಕುತ್ತಿದ್ದ ಹಾಗೂ ಗೋಡೆಗೆ ಹೊಡೆದು ಹೊಡೆದು ತೂತ್ತು ಮಾಡಿದ್ದನು
ಆವಾಗ ಜಗನ್ನಾಥನ್ ಮುಂದಕ್ಕೆ ಬಂದು ಚಕ್ರವರ್ತಿಯನ್ನು ತಡೆಯಲು ಯತ್ನಿಸಿದನು ಆಗ ಚಕ್ರವರ್ತಿ ಜಗನ್ನಾಥ ಕುತ್ತಿಗೆಯನ್ನು ಹಿಡಿದು ಅವನನ್ನು ಮೇಲಕ್ಕೆತ್ತಿದ್ದನು ಜಗನ್ನಾಥನಿಗೆ ಉಸಿರು ಕಟ್ಟಲು ಪ್ರಾರಂಭಿಸಿತು ಅದನ್ನು ನೋಡಿದ ಶೇಷ ಚಕ್ರವರ್ತಿ ಬಂದು ಹಿಂದಿನಿಂದ ಹೊಡೆಯಲು ಪ್ರಾರಂಭಿಸಿದನು ಚಕ್ರವರ್ತಿ ಆತನನ್ನು ಪಕ್ಕಕ್ಕೆ ದೂಡಿಬಿಟ್ಟ ಅವಾಗ ಸುರೇಂದ್ರ ಮತ್ತು ತಿಮ್ಮ ಇಬ್ಬರು ಬಂದು ಚಕ್ರವರ್ತಿಯನ್ನು ಹಿಡಿದರು ಚಕ್ರವರ್ತಿ ತಿಮ್ಮನನ್ನು ಎತ್ತಿ ಆಚೆಕ್ಕೆ ಬಿಸಾಕಿ ಸುರೇಂದ್ರನನ್ನು ಆಚೆಗೆ ದೂಡಿದನು
ಆವಾಗ ವಿಭಾಗ ಬಂದು ರಾಕ್ಷಸ ಬಿಡುವವರನ್ನ ಎಂದು ಹೇಳಿ ಬಂದು ಅವನಿಗೆ ಹಿಂದಿನಿಂದ ಗುದ್ದಲು ಪ್ರಾರಂಭಿಸಿದಳು ಚಕ್ರವರ್ತಿ ಆಕೆಯನ್ನು ಹಿಡಿದು ದೂಡಿದನು. ದೂಡಿದ ರಬಸಕ್ಕೆ ಆಕೆ ತಲೆ ಹೋಗಿ ಗೋಡೆಗೆ ತಕ್ಲಿತು ಹಾಗೂ ತಲೇಲಿ ಗಾಯವಾಯಿತು ಅದನ್ನು ನೋಡಿದ ಶೇಷನಿಗೆ ವಿಪರಿತ ಕೋಪ ಬಂತು ಅಲ್ಲಿ ಕೊಟ್ಟೆಯಲ್ಲಿ ನೇತಾಡುತ್ತಿದ್ದ ಕಾಂಡೋಬಾ ತಲ್ವಾರನ್ನು ( ಈ ತಲ್ವಾರೋ 42 Kg ಇದೆ ಈ ತಲ್ವಾರ 400 ವರ್ಷ ದಿಂದ ಕೃಷ್ಣ ಕುಟೀರ ವಂಶವರತ್ರ ಇದೆ ಇದಕ್ಕೆ ಅನೇಕ ಕಥೆಗಳಿವೆ ಕೆಲವರು ಕೃಷ್ಣ ಕುಟೀರ ಮನೆಯವರು ಸ್ವರಾಜದಲ್ಲಿ ಪಾಲ್ಗೊಂಡಿದ್ದರು ಅದಕ್ಕೆ ಮೆಚ್ಚಿ ಶಿವಾಜಿ ಮಹಾರಾಜ ಅವರು ಆ ಕಾಂಡೋಬಾ ತಲ್ವಾರನ್ನು ಕೊಟ್ಟಿರುವುದು ಇನ್ನು ಕೆಲವರು ಭಗವಾನ್ ಕಂಡುಬನೇ ಕೃಷ್ಣ ಕುಟರ ಮನೆದವರಿಗೆ ಈ ಊರನು ರಕ್ಷಿಸಲು ಆ ತಲ್ವಾರನ್ನು ಕೊಟ್ಟಿದ್ದಾನೆ ಎಂದು ಹೇಳುತ್ತಾರೆ ಆದರೆ ನಿಜವಂಶ ಯಾರಿಗೂ ಗೊತ್ತಿಲ್ಲ ಆದರೆ ಆಯುಧವನ್ನು ಮನೆ ಒಳಗಡೆ ಇಡಬಾರದಂತ ಕೊಟ್ಟೆಯಲ್ಲಿಟ್ಟಿದ್ದರು ಅದಕ್ಕೆ ಪ್ರತಿ ಆಯುಧ ಪೂಜೆಗೆ ಅದನ್ನು ಹರಿತಗೊಳಿಸಿ ಅದಕ್ಕೆ ಪೂಜೆಯನ್ನು ಸಲ್ಲಿಸುತ್ತಿದ್ದರು) ಶೇಷನ ಆ ತಲ್ವಾರನ್ನು ಎತ್ತಿ ಚಕ್ರವರ್ತಿಗೆ ಚುಚ್ಚಲು ಬಂಧನ ಆವಾಗ ಜಗನ್ನಾಥನು ಶೇಷನೇ ಕೈ ಸನ್ನೆ ಮಾಡಿ ಅಲ್ಲೇ ನಿಲ್ಲಲು ಹೇಳಿದನು ಹಾಗೂ ಚಕ್ರವರ್ತಿಯ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಮುಗುಳ್ನಕ್ಕನು ಚಕ್ರವರ್ತಿ ಕಿರುಚುತ್ತಾ ಜಗನಾಥರ ಕುತ್ತಿಗೆಯನ್ನು ಇನ್ನು ಬಿಗಿಯಾಗಿ ಹಿಡಿದು ಗಟ್ಟಿಯಾಗಿ ಕಿರುಚುತ್ತಿದ್ದನು ಜಗನ್ನಾಥ ಮುಗುಳ್ನಗುತ್ತಾ ತನ್ನ ಬಲ ಕೈಯ ತೋರುಬೆರನಲ್ಲಿ ಹೀಗೆ ಮಾಡಬೇಡ ಎಂದು ಕೈ ಸನ್ನೆ ಮಾಡಲು ಪ್ರಾರಂಭಿಸಿದನು ಜಗನ್ನಾಥನ ಮುಗುಳ್ನಗೆ ಹಾಗೂ ಕೈಸನ್ನೆಯನ್ನು ನೋಡಿ ಚಕ್ರವರ್ತಿ ಒಮ್ಮೆ ಶಾಂತನಾದನು ಹಾಗೂ ಜಗನ್ನಾಥನ್ನು ಕೆಳಗಿಳಿಸಿ ಗಟ್ಟಿಯಾಗಿ ಅಳಲಾರಂಭಿಸಿದನು
ಶೇಷ : ಇನ್ನು ಇವನು ಈ ಮನೆಯಲ್ಲಿ ಇರುವುದು ಬೇಡ ಈಗಲೇ ಪೋಲಿಸ್ ಇನ್ಸ್ಪೆಕ್ಟರ್ ಕರೆ ಮಾಡಿ ಇವ ನನ್ನ ಮೆಂಟಲ್ ಹಾಸ್ಪಿಟಲ್ಗೆ ಕಳಿಸ್ತೀನಿ
ಜಗನ್ನಾಥ : ಇವರ ಜವಾಬ್ದಾರಿ ನಾನು ತಗೊಂಡಿದೀನಿ ಅದರ ಬಗ್ಗೆ ಯಾರೂ ನನಗಿಷ್ಟವಾಗಲ್ಲ
ವಿಭ : ರೀ ನಿಮಗೇನಾದರೂ ತಲೆ ಕೆಟ್ಟಿದೆ ಇಷ್ಟು ಆದ ಮೇಲೆ ಕೂಡ ಇವನನ್ನು ಮನೆಯಲ್ಲಿ ಇಟ್ಟುಕೊಳ್ಳುತ್ತೇನೆ ಅಂತ ಹೇಳುತ್ತಿದ್ದೀರಲ್ಲ ನಾಳೆ ನನಗೆ ಅಥವಾ ಸುರೇಂದ್ರನಿಗೆ ಏನಾದರೂ ಮಾಡಿಬಿಟ್ಟರೆ ಯಾರಿ ಜವಾಬ್ದಾರಿ
ಜಗನ್ನಾಥ : ಹಾಗೆ ಆಗದ ಹಾಗೆ ನಾನು ನೋಡಿಕೊಳ್ಳುತ್ತೇನೆ ಹೋಗಿ ನೀವೆಲ್ಲ ಮಲಗಿಕೊಳ್ಳಿ
ದಿನ ಹೋದಂತೆ ಚಕ್ರವರ್ತಿಯ ಕೆಲವು ಸರಿ ಹಾಗೆ ವೈಲೆಂಟ್ ಆದನು ಆದರೆ ಜಗನ್ನಾಥನ್ ಯಾವಾಗ ನಕ್ಕಿ ತನ್ನ ತೋರುಬೆರಳು ಅಲ್ಲಾಡಿಸಿದ್ದನು ಆವಾಗ ಚಕ್ರವರ್ತಿ ಶಾಂತವಾಗುತ್ತಿದ್ದ