ಕೃಷ್ಣ ಕುಟೀರ-26
ಕೃಷ್ಣ ಕುಟೀರ-26
ಆವಾಗ ಅಲ್ಲೇ ಸಂಚರಿಸುತ್ತಿದ್ದ DR ಡಿಸೋಜ ಸುರೇಶ ಹೊಳೆಯಲ್ಲಿ ಮುಳುಗುವುದನ್ನು ನೋಡಿ ತಾನು ಹೊಳೆಗೆ ಹಾರಿ ಸುರೇಶ್‌ನನ್ನು ಕಾಪಾಡುತ್ತಾನೆ
ಡಿಸೋಜ : ಸುರೇಂದ್ರ ಏನು ಮಾಡುತ್ತಿದ್ದೀಯಾ ಏನಿದು ಹುಚ್ಚಾಟ
ಸುರೇಂದ್ರ : ಬಿಡಿ ಡಾಕ್ಟರ್ ಸಾಹೇಬ್ರೆ ನನ್ನಂಥವನು ಈ ಜಗತ್ತಲ್ಲಿ ಬದುಕಿರಬಾರದು. ಅಲ್ಲಿ ನಾನು ನನ್ ಸೌಜನ್ಯನನ್ನು ಪಡೆದುಕೊಳ್ಳಲು ಆಗಲಿಲ್ಲ ಇಲ್ಲಿ ನನ್ನಿಂದ ನನ್ನ ಅಪ್ಪ ಅಮ್ಮನಿಗೆ ಮತ್ತು ಅಣ್ಣನಿಗೆ ಬೇಡವಾದ ಕಷ್ಟ ನಾನಿದ್ದಾದರೂ ಏನು ಪ್ರಯೋಜನ ಜೀವನವಿಡಿ ನನ್ನನ್ನು ಸಪೋರ್ಟ್ ಮಾಡುತ್ತಿದ್ದ ನನ್ನಮ್ಮ ನನ್ನು ಇವತ್ತು ಸಾಯಿ ಅಂತ ಹೇಳಿದ್ಲು ಹಿಂದಿನ ಜನ್ಮದ ವೈರಿಗಳು ಕೆಲವು ಸರಿ ಈ ಜನ್ಮದಲ್ಲಿ ಮಕ್ಕಳಾಗಿ ಹುಟ್ಟು ತರಂತೆ ನಾನು ಹಾಗೆ ಈ ಮಹಾ ವಂಶದಲ್ಲಿ ಹುಟ್ಟಿ ಇದಕ್ಕೆ ಕಲಂಕ ತಂದು ಬಿಟ್ಟೆ ನನ್ನಂಥವರು ಈ ಜಗತ್ತಿನಲ್ಲಿ ಬದುಕಿರಬಾರದು ನನ್ನಿಂದ ಜನರು ಕೃಷ್ಣ ಕುಟೀರ ಕುಟುಂಬನು ಟೀಕೆ ಮಾಡುವ ಹಾಗೆ ಆಯಿತು ನಾನು ಸತ್ತರೆನೇ ಎಲ್ಲರಿಗೆ ನೆಮ್ಮದಿ ನನ್ನನ್ನು ಸಾಯ್ಲಿಕ್ಕೆ ಬಿಡಿ
ಡಿಸೋಜ : ಕೃಷ್ಣ ಕುಟೀರ ಅಂತ ವಂಶದವನಾಗಿ ಈ ಹೇಡಿಗಳ ಮಾತನ್ನು ಯಾಕೆ ಆಡುತ್ತಿದೆ ಈಗ್ಲೇ ನಿನ್ನ ಅಪ್ಪನ ಕಂಡಿಷನ್ ತುಂಬಾ ಸೀರಿಯಸ್ ಆಗಿದೆ ಅದರಲ್ಲಿ ಅವರಿಗೆ ನೀನು ಆತ್ಮಹತ್ಯ ಮಾಡಿದನ್ನು ತಿಳಿದರೆ ಪ್ರಾಣವೇ ಹೊರಟು ಹೋಗುತ್ತದೆ
ತಂದೆ ತಾಯಿ ಎಂದರೆ ಮಕ್ಕಳಿಗೆ ಎರಡು ಮಾತು ಹೇಳುತ್ತಾರೆ ಅದಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವುದು ಯಾವ ನ್ಯಾಯ ನಿನ್ನಮ್ಮನಿಗೆ ನಿನ್ ಸಾವಿಂದ ತಾನು ಮಗನಿಗೆ ಬೈದದಿಂದ ಆತ ಆತ್ಮಹತ್ಯೆ ಮಾಡಿಕೊಂಡನೆಂದು ಜೀವನವಿಡಿ ಕೊರಗ ಬೇಕಾಗಬಹುದು ಅದು ನಿನಗೆ ಬೇಕಾ ಈಗ ನಿನ್ನ ಅಣ್ಣ ಇಲ್ಲ ಆತನ ಜವಾಬ್ದಾರಿಯನ್ನು ನೀನೆ ತಗೊಳ್ಬೇಕು ನಿನ್ನ ಅಪ್ಪನ ಸೇವೆ ಮಾಡಬೇಕು ಅವರ ಆಸೆ ನೀನು ಡಾಕ್ಟರಾಗಬೇಕಂತ ಅದನ್ನು ಪೂರೈಸು
ಸುರೇಂದ್ರ : ನನ್ನ ಅಪ್ಪನ ಆಸೆ ಪೂರೈಸ ಬೇಕಂತ ನನಗೂ ಇದೆ ಆದರೆ ನನಗೆ ವಿದ್ಯೆಗೆ ತಲೆಗತ್ತಲ್ಲ
ಡಾ ಡಿಸೋಜ : ಮನಸಿದ್ದರೆ ಮಾರ್ಗ ನಿನಗೆ ಸಾಧಿಸ್ಬೇಕಂತ ಮನಸಿದ್ದರೂ, ನಿನಗೊಬ್ಬ ಮೆಂಟರ್ ಬೇಕು. ನಿನಗೆ ನನ್ ಮಗನ ಫೋನ್ ನಂಬರ್ ಕೊಡುತ್ತೇನೆ ಅವನಿಗಷ್ಟೇ ನೀಟ್ ಎ
ಕ್ಸಾಮ್ ಪಾಸ್ ಮಾಡಿ AIIMS ನಲ್ಲಿ
ಎಂ ಬಿಪಿಎಸ್ ಮಾಡುತ್ತಿದ್ದ ಹಾಗೂ ಪಿಯುಸಿ ಮಕ್ಕಳಿಗೆ ಟ್ಯೂಷನ್ ಕೊಡುತ್ತಿದ್ದಾನೆ ಅವನು ನಿನಗೆ ಒಳ್ಳೆಯದಾಗಿ ಗೈಡ್ ಮಾಡಬಹುದು ನೀನು ಆತನನ್ನು ಕಾಂಟಾಕ್ಟ್ ಮಾಡು ಆದರೆ ಹೀಗೆ ಸಾಯುವುದಿಲ್ಲ ಯೋಚನೆ ಬಿಟ್ಟು ಬಿಡು ಈಸಬೇಕು ಈಸಿ ಜಯಿಸಬೇಕು ಅದು ಬಿಟ್ಟು ಆತ್ಮಹತ್ಯೆ ಪರಿಹಾರವಲ್ಲ ಹೋಗು ಮನೆಗೆ ಹೋಗಿ ನಿನ್ನ ಅಪ್ಪ ಅಮ್ಮನತ್ರ ಕ್ಷಮೆ ಕೇಳು ಹಾಗೂ ನಿನ್ನ ಜೀವನವನ್ನು ಹೊಸ ರೀತಿಯಲ್ಲಿ ಶುರು ಮಾಡು
ಸುರೇಂದ್ರನ ಮನೆಗೆ ಹೋದ ಆದರೆ ಆತನಿಗೆ ತನ್ನ ಅಪ್ಪ ಮತ್ತು ಅಮ್ಮನತ್ರ ಕ್ಷಮೆ ಕೇಳುವ ಧೈರ್ಯವಿರಲಿಲ್ಲ ಆತನು ನೇರವಾಗಿ ತನ್ನ ಕೊಠಡಿಗೆ ಹೋಗಿ ಅಲ್ಲಿ ತನ್ನ ಚೇರ್ ಮತ್ತೆ ಟೇಬಲನ್ನು ತಂದು ಜಗನ್ನಾಥ ಇದ್ದ ಕಡೆ ಶಿಫ್ಟ್ ಮಾಡಿದ ಹಾಗೂ ತನ್ನ ಪುಸ್ತಕವನ್ನು ತೆಗೆದು ಅಲ್ಲಿ ಓದಲು ಪ್ರಾರಂಭಿಸಿದನು ಅದನ್ನು ನೋಡಿದ ಜಗನ್ನಾಥನಿಗೆ ಮೊದಲು ವಿಶ್ವಾಸವಾಗಲಿಲ್ಲ ಹಾಗೂ ವಿಭಾ ಕೂಡ ನೋಡಿ ಈತನು ಬೇರೆ ಏನು ನಾಟಕ ಮಾಡುತ್ತಿದ್ದಾನೆ ಅಂದುಕೊಂಡಳು
ಆದರೆ ಮರುದಿನ ಸುರೇಂದ್ರನ ಡಾ ಡಿಸೋಜಾ ಹತ್ತಿರ ಹೋಗಿ ಜಗನ್ನಾಥನಿಗೆ ಯಾವ ಟೈಮಲ್ಲಿ ಏನು ಮಾತ್ರೆಗಳನ್ನು ಹಾಗೂ ಆಹಾರಗಳನ್ನು ಕೊಡಬೇಕೆಂದು ಎಲ್ಲ ತಿಳಿದುಕೊಂಡು ಚಾಚೂ ತಪ್ಪದೆ ಪಾಲಿಸುತ್ತಿದ್ದನು ವಿಭಾ ಕೆಲಸದಲ್ಲಿ ವ್ಯಸ್ತವಿದ್ದರೆ ಆತನು ತಪ್ಪದೇ ಜಗನ್ನಾಥನಿಗೆ ಔಷಧಿ ಹಾಗೂ ಆಹಾರಗಳನ್ನು ಟೈಮ್ ಟೈಮಿಗೆ ಕೊಡುತ್ತಿದ್ದನು ಡಾಕ್ಟರ್ ಡಿಸೋಜನ ಮಗನ ಜೊತೆ ಸಂಪರ್ಕ ಇಟ್ಕೊಂಡು ತನಗೆ ಇರುವ ಸಂದೇಹಗಳನ್ನು ಕ್ಲಿಯರ್ ಮಾಡುತ್ತಿದ್ದ ಹಿಂದೆ ಒಂದು ಗಂಟೆ ಓದಲು ಪರದಾಡುತ್ತಾ ಸುರೇಂದ್ರ ಇವಾಗ ದಿನಕ್ಕೆ ಆರರಿಂದ ಎಂಟು ಗಂಟೆ ಓದಲು ಪ್ರಾರಂಭಿಸಿದನು ಹಾಗೂ ಹೋಗುತ್ತಾ ಹೋಗುತ್ತಾ ಅವನಿಗೆ ಸಬ್ಜೆಕ್ಟ್'ಗಳನ್ನು
ಅರ್ಥ ಮಾಡಿಕೊಂಡು ಹಾಗೆ ಓದು ತುಂಬಾ ಇಂಟರೆಸ್ಟಿಂಗಾಗಿ ಕಾಣತೊಡಗಿತ್ತು ಆವಾಗಾವಾಗ ಜೈಲಿಗೆ ಫೋನ್ ಮಾಡಿ ತನ್ನ ಅಣ್ಣನ ಯೋಗ ಕ್ಷೇಮಗಳನ್ನು ವಿಚಾರಿಸುತ್ತಿದ್ದಾನೆ ಆದರೆ ತನ್ನಿಂದ ತನ್ನ ಅಣ್ಣ ಜೈಲು ಪಾಲಾದ ವೆಂದು ಆತನಿಗೆ ಮನಸು ಕಾಡತೊಡಗಿತ್ತು ಎಷ್ಟು ಸಲ ತಾನು ಅಪರಾಧವನ್ನು ಒಪ್ಪುಕೊಳ್ಳುತ್ತೇನೆ ಇಂದು ಹೇಳಿದರೂ ಆತನ ಅಣ್ಣ ಆತನಾಗೆ ನಿರಾಕರಿಸುತ್ತಿದ್ದ ತನ್ನ ಮಗನಲ್ಲಿ ಬಂದಾ ಈ ಬದಲಾವಣೆಯನ್ನು ನೋಡಿ ಜಗನ್ನಾಥ ತುಂಬಾ ತೃಪ್ತನಾದನು