STORYMIRROR

Harsha Shetty

Abstract Drama Others

3  

Harsha Shetty

Abstract Drama Others

ಕೃಷ್ಣ ಕುಟೀರ ಭಾಗ 25

ಕೃಷ್ಣ ಕುಟೀರ ಭಾಗ 25

3 mins
112

ಇಲ್ಲಿ ಸುರೇಂದ್ರ ತನ್ನ ಜೀವನದಲ್ಲಿ ಅಷ್ಟೊಂದು ಏರುಪೇರು ಆದರು ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಯಾವಾಗ ನೋಡಿದರೂ ಮೊಬೈಲ್ ಮತ್ತು ಕ್ರಿಕೆಟ್ ಬಿಟ್ರೆ ಸುರೇಂದ್ರನಿಗೆ ಬೇರೆ ಯಾವುದು ಚಿಂತನೆ ಇರಲಿಲ್ಲ ತನ್ನ ಅಪ್ಪನ ಮತ್ತೆ ಅಣ್ಣನ ದುರ್ಗತಿ ನೋಡಿ ಕೂಡ ಆತನ ಮನಸ್ಸು ಕರಗಲಿಲ್ಲ ಅಂದು ತಿಮ್ಮ ಮನೆಯಲ್ಲಿ ಇರಲಿಲ್ಲ 

 ವಿಭಾ ಅಡುಗೆ ಮನೆಯಲ್ಲಿ ಅಡುಗೆಯನ್ನು ಮಾಡುತ್ತಿದ್ದಳು ಹಾಗೂ ಸುರೇಂದ್ರನಿಗೆ ತನ್ನ ಅಪ್ಪನನ್ನು ನೋಡಿಕೊಳ್ಳಲು ಹೇಳಿದಳು ಆದರೆ ಸುರೇಂದ್ರ ಎಂದಿನಂತೆ ತನ್ನ ಕೊಠಡಿಗೆ ಹೋಗಿ ಮೊಬೈಲ್ನಲ್ಲಿ ವ್ವೀಡಿಯೋಸ್ಗಳನ್ನು ನೋಡಲು ಪ್ರಾರಂಭಿಸಿದನು ಇಲ್ಲಿ ಜಗನ್ನಾಥನಿಗೆ ಕುಡಿಯಲು ನೀರು ಬೇಕೆಂದು ಅನಿಸಿತು ನೀರಿನ ಚೆಂಬು ಹತ್ತಿರವಿದ್ದರೂ ಆತನಿಗೆ ಅದನ್ನು ತಲುಪಲು ಆಗುತ್ತಿರಲಿಲ್ಲ ಆತನು ಎಷ್ಟು ಪ್ರಯತ್ನ ಮಾಡಿದರು ಆ ನೀರಿನ ಚೊಂಬು ಆತನಿಗೆ ದಕ್ಕುತ್ತಿರಲಿಲ್ಲ ಆತನು ಚೊಂಬನ್ನು ಪಡೆಯಲು ಹೋಗಿ ಹಾಸಿಗೆಯಿಂದ ಬಿದ್ದುಬಿಟ್ಟರು ಹಾಗೂ ಚಂಬು ಕೂಡ ಬಿದ್ದುಬಿಟ್ಟಿತ್ತು ಅದರ ಧ್ವನಿ ಕೇಳಿದ ವಿಭಾ ಓಡೋಡಿ ಹೊರಗಡೆ ಬಂದಳು ಅಲ್ಲಿ ಜಗನ್ನಾಥ ಬಿದ್ದದನ್ನು ನೋಡಿ ತಾನು ಬೊಬ್ಬೆ ಹೊಡ್ಕೊಂಡು ಜಗನ್ನಾಥನನ್ನು ಎಬ್ಬಿಸಲು ಪ್ರಾರ್ಥಿಸಿದಳು ಆದರೆ ಆಕೆ ಎಷ್ಟು ಪ್ರಯತ್ನ ಮಾಡಿದರು ಜಗನ್ನಾಥ ಇರುವ ಗಾತ್ರ ವನ್ನು ಸಂಬಾಲಿಸಲು ಆಕೆಗೆ ಸಾಧ್ಯವಾಗುತ್ತಿರಲಿಲ್ಲ ಎಷ್ಟು ಸುರೇಂದ್ರನಿಗೆ ಕೂಗಿದರು ಮೊಬೈಲಲ್ಲಿ ವ್ಯಸ್ತವಾಗಿದ್ದ ಸುರೇಂದ್ರನಿಗೆ ಆಕೆಯ ಕೂಗು ಕೇಳಲೇ ಇಲ್ಲ ಆಮೇಲೆ ಅಕ್ಕ ಪಕ್ಕ ದಾರಿಹೋಕರು ಈಕೆ ಬೊಬ್ಬೆಯನ್ನು ಕೇಳಿ ಓಡೋಡಿ ಬಂದು ಜಗನ್ನಾಥನನ್ನು ಹಾಸಿಗೆಯಲ್ಲಿ ಮಲಗಿಸಿ ನೀರು ಕೊಟ್ಟರು ಜಗನ್ನಾಥನು ಬಿದ್ದ ಏಟಿಗೆ ವಾಸುದೇವ, ವಾಸುದೇವ ಎಂದು ಕನ್ವರಿಸುತ್ತಿದ್ದನು ಯಾಕೋ ಅವನ ಮನಸ್ಸಿನಲ್ಲಿ ಸಮಾಧಾನವಿಲ್ಲ ಹಾಗೆ ಕನವರಿಸುತ್ತಿತ್ತ ಹಾಗೂ ಪ್ರತಿ ಸರಿ ತಾನು ಮಲಗು ಇರುವ ಜಾಗದಿಂದ ದೇವರ ಕೋಣೆಯತ್ತ ಮುಖ ಮಾಡುತ್ತಾ ನೋಡುತ್ತಿದ್ದನು ಆದರೆ ಮಲಗಿರುವ ಜಾಗದಿಂದ ದೇವರ ಕೋಣೆ ತುಂಬಾ ದೂರವಿರುವುದರಿಂದ ಆತನಿಗೆ ಜಗನ್ನಾಥನ ಮೂರ್ತಿ ಕಾಣಿಸುತ್ತಿರಲಿಲ್ಲ ಆವಾಗ ಅಲ್ಲಿಗೆ ಧಾವಿಸಿದ ತಿಮ್ಮ ವಿಭಾ ಕುರಿತು 

 ತಿಮ್ಮ : ದನಿಗಳು ಯಾವಾಗ ನೋಡಿದರೂ ದೇವರ್ ಕೋಣೆಯತ್ರನೇ ನೋಡುತ್ತಿದ್ದಾರೆ ಯಾವಾಗ ಕೂಡ ವಾಸುದೇವ ವಾಸುದೇವ ವೆಂದು ಕನ್ವರಿಸುತ್ತಿದ್ದಾರೆ ನಾವು ಯಾಕೆ ವಾಸುದೇವನ ಮೂರ್ತಿಯನ್ನು ತಂದು ವ ದನಿಗಳು  ಮಲಗುವ ಜಾಗದಲ್ಲಿ ಇಡಬಾರದು

 ವಿಭಾ : ಅದು ಮನೆ ವಾಸ್ತು ಪ್ರಕಾರ ಸ್ಥಾಪಿಸಿರುವ ಮೂರ್ತಿ ಅಲ್ಲಿಂದ ತೆಗೆಯುವುದು ಸರಿಯಾಗುವುದೇ 

 ಅದಕ್ಕೆ ಅಲ್ಲಿದ್ದ ಹಿರಿಯರೊಬ್ಬರು ಎಲ್ಲಿ ಭಕ್ತರ ಇರ್ತಾರೋ ಅಲ್ಲೇ ವಾಸುದೇವಸ್ವಾಮಿ ಯಲ್ಲಮ್ಮ ಸುಮ್ಮನೆ ಆ ವಾಸುದೇವನ ಮೂರ್ತಿಯನ್ನು ತಂದು ಇಲ್ಲಿಡು 

 ಡಾಕ್ಟರ್ ಡಿಸೋಜ ಜಗನ್ನಾಥನ ಮೇಲೆ ಸ್ವಲ್ಪ ಸೂರ್ಯನ ಬೆಳಕು ಬಿದ್ದರೆ ಒಳ್ಳೆಯದೆಂದು ಹೇಳಿದ್ದರು ಆದ್ದರಿಂದ ಜಗನ್ನಾಥನನ್ನು ಬೆಳಿಗ್ಗೆಯಾದ ಕೂಡಲೇ ಎತ್ತುಕೊಂಡು ಬಂದು ಮನೆಯ ಜಗಳಯಲ್ಲಿ ಮಲಗಿಸುತ್ತಿದ್ದರು ಹಾಗೂ ಅಲ್ಲೇ ಇದ್ದ ಒಂದು ಚಿಕ್ಕ ಕೋಟ್ಯಾಡಿಯಲ್ಲಿ ವಾಸುದೇವನ ಮೂರ್ತಿಯನ್ನು ಜಗನ್ನಾಥನ ಮುಂದೇನೆ ಸ್ಥಾಪಿಸಿದರು.

 ವಿಭಾ ಸಿಟ್ಟಿಗೆದ್ದು ಸುರೇಂದ್ರನನ್ನು ಹುಡುಕಿಕೊಂಡು ಹೋದಳು ಸುರೇಂದ್ರ ಇನ್ನು ಕೂಡ ತನ್ನ ಮೊಬೈಲ್ ನಲ್ಲಿ ವ್ಯಸ್ತವಾಗಿದ್ದ

 ವಿಭ ಮೊಬೈಲನ್ನು ಸುರೇಂದ್ರ ಕೈಯಿಂದ ಕಸಿದುಕೊಂಡು

 ಸತತವಾಗಿ ಸುರೇಂದ್ರನ ಕೆನ್ನೆಗೆ ಬಾರಿಸಲು ತೊಡಗಿದಳು 

 ಸುರೇಂದ್ರನು ಏನು ತಿಳಿಯದ ಹಾಗೆ ಚಕಿತಗೊಂಡು ತನ್ನ ಅಮ್ಮನತ್ರ ನೋಡತೊಡಗಿದನು 

 ಸುರೇಂದ್ರ : ನಿಲ್ಲಿಸಮ್ಮ ಯಾಕೆ ಸುಮ್ಮನೆ ಹೊಡೆಯುತ್ತಿದ್ದೀಯ ನೀನು ಕೂಡ ಈಗ ಅಪ್ಪನಾಗೆ ಆಡತೊಡಗಿದೀಯಾ 

 ವಿಭಾ : ಅಲ್ಲಿ ನಿನ್ನ ಅಪ್ಪನನ್ನು ನೋಡ್ಕೋ ಅಂದರೆ ನೀನು ಇಲ್ಲಿ ಬಂದು ಮೊಬೈಲಲ್ಲಿ ಆಟ ಆಡುತ್ತಿದ್ದೆ ನಿನ್ನ ಒಂದು ತಪ್ಪಿನಿಂದ ಈ ಮನೆಯ ಸುಖ ನೆಮ್ಮದಿ ಹಾಳಾಗೋಯ್ತು ಅಣ್ಣ ಜೈಲಿಗೆ ಹೋದ ಅಪ್ಪ ಹಾಸಿಗೆ ಹಿಡಿದರು ಇನ್ನಾದರೂ ಈ ಮನೆಯ ಜವಾಬ್ದಾರಿ ನೀನು ತಗೋಳ್ತೀಯ ಅಂದರೆ ನಿನಗೆ ಯಾವಾಗ ನೋಡಿದರೂ ಹಾಳದ ಕ್ರಿಕೆಟ್ ಮತ್ತು ಮೊಬೈಲ್ ಯಾಕೋ ನನ್ನ ಹೊಟ್ಟೆಯಲ್ಲಿ ಹುಟ್ಟಿ ನನ್ನನು ಹೀಗೆ ಉರಿಸ್ತಾ ಇದ್ದೀಯಾ ಎಲ್ಲಿಯಾದರೂ ಹೋಗಿ ಸಾಯ್ಬಾರದ ನನಗೆ ಇನ್ನೊಬ್ಬ ಮಗ ಇಲ್ಲವೆಂದು ಅಂದುಕೊಂಡಿದ್ದೆ ನಿನ್ನಪ್ಪ ಯಾವಾಗಲೂ ನಿನ್ನನ್ನು ಆಪ್ರಯೋಜಕ, ಆಪ್ರಯೋಜಕ ಅಂದ ಕೂಡಲೇ ನಾನು ಅವರತ್ರ ಜಗಳ ಕಾಯುತ್ತಿದ್ದೆ ಆದರೆ ಈಗ ನಾನೇ ಹೇಳ್ತೀನಿ ನೀನೊಬ್ಬ ದೊಡ್ಡ ಅಪ್ರೋಯೋಜಕ ನೀನು ನನ್ನ ಹೊಟ್ಟೆಯಲ್ಲಿ ಹುಟ್ಟದಿಲ್ಲದಿದ್ದರ ನಾವೆಲ್ಲ ನೆಮ್ಮದಿಯಾಗಿ ಇರುತ್ತಿದ್ದೇವೆ. ನೀನು ಕೆಲವೇ ದಿನ ಪ್ರೀತಿ ಮಾಡಿದ ಹುಡುಗಿ ಸತ್ತಳೆಂದು ಅದನ್ನು ಮರೆಯಲು ಮೊಬೈಲ್ ಹಾಗೂ ಕ್ರಿಕೆಟಿನ ಸಹಾಯ ಪಡೆದಿದ್ದೀಯ ಆದರೆ ನಿನ್ನನ್ನು 9 ತಿಂಗಳು ಹೆತ್ತು ಹೊತ್ತು ಬೆಳೆಸಿದ ನನಗೆ ನಿನ್ನ ಮನಸ್ಸಿನಲ್ಲಿ ಸ್ವಲ್ಪ ಸ ಪ್ರೀತಿ ಇಲ್ವಾ. ಅಲ್ಲಿ ನಿನ್ನಪ್ಪ ನಿನ್ನನ್ನು ಚೆನ್ನಾಗಿ ಓದಿಸುವ ಆಸೆಯಲ್ಲಿದ್ದು ಆದರೆ ಅವರ ಆಸೆಯನ್ನು ಕೂಡ ನೀನು ಪೂರೈಸಿಲ್ಲ ಈಗ ಹಾಸಿಗೆ ಹಿಡಿದಾಗ ಅವರ ಸೇವೆ ಕೂಡ ಮಾಡ್ತಾ ಇಲ್ಲ ಅಲ್ಲಿ ನಿನ್ನ ಅಣ್ಣ ನಿನಗೋಸ್ಕರ ಜೈಲಿಗೆ ಹೋಗಿದ್ದಾನೆ ನೀನು ಎಲ್ಲಿಯಾದರೂ ನನ್ನ ಹೊಟ್ಟೆಯಲ್ಲಿ ಹುಟ್ಟಲಿಲ್ಲದಿದ್ದಾರೆ ನಾವು ಚೆನ್ನಾಗಿ ಸುಖವಾಗಿ ಇರುತ್ತಿದ್ದೆ ನಿನ್ನೊಬ್ಬನಿಂದ ಇಷ್ಟೆಲ್ಲ ಆಗಿರುವುದು ನೂರಾರು ವರ್ಷಗಳಿಂದ ಯಾವ ಮರ್ಯಾದೆಯನ್ನು ಕೃಷ್ಣ ಕುಟೀರ ಮನೆಯವರು ಕಾಪಾಡಿಕೊಂಡು ಬಂದಿರುವರು ನಿನ್ನೊಬ್ಬನಿಂದ ನಾಶವಾಗಿ ಹೋಯಿತು ಇಂಥ ಮಹಾನ್ ವಂಶದಲ್ಲಿ ನಿನ್ನಂತ ಕುಲದ್ರೋಹಿ ನನ್ನ ಹೊಟ್ಟೆಯಲ್ಲಿ ಹುಟ್ಟಬೇಕಿತ್ತಾ ಹಿಂದಿನ ಜನ್ಮದಲ್ಲಿ ನಾನು ಯಾವ ಪಾಪ ಮಾಡಿದ್ನೋ ನನಗೆ ನಿನ್ನಂತ ಮಗ ಹುಟ್ಟಿದ ನಿನ್ನಪ್ಪನನ್ನು ಹೇಗಾದರೂ ಸಾಯುವ ಸ್ಥಿತಿಗೆ ತಂದೆ ಇನ್ನು ನನ್ನನ್ನು ಏನಾದರೂ ಮಾಡಿ ಅವರೊಟ್ಟಿಗೆ ಕಳಿಸಿಕೊಡು ನಿನ್ನಣ್ಣ ಹೇಗಾದರೂ ಜೈಲಿಗೆ ಸೇರಿದಾನೆ ನೀನೊಬ್ಬನೇ ಈ ಮನೆಯಲ್ಲಿ ಸುಖವಾಗಿರು ಎಂದು ಹೇಳುತ್ತಾ ಅಳುತ್ತಾ ಅಲ್ಲಿಂದ ಹೋದಳು 

 ಅದನ್ನು ಕೇಳಿದ ಸುರೇಂದ್ರನಿಗೆ ಜೀವನದಲ್ಲಿ ಮೊದಲನೆಯ ಸರಿ ತನ್ನ ಮೇಲೆ ತನಗೆ ಅಸಹ್ಯವಾಯಿತು

 ಆವಾಗ ಸುರೇಂದ್ರ ತನ್ನ ಮನಸ್ಸಿನಲ್ಲಿ ಹೌದು ನನ್ನಮ್ಮ ಹೇಳಿದೆ ಸರಿ ನಾನೊಬ್ಬ ಆಪ್ರಯೋಜಕ ಇನ್ನು ನಾನು ಬದುಕಿ ಏನು ಪ್ರಯೋಜನ ಎಂದು ಹೇಳಿ ಮನೆಯಿಂದ ಓಡಿಹೋದನು ಅಲ್ಲೇ ಹತ್ತಿರ ಇದ್ದ ಒಂದು ಹೊಳೆಯಲ್ಲಿ ಹಾರಿ ತನ್ನ ಪ್ರಾಣ ಬಿಡಬೇಕೆಂದು ಅಂದುಕೊಂಡ ಅಲ್ಲೇ ಹೊಳೆಯಲ್ಲಿ ಕೂತ್ಕೊಂಡು ಅಳುತ್ತಾ ತಾನು ಸಾಯಲೇ ಬೇಕಂತ ದೃಢ ನಿರ್ಧಾರ ಮಾಡಿ ಹೊಳೆಗೆ ಹಾರಿದನು.


இந்த உள்ளடக்கத்தை மதிப்பிடவும்
உள்நுழை

Similar kannada story from Abstract