Harsha Shetty

Abstract Drama Others

4.0  

Harsha Shetty

Abstract Drama Others

ಕೃಷ್ಣ ಕುಟೀರ ಭಾಗ 28

ಕೃಷ್ಣ ಕುಟೀರ ಭಾಗ 28

4 mins
162



 ಇಲ್ಲಿ ಜಯಂದ್ರ ಮತ್ತು ವಿಜಯೇಂದ್ರ ಕಾಟ ವೈಕುಂಠ ಪುರದಲ್ಲಿ ತುಂಬಾನೇ ಜಾಸ್ತಿ ಆಗ್ತಾ ಇತ್ತು 

 ಜೀತದ ಸಿಂಹ ಪಾಲು ಜಯಂದ್ರ ಕಿಸಿಗೆ ಹೋಗ್ತಾ ಇತ್ತು ಹಳ್ಳಿ ಜನರಿಗೆ ಒಂದೊತ್ತು ಊಟಕ್ಕೂ ಕಷ್ಟವಾಗುತ್ತಿತ್ತು ಜಯಂದ್ರ ಗದ್ದೆಯಲ್ಲಿ ಜೀತ ಮಾಡುವ ಜನರು ಸ್ವಲ್ಪ ತಡವಾಗಿ ಬಂದರು ಜಯಂದ್ರನ ಗುಂಡಗಳು ಅವರನ್ನು ಚೆನ್ನಾಗಿ ಹೊಡೆಯುತ್ತಿದ್ದರು ಮುಂದೆ ಹೋದಂತೆ ಜಯಂದ್ರ ಮತ್ತು ವಿಜಯೇಂದ್ರನಿಗೆ ಹಳ್ಳಿಯಲ್ಲಿ ಯಾವುದಾದರೂ ಹುಡುಗಿ ಇಷ್ಟವಾದರೂ ಅವಳನ್ನು ಕೆಡಿಸುತ್ತಿದ್ದರು. ಇನ್ಸ್ಪೆಕ್ಟರ್ ಮುರುಗನಿಗೆ ಜಯಂದ್ರನ ಅತ್ಯಾಚಾರ ಬಗ್ಗೆ ತಿಳಿದರು ಅವರು ಏನು ಮಾಡುವ ಆಗಿರಲಿಲ್ಲ. ಇಲ್ಲಿ ಶೇಷನಿಗೆ ಸೌಜನ್ಯದ ಕೊಲೆಯ ಅಪರಾಧದಲ್ಲಿ 14 ವರ್ಷ ಶಿಕ್ಷೆವಾಯಿತು.


 ಒಮ್ಮೆ ಡಿಸ್ಲೆರಿ ಫ್ಯಾಕ್ಟರಿ ಮುಗಿದ ಮೇಲೆ ಅದನ್ನು ಉದ್ಘಾಟನೆ ಮಾಡಲು ವಿಜೇಂದ್ರ ನಾ ಗೆಳೆಯರು ಹಾಗೂ ಈಗಲ್ ಫ್ಯಾಕ್ಟರಿಯ ಸಿ.ಇ.ಒ ಜಾನ್ ಮುಲ್ಲರ್ ಬಂದಿದ್ದರು ಅವರ ವೈಕುಂಠ ಪುರವನ್ನು ನೋಡಿ ತುಂಬ ಸಂತೋಷಪಟ್ಟರು.


 ಜಾನ್ ಮುಲ್ಲರ್ : : ವಿಜಯೇಂದ್ರ ಮತ್ತು ಮಿಸ್ಟರ್ ಜಯಂದ್ರ ಕಂಗ್ರಾಜುಲೇಷನ್ಸ್ ಈಗ ನೀವು ಈಗಲ್ ಡಿಸ್ಟಿಲರಿ ಪಾರ್ಟ್ನರ್ಸ್ ನಿಮ್ಮ ಊರು ಕೂಡ ತುಂಬಾ ಚೆನ್ನಾಗಿದೆ ಹಾಗೂ ಸಿಟಿಗೆ ತುಂಬಾ ಹತ್ತಿರ ಒಳ್ಳೆ ಕಮರ್ಷಿಯಲ್ ಪ್ರಾಪರ್ಟಿ ಈ ಊರಲ್ಲಿ ಎಷ್ಟ ಎಕರೆ ಜಾಗ ನಿಮ್ಮದು 


ವಿಜೇಂದ್ರ : ಈ ಊರಿನ ಎಲ್ಲ ಜಮೀನು ನಮ್ಮದೇ.


ಜಾನ್ ಮುಲ್ಲರ್ :O is it... that's awesome ಹಾಗಾದರೆ ಇಲ್ಲಿ ಒಂದು ಟೆಕ್ ಪಾರ್ಕ್ ಮಾಡಬಹುದು ಸಿಟಿಗೂ ತುಂಬಾ ಹತ್ತಿರದುದರಿಂದ ನಮಗೆ ನುರಿತ ಕಾರ್ಮಿಕರು ಸಿಗಲಿಕೆ ಕಷ್ಟ ಏನಾಗಲ್ಲ ಬಂಡವಾಳ ಬೇಕಾದರೆ ನಾನು ಮಾಡ್ತೀನಿ ಹಾಗೂ ದೊಡ್ಡ ದೊಡ್ಡ ಕಂಪನಿಗಳಿಂದ ಗ್ರಾಹಕರನ್ನು ನಾನ್ ತರ್ತೀನಿ ಆದರೆ ಇಲ್ಲಿ ಹತ್ತಿರವಿರುವ ಎಲ್ಲಾ ಹಳ್ಳಿ ಜನರನ್ನು ನೀವು ಪುನರ್ವಸ್ತೆ ಮಾಡಬೇಕು 

 ಏನಾದರೂ ಈ ಕೆಲಸ ಆಯ್ತು ಅಂದುಕೊಳ್ಳಿ ನಮಗೆ ಕಮ್ಮಿ ಎಂದರೆ ಈ ಐಟಿ ಪಾರ್ಕ್ ಇಂದ ವರ್ಷಕ್ಕೆ 2000 ಕೋಟಿಯಾದರೂ ಲಾಭವಾಗುತ್ತದೆ


ಅದನ್ನು ಕೇಳಿದ ಜಯಂದ್ರ ಮತ್ತು ವಿಜಯೇಂದ್ರ ಆಶ್ಚರ್ಯ ಚಕಿತರಾದರು ಹಾಗು ಅವರ ದುರಾಸೆಯು ಇನ್ನು ಹೆಚ್ಚಾಯಿತು 

 ಪಾರ್ಟಿ ಮುಗಿದ ಮೇಲೆ ಜಯಂದ್ರ ವಿಜಯೇಂದ್ರನನ್ನುಕುರಿತು ಏನು ತಮ್ಮ ವರ್ಷಕ್ಕೆ 2000 ಕೋಟಿಯ ಹಾಗಾದ್ರೆ ನಮ್ಮಿಬ್ಬರಿಗೆ ಒಂದು 1000 ಕೋಟಿ ಆದರೂ ಸಿಗಬಹುದಲ್ಲ 

 ವಿಜೇಂದ್ರ : ಹೌದು ಆದರೆ ಅದು ಆಗಬೇಕಾದರೆ ಮೊದಲು ಈ ಭಿಕ್ಷುಕರನ್ನ ಹಾಗುವ ಕೃಷ್ಣ ಕುಟೀರ ಮನೆಯವರನ್ನ ಈ ಊರಿನಿಂದ ಓಡಿಸಬೇಕು ಅದು ಈಗ ಚಾಲೆಂಜಿಂಗ್ 

 ಜಯಂದ್ರ : ಅದು ಏನು ದೊಡ್ಡ ವಿಷಯವಲ್ಲ ನನಗೆ ಬಿಟ್ಟು ಬಿಡು ಈ ನಾಯಿಗಳನ್ನು ನಾನು ಓಡಿಸುತ್ತೇನೆ 

 ವಿಜೇಂದ್ರ : ಅದು ಅಷ್ಟು ಸುಲಭವಲ್ಲ ಇದು ಅವರು ಹುಟ್ಟಿ ಬೆಳೆದ ಊರು ಇದನ್ನು ಅಷ್ಟು ಸುಲಭವಾಗಿ ಅವರು ಬಿಡುವುದಿಲ್ಲ ಅವರು ತಿರುಗಿ ಬೀಳಬಹುದು ನಿನ್ನತ್ರ ಇರೋ ಗುಂಡಗಳು ಅವರನ್ನು ಸಮಾಯಿಸಲು ಆಗಲ್ಲ ಇರು ನಾಳೆ ನಾನು ನನ್ನ ಗುಂಡಗಳನ್ನು ಕರೆ ತರುತ್ತಿನಿ ಆ ಕೃಷ್ಣ ಕುಟೀರ ಮನೆಯವರು, ಖಾನ್ ಮತ್ತು ಈ ಹಳ್ಳಿ ಜನರನ್ನು ಒದ್ದು ಓಡಿಸೋಣ ಹಾಗೂ ನಾನು ಮೇಲಧಿಕಾರಿಗಳ ಇನ್ಫ್ಲುಯೆನ್ಸ್ ಮಾಡಿ ಇನ್ಸ್ಪೆಕ್ಟರ್ ಮುರುಗನನ್ನು ಇಲ್ಲಿ ಹಸ್ತ ಕ್ಷೇಪ ಮಾಡದ ಹಾಗೆ ನೋಡಿಕೊಳ್ಳುತ್ತೀನಿ. 


ಮರುದಿನ ವಿಜಯೇಂದ್ರನು ತನ್ನೊಂದಿಗೆ ಹತ್ತು ಜನ ಗುಂಡಗಳನ್ನು ಹಾಗೂ ಒಬ್ಬ ಗನ್ ಮ್ಯಾನ್ ಕರ್ಕೊಂಡು ಬಂದಿದ್ದ 

 ಅಂದೇ ಜಯಂದ್ರನ್ನು ಪಂಚಾಯತ್ ನ ಸೇರಿಸಿ

 ಜಯಂದ್ರ : ಹಳ್ಳಿ ಜನರನ್ನು ಕುರಿತು. ನೋಡ್ರಪ್ಪ ಈ ಊರಿನಲ್ಲಿ ನಾವು ಒಂದು ಐಟಿ ಪಾರ್ಕ್ ಮಾಡಬೇಕಂತಿದೀವಿ ನಿಮಗೆ ಗೊತ್ತಿರುವ ಹಾಗೆ ಈ 500 ಎಕರೆ ಜಮೀನು ಈಗ ನಮ್ಮದಾಗಿದೆ ಆದುದರಿಂದ ಇನ್ನು ಮುಂದೆ ನಮಗೆ ನಿಮ್ಮ ಅವಶ್ಯಕತೆ ಇಲ್ಲ ಹಾಗೂ ನಿಮ್ಮ ಗುಡಿಸಲು ಹಾಗೂ ಮನೆಗಳನ್ನು ನಮಗೆ ಬಿಟ್ಟು ಕೊಟ್ಟರೆ ನಿಮಗೆ ಸ್ವಲ್ಪವಾದರೂ ಪರಿಹಾರ ಕೊಡುತ್ತೇವೆ ಇಲ್ಲದಿದ್ದರೆ ಅದನ್ನು ಹೇಗೆ ತಗೊಳ್ಳಬೇಕು ಅಂತ ನಮಗೂ ಗೊತ್ತು.

 ಖಾನ್ : ಏನ್ ಜಯಂದ್ರ ನಿನ್ನ ನಾಯಿ ಬುದ್ಧಿಯನ್ನು ತೋರಿಸಿಬಿಟ್ಟೆಯಲ್ಲ ನಿನ್ನನ್ನ ನಂಬಿ ಆ ಜಗನ್ನಾಥನಿಗೆ ಮೋಸ ಮಾಡಿದ್ದಕ್ಕೆ ನನಗೆ ಅಲ್ಲ ಸರಿಯಾದ ಶಿಕ್ಷೆ ಕೊಟ್ಟ ಏನಾದರೂ ಸರಿ ನಾನು ಮಾತ್ರ ನನ್ನ ಪಾರಿನ ಶುಗರ್ ಫ್ಯಾಕ್ಟರಿ ಜಮೀನನ್ನ ನಿಮಗೆ ಕೊಡಲ್ಲ

 ವಿಜೇಂದ್ರ : ನನಗೆ ಗೊತ್ತಿತ್ತು ಖಾನ್ ನೀನು ಸುಲಭವಾಗಿ ಬಗ್ಗಲ್ಲ ಅಂತ ಅದಕ್ಕೆ ನಿನ್ನ ಬೇಗಂ ಮಗಳು ಹಾಗೂ ನಿನ್ ತಮ್ಮ ನೀನು ಇಲ್ಲಿ ಬಂದಾಗ ಅವರನ್ನು ನಿಮ್ಮ ಮನೆಯಲ್ಲಿ ನನ್ನ ಮಂದಿ ನೋಡಿಕೊಳ್ಳುತ್ತಿದ್ದಾರೆ ಬೇಕಾದರೆ ನಾನೇ ವಿಡಿಯೋ ಕಾಲ್ ಮಾಡಿ ಕೊಡುತ್ತೇನೆ 


ವಿಜೇಂದ್ರ ತನ್ನ ಫೋನಿನಿಂದ ಅವನ ಮಂದಿಯಾದ ಟೈಸನ್ ಕಾಲ್ ಮಾಡ್ದ 

ಟೈಸನ್:: ಎಸ್ ಬಾಸ್ 

 ವಿಜೇಂದ್ರ : ಖಾನ್ ಫ್ಯಾಮಿಲಿ ಯಾವ ಪರಿಸ್ಥಿತಿಯಲ್ಲಿದ್ದರೆ ಟೈಸನ್ 

 ಟೈಸನ್ : ನೀವೇ ನೋಡಿ ಬಾಸ್ ಎಂದು ಹೇಳಿ ವಿಡಿಯೋ ಕಾಲಲ್ಲಿ ಖಾನ್ ಹೆಂಡತಿ ಹಾಗೂ ಮಗುವನ್ನು ತೋರಿಸಿದ ಇಬ್ಬರು ದಾಂಡಿಗರು ಖಾನ್ ಹೆಂಡತಿ ಮತ್ತು ಮಗಳೊಂದಿಗೆ ಅಸಭ್ಯ.ವಾಗಿ ವರ್ತಿಸುತ್ತಿದ್ದರು.

 ಇದನ್ನು ನೋಡಿದ ಖಾನ್ ಹೋಗಿ ವಿಜೇಂದ್ರ ನಾ ಕಾಲರನ್ನು ಹಿಡಿದು 

ಖಾನ್ : ಹರಾಮ್ ಸಾದಿ ಮೇ ತೆರಿ ಜಾನ್ ಲೆಲುಂಗಾ

 ವಿಜೇಂದ್ರ : ದುಡುಕಬೇಡ ಖಾನ ಇಲ್ಲಿ ನೀನು ದುಡಿಕಿದರೆ ಅಲ್ಲಿ ನಿನ್ ಫ್ಯಾಮಿಲಿ ಕಥಮ್ ನಿನ್ನ ಜಮೀನನ್ನ ನಮ್ಮ ಹೆಸರಿಗೆ ಮಾಡು ಅಥವಾ ನಿನ್ನ ಫ್ಯಾಮಿಲಿಯನ್ನು ಕಳ್ಕೋ ಆಯ್ಕೆ ನಿನ್ನದು

 ಖಾನ್ ಮಗಳು ಫೋನಿನಲ್ಲಿ : ಅಬಜಾನ್ ಹಮೆ ಬಚಾವ ಎಂದು ಕಿರುಚಿದಳು.

 ಜಯಂದ್ರ : ಯಾಕೆ ಖಾನ್ ಸುಮ್ನೆ ನಿನ್ನ ಮತ್ತು ನಿನ್ನ ಫ್ಯಾಮಿಲಿ ನಾ ಕಷ್ಟಕ್ಕೆ ಸಿಲುಕಿಸುತ್ತೀಯಾ ಸಹಿ ಮಾಡು ನೀನು ನನ್ನ ಗೆಳೆಯ ನಿನಗೆ ಇದರ ಪರಿಹಾರವಾಗಿ ಅಲ್ಪ ಸ್ವಲ್ಪ ಕೊಡುತ್ತೀವಿ ಅದನ್ನು ತಕ್ಕೊಂಡು ಹೋಗಿ ಬೇರೆ ಯಾವುದಾದರೂ ಊರಲ್ಲಿ ಸೆಟಲ್ಗು ಅಲ್ವಾ ವಿಜೇಂದ್ರ

 ವಿಜೇಂದ್ರ :ofcourse ofcourse but there is a condition ನಿನಗೆ ಎರಡು ನಿಮಿಷ ಟೈಮ್ ಕೊಡ್ತೀನಿ ಈ ಎರಡು ನಿಮಿಷದಲ್ಲಿ ಸಹಿ ಮಾಡಿ ನಾವು ಕೊಡುವ ಪರಿಹಾರ ಧನವನ್ನು ತಗೋ ಅಥವಾ ಸಹಿ ಮಾಡದೆ ನಿನ್ನ ಫ್ಯಾಮಿಲಿಯನ್ನು ಕಳ್ಕೋ your time starts now

 ಖಾನ್ ಬೇರೆ ಯಾವ ದಾರಿ ಇಲ್ಲದೆ ಸಹಿ ಮಾಡಿದೆ 

 ಖಾನ್ : ನೀನು ಹೇಳಿದಾಗೆ ನಾನು ಸಹಿ ಮಾಡಿದೀನಿ ಈಗಲಾದರೂ ನನ್ ಫ್ಯಾಮಿಲಿಯನ್ನು ಬಿಟ್ಟುಬಿಡು ಮತ್ತೆ ನನ್ನ ಪಾರಿಹಾರ ದನವನ್ನು ಕೊಟ್ಟುಬಿಡು. 

 ವಿಜೇಂದ್ರ : ತನ್ನ ಕಿಸೆಯಿಂದ 500 ರೂಪಾಯಿ ತೆಗೆದುಕೊಂಡು ಇದು ನಿನ್ನ ಪರಿಹಾರ ಧನ ಇದನ್ನು ತಗೊಂಡು ಈ ಊರು ಬಿಟ್ಟು ಬಿಡು 

 ಖಾನ್ : ಮೋಸ ಮೋಸ ಎಂದು ಹೇಳುತ್ತಾ ವಿಜೇಂದ್ರನ ಹತ್ತಿರ ಧಾವಿಸಿದ ಆವಾಗ ವಿಜೇಂದ್ರ ನಾ ದಾಂಡಿಗರು ಖಾನ್ ಚೆನ್ನಾಗಿ ಹೊಡೆದರು ವಿಜೇಂದ್ರ ತನ್ನ ಪಿಸ್ತೂಲು ತೆಗೆದು

 ಖಾನ್ ತಲೆಗೆ ಇಟ್ಟು ಇನ್ನು ಗಂಚಲಿ ತೋರಿಸಿದರೆ ಉಡಾಯಿಸ್ಬಿಡ್ತೀನಿ ಸುಮ್ನೆ ಫ್ಯಾಮಿಲಿಯನ್ನು ತೆಗೆದುಕೊಂಡು ಈ ಊರಿಂದ ಹೊರಟು ಬಿಡು 

 ಜಯಂದ್ರ : ಖಾನ್ ತನ್ನ ಮನೆ ಹಾಗು ಆಸ್ತಿಯನ್ನು ನಮ್ಮ ಹೆಸರಿಗೆ ಮಾಡಿದಾನೆ ಈಗ ನೀವು ಕೂಡ ಮಾಡಿದರೆ ಸರಿ ಇಲ್ಲದಿದ್ದರೆ ನಿಮ್ಮತ್ರ ಹೇಗೆ ಸಹಿತಗೊಳ್ಬೇಕಂತ ನನಗೂ ಗೊತ್ತು 

 ಹಿರಿಯನೊಬ್ಬ : ಈ ಊರು ವೈಕುಂಠಪುರ ಇಲ್ಲಿ ಆ ವಾಸುದೇವನ ಕೃಪೆ ಇದೆ ತಲಾಂತರದಿಂದ ಈ ಊರನ್ನು ಕಾಪಾಡಿಕೊಂಡು ಬಂದಿದ್ದಾನೆ ಇವತ್ತು ಕೂಡ ಕಾಪಾಡ್ತಾನೆ ಈ ಊರನ್ನು ಕೃಷ್ಣ ಕುಟೀರ ಮನೆದವರೇ ಆಳುತ್ತಾ ಬಂದಿದ್ದಾರೆ ಆ ಬ್ರಿಟಿಷರು ಕೂಡ ಅವರನ್ನು ಅಲ್ಲಾಡಿಸಲು ಆಗಲಿಲ್ಲ ವಾಸುದೇವನಿದ್ದಾರೆ ಎಂದರೆ ನಿಮ್ಮನೆಲ್ಲ ಮಟ್ಟ ಹಾಕಿ ಪುನ ಕೃಷ್ಣ ಟೀರ ಮನೆದವರೇ ಈ ಊರನ್ನು ಕಾಪಾಡಿಕೊಂಡು ಬರುತ್ತಾರೆ ನಿಮ್ಮಂತ ಬೇವರ್ಸಿಗಳು ಈ ಊರಿನ ಏನು ಮಾಡಲು ಸಾಧ್ಯವೇ ಇಲ್ಲ 

 ಜಯೇಂದ್ರ : ಇವತ್ತು ನಾಳೆ ಸಾಯುವಾಗಿದ್ಯಾ ನಮ್ಮನೆ ಬೇವರ್ಸಿಗಳಂತಿಯ ಎಂದು ಹೇಳಿ ಹೋಗಿ ಮುದುಕನ ಕೆನ್ನೆಗೆ ಬಾರಿಸಿದರು ಮುದುಕ ಕೆಳಗೆ ಬಿದ್ದನು 

 ಜಯಂದ್ರ: ತನ್ನ ಗುಂಡ ಗಳನ್ನು ಕುರಿತು ಹೊಡಿರೋ ಇವನ ಹೊಡೆದು ಸಾಯಿಸ್ಬಿಡಿ ಇನ್ನು ಸ್ವಲ್ಪ ಕಾಲ ನಂತರ ಹೋಗೋ ಈ ಮುದುಕ ಇವತ್ತೆ ಹೋಗಿ ಬಿಡ್ಲಿ 

 ಮುದುಕ : ಏ ಜಯಂದ್ರ ನನ್ನ ಇವತ್ತು ನಾಳೆನೂ ಸಾಯುವ ಅಂತ ಹೇಳ್ತಿಯ ನೋಡೋಣ ಕಣೋ ಆ ದೇವರಿದ್ದಾನೆ ಅಂದರೆ ನೀನು ಮಾಡಿರೋ ಪಾಪ ಕರ್ಮಕ್ಕೆ ನೀನು ನನಗಿಂತ ಮೊದಲು ನೆಗೆದು ಬಿದ್ದೋಗ್ತಿಯ ನಿನ್ನ ಗೋರಿ ಮೇಲೆ ನಾನೇ ಮೂತ್ರ ಮಾಡ್ತೀನಿ ಆನಂತರಾನೇ ನಾನು ಸಾಯುವುದು 


 ಜಯಂದ್ರ : ಆ ನನ್ ಮಗನ ಚೆಚ್ಚಿ ಸಾಯಿಸಿ ಬಿಡ್ರಿ 

 ಜಯಂದ್ರ ಗುಂಡಗಳು ಹೊಡೆದ ಏಟಿಗೆ ಮುದುಕ ಮತಿ ತಪ್ಪಿ ಬಿದ್ದನು. 

 ವಿಜಯೇಂದ್ರ ಜಯಂದ್ರನನ್ನು ಕುರಿತು ಈ ಊರಿನವರಿಗೆ ಇನ್ನು ಇವರನ್ನು ಕೃಷ್ಣಕುಟೀರ ಮನೆಯವರು ಕಾಪಾಡ್ತಾರೆ ಎಂಬ ಭರವಸೆ ಇದೆ ಆ ಕೃಷ್ಣ ಕುಟೀರ ಮನೆಯವರನ್ನೆಲ್ರನ್ನು ಇವರ ಮುಂದೇನೆ ನರಳಿ ನರಳಿ ಸಾಯುವಂತೆ ಮಾಡಿದರೆ ಇವರ ಭರವಸೆ ನುಚ್ಚುನೂರಾಗಿ ಹೋಗುತ್ತದೆ ಆಮೇಲೆ ಇವರ ಸಹಿ ತಗೊಳ್ಳಲು ತುಂಬಾ ಸುಲಭ 

 ಜಯಂದ್ರ : :ಏನ್ರೋ ನಿಮ್ಮ ಇನ್ನೂ ಕೂಡ ಕೃಷ್ಣ ಕುಟ ಕುಟೀರ ಮನೆಯವರ ಮೇಲೆ ಭರವಸೆ ಹೋಗಿಲ್ವಾ ಇನ್ನು ಅವರು ನಿಮ್ಮನ್ನು ಬಂದು ಕಾಪಾಡ್ತಾರೆ ಎಂಬ ಭರವಸೆ ನಿಮಗಿದೆಯಲ್ಲ 

 ಊರಿನ ಇನ್ನೊಬ್ಬ ಮಂದಿ : ಯಾಕೆಂದರೆ ಅವರಿಗೆ ವಾಸುದೇವನ ಕೃಪೆ ಇದೆ ಆ ಮನೆ ಮಂದಿ ಈಗ ಸ್ವಲ್ಪ ತಗ್ಗಿರಬಹುದು ಆದರೆ ಪುನ ಎದ್ದೇಳ್ತಾರೆ ಈ ಊರನ್ನ ರಕ್ಷಣೆ ಮಾಡೇ ಮಾಡ್ತಾರೆ 

 ವಿಜಯೇಂದ್ರ : ಹೌದಾ ಹಾಗಾದರೆ ನೋಡೋಣ ನಡಿರೋ ಕೃಷ್ಣ ಕುಟೀರ ಮನೆ ಕಡೆಗೆ ನೋಡೋಣ ಆ ನಿಮ್ಮ ಭಗವಾನ್ ವಾಸುದೇವ. ಹಾಗೂ ಹಾಸಿಗೆಯನ್ನು ಹಿಡಿದುಕೊಂಡ. ಆ ಜಗನ್ನಾಥ. ನಿಮ್ಮನ್ನು ಹೇಗೆ ಕಾಪಾಡ್ತಾನೆ ಅಂತ .


Rate this content
Log in

Similar kannada story from Abstract