STORYMIRROR

Harsha Shetty

Drama Action Classics

4  

Harsha Shetty

Drama Action Classics

ಕೃಷ್ಣ ಕುಟೀರ ಭಾಗ-24

ಕೃಷ್ಣ ಕುಟೀರ ಭಾಗ-24

2 mins
321

ಇಲ್ಲಿ ಖಾನ್ ಜಗನ್ನಾಥನಿಗೆ ಲಕ್ವ ಹೊಡೆದ ವಿಷಯ ತಿಳಿಯಿತು ಹಾಗೂ ಜಗನ್ನಾಥನ ಕಂಡಿಷನ್ ತುಂಬಾ ಸೀರಿಯಸ್ ಅಂತ ಅವನಿಗೆ ಗೊತ್ತಾಯ್ತು 

 ಖಾನ್ ಹೆಂಡ್ತಿ ಅದನ್ನು ಕೇಳಿ ಬನ್ರೀ ಜಗನ್ನಾಥನನ್ನು ನೋಡ್ಕೊಂಡು ಬರುವ 

 ಖಾನ್ : ಅದರ ಅವಶ್ಯಕತೆ ಏನಿಲ್ಲ ಇನ್ನು ನನಗೂ ಆ ಜಗನ್ನಾಥನಿಗೂ ಯಾವ ಸಂಬಂಧವಿಲ್ಲ ನಾವು ಹೋಗುವ ಅವಶ್ಯಕತೆ ಇಲ್ಲ 

 ಖಾನ್ ಹೆಂಡ್ತಿ : ರೀ ಮನುಷ್ಯರೇನ್ರಿ ನೀವು ಹತ್ತು ವರ್ಷದ ದೋಸ್ತಿಯನ್ನು ಹೀಗೆ ಮರೆತುಬಿಟ್ಟೀರಲ್ಲ ಆಯ್ತು ನಿಮ್ಮ ಜಗನ್ನಾಥನವರಿಗಲ್ಲದಾದರೂ ವಿಭಾ ಅಕ್ಕನಿಗಾದ್ರೂ ಬನ್ನಿರಿ. ಅವರನ್ನು ನೀವು ತನ್ನ ತಂಗಿ ತರ ನೋಡ್ತಿರಲ್ಲ ನೀವು ಹೋದ್ರೆ ಹೋಗಿ ಬಿಟ್ಟರೆ ಬಿಡಿ ನಾನಂತೂ ಹೋಗ್ತೀನಿ ಎಂದು ಹೇಳಿ ಖಾನ್ ಹೆಂಡ್ತಿ ಕೃಷ್ಣ ಕುಟೀರ ಮನೆಯ ಹತ್ತಿರ ಹೊರಟು ಹೋದಳು 

 ಖಾನ್ ಮನಸ್ಸಿಲ್ಲದೆ ಅವಳನ್ನೇ ಹಿಂಬಾಲಿಸಿದನು 

 ಆವಾಗ ವಿಭಾ ಮತ್ತೆ ತಿಮ್ಮ ಜಗನ್ನಾಥನನ್ನು ಚೇರ್ ಮೇಲೆ ಕೂರ್ಸಿ ಎಣ್ಣೆ ಹಚ್ಚುತ್ತಿದ್ದರು 

 ಜಗನ್ನಾಥನ ಏನು ಶಕ್ತಿವಿಲ್ಲದೆ ತನ್ನ ತಲೆಯನ್ನು ಕೆಳಗಡೆ ಮಾಡಿ ಕೂತಿದ್ದನು 

 ಖಾನ್ ಹೆಂಡ್ತಿ ಜಗನ್ನಾಥನ ಅವಸ್ಥೆಯನ್ನು ನೋಡಿ ಹೋಗಿ ವಿಭನನ್ನು ತಬ್ಬಿಕೊಂಡು ಅಳಲು ಪ್ರಾರಂಭಿಸಿದಳು 

 ಖಾನ್ ಇದನ್ನೆಲ್ಲ ಹೊರಗಡೆ ನೋಡುತ್ತಾ ಕೂತಿದ್ದನು 

 ಒಳಗಡೆ ಬಂದು ಜಗನ್ನಾಥನನ್ನು ನೋಡಿ ಅವನತ್ತ ಕೈ ತೋರ್ಸ್ತಾ ಗಟ್ಟಿಯಾಗಿ ನಗಲು ಪ್ರಾರಂಭಿಸಿದನು ಎಲ್ಲಿ ಹೋಯಿತು ಜಗನ್ನಾಥ್ ನಿನ್ನ ರೋಷ ಈಗ ಒಳ್ಳೆ ಕರೆಂಟ್ ಹೊಡೆದ ಕಾಗ ಹಾಗೆ ಬಿದ್ದಿದಿಯಲ್ಲ ನೀನ್ ಮಾಡಿದ ತಪ್ಪಿಗಾಗಿ ಆ ಅಲ್ಲ ನಿನಗೆ ಸರಿಯಾದ ಶಿಕ್ಷೆನೆ ಕೊಟ್ಟಿದ್ದಾನೆ

 ಖಾನ್ ಹೆಂಡ್ತಿ : ರೀ ಏನ್ ಮಾಡ್ತಿದ್ದೀರಾ ನೀವು 

 ವಿಭ : ಖಾನ್ ಭಯ್ಯ ಒಬ್ಬ ಅಣ್ಣನಾಗಿ ಮಾಡುವ ಕೆಲಸವೇವಿದು 

 ಖಾನ್ : ಇಬ್ಬರು ಸುಮ್ಮನಿರಿ ಇದು ನನ್ನದು ಮತ್ತೆ ಅವನ ಮಧ್ಯೆ ಇರುವ ವಿಷಯ 

 ಖಾನ್ : ಏನು ಜಗನ್ನಾಥ್ ಆ ದಿನ ಅಷ್ಟು ರೋಷದಿಂದ ನನಗೆ ಮತ್ತು ನನ್ನ ತಮ್ಮನಿಗೆ ಹೊಡೆದೆ ಈಗ ಎಲ್ಲಿ ಹೋಯ್ತು ನಿನ್ನ ರೋಷ ದ್ವೇಷ ನಿನ್ನ ಕಣ್ಣಿಗೆ ನಾನು ಬಿದ್ದರೆ ನನ್ನನೆ ಮುಗಿಸಿ ಬಿಡ್ತೀನಂತ ಹೇಳ್ದೆ ಇಗೋ ಈಗ ಬಂದಿದ್ದೇನೆ ಮುಗ್ಸಿ ನನ್ನನ್ನು, ಏನು ತಲೆ ಬಗ್ಗಿಸಿಕೊಂಡು ಕೂತಿದ್ದೀಯಾ ನೋಡುವ ತಲೆ ಎತ್ತು ಎಂದು ತನ್ನ ಕೈಯಲ್ಲಿ ಜಗನ್ನಾಥನ ಗಲ್ಲವನ್ನು ಹಿಡಿದು ಎತ್ತಿದನು ಆದರೆ ಹೇಗೆ ಎತ್ತಿದನು ಹಾಗೆ ಜಗನ್ನಾಥನ ತಲೆ ಏನು ಶಕ್ತಿ ಇಲ್ಲದೆ ಹಾಗೆ ಕೆಳಗಡೆ ಬಿತ್ತು ಹಾಗೂ ಜಗನ್ನಾಥನು ಬಾಯನ್ನು ತೆಗೆದುಕೊಂಡು ಅದರಲ್ಲೂ ಎಂಜಲು ಹೊರಗಡೆ ಬರುತ್ತಿತ್ತು 

 ಅದನ್ನು ನೋಡಿದ ಖಾನ್ ದುಃಖವು ತುಂಬಿ ತುಳುಕಿತ್ತು 

 ಕಣ್ಣಲ್ಲಿ ನೀರು ಬರಲು ಪ್ರಾರಂಭಿಸಿತು 

 ಆತನು ಗಟ್ಟಿಯಾಗಿ ಅಳಲು ಪ್ರಾರಂಭಿಸಿದ ಬಾಬಿ ಸಿಂಹದಂತ ಇದ್ದವನಿಗೆ ಇದು ಏನಾಗಿಹೋಯಿತು ಜಗನ್ನಾಥ್ ಬಯ್ಯ

 ಎದ್ದೇಳು ಬಯ್ಯ ನಿನ್ನ ಖಾನ್ ಬಂದಿದ್ದಾನೆ ಏಳು ಬಯ್ಯ ಏಳು ನೋಡು ನಿನ್ ದೋಸ್ತ್ ಖಾನ್ ಬಂದಿದ್ದಾನೆ ಎಂದು ಹೇಳಿ ಅಳಲಾರಂಭಿಸಿದನು 

 ಖಾನ್ ಹೆಂಡತಿ : ಸಮಾಧಾನ ಮಾಡ್ಕೊಳ್ಳಿ ಈಗ ಶೇಷ ಜೈಲಿಗೆ ಹೋಗಿದ್ದಾನೆ ನಿಮ್ಮ ದೋಸ್ತಿಗೆ ನೀವು ಆಸರೆ ಬಿಟ್ಟರೆ ಬೇರೆ ಯಾರಿದ್ದಾರೆ 

 ಖಾನ್ ವಿಭ ಹತ್ತಿರ ಹೋಗಿ ಬಾಬಿ ನಿನಗೆ ಏನಾದರೂ ಬೇಕಿದ್ದರೆ ಈ ನಿನ್ನ ಅಣ್ಣ ಯಾವತ್ತು ಸಿದ್ಧನಾಗಿರುತ್ತಾನೆ ಮತ್ತೆ ಬಿಟ್ಟುವಿನ ಅಪರಣದಲ್ಲಿ ನನ್ನದು ಯಾವುದೇ ಕೈವಾಡವಿಲ್ಲ ಬಾಬಿ ಎಂದು ಹೇಳಿ ಅಳುತ್ತಾ ಕೃಷ್ಣ ಕುಟೀರ ಮನೆಯನ್ನು ಬಿಟ್ಟನು


இந்த உள்ளடக்கத்தை மதிப்பிடவும்
உள்நுழை

Similar kannada story from Drama