Harsha Shetty

Drama Classics Others

4.5  

Harsha Shetty

Drama Classics Others

ಕೃಷ್ಣ ಕುಟೀರ ಭಾಗ 21 ಜಗನ್ನಾಥನಿಗೆ ಸ್ಟ್ರೋಕ್ ಅಟ್ಯಾಕ್

ಕೃಷ್ಣ ಕುಟೀರ ಭಾಗ 21 ಜಗನ್ನಾಥನಿಗೆ ಸ್ಟ್ರೋಕ್ ಅಟ್ಯಾಕ್

6 mins
424



 ಜಗನ್ನಾಥನ ಶೇಷ ಜೈಲು ಹೋಗುವುದರಿಂದ ತುಂಬಾ ಆಘಾತವಾಯಿತು ತನ್ನ ಮಕ್ಕಳು ಕೊಲೆಯನ್ನು ಮಾಡಲು ಸಾಧ್ಯವೇ ಇಲ್ಲ ಇದು ಜಯಂದ್ರದೆ ತಂತ್ರ ಹೇಗಾದರೂ ಮಾಡಿ ತನ್ನ ಮಗನನ್ನು ಈ ಕಷ್ಟದಿಂದ ಪಾರು ಮಾಡಬೇಕೆಂದುಕೊಂಡನು. ಮುಂದಿನ ದಿನ ಜಗನ್ನಾಥನು ಸುರೇಂದ್ರನ ಕರೆದು ಜಯಂದ್ರ ತೋಟದಲ್ಲಿ ಏನು ನಡೆಯಿತು ಎಂದು ಕೇಳಿದ ಆವಾಗ ಸುರೇಂದ್ರ ನಡೆಯದಿದ್ದನೆಲ್ಲ ತಿಳಿಸಿದನು

 ಆವಾಗ ಜಗನ್ನಾಥನಿಗೆ ಸುರೇಂದ್ರನ ಮೇಲೆ ವಿಪರೀತ ಕೋಪ ಬಂತು ತನ್ನ ಚಪ್ಪಲಿಯನ್ನು ತೆಗೆದು ಸುರೇಂದ್ರನಿಗೆ ಹೊಡೆಯಲಾರಲಿಸಿದ ಆವಾಗ ವಿಭಾ ಬಂದು ಅದನ್ನು ತಡೆದಳು 

ಜಗನ್ನಾಥ : ಒಂದು PUC ಪಾಸ್ ಮಾಡಲಿಕ್ಕೆ ನಿನಗೆ ಆಗಲ್ಲ ಓದುವುದು ಬಿಟ್ಟು ಈ ವಯಸ್ಸಿನಲ್ಲಿ ಯಾವುದೋ ಹುಡುಗಿ ಹಿಂದೆ ಹೋಗಿದೆಯಲ್ಲ ನಿನ್ನಿಂದ ಪಾಪ ನಿನ್ನ ಅಣ್ಣ ಶೇಷ ಸಿಕ್ಕಾಗೀಕೊಂಡ ನೀನು ಯಾಕೋ ಇನ್ನು ಬದುಕಿದೆ ನೀನು ಹುಟ್ಟಿದಾಗಲೇ ಸತ್ತೋಗಿದರೆ ಎಷ್ಟು ಚೆನ್ನಾಗಿತ್ತು 

 ಅವಾಗ ಸುರೇಂದ್ರ ಕೂಡ ನಾನು ನಿನ್ ಮಗ ನನಗೆ ನೀನು ಚಪ್ಪಲಿಯಲ್ಲಿ ಹೊಡಿತಿಯ ನಾನೇನು ಈಗ ಚಿಕ್ಕವನಲ್ಲ ನನಗೆ 20 ತುಂಬಿದೆ ನನಗೆ ಇಷ್ಟವಾದ ಹುಡುಗಿಯನ್ನು ನಾನು ಆರಿಸಬಹುದು ,ಅಪ್ಪ ಆಗಿ ಯಾವತ್ತಾದರೂ ನನ್ನ ಇಷ್ಟ ಕಷ್ಟಗಳನ್ನು ನೀನು ತಿಳಿದುಕೊಂಡಿದ್ದೀಯಾ ಯಾವತ್ತು ನೋಡಿದರೂ ನನಗೆ ಹೊಡೆಯುವುದು ಮತ್ತು ಬಡಿಯುವುದು ಬಿಟ್ಟು ನೀನು ಬೇರೆ ಏನಾದರೂ ಮಾಡಿದಿಯಾ ನಾನೇಕೆ ಸಾಯ್ಬೇಕು ನಾನು ಇನ್ನೂ ಬದುಕಿ ಬಾಳಬೇಕಾದವನು, ನೀನೆ ಸಾಯಿ ಎಂದು ಕಿರುಚಿದನು 

ಅದನ್ನು ಕೇಳಿದ ವಿಭ ಕೋಪಗೊಂಡು ಸುರೇಂದ್ರನ ಕೆನ್ನೆಗೆ ಬಾರಿಸಿದರಳು ಇದುವರೆಗೆ ನೀನು ಏನು ತಪ್ಪು ಮಾಡಿದರು ನಿನ್ನ ಪಕ್ಷವಹಿಸಿ ಮಾತಾಡುತ್ತಿದ್ದೆ ಆದರೆ ನನ್ನ ಅದೇ ತಪ್ಪಿನಿಂದ ನಿನ್ನಪ್ಪನಿಗೆ ಎದುರು ಮಾತಾಡುವಷ್ಟು ದೊಡ್ಡವನಾಗಿಬಿಟ್ಟಿಯಾ ಹಾಗೂ ಅವರನ್ನು ಸಾಯಿ ಅಂತ ಹೇಳುತ್ತಿದ್ದೀಯ ಇವಾಗಲೇ ಮನೆಯನ್ನು ಬಿಟ್ಟು ಹೋಗು ಎಂದು ಕಿರುಚಿದಳು ಆವಾಗ ಸುರೇಂದ್ರ ಸಾಕಮ್ಮ ಸಾಕು ಮಾಡು ನಾನೇಕೆ ಈ ಮನೆಯಿಂದ ಹೋಗಬೇಕು ಇದು ಪಿತ್ರಾಜಿತ ಆಸ್ತಿ ನನಗೂ ಇದರಲ್ಲಿ ಹಕ್ಕಿದೆ ಅದನ್ನು ಕೇಳಿ ಜಗನ್ನಾಥ ಕಲ್ಲು ಬಂಡೆಯಾಗಿ ನಿಂತನು ತನ್ನ ಮಗ ಹಾಗೇ ಮಾತಾಡೋದನ್ನ ನೋಡಿ ಜಗನ್ನಾಥನಿಗ ವಿಪರೀತ ಆಘಾತವಾಯಿತು 

 ವಿಭಾ ಜಗನ್ನಾಥನನ್ನು ನೋಡಿ ರೀ ನನ್ನನ್ನು ಕ್ಷಮಿಸಿ ಬಿಡ್ರಿ ಚಿಕ್ಕವನಂತ ಸಲಗೆ ಕೊಟ್ಟುಬಿಟ್ಟೆ ಈಗ ನಿಮಗೆ ಎದುರು ಮಾತಾಡುವಷ್ಟು ಬೆಳೆದುಬಿಟ್ಟಿದ್ದಾನೆ ತಪ್ಪು ನನ್ನದ್ರಿ.

 ಜಗನ್ನಾಥ : ಇದರಲ್ಲಿ ನಿನ್ನ ತಪ್ಪು ಏನಿಲ್ಲ ವಿಭಾ ಮಕ್ಕಳ ಲಾಲನೆ ಪಾಲನೆಯಲ್ಲಿ ನನ್ನದೇ ಏನು ತಪ್ಪಿದೆ ನಾನು ನನ್ನಪ್ಪನಿಗೆ ಇದುವರೆಗೆ ಒಂದು ಸರಿ ಕೂಡ ಎದುರು ಮಾತಾಡ್ಲಿಲ್ಲ ಆದರೆ ನನ್ ಮಕ್ಕಳು 20 ತುಂಬಿದಂತೆ ನನ್ನನೆ ಸಾಯಿ ಅಂತ ಹೇಳ್ತಾರೆ ಎಂದು ಹೇಳಿ ಬೇಸರದಿಂದ ಅಲ್ಲಿಂದ ಹೊರಟು ಹೋದನು 

 ಇಲ್ಲಿ ಜಯಂದ್ರ ಮನೆಯಲ್ಲಿ ಜೋರಾಗಿ ಹಬ್ಬದ ಊಟ ನಡೆಯುತ್ತಿತ್ತು.

 ಆವಾಗ ನಾನಾ ವಿಜೇಂದ್ರ ನು ಕುರಿತು ಸಾಹೇಬ್ರೆ ನಿಮ್ಮ ಕಾರನು ಕೆಲಸವಾದರೆ ನನಗೆ ಕೊಡುತ್ತೀನಿ ಅಂತ ಹೇಳಿದ್ದೀರಿ ಈಗ ಕೆಲಸ ಆಯ್ತಲ್ಲ ತಾವು ಅಪ್ಪಣೆ ಕೊಟ್ಟರೆ ಕಾರನ್ನು ತೆಗೆದುಕೊಂಡು ಹೋಗಲೆ

 ವಿಜೇಂದ್ರ : ಲೋ ದಡ್ಡ ಕಾರನ್ನು ಸುಮ್ಮನೆ ಹಾಗೆ ತೆಗೆದುಕೊಂಡು ಹೋಗಲು ಆಗ್ತದೇನೋ ,ಕಾರು ನಿನ್ನ ಹೆಸರಲ್ಲಿ ಟ್ರಾನ್ಸ್ಫರ್ ಆಗೋದು ಬೇಡವ ನಾನು ನನ್ನವರಿಗೆ ಹೇಳಿ ಮುಂದಿನ ವಾರದೊಳಗೆ ನಿನ್ನ ಹೆಸರಿಗೆ ಟ್ರಾನ್ಸ್ಫರ್ ಮಾಡುತ್ತಿನಿ ಆಮೇಲೆ ಕಾರನ್ನು ತೆಗೆದುಕೊಂಡು ಹೋಗಂತೆ ಅದುವರೆಗೆ ಈ ಪಾರ್ಟಿಯ ಹೀರೋ ನೀನೇ ಮಜಾ ಮಾಡು ಎಂದು ಹೇಳಿ ಅವನಿಗೆ ಒಂದು ವಿದೇಶಿ ಎಣ್ಣೆ ಬ್ರಾಂಡ್ನ್ನು ತೆಗೆದು ಇದರ ಹೆಸರು ಬ್ಲಾಕ್ ಡೇನಿಯಲ್ಸ್ ಅಂತ ಇದನ್ನು ಕೇವಲ ಶ್ರೀಮಂತರೆ ಕುಡಿಯುವುದು ನೀನು ಇನ್ನೂ ಇದರ ಅಭ್ಯಾಸ ಮಾಡ್ಕೋ ಯಾಕೆಂದರೆ ನೀನು ಕೂಡ ಈಗ ಕೋಟ್ಯಾಧಿಪತಿ ಎಂದು ಹೇಳಿ ನಾನನ ಗ್ಲಾಸಿಗೆ ಎಣ್ಣೆ ಸುರಿದ. 

 ಅವರ ಪಾರ್ಟಿಯಾಗುತ್ತಿದ್ದಂತೆ ಅಲ್ಲಿಗೆ ಸಕ್ಕು ಬಾಯ್ ಬಂದಳು 

 ಸಕ್ಕು ಬಾಯ್ :ಅಯ್ಯೋ ಜಯಂದ್ರ ನಿನ್ನ ಮನೆಹಾಳು ಆಗಿ ಹೋಗ ! ಚಿನ್ನದ ಮೊಟ್ಟೆ ಇಡುವ ಕೋಳಿಯನ್ನು ನಿಮ್ಮ ಕೆಲಸ ಆಗಲಿ ಅಂತ ಕಳಿಸಿದ್ರೆ ಸಾಯಿಸ್ಬಿಟ್ರಲ್ಲ ಈಗ ನಾನು ಎಲ್ಲಿ ಹೋಗಲಿ 

 ವಿಜೇಂದ್ರ : ಆದದು ಆಗಿಹೋಯಿತು ಸಕ್ಕು ಬಾಯ್ ನಾನು ಅದರ ಪರವಾಗಿ ಕ್ಷಮೆ ಕೇಳ್ತೇನೆ 

 ಸಕ್ಕು ಬಾಯ್ : ನೀವು ಕ್ಷಮೆ ಕೇಳಿದರೆ ಸಾಕಾ ನನಗೆ ಆಗಿರುವ ನಷ್ಟವನ್ನು ಯಾರು ಬರಪಾಯಿ ಮಾಡೋದು

 ವಿಜಯೇಂದ್ರ : ನಾನು ಮಾಡ್ತೀನಿ ನಿನ್ನ ರಂಭ ಸತ್ತಿದ್ದಕ್ಕೆ ನಿನಗೆ 50 ಲಕ್ಷ ಪರಿಹಾರ ಕೊಡುತ್ತೇನೆ ಆದರೆ ನಿನ್ನಿಂದ ನನಗೆ ಒಂದು ಕೆಲಸವಾಗಬೇಕಿತ್ತು 

 ಸಕ್ಕು ಬಾಯ್ : ಅಯ್ಯೋ 50 ಲಕ್ಷ ಹಾಗಾದ್ರೆ ಪರ್ವಾಗಿಲ್ಲ ಆದರೆ ನಾನು ಏನು ಮಾಡಬೇಕು

 ವಿಜೇಂದ್ರ : ನೀನು ಈಗ ಸೌಜನ್ಯನ ಅಮ್ಮ! ನಾಳೆ ಹೋಗಿ ಆ ಜಗನ್ನಾಥನ ಮನೆಲ್ಲಿ ಗಲಾಟೆ ಮಾಡಬೇಕು 

 ಮರುದಿನ ಸಕ್ಕು ಬಾಯ್ ಮತ್ತು ಜಯೇಂದ್ರ ತನ್ನ ಕೆಲವು ಆಳುಗಳನ್ನು ಕರೆದುಕೊಂಡು ಕೃಷ್ಣ ಕುಟೀರ ಮನೆಗೆ ಹೋದರು 

 ಜಯಂದ್ರ ಸಕ್ಕೂಬಾಯಿ ಕಿವಿಯಲ್ಲಿ ಸಕ್ಕು ಬಾಯ್ ಶುರು ಮಾಡು ನಿನ್ನ ನಾಟಕ 

 ಸಕ್ಕು ಬಾಯ್ ಕೃಷ್ಣ ಕೊಟ್ಟಿರದ ಮನೆಯ ಬಾಗಿಲಿಗೆ ಬಂದು ಗಟ್ಟಿಯಾಗಿ ಅಳಲಾರಂಭಿಸಿದರು ಅವಳ ಆಳುವುದನ್ನು ನೋಡಿ ಊರಿನ ಜನರೆಲ್ಲ ಅಲ್ಲಿ ಸೇರಿಕೊಂಡರು ಅವಳ ಬೊಬ್ಬೆಯನ್ನು ಕೇಳಿ ಜಗನ್ನಾಥ ,ವಿಭಾ ,ತಿಮ್ಮ ಹಾಗೂ ಸುರೇಂದ್ರ ಹೊರಗಡೆ ಬಂದರು 

 ಸಕ್ಕು ಬಾಯ್ : ನೋಡ್ರಪ್ಪ ನೋಡಿ ದೊಡ್ಡ ಮನುಷ್ಯ ಹೊರಗಡೆ ಬಂದ ಈ ಊರಿಗೆ ಒಡೆಯ ಅಂತೆ ಇವನು, ಇದಕ್ಕೆ ಇವನಿಗೆ ಅರ್ಹತೆಯಾದರೂ ಇದೆಯಾ ಅನ್ಯಾಯವಾಗಿ ಇವನ ಒಬ್ಬ ಮಗ ನನ್ನ ಮಗಳನ್ನು ಪ್ರೀತಿಯ ಬುಟ್ಟಿಗೆ ಹಾಕೊಂಡ ಇನ್ನೊಬ್ಬ ಮಗ ನನ್ನ ಮಗಳನ್ನು ಸಾಯಿಸಿ ಬಿಟ್ಟ ಇದು ಸಾಯುವ ವಯಸ್ಸೇ! ಎ ಜಗನ್ನಾಥ ಇದು ಒಂದು ಅಮ್ಮನ ಶಾಪ ನೀನು ಮತ್ತು ನಿನ್ನ ಕೃಷ್ಣ ಕುಟೀರ ಮನೆ ಎರಡು ನಾಶವಾಗಿ ಹೋಗುತ್ತದೆ ಆ ದೇವರು ಇದ್ದಾನಂದರೆ ನೀನು ಮತ್ತೆ ನಿನ್ನ ಮಕ್ಕಳು ಇಬ್ಬರು ರಕ್ತ ಕಣ್ಣೀರ ಹಾಕ್ತೀರಾ 

 ಅದನ್ನು ಕೇಳಿ ಜಗನ್ನಾಥನಿಗೆ ಎದೆಗೆ ಚೂರಿ ಹಾಕಿದಂತಾಯಿತು ಅವನು ಸಕ್ಕುಬಾಯಿಯನ್ನು ಕುರಿತು ಕ್ಷಮಿಸು ಬಿಡಮ್ಮ ನನ್ ಮಕ್ಕಳಿಂದ ನಿನಗೆ ಅನ್ಯಾಯವಾಯಿತು ಬೇಕಾದರೆ ನೀನು ನನಗೆ ಏನು ಶಿಕ್ಷೆ ಕೊಡಬಹುದು 

 ಸಕ್ಕು ಬಾಯ್ : ಶಿಕ್ಷೆ ಕೊಡಲು ನಾನ್ಯಾರು ಆ ದೇವರು ಶಿಕ್ಷೆ ಕೊಡ್ತಾನೆ ನನ್ನ ಮಗಳ ಪ್ರಾಣ ತೆಗೆದಕ್ಕೆ ನಿನ್ನ ಈ ಕೃಷ್ಣ ಕುಟೀರ ಮನೆ ಸುಟ್ಟು ಬೂದಿಯಾಗ್ತದೆ ಇದು ಒಂದು ಅಮ್ಮನ ಶಾಪ ಎಂದು ಹೇಳಿ ಸಕ್ಕೂಬಾಯಿ ಅಲ್ಲಿಂದ ಹೊರಟು ಹೋದಳು 

 ಜಗನ್ನಾಥನಿಗೆ ಇಂದು ಮೊದಲ ಬಾರಿ ತಾನು ಪೂರ್ತಿಯಾಗಿ ಸೋತಂತಾಯಿತು ಶೇಷನನ್ನು ಜೈಲಿಂದ ಹೇಗಾದರೂ ಹೊರಗೆ ತರಬೇಕೆಂಬ ಆಸೆ, ಸಕ್ಕುಬಾಯಿಯ ಮಾತು ಕೇಳಿ ಕ್ಷೀಣವಾಗಿತ್ತು 

 ಮೊದಲ ಅಪ್ಪನ ಸಾವು ಆಮೇಲೆ ಮಗ ಜೈಲಿಗೆ, ಇದೆಲ್ಲಾ ಜಗನ್ನಾಥನನ್ನು ಹಿಂಡಿ ಹಿಪ್ಪೆ ಮಾಡೋ ತೊಡಗಿದವು 


 ಅಂದು ರಾತ್ರಿ ಒಂದು ಗಂಟೆಗೆ ಜಯಂದ್ರ ತನ್ನ ಮಂದಿ ಜೊತೆ ಬಂದು ಕೃಷ್ಣ ಕುಟೀರ ಮನೆಯ ಹೊರಗಡೆ ಗೋಡೆಗೆ ಬೆಂಕಿ ಹಚ್ಚಿದ

 ಕೃಷ್ಣ ಕುಟೀರ ಮನೆ ಸುಡಲು ಪ್ರಾರಂಭಿಸಿತು . ಜಗನ್ನಾಥ ಮತ್ತು ಅವನ ಪರಿವಾರ ತಿಳಿದುಕೊಳ್ಳುವರಿಗೆ ಮನೆಯ ಹೊರಗಣ ಅರ್ಧ ಸುಟ್ಟು ಹೋಗಿತ್ತು ಜಗನ್ನಾಥ ಮತ್ತೆ ಅವನ ಪರಿವಾರ ವಾಸುದೇವನ ಮೂರ್ತಿಯನ್ನು ತೆಗೆದುಕೊಂಡು ಹೊರಗಡೆ ಬಂದರು ಹಾಗೂ ಅಲ್ಲಿ ಊರಿನ ಜನರು ಸೇರಿಕೊಂಡರು ಎಲ್ಲರೂ ಕೂಡಿ ಬೆಂಕಿಯನ್ನು ಆರಿಸಿದರು ಆದರೆ ಕೃಷ್ಣ ಕುಟೀರ ಮನೆ ಅರ್ಧ ಸುಟ್ಟುಹೋಗಿತ್ತು ಮನೆ ಮಂದಿ ಹಾಗೂ ಚಕ್ರವರ್ತಿ ಮತ್ತೆ ಮನೆಯ ಕೊಟ್ಟಿಗೆಯಲ್ಲಿರುವ ಪ್ರಾಣಿಗಳು ಸುರಕ್ಷಿತ ಇದ್ದವಾದರೂ ಮನೆ ಮಾತ್ರ 50ರಷ್ಟು ಸುಟ್ಟು ಹೋಗಿತ್ತು ಹಿಂದೆ ಒಳ್ಳೆಯ ಅರಮನೆ ತರ ಕಾಣುತ್ತಿದ್ದ ಮನೆ ಈಗ ಒಳ್ಳೆ ಹಾಳು ಕೊಂಪೆತರ ಕಾಣಲು ಪ್ರಾರಂಭಿಸಿತು ಆ ಮನೆಯಲ್ಲಿ ದರಿದ್ರತೆ ತುಂಬಿಕೊಂಡಂತೆ ಭಾಸವಾಗುತ್ತಿತ್ತು

 ಊರಿನ ಜನರೆಲ್ಲ ಕೃಷ್ಣ ಕುಟೀರ  ಮನೆ ಸುಟ್ಟು ಹೋಗಿರೋದು ಜಗನ್ನಾಥನ ಮಕ್ಕಳು ಮಾಡಿರೋ ಪಾಪದಿಂದ ಹಾಗು ಸೌಜನ್ಯನ ಅಮ್ಮ ಕೊಟ್ಟ ಶಾಪದಿಂದ ಎಂದು ಮಾತನಾಡ ತೊಡಗಿದರು ಇದೆಲ್ಲ ತಿಮ್ಮನ ಮೂಲಕ ಜಗನ್ನಾಥನ ಕಿವಿಗೆ ಬೀಳ್ತು.

ಜಗನ್ನಾಥ :ಅಪ್ಪ ನೀನ್ಯಾಕೆ ಹೋದೆ ಅಪ್ಪ ,ನನ್ನನ್ನು ಒಬ್ಬಂಟಿಯಾಗಿ ಬಿಟ್ಟು, ನನ್ನನ್ನು ಕೂಡ ನಿಂಜೊತೆ ಕರ್ಕೊಂಡು ಹೋಗಬಹುದಿತ್ತು ನನಗೆ ಇನ್ನು ಬದುಕುವ ಆಸೆ ಇಲ್ಲಪ್ಪ ಎಂದು ಹೇಳಿ ಗಟ್ಟಿಯಾಗಿ ಒಬ್ಬನೇ ಅಳಲು ಪ್ರಾರಂಭಿಸಿದನು ಅದನ್ನು ಕೇಳಿ 

ವಿಭಾ:ರೀ ನೀವು ಬಿಟ್ಟರೆ ನನಗೆ ಯಾರು ಗತಿ ಯಾಕ್ರಿ ಹಾಗೆ ಹೇಳ್ತೀರಾ ಅವಳು ಜೊತೆಗೆ ಅಳಲು ಪ್ರಾರಂಭಿಸಿದಳು 

 ಒಂದು ವಾರದಿಂದ ಜಗನ್ನಾಥನಿಗೆ ನಿದ್ದೆ ಇರಲಿಲ್ಲ ಗದ್ದೆಗೆ ಕೆಲಸ ಹೋಗುವ ಅಂದರೆ ಹಳ್ಳಿ ಜನರ ಟೀಕೆ ಮಾತುಗಳನ್ನು ಸಹಿಸುವ ಶಕ್ತಿ ಅವನಿಗಿಲ್ಲವೆಂದು ಮನೆಯಲ್ಲಿ ಕೂತಿದ್ದ ಹೊಟ್ಟೆಗೆ ಅನ್ನ ಕೂಡ ಸೇರ್ತಾಯಿರಲಿಲ್ಲ 

 ಚಿಂತೆ ಚಿತೆಗೆ ಸಮಾನ ಅನ್ನುವಂತೆ ದಿನವಿಡೀ ಜಗನ್ನಾಥನು ತನ್ನ ಅಪ್ಪನ ಫೋಟೋವನ್ನು ನೋಡುತ್ತಾ ಗಾಢವಾದ ಚಿಂತೆಯಲ್ಲಿ ಮುಳುಗತೊಡಗಿದನು ಜಗನ್ನಾಥನ ದೇವರು ಕೋಣೆಯಲ್ಲಿ ಇರುವ ವಾಸುದೇವಮೂರ್ತಿಯನ್ನು ಕೈಮುಗಿತ ವಾಸುದೇವ ನನಗೆ ಬಂದಿರುವ ವಿಪತ್ತಿನಿಂದ ಪಾರಾಗಲು ದಾರಿ ತೋಚುತ್ತಿಲ್ಲ ನೀನೇ ದಾರಿ ತೋರಿಸಬೇಕಪ್ಪ ಎಂದು ಹೇಳಿ ಅಳಲು ಆರಂಭಿಸಿದನು ದಿನ ಹೋದಂತೆ ಜಗನ್ನಾಥನ ಚಿಂತೆ ಜಾಸ್ತಿಯಾಗಲು ತೊಡಗಿತ್ತು ಹಾಗೂ ಆರೋಗ್ಯ ಹದಗೆಟ್ಟಿತು.

 ಅಂದು ಎಂದಿನಂತೆ ಜಗನ್ನಾಥನ ತನ್ನಪ್ಪನ ಫೋಟೋ ನೋಡುತ್ತಾ ಗಾಡವಾಗಿ ಚಿಂತೆಯಲ್ಲಿ ಮುಳುಗಿದ್ದಾಗ. 

ನಿಂಗಿ ಬಂದು ಯಾಕೆ ಜಗನ್ನಾಥ ಯಾವಾಗ ನೋಡಿದರೂ ಅಪ್ಪನ ಫೋಟೋವನ್ನು ನೋಡುತ್ತಾ ಚಿಂತೆಯಲ್ಲಿ ಮುಳುಗಿದ್ರೆ ಹೇಗಪ್ಪಾ, ದಿನನಿತ್ಯ ಕೆಲಸಗಳನ್ನು ನೋಡಬಾರದ ಮನೆ ನೋಡಿದರೆ ಒಳ್ಳೆ ಹಾಳು ಕೊಂಪೆ ತರ ಇದೆ ಅದನಾದರೂ ಸರಿಪಡಿಸಲಿಕ್ಕೆ ಆಗಲ್ವ .

 ಜಗನ್ನಾಥ : ಅಕ್ಕ ನನ್ ಮನೆಗೆ ಬಂದಿರುವ ಸುಂಟರಗಾಳಿಗೆ ಸಿಕ್ಕಿ ಒದ್ದಾಡ್ತಾ ಇದ್ದೀನಿ.

 ಹೊರಗಡೆ ಹೋಗುವ ಎಂದರೆ ಜನರ ಚುಚ್ಚು ಮಾತುಗಳನ್ನ ಕೇಳುವಂತ ಶಕ್ತಿ ನನಗಿಲ್ಲ 

 ನಿಂಗಿ: ಆಯ್ತು ನೀನೇನು ಮಾಡಬೇಡ ನಾನು ನಿನ್ನ ಭಾವನಿಗೆ ಎಲ್ಲ ಕೆಲಸ ಮಾಡಲು ಹೇಳುತ್ತೇನೆ ಮೊದಲಿಗೆ ಮನೆ ರಿಪೇರಿ ಆಗಬೇಕು ಅದಕ್ಕೆ ಸ್ವಲ್ಪ ಹಣ ನೀಡಿದರೆ ನಿನ್ನ ಭಾವ ಮಾಡ್ತಾರೆ 

 ಜಗನ್ನಾಥ ವಿಭಾನನ್ನು ಕರೆದು ತಿಜೋರಿಯಲ್ಲಿರುವ 3 ಲಕ್ಷವನ್ನು ನಿಂಗಿಗೆ ನೀಡಿ. ಸಾಧ್ಯಕ್ಕೆ ನನ್ನತ್ರ ಇರುವುದು ಇಷ್ಟೇ ಅಕ್ಕ 

 ನಿಂಗಿ: ಅಲ್ಲ ಜಗನ್ನಾಥ ಕೇವಲ 3 ಲಕ್ಷದಿಂದ ಇಷ್ಟು ದೊಡ್ಡ ಮನೆ ಹೇಗೆ ರಿಪೇರಿ ಮಾಡುವುದು ಕಮ್ಮಿ ಎಂದರೆ ಒಂದು 20ರಿಂದ 25 ಲಕ್ಷ ಆಗುತ್ತದೆ 

 ಜಗನ್ನಾಥ : ಅಷ್ಟೊಂದು ಹಣ ನನ್ನತ್ರ ಇಲ್ಲ ಅಕ್ಕ ಈ ವರ್ಷ ಸುಗ್ಗಿಯಲ್ಲಿ ಬಂದ ಹಣವೆಲ್ಲ ಊರಿನ ಜನರಿಗೆ ನೀರಿನ ವ್ಯವಸ್ಥೆ, ಪಟ್ಟಣಕ್ಕೆ ಹೋಗಲು ಉಚಿತ ಅಂಬುಲೆನ್ಸ್ ಹಾಗೂ ಕೆಲವರ ನಮ್ಮ ಹಳ್ಳಿಜನರ ಮದುವೆ ಮಾಡ್ಸುದ್ದಕ್ಕೆ ಖರ್ಚಾಯ್ತು 

 ನಿಂಗಿ : ಹಾಗಾದರೆ ಬ್ಯಾಂಕಿನಿಂದ ತೆಗಿ 

 ಜಗನ್ನಾಥ್ : ಬ್ಯಾಂಕಿನಲ್ಲಿ ಶೇಷನ ಅಕೌಂಟಲ್ಲಿ ಸ್ವಲ್ಪ ಹಣವಿರಬಹುದು ಎಷ್ಟಂತ ನನಗೂ ಗೊತ್ತಿಲ್ಲ ಪ್ರತಿ ಸುಗ್ಗಿ ಆದಾಗ ಬಂದ ಆದಾಯದಲ್ಲಿ 20ರಷ್ಟು ಪಟ್ಟು ತಾನು ಬ್ಯಾಂಕಲ್ಲಿ ಅಕೌಂಟ್ ಮಾಡಿ ಇಟ್ಟಿದ್ದಾನೆ ಮುಂದೆ ಅವಶ್ಯಕತೆ ಬರಬಹುದು ಎಂದು ಕಡಿಮೆಯಾದರೆ ಭಾವನಿಗೆ ಶೇಷನತ್ರ ಹೋಗಿ ಕೇಳಲಿಕ್ಕೆ ಹೇಳು 

 ನಿಂಗಿ ಮನಸ್ಸಿನಲ್ಲಿ ಅಂದುಕೊಂಡಳು .ಶೇಷ ಕೊಟ್ಟಂಗೆ, ನಾನೇನಾದ್ರೂ ಅವನತ್ರ ಹೋಗಿ ಕೇಳಿದರೆ ನಮ್ಮ ಗ್ರಹಚಾರ ಬಿಡಿಸಿ ಬಿಡ್ತಾನೆ ಸಿಕ್ಕಿದನ್ನೇ ಧೂಚಿಕೊಂಡು ಹೋಗೋಣ 

 ನಿಂಗಿ : ಆಯ್ತಪ್ಪ ನೀನು ಹೇಳಿದಾಗೆ ಮಾಡುತ್ತೇವೆ ಮಿಕ್ಕಿದ ಹಣವನ್ನು ಶೇಷನಾ ಕೇಳ್ತೀವಿ 

 ನಿಂಗಿ ಆ ಮೇಲೆ ಜಯಂದ್ರ ಕೊಟ್ಟ ಪತ್ರವನ್ನು ತೆಗೆದು


 ಜಗನ್ನಾಥ ಆ ದಿನ ನಿನ್ನತ್ರ ಮಾತಾಡಿದೆ ಅಲ್ಲಪ್ಪ ನಿಮ್ ಭಾವನಾ ಹಾಲಿನ ಬಿಸಿನೆಸ್ ಬಗ್ಗೆ ಅದಕ್ಕೆ ನಿನ್ನ ಸಹಿ ಬೇಕಾಗಿತ್ತು ಶೇಷ ಆ ದಿನ ನೋಡಿ ಸ್ವಲ್ಪ ತಿದ್ದುಪಡಿ ಮಾಡಲು ಹೇಳಿದ್ದಾನೆ ಹಾಗೂ ನಾನು ತಿದ್ದುಪಡಿಗಳನ್ನು ಮಾಡಿದೀನಿ ನೀನೇನಾದ್ರೂ ಸಹಿ ಹಾಕಿ ಬಿಟ್ಟರೆ ನಾವು ಕೆಲಸ ಶುರು ಮಾಡಬಹುದು 

 ಜಗನ್ನಾಥ ತಾನಿರುವ ಪರಿಸ್ಥಿತಿಯಲ್ಲಿ ಯಾವುದು ಓದುವುದಾಗಲಿ ತಿಳಿದುಕೊಳ್ಳುವುದಾಗಲಿ ಪರಿಸ್ಥಿತಿಯಲ್ಲಿ ಇರಲಿಲ್ಲ ವಿಭಾ ಕೂಡ ನಿಂಗಿನ ಬಲವಾಗಿ ನಂಬಿದ್ದಳು 

 ಶೇಷ ನಿಂಗಿಯ ಮೋಸದ ಬಗ್ಗೆ ತನ್ನಮ್ಮನಿಗೆ ಆಗಲಿ ಜಗನ್ನಾಥನಿಗಾಗಲಿ ಹೇಳಲಿಲ್ಲ 

 ಜಗನ್ನಾಥ : ಶೇಷ ಓದಿದ್ಮೇಲೆ ಇನ್ನು ನಾನ್ ಯಾಕೆ ಓದುವುದು, ಕೊಡು ಸಹಿ ಮಾಡ್ತೀನಿ ಎಂದು ಹೇಳಿ ಆ ಪತ್ರಕ್ಕೆ ಸಹಿ ಹಾಕಿ ಬಿಟ್ಟನು 

 ಪತ್ರದ ಮೇಲೆ ಸಹಿ ತಕೊಂಡ ಮೇಲೆ ನಿಂಗಿಗೆ ಸ್ವರ್ಗದ ಮೆಟ್ಟಿಲು ಏರಿದಾಗ ಆಯ್ತು 100 ಎಕರೆಗೆ ವಿಜಯೇಂದ್ರ 7 ಕೋಟಿ ಕೊಡ್ತೀನಿ ಅಂತ ಹೇಳಿದ ಇದು 430 ಎಕ್ರೆ ಇದಕ್ಕೆ ಕಮ್ಮಿ ಎಂದರೆ 25 ಕೋಟಿ ವರೆಗೆ ಸಿಗಬಹುದು ಎಂದುಕೊಂಡು ನಿಂಗೆ ತುಂಬಾ ಸಂತೋಷ ಪಟ್ಟಳು 

 ಮತ್ತು ಜಯಂದ್ರ ನಿಗೆ ಕರೆ ಮಾಡಿ ತಾನು ಸಹಿ ತಕೊಂಡ ಬಗ್ಗೆ ಹಾಗೂ ತನೆಗೆ ಕೊಡಬೇಕಾದ ಹಣವನ್ನು ಕೂಡಿ ಇಡಲು ಹೇಳಿದಳು 

 ಜಯಂದ್ರ ಅವಳನ್ನು ಮರುದಿನ ಬರಲು ಹೇಳಿದನು 

 ಈ ವಿಷಯ ವಿಜೇಂದ್ರ ನಿಗೆ ತಿಳಿದಾಗೆ ನಿಂಗಿ ಬರುವಾಗ ತಾನು ಮತ್ತೆ ಜಯಂದ್ರ ಬಿಟ್ಟರೆ ಬೇರೆ ಯಾರು ಅಳುಗಳು ಮನೆಯಲ್ಲಿ ಇರಬಾರದೆಂದು ಜಯಂದ್ರನಿಗೆ ಸೂಚನೆ ಕೊಟ್ಟನು. 

 ಅಂದು ರಾತ್ರಿ ಎಷ್ಟು ದಿನದ ನಂತರ ಜಗನ್ನಾಥನಿಗೆ ಸ್ವಲ್ಪ ನಿದ್ದೆ ಬಂತು ಆತನಿಗೆ ಕನಸಲ್ಲಿ ವಿಶ್ವನಾಥನು ಬಂದು 

 ಜಗನ್ನಾಥ ನಮ್ಮ ಕೃಷ್ಣ ಕುಟೀರ ಮನೆಯ ಮರ್ಯಾದಿಯನ್ನು ಕಾಪಾಡಪ್ಪ ಕಾಪಾಡು ನನ್ ಕಂದ ಎಂದು ಹೇಳಿ ಗಟ್ಟಿಯಾಗಿ ಅಳಲಾರಂಭಿಸಿದನು. 


 ಕನಸಿನಲ್ಲಿ ತನ್ನ ಅಪ್ಪನನ್ನು ನೋಡಿ ಭಾವುಕನಾದ ಜಗನ್ನಾಥನು ಹುರಳಿಕೊಂಡು ಮಂಚದಿಂದ ಕೆಳಗಡೆ ಬಿದ್ದನು ತಾನು ಎಷ್ಟು ಏಳಲು ಪ್ರಯತ್ನಿಸಿದರು ಆತನಿಗೆ ಏಳಲು ಆಗುತ್ತಿರಲಿಲ್ಲ ಅವನ ಎಡ ಕೈ ಯಾವುದೇ ಚಳುವಳಿ ಇಲ್ಲದೆ ನಿಂತು ಹೋಗಿತ್ತು ಹಾಗೂ ಅವನ ಬಾಯಿ ಸೊಟ್ಟಗಾಗಿತ್ತು ಅವನಿಗೆ ಕೂಗಲು ಹಾಗೂ ಮಾತಾಡಲು ಆಗುತ್ತಿರಲಿಲ್ಲ ಅವನಿಗೆ ಚಾಲನೆ ವಾಗಿದ್ದ ಅವನ ಬಲಗೈ ಮತ್ತು ಬಲ ಕಾಲನ್ನು ಗಟ್ಟಿಯಾಗಿ ನೆಲಕ್ಕೆ ಬಡಿಯಲು ಪ್ರಾರಂಭಿಸಿದನು ಆವಾಗ ವಿಭಾಗ ಎಚ್ಚರವಾಯಿತು ಆಕೆ ಜಗನ್ನಾಥನು ನೆಲದಲ್ಲಿ ಬಿದ್ದದನ್ನು ನೋಡಿ ತಾನು ಗಟ್ಟಿಯಾಗಿ ಕೂಗಲು ಆರಂಭಿಸಿದಳು ಅವಳ ಕೂಗನ್ನು ಕೇಳಿ ತಿಮ್ಮ, ಸುರೇಂದ್ರ ,ನಿಂಗಿ ಮತ್ತು ಸುಕೇಶ ಓಡೋಡಿ ಬಂದರು ಅವರಿಗೆ ಜಗನ್ನಾಥನು ನೆಲದಲ್ಲಿ ಬಿದ್ದು ಹೊರಳಾಡುವುದನ್ನು ನೋಡಿ ದಿಗ್ ಭ್ರಮೆಗೊಂಡರು ತಕ್ಷಣ ಆತನನ್ನು ಎತ್ತಿ ಮಂಚದ ಮೇಲೆ ಮಲಗಿಸಿದರು ಹಾಗೂ ಡಾಕ್ಟರ್ ಡಿಸೋಜಾಗೆ ಫೋನ್ ಮಾಡಿದರು 



Rate this content
Log in

Similar kannada story from Drama