STORYMIRROR

Harsha Shetty

Drama Classics Others

3  

Harsha Shetty

Drama Classics Others

ಕೃಷ್ಣ ಕುಟೀರ ಭಾಗ-23

ಕೃಷ್ಣ ಕುಟೀರ ಭಾಗ-23

2 mins
156

ಇಲ್ಲಿ ಜಯಂದ್ರ ಜೈಲಿಗೆ ಶೇಷನನ್ನುಭೇಟಿಯಾಗಲು ಹೋದನು.

 ಜಯಂದ್ರ : ಅಲ್ಲಿ ನಿನ್ನ ಅಪ್ಪ ಲಕ್ವ ಹೊಡೆದು ಬಿದ್ದಿದ್ದಾನೆ

 ಇಲ್ಲಿ ನೀನು ಜೈಲಿನಲ್ಲಿ, ನೀನು ಕಾನೂನು ಓದಿದ್ಯಲ್ಲ ಒಂದು ಕೊಲೆಗೆ ಎಷ್ಟು ವರ್ಷ ಶಿಕ್ಷೆ ಆಗುತ್ತದೆ ನನ್ನ ಪ್ರಕಾರ ಕಮ್ಮಿ ಎಂದರೆ 14 ವರ್ಷ

 ಶೇಷ : ಅದೆಲ್ಲ ನಿನಗೆ ಯಾಕೆ ನನಗೀಗ ಬಂದ ವಿಷಯ ಹೇಳು 

 ಜಯಂದ್ರ : ಏನಿಲ್ಲ ನಿನ್ನನ್ನು ಈ ಜೈನಿಂದ ಪಾರು ಮಾಡಲು ಬಂದಿದ್ದೇನೆ ಕೊಲೆ ನೀನು ಮಾಡಲಿಲ್ಲದಾಗ ನೀನ ಯಾಕಪ್ಪ ಜೈಲಿಗೆ ಹೋಗಬೇಕು, ಜೈಲಿಗೆ ಹೋಗಬೇಕಾದವನು ನಿನ್ ತಮ್ಮ ಸುರೇಂದ್ರ ಇಲ್ಲಿ ನೋಡು ಅಂತ ಹೇಳಿ ತನ್ನ ಫೋನಿನಲ್ಲಿದ್ದ ಸುರೇಂದ್ರ ಸೌಜನ್ಯನನ್ನು ಕೊಲೆ ಮಾಡುವ ವಿಡಿಯೋ ತೋರಿಸಿದ (ವಿಡಿಯೋವನ್ನು ವಿಜೇಂದ್ರನು ತಮಗೆ ಬೇಕಾದ ಹಾಗೆ ಎಡಿಟ್ ಮಾಡಿದ ಆ ವಿಡಿಯೋ ನೋಡಿದರೆ ನಾನ ಎಲ್ಲಿ ಕೂಡ ಸೌಜನ್ಯ ಕೊಲೆಯಲ್ಲಿ ಶಾಮಿಲಿದ್ದಾನೆ ಅಂತ ವ್ಯಕ್ತವಾಗುವುದಿಲ್ಲ ಸೌಜನ್ಯ ಕೊಲೆಯನ್ನು ಸಂಪೂರ್ಣವಾಗಿ ಸುರೇಂದ್ರ ಮಾಡಿರೋದು ಎಂದು ಭಾಸವಾಗುತ್ತಿತ್ತು) ಈ ವಿಡಿಯೋ ಪೊಲೀಸರಿಗೆ ತೋರಿಸಿದರೆ ನಿನ್ನ ತಮ್ಮ ಜೈಲಿಗೆ ಹೋಗುವುದು ಗ್ಯಾರಂಟಿ

 ಶೇಷ : ನೀನು ಸುಮ್ಮನೆ ಇರಬೇಕಾದರೆ ನಿಂಗೆ ಏನು ಬೇಕು. 

 ಮಹೇಂದ್ರ : ಏನಿಲ್ಲ ನಾನು ತಂದಿರುವ ಪತ್ರಕ್ಕೆ ನಿಂದೊಂದ್ ಸಹಿ ಅಷ್ಟೇ ಮತ್ತೆ ಏನು ಬೇಡ 

 ಶೇಷ : ಏನು ಜಯಂದ್ರ ನನ್ನನ್ನು ಬ್ಲಾಕ್ ಮೇಲ್ ಮಾಡ್ತಾ ಇದ್ದೀಯಾ 

 ಜಯಂದ್ರ : ಏನು ಬೇಕಾದ ತಿಳ್ಕೋ ಆದರೆ ನನಗೆ ನಿನ್ನಿಂದ ಸಹಿ ಬೇಕೇ ಬೇಕು 

 ಶೇಷ : ಏನು ಪತ್ರಗಳಿವು 

 ಜಯಂದ್ರ : ನಿಮ್ಮ ಆಸ್ತಿ ಪತ್ರ ಇದರಲ್ಲಿ ನೀನು ನಿನ್ನ ಎಲ್ಲಾ ಆಸ್ತಿಯನ್ನು ನಮಗೆ ದಿಸ್ಲೇರಿ ಕಟ್ಟಲಿಕ್ಕೆ ಕೊಡ್ತೀರಂತ ಬರ್ದಿದೆ ಹೆದರಬೇಡ ನಿಮಗೆ ಇದರ ಪರಿಹಾರ ಕೂಡ ಚೆನ್ನಾಗಿ ಕೊಡುತ್ತೇನೆ 

 ಶೇಷ : ನನಗೆ ನನ್ನ ತಮ್ಮಕಿಂತ ಹೆಚ್ಚು ಈ ಆಸ್ತಿಪಾಸ್ತಿಯಲ್ಲ ಎಂದು ಹೇಳಿ ಪತ್ರ ಸಹಿ ಮಾಡಿ ಜಯಂದ್ರ ಮುಖಕ್ಕೆ ಬಿಸಾಕಿದ. 

 ಶೇಷ : ಇನ್ನು ತೊಲಗು ಇಲ್ಲಿಂದ 

 ಜಯಂದ್ರನ್ನು : ಬಿದ್ದರೂ ಮೀಸೆ ಮಣ್ಣಾಗಿಲ್ಲ ಅಂತ ಹೇಳುವ ಜನ ನೀವು ,ನನಗೇನು ಸಹಿ ಆಯ್ತು ತಾನೆ ಹೋಗ್ತೀನಿ 

 ತನ್ನ ಮನೆಯಲ್ಲಿ ಅಷ್ಟಾದರು ಸುರೇಂದ್ರ ಏನು ಆಗದ ಹಾಗೆ ಇದ್ದನು ಕ್ರಿಕೆಟ್ ಬಿಟ್ಟರೆ ಮೊಬೈಲ್ .ಮೊಬೈಲ್ ಬಿಟ್ರೆ ಕ್ರಿಕೆಟ್ 

 ಅಂದು ಎಂದಿನಂತೆ ಕ್ರಿಕೆಟ್ ಆಡಲು ಸುರೇಂದ್ರ ಗ್ರೌಂಡಿಗೆ ಹೋಗುತ್ತಿದ್ದ ಆವಾಗ ಅವನನ್ನು ಜಯಂದ್ರ ತಡೆದು 

 ಏನಪ್ಪಾ ನನ್ನ ನಾದಿನಿಯನು ಸಾಯಿಸಿ ಏನು ಆಗದಂತೆ ಈ ನನ್ ಮಗ ಕ್ರಿಕೆಟ್ ಆಡಲು ಹೋಗುತ್ತಿದ್ದಾನೆ ಕೇಳಿ ಕೇಳಿ ಜನರೆಲ್ಲ ಇದು ಕೃಷ್ಣ ಕುಟೀರ ಮನೆಯವರ ದೊಡ್ಡತನ

 

 ಸುರೇಂದ್ರ : ಜಯಂದ್ರ ನಾನು ಹೋಗಲು ಬಿಡು ಸುಮ್ಸುಮ್ನೆ ನನ್ ತಂಟೆಗೆ ಬರಬೇಡ 

 ಜಯೇಂದ್ರ : ನಿನ್ ತಂಟೆಗೆ ನಾನೆಲ್ಲೋ ಬಂದಿದ್ದೇನೆ ಗುಬಾಲ್ ನೀನೆ ನನ್ ತಂಟೆಗೆ ಬಂದಿರುವುದು ಮೊದಲು ನನ್ನ ನಾದಿನಿಯನು ಪ್ರೀತಿಸಿ ಆಮೇಲೆ ಸಾಯಿಸಿದೆ ಈಗ ನಿನ್ನೊಟ್ಟಿಗೆ ಜಗಳ ಮಾಡಿದ ನಮ್ಮನೆ ಆಳು ನಾನಾ ಕಾಣ್ಸ್ತಾಯಿಲ್ಲ ಏನು ಅವನನ್ನು ಕೊಲೆ ಮಾಡಿದ್ಯಾ 

 ಸುರೇಂದ್ರ : ಏನು ನಾನಾ ಕಾಣ್ಸ್ತಿಲ್ಲವೆ 

 ಜಯೇಂದ್ರ : ಮೆಲ್ಲನೆ ಸುರೇಂದ್ರ ಕಿವಿನ ಹತ್ರ ಬಂದು ಹೌದು ನಾನಾ ಕಾಣ್ಸ್ತಿಲ್ಲ ಆತ ಸತ್ತೋಗಿದ್ದಾನೆ ಸಾಯಿಸಿದು ನಾವೇ ಆದರೆ ಅದರ ಅಪವಾದನೆ ನಿನ್ ಮೇಲೆ ಹಾಕ್ತೀನಿ ನಾವು ಹಾಗೆ ಮಾಡಬಾರದೆಂದರೆ ನೀನು ನಾವು ಹೇಳಿದಾಗೆ ಮಾಡಬೇಕು 

 ಸುರೇಂದ್ರ : ನಾನೇನು ಮಾಡಬೇಕು 

 ಜಯಂದ್ರ : ಈ ಪತ್ರಕ್ಕೆ ಒಂದು ಸಹಿ ಹಾಕು ಅಷ್ಟೇ ಸಾಕು ನಾನು ನಿನ್ ತಂಟೆಗೆ ಬರಲ್ಲ 

 ಸುರೇಂದ್ರ : ಏನು ಪತ್ರವಿದು 

 ಜಯಂದ್ರ : ಹೆದರಬೇಡ ಇದು ನಿಮ್ಮ ಮನೆಯ ಆಸ್ತಿ ಪತ್ರ ಆ ನಿನ್ನ 430 ಎಕರೆ ಜಾಗವನ್ನು ನಮ್ಮ ಹೆಸರಿಗೆ ಮಾಡಿದ್ಯಾ ಎಂದು .

 ಸುರೇಂದ್ರ ಹೆದರಿ ಆಸ್ತಿ ಹೋದರೆ ಹೋಗಲಿ ಆದರೆ ತಾನು ಜೈಲಿಗೆ ಹೋಗುವುದು ತಪ್ಪಿತಲ್ಲ ಎಂದುಕೊಂಡು ಪತ್ರಕ್ಕೆ ಸಹಿ ಮಾಡಿದನು


இந்த உள்ளடக்கத்தை மதிப்பிடவும்
உள்நுழை

Similar kannada story from Drama