Shridevi Patil

Drama Inspirational Others

4  

Shridevi Patil

Drama Inspirational Others

ತುಂಬಿದ ಕುಟುಂಬ .ಭಾಗ 3.

ತುಂಬಿದ ಕುಟುಂಬ .ಭಾಗ 3.

2 mins
578


ಮೊದಲ ಮಗ ತನ್ನಂತೆ ಬಡವರ ಸೇವೆ ಮಾಡುತ್ತಾ , ಪುಟ್ಟ ಅಂಗಡಿಯನ್ನು ಬೆಳೆಸುತ್ತ , ತಾನು ನಾಲ್ಕಾರು ಜನರ ನಡುವೆ ತನ್ನ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುತ್ತ ತಾನೂ ಬೆಳೆಯುತ್ತಿದ್ದನು. ಶಂಕರನ ಈ ಬೆಳವಣಿಗೆ ಮನೆಯಲ್ಲಿ ಎಲ್ಲರಿಗೂ ಖುಷಿ ಕೊಡುತ್ತಿತ್ತು.


ತದ ನಂತರ ಸಿದ್ದಪ್ಪನವರ ಎರಡನೇ ಮಗ ಓದಿ , ಒಂದು ಒಳ್ಳೆಯ ಸರಕಾರಿ ಕೆಲಸ ಪಡೆದುಕೊಂಡನು. ಈಗಂತೂ ಸಿದ್ದಪ್ಪನವರು ತಮ್ಮ ಖುಷಿಯನ್ನು ಊರಿಗೆ ಊಟ ಹಾಕಿಸುವ ಮೂಲಕ ಹಂಚಿಕೊಂಡು ಖುಷಿ ಪಟ್ಟರು. ಚಿಕ್ಕಂದಿನಲ್ಲಿ ತಮ್ಮ ಎರಡನೆಯ ಮಗ ತುಂಬಾ ಚೆನ್ನಾಗಿ ಓದುತ್ತಿದ್ದನ್ನು ಕಂಡು ಆಗಲೇ ಮನಸ್ಸಿನಲ್ಲಿ ಲೆಕ್ಕಾಚಾರ ಹಾಕಿಕೊಂಡಿದ್ದರು. ಹೀಗೆಯೇ ಮುಂದೆ ಕೂಡ ಚೆನ್ನಾಗಿ ಓದಿದರೆ ಏನೋ ಒಂದು ಸಣ್ಣದೋ , ದೊಡ್ಡದೋ ಒಟ್ಟಿನಲ್ಲಿ ಒಂದು ಸರಕಾರಿ ಕೆಲಸ ಸಿಗುವುದಂತೂ ಖಾತರಿ ಎಂದು ಅಂದುಕೊಂಡಿದ್ದ ಸಿದ್ದಪ್ಪನವರ ಆಸೆ ಈಗ ಕೈಗೂಡಿತು.


ಮಗ ಪಕ್ಕದ ಜಿಲ್ಲೆಯ ಶಾಲೆಯೊಂದರಲ್ಲಿ ಕ್ಲರ್ಕ್ ಆಗಿ ಸೇವೆಗೆ ಸೇರಿಕೊಂಡನು. ಅಪ್ಪ ಅಮ್ಮನ ಆಶೀರ್ವಾದ ಪಡೆದು , ತನ್ನ ಸೇವೆಯನ್ನು ಶುರು ಮಾಡಿದ್ದನು.


ಆದರೆ , ಮೂರನೆಯ ಮಗನಂತೂ ಉಡಾಳ .ಓದು ತಲೆಗೆ ಹತ್ತಲಿಲ್ಲ. ಜೊತೆಗೆ ಬುದ್ದಿಯೂ ಮಂಗ ಬುದ್ದಿ. ಯಾರಾದರೂ ಏನಾದರೂ ಹೇಳಿದರೆ ತಿಳಿದುಕೊಳ್ಳುತ್ತಿರಲಿಲ್ಲ. ಜೊತೆಗೆ ಬುದ್ದಿ ಹೇಳಿದವರಿಗೆ ಏನಾದರೊಂದನ್ನು ಅನ್ನುವುದು , ಎದುರು ವಾದಿಸುವುದು , ತರಲೆ ಮಾಡುವುದು ಇಷ್ಟೇ ಆತನಿಗೆ ಗೊತ್ತಿದ್ದಿದ್ದು. ಸಿದ್ದಪ್ಪನವರು ಎಷ್ಟೇ ಮುತುವರ್ಜಿ ವಹಿಸಿ , ಮೂರನೇ ಮಗನನ್ನು ತೀಡಿದರೂ , ತಿದ್ದಿದರೂ ಆತ ಮಾತ್ರ ಬದಲಾಗಲಿಲ್ಲ. ಬದಲಾಗುವ ಲಕ್ಷಣಗಳು ಸಹ ಕಾಣಿಸಲಿಲ್ಲ. ಇದರಿಂದಾಗಿ ಸಿದ್ದಪ್ಪನವರು ಬಹು ನೊಂದಿದ್ದರು. ಹೆಂಡತಿ ಲಕ್ಷಿಯೊಡನೆ ಈ ವಿಷಯದ ಕುರಿತು ಅದೆಷ್ಟೋ ಸಲ ಮಾತಾಡಿ ನೊಂದುಕೊಂಡಿದ್ದು ಉಂಟು. ಆದರೆ ಯಾರೂ ಏನೂ ಮಾಡುವಂತಿರಲಿಲ್ಲ. ಆದರೆ ಒಂದು ಖುಷಿಯ ವಿಚಾರ ಏನೆಂದರೆ ಏನೇ ತರಲೆ ಮಾಡಲಿ , ತುಂಟಾಟ ಮಾಡಲಿ , ಇಲ್ಲಿಯವರೆಗೂ ಒಬ್ಬರಿಗೂ ಕೆಡುಕು ಉಂಟು ಮಾಡಿಲ್ಲ. ಅಪ್ಪನ ಹೆಸರು ಕೆಡಿಸಿಲ್ಲ. ವಾದ ಮಾಡುವುದೊಂದೆ ಕೆಟ್ಟ ಚಟ ಎನ್ನಬಹುದು. ಆದರೂ ಅದೂ ಕೂಡ ಒಮ್ಮೊಮ್ಮೆ ದೊಡ್ಡ ತಪ್ಪಾಗಿ ಪರಿಣಮಿಸುತ್ತದೆ. ಹೀಗೆ ಶೆಟ್ಟರ ಮನೆಯ ಮೂರನೆಯ ಕುಡಿಯು ರಾಜಾ ಹುಲಿಯಂತೆ ಬೆಳೆಯುತ್ತಿತ್ತು. ತನ್ನವರಿಗಾಗಿ ಏನು ಬೇಕಾದರೂ ಮಾಡಲು ಸೈ ಎನ್ನುವ ಮನಸ್ಥಿತಿ ಇದ್ದಿತು.


ಇಷ್ಟೆಲ್ಲ ಬೆಳವಣಿಗೆಯ ಮಧ್ಯದಲ್ಲಿ ಶಂಕರ ಬೆಳೆದು ಮದುವೆ ವಯಸ್ಸಿಗೆ ಬಂದಾಗಿತ್ತು. ಸಿದ್ದಪ್ಪನವರ ಹೆಂಡತಿ ತನ್ನ ಸೋದರ ಸೊಸೆಯನ್ನು ಶಂಕರನಿಗೆ ತರುವುದು ಹೇಗೆಯೆಂದು ಗಂಡನೊಡನೆ ಚರ್ಚಿಸಿದಳು. ಸಿದ್ದಪ್ಪನವರೂ ಸಹ ಆ ಹುಡುಗಿಯನ್ನು ನೋಡಿದ್ದರು. ಸೂಕ್ಷ್ಮ ಸ್ವಭಾವದ ಹುಡುಗಿ , ಎಲ್ಲವನ್ನು ಅರ್ಥ ಮಾಡಿಕೊಂಡು , ಎಲ್ಲರೊಂದಿಗೂ ಹೊಂದಿಕೊಂಡು ಹೋಗುತ್ತಾಳೆ ಎಂದು ಹೆಂಡತಿಯ ಅಣ್ಣನನ್ನು ಕರೆಯಿಸಿ ಮಾತಾಡಲು ಯೋಚಿಸಿದರು.


ಆ ಪ್ರಕಾರ ಸಿದ್ದಪ್ಪನವರು ತಮ್ಮ ಭಾವನನ್ನು

ಕರೆಯಿಸಿ , ಅವರ ತಂಗಿಯ ಮನದ ಇಂಗಿತವನ್ನು ವ್ಯಕ್ತಪಡಿಸಿದರು. ಸೋದರ ಅಳಿಯನನ್ನು ಚಿಕ್ಕಂದಿನಿಂದಲೇ ನೋಡಿಕೊಂಡು ಬಂದಿದ್ದಾರೆ. ಈಗ ಹೆಣ್ಣು ಕೊಡಲು ಮನಸ್ಸು ಮಾಡಿದರು. ಆದರೂ ತಮ್ಮ ಮಗಳನ್ನು ಒಂದು ಮಾತುಕೇಳುವುದಾಗಿ ಹೇಳಿಹೋದರು.



ಸಿದ್ದಪ್ಪನವರ ಹೆಂಡತಿಯ ಸೊದರ ಸೊಸೆ ಈ ಮದುವೆಗೆ ಒಪ್ಪಿದಳಾ ಇಲ್ಲವಾ ಎಂದು ಮುಂದಿನ ಭಾಗದಲ್ಲಿ ನೋಡೋಣ


Rate this content
Log in

Similar kannada story from Drama