ಸರ್ಕಾರದ ಹಣ
ಸರ್ಕಾರದ ಹಣ


ಒಂದು ಸಾರಿ ಸರ್ಕಾರಿ ನೌಕರನೊಬ್ಬ ತನ್ನ ಕಚೇರಿಯ ಹಣ ಐದು ಸಾವಿರ ರೂಪಾಯಿ ಸ್ವಂತಕ್ಕಾಗಿ ಬಳಸಿಕೊಂಡ. ಅಂದೇ cash inspection ಗೆ ಬಂದ ಅಧಿಕಾರಿಗಳು ಕೇಳಿದಾಗ ಸಾರ್ ನಾನು ಎಂದಿಗೂ ಮನೆ ಬೇರೆ ಕಛೇರಿಬೇರೆ ಅಂತ ಭಾವಿಸಿದ್ದೇ ಇಲ್ಲ. ಹಾಗಾಗಿ ಇಂದು ತೆಗೆದ ಹಣ ನಾಳೆ ವಾಪಸ್ ಹಾಕುತ್ತೇನೆ ಅಂದ. ಬಂದಿದ್ದವರು ಇವನಿಗಿಂತ ಚಾಲಾಕಿಗಳು .ಅವರೊಲ್ಲಬ್ಬರು ಹೇಳಿದರು ಬಹಳ ಸಂತೋಷ ನಿಮಗೆ ಮನೆ ಮತ್ತು ಸರ್ಕಾರಿ ಕಚೇರಿ ಎರಡೂ ಒಂದೇ ಅಂದ ಮೇಲೆ ಮನೆ ಮತ್ತು ಸೆರೆಮನೆ ಸಹಾ ಒಂದೇ ಅಂತ ಭಾವಿಸಿಕೊಂಡು ಆರುತಿಂಗಳು ಅಲ್ಲಿ ಇರೋದು ನಿಮಗೆ ಕಷ್ಟ ಆಗಲಾರದಲ್ಲವೇ ಅಂದರು. ನೌಕರ ತಲೆ ಎತ್ತದೆ ನಿಂತಿದ್ದ. ನಂತರ ಆ ಹೊಸ ಮನೆಗೆ ಹೋದ. ಕ್ಷಮಿಸಿ ಕಳಿಸಿದರು.