Win cash rewards worth Rs.45,000. Participate in "A Writing Contest with a TWIST".
Win cash rewards worth Rs.45,000. Participate in "A Writing Contest with a TWIST".

Kalpana Nath

Drama Inspirational Others


4  

Kalpana Nath

Drama Inspirational Others


ರಾಹುಲ್

ರಾಹುಲ್

3 mins 31 3 mins 31

 


ಒಂದು ಬಡಮಕ್ಕಳಿಗಾಗಿಯೇ ಪ್ರಾರಂಭವಾದ ಶಾಲೆ. ಒಮ್ಮೆ ಹೊಸದಾಗಿ ಬಂದ ಜೂಲಿಯೆಟ್ ಅನ್ನೋ ಲೇಡಿ ಟೀಚರ್ ಐದನೇ ತರಗತಿಯಲ್ಲಿ ಮೊದಲು ತಮ್ಮ ಬಗ್ಗೆ ಹೇಳಿ ಎಲ್ಲಾ ಮಕ್ಕಳನ್ನೂ ತಮ್ಮತಮ್ಮ ಬಗ್ಗೆ ತಿಳಿಸಲು ಹೇಳಿದರು. ಕೊನೆಯ ಬೆಂಚ್ ನಲ್ಲಿ ಕಿಟಕಿ ಕಡೆ ನೋಡುತ್ತಾ ಕುಳಿತಿದ್ದ ರಾಹುಲ್ ನ ಸರದಿ ಬಂದಾಗ ಏನೂ ಹೇಳದೆ ಸುಮ್ಮನೆ ಕುಳಿತುಕೊಂಡೇ ಇದ್ದ. ಮತ್ತೆ ಅದೇ ಪ್ರಶ್ನೆ ಕೇಳಿದರೂ ಉತ್ತರಿಸಲಿಲ್ಲ. ಹೆಚ್ಚು ಒತ್ತಡ ಹಾಕದೆ ತಾವೇ ಸುಮ್ಮನಾಗಿ ಅಂದಿನ ಪಾಠ ಮುಗಿಸಿ ಹೊರಟರು . ನಾಲ್ಕನೇ ತರಗತಿಗೆ ಹೋಗಿ ಅಲ್ಲಿದ್ದ class ಟೀಚರ್ ನ ಕಂಡು ಆ ಹುಡುಗನ ಬಗ್ಗೆ ಮೊದಲು ಹೇಗಿದ್ದ ಅಂತ ಕೇಳಿದರು. ಅದಕ್ಕೆ ಅವರು ಅವನ ಮನೆಯಲ್ಲಿ ಏನೋ ತೊಂದರೆ ಇರಬಹುದು. ತಂದೆ ತಾಯಿ ಇಬ್ಬರೂ ಕೂಲಿ ಕಾರ್ಮಿಕರು. ತಂದೆ ಕುಡುಕ ಪ್ರತಿದಿನ ಹೆಂಡತಿಯನ್ನು ಹೊಡೆಯೋದು ಮಾಮೂಲಾಗಿತ್ತು. ಇದನ್ನ ನೋಡಿ ಪಾಪ ಈ ಹುಡುಗ ಮನೆಯಿಂದ ಹೇಗೋ ಶಾಲೆಗೆ ಬಂದು ಬಿಡೋಣ ಅಂತ ಬರ್ತಾನೆ ಆದರೆ ಬಂದ ಮೇಲೆ ಅಮ್ಮನದೇ ತಲೆ ತುಂಬಾ. ಅದಕ್ಕೆ ಹೀಗಾಗಿದಾನೆ ಅಂತ ಕಾಣತ್ತೆ ಅಂದರು. ಅಲ್ಲಿಂದ ಅವರು ಮೂರನೆ ತರಗತಿಯ class teacher ನ ಹುಡುಕಿ ಕೊಂಡು ಹೋಗಿ ಈ ಬಾಲಕನ ಬಗ್ಗೆ ಕೇಳಿದಾಗ ಬುದ್ದಿವಂತ ಚುರುಕಾಗಿದ್ದ ಏನಾಯ್ತೋ ಗೊತ್ತಿಲ್ಲ ಹೆಚ್ಚಾಗಿ ಮಾತನಾಡದ ಅವನು ಈಗೀಗ ಎಲ್ಲರ ಜೊತೆ ಹೆಚ್ಚಾಗಿ ಬೆರೆಯೊಲ್ಲ ಅಂತ ಕೇಳಿದೀನಿ ಅಂದರು. ಎರಡನೇ ತರಗತಿಯಿಂದ ವಿಷಯ ಸಂಗ್ರಹಿಸಿದಾಗ ಅವರಿಗೆ ತಿಳಿದಿದ್ದು ಇಡೀ ಶಾಲೆಗೆ ಬುದ್ದಿವಂತ, ಒಂದು ಸಾರಿ ಹೇಳಿದರೆ ಸಾಕು ಜ್ಞಾಪಕ ಇಟ್ಟುಕೊಳ್ತಾನೆ. ಮುಂದೊಂದು ದಿನ ನಮ್ಮಶಾಲೆಗೆ ಒಳ್ಳೆ ಹೆಸರು ತರ್ತಾನೆ ಅಂತ ಆಸೆ ಇತ್ತು. 


ಈಗ ಹೇಗೋ ಗೊತ್ತಿಲ್ಲ. ನನಗೆ ಅವನ ಕಾಂಟಾಕ್ಟ್ ಇಲ್ಲ ಅಂತ ಹೇಳಿದರು. ಅಲ್ಲಿಂದ ಟೀಚರ್ ನೇರವಾಗಿ ಒಂದನೇ ತರಗತಿಗೆ ಬಂದರು. ಆದರೆ ಅಲ್ಲಿ ಅವನ ಬಗ್ಗೆ ತಿಳಿಸುವ ಟೀಚರ್ ಯಾರೂ ಇರಲಿಲ್ಲ. ಆದರೆ ಅಲ್ಲೇ ಇದ್ದ ವಯಸ್ಸಾದ ವಾಚ್ ಮನ್ ನ ಕರೆದು ರಾಹುಲನ ಬಗ್ಗೆ ಅವನಿಗೇನಾದರೂ ತಿಳಿದಿರಬಹುದೆಂದು ಕೇಳಿದಾಗ ಅವನು ಈಗಲೂ ನಮ್ಮ school ನಲ್ಲೇ ಇದ್ದಾನೆ ಮೇಡಂ ಅಂದ. ಹಾಗಾದರೆ ಅವನ ಮನೆ ಎಲ್ಲಿದೆ ಗೊತ್ತಾ ಅಂದಾಗ ಗೊತ್ತು ಅವನ ಅಪ್ಪಾನೂ ನನಗೆ ಚೆನ್ನಾಗಿ ಗೊತ್ತು ಅಂದ. ಹಾಗಾದರೆ ನಾಳೆ ನಮ್ಮ school ಗೆ ಬಂದು ನನ್ನ ನೋಡಲು ಹೇಳು ಅಂದಾಗ ಆಯ್ತು ಅಂದ. ಮಾರನೇ ದಿನ ಹೇಳಿದಂತೆ ಕರೆದುಕೊಂಡು ಬಂದಿದ್ದ. ಅವನನ್ನ ನೋಡಿದರೆ ಹೆದರಿಕೆ ಆಗುವಹಾಗೆ ಇದ್ದ. ಆದರೆ ಕೈ ಕಟ್ಟಿ ಕೊಂಡು ವಿನಯದಿಂದ ಗೇಟ್ ಬಳಿಯೇ ನಿಂತಿದ್ದನ್ನು ನೋಡಿ ಅಲ್ಲೇ ಇದ್ದ ಮರದ ಕೆಳಗೆ ಕರೆದು ಮಾತನಾಡಿಸಿದರು. ಹೆಂಡತಿ ಇವನಜೊತೆ ಇಲ್ಲ ಅಂತ ತಿಳಿಯಿತು. ಅವಳನ್ನ ಕೆಟ್ಟದಾಗಿ ಬೈಯ್ಯಲು ಇದು ಶಾಲೆ ಅಂತ ಎಚ್ಚರಿಸಿ ಅವನ ಮೊಬೈಲ್ ನಂಬರ್ ತೆಗೆದು ಕೊಂಡುಕಳುಹಿಸಿಕೊಟ್ಟರು. 

ಸಂಜೆ school ಮುಗಿದನಂತರ ರಾಹುಲ್ ನನ್ನೇ ಹಿಂಬಾಲಿಸಿ ಹೊರಟರು. ದೂರದಲ್ಲಿದ್ದ ಒಂದು ಚರ್ಚ್ ಗೆ ಸೇರಿಕೊಂಡಂತಿದ್ದ ಒಂದು ಪುಟ್ಟಮನೆ ಒಳಗೆ ಹೋಗಿ ಅವನ ಪುಸ್ತಕದ ಬ್ಯಾಗ್ ಇಟ್ಟು ಹೊರಬಂದವನೇ ಪೊರಕೆ ತೆಗೆದುಕೊಂಡು ಚರ್ಚ್ ಒಳಗೆ ಹೋದ ಈಗ ಹತ್ತಿರಬಂದು ಮರದ ಹಿಂದೆ ನಿಂತು ನೋಡಿ ಅವನು ಬ್ಯಾಗ ಇಟ್ಟುಬಂದ ಮನೆ ಒಳಗೆ ಹೋಗಿ ನೋಡಿದರೆ ಒಳಗೆ ವಯಸ್ಸಾದ ಮುದುಕಿ ಹರಕು ಗೋಣಿ ಚೀಲಗಳಲ್ಲಿ ಮುದುರಿಕೊಂಡು ನರಳುತ್ತಾ ಮಲಗಿದ್ದಾಳೆ. ಮಾತನಾಡಿಸಲು ಪ್ರಯತ್ನಿಸಿದರೂ ಉತ್ತರವಿಲ್ಲ. ಹೊರಗೆ ಬಂದಾಗ ಅಲ್ಲಿಗೆ ತಮ್ಮ ಶಾಲೆಯ ವಾಚ್ ಮ್ಯಾನ್ ಕಂಡ. ಆದರೆ ಅವನು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಇವರ ಮುಂದೆ ಬಂದು ಕೈಮುಗಿದು ತೊಪ್ಪನೆ ನೆಲಕ್ಕೆ ಬಿದ್ದ .ಅಷ್ಟರಲ್ಲಿ ಬೆಳಗ್ಗೆ ಬಂದಿದ್ದ ರಾಹುಲ್ ತಂದೆಯೂ ಬಂದ ಅವನ ಸ್ಥಿತಿ ಇನ್ನೂ ಕೆಟ್ಟದಾಗಿತ್ತು ತೂರಾಡುತ್ತಾ ಅವನೂ ಕೆಳಗೆ ಬಿದ್ದ. ಚರ್ಚ್ ನ ಫಾದರ್ ಒಬ್ಬರು ಒಳಗೆ ಹೋಗುವುದು ಕಂಡು ಮಾತನಾಡಿಸಿ ತಮ್ಮ ಬಗ್ಗೆ ಹೇಳಿ ಕೊಂಡರು. ಆಗ ಇವರನ್ನ ಒಳಗೆ ಕರೆದು ಕೂಡಿಸಿ ರಾಹುಲ್ ನ ಕರೆದರು. ಪೊರಕೆ ಅಲ್ಲೇ ಇಟ್ಟು ಬಂದು ನಿಂತ. ಆಗ ಅವರು ಹೇಳಿದ್ದು, ನೋಡಿ ಯಾರೂ ಇವನಿಗೆ ಇಷ್ಟು ದೊಡ್ಡ ಜಾಗ ಗುಡಿಸಬೇಕೆಂದು ಹೇಳಿಲ್ಲ.


ಆದರೆ ಬಹಳ ದಿನಗಳಿಂದ ಅವನೇ ಅಪ್ಪನ ತರಹೆ ಈ ಕೆಲಸ ಮಾಡುತ್ತಾನೆ ಎಂದಾಗ ಇವನ ಅಪ್ಪ ಇಲ್ಲಿ ಕಸಗುಡಿಸುವ ಕೆಲಸ ಮಾಡುತ್ತಿದ್ದ ಎಂದು ಅರ್ಥವಾಯ್ತು. ಆ ಫಾದರ್ ಹೇಳಿದರು ರಾಹುಲ್ ನಿಜವಾಗಿಯೂ ಬುದ್ದಿವಂತ ಆದರೆ ಮನೆ ಪರಿಸ್ಥಿತಿ ಅವನನ್ನ ಹಾಗೇ ಮಾಡಿದೆ. ಅಪ್ಪ ಕುಡುಕ. ಅವನ ಕಾಟ ತಡೆಯಲಾಗದೆ ಹೆಂಡತಿ ಮನೆ ಬಿಟ್ಟು ಹೋದ್ಲು. ಇವನ ತಾಯಿಯ ತಾಯಿ ಅಜ್ಜಿ ಇಲ್ಲೇ ಇದಾರೆ ಅವರಿಗೂ ಹತ್ತಾರು ಖಾಯಿಲೆ. ಈಗ ಆ ಅಜ್ಜಿಗೆ ಇವನೇ ಆಸರೆ. ಎಲ್ಲಾ ಕೆಲಸ ಮಾಡಿ ಶಾಲೆಗೆ ಬರ್ತಾನೆ. ಆಟ ಆಡೋಕ್ಕೂ ಇವನಿಗೆ ಸಮಯವಿಲ್ಲ. ಇವನ ಬಗ್ಗೆ ನೀವು ಇಷ್ಟೊಂದು ಕಾಳಜಿ ವಹಿಸಿದ್ದೀರಿ ಏನು ಸಹಾಯ ಬೇಕಾದ್ರೂ ನಾನು ಮಾಡ್ತೀನಿ ಅಂದಾಗ.


ಅಲ್ಲೇ ನಿಂತಿದ್ದ ಅವನನ್ನೇ ಕೇಳಿದ್ರು ಏನೂ ಬೇಕು ಅಂತ. ಅದಕ್ಕೆ ಅಮ್ಮ ಬೇಕು ನನಗೆ ಇನ್ನೇನೂ ಬೇಡ ಅಂದ. ಮಾರನೇ ದಿನವೇ ಫಾದರ್ lady missing ಅಂತ paperಗಳಲ್ಲಿ 

ಜಾಹಿರಾತು ಕೊಟ್ಟು ಫೋಟೋ ಹಾಕ್ಸಿದ್ರು. ಒಂದುವಾರದಲ್ಲೇ ಅದೇ ಊರಲ್ಲಿ ಅವಳು ಇರೋ ವಿಷಯ ಯಾರಿಂದಲೋ ತಿಳಿಯಿತು. ಫಾದರ್ ಹುಡುಕಿಕೊಂಡು ಹೋದರು. ಆದರೆ ಅವಳು ಮತ್ತೊಬ್ಬ ಕಾರ್ಪೋರೇಶನ್ ಮೇಸ್ತ್ರಿ ಯನ್ನ ಮದುವೆ ಮಾಡಿಕೊಂಡು ಸುಖವಾಗಿ ಇರೋದು ನೋಡಿ ಏನೂ ಮಾತನಾಡದೆ ಬಂದು ಜೂಲಿಯೆಟ್ ಟೀಚರ್ ಗೆ ತಿಳಿಸಿದರು. ಆಗ ಅವನನ್ನ ಮದುವೆ ಆಗಿಲ್ಲದ ಅವರೇ ತಮ್ಮ ಮನೆಯಲ್ಲಿ ಇಟ್ಟುಕೊಂಡು ಅವನ ವಿಧ್ಯಾಭ್ಯಾಸಕ್ಕೆ ಸಹಾಯ ಮಾಡಿದರು. ಪ್ರತಿದಿನ ಚರ್ಚ್ ಗೆ ಹೋಗಿ ಕಸಗುಡಿಸುವುದು ಮಾತ್ರ ಮರೆಯಲಿಲ್ಲ. ಒಂದು ದಿನ ಅಜ್ಜಿ ಸತ್ತ ಸುದ್ದಿ ತಿಳಿಯಿತು. ಇಡೀ ದಿನ ಅಳುತ್ತಿದ್ದ. ಫಾದರ್ ಮತ್ತು ಜೂಲಿಯೆಟ್ ಇಬ್ಬರ ಸಹಾಯದಿಂದ ಅದೇ ರಾಹುಲ್ ಇಂದು ಕೇರಳದ ಒಬ್ಬ ದಕ್ಷ ಡೆಪ್ಯುಟಿ ಕಮಿಷನರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾನೆಂದರೆ ನಂಬಲೇ ಬೇಕು.


Rate this content
Log in

More kannada story from Kalpana Nath

Similar kannada story from Drama