STORYMIRROR

Kalpana Nath

Drama Others

4  

Kalpana Nath

Drama Others

ನಿಗೂಢ ಭಾಂದವ್ಯ

ನಿಗೂಢ ಭಾಂದವ್ಯ

2 mins
59



ಬಹಳ ಹಿಂದೆ ಅಂದರೆ ಎಲ್ಲ ಕಡೆ ಲ್ಯಾಂಡ್ ಫೋನ್ ಗಳು ಮಾತ್ರ ಇದ್ದಕಾಲ. ಒಬ್ಬರ ಮನೆಯಲ್ಲಿ ಲ್ಯಾಂಡ್ ಫೋನ್ ಇದೆ ಅಂದರೆ ಅದನ್ನ ಮಕ್ಕಳಿಗೆ ದೊರೆಯದ ಹಾಗೆ ಎತ್ತರದಲ್ಲಿ ಇಟ್ಟಿರುವುದು, ಕೆಲವರು ಬೇರೆಯವರು ಉಪಯೋಗಿಸಬಾರದೆಂದು ಅದಕ್ಕೆ ಒಂದು ಬೀಗ ಹಾಕಿ ಇಡುವುದು.ಧೂಳಿನಿಂದ ಕಾಪಾಡಲು ಬಟ್ಟೆಯಿಂದ ಮುಚ್ಚಿಡುವುದು, ಹೀಗೆಲ್ಲಾ ಇದ್ದ ಕಾಲ. ಒಂದು ಮನೆಯಲ್ಲಿ ಅಪ್ಪ ಅಮ್ಮ ಮತ್ತು ಐದು ವರ್ಷದ ಒಂದು ಹುಡುಗ ಇದ್ದರು.ದೊಡ್ಡವರು ಒಂದು ನಿರ್ದಿಷ್ಟ ನಂಬರ್ ಗೆ ಯಾವಾಗಲೂ ಕಾಲ್ ಮಾಡಿ ಬಸ್ಸು ರೈಲು ಬರುವ ಸಮಯ ಮತ್ತು ಹೋಗುವ ಸಮಯ ಅಷ್ಟೇ ಅಲ್ಲದೆ ಬೇರೆ ಏನು ವಿಷಯವಾದರೂ ಪ್ರಶ್ನೆ ಕೇಳಿ ಉತ್ತರ ಪಡೆಯುತ್ತಿದ್ದರು. ಆ ಬಾಲಕ ಇದನ್ನ ಸೂಕ್ಷ್ಮವಾಗಿ ಗಮನಿಸುತ್ತಿದ್ದ. ಒಂದು ದಿನ ಅವರ ತಂದೆ ಯಾವ ನಂಬರ್ ಗೆ ಮಾಡುತ್ತಾರೆ ಎಂದು ತಿಳಿದು , ಯಾರೂ ಇಲ್ಲದ ಸಮಯದಲ್ಲಿ ಅದೇ ನಂಬರ್ ಗೆ ಕಾಲ್ ಮಾಡಿದ. ಆ ಕಡೆಯಿಂದ ನಮಸ್ಕಾರ ಏನು ಸಹಾಯ ಬೇಕು ಅಂತ ಕೇಳಿತು ಒಂದು ಹೆಣ್ಣುಧ್ವನಿ. ಯಾರೋ ಬಹಳ ಹತ್ತಿರದವರು ಮಾತನಾಡುತ್ತಿದ್ದಾರೆಂದು ತಿಳಿದು, ಅಪ್ಪ ಅಮ್ಮ ಹೊರಗೆ ಹೋಗಿದ್ದಾರೆ ನನ್ನ ಜೊತೆ ಆಟ ಆಡಲು ಯಾರೂ ಇಲ್ಲ ಅಂತ ಹೇಳಿದ. ಅದಕ್ಕೆ ನಕ್ಕು ಆಯ್ತು ಅಪ್ಪನಿಗೆ ಹೇಳು ಅಂತ ಹೇಳಿತು ಆ ಧ್ವನಿ. ಅಂದಿನಿಂದ ಪ್ರತಿದಿನ ಅದೇ ನಂಬರ್ ಗೆ ಫೋನ್ ಮಾಡುವುದು ಇವರ ಮನೆ ವಿಷಯ ಎಲ್ಲಾ ಹೇಳುವುದು ಹೀಗೆ ನಡೆದಿತ್ತು ಇಬ್ಬರ ಸಂವಾದ. 


ಅವರಿಬ್ಬರೂ ಎಷ್ಟು ಆತ್ಮೀಯಯರಾದರೆಂದರೆ ಒಂದು ದಿನ ಈ ಬಾಲಕನ ಧ್ವನಿ ಕೇಳದೆ ಇದ್ದರೆ ಬಹಳ ಕಷ್ಟ ವಾಗುತ್ತಿತ್ತು. ಹಾಗೆಯೇ ಈ ಬಾಲಕನಿಗೂ ಒಂದು ಸಾರಿಯಾದರೂ ಆ ಹೆಂಗಸಿನ ಜೊತೆ ಮಾತನಾಡಲೇ ಬೇಕು. ಒಂದು ವಾರ ಕಾಲ ಫೋನ್ ಕೆಟ್ಟು ಹೋಗಿತ್ತು ಮಾತನಾಡಲಾಗಿಲ್ಲ. ಒಂದು ದಿನ ಈ ಬಾಲಕನಿಗೆ ವಿಪರೀತ ಜ್ವರ. ಏನು ಔಷಧ ಕೊಟ್ಟರೂ ಕಡಿಮೆಯಾಗಿಲ್ಲ. ರಾತ್ರಿ ಆದರೆ ಜ್ವರ ಹೆಚ್ಚು ಆಗುತ್ತಿತ್ತು. ಹತ್ತಿರದ ಆಸ್ಪತ್ರೆಗೆ ಕರೆದೊಯ್ದು ಅಡ್ಮಿಟ್ ಮಾಡಿದ್ದಾರೆ. ಅಲ್ಲಿ ಇದ್ದ ಒಬ್ಬ ದಾದಿಯ ಹತ್ತಿರ ಹೇಳಿದ. ಒಂದು ನಂಬರ್ ಕೊಡ್ತೀನಿ ಸಿಸ್ಟರ್ . ಅವರಿಗೆ ಫೋನ್ ಮಾಡಿ ನಾನು ಆಸ್ಪತ್ರೆ ಯಲ್ಲಿದ್ದೀನಿ ಅಂತ ಹೇಳಿ ಪ್ಲೀಸ್. ಹಾಗೇ ಇದು ಅಪ್ಪ ಅಮ್ಮನಿಗೆ ಗೊತ್ತಾಗಬಾರದು ಎಂದ. ಆ ದಾದಿಗೆ ಆಶ್ಚರ್ಯ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಏನು ರಹಸ್ಯ ಕಾಪಾಡಿಕೊಂಡಿದ್ದಾನೆ ಅದೂ ಅಪ್ಪ ಅಮ್ಮನಿಗೆ ತಿಳಿಯದ ಹಾಗೇ ಅಂತ ಅವರಿಗೂ ಕುತೂಹಲ. ಅದಕ್ಕಾಗ

ಿಯೇ ನಂಬರ್ ತೊಗೊಂಡು ಫೋನ್ ಮಾಡಿದರು. ಆ ಕಡೆಯಿಂದ ಮಾತನಾಡಿದವರು ಯಾವ ಆಸ್ಪತ್ರೆ ಯಾವ ವಾರ್ಡ್ ಅಂತ ಎಲ್ಲಾ ತಿಳಿದುಕೊಂಡು ನಾನು ಅವನನ್ನ ನಾಳೆ ಬಂದು ನೋಡ್ತಿನಿ ಅಂತ ಹೇಳಿದರು. ಈ ವಿಷಯ ಹೇಳಿದ ತಕ್ಷಣ ಮೂರುದಿನದಿಂದ ಇಲ್ಲದ ಶಕ್ತಿ ಎಲ್ಲಿಂದ ಬಂತೋ ಎದ್ದುಕುಳಿತ.ಔಷಧಿ ಬೇಡವೆಂದು ಹಟಮಾಡುತ್ತಿದ್ದವನು ಕೇಳಿ ತೆಗೆದುಕೊಂಡ. ಬ್ರೆಡ್ ಬೇಡ ಅಂದವನು ಹಾಲಲ್ಲ ಅದ್ದಿ ತಿಂದ. ಆ ದಾದಿಗೆ ನಿಜಕ್ಕೂ ಏನೋ ಚಮತ್ಕಾರ ನಡೆದಿದೆ ಎನಿಸಿತು. ನಗುತ್ತಾ ಅವನೊಂದಿಗೆ ಮಾತನಾಡುವಾಗ ಅವರನ್ನ ನೀನು ನೋಡಿದ್ದೀಯಾ, ಅವರು ಯಾರು ಅಂತ ಕೇಳಿದಾಗ ಅವನು ಹೇಳಿದ್ದು ಇಲ್ಲಾ ಆಂಟಿ ಯಾರೋ ಗೊತ್ತಿಲ್ಲ ನಾನು ಅವರ ಮುಖವನ್ನೇ ನೋಡಿಲ್ಲ ಆದರೆ ದಿನವೂ ಫೋನ್ ನಲ್ಲೇ ಮಾತನಾಡುತ್ತೇವೆ. ಒಂದು ದಿನ ಮಾತನಾಡದೆ ಇದ್ದರೂ ಮಾರನೇ ದಿನ ಏಕೆ ನನ್ನ ಮೇಲೆ ಕೋಪಾನಾ ಅಂತ ಅತ್ತೇ ಬಿಡ್ತಾರೆ ಅಂದ. 


ಮಾರನೇ ದಿನ ಆ ಹೆಂಗಸು ಬಂದು ಇವನನ್ನ ನೋಡಿ ತಲೆಯಿಂದ ಕಾಲಿನವರೆಗೂ ಮುಟ್ಟಿ ಹೆದರಬೇಡ ಹುಷಾರಾಗುತ್ತಿಯೇ ಎಂದಾಗ ಅವರಿಬ್ಬರ ಕಣ್ಣಲ್ಲೂ ನೀರು. ಆಗ ಅಲ್ಲಿ ದಾದಿ ಮಾತ್ರ ಇದ್ದರು. ಯಾರೋ ಲೇಡಿ ಡಾಕ್ಟರ್ ನೋಡ್ತಿರಬಹುದು ಅಂತ ಅವನ ತಾಯಿ ಹೊರಗೇ ಇದ್ದರು. ದಾದಿಯೇ ಹೋಗಿ ಅವರನ್ನ ಕರೆದು ಇವರಿಬ್ಬರ phone ಸಂಭಂದ ಹೇಳಬೇಕೆನಿಸಿತು ಆದರೆ ತಕ್ಷಣ ಅವನು ಹೇಳಿದ್ದು ಜ್ಞಾಪಕ ಬಂದು ಸುಮ್ಮನಾದರು. ಹೊರಗೆ ಹೋಗಿದ್ದ ಆ ಹೆಂಗಸು ಮತ್ತೆ ಒಳಗೆ ಬಂದು ಎರಡು ದೊಡ್ಡ ಚಾಕೋಲೇಟ್ ಕೊಟ್ಟು ಹುಷಾರಾದ ಮೇಲೆ ತಿನ್ನುವಂತೆ ಹೇಳಿ ಹೊರಟರು. ಈ ಹೆಂಗಸು ಹೊರಡುವ ವೇಳೆಗೆ ಸರಿಯಾಗಿ ಎದುರಿಗೆ ಆ ಬಾಲಕನ ತಂದೆ ಬಂದರು. ಏನು ನೀನು ಇಲ್ಲಿ ಯಾರಿದ್ದಾರೆ ಅಂತ ಹೆಂಗಸನ್ನ ಕೇಳಿದಾಗ ನನಗ ಪರಿಚಯದವರ ಮಗ ಅಡ್ಮಿಟ್ ಆಗಿದ್ದ ನೋಡಲು ಬಂದಿದ್ದೆ ಎಂದರು. ಹೀಗೆ ಹೇಳಿದಾಗ, ನಾನು ನನ್ನ ಮಗನನ್ನ ಅಡ್ಮಿಟ್ ಮಾಡಿದ್ದೀನಿ ಅಂತ ಹೇಳಿದ.ಹೆಂಡತಿಗೆ ಆ ಹೆಂಗಸಿನ ಬಗ್ಗೆ ಏನೂ ಹೇಳಲಿಲ್ಲ. ಆಫೀಸ್ ನವರಾದರೆ ಇವಳು ನನ್ನ ಪತ್ನಿ ಅಂತ ಹೇಳದೆ ಇರಲ್ಲ. ಇವರ್ಯಾರೋ ಆಮೇಲೆ ಕೇಳಿದರಾಯ್ತು ಅಂತ ಸುಮ್ಮನಾದರು. ಅಲ್ಲೇ ನಿಂತು ಇವರಿಬ್ಬರೂ ಯಾವ ಬಾಲಕನ ಬಳಿ ಹೋಗುತ್ತಾರೆಂದು ನೋಡಿದಳು ಆ ಹೆಂಗಸು. ಅವಳಿಗೆ ಆಶ್ಚರ್ಯ. ಅದೇ ಬಾಲಕ. ಮತ್ತೆ ಒಳಗೆ ಬಂದಳು ಈಗ ಬಾಲಕನ ತಂದೆ ಬೆವೆತು ಹೋದ.ಕಾರಣ ಆ ಬಾಲಕನ ನಿಜವಾದ ತಾಯಿ ಇದೇ ಹೆಂಗಸು. ಮತ್ತು ಅವಳು ಇವನ ಮೊದಲ ಹೆಂಡತಿ. ಎರಡನೆಯ ಹೆಂಡತಿಗೆ ಮಗುವಿಗೆ ಜನ್ಮ ಕೊಟ್ಟು ಸತ್ತು ಹೋಗಿದ್ದಾಳೆಂದು ಸುಳ್ಳು ಹೇಳಿ ಮದುವೆಯಾಗಿದ್ದ. ಈಗ ಸತ್ಯ ಬಯಲಾಗಿದೆ.


Rate this content
Log in

Similar kannada story from Drama