ಮೂರು ವಜ್ರ ಗಳು
ಮೂರು ವಜ್ರ ಗಳು


ಬಹಳ ಸುಂದರ ಪಕ್ಷಿಯೊಂದು ಮರದ ಮೇಲೆ ಕುಳಿತಿತ್ತು. ಪಕ್ಕದ ಮನೆಯ ಮೇಲಿಂದ ಒಬ್ಬ ಇದನ್ನು ನೋಡಿದ. ಕುತೂಹಲದಿಂದ ಹತ್ತಿರ ಹೋಗಿ ನೋಡಿದಾಗ ಹೇಗಾದರೂ ಮಾಡಿ ಹಿಡಿದು ಪಂಜರದೊಳಗೆ ಇಟ್ಟುಕೊಳ್ಳಬೇಕು ಎಂದು ಆಸೆಯಾಯ್ತು. ಮೆತ್ತಗೆ ಮರ ಹತ್ತಿ ಹೇಗೋ ಹಿಡಿದ. ಸಂತೋಷದಿಂದ ಪಂಜರದಲ್ಲಿ ಕೂಡಿಹಾಕಿದ . ಆ ಪಕ್ಷಿ ಎಷ್ಟು ಸುಂದರವಾಗಿತ್ತೋ ಅಷ್ಟೇ ಮಾತನಾಡುವ ಚಮತ್ಕಾರವನ್ನು ಕಲಿತಿತ್ತು. ಪಕ್ಷಿ ಹೇಳಿತು ನನ್ನನ್ನ ಬಿಟ್ಟರೆ ನಿನಗೆ ಮೂರು ಬೆಲೆಬಾಳುವ ವಜ್ರಗಳನ್ನು ಕೊಡುತ್ತೇನೆ. ಪಂಜರದಿಂದ ಹೊರಬಂದಾಗ ಒಂದು ಮರದ ಮೇಲೆ ಕೂತಾಗ ಮತ್ತೊಂದು ಮೇಲೆ ಹಾರಿದಾಗ ಮೂರನೆಯ ವಜ್ರ ಕೊಡುತ್ತೇನೆ. . ನೋಡು ಜೀವನದಲ್ಲಿ ಸುಖವಾಗಿರಬಹುದು .ನಿಜವಿರಬಹುದೆಂದು ನಂಬಿ
ಬಿಟ್ಟಾಗ ಮನೆಯ ಬಾಗಿಲ ಮೇಲೆ ಕೂತು ಹೇಳಿತು. ಮೊದಲನೆಯದು, ಬೆಣ್ಣೆಯಂತಹ ಮಾತುಗಳಿಗೆ ಮರುಳಾಗಬೇಡ , ಅಲ್ಲಿಂದ ಹಾರಿ ಮೊದಲು ಕುಳಿತಿದ್ದ ಮರದಲ್ಲಿ ಕುಳಿತು ಹೇಳಿತು. ಶ್ರಮವಿಲ್ಲದೆ ಯಾವುದೂ ದೊರೆಯದು .ಅಲ್ಲಿಂದ ಹಾರಿ ಮೇಲೆ ಮೇಲೆ ಹೋಗಿ ತಕ್ಷಣ ಕೆಳಗೆ ಬಂದು ಹೇಳಿತು ನೀನೊಬ್ಬ ಮೂರ್ಖ. ನಾನು ಪಂಜರದಲ್ಲಿದ್ದಾಗ ನನ್ನ ಕಾಲನ್ನು ನೀನು ಸರಿಯಾಗಿ ಗಮನಿಸಿದ್ದರೆ ಮೂರು ಬೆಲೆಬಾಳುವ ವಜ್ರಗಳು ಇತ್ತು. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಯಾರಿಗೂ ತಿಳಿಯದ ಹಾಗೆ ತೆಗೆದುಕೊಂಡು ಹೋಗಲು ನನ್ನನ್ನ ಕೆಲವರು ಉಪಯೋಗಿಸಿಕೊಳ್ಳುತ್ತಿದ್ದಾರೆ. ಬರ್ತೀನಿ ಅಂತ ಹಾರಿಹೋಯಿತು.ಕೈಗೆ ಬಂದ ತುತ್ತು ಬಾಯಿಗೆ ಇಲ್ಲ ದಂತಾಯ್ತು