ದೈವ ಭಕ್ತ
ದೈವ ಭಕ್ತ


ಒಂದು ಪುಟ್ಟ ಗುಡಿಸಿಲು . ಇದರಲ್ಲಿ ಒಬ್ಬ ದೈವ ಭಕ್ತ ಮತ್ತು ಅವನ ಹೆಂಡತಿ ವಾಸವಾಗಿದ್ದರು.ಇವನು ತೀರ ಬಡವ. ಆದರೆ ದೈವವನ್ನು ಪೂರ್ಣ ನಂಬಿ ಬದುಕುತ್ತಿದ್ದ. ಹೆಂಡತಿಯಾದರೋ ಮದುವೆಯಾದ ದಿನದಿಂದ ಕಣ್ಣೀರಲ್ಲಿ ಕೈ ತೊಳೆದು ಬಳಲಿದ್ದಳು. ಇವಳಿಗೆ ಕಡು ಬಡತನದ ಕಾರಣ ದೇವರಲ್ಲಿ ನಂಬಿಕೆಯೇ,ಹೋಗಿತ್ತು.ಒಂದು ದಿನ ಜೋರುಮಳೆ ಯಾರೋ ಬಾಗಿಲ ತಟ್ಟಿ ಒಳಗೆ ಬರಲು ಅನುಮತಿ ಕೋರಿದರು. ಒಳಗೆ ಒಬ್ಬ ನಿಲ್ಲಲು ಮಾತ್ರ ಸ್ಥಳ ಇದ್ದುದರಿಂದ ಹೇಗೋ ಬಂದು ನಿಲ್ಲಲು ಹೇಳಿದ.ಮತ್ತೆ ಯಾರಾದರೂ ಬಂದರೆ ನನಗೆ ಕಷ್ಟ ಅಂತ ಬಾಗಿಲು ಹಾಕಿ ಬಂದವನು ಅಲ್ಲೇ ನಿಂತ. ಮತ್ತೆ ಬಾಗಿಲು ತಟ್ಟಿದ ಹಾಗಾಗಿ ನಿಂತಿದ್ದವನು ಇಣುಕಿ ನೋಡಿ ಒಳಗೆ ಸ್ಥಳವಿಲ್ಲ ವೆಂದು ಹೇಳಿದ. ಇದನ್ನು ಕಂಡು ಆ ದೈವ ಭಕ್ತ ಒಳಗೆ ಬರಲಿ ಹೇಗೋ ಆಗುತ್ತೆ ಅಂತ ಒಳಗೆ ಕರೆದು ಅವನ ಪಕ್ಕದಲ್ಲಿ ಕುಳಿತುಕೊಳ್ಳಲು ಹೇಳಿದ. ಮತ್ತೆ
ಕೆಲ ಸಮಯದಲ್ಲಿ ಯಾರೋ ಬಂದರೆಂದು ನೋಡಿದರೆ ಒಂದು ಕತ್ತೆ ಬಾಗಿಲ ಬಳಿ ನಿಂತಿದೆ . ಮಳೆಯಲ್ಲೇ ತಾನು ಹೊರಗೆ ಬಂದು ಒಳಗೆ ಬರಲಿ ಎಂದು ಕಿವಿ ಹಿಡಿದು ಎಳೆದರೂ ಒಳಗೆ ಬರಲಿಲ್ಲ.ಇವನ ಹೆಂಡತಿಗಂತೂ ಬಹಳ ಕೋಪ ಬಂದಿತ್ತು.ಅಲ್ಲಿದ್ದವರುಸಹ ನಮಗೇ ನಿಲ್ಲಲು ಸ್ಥಳ ಇಲ್ಲ ಅದ ನ್ನೇಕೆ ಒಳಗೆ ಕರಿಯುತ್ತೀರಿ ಅಂತ ಕೂಗಾಡಿದರು.ಯಾರ ಮಾತೂ ಕೇಳದ ಮತ್ತಷ್ಟು ಪ್ರಯತ್ನ ಮಾಡಿದ.ಆದರೆ ಅದು ಹೊರಗೆ ಓಡಿತು , ಅದರ ಹಿಂದೆಯೇ ತಾನೂ ಓಡಿ ಕೊನೆಗೆ ಒಂದು ಮರದ ಕೆಳಗೆ ನಿಂತುಕೊಂಡಾಗ ತಾನೂ ನಿಂತ. ಕೆಲವೇ ಸಮಯದಲ್ಲಿ ಭಾರೀ ಸಿಡಿಲಿನ ಶಬ್ದದೊಂದಿಗೆ ದೂರದಲ್ಲಿ ಕಾಣುತ್ತಿದ್ದ ಅವನ ಗುಡಿಸಲು ಧಗಧಗನೆ ಉರಿದು ಹೋಯ್ತು.ಅಲ್ಲೇ ನಿಂತು ಬೆಚ್ಚಿಬಿದ್ದ. ಹೆಂಡತಿಯ ಜೊತೆ ಅದರಲ್ಲಿದ್ದವರು ಸುಟ್ಟು ಭಸ್ಮವಾಗಿ ಹೋದರು.ದೇವರೇ ಕತ್ತೆಯ ರೂಪ ದಲ್ಲಿ ಬಂದು ತನ್ನ ಪ್ರಾಣ ಉಳಿಸಿದನೆಂದು , ಪಕ್ಕಕ್ಕೆ ತಿರುಗಿ ನೋಡಿದರೆ ಕತ್ತೆ ಕಾಣದಾಗಿತ್ತು.!