murali nath

Children Stories Fantasy Others

4  

murali nath

Children Stories Fantasy Others

ಚತುರ ಗಿಳಿ

ಚತುರ ಗಿಳಿ

1 min
65


 


ಒಬ್ಬ ಪಕ್ಷಿ ಪ್ರಿಯ.ಈತ ದೊಡ್ಡ ವ್ಯಾಪಾರಿಯೂ ಹೌದು.ಹೊರದೇಶಗಳಿಗೆ ವ್ಯಾಪಾರದ ಕಾರಣ ಆಗಾಗ ಹೋಗುತ್ತಿರುತ್ತಾನೆ. ಎಲ್ಲೇ ಹೋದರು ಪಕ್ಷಿಗಳಿಗೆ ಸಂಭಂದಿತ ವಿಷಯಗಳನ್ನ ಅಧ್ಯಯನ ಮಾಡೋದು, ಇಷ್ಟವಾದ ಪಕ್ಷಿಗಳನ್ನು ತಂದು ಸಾಕುವುದು ಇವನ ಹವ್ಯಾಸ.ಒಮ್ಮೆ ಆಫ್ರಿಕಾ ದೇಶಕ್ಕೆ ಹೋದಾಗ ಬಿಡುವಿನ ಸಮಯದಲ್ಲಿ ಗಿಳಿವನ ಒಂದಕ್ಕೆ ಬೇಟಿಕೊಟ್ಟ. ಅಲ್ಲಿ ಒಂದು ಮಾತನಾಡುವ ಗಿಳಿ ಕಂಡು ತನ್ನೊಂದಿಗೆ ಬರುವಾಗ ತಂದಿದ್ದ . ಪ್ರೀತಿಯಿಂದ ಸಾಕಿದ .ಹೊರಗಡೆಯಿಂದ ಬಂದಾಗ ಇದರ ಜೊತೆ ಕೆಲಸಮಯ ಮಾತನಾಡಿದರೆ ಅವನಿಗೆ ನೆಮ್ಮದಿ .ಇವನು ಹೇಳಿದ್ದು ಮಾತ್ರ ಹೇಳದ ಗಿಳಿ, ತಕ್ಕ ಉತ್ತರವನ್ನು ಸಹಾ ಕೊಡುತ್ತಿತ್ತು.ಇದರಿಂದಾಗಿ ಅವನಿಗೆ ಬಹಳ ಅಚ್ಚುಮೆಚ್ಚು. ಒಂದು ದಿನ, ನಾನು ನಿಮ್ಮ ಊರಿಗೆ ನಾಳೆ ಹೋಗುವ ಕಾರ್ಯಕ್ರಮ ಇದೆ. ನಿನ್ನ ಕಡೆಯವರು ಯಾರಾದರೂ ಅಲ್ಲೇ ಇರಬಹುದು ಅವರಿಗೆ ಏನಾದರೂ ನಿನ್ನ ಬಗ್ಗೆ ತಿಳಿಸುವುದು ಇದ್ದರೆ ಹೇಳು .ಅವರಿಗೆ ತಿಳಿಸುತ್ತೇನೆ ಎಂದ. ಅದಕ್ಕೆ ಗಿಣಿ ಏನಿಲ್ಲ ನಿನಗೆ ಎಲ್ಲಾ ಗೊತ್ತಿದೆ .ಅಲ್ಲಿ ನನ್ನ ಜೋಡಿ ಗಿಳಿ ಒಂದಿದೆ . ನೀನು ಹೋದ ತಕ್ಷಣ ಬರುತ್ತೆ. ಅದಕ್ಕೆ ಮರಿಯದೆ ಒಂದು ವಿಷಯ ಹೇಳು "ನಿನ್ನಷ್ಟು ಅದು ಅಧೃಷ್ಟಶಾಲಿಯಲ್ಲ ಪಂಜರದಲ್ಲೇ ಜೀವನ" ಅಂತ.


ಅಲ್ಲಿಗೆ ಹೋದಾಗ ಗಿಳಿವನಕ್ಕೆ ಹೋದ ಒಂದು ಗಿಳಿ ಇವನ ಕಂಡೊಡನೆ ಮರದಿಂದ ಹಾರಿ ಬಂದು ಇವನ ಭುಜದ ಮೇಲೆ ಕೂತಾಗ ಕೈಲಿ ಹಿಡಿದು ಅದು ಹೇಳಿದಂತೆ ಹೇಳಿದ ತಕ್ಷಣ ಅದು ಸುತ್ತಿ ಸುತ್ತಿ ತಿರುಗಿ ಕೆಳಗೆ ಬಿದ್ದು ಪ್ರಾಣ ಬಿಟ್ಟಿತು. ಇವನು ಬಹಳ ನೊಂದು ಎತ್ತಿ ಪಕ್ಕದಲ್ಲಿ ಹಾಕಿ ಹೊರಟು ಬಂದ. ಮನೆಗೆ ಬಂದಾಗ ದುಃಖದಿಂದ ನಡೆದ ವಿಷಯ ಗಿಳಿಗೆ ತಿಳಿಸಿದ. ಕೇಳಿದೊಡನೆ ಇದೂ ಸಹ ಅದರಂತೆ ಪಂಜರದೊಳಗೆ ಸುತ್ತಿ ಸುತ್ತಿ ತಿರುಗಿ ಅಲ್ಲೇ ಬಿತ್ತು. ಅಯ್ಯೋ ವಿಷಯ ತಿಳಿಸಿ ಅದನ್ನ ಕೊಂದದ್ದೂ ಅಲ್ಲದೆ, ಪಾಪ ನಾನು ಇದನ್ನೂ ಕೊಂದು ಬಿಟ್ಟೆ ಅಂತ ಬಹಳ ದುಃಖದಿಂದ ಪಂಜರ ದಿಂದ ಹೊರ ತೆಗೆದು ಮನೆಯ ಹಿಂದೆ ಇದ್ದ ಮರದ ಕೆಳಗೆ ಹೂಳಲು ಪಕ್ಕದಲ್ಲಿ ಇಟ್ಟ. ತಕ್ಷಣ ಅದು ಹಾರಿ ಮರದ ಮೇಲೆ ಕೂತು ಹೇಳಿತು . ನೀನು ನನ್ನ ಜೋಡಿಗೆ ಹೇಳಿದಾಗ ಅದು ನನಗೊಂದು ನಿನ್ನ ಮೂಲಕ ಸಂದೇಶ ಕಳಿಸಿತು. ಅಲ್ಲಿ ಅದೂ ಸತ್ತಿಲ್ಲ ಇಲ್ಲಿ ನಾನೂ ಸತ್ತಿಲ್ಲ. ಓಡಿ ಹೋಗಲು ಇದೊಂದು ಉಪಾಯ ಅಷ್ಟೇ , ಧನ್ಯವಾದ ಎಂದು ಹೇಳಿ ಆಕಾಶದಲ್ಲಿ ಹಾರಿ ಹೋಯಿತು. ಇವನು ಪೆಚ್ಚು ಮೋರೆ ಹಾಕಿ ನಿಂತ.



Rate this content
Log in