B K Hema

Drama Fantasy Inspirational

4.8  

B K Hema

Drama Fantasy Inspirational

ಯುಗಾಂತರ

ಯುಗಾಂತರ

6 mins
404



“ಹತ್ತು, ಒಂಭತ್ತು, ಎಂಟು, ಏಳು, ಆರು, ಐದು, ನಾಲ್ಕು, ಮೂರು, ಎರಡು, ಒಂದು ಹೀಗೆ ಕೌಂಟ್ ಡೌನ್ ಮುಗಿಯುತ್ತಿದ್ದಂತೆ ರಾಕೆಟ್ನ ತಳದಲ್ಲಿ ಬೆಂಕಿ ಚಿಮ್ಮಿತು, ಹೊಗೆ ಬಾನೆತ್ತರಕ್ಕೆ ಹರಡಿತು. ಇದರ ನಡುವೆಯೇ ರಾಕೆಟ್ ಶರವೇಗದಲ್ಲಿ ಮುಗಿಲನ್ನು ಸೀಳುತ್ತಾ ಬಾಹ್ಯಾಕಾಶಕ್ಕೆ ನೆಗೆಯಿತು. ರಾಕೆಟ್ನಲ್ಲಿ ಕುಳಿತಿದ್ದ ಶರತ್ನ ಮನಸ್ಸು ಉತ್ಸಾಹದಲ್ಲಿ ತೇಲಾಡುತ್ತಿತ್ತು. ಅನಿರೀಕ್ಷಿತವಾಗಿ ತನಗೊದಗಿದ ಅವಕಾಶಕ್ಕೆ ದೇವರಿಗೆ ಮನದಲ್ಲಿಯೇ ವಂದನೆಯನ್ನು ಸಲ್ಲಿಸುತ್ತ ಕಂಪ್ಯೂಟರಿನ ತೆರೆಯಲ್ಲಿ ಕಾಣುತ್ತಿದ್ದ ಭೂಮಿಯ ದೃಶ್ಯವನ್ನು ನೋಡತೊಡಗಿದ. ಮರ, ಗಿಡ, ಬೆಟ್ಟ, ಸಮುದ್ರಗಳಿಂದ ಸುಂದರವಾಗಿ ಅಲಂಕೃತಗೊಂಡ ವಸುಂಧರೆ ಬಾಹ್ಯಾಕಾಶದಿಂದ ಮೋಹಕವಾಗಿ ಕಾಣುತ್ತಿದ್ದಳು. ಶರತ್ ಬಾಹ್ಯಾಕಾಶದಿಂದಲೇ ತನ್ನ ಭೂಮಿ ತಾಯಿಗೆ ನಮಸ್ಕರಿಸಿದ. ಮಾಡಬೇಕಾಗಿದ್ದ ಸಂಶೋಧನೆಯ ಯೋಜನೆಗಳು ಅವನ ಮುಂದಿತ್ತು. ಅದರ ಮೇಲೆ ಕಣ್ಣಾಡಿಸತೊಡಗಿದ ಅವನು ಅವುಗಳನ್ನು ಕಾರ್ಯಗೊತಗೊಳಿಸುವ ವಿಧಾನಗಳನ್ನು ಆಲೋಚಿಸತೊಡಗಿದ. 

ಶರತ್ ಮೈಕೆಲ್ ಫರ್ನಾಂಡೀಸ್ ರ ಒಬ್ಬನೇ ಮಗ. ಚಿಕ್ಕಂದಿನಿಂದಲೂ ಆಕಾಶ ಕಾಯಗಳ ಬಗ್ಗೆ ಅವನಿಗೆ ತುಂಬಾ ಆಸಕ್ತಿ. ಅವನ ಆಸಕ್ತಿಗೆ ತಕ್ಕಂತೆ ನಾಸಾದಲ್ಲಿ ಅವನಿಗೆ ಕೆಲಸ ಸಿಕ್ಕಿತ್ತು. ತುಂಬಾ ಕಷ್ಟಪಟ್ಟು ದುಡಿದು ಮೇಲೆ ಬಂದಿದ್ದರೂ ಭಾರತೀಯ ಸಂಜಾತನಾದ ಅವನಿಗೆ ಮಹತ್ವಪೂರ್ಣ ಯೋಜನೆಗಳು ಸಿಗುತ್ತಿರಲಿಲ್ಲ. ಇದರಿಂದ ಕೆಲವೊಮ್ಮೆ ಬೇಸರವೂ ಆಗುತ್ತಿತ್ತು. ಇತ್ತೀಚೆಗೆ ನಾಸಾದಲ್ಲಿ ಅನ್ಯ ಗ್ರಹಗಳಲ್ಲಿ ಜೀವಿಗಳ ಇರುವಿಕೆಯ ಬಗ್ಗೆ ಸಂಶೋಧನೆ ಶುರುವಾಗಿತ್ತು. ಇದರ ನಿಟ್ಟಿನಲ್ಲಿ ಸಿರಿಯಸ್ ಎನ್ನುವ ಒಂದು ಗ್ರಹದಲ್ಲಿ ಜೀವಿಗಳು ಇರುವ ಬಗ್ಗೆ ಅಲ್ಪ ಸ್ವಲ್ಪ ಸುಳಿವು ಸಿಕ್ಕಾಗ ನಾಸಾದಿಂದ ಅಲ್ಲಿಗೆ ರೇಡಿಯೋ ತರಂಗಗಳನ್ನು ಕಳುಹಿಸಿ ಅವುಗಳನ್ನು ಸಂಪರ್ಕಿಸುವ ಪ್ರಯತ್ನ ಮಾಡಲಾಗಿತ್ತು. ಅಲ್ಲಿಂದ ತುಂಬಾ ಕ್ಷೀಣವಾಗಿ ಉತ್ತರ ಬಂದಿತ್ತು. ಹಾಗಾಗಿ ನಾಸಾ ಈಗ ಸಿರಿಯಸ್ ಗ್ರಹಕ್ಕೆ ಮಾನವನನ್ನು ಕಳುಹಿಸಿ ಹೆಚ್ಚಿನ ಸಂಶೋಧನೆ ಮಾಡಲು ಆಲೋಚಿಸಿತ್ತು. ಸಿರಿಯಸ್ ಗ್ರಹಕ್ಕೆ ಹೋಗಿ ತಲುಪಲು ಅಂದಾಜು ಒಂದು ಬೆಳಕಿನ ವರ್ಷ ಬೇಕಾಗಿದ್ದರಿಂದ ಯಾವ ವಿಙ್ಙಾನಿಗಳೂ ಈ ಸಂಶೋಧನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಒಪ್ಪಿರಲಿಲ್ಲ. ಹಾಗಾಗಿ ಈ ಅವಕಾಶ ಅನಾಯಾಸವಾಗಿ ಶರತ್ ನ ಪಾಲಾಗಿತ್ತು. ಬಾಹ್ಯಾಕಾಶ ವಿಙ್ಙಾನದಲ್ಲಿ ಏನನ್ನಾದರೂ ಸಾಧಿಸಲೇ ಬೇಕೆಂಬ ಛಲ ತೊಟ್ಟಿದ್ದ ಶರತ್ ಉತ್ಸಾಹದಿಂದಲೇ ಈ ಸಂಶೋಧನೆಗೆ ಒಪ್ಪಿಕೊಂಡಿದ್ದ. ಇಂದು ಸಿರಿಯಸ್ ಗೆ ಹೊರಟಿದ್ದ ರಾಕೆಟ್ ನ ಜೊತೆ ಶರತ್ ಕೂಡ ಹೊರಟಿದ್ದ.

 

ಸಿರಿಯಸ್ ತಲುಪಲು ಇನ್ನೇನು ಕೆಲವೇ ಕ್ಷಣಗಳು ಬಾಕಿ ಇದ್ದವು. ಇದುವರೆಗೂ ಎಲ್ಲವೂ ಯೋಜನೆಯಂತೇ ನಡೆದಿತ್ತು. ಇದ್ದಕ್ಕಿಂದತೆಯೇ ಭಯಂಕರವಾದ ಶಬ್ದ ಕೇಳಿ ಬಂತು. ಏನಾಯಿತೆಂದು ನೋಡುವಷ್ಟರಲ್ಲಿಯೇ ಶರತ್ ಪ್ರಙ್ಞೆ ತಪ್ಪಿದ್ದ. ಶರತ್ ಕಣ್ಣು ಬಿಟ್ಟಾಗ ಒಂದು ಕೋಣೆಯಲ್ಲಿ ಕೂಡಿ ಹಾಕಿರುವ ಹಾಗೆ ಅವನಿಗೆ ಕಂಡಿತು. ಆದರೆ ಅವನ ಕೈ ಅಥವ ಕಾಲುಗಳನ್ನು ಯಾವ ಹಗ್ಗದಿಂದ ಬಂಧಿಸಿರಲಿಲ್ಲ. ಆದರೂ ಅವನಿಂದ ಒಂದಿಂಚೂ ಅಲುಗಾಡಲು ಆಗುತ್ತಿರಲಿಲ್ಲ. ಸಿರಿಯಸ್ ಗ್ರಹದ ಜೀವಿಗಳು ಅವನನ್ನು ಲೇಸರ್ ಕಿರಣಗಳಿಂದ ಬಂಧಿಸಿದ್ದರು. ಅವನಿಗೆ ತಾನು ಎಲ್ಲಿದ್ದೇನೆಂದು ಗೊತ್ತಾಗಲಿಲ್ಲ. ಸ್ವಲ್ಪ ಹೊತ್ತಿನ ನಂತರ ಅವನಿಗೆ ತನ್ನ ಮುಂದಿನ ಗಾಜಿನ ಕೋಣೆಯಲ್ಲಿ ವಿಚಿತ್ರ ಜೀವಿಗಳು ಕಾಣಿಸಿದರು. ದಪ್ಪಗೆ, ಕುಳ್ಳಗೆ ಇದ್ದ ಅವರ ತಲೆಯ ಮೇಲೆ ಆಂಟೆನಾದಂತಹ ಎರಡು ತಂತಿಗಳಿದ್ದವು. ಕಣ್ಣುಗಳ ಜಾಗದಲ್ಲಿ ಗಾಜಿನ ತುಂಡುಗಳಂತೆ ಹೊಳೆಯುವ ಅಂಗಗಳಿದ್ದವು. ಅವರು ನಡೆದಾಡುತ್ತಿರಲಿಲ್ಲ, ಮೇಲೆ ಹಾರಾಡುತ್ತಾ ತಮಗೆ ಬೇಕಾದ ಕಡೆ ಹೋಗುತ್ತಿದ್ದರು.


  ಅವರು ಏನನ್ನೋ ಚಚಿ೯ಸುತ್ತಿರುವಂತಿತ್ತು. ಶರತ್ ಕಿವಿಗೊಟ್ಟು ಆಲಿಸತೊಡಗಿದ. ಆದರೆ ಒಂದು ಪದವೂ ಅವನಿಗೆ ಅರ್ಥವಾಗಲಿಲ್ಲ. ಆದರೂ ಅದರತ್ತಲೇ ಲಕ್ಷ್ಯ ಕೊಟ್ಟು ಆಲಿಸತೊಡಗಿದ. ಅವರು – “ಈ ವಿಜೀ ದಮ್ಮಿಂನ ದುಂಒ ನಕಿಳಬೆ ರ್ಷವ ವರುವಿರದೂ ದುಂಒ ದಂದಿಹಗ್ರ ದೆದಿಂಬ. ರುವಇ ನ್ನುದಅ ಮಿಭೂ, ಥ್ವಿಪೃ ದುಂಎ ರೆತ್ತಾಯುರೆಕ” - ಎಂದು ಮಾತಾಡುತ್ತಿದ್ದರು1. 

ಶರತ್ನಿಗೆ ಈ ಭಾಷೆಯನ್ನು ಎಲ್ಲೋ ಕೇಳಿದ್ದೇನೆಂದು ಅನಿಸತೊಡಗಿತು. ಅವನಿಗೆ ತನ್ನ ಬಾಲ್ಯದ ನೆನಪಾಯಿತು. ಹೌದು, ಈ ಭಾಷೆಯನ್ನು ತನ್ನ ಬಾಲ್ಯದಲ್ಲಿ ಕೇಳಿದ್ದ ನೆನಪು. 


ಶರತ್ ಭಾರತಮಾತೆಯ ಹೆಮ್ಮೆಯ ಕರ್ನಾಟಕದ ಮಡಿಲಲ್ಲಿ ಸುಬ್ಬಾರಾವ್ ಹಾಗೂ ಲಲಿತಮ್ಮ ದಂಪತಿಗಳ ಹಿರಿಯ ಮಗನಾಗಿ ಜನಿಸಿದ್ದ. ಮನೆಯಲ್ಲಿ ಎಲ್ಲರೂ ಕನ್ನಡವನ್ನೇ ಮಾತನಾಡುತ್ತಿದ್ದರು. ಶರತ್ನಿಗೂ ತನ್ನ ಮಾತೃ ಭಾಷೆ ಕಸ್ತೂರಿ ಕನ್ನಡದ ಬಗ್ಗೆ ತುಂಬಾ ಅಭಿಮಾನವಿತ್ತು. ಆದರೆ ತನ್ನ ಹದಿನೈದನೇ ವಯಸ್ಸಿನಲ್ಲಿ ಅಪಘಾತವೊಂದರಲ್ಲಿ ತಂದೆ, ತಾಯಿ ಹಾಗೂ ಸೋದರನನ್ನು ಕಳೆದುಕೊಂಡು ಅನಾಥನಾದಾಗ ಇವರ ಕುಟುಂಬ ಸ್ನೇಹಿತರಾಗಿದ್ದ ಮೈಕೆಲ್ ಫರ್ನಾಂಡಿಸ್ ಅವರು ಇವನನ್ನು ದತ್ತು ತೆಗೆದುಕೊಂಡು ಅಮೆರಿಕಕ್ಕೆ ಹೋಗಿ ನೆಲೆಸಿದ್ದರು. ಭಾರತ ಬಿಟ್ಟು ಬಂದಾಗಿನಿಂದ ಕನ್ನಡ ಭಾಷೆಯನ್ನು ಮರೆತಂತಿದ್ದ ಅವನಿಗೆ ಸಿರಿಯಸ್ನ ಜೀವಿಗಳು ಮಾತಾಡುತ್ತಿರುವುದು ಕನ್ನಡದಂತೆ ಕೇಳಿಸುತ್ತಿತ್ತು. ಗಮನವಿಟ್ಟು ಕೇಳಿದಾಗ ಅದು ಕಸ್ತೂರಿ ಕನ್ನಡವೇ ಎಂದು ಮನವರಿಕೆಯಾಯಿತು. ಆದರೂ ಅವರು ಏನು ಮಾತನಾಡುತ್ತಿದ್ದಾರೆಂದು ಅವನಿಗೆ ಗೊತ್ತಾಗಲಿಲ್ಲ. ಈ ಒಗಟನ್ನು ಬಿಡಿಸಲೇಬೇಕೆಂದು ಶರತ್ ಮತ್ತಷ್ಟು ಗಮನವಿಟ್ಟು ಕೇಳತೊಡಗಿದ. ನಿಧಾನವಾಗಿ ಅವನಿಗೆ ಅವರ ಮಾತುಗಳ ಅರ್ಥ ತಿಳಿಯತೊಡಗಿತು. ಅವರು ಹೇಳುತ್ತಿದ್ದರು – “ರುವಇ ನ್ನುಮ್ಮತ ವುತಾ ರುಷ್ಯನುಮ ದುಂಎ ರೆತ್ತಾಳ್ಳುಕೊದುರೆಕ. ಲ್ಲಿಯಮಿಭೂ ದೇಲ್ಲರವಇ ನ್ನೂಇ ರತಕ್ಷಾಂಲ ರೂದ್ದಳಿಗವಿಜೀ ರುವಇ ಮ್ಮತ ಗಿಕ್ಕಾರ್ಥಸ್ವಾ ನ್ನೂವಲ್ಲಎ ಮ್ಮತ ಡುಕೊಂಟ್ಟುಲ್ಲಿದತಡಿಹಿ ಲವಕೇ ವೇತಾ ಲುಯರೆವದುಮುಂ ರೆತ್ತಾಡುನೋ. ರತಇ ನ್ನೂಳಗವಿಜೀ, ರಮ, ಡಗಿ, ದ್ರಮುಸ ಗೆಡೆಕ ಗೆಮತ ಲುಡರಾಸಿಉ ವಗುಕಾಬೇ ನ್ನೂಯಳಿಗಾ ಳುಹಾ ಡಿಮಾ ಮ್ಮತ ಕ್ಕೆಶನಾ ವೇತಾ ರೆದ್ದಾತ್ತಿಗುರಾಣರಕಾ. ಷ್ಟೇಅ ಲ್ಲಅ, ಗಈ ಲ್ಲಿಯಮಿಭೂ ಯುವಾ, ಲಜ ನ್ಯಲಿಮಾ ಗಿಷ್ಟಾಕಸಾ ದುವುಕುದುಬ ದರಿಂದವುರುಗಿವಾಷ್ಟಕ ದಡಹ್ಮಾಂಬ್ರ ನ್ಯಅ ಳಗಹಗ್ರ ಡೆಕ ರೆದ್ದಾತ್ತಿಡುನೋ. ನ್ನುರವಇ ಗೆಹೀ ರೆಟ್ಟಬಿ ದಡಹ್ಮಾಂಬ್ರ ನ್ಯಅ ಲ್ಲಿಳಗಹಗ್ರ ದಯಿಂತಿಶಾಂ ವರುತ್ತಿಕುದುಬ ಳುಗವಿಜೀ ಮ್ಮತ ನ್ನುಯಲೆನೆ ದೆತ್ತಗುಕಾಬೇಳ್ಳಕೊದುಳೆಕ. ದರಿಂದ್ದಆ ನ್ನುರವಇ ಗೆಹೀ ಲುರಬ ದುರಬಾಡಬಿ – ಎಂದು ಹೇಳುತ್ತಿದ್ದರು”2. 


ಇಷ್ಟು ದೂರದ ಗ್ರಹದಲ್ಲಿ ಕಸ್ತೂರಿ ಕನ್ನಡದ ಕಂಪನ್ನು ಕೇಳಿ ಅವನಿಗೆ ರೋಮಾಂಚನವಾಯಿತು. ಅವರು ಕನ್ನಡ ಭಾಷೆಯನ್ನು ವಿಭಿನ್ನವಾಗಿ ಅಂದರೆ ಪದಗಳನ್ನು ಬಲದಿಂದ ಎಡಕ್ಕೆ ಉಚ್ಛರಿಸುತ್ತಿದ್ದರು. ಎಲ್ಲವನ್ನೂ ಕೇಳಿಸಿಕೊಂಡ ಶರತ್ ಮುಂದೇನು ಮಾಡಬೇಕೆಂದು ಯೋಚಿಸತೊಡಗಿದ. ಸ್ವಲ್ಪ ಹೊತ್ತಿನ ಮೌನದ ನಂತರ ಸಿರಿಯಸ್ ಗ್ರಹದ ಮುಖಂಡ ಮಾತನಾಡತೊಡಗಿದ. “ರೂಲ್ಲವೆನೀ ನ್ನುದವುಳುಹೇ ದಳಿಕೇ ಲೆಮೇ ನ್ನುರವಇ ಗೇಹೀ ದುವುಡುಬಿ ಲ್ಲಯರಿಸ ದೆತ್ತಸುನಿಎ. ದರಿಂದ್ದಆ ನೋಗೇನನ ಯಮಿಭೂ ನಲಿಮೇ ಲ್ಲಾಎ ನ್ನೂರಷ್ಯನುಮ ಶನಾ ದೇವುಡುಮಾ ರಿಸ ದೆತ್ತಸುನಿಎ. ಗಿಕ್ಕಾದಅ ದಯಾರಿಸ ದುಒಂ ನ್ನುಯನೆಜಯೋ ಸಿರಿಯಾತ”3 ಎಂದು ಹೇಳಿದ. ಇದನ್ನು ಕೇಳಿದ ಶರತ್ ಗೆ ಚಿಂತೆಯಾಗತೊಡಗಿತು. ಇವರ ತಂತ್ರಙ್ಙಾನ ನಮಗಿಂತ ಸಾವಿರ ಪಟ್ಟು ಉನ್ನತವಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಒಂದು ವೇಳೆ ಇವರೇನಾದರೂ ಭೂಮಿಯನ್ನು ನಾಶ ಮಾಡಲು ಬಯಸಿದರೆ ಇವರಿಗೆ ಅದು ಒಂದು ನಿಮಿಷದ ಕೆಲಸ. ಆದರೆ ಇದರಿಂದ ನಮ್ಮ ಮನುಕುಲದ ಸಂತತಿಯೇ ನಾಶವಾಗುತ್ತದೆ. ಏನಾದರೂ ಮಾಡಿ ಇದನ್ನು ತಡೆಯಬೇಕೆಂದು ಅವನು ಯೋಚಿಸುತ್ತಿದ್ದ. ಕಡೆಗೆ ಧೈರ್ಯ ಮಾಡಿ ಅವರ ಜೊತೆ ಮಾತನಾಡುವ ನಿರ್ಣಯ ಮಾಡಿದ. ಅವರ ಜೊತೆ ಅವರ ಭಾಷೆಯಲ್ಲಿಯೇ ಮಾತನಾಡಿದರೆ ಅದರ ಪರಿಣಾಮ ನೂರು ಪಟ್ಟು ಹೆಚ್ಚುವುದೆಂದು ತೋರಿತು. ಹಾಗಾಗಿ ಅವನು ಅವರ ಭಾಷೆಯಲ್ಲಿಯೇ ಮಾತನಾಡಲು ತಾನು ಮಾತನಾಡಬೇಕಾದ ವಿಚಾರಗಳನ್ನು ಅಳೆದು ತೂಗಿ ಚೆನ್ನಾಗಿ ಮನನ ಮಾಡಿಕೊಂಡ. ಬಾಲ್ಯದ ಭಾಷೆ ಕಸ್ತೂರಿ ಕನ್ನಡ ಈಗ ಉಪಯೋಗಕ್ಕೆ ಬಂದಿತ್ತು. 


ಅವನು ಅವರ ಜೊತೆ ಮಾತನಾಡುವ ಇಚ್ಛೆ ವ್ಯಕ್ತ ಪಡಿಸಿದ. ಅವರು ಅವನನ್ನು ಮುಖಂಡನ ಬಳಿಗೆ ಕರೆದೊಯ್ದರು. ಶರತ್ ತಡವರಿಸುತ್ತ ಆದರೆ ದೃಢವಾದ ದನಿಯಲ್ಲಿ ಹೇಳಿದ – “ಗೆಲಿದಮೊ ನುನಾ ಗೂರಿಲ್ಲಗೆಮನಿ ನ್ನನ ನ್ನುಳಗನೆದವಂ ನೆತ್ತೇಸುಳಿತಿ. ನುನಾ ರಲ್ಲಮ್ಮೆನಿ ನ್ನುಳಗತುಮಾ ಡೆಕೊಂಸಿಳಿಕೇ. ಲ್ಲಿಯಮಿಭೂ ತೆಡಂಕೊಂದುವಂನೀ ಲವಕೇ ಳೇಗರ್ಥಿಸ್ವಾ ಲ್ಲಬಿತುಂ. ಲ್ಲೋಎ ರುವಲಕೆ ಳುಗರ್ಥಿಸ್ವಾ ದುವುರುಇ ಜನಿ. ವುನಾ ನ್ನುಯಮಿಭೂ ಮ್ಮನ ಯಿತಾ ದುಎಂ ವೆತ್ತೇಸುಜಿಪೂ. ರದಅ ಗೆತಿಸ್ಥಿಸು ವೆತ್ತೇಸುಮಿಶ್ರ. ಮ್ಮನ ತ್ರತಂ ನಙ್ಙಾ ಲ್ಲತೆದಂರೆವದುಮುಂ ವುನಾ ರತಇ ಳಗಹಗ್ರ ಗೆಡೆಕ ಣ್ಣುಕ ದ್ದುಸಿಯಿಹಾ ಜನಿ. ರೆದಆ ದುಅ ತೆಡಂಕೊಂದುವಂನೀ ನಲ್ಲಿಅ ನ್ನುಳಗವಿಜೀ ಶನಾ ಡಿಮಾ ಮ್ಮನ ನ್ನುವತುಹಸಾವ ಲುಸಪಿಸ್ಥಾ ಲ್ಲಅ. ನ್ಯಅ ಲ್ಲಿಳಗಹಗ್ರ ರೆದ್ದಳಿಗವಿಜೀ ರವಅ ತೆಜೊ ಹಸ್ನೇ ಲುಸಳೆಬೆ ತ್ತುಮ ದರಿಂದಅ ಈ ದಡಹ್ಮಾಂಬ್ರ ಮಗಉ ಗೂಹಾ ಳಗಸಕಾವಿ ಗ್ಗೆಬ ಲುಯಳಿತಿ ವುನಾ ಈ ನ್ನುಳಗನೆಜಯೋ ವೆದ್ದೇಡಿಗೊಂಕೈ. ವುನೀ ನ್ನುದಇ ಲುಸಲಿಶೀರಿಪ ರೆದದಾವುಸುಚ್ಛಿಇ ನ್ನನ ತೆಜೊ ಮ್ಮನ ಗೆಮಿಭೂ ನ್ನಿಬ. ನುನಾ ಗೆಮನಿ ನಲ್ಲಿಅ ರದಸುಂ ಗೂಹಾ ರ್ಥಸ್ವಾ ತಹಿರ ಚ್ಛಸ್ವ ದಣರವತಾವಾ ಯಚರಿಪ ನೆತ್ತೇಡುಕೊಡಿಮಾ”4 – ಎಂದು ಹೇಳಿದ. 

ಇದನ್ನು ಹೇಳಿದ ನಂತರ ಅವನಿಗೆ ಚಿಂತೆಯಾಗತೊಡಗಿತು. ಏಕೆಂದರೆ ಭೂಮಿಯಲ್ಲಿನ ವಾತಾವರಣ ಸಿರಿಯಸ್ ನ ಜೀವಿಗಳು ಹೇಳಿದಂತೆಯೇ ಇತ್ತು. ಎಲ್ಲಿ ನೋಡಿದರೂ ಅರಾಜಕತೆ, ಭ್ರಷ್ಟಾಚಾರ, ಸ್ವಾರ್ಥ, ಸುಲಿಗೆ ತುಂಬಿ ತುಳುಕುತ್ತಿತ್ತು. ನನ್ನ ಮಾತಿನಂತೆ ಇವರು ಏನಾದರೂ ಭೂಮಿಗೆ ಬಂದರೆ ಏನು ಮಾಡುವುದು ಎಂದು ಅವನು ಆಲೋಚಿಸತೊಡಗಿದ. ಆದರೂ ಅವನಿಗಿದ್ದ ಧೈರ್ಯವೆಂದರೆ ಭಾರತ ಮಾತೆಯ ಮಡಿಲಲ್ಲಿ ಅದರಲ್ಲೂ ಶ್ರೀಗಂಧದ ಕರುನಾಡಿನಲ್ಲಿ ಪರಿಸ್ಥಿತಿ ಅಷ್ಟೊಂದು ಹದಗೆಟ್ಟಿರಲಿಕ್ಕಿಲ್ಲವೆಂಬುದು. ಆದ್ದರಿಂದಲೇ ಅವನು ಅವರನ್ನು ಕರುನಾಡಿಗೇ ಕರೆದುಕೊಂಡು ಬರುವ ಮನಸ್ಸು ಮಾಡಿದ. 


ಶರತ್ನ ಮಾತುಗಳನ್ನು ಕೇಳಿದ ಸಿರಿಯಸ್ ಗ್ರಹದ ಜೀವಿಗಳಲ್ಲಿ ಕೆಲವರು ಇದನ್ನು ನಂಬಬಾರದೆಂದು ಹೇಳುತ್ತಿದ್ದರು. ಮತ್ತೆ ಕೆಲವರು ಯಾವುದಕ್ಕೂ ಪರೀಕ್ಷಿಸಿ ನೋಡುವುದು ಉಚಿತವೆಂದು ಹೇಳುತ್ತಿದ್ದರು. ಅನೇಕ ವಾದ ವಿವಾದಗಳ ನಂತರ ಅವರ ಮುಖಂಡ ಯಾವುದಕ್ಕೂ ಇದನ್ನು ಪರೀಕ್ಷಿಸಿ ನೋಡುವುದೇ ಉಚಿತವೆಂದು ತೀರ್ಮಾನ ಮಾಡಿ ಭೂಮಿಗೆ ಹೊರಡುವ ದಿನವನ್ನು ಗೊತ್ತು ಮಾಡಿದ. ಸಿರಿಯಸ್ ಗ್ರಹದಿಂದ ಭೂಮಿಗೆ ಬರುವಷ್ಟರಲ್ಲಿ ಭೂಮಿಯಲ್ಲಿ ನೂರಾರು ವರ್ಷಗಳೇ ಕಳೆದು ಹೋಗಿದ್ದವು. ಭೂಮಿಯಲ್ಲಿ ಈಗ ಜನ ಸಂಖ್ಯೆ ಕಡಿಮೆಯಾಗಿತ್ತು. ಅರಾಜಕತೆ, ಸ್ವಾರ್ಥ, ಭ್ರಷ್ಟಾಚಾರ ಮುಂತಾದವುಗಳೆಲ್ಲ ಹೋಗಿ ಶಾಂತಿ, ನೆಮ್ಮದಿ ನೆಲೆಸಿದ್ದವು. ಜನ ಪರಸ್ಪರ ಪ್ರೀತಿ ಮತ್ತು ಸೌಹಾರ್ದತೆಯಿಂದ ಬಾಳುತ್ತಿದ್ದರು. ಹೊಸ ಯುಗವೊಂದು ಶುರುವಾಗಿತ್ತು. ಯೋಜನೆಯಂತೆ ಸಿರಿಯಸ್ ನ ಮುಖಂಡ ಹಾಗೂ ಅವನ ಸಂಗಡಿಗರು ಶರತ್ ನ ಜೊತೆ ಕರುನಾಡಿಗೆ ಬಂದರು. ಭೂಮಿಯ ಸ್ಪರ್ಶವಾಗುತ್ತಿದ್ದಂತೇ ಶರತ್ ನ ಮನದಲ್ಲಿ ಉತ್ಸಾಹ ಉಲ್ಲಾಸಗಳು ತುಂಬಿ ಬಂದವು. ಆದರೂ ಎಲ್ಲೋ ಒಂದು ಕಡೆ ಆತಂಕವೂ ಆಗುತ್ತಿತ್ತು. ಭೂಮಿಯಲ್ಲಿ ಕಳೆದುಹೋಗಿರುವ ನೂರಾರು ವರ್ಷಗಳ ಬಗ್ಗೆ ಅವನಿಗೆ ಅರಿವಿರಲಿಲ್ಲ. ಏಕೆಂದರೆ ಸಿರಿಯಸ್ ಗ್ರಹದಲ್ಲಿ ಅವನ ವಯಸ್ಸೇನೂ ಜಾಸ್ತಿಯಾಗಿರಲಿಲ್ಲ. ಹಾಗಾಗಿ ಅವನು ತಾನು ಭೂಮಿಯನ್ನು ಬಿಟ್ಟು ಬಂದಾಗ ಜನ ಹೇಗಿದ್ದರೋ ಹಾಗೆಯೇ ಇದ್ದಾರೆಂದುಕೊಂಡಿದ್ದ. ಇಲ್ಲಿನ ಸ್ವಾರ್ಥ ಪ್ರಪಂಚವೇ ಅವನ ಕಣ್ಣೆದುರು ನಿಂತಿತ್ತು. ಆದರೂ ಧೈರ್ಯ ಮಾಡಿ ದೇವರ ಮೇಲೆ ಭಾರ ಹಾಕಿ ಅವರನ್ನು ಕರೆದುಕೊಂಡು ಬಂದಿದ್ದ. 


ಸಿರಿಯಸ್ನ ಉಪಗ್ರಹ ಭೂಮಿಗೆ ಇಳಿಯುತ್ತಿದ್ದಂತೆಯೇ ಅವನಿಗೆ ರೋಮಾಂಚನವಾಯಿತು. ಎಲ್ಲೆಲ್ಲಿ ನೋಡಿದರೂ ಹಸುರಿನ ದಟ್ಟ ಮರಗಳು ಗಾಳಿಗೆ ತೂಗಾಡುತ್ತ ಸ್ವಚ್ಛವಾದ ಆಮ್ಲಜನಕ ಕೊಡುತ್ತಿದ್ದವು. ಹೂಗಳ ಕಂಪು ಮೈ ಮನಗಳನ್ನು ಮುದಗೊಳಿಸುತ್ತಿತ್ತು. ಹತ್ತಿರದಲ್ಲೇ ಹರಿಯುತ್ತಿದ್ದ ಝರಿಯೊಂದರಿಂದ ಇಂಪಾದ ನಾದ ಹೊಮ್ಮುತ್ತಿತ್ತು. ಝರಿಯ ನೀರು ಶುಭ್ರ ಸ್ಫಟಿಕದಂತೆ ಕಂಗೊಳಿಸುತ್ತಿತ್ತು. ಶರತ್ ಪುಟ್ಟ ಬಾಲಕನಂತೆ ನೀರಿಗೆ ಓಡಿದ. ತಣ್ಣನೆಯ ನೀರಿನಲ್ಲಿ ಮುಖ, ಕೈ ಕಾಲುಗಳನ್ನು ತೊಳೆದುಕೊಂಡಾಗ ಅವನ ಮನಸ್ಸು ಚಿಟ್ಟೆಯಂತೆ ಹಾರಾಡತೊಡಗಿತು. ತುಂಟ ಬಾಲಕನಂತೆ ನೀರಿನಲ್ಲಿ ಮನಸೋ ಇಚ್ಛೆ ಆಡತೊಡಗಿದ. ಒಂದು ಕ್ಷಣ ಅವನ ಮನಸ್ಸು ಸಿರಿಯಸ್ ಗ್ರಹದಲ್ಲಿ ಅನುಭವಿಸಿದ ಎಲ್ಲಾ ಹಿಂಸೆಯನ್ನೂ ಮರೆಯಿತು. ಅವನ ಉಲ್ಲಾಸವನ್ನು ನೋಡಿದ ಸಿರಿಯಸ್ ಗ್ರಹದ ಮುಖಂಡನ ಮುಖದಲ್ಲಿ ಕೂಡ ಮಂದಹಾಸ ಮಿನುಗಿತು. ಸ್ವಲ್ಪ ಸಮಯ ಅವನನ್ನು ಆಡಲು ಬಿಟ್ಟ ಸಿರಿಯಸ್ ಗ್ರಹದ ಮುಖಂಡ ಭೂಮಿಯ ಜನರ ಪರಿಚಯ ಮಾಡಿಕೊಡುವಂತೆ ಅವನನ್ನು ಎಚ್ಚರಿಸಿದ. ಶರತ್ ಯೋಚನೆಯಲ್ಲೇ ಅವರನ್ನು ಮುಂದಕ್ಕೆ ಕರೆದುಕೊಂಡು ನಡೆದ. ಸ್ವಲ್ಪ ಮುಂದೆ ಅವನಿಗೆ ಊರೊಂದು ಗೋಚರಿಸಿತು. ಸಿರಿಯಸ್ ನ ಮುಖಂಡ ಹಾಗೂ ಇನ್ನು ಕೆಲವರ ಜೊತೆ ಅವನು ಆ ಊರಿನ ಕಡೆ ನಡೆಯತೊಡಗಿದ. ಊರು ಹತ್ತಿರವಾಗುತ್ತಿದ್ದಂತೇ ಒಬ್ಬ ಮನುಷ್ಯ ಇವರನ್ನು ನೋಡಿ ಮುಂದೆ ಬಂದ ಹಾಗೂ ತನ್ನ ಪರಿಚಯ ಮಾಡಿಕೊಡುತ್ತ ತಾನು ಆ ಊರಿನ ಮುಖಂಡನೆಂದು ಹೇಳಿದ. “ನಿಮ್ಮನ್ನು ನೋಡಿದರೆ ಈ ಊರಿಗೆ ಹೊಸಬರಾಗಿ ಕಾಣುತ್ತೀರಿ, ಎಲ್ಲಿಂದ ಬಂದಿರುವಿರಿ” ಎಂದು ಕೇಳಿದ. ಅಲ್ಲದೆ ಅವರು ಯಾವ ಕೆಲಸಕ್ಕಾಗಿ ಬಂದಿರುವರೋ ಆ ಕೆಲಸವಾಗುವವರೆಗೂ ಆ ಊರಿನ ತಂಗುದಾಣದಲ್ಲಿ ಉಚಿತವಾಗಿ ಊಟ ಹಾಗೂ ಮಲಗುವ ವ್ಯವಸ್ಥೆ ಮಾಡುವುದಾಗಿ ಹೇಳಿದ. ಜೊತೆಗೆ ಮತ್ತೊಬ್ಬ ಮನುಷ್ಯನನ್ನು ಕರೆದು ಈ ಎಲ್ಲ ವ್ಯವಸ್ಥೆ ಮಾಡಲು ತಿಳಿಸಿದ. 


ಇದನ್ನೆಲ್ಲ ನೋಡಿದ ಶರತ್ಗೆ ಆಶ್ಚರ್ಯ ಹಾಗೂ ಅನುಮಾನವಾಯಿತು. ಅವನು ತನ್ನ ಪರಿಚಯ ಮಾಡಿಕೊಂಡಾಗ ಆ ಮುಖಂಡ ಇವನ ಚರಿತ್ರೆಯನ್ನು ತನ್ನ ತಾತ ಮುತ್ತಾತರಿಂದ ಕೇಳಿರುವುದಾಗಿ ಹೇಳಿದ. ಅಲ್ಲದೆ ಅದೆಲ್ಲ ನಡೆದು ಶತಮಾನಗಳೇ ಕಳೆದಿರುವುದರಿಂದ, ಇಷ್ಟು ವರ್ಷಗಳ ಬಳಿಕ ಶರತ್ ವಾಪಸು ಬಂದಿರುವುದು ಆಶ್ಚರ್ಯಕರವಾಗಿದೆಯೆಂದು ಹೇಳಿದ. ಆಗ ಶರತ್ ಗೆ ತನ್ನ ಅನುಮಾನ ನಿಜವಾಯಿತೆನ್ನಿಸಿತು. ಶರತ್ ಆ ಊರಿನ ಮುಖಂಡನ ಬಳಿ ತನ್ನ ಕಥೆಯನ್ನು ಸಾದ್ಯಂತವಾಗಿ ವಿವರಿಸುತ್ತ ಸಿರಿಯಸ್ ಗ್ರಹದ ಜೀವಿಗಳಿಗೆ ಆ ಊರಿನ ಹಾಗೂ ಅಲ್ಲಿನ ಜನಗಳ ಪರಿಚಯ ಮಾಡಿಕೊಡಬೇಕೆಂದು ಕೇಳಿದ. ಇದನ್ನೆಲ್ಲ ಕೇಳಿದ ಆ ಮುಖಂಡ ಕೇವಲ ಈ ಊರಿನಲ್ಲಷ್ಟೇ ಅಲ್ಲದೆ ಭೂಮಿಯಲ್ಲಿನ ಎಲ್ಲಾ ಕಡೆಯಲ್ಲೂ ಮನುಷ್ಯರು ಸೌಹಾರ್ದದಿಂದ ಬದುಕುತ್ತಿರುವರೆಂದೂ, ಯುಧ್ಧಗಳು ಆಗುತ್ತಿಲ್ಲವೆಂದೂ, ಹೇಳಿದ. ಹಿಂದಿನ ತಮ್ಮ ತಪ್ಪಿಗಾಗಿ ಭಾರಿ ಬೆಲೆ ತೆತ್ತಿದ್ದರಿಂದ ಪಾಠ ಕಲಿತ ಮನುಜರು ಸ್ವಾರ್ಥ, ಭ್ರಷ್ಟಾಚಾರವನ್ನೆಲ್ಲಾ ಬಿಟ್ಟು ಪರಸ್ಪರ ಸಹಕಾರ, ಸಮನ್ವಯದಿಂದ ಬಾಳುತ್ತಿರುವುದಾಗಿ ಹೇಳಿದ. ಅದಕ್ಕೆ ಈ ಪ್ರಕೃತಿಯೇ ಸಾಕ್ಷಿ ಎಂದೂ ಹೇಳಿದ. ಭೂಮಿ ಇಂದು ಹಸಿರುಟ್ಟು ನಳನಳಿಸುತ್ತಿರುವುದು ಕಣ್ಣಿಗೆ ಕಾಣುವಂತಿತ್ತು. ಮನುಷ್ಯ ಹಾಗೂ ಪ್ರಾಣಿ, ಪಕ್ಷಿಗಳ ನಡುವೆ ಸಮತೋಲನವಿತ್ತು. ಇದನ್ನೆಲ್ಲ ಶರತ್ ಸಿರಿಯಸ್ ಗ್ರಹದ ಜೀವಿಗಳಿಗೆ ಅವರ ಭಾಷೆಯಲ್ಲಿ ಪರಿಚಯ ಮಾಡಿಕೊಟ್ಟ. ಸಿರಿಯಸ್ನ ಜೀವಿಗಳು ಅನೇಕ ಕಡೆ ಸುತ್ತಾಡಿ ಎಲ್ಲವನ್ನೂ ಮನನ ಮಾಡಿಕೊಂಡರು. ಭೂಮಿಯ ಮೇಲಿನ ಸ್ವಾರ್ಥ ರಹಿತ ಜೀವನ ಅವರಿಗೆ ಇಷ್ಟವಾಯಿತು. ಭೂಮಿಯ ಜೀವಿಗಳಿಂದ ತಮಗೆ ಏನೂ ತೊಂದರೆಯಿಲ್ಲವೆಂಬುದನ್ನೂ ಮನಗಂಡರು.

ಎಲ್ಲವನ್ನೂ ನೋಡಿದ ಸಿರಿಯಸ್ನ ಜೀವಿಗಳು ಶರತ್ ನೊಡನೆ ಭೂಮಿಯನ್ನು ನಾಶ ಮಾಡುವ ತಮ್ಮ ಯೋಜನೆಯನ್ನು ಕೈ ಬಿಟ್ಟಿರುವುದಾಗಿ ಹೇಳಿದರು. ಭೂಮಿಯ ಜನರ ಆದರ, ಸತ್ಕಾರ್ಯಗಳನ್ನು ಸ್ವೀಕರಿಸಿ ತಮ್ಮ ಗ್ರಹಕ್ಕೆ ವಾಪಸು ಹೊರಟರು. ಇತ್ತ ಭೂಮಿಯ ಜನರು ಶರತ್ ನ ಸಾಹಸವನ್ನು ಕೊಂಡಾಡುತ್ತ ಸಿರಿಯಸ್ ಜೀವಿಗಳಿಂದ ಭೂಮಿಯನ್ನು ರಕ್ಷಿಸಿದ್ದಕ್ಕಾಗಿ ಅವನನ್ನು ಸನ್ಮಾನಿಸಿದರು. ಬಾಲ್ಯದಲ್ಲಿ ಕಲಿತ ಕಸ್ತೂರಿ ಕನ್ನಡ ತನ್ನ ನೆರವಿಗೆ ಬಂದಿದ್ದನ್ನು ಸ್ಮರಿಸುತ್ತ, ಇಷ್ಟು ವರ್ಷಗಳಾದರೂ ಕನ್ನಡದ ಕಂಪು ಭೂಮಿಯಲ್ಲಿ ಇನ್ನೂ ಹರಡಿರುವುದಕ್ಕೆ ಹೆಮ್ಮೆ ಪಡುತ್ತ ಶರತ್ ಕನ್ನಡ ನಾಡಿನಲ್ಲಿಯೇ ನೆಲೆಸುವ ನಿರ್ಧಾರ ಮಾಡಿದ.


(1 - ಈ ಜೀವಿ ನಮ್ಮಿಂದ ಒಂದು ಬೆಳಕಿನ ವರ್ಷ ದೂರವಿರುವ ಒಂದು ಗ್ರಹದಿಂದ ಬಂದಿದೆ. ಇವರು ಅದನ್ನು ಭೂಮಿ, ಪೃಥ್ವಿ ಎಂದು ಕರೆಯುತ್ತಾರೆ.)

(2 - ಇವರು ತಮ್ಮನ್ನು ತಾವು ಮನುಷ್ಯರು ಎಂದು ಕರೆದುಕೊಳ್ಳುತ್ತಾರೆ. ಭೂಮಿಯಲ್ಲಿ ಇವರಲ್ಲದೇ ಇನ್ನೂ ಲಕ್ಷಾಂತರ ಜೀವಿಗಳಿದ್ದರೂ ಇವರು ತಮ್ಮ ಸ್ವಾರ್ಥಕ್ಕಾಗಿ ಎಲ್ಲವನ್ನೂ ತಮ್ಮ ಹಿಡಿತದಲ್ಲಿಟ್ಟುಕೊಂಡು, ಕೇವಲ ತಾವೇ ಮುಂದುವರೆಯಲು ನೋಡುತ್ತಾರೆ. ಇತರ ಜೀವಿಗಳನ್ನೂ, ಮರ, ಗಿಡ, ಸಮುದ್ರ ಕಡೆಗೆ ತಮಗೆ ಉಸಿರಾಡಲು ಬೇಕಾಗುವ ಗಾಳಿಯನ್ನೂ ಹಾಳು ಮಾಡಿ ತಮ್ಮ ನಾಶಕ್ಕೆ ತಾವೇ ಕಾರಣರಾಗುತ್ತಿದ್ದಾರೆ. ಅಷ್ಟೇ ಅಲ್ಲ, ಈಗ ಭೂಮಿಯಲ್ಲಿ ವಾಯು, ಜಲ ಮಾಲಿನ್ಯ ಸಾಕಷ್ಟಾಗಿ ಬದುಕುವುದು ಕಷ್ಟವಾಗಿರುವುದರಿಂದ ಬ್ರಹ್ಮಾಂಡದ ಅನ್ಯ ಗ್ರಹಗಳ ಕಡೆ ನೋಡುತ್ತಿದ್ದಾರೆ. ಇವರನ್ನು ಹೀಗೆ ಬಿಟ್ಟರೆ ಬ್ರಹ್ಮಾಂಡದ ಅನ್ಯ ಗ್ರಹಗಳಲ್ಲಿ ಶಾಂತಿಯಿಂದ ಬದುಕುತ್ತಿರುವ ಜೀವಿಗಳು ತಮ್ಮ ನೆಲೆಯನ್ನು ಕಳೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಇವರನ್ನು ಹೀಗೆ ಬರಲು ಬಿಡಬಾರದು)

(3 - ನೀವೆಲ್ಲರೂ ಹೇಳುವುದನ್ನು ಕೇಳಿದ ಮೇಲೆ ಇವರನ್ನು ಹೀಗೇ ಬಿಡುವುದು ಸರಿಯಲ್ಲ ಎನಿಸುತ್ತದೆ. ಆದ್ದರಿಂದ ನನಗೇನೋ ಭೂಮಿಯ ಮೇಲಿನ ಎಲ್ಲಾ ಮನುಷ್ಯರನ್ನೂ ನಾಶ ಮಾಡುವುದೇ ಸರಿ ಎನಿಸುತ್ತದೆ. ಅದಕ್ಕಾಗಿ ಸರಿಯಾದ ಒಂದು ಯೋಜನೆಯನ್ನು ತಯಾರಿಸಿ)


      (4 - ಮೊದಲಿಗೆ ನಾನು ನಿಮಗೆಲ್ಲರಿಗೂ ನನ್ನ ವಂದನೆಗಳನ್ನು ತಿಳಿಸುತ್ತೇನೆ. ನಾನು ನಿಮ್ಮೆಲ್ಲರ ಮಾತುಗಳನ್ನು ಕೇಳಿಸಿಕೊಂಡೆ. ಭೂಮಿಯಲ್ಲಿ ನೀವಂದುಕೊಂಡಂತೆ ಕೇವಲ ಸ್ವಾರ್ಥಿಗಳು ಮಾತ್ರ ತುಂಬಿಲ್ಲ. ಎಲ್ಲೋ ಕೆಲವರು ಸ್ವಾರ್ಥಿಗಳು ಇರುವುದು ನಿಜ. ನಾವು ಭೂಮಿಯನ್ನು ನಮ್ಮ ತಾಯಿ ಎಂದು ಪೂಜಿಸುತ್ತೇವೆ. ಅದರ ಸುಸ್ಥಿತಿಗೆ ಶ್ರಮಿಸುತ್ತೇವೆ. ನಮ್ಮ ತಂತ್ರಙ್ಙಾನ ಮುಂದುವರೆದಂತೆಲ್ಲ ನಾವು ಇತರ ಗ್ರಹಗಳ ಕಡೆಗೆ ಕಣ್ಣು ಹಾಯಿಸಿದ್ದು ನಿಜ. ಆದರೆ ಅದು ನೀವಂದುಕೊಂಡಂತೆ ಅಲ್ಲಿನ ಜೀವಿಗಳನ್ನು ನಾಶ ಮಾಡಿ ನಮ್ಮ ವಸಾಹತುವನ್ನು ಸ್ಥಾಪಿಸಲು ಅಲ್ಲ. ಅನ್ಯ ಗ್ರಹಗಳಲ್ಲಿ ಜೀವಿಗಳಿದ್ದರೆ ಅವರ ಜೊತೆ ಸ್ನೇಹ ಬೆಳೆಸಲು ಮತ್ತು ಅದರಿಂದ ಈ ಬ್ರಹ್ಮಾಂಡದ ಉಗಮ ಹಾಗೂ ವಿಕಾಸಗಳ ಬಗ್ಗೆ ತಿಳಿಯಲು ನಾವು ಈ ಯೋಜನೆಗಳನ್ನು ಕೈಗೊಂಡಿದ್ದೇವೆ. ನೀವು ಇದನ್ನು ಪರಿಶೀಲಿಸಲು ಇಚ್ಛಿಸುವುದಾದರೆ ನನ್ನ ಜೊತೆ ನಮ್ಮ ಭೂಮಿಗೆ ಬನ್ನಿ. ನಾನು ನಿಮಗೆ ಅಲ್ಲಿನ ಸುಂದರ ಹಾಗೂ ಸ್ವಾರ್ಥ ರಹಿತ ಸ್ವಚ್ಛ ವಾತಾವರಣದ ಪರಿಚಯ ಮಾಡಿಕೊಡುತ್ತೇನೆ).


Rate this content
Log in

Similar kannada story from Drama