STORYMIRROR

ದೈವಿಕಾ ಕೆ

Romance Fantasy Inspirational

4.3  

ದೈವಿಕಾ ಕೆ

Romance Fantasy Inspirational

ಪ್ರೀತಿಗಾಗಿ

ಪ್ರೀತಿಗಾಗಿ

35 mins
769



" ಹೇ ಹಾಯ್ ಹೇಗಿದ್ದೀಯ., ನನ್ನಾ ನೆನಪು ಇದೆ ಅನ್ಕೊಂಡು ಮೆಸೇಜ್ ಮಾಡ್ತಿದೀನಿ.,ಐಮ್ ಗುಂಡು ಗುಂಡು ಗುಲಾಬ್ ಜಾಮೂನ್. ನೀನೇ ಇಟ್ಟಂತ ಹೆಸರು ಹೋಪ್ ದಟ್ ನೌ ಯು ಗಾಟ್ ಇಟ್. ವನ್ಸ್ ಅಗೈನ್ ಹೇಗಿದ್ದೀಯ.. ನೀನ್ ಬಿಡು ಎಲ್ಲಿದ್ರೂ ಚೆಂದ ಇರ್ತೀಯ.. ಯಾಕೆ ಹೇಳು ನೀನೇ ಅಲ್ವಾ.. ಎಲ್ಲರ ಜೊತೆಗೂ ಹರುಷವನ್ನ ಹಂಚ್ಚಿಕೊಂಡು ನಲಿಯೂ ಹರ್ಷಿತಾ..!!

ನಿನ್ ನಂಬರ್ ನಂಗೇಗೆ ಸಿಗ್ತು ಅಂತಾನಾ.. ಅದು ಮೊನ್ನೆ ಮುಂಬೈ ಲಿ ಒಂದು ಮೀಟಿಂಗ್ ಇತ್ತು ಹೋಗಿದ್ದೆ ಕರಣ್ ಸಿಕ್ಕಿದ್ದ., ಅವನ್ನ ಕೇಳಿದೆ ಕೊಟ್ಟ.. ನೀನೇನು ಬೆಂಗಳೂರಲ್ಲಿ ಸೆಟಲ್ ಆಗಿದೀಯ ಅಂತೆ..ತುಂಬಾ ಖುಷಿ ಆಯ್ತು ಕೇಳಿ.. ಹೋಟೆಲ್ ಬ್ಯುಸಿನೆಸ್ ಬೇರೆ ಮಾಡ್ತಿದಿ ಅಂತೆ.. ಅಬ್ಬಬ್ಬಾ ನಿನ್ ನಗು ನೇ ನೋಡ್ತಾ ಕಸ್ಟಮರ್ ಊಟ ಮಾಡಿ ಸುಮ್ನೇ ಹೋಗ್ತಾರೋ ಇಲ್ವೋ ನಿನ್ನೇ ನೋಡ್ತಾ ಹೊಟ್ಟೆ ತುಂಬಿದ್ರು ಮತ್ತೇ ಆರ್ಡರ್ ಮಾಡ್ಕೊಂಡು ಕುತ್ಗೊಂತಾರೋ ಅಲ್ವಾ.. ಮತ್ತೇ ಹೇಗಿದೆ ಜೀವನ.. ಆದಷ್ಟು ಬೇಗ ನಿಂಗೆ ನನ್ ನೆನಪಾಗಿ ಮತ್ತೇ ಮರು ಸಂದೇಶ ಬರಲಿ ಅನ್ನೊದು ನನ್ನಾ ಆಸೆ..


ಇಷ್ಟನ್ನೂ ಟೈಪ್ ಮಾಡಿ ಹರ್ಷ ಸೆಂಡ್ ಬಟನ್ ಹೊತ್ತಿ ಮೊಬೈಲ್ ನಾ ಸೈಡ್ ಗೆ ಇಡ್ತಾನೇ..


ಹಳೇ ನೆನಪುಗಳ ಚಿತ್ರಣ ಕಣ್ಣಾ ಮುಂದೆ ಬರುತ್ತೆ.. ಕಣ್ಣು ಮುಚ್ಚಿ ಆನಂದಿಸ್ತಾ ಇದ್ದವನಿಗೆ ಹರ್ಷಿತಾ ಳ ಆ ನಗು.. ಅರಳು ಉರಿದಂಗೆ ಮಾತಾಡೋ ಅವಳ ಮುಖ ನೆನಪಾಗಿ ಮುಖದಲ್ಲಿ ಮಂದಹಾಸ ಮೂಡುತ್ತೆ..


ಹರ್ಷಿತಾ ಮತ್ತೇ ಹರ್ಷ ಐದನೇ ತರಗತಿ ಯಿಂದ ಒಂದೇ ಶಾಲೆಯಲ್ಲೇ ಓದ್ತಾ ಇರ್ತಾರೆ.. ಇಬ್ಬರು ಸ್ಪೋರ್ಟ್ಸ್ ಪ್ರಿಯರು.. ಒಂದಿನ ಹರ್ಷ ಮತ್ತೇ ಅವನ ಗ್ರೂಪ್ ವಾಲಿಬಾಲ್ ಹಾಡುವಾಗ ಪಕ್ಕದ ಕೋರ್ಟ್ ಅಲ್ಲೇ ಹರ್ಷಿತಾ ಮತ್ತೇ ಅವರ ಗ್ರೂಪ್ ಥ್ರೋ ಬಾಲ್ ಆಡ್ತಾ ಇರ್ತಾರೆ..


ಹರ್ಷ ಹೊಡೆದ ರಭಸಕ್ಕೆ ಬಾಲ್ ಹೋಗಿ ಸೀದಾ ಹರ್ಷಿತಾ ಗೆ ತಗಲುತ್ತೆ.. ಅವಳು ತಕ್ಷಣಕ್ಕೆ ಕೆಳಗೆ ಬಿದ್ದು ಬಿಡ್ತಾಳೆ.. ಎಲ್ಲಾರು ಏನ್ ಆಯ್ತೋ ಅಂತಾ ಗಾಬರಿ ಪಟ್ಟು ಅವಳ ಸುತ್ತಲೂ ನಿಂತು ಅವಳನ್ನ ಎಬ್ಬಿಸೋಕೇ ಪ್ರಯತ್ನ ಪಡ್ತಾಇರ್ತಾರೆ.. ಎಲ್ಲರನ್ನು ಒಮ್ಮೆ ಕಿರುಗಣ್ಣಿನಿಂದ ನೋಡಿದ ಹರ್ಷಿತಾ.. ಒಮ್ಮೆಲೇ ಕಣ್ಣು ಬಿಟ್ಟು ಜೋರಾಗಿ ನಗೋಕೆ ಶುರು ಮಾಡ್ತಾಳೆ.. ಎಲ್ಲರಿಗೂ ಅವಳು ಮಾಡಿದ್ದೂ ನಾಟಕ ಅಂತಾ ಗೊತ್ತಾಗಿ.. ಸ್ವಲ್ಪ ಹುಡ್ಗಿರು ಅವಳ ಜೊತೆ ನಗ್ತಾ ಇದ್ರೆ ಇನ್ನು ಸ್ವಲ್ಪ ಹುಡ್ಗಿರು " ಜೀವ ಬಾಯಿಗೆ ಬಂದಿತ್ತು " ಅಂತಾ ಅವಳಿಗೆ ಬೈತಾರೆ.. ಆದ್ರೆ ಹರ್ಷ ಮಾತ್ರ ಅವಳ ಆ ನಗುಗೆ..ಅವಳು ಕ್ಯೂಟ್ ಕ್ಯೂಟ್ ಆಗಿ ಸಾರೀ ಸಾರೀ ಅಂತಾ ಅವಳ ಫ್ರೆಂಡ್ಸ್ ನಾ ಕೇಳ್ತಿದ್ದಾ ದಾಟಿ ಗೆ ಮನಸೋತು ಅವಳನ್ನೇ ನೋಡ್ತಾ ಇರುವಾಗ..


" ಸಾಕಪ್ಪ ನೋಡಿದ್ದು ಸಾರೀ ಕೇಳಿ ಬಾ ಬೇಗ..!" ಎಲ್ಲಾ ಹುಡ್ಗಿರು ಸೇರಿ ಬೈಯೋಕೆ ಮುಂಚೆ ಅಂತಾ ಅವನ ಫ್ರೆಂಡ್ ಕರಣ್ ಹೇಳಿದಾಗ..


ಸರಿ ಸರಿ ಅಂತಾ ಹರ್ಷ ಮುಂದೆ ಹೋಗಿ.. " ಸಾರೀ ಸಾರೀ ಗೊತ್ತಾಗ್ಲಿಲ್ಲಾ.. ಜೋರಾಗಿ ಪೆಟ್ಟ್ಆಯ್ತಾ ಅಂತಾ ಕೇಳ್ತಾನೆ ಹರ್ಷಿತಾ ನಾ..


ನಿಮಗೇನ್ ಗೊತ್ತಾಗಲ್ವಾ.. ಕೋರ್ಟ್ ಎಷ್ಟಿದೆ ಅಸ್ಟ್ರಲ್ಲೇ ಆಡಿ.. ನಿಮ್ ಎನರ್ಜಿ ನಾ ನಮ್ ಮೇಲೆ ತೋರ್ಸೋಕೆ ಬರ್ಬೇಡಿ ಅಂತಾ ಹರ್ಷಿತಾ ನಾ ಇಡ್ಕೊಂಡು ನಿಂತಿದ್ದ ಗೌರಿ ಹೇಳ್ತಾಳೆ..


ಹರ್ಷ ಗೆ ಅವಮಾನ ಆಯ್ತು ಅನ್ಕೊಂತಾ ಬಂದ ಕರಣ್ " ಹೆಲ್ಲೊ ನಾವೇನು ನಿಮ್ಗೆ ಹೊಡಿಬೇಕು ಅಂತಾ ಏನ್ ಹೊಡಿಲಿಲ್ಲ ಏನೋ ಮಿಸ್ ಆಗಿ ಬಿದ್ದಿದೆ ಇಲ್ಲಿ., ಅದ್ರಲ್ಲಿ ಬೈಯೋದೆಲ್ಲಾ ಯಾಕೆ ಅಂತಾ ಕೋಪ ಮಾಡ್ಕೊಂಡು ಕೇಳ್ತಾನೆ..


ಗೌರಿ ಕೋಪ ಮಾಡ್ಕೊಂಡು ಇನ್ನೇನು ಬೈಯೋಕೆ ಬಾಯಿ ತೆರೆದಾಗ ಹರ್ಷಿತಾ ನೇ ಮಾತಾಡಿ " ಸುಮ್ನೇ ಇರೇ ಮಾರಾಯ್ತಿ ನಂಗೇನು ಆಗಿಲ್ಲಾ ಅಲಾ.. ಇವರಿಗೆ ಬೈದ್ರೆ ಏನ್ ಬಂತು.. ಪಿಟಿ ಸರ್ ಗೆ ಬೈಬೇಕು ಇತರ ಎರಡು ಕೋರ್ಟ್ ಹತ್ತತ್ರ ಹಾಕಿರೋದಕ್ಕೆ ಅಂತಾ ಹೇಳ್ತಾ.." ಹರ್ಷ ನಿಮ್ ಸಾರೀ ಆಕ್ಸೆಪ್ಟೆಡ್ ಓಕೆ ನಾ.. ಮತ್ತೇ ಆಡುವಾಗ ಸ್ವಲ್ಪ ನೋಡ್ಕೊಂಡು ಆಡಿ., ನಂಗೇನೋ ಕಾಲಿಗೆ ಬಿತ್ತು ಓಕೆ ಅದೇ ತಲೆಗೊ.,ಹೊಟ್ಟೆಗೂ ಬಿದ್ದಿದ್ರೆ ಕಷ್ಟ ಆಗ್ತಿತ್ತು ಅಲ್ವಾ ಅಂತಾ ಹೇಳ್ತಾಳೆ ಶಾಂತವಾಗಿ...


ಅವಳ ಮಾತೇ ಕೇಳ್ತಿಯಿದ್ದಾ ಹರ್ಷ ಅವಳು ಮಾತಾಡೋದು ನಿಲ್ಲಿಸಿದ್ರು ಅದೇ ಗುಂಗಲ್ಲಿ ಇರ್ತಾನೇ..

ಸರಿ ಹರ್ಷಿ ಅಂತೇಳಿ ಕರಣ್ ಬಾರೋ ಮಾರಾಯ ಅಂತಾ ಹರ್ಷನ್ನಾ ಎಳ್ಕೊಂಡು ಹೋಗ್ತಾನೇ..


ಲೇ ನೀನು ಇಂಗೆ ಕೂಲ್ ಆಗಿ ಮಾತಾಡು ಈ ಹರ್ಷನಿಂದ ಒಂದಲ್ಲಾ ಒಂದಿನಾ ಕಷ್ಟ ಅಂತು ತಪ್ಪಿದ್ದಲ್ಲ ನೋಡು ಅಂತಾ ಒಮ್ಮೆ ಎಚ್ಚರಿಕೆ ಕೊಡ್ತಾಳೆ ಗೌರಿ..


ಹರ್ಷ ಹೋದ ದಾರಿನೇ ನೋಡ್ತಾ ಇದ್ದೋಳಿಗೆ ಗೌರಿ ಯಾ ಮಾತೇ ಕೇಳಿಸಿರಲ್ಲಾ..ಗೌರಿ ಭುಜ ತಟ್ಟಿ ಗೊತ್ತಾಯ್ತಾ ಅಂದಾಗ.. ಗೌರಿ ಯಾ ಕಡೆ ನೋಡಿ ಹಾ ಹಾ ಗೊತ್ತಾಯ್ತ್ ಗೊತ್ತಾಯ್ತ್ ಅಂತಾ ಗೌರಿ ನಾ ಕರ್ಕೊಂಡು ಮತ್ತೇ ಆಟ ಆಡೋಕೆ ಶುರುಮಾಡ್ತಾಳೆ ಹರ್ಷಿತಾ..


************************-********-*******


ಆವತ್ತು ಒಂಬತ್ತನೇ ತರಗತಿ ಲಿ ಇರುವಾಗ ಮ್ಯಾಥ್ಸ್ ಕ್ಲಾಸ್ ನಡೀತಾ ಇರುತ್ತೆ..


ಮ್ಯಾಥ್ಸ್ ಸರ್ ಸಡನ್ ಆಗಿ ಒಂದ್ ಕ್ವಿಜ್ ಮಾಡೋಣ ಅಂತೇಳಿ ಐದು ಐದು ಸ್ಟೂಡೆಂಟ್ಸ್ ನಾ ಒಂದೊಂದು ಗ್ರೂಪ್ ಆಗಿ ಮಾಡ್ತಾರೆ.


ಅದೃಷ್ಟಕ್ಕೆ ಹರ್ಷಿತಾ, ಕರಣ್, ಹರ್ಷ, ಗೌರಿ ಮತ್ತೇ ಸ್ಮಿತಾ ಒಂದೇ ಗ್ರೂಪ್ ಲೇ ಇರ್ತಾರೆ..


ಕ್ವಿಜ್ ಸ್ಟಾರ್ಟ್ ಆಗುತ್ತೆ..


ಮೊದಲನೇ ಪ್ರಶ್ನೆ ಅಂತಾ ಮ್ಯಾಥ್ಸ್ ಸರ್ ಇವರ ಪಕ್ಕದ ಗ್ರೂಪ್ ಗೆ ಕೇಳ್ತಾರೆ.. " ಪು.ತೀ.ನಾ ಲಾಂಗ್ ಫಾರ್ಮ್ ಏನೂ !?" ಅಂತಾ


ಆ ಗ್ರೂಪ್ ಅವರು ಗೊತ್ತಿಲ್ಲಾ ಅಂತಾ ಹೇಳ್ತಾರೆ..


ಮತ್ತೇ ಇವರ ಗ್ರೂಪ್ ಅವರಿಗೆ ಕೇಳಿದಾಗ.. ಹರ್ಷಿತಾ ನಗ್ತಾ " ತಿಂಡಿ ಪೋತ ನಾರಾಯಣ ಅಂತಾ ಏನೇನೋ ಕಾಮಿಡಿ ಆಗಿ ಹೇಳ್ತಾ ಇರುವಾಗ.. ಹರ್ಷ ನೇ ಎದ್ದು ನಿಂತು " ಜಸ್ಟ್ ಸ್ಟಾಪ್ ಇಟ್ ಹರ್ಷಿತಾ. ಅವರೊಂದು ಮಹಾನ್ ಕವಿ ಅವರ ಬಗ್ಗೆ ಇಷ್ಟೊಂದು ಕೇವಲವಾಗಿ ಹೇಳೋದು ಸರಿ ಅಲ್ಲಾ ಅಂತಾ ಹೇಳಿ.. ಮ್ಯಾಥ್ಸ್ ಸರ್ ಕಡೆ ತಿರುಗಿ ಪುರೋಹಿತ ತಿರು ನಾರಾಯಣ ನರಸಿಂಹಚಾರ್.." ಅಂತ ಹೇಳ್ತಾನೆ..


ಮ್ಯಾಥ್ಸ್ ಸರ್ ಚಪ್ಪಾಳೆ ತಟ್ಟಿ ಸರಿ ಆನ್ಸರ್ ಅಂತಾರೆ..


ನಮ್ ಟೀಮ್ ಗೆ ಒಂದು ಪಾಯಿಂಟ್ ಸಿಕ್ತು ಅಂತಾ ಕರಣ್ ಗೌರಿ ಸ್ಮಿತಾ ಖುಷಿ ಪಟ್ರೆ.. ಹರ್ಷಿತಾ ಮಾತ್ರ ಸಪ್ಪಗೆ ಕೂತಿರೋದು ನೋಡಿ ಹರ್ಷ ಗೆ ಬೇಜಾರಾದ್ರೂ.. ಆಮೇಲೆ ಸಾರೀ ಕೇಳಿದ್ರಾಯ್ತು ಅನ್ಕೊಂತಾ ಸುಮ್ನೇ ಕ್ವಿಜ್ ಕಡೆ ಗಮನ ಕೊಡ್ತಾನೆ..


ಕ್ವಿಜ್ ಮುಗಿಯುತ್ತೆ..


ಹರ್ಷ ಅವರ ಟೀಮ್ ನೇ ಗೆಲ್ಲುತ್ತೆ..


ಮೊದಲೇ ರೆಡಿ ಮಾಡಿ ಇಟ್ಟಿದ್ದ ಪೆನ್ ಗಳ್ನ ಮ್ಯಾಥ್ಸ್ ಸರ್ ಎಲ್ಲಾರಿಗೂ ಒಂದೊಂದು ಕೊಡ್ತಾರೆ.. ಎಲ್ಲಾರು ಖುಷಿಯಾಗಿ ಇಸ್ಕೊಂಡು ಹೋಗುವಾಗ ಹರ್ಷ ಓಡಿ ಬಂದು ಹರ್ಷಿತಾ ಮುಂದೆ ನಿಂತು " ಸಾರೀ ಹರ್ಷಿತಾ , ಎಲ್ಲರ ಮುಂದೆ ಅಂಗೆ ನಿಂಗೆ ಬೈಬಾರ್ದಿತ್ತು " ಅಂತಾನೇ..


ಆಗ ಹರ್ಷಿತಾ ನಗ್ತಾ " ಅರೇ ಹರ್ಷ ನೀವ್ ನಂಗೆ ಹೇಳಿದ್ದು ಅದು.. ಬೈದಿದ್ದು ಅಲ್ಲಾ.. ಸಾರೀ ಅವಶ್ಯಕತೆ ಇಲ್ಲಾ ಅಂತೇಳಿ.. ಹೋಗ್ತಾಳೆ..


ಹರ್ಷನಿಗೂ ಖುಷಿಯಾಗುತ್ತೆ.. ಅವಳು ಅದನ್ನಾ ಪಾಸಿಟಿವ್ ಆಗಿ ತಗೊಂಡಿದ್ದು..


ಹೀಗೇ ಹರ್ಷ ನಾ ಜ್ಞಾನ ಬಂಡಾರದಿಂದಾ ಒಂದೊಂದೇ ವಿಷಯಾನ ಕಲಿಯೋಕೆ ಶುರು ಮಾಡ್ತಾಳೆ ಹರ್ಷಿತಾ..


ಅವರಿಬ್ಬರ ಸ್ನೇಹ ದಿನೇ ದಿನೇ ಗಟ್ಟಿಯಾಗ್ತ ಇತ್ತು..


ಯಾವ ರೀತಿ ಅಂದ್ರೆ ಹರ್ಷಿತಾ ಅಂತಾ ಕರೀತಾ ಇದ್ದಾ ಹರ್ಷ.. ಹರ್ಷಿ ಅಂತಾ ಸುಲಭವಾಗಿ ಕರೆದು ಯಾರಲ್ಲೂ ಹೇಳಲಾಗದ ಸುಖ ದುಃಖ ಗಳನ್ನೇಲ್ಲಾ ಹಂಚಿಕೊಳ್ಳು ಅಷ್ಟು..


ಹರ್ಷ ಅಂತಾ ಕರೀತಿದ್ದಾ ಹರ್ಷಿತಾ.., ಅವನು ಗುಂಡು ಗುಂಡು ಆಗಿ ಇರೋದು ನೋಡಿ ಗುಂಡು ಗುಂಡು ಗುಲಾಬ್ ಜಾಮೂನ್ ಅಂತಾನೇ ಹೆಸರು ಇಟ್ಟಿರ್ತಾಳೆ.. ಅವಳು ಅಷ್ಟೇ ಕರೀತಾ ಇದ್ದಿದ್ದು ಹೋಗಿ ಇಡೀ ಸ್ಕೂಲ್ ನೇ ಹರ್ಷ ಗೆ ಗುಲಾಬ್ ಜಾಮೂನ್ ಅಂತಾ ಕರೀತಾ ಇರ್ತಾರೆ..


ಹರ್ಷ ಗೆ ಸ್ನೇಹ ಹೆಚ್ಚಾಗಿ ಪ್ರೀತಿಗೆ ಮುನ್ನುಡಿ ಬರೀತಾ ಇರ್ತಾನೇ..


ಹರ್ಷಿತಾ ಇದ್ಯಾವುದರ ಪರಿವೇ ಇಲ್ಲದೇ ಸ್ನೇಹ ನಾ ಸ್ನೇಹ ದ ತರಹ ನೇ ನೋಡ್ತಾ ಇರ್ತಾಳೆ .


ಹತ್ತನೇ ತರಗತಿ ಮುಗಿಯುತ್ತೆ...


ಒಳ್ಳೆ ಪರ್ಸಂಟೇಜ್ ತಗೆದಿದ್ದಾ ಹರ್ಷ., ಅವರ ತಂದೆಯ ಮಾತಿನಂತೆ ಹೈದರಾಬಾದ್ ನಾ ಐಐಟ್ ಲಿ ಓದೋಕೆ ಜಾಯಿನ್ ಆಗ್ತಾನೆ.


ಇತ್ತಾ ಹರ್ಷಿತಾ ಸಹ ಪಿ ಯು ಸಿ ಓದೋಕೆ ಜಾಯಿನ್ ಹಾಕ್ತಾಳೆ..


ಕರಣ್ ಮತ್ತೇ ಗೌರಿ ಒಂದೇ ಕಾಲೇಜ್ ಲಿ ಓದ್ತಾ ಇರ್ತಾರೆ..


ಹರ್ಷ ಅವರ ಮನೇಲೇ ಆದ್ರೂ., ಹರ್ಷಿತಾ ಅವರ ಮನೇಲೇ ಆದ್ರೂ ಮೊಬೈಲ್ ಕೊಡ್ಸಿರಲ್ಲಾ.. ಅದೇ ಕಾರಣಕ್ಕೆ ಅವರೆಲ್ಲಾರ ಕಾಂಟಾಕ್ಟ್ ತಪ್ಪಿರತ್ತೆ..


ಹರ್ಷ ಐಐಟಿ ಲಿ ತನ್ನ ವಿದ್ಯಾಭ್ಯಾಸ ಎಲ್ಲಾ ಮುಗಿಸಿ.. ಒಂದೊಳ್ಳೆ ಸ್ಟಾರ್ಟ್ ಅಪ್ ಕಂಪನಿ ನಾ ಶುರು ಮಾಡ್ಕೊಂತಾನೇ..


ಹರ್ಷಿತಾ ಎಂ ಬಿ ಎ ಮುಗಿಸಿ ಹೋಟಲ್ ಮ್ಯಾನೇಜ್ಮೆಂಟ್ ಓದಿ ಈಗ ಒಂದೊಳ್ಳೆ ನಮ್ಮ ಮನೆ ಅಡುಗೆ ಅಂತಾ ರೆಸ್ಟೋರೆಂಟ್ ಓಪನ್ ಮಾಡಿರ್ತಾಳೆ..


ಬರೋಬ್ಬರಿ ಹತ್ತು ವರ್ಷಗಳ ನಂತರ ಸಿಕ್ಕ ಕರಣ್ ಮೊನ್ನೆ ಒಂದು ಮೀಟಿಂಗ್ ಲಿ ಹರ್ಷ ಸಿಕ್ಕಿದಾಗ ಅವನ ನಂಬರ್ ತಗೊಂಡು ಇದೆಲ್ಲಾ ವಿಷಯ ಹೇಳಿರ್ತಾನೇ..


************************-**********


........ಟ್ರಿಣ್ ಟ್ರಿಣ್.......


ಮೊಬೈಲ್ ಮೆಸೇಜ್ ಸೌಂಡ್ ಗೆ ಹರ್ಷ ಖುಷಿಯಾಗಿ ಹರ್ಷಿತಾ ದೇ ಅನ್ಕೊಂಡಿ ಮೊಬೈಲ್ ನೋಡ್ತಾನೆ ಆದ್ರೆ ಅವನ ನಿರೀಕ್ಷೆ ಸುಳ್ಳಾಗಿರತ್ತೇ.. ಆಫೀಸ್ ಯಿಂದ ಯಾವುದೋ ಮೆಸೇಜ್ ಬಂದಿರೋದ್ನ ನೋಡಿ ಲ್ಯಾಪ್ಟಾಪ್ ಆನ್ ಮಾಡ್ಕೊಂಡು.., ಹರ್ಷಿ ಯಾಕ್ ಮೆಸೇಜ್ ಗೆ ರಿಪ್ಲೈ ಮಾಡ್ಲಿಲ್ಲ ಅಂತಾ ಯೋಚಿಸ್ತಾ ಕೆಲಸ ಮಾಡ್ತಾ ಇರ್ತಾನೇ..


***&&&*&&&*&&&&&&&&************


ಇತ್ತಾ ಅದೇ ತಾನೇ ಹೋಟೆಲ್ ಕದ ಹಾಕಿ ಬಂದ ಹರ್ಷಿತಾ ಬೆಡ್ ನೋಡಿದ್ದೇ ಆರಾಮಾಗಿ ಮಲಗಿ ಸ್ವಲ್ಪ ರೆಸ್ಟ್ ಮಾಡ್ತಾಳೆ..


ರಾತ್ರಿ ಹನ್ನೆರಡು ಗಂಟೆ..!!!


ಗುಡ್ ನೈಟ್ ಅಂತಾ ಹರ್ಷ ಮೆಸೇಜ್ ಮಾಡ್ತಾನೇ.. ಇನ್ನು ಹರ್ಷಿತಾ ಅವನ ಮೆಸೇಜ್ ನೋಡೇ ಇಲ್ವಲಾ ಅನ್ನೋ ಗೊಂದಲದಲ್ಲೇ..


ಟ್ರಿಣ್ ಟ್ರಿಣ್ ಮೆಸೇಜ್ ಬಂತು ಅನ್ನೋ ಮೆಸೇಜ್ ನಾ ವಾಣಿ ಗೆ ಹರ್ಷಿತಾ ಗೆ ಎಚ್ಚರ ಆಗಿ ಇಷ್ಟೋತ್ತಲ್ಲಿ ಯಾರ್ ಮೆಸೇಜ್ ಮಾಡ್ತಾರೆ ಅಂತಾ ಆಲಸ್ಯದಿಂದಾನೆ ಮೊಬೈಲ್ ನೋಡ್ತಾಳೆ..


ಎಲ್ಲಾ ಮೇಸಜ್ ಓದಿ ಕೊನೆಗೆ ಇದ್ಯಾರು ಅನ್ನೌನ್ ಅಂತಾ ಹರ್ಷ ಕಳಿಸಿದ ಮೆಸೇಜ್ ಓಪನ್ ಮಾಡ್ತಾಳೆ....


" ಹೇ ಹಾಯ್ ಹೇಗಿದ್ದೀಯ.,ನನ್ನಾ ನೆನಪು ಇದೆ ಅನ್ಕೊಂಡು ಮೆಸೇಜ್ ಮಾಡ್ತಿದೀನಿ.,ಐಮ್ ಗುಂಡು ಗುಂಡು ಗುಲಾಬ್ ಜಾಮೂನ್. ನೀನೇ ಇಟ್ಟಂತ ಹೆಸರು ಹೋಪ್ ದಟ್ ನೌ ಯು ಗಾಟ್ ಇಟ್.ವನ್ಸ್ ಅಗೈನ್ ಹೇಗಿದ್ದೀಯ.. ನೀನ್ ಬಿಡು ಎಲ್ಲಿದ್ರೂ ಚೆಂದ ಇರ್ತೀಯ.. ಯಾಕೆ ಹೇಳು ನೀನೇ ಅಲ್ವಾ.. ಎಲ್ಲರ ಜೊತೆಗೂ ಹರುಷವನ್ನ ಹಂಚ್ಚಿಕೊಂಡು ನಲಿಯೂ ಹರ್ಷಿತಾ..!!

ನಿನ್ ನಂಬರ್ ನಂಗೇಗೆ ಸಿಗ್ತು ಅಂತಾನಾ.. ಅದು ಮೊನ್ನೆ ಮುಂಬೈ ಲಿ ಒಂದು ಮೀಟಿಂಗ್ ಇತ್ತು ಹೋಗಿದ್ದೆ ಕರಣ್ ಸಿಕ್ಕಿದ್ದ., ಅವನ್ನ ಕೇಳಿದೆ ಕೊಟ್ಟ.. ನೀನೇನು ಬೆಂಗಳೂರಲ್ಲಿ ಸೆಟಲ್ ಆಗಿದೀಯ ಅಂತೆ..ತುಂಬಾ ಖುಷಿ ಆಯ್ತು ಕೇಳಿ.. ಹೋಟೆಲ್ ಬ್ಯುಸಿನೆಸ್ ಬೇರೆ ಮಾಡ್ತಿದಿ ಅಂತೆ.. ಅಬ್ಬಬ್ಬಾ ನಿನ್ ನಗು ನೇ ನೋಡ್ತಾ ಕಸ್ಟಮರ್ ಊಟ ಮಾಡಿ ಸುಮ್ನೇ ಹೋಗ್ತಾರೋ ಇಲ್ವೋ ನಿನ್ನೇ ನೋಡ್ತಾ ಹೊಟ್ಟೆ ತುಂಬಿದ್ರು ಮತ್ತೇ ಆರ್ಡರ್ ಮಾಡ್ಕೊಂಡು ಕುತ್ಗೊಂತಾರೋ ಅಲ್ವಾ.. . ಮತ್ತೇ ಹೇಗಿದೆ ಜೀವನ.. ಆದಷ್ಟು ಬೇಗ ನಿಂಗೆ ನನ್ ನೆನಪಾಗಿ ಮತ್ತೇ ಮರು ಸಂದೇಶ ಬರಲಿ ಅನ್ನೊದು ನನ್ನಾ ಆಸೆ..


ಒಂದೊಂದು ಲೈನ್ ನು ಓದ್ತಾ ಇದ್ದಾ ಹರ್ಷಿತಾ ಗೆ ಎಲ್ಲಿಲ್ಲದ ಆನಂದ ಸಂತೋಷ..


ಅರೇ ಗುಂಡು ಗುಂಡು ಗುಲಾಬ್ ಜಾಮೂನ್ ಅನ್ಕೊಂತಾ ಅವನಿಗೆ ಕಾಲ್ ನೇ ಮಾಡಿ ಬಿಡ್ತಾಳೆ.. ಸಮಯ ನು ಲೆಕ್ಕಿಸದೆ..


ಹರ್ಷಿ ಯಾಕೆ ಮೆಸೇಜ್ ನೋಡೇ ಇಲ್ಲಾ ಅಂತಾ ಯೋಚಿಸ್ತಾ ಇದ್ದಾ ಹರ್ಷ ಗೆ ಹರ್ಷಿತಾ ಕಡೆ ಯಿಂದ ಬಂದ ಕಾಲ್ ನೋಡಿ ಸ್ವರ್ಗಕ್ಕೆ ಮೂರೇ ಗೇಣು ಅನ್ನೋವಷ್ಟು ಖುಷಿಯಾಗಿ ರಿಸೀವ್ ಮಾಡ್ತಾನೇ..

" ಹಲೋ " ಹರ್ಷ ಸಂಕೋಚದಿಂದಾನೆ ಹೇಳ್ತಾನೆ..


ಹೇ ಗುಂಡು ಗುಂಡು ಗುಲಾಬ್ ಜಾಮೂನ್ ಹೇಗಿದ್ದೀಯ.., ಯಪ್ಪಾ ನಿಂಗೊತ್ತಾ ನಂದು ಪಿಯುಸಿ ಆದ್ಮೇಲೆ ಮೊಬೈಲ್ ತಗೊಂಡೆ ನಿನ್ ನಂಬರ್ ನೇ ಸಿಗ್ಲಿಲ್ಲಾ ಅಂತಾ ಅದು ಇದು ಹೇಳ್ತಾ ಇರ್ತಾಳೆ ಅವನಿಗೆ ಮಾತಾಡೋಕೆ ಅವಕಾಶ ನೇ ಕೊಡದೆ.


ಅವಳ ಮಾತಲ್ಲೇ ಕಳೆದು ಹೋಗಿರ್ತಾನೇ ಹರ್ಷ..


ಅಯ್ಯೋ ಸಾರೀ ಸಾರೀ ನಾನೊಂದು ನಿಂಗೆ ಮಾತಾಡೋಕೆ ಅವಕಾಶ ಕೊಡ್ತಿಲ್ಲ ಅಂತಾ ನಗ್ತಾ.. ಈಗ ಹೇಳು ಎಲ್ಲಿದೀಯ ಏನೂ ಕಥೆ ಅಂತಾಳೆ..


ಇನ್ನು ಅವಳ ಮಾತಿನ ಗುಂಗಲ್ಲೇ ಇದ್ದಾ ಹರ್ಷ ಗೆ ಹಲೋ ಗುಲಾಬ್ ಜಾಮೂನ್ ಇದ್ದೀರಾ ಲೈನ್ ಲಿ ಅಂತಾ ಹರ್ಷಿತಾ ಕೇಳಿದಾಗ್ಲೇ ಎಚ್ಚೆತ್ತು ಹಾ ಹಲೋ ಇದ್ದೀನಿ ಹೇಳು ಅಂತಾನೇ..


ನಾನೇನು ಹೇಳೋದು.. ಕರಣ್ ಎಲ್ಲಾ ಹೇಳಿದಾನೇ ಅಲ.. ಅದ್ನೇ ಮಾಡ್ತಿರೋದು ಇವಾಗ ಅಂತೇಳಿ..ಹೌದು ನೀನೆಂತ ಮಾಡ್ತಿದೀಯ... ಎಲ್ಲಿದೀಯ ಇವಾಗ ಅಂತಾ ಕೇಳ್ತಾ...ಸಾರೀ ಫುಲ್ ಬ್ಯುಸಿ ಮದ್ಯಾನ ಅದ್ಕೆ ಮೊಬೈಲ್ ನೇ ನೋಡಿದ್ದಿಲ್ಲಾ ಅಂತಾಳೆ..


ಹಾ ಪರವಾಗಿಲ್ಲ ಬಿಡು ಅಂತೇಳಿ.. ನಾನು ಸದ್ಯಕ್ಕೆ ಹೈದರಾಬಾದ್ ನಲ್ಲೇ ಇದೀನಿ ಒಂದು ಕಂಪನಿ ಶುರು ಮಾಡೀನಿ ಅಂತಾ ಎಲ್ಲಾ ಹೇಳ್ತಾನೆ ವರ್ಕ್ ಬಗ್ಗೆ..


ಅಲ್ಲಾ ಮಾರಾಯ., ಫೇಸ್ಬುಕ್ ಆರ್ ಇನ್ಸ್ಟಾಗ್ರಾಮ್ ಒಂದಾದ್ರು ಅಕೌಂಟ್ ಇಡೋದು ಬೇಡ್ವಾ ನಿಂದು.. ನಂಗು ಕಿರಣ ನಿಗೂ ಬಿಡು ನಿನ್ನಾ ಹುಡುಕಿ ಹುಡುಕಿ ಸಾಕಾಯ್ತು ಅಂತಾಳೆ..


ಅಯ್ಯೋ ಸಾರೀ ಅದು ಅಪ್ಪಾ ಮೊಬೈಲ್ ನೇ ಕೊಡ್ಲಿಲ್ಲ ನಂಗೆ., ಈಗ ಚೆನ್ನಾಗಿ ಓದಿದ್ರೆ ಇಂತ ನೂರು ಅಲ್ಲಾ ಸಾವಿರಾರು ಮೊಬೈಲ್ ತಗೋಬೋದು ಅಂತಾ ಹೇಳಿ ಬಿಟ್ಟಿದ್ರು ಅದ್ಕೆ ಓದೋದರ ಗಮನದಲ್ಲಿ ಮೊಬೈಲ್ ಕಡೆ ಆಗ್ಲಿ ಸೋಶಿಯಲ್ ಮೀಡಿಯಾ ಕಡೆ ಆಗ್ಲಿ ತಲೆ ಹಾಕ್ಲೆ ಇಲ್ಲಾ ಅಂತಾನೇ ಹರ್ಷ..


ಓಹ್ ಸಾಹೇಬ್ರು ಏನೂ ವಿಜ್ಞಾನಿ ಆಗ್ಬೇಕು ಅಂತಿದೀರೋ ಅಂತಾ ಕೇಳ್ತಾಳೆ..


ಆಗ ಹರ್ಷ ನಗ್ತಾ ' ವಿಜ್ಞಾನಿ ಏನೂ ಬೇಡಮ್ಮ ಒಂದೊಳ್ಳೆ ಬ್ಯುಸಿನೆಸ್ ಮಾಡ್ಬೇಕು ಅನ್ನೋದು ನನ್ನಾ ಯೋಚನೆ ಅಂತಾನೇ..


ಸರಿ ಸರಿ ಏನೋ ಒಂದು ಮಾಡು ಒಳ್ಳೇದಾಗ್ಲಿ.. ಮತ್ತೇ ಬೆಂಗಳೂರಿಗೆ ಯಾವಾಗ ಬರ್ತೀಯ ಎಲ್ರು ಮೀಟ್ ಮಾಡಣ ಅಂತಾಳೆ...


ಮೊದಲನೇ ಕರೆ ಯಲ್ಲೇ ಮೀಟ್ ಮಾಡೋಣ ಅಂತಾ ಹರ್ಷಿತಾ ಹೇಳಿದ್ದು ಕೇಳಿ ಆವಾಗ್ಲೇ ಹರ್ಷ ಮನಸ್ಸಲ್ಲೇ ಖುಷಿ ಪಡ್ತಾ " ಖಂಡಿತಾ ಮೀಟ್ ಮಾಡಣ ಯಾವಾಗ ಅಂತೇಳು ಐ ವಿಲ್ ಕಮ್ " ಅಂತಾನೇ..


ಇನ್ನೇನು ನಾಳೆ ನೇ ವೀಕೆಂಡ್ ಬಟ್ ನಂಗೆ ವೀಕೆಂಡ್ ಲಿ ಹೆವಿ ಕಸ್ಟಮರ್ ಇರ್ತಾರೆ ಸೊ ಬುಧವಾರ ಆರ್ ಗುರುವಾರ ಆಗುತ್ತಾ ಅಂತಾ ಕೇಳ್ತಾಳೆ..


ಅಲ್ಲಾ ಹರ್ಷಿತಾ ಕಸ್ಟಮರ್ ಇದ್ರೆ ನೀನೇನು ಸರ್ವ್ ಮಾಡ್ತೀಯ ಅದ್ಕೆ ಅಂತಾ ವೇಟರ್ಸ್ ಇರ್ತಾನೇ ತಾನೇ.. ಅಂತಾ ಕೇಳ್ತಾನೆ.. ಅಷ್ಟೊಂದು ಬ್ಯುಸಿ ಯ್ಯಾಕೆ ಅನ್ನೋ ಗೊಂದಲದಿಂದ..


ಅರೇ ಪುಣ್ಯಾತ್ಮ ನಾನೇನು ಸರ್ವ್ ಮಾಡಲ್ಲ., ಎಲ್ಲದಕ್ಕೂ ಎಲ್ಲಾರು ಇದಾರೆ.. ನಾನು ಜಸ್ಟ್ ಅಲ್ಲೇಲ್ಲಾದನ್ನು ನೋಡ್ಕೊಂತ ಇರ್ತೀನಿ.. ಎಷ್ಟೇ ಆಗ್ಲಿ ಆಳು ಮಾಡಿದ್ದೂ ಹಾಳು ಹೇಳಿಲ್ವಾ ದೊಡ್ಡೋರು ಗಾದೆ ಮಾತ್ನ ಅಂತಾ ಕೇಳ್ತಾಳೆ..


ಹೌದಮ್ಮ., ಇವಾಗ್ ನೀವು ತುಂಬಾ ದೊಡ್ಡರ ಮಾತನ್ನ ಶಿರಸಾವಹಿಸಿ ಪಾಲಿಸ್ತೀರಾ ಅಂತಾನೇ ನಗ್ತಾ..


ಹೌದು ಹೌದು ಅಂತಾ ಅವನ ನಗು ಗೆ ತಾನು ಜೊತೆ ಆಗ್ತಾಳೆ.. ಮತ್ತೇ ಯಾವಾಗ ಮೀಟ್ ಮಾಡೋದು ಅಂತಾಳೆ..


ನಾನು ಇಲ್ಲಿ ಎಲ್ಲಾ ವರ್ಕ್ ನು ನೋಡ್ಕೊಂಡು ಯಾವುದಕ್ಕೂ ನಾನು ಬೆಳಗ್ಗೆ ಹೇಳ್ತೀನಿ ಅಂತಾನೇ..


ಸರಿ ಅಂತೇಳಿ ಇಬ್ಬರು ಫೋನ್ ಇಟ್ಟು ಎಷ್ಟೋ ದಿನದ ನಿದ್ದೆ ಆ ರಾತ್ರಿ ಫುಲ್ಫಿಲ್ ಮಾಡ್ಕೊಂತಾರೆ.. ಅದೆಷ್ಟೋ ಕೆಲಸ.. ಅದೆಷ್ಟೋ ಗಂಜಾಟ ಗಳ ನಡುವೇನು ಅದೆಲ್ಲದರ ಪರಿವೇ ಇಲ್ಲದೇ ನಿದ್ದೆ ಮಾಡಿರ್ತಾರೆ..


*****************************************


ಹರ್ಷಿತಾ ಬೆಳಗ್ಗೆ ಎದ್ದು ಎಂದಿನಂತೆ ತನ್ನ ಹೋಟೆಲ್ ಗೆ ಹೋಗಿ ಕೆಲಸ ಶುರು ಮಾಡ್ತಾಳೆ..


ಹರ್ಷ ಸಹ ತನ್ನೆಲ್ಲ ಕೆಲಸ ನು ಸ್ವಲ್ಪ ದಿನದಲ್ಲೇ ಆಲ್ಮೋಸ್ಟ್ ಮುಗಿಸಿ.. ಯಾವುದೇ ಮೀಟಿಂಗ್ ಇದ್ರೂ ಅವುನ್ನೆಲ್ಲಾ ಪೋಸ್ಟ್ ಫೋನ್ ಮಾಡ್ಸಿ ಒಂದೆರಡು ದಿನಾ ನೆಮ್ಮದಿಯಾಗಿ ಹರ್ಷಿತಾ ಜೊತೆ ಕಾಲ ಕಳಿಯೋ ಸಿದ್ಧತೆ ಮಾಡ್ತಾ ಇರ್ತಾನೇ..


*******&*******&*********&********


ಒಂದಿನಾ ಹರ್ಷ ಗ್ರೂಪ್ ಕಾಲ್ ಮಾಡ್ತಾನೆ ಕರಣ್ ಗೌರಿ ಹರ್ಷಿತಾ ಎಲ್ಲಾರು ಜಾಯಿನ್ ಆಗಿ ಬರೋಬ್ಬರಿ ಒಂದು ತಾಸು ಮಾತಾಡ್ತಾರೆ..


ಎಲ್ರು ಒನ್ ಡೇ ಮೀಟ್ ಮಾಡೋಣ ಅಂದಾಗ ಎಲ್ಲಾರು ಒಪ್ತಾರೆ.. ಆಗ ಹರ್ಷ " ಇದೆ ಬುಧವಾರ ಬೆಳಗ್ಗೆನೇ ನಾನು ನಮ್ಮ ಮನೆ ಅಡುಗೆ ಹೋಟೆಲ್ ಲೇ ತಿಂಡಿ ತಿನ್ನೋದು ಅಂತಾನೇ..


ಹರ್ಷಿತಾ ಫುಲ್ ಖುಷಿ ವೈಟಿಂಗ್ ಫಾರ್ ದಟ್ ಅಂತಾಳೆ..


ಕರಣ್ ಗೌರಿ ನು " ಆಗಿದ್ರೆ ನಮ್ ಮನೆ ಅಡುಗೆ ಅಲ್ಲೇ ನಮ್ ಬುಧವಾರ ದ ಊಟ " ಅಂತಾರೇ..


ಎಲ್ಲಾರು ಫ್ರೆಂಡ್ಸ್ ಗಳು ಖುಷಿಯಾಗಿ ಬುಧವಾರಕ್ಕೋಸ್ಕರ ಕಾಯ್ತಾ ಇರ್ತಾರೆ..


****&*&*&*&*&*&*&*&&&*&*******


ಆವತ್ತು ಬುಧವಾರ ಬೆಳಗ್ಗೆ ಆರು ಗಂಟೆ...!!!


ಹರ್ಷಿತಾ ಆವಾಗ್ಲೇ ನೂರ್ ಡ್ರೆಸ್ ಚೇಂಜ್ ಮಾಡಿ ಮಾಡಿ ಸಾಕಾಗಿ ಕೊನೆಗೆ ಒಂದು ಲೈಟ್ ಪಿಂಕ್ ಕಲರ್ ಸಲ್ವಾರ್ ಹಾಕೊಂಡು ಫ್ರೀ ಹೇರ್ಸ್ ನೆಲ್ಲಾ ನೀಟಾಗಿ ಮೇಲೆ ಕಟ್ಟಿ ಒಂದು ಕ್ಲಿಪ್ ಹಾಕೊಂಡು ಲೈಟ್ ಆಗಿ ಮೇಕ್ಅಪ್ ಮಾಡ್ಕೊಂಡು ಹೋಟೆಲ್ ಗೆ ಬಂದು ಮೆನು ನೆ ಚೇಂಜ್ ಮಾಡಿಸಿ ಬಿಡ್ತಾಳೆ ಅವತ್ತಿಂದು..


ಕಸ್ಟಮರ್ಸ್ ಬರೋಕೆ ಶುರು ಆಗುತ್ತೆ..


ಪದೇ ಪದೇ ಬಾಗಿಲ ಕಡೆನೇ ನೋಡ್ತಾ ಇದ್ದಾ ಹರ್ಷಿತಾ ನಾ ನೋಡಿ " ಮೇಡಂ ಏನಾಯ್ತು.,ಯಾರಾದ್ರೂ ಬರೋರಿದ್ರಾ" ಅಂತಾ ಕೇಳ್ತಾಳೆ ಬಿಲ್ ಹಾಕ್ತಾ ಇದ್ದಾ ಅವಳ ಗೆಳತಿ ಗ್ರೀಷ್ಮಾ..


ಹಾ ಗ್ರೀಷ್ಮಾ ನನ್ ಫ್ರೆಂಡ್ ಬರ್ತಿದಾನೆ ಹೈದರಾಬಾದ್ ಯಿಂದ ಅಂತಾಳೆ ತುಂಬಾ ಖುಷಿಯಿಂದ ..


ಅವಳ ಆ ಖುಷಿಗೆ ಇನ್ನೋಷ್ಟು ಕುಮ್ಮಕ್ಕು ಕೊಡೋಕೆ ಅಂತಾ! ಆ ಶಿವ ಅವಳ ಹರ್ಷ ನ್ನಾ ಅಲ್ಲಿಗೇ ಬೇಗನೇ ಕಳ್ಸ್ತಾನೆ..!


ತಿಳಿನೀಲಿ ಕಂಗಳ ಚೆಲುವ ಈ ಹರ್ಷ!., ರೆಡ್ ಶರ್ಟ್ ಹಾಕಿದ್ದು, ಬ್ಲೂ ಜೀನ್ಸ್ ಹಾಕಿರ್ತಾನೇ., ಸ್ವಲ್ಪ ಜಾಸ್ತಿನೇ ಅನ್ನೋ ಅಷ್ಟು ಕೂದಲು ಬಿಟ್ಗೊಂಡು ಗಾಳಿಗೆ ಹೇರ್ಸ್ ನಾ ಸರಿ ಮಾಡ್ಕೊಂತ ಬರ್ತಾನೆ ಕೌಂಟರ್ ಹತ್ರಾ !!!.,


ಇಲ್ಲಿ ಹರ್ಷಿತಾ ಬಿಟ್ಟ ಕಣ್ಣು ಬಿಟ್ಟಂಗೆ ನೋಡ್ತಾ ಇರ್ತಾಳೆ ಅವನನ್ನೇ..!!


" ಹಲೋ ಮೇಡಂ "..ಅಂತಾ ಕಣ್ಣಾ ಮುಂದೆ ಬಂದ ಹರ್ಷ ಚಿಟಕಿ ಹೊಡೆದು ಕೇಳಿದಾಗ್ಲೇ., ಹರ್ಷಿತಾ ತನ್ನ ತನಕ್ಕೆ ತಾನೇ ನಕ್ಕು " ಅಯ್ಯೋ ಸಾರೀ ಸಾರೀ " ಅಂತಾ ಕಮ್ ಇನ್ಸೈಡ್ ಅಂತಾ ಹೇಳ್ತಾ ಗ್ರೀಷ್ಮಾ ಟೇಕ್ ಕೇರ್ ಆಫ್ ಹಿಯರ್ ಅಂತೇಳಿ ಹರ್ಷ ನ್ನಾ ಕರ್ಕೊಂಡು ಹೋಗ್ತಾಳೆ ಹೋಟೆಲ್ ಒಳಗೆ..


ಹೋಟೆಲ್ ಏನಮ್ಮಾ ಈ ರೇಂಜ್ ಗೆ ಇದೆ ಸೂಪರ್ ಹರ್ಷಿತಾ ಅಂತಾನೇ..


ಹು ಥ್ಯಾಂಕ್ಸ್ ಅಂತಾಳೆ ಮನಸ್ಸಲ್ಲೇ ನಗ್ತಾ.. ಇನ್ನು ಅವಳು ಅವನ ಗುಂಗಿಂದ ಹೊರಗೆ ಬಂದಿರಲ್ಲ..


ಹೋಟೆಲ್ ಒಳಗೆ ಒಂದು ಪುಟ್ಟ ರೂಮ್ ಇರುತ್ತೆ ಅಲ್ಲಿಗೇ ಬರ್ತಾರೆ ಇಬ್ಬರು..


ಓಹ್ ! ಅದೇನೋ., ಈ ಹುಡುಗಿಯರಿಗೆ ಪಿಂಕ್ ಕಲರ್ ಮೇಲೆ ಲವ್ ನೋ ನಾ ಕಾಣೆ ಅಂತಾ ರೂಮ್ ನೋಡಿ ಡೆಕೋರೇಷನ್ ಎಲ್ಲಾ ಸೂಪರ್ ಮತ್ತೇ ಸಿಸ್ಟಮ್ಯಾಟಿಕ್ ಆಗಿದೆ ಹರ್ಷಿತಾ ಅಂತಾ ಸುತ್ತಲೂ ನೋಡ್ತಾ ಹೇಳ್ತಾನೆ.


ಹರ್ಷಿತಾ ಗೆ ಖುಷಿ ಆಗುತ್ತೆ. ಅವಳೇ ಆ ರೂಮ್ ಫುಲ್ ಡೆಕೋರೇಷನ್ ಮಾಡಿರ್ತಾಳೆ..


ಥ್ಯಾಂಕ್ಸ್ ಹರ್ಷ ಅಂತೇಳಿ ನೀವು ಫ್ರೆಶ್ ಅಪ್ ಆಗಿ ಬನ್ನಿ ಟಿಫ್ಫೆನ್ ಮಾಡೋಣ ಅಂತೇಳಿ ಕೌಂಟರ್ ಹತ್ರಾ ಬಂದು ಒಂದು ಟೇಬಲ್ ನ ಸ್ಪೆಷಲ್ ಆಗಿ ಡೆಕೋರೇಟ್ ಮಾಡ್ಸೋಕೆ ಹೇಳೋಣ ಅಂತಾ ಗ್ರೀಷ್ಮಾ ನ ಕೇಳ್ತಾಳೆ.,


ಆದ್ರೆ ಗ್ರೀಷ್ಮಾ., ಮೇಡಂ ಅಲ್ಲಿ ನೋಡಿ ಅಂತ ಒಂದು ಟೇಬಲ್ ಕಡೆ ಕೈ ಮಾಡಿ ತೋರ್ಸ್ತಾಳೆ..


ಆ ಟೇಬಲ್ ಆವಾಗ್ಲೇ ಫುಲ್ ಆಫ್ ರೋಸ್ಸ್ ಯಿಂದ ಬ್ಯೂಟಿಫುಲ್ ಆಗಿ ಡೆಕೋರೇಷನ್ ಮಾಡಿ ಆಗಿರತ್ತೆ..


ಹರ್ಷಿತಾ ಗೆ ಆಶ್ಚರ್ಯ ಆಗಿ " ಏನೀದು ಗ್ರೀಷ್ಮಾ ನಾನು ಹೇಳೋಕು ಮುಂಚೆನೇ ರೆಡಿ ಮಾಡಿದೀರಾ " ಯಾರಾದ್ರೂ ರೆಸೆರ್ವ ಮಾಡಿದ್ರಾ ಫೋನ್ ಮಾಡಿ "" ಅಂತಾ ಕೇಳ್ತಾಳೆ.


ಅರೇ ಮೇಡಂ ಯಾರು ಫೋನ್ ಮಾಡಿಲ್ಲಾ. ನಿಮ್ ಫ್ರೆಂಡ್ ಬರ್ತಿದಾರೆ ಅಂತಾ ಹೇಳಿದ್ರಲ್ಲಾ.. ಹಾಗೆ ನೀವೂನು ಇವತ್ತು ಸ್ವಲ್ಪ ಡಿಫರೆಂಟ್ ಆಗಿ ಕಾಣ್ತಿದ್ದೀರಾ ಸೊ ಬರೋ ಫ್ರೆಂಡ್ ಯಾಕೋ ನಿಮ್ಗೆ ಬಾಳ ಆತ್ಮೀಯರೇ ಇರ್ಬೇಕು ಅಂತಾ ಅನ್ನಿಸಿ ನಾನೇ ಆ ಟೇಬಲ್ ಡೆಕೋರೇಟ್ ಮಾಡೋಕೆ ಹೇಳಿದ್ದು ಅಂತಾಳೆ..


ಹರ್ಷಿತಾ ಗೆ ತುಂಬಾ ಖುಷಿಯಾಗಿ "ಥಾಂಕ್ ಯು ವೆರಿ ಮಚ್ ಗೀ " ಅಂತಾ ತಬ್ಬಿಕೊಂಡು ತನ್ನ ಸಂತೋಷ ನ ವ್ಯಕ್ತಪಡಿಸ್ತಾಳೆ..


ಫ್ರೆಶ್ಅಪ್ ಆಗಿ ಹರ್ಷ ಬಂದಾಗ ಹರ್ಷಿತಾಳ ಎಂಪ್ಲಾಯೀಸ್ ಅವನ್ನ ಬನ್ನಿ ಸರ್ ಅಂತೇಳಿ ತುಂಬು ಗೌರವದಿಂದಾ ಡೆಕೋರೇಷನ್ ಮಾಡಿರೋ ಟೇಬಲ್ ಹತ್ರಾ ಕರ್ಕೊಂಡು ಹೋಗಿ ಕುತ್ಗೊಳೋಕೆ ಹೇಳ್ತಾರೇ.


ಹರ್ಷ ಆ ಸ್ವಾಗತದಿಂದ ತುಂಬಾ ಖುಷಿಯಾಗಿ ಎಲ್ಲಾರಿಗೂ ಥ್ಯಾಂಕ್ಸ್ ಹೇಳ್ತಾನೆ..


ಹರ್ಷಿತಾ ಬಂದು ಅವನ ಮುಂದೆ ಕುತ್ಗೊಂಡು ಹೇಗಿತ್ತು ಅಂತಾಳೆ ಹುಬ್ಬೆರಿಸಿ.


ಸೂಪರ್ ಮೇಡಂ ಅಂತಾ ಹರ್ಷ ಹೇಳ್ತಾ ಥ್ಯಾಂಕ್ಸ್ ಅ ಲಾಟ್ ಅಂತಾನೇ..


ಹರ್ಷಿತಾ ಸುಮ್ನೇ ಒಂದು ಸ್ಮೈಲ್ ಮಾಡಿ ಆರ್ಡರ್ ಮಾಡಿ ಅಂತೇಳಿ.. ವೇಟರ್ ನಾ ಕರೀತಾಳೆ..


ಅಯ್ಯೋ ನಾನೇನ್ ಆರ್ಡರ್ ಮಾಡ್ಲಿ ನಿಮ್ ಹೋಟೆಲ್ ನಿಮ್ಗೆ ಗೊತ್ತಿರತ್ತೆ ಏನ್ ಚೆಂದ ಇರುತ್ತೆ ಅಂತಾ ಸೊ ನೀನೇ ಹೇಳು ಅಂತಾನೇ ಹರ್ಷ..


ಅರೇ ಹರ್ಷ ಹೆತ್ತ ತಾಯಿಗೆ ಹೆಗ್ಗಣನೇ ಮುದ್ದು ಅಂತಾರೆ ಸೊ ನಂಗೆ ನಮ್ ಹೋಟೆಲ್ ಲಿ ಮಾಡೋ ಎಲ್ಲಾನು ಇಷ್ಟಾ ಅದ್ಕೆ ನಿಂಗೆ ಯಾವುದು ಬೇಕು ಅದ್ನಾ ಹೇಳು ಅಂತಾಳೆ ಮೆನು ಕೈಯಲ್ಲಿ ಕೊಡ್ತಾ..


ಹರ್ಷ ಒಮ್ಮೆ ಮೆನು ಓದ್ತಾ ಇರ್ತಾನೇ.. ಅಸ್ಟ್ರಲ್ಲೇ ಅಲ್ಲಿಗೇ ಬಂದ ರೇಷ್ಮಾ., " ಸರ್ ಮೆನು ಬಿಡಿ ಬದಲಿಗೆ ಇವತ್ತಿನ ಸ್ಪೆಷಲ್ ಇದೆ ಅದ್ನೇ ತರ್ಲಾ " ಅಂತಾ ಕೇಳ್ತಾಳೆ..


ಹರ್ಷ ನು ಸರಿ ತನ್ನಿ ಅಂದಾಗ.. ಹರ್ಷಿತಾ ಗೆ ನಿಜಕ್ಕೂ ಗ್ರೀಷ್ಮಾ ಒಂದೊಳ್ಳೆ ಫ್ರೆಂಡ್ ಅನ್ನೋದು ಪ್ರೋವ್ ಮಾಡಿದ್ಲು ಅಂತಾ ನೆಂಸ್ಕೊಂಡು ಒಂದು ಕಿರು ನಗೆ ಲಿ ಇರ್ತಾಳೆ.


ಟಿಫ್ಫೆನ್ ಬರುತ್ತೆ. ವೇಟರ್ ಸರ್ವ್ ಮಾಡ್ತಾನೇ.. ಆಗ ಗ್ರೀಷ್ಮಾ ಬಂದು ಸರ್ ಇನ್ನೇನಾದ್ರೂ ಬೇಕಾ ಇದರ ಜೊತೆಗೆ ಅಂತಾಳೆ..


ಆವಾಗ್ಲೇ ಹರ್ಷ ಗೆ ಫುಲ್ ಖುಷಿ ಆಗಿರತ್ತೆ.. ಅವನ ಫೇವರಿಟ್ ಮಾವಿನಕಾಯಿ ಚಿತ್ರಾನ್ನ ನಾ ನೋಡಿ.. ಇದರ ಜೊತೆಗೆ ಬಜ್ಜಿ ಇದ್ದಿದ್ರೆ ಇನ್ನು ಚೆಂದ ಇರೋದು ಬಟ್ ಐ ನೋ ಬೆಳ್ ಬೆಳಗ್ಗೆನೇ ಯಾರು ಬಜ್ಜಿ ಮಾಡಲ್ಲ ಅಂತಾ ಅವನಿನ್ನೂ ಹೇಳ್ತಾ ಇರ್ತಾನೇ.. ಆದ್ರೆ ವೇಟರ್ ಒಬ್ಬ ಬಜ್ಜಿ ಪ್ಲೇಟ್ ಇಡಿದು ಮುಂದೆ ಬಂದು ಅವರಿಗೆ ಸರ್ವ್ ಮಾಡ್ತಾನೇ.. ಹರ್ಷ ನಾ ಖುಷಿಗೆ ಪಾರವೇ ಇರೋದಿಲ್ಲ . Omg!! ಥಾಂಕ್ ಯು ವೆರಿ ಮಚ್ ಇಟ್ಸ್ ಮೈ ಆಲ್ ಟೈಮ್ ಫೇವರಿಟ್ ಅಂತಾನೇ ಗ್ರೀಷ್ಮಾ ಗೆ.. ಆಗ ಗ್ರೀಷ್ಮಾ ಅದ್ಕೆ ಅಲ್ವಾ ಮಾಡ್ಸಿರೋದು ಅಂತಾಳೆ ಮೆಲ್ಲಗೆ ಹರ್ಷಿತಾ ಕಡೆ ತಿರುಗಿ.. ಏನೋ ಹೇಳಿದ್ರಿ ಅಂತಾ ಮತ್ತೆ ಕೇಳ್ತಾನೆ ಹರ್ಷ.. ಅವನಿಗೆ ಅದು ಕೇಳಿಸಿರಲ್ಲಾ.. ಏನಿಲ್ಲ ಏನಿಲ್ಲಾ ಅಂತೇಳಿ ಗ್ರೀಷ್ಮಾ ಹೋಗುವಾಗ.. ಹರ್ಷಿತಾ ಅವಳನ್ನ ಕರೆದು.," ಹರ್ಷ ಇವಳು ಗ್ರೀಷ್ಮಾ ನನ್ ಫ್ರೆಂಡ್ ಕಮ್ ಈ ಹೋಟೆಲ್ ಇನ್ಚಾರ್ಜ್ ಅಂತಾ ಹೇಳಿ ನಾವೆಲ್ಲರೂ ಇವಳನ್ನ ಗೀ ಅಂತಾನೇ ಕರಿಯೋದು ಅಂತಾ ಪರಿಚಯ ಮಾಡಿಸ್ತಾಳೆ.. ಮತ್ತೇ ಗೀ ಇವರು ಹರ್ಷ ಅಂತಾ ನನ್ನಾ ಚೈಲ್ಡ್ವುಡ್ ಫ್ರೆಂಡ್ ಅಂತೇಳಿ ಪರಿಚಯ ಮಾಡಿಸ್ತಾಳೆ.. ಇಬ್ಬರೂ ಪರಸ್ಪರ ನಗುವಿನ ವಿನಿಮಯ ಮಾಡ್ಕೊಂತಾರೆ..


ಹರ್ಷ ಖುಷಿಯಿಂದ ನೆಮ್ಮದಿಯಾಗಿ ಮಾವಿನಕಾಯಿ ಚಿತ್ರಾನ್ನ ಮತ್ತೇ ಬಜ್ಜಿ ಸವಿಯೋದ್ರಲ್ಲಿ ಬ್ಯುಸಿ ಆಗ್ತಾನೆ...


***********$&***********


" ಹರ್ಷಿತಾ ಹೋಟೆಲ್ ಲಿ ತುಂಬಾ ಜನ ಅಲ್ವಾ " ಅಂತ ಕೇಳ್ತಾನೆ ಹರ್ಷ ತಿಂಡಿ ತಿಂದು ರೂಮ್ ಲಿ ರೆಸ್ಟ್ ಮಾಡ್ತಾ...


ಹರ್ಷಿತಾ : " ಹು ಹರ್ಷ., ಇದೆಲ್ಲಾ ಇನ್ನು ಕಡಿಮೆ.. ವೀಕೆಂಡ್ ಲಿ ನೋಡ್ಬೇಕು ನೀನು.. ಊಟ ಮಾಡೋಕು ಟೈಮ್ ಸಿಗಲ್ಲಾ ನಂಗೆ.. "


ಹರ್ಷ : ಓಹ್., ಮತ್ತೇ ಇನ್ನೊಂದ್ ಸ್ವಲ್ಪ ಸರ್ವರ್ಸ್ ನಾ ಸೆರ್ಸ್ಕೊಬೇಕು ತಾನೇ ಅಂತಾ ಕೇಳ್ತಾನೆ..


ಹು ಹರ್ಷ ಹೇಳಿದೀನಿ ಗ್ರೀಷ್ಮಾ ಫ್ರೆಂಡ್ಸ್ ಇದಾರಂತೆ ನೆಕ್ಸ್ಟ್ ವೀಕ್ ಯಿಂದ ಬರ್ತಾರೆ ಅಂತೇಳಿ., ಹರ್ಷ ನೀನ್ ಸ್ವಲ್ಪ ರೆಸ್ಟ್ ಮಾಡು ನಾನು ಊಟ ದ್ದು ಏನ್ ಮಾಡ್ತಿದಾರೋ ಚೆಕ್ ಮಾಡ್ತೀನಿ ಅಂತಾ ಹೇಳಿ ಸೀದಾ ಡೈನಿಂಗ್ ಹಾಲ್ ಗೇ ಹೋಗಿ ಅವತ್ತಿನ ಮೆನು ದು ಅಡುಗೆ ಚೆಕ್ ಮಾಡ್ತಾ ಇರ್ತಾಳೆ...


ಇತ್ತಾ ಹರ್ಷ ಹಾಗೇ ಮಲಗಿ ಅವನ ಫ್ರೆಂಡ್ ಆದ ಕರಣ್ ಗೇ ಕಾಲ್ ಮಾಡ್ತಾನೆ... ಕರಣ್ ಮದ್ಯಾಹ್ನ ದ ಊಟಕ್ಕೆ ನಾನು ಗೌರಿ ಹೋಟೆಲ್ ಲಿ ಇರ್ತೀವಿ ಸದ್ಯಕ್ಕೆ ಸ್ವಲ್ಪ ಬ್ಯುಸಿ ಹಾಫ್ ಡೇ ಲೀವ್ ಹಾಕಿ ಬರ್ತೀವಿ ಅಂತಾನೇ... ಹರ್ಷ ಗು ಖುಷಿಯಾಗಿ ಸರಿ ಅಂತೇಳಿ ಮಲ್ಕೊಂತಾನೆ...


ಮದ್ಯಾಹ್ನ ಎರಡು ಗಂಟೆ..


ಹರ್ಷಿತಾ ಹೋಗಿ " ನಾಲ್ಕು ಗಂಟೆಗೆ ಊಟ ಕ್ಲೋಸ್ ಆಗಲಿದೆ " ಅನ್ನೋ ಬೋರ್ಡ್ ನೇತಾಕಿ ಬರ್ತಾಳೆ..


ಮೇಡಂ ನಿಮ್ ಫ್ರೆಂಡ್ ಬಂದ್ರು ಅಂತಾ ಗ್ರೀಷ್ಮಾ., ಕರಣ್ ಮತ್ತೇ ಗೌರಿ ಬರ್ತಿರೋದನ್ನ ತೋರ್ಸ್ತಾಳೆ...


ಹರ್ಷಿತಾ ಫುಲ್ ಖುಷಿಯಾಗಿ ಹಾಯ್ ಅಂತೇಳಿ ಅವರಿಬ್ಬರನ್ನೂ ತಬ್ಬಿ ಖುಷಿ ಆಯ್ತು ನೀವು ಬಂದಿದ್ದು ಅಂತೇಳಿ ಹರ್ಷ ಮಲಗಿರೋ ರೂಮ್ ಗೇ ಕರ್ಕೊಂಡು ಬರ್ತಾಳೆ.


ಹರ್ಷ ಲ್ಯಾಪ್ಟಾಪ್ ಲಿ ಏನೋ ಮಾಡ್ತಾ ಇರ್ತಾನೇ.. ಕರಣ್ ನಾ ನೋಡಿದ್ದೇ ಹರ್ಷ ಗೇ ಫುಲ್ ಖುಷ್ ಆಗಿ ಲ್ಯಾಪ್ಟಾಪ್ ಸೈಡ್ ಲಿ ಇಟ್ಟು ಅವನ ಜೊತೆಗೆ ಮಾತ್ ಶುರು ಮಾಡ್ತಾನೆ..

ಮಗ ಸ್ಲಿಮ್ ಅಂಡ್ ಫಿಟ್ ಆಗಿದಿಯೋ ಕಣೋ ಅಂತಾ ಹರ್ಷ ನಾ ಹೊಟ್ಟೆ ಗೇ ಹೊಡೆದು ಹೇಳ್ತಾನೆ ಕರಣ್.


ಬರೇ ಕೆಲಸ ಕೆಲಸ ಮಗ ಹೊತ್ತ್ ಹೊತ್ತಿಗೆ ಊಟ ಇಲ್ಲಾ ಇನ್ನು ಸ್ಲಿಮ್ ಆಗದೇ ಇನ್ನೇನು ಹೇಳು.. ಜೀವನದಲ್ಲಿ ಏನು ಕುತೂಹಲ ನೇ ಇಲ್ಲಾ ಮಗಾ.. ಇವತ್ತು ನಿಮ್ಮನ್ನೇಲ್ಲಾ ನೋಡಿ ನಂಗೆ ಹೇಳೋಕೆ ಆಗ್ತಿಲ್ಲಾ ಅಷ್ಟು ಸಂತೋಷ ಆಗ್ತಿದೆ ಅಂತಾನೇ.


ಯಾಕ್ ಬೇಕು ಮಗಾ ಅದೆಲ್ಲಾ ಸುಮ್ನೇ ಬೆಂಗಳೂರಿಗೆ ವಾಪಾಸ್ ಬರೋದಲ್ವಾ ಅಂತಾ ಕೇಳ್ತಾನೆ ಕರಣ್


ಹು ಮಗಾ ನಂದು ಅದೇ ಪ್ಲಾನ್ ಇದೆ ಬಟ್ ಡ್ಯಾಡಿ ನಾ ಕೇಳ್ಬೇಕು.. ಅಲ್ಲೋ ಯಾರಿಗೂ ಕನ್ನಡ ಬರಲ್ಲಾ ಮಗಾ ನಂಗೆ ಖುಷಿ ಆದ್ರೂ ದುಃಖ ಆದ್ರೂ ಮೊದಲು ಬರೋದು ನಮ್ಮ ಮಾತೃ ಭಾಷೆ ಆದ್ರೆ ಅಲ್ಲಿ ಬಿಡು ಹೇಳೋದೇ ಬೇಡ ದೂರ್ಬಿನ್ ಹಾಕಿ ಹುಡುಕಿದ್ರೂ ಒಂದು ಕನ್ನಡ ಮಾತಾಡೋ ಹುಡುಗ ಹುಡುಗಿ ಸಿಗಲ್ಲಾ.. ಬಟ್ ಇಲ್ಲಿ ಇವತ್ತು ನನ್ನಾ ಭಾಷೆ., ನಮ್ಮ ನೆಲ.,ನಮ್ಮ ಜನ ನಾ ನೋಡಿ ಕಣ್ಣು ಪಾವನ ಆಯ್ತು ಮನಸ್ಸಿಗೂ ನೆಮ್ಮದಿ ಬಂತು ಮಗಾ ಅಂತಾನೇ.


ಮೂವರು ಅವನ ಮಾತು ಕೇಳಿ ಅವನ್ನೇ ನೋಡ್ತಾ ಇರ್ತಾರೆ...


ಅಲ್ಲಾ ಮಗಾ ಇವಾಗ್ ಆಗ್ಲೇ ನೀನು ಹೈದರಾಬಾದ್ ಗೇ ಹೋಗಿ ಒಂದು ಎಂಟು ಹತ್ತು ವರ್ಷ ಆಯ್ತು ಇನ್ನು ಅಲ್ಲಿ ಅಡ್ಜಸ್ಟ್ ಆಗಿಲ್ವಾ ಅಂತಾ ಕೇಳ್ತಾನೆ ಕರಣ್ ಆಶ್ಚರ್ಯದಿಂದಾ.


ಹತ್ತು ಅಲ್ಲಾ ಇಪ್ಪತ್ತು ವರ್ಷ ಸಹ ಅಲ್ಲೇ ಇದ್ರೂ ಸಾಧ್ಯನೇ ಇಲ್ಲಾ ಮಗಾ ಅಲ್ಲೆಲ್ಲ ಅಡ್ಜಸ್ಟ್ ಆಗೋಕೆ.. ತಾಯಿ ನಾಡು ಕಾಣೋ ಇದು.. ಬೇರೆ ತಾಯಿ ನಾ ಅಮ್ಮಾ ಅಂತ ಕರೀಬೋದೇ ವಿನಃ ಅದೇ ನಮ್ ಅಮ್ಮಾ ಹತ್ರಾ ಹೇಳ್ಕೊಳೋ ಅಂತಾ ಖುಷಿ ಆಗ್ಲಿ ದುಃಖ ಆಗ್ಲಿ ಅವರ ಹತ್ರಾ ಬರಲ್ಲಾ ಕಣೋ ಬಹುಷಃ ಬಂದ್ರು ಸಹ ಅದು ಒಂದು ಡೂಪ್ಲಿಕೇಟ್ ಫೀಲಿಂಗ್ ಆಗಿರತ್ತೆ ಅಷ್ಟೇ ಅಂತಾನೇ..


ನಿಜಕ್ಕೂ ಅವನಿಗೆ ಭಾಷೆ ಮೇಲೆ ತನ್ನ ನಾಡಿನ ಬಗ್ಗೆ ಇದ್ದಾ ಗೌರವ ಒಲವು ನೋಡಿ " ಸೂಪರ್ ಹರ್ಷ ನೀನು., ಎಲ್ಲೇ ಹೋದ್ರು ನಮ್ ತನನ ಬಿಟ್ಟು ಕೊಡ್ಬಾರ್ದು ಅಂತಾ " ಹೇಳ್ತಾಳೆ ಗೌರಿ


ಹು ಅಂತೇಳಿ ಅವರಿನ್ನೂ ಮಾತಾಡುವಾಗ್ಲೇ ಗ್ರೀಷ್ಮಾ ಬಂದು ಟೇಬಲ್ ರೆಡಿ ಇದೆ ಊಟ ಮಾಡ್ಬನ್ನಿ ಅಂತಾ ಕರೀತಾಳೆ.


ಎಲ್ಲಾರು ಫ್ರೆಶ್ ಆಗಿ ಬಂದು ಟೇಬಲ್ ಲಿ ಕುತ್ಗೊಂಡಾಗ. ಒಂದೊಂದೇ ಐಟಂ ತಂದು ಹಾಕ್ತಾರೆ ವೇಟರ್ಸ್..


ಮೊದಲಿಗೆ ಬೇಳೆ ಹೋಳಿಗೆ ತುಪ್ಪಾ ಹಾಕ್ತಾರೆ. ಸೈಡ್ ಗೇ ಕುಸುಂಬರಿ., ಕಡಲೆಕಾಳ್ ಪಲ್ಯ., ಹಪ್ಪಳ ತಂದು ಇಡ್ತಾರೆ.. ಮತ್ತೇ ಬಂದ ಒಬ್ಬ ವೇಟರ್ ಅನ್ನಾ., ಹೋಳಿಗೆ ಸಾಂಬಾರ್ ತಂದು ಇಡ್ತಾನೇ..


ಹರ್ಷ ಅಂತು ಥಾಂಕ್ ಯು ವೆರಿ ಮಚ್ ಹರ್ಷಿತಾ ತುಂಬಾ ಅಂದ್ರೆ ತುಂಬಾ ಇಷ್ಟಾ ನಂಗೆ ಈ ಊಟ ಎಷ್ಟೊಂದು ದಿನಾ ಆಗಿತ್ತು ಇದನ್ನೆಲ್ಲಾ ತಿಂದು ಅಂತಾ ಖುಷಿಯಿಂದ ಬಾಯಿ ಚಪ್ಪರಿಸಿ ತಿಂತಾನೆ..


ಹರ್ಷಿತಾ ಮನಸ್ಸಲ್ಲೇ ಖುಷಿ ಪಡ್ತಾಳೆ.


ಕರಣ್ ಗೌರಿ ಒಬ್ಬರಿಗೊಬ್ಬರು ಮುಖ ನೋಡಿ ಮುಸಿ ಮುಸಿ ನಗ್ತಾ ಇರ್ತಾರೆ ಅದನ್ನ ಗಮನಿಸಿ ದ ಹರ್ಷ.,ಏನ್ ಆಯ್ತ್ರೋ..??ನಿಮ್ ಇಬ್ಬರಿಗೂ! ಯಾಕೆ ನಗ್ತಿದೀರಾ?? ಅಂತಾ ಕೇಳ್ತಾನೆ..


ಏನಿಲ್ಲಾ ಏನಿಲ್ಲಾ ಅಂತೇಳಿ ಸುಮ್ನೇ ಊಟ ಮಾಡ್ತಾರೆ ಇಬ್ಬರೂ...


ಎಲ್ಲರದ್ದೂ ಊಟ ಆಗುತ್ತೆ.. ಆಗ ಕರಣ್ " ಬಾರೋ ಹರ್ಷ ಅಂಗೆ ಒಂದು ವಾಕಿಂಗ್ ಮಾಡ್ಕೊಂಡು ಬರೋಣ " ಅಂತಾ ಕರ್ಕೊಂಡು ಹೋಗ್ತಾನೆ..


ಅಲ್ಲೇ ಇದ್ದಾ ಒಂದು ಪಾರ್ಕ್ ಅಲ್ಲಿ ಹೋಗಿ ಕುತ್ಗೊಂತಾರೇ.. ಹರ್ಷ ತನ್ನ ಮೊಬೈಲ್ ನಾ ನೋಡ್ತಾ " ಮಗಾ ಬೆಂಗಳೂರಲ್ಲಿ ಒಂದು ಮೇನ್ ಬ್ರಾಂಚ್ ಓಪನ್ ಮಾಡೋಣ ಅಂತಾ ಇದೀನಿ ಕಣೋ ನನ್ ಆಫೀಸ್ ದು ಇದಕ್ಕೆ ನಿನ್ನಾ ಅಭಿಪ್ರಾಯ ಏನು ಅಂತಾ " ಕೇಳ್ತಾನೆ.


ಮಗಾ ಇಲ್ಲಿ ಈಗಾಗ್ಲೇ ತುಂಬಾ ಕಂಪನಿ ಇದಾವೆ. ಇಲ್ಲಿ ಸಾಫ್ಟ್ವೇರ್ ಕಂಪನಿಗೇನು ಬರ ಇಲ್ಲಾ ಆದ್ರೂ ಪ್ರಾರಂಭದಲ್ಲಿ ಕಷ್ಟ ಆಗೇ ಆಗುತ್ತೆ. ಹಾರ್ಡ್ ವರ್ಕ್ ಮೇಕ್ಸ್ ಮ್ಯಾನ್ ಪರ್ಫೆಕ್ಟ್ ಅಂತಾರೆ ಅಲ್ವಾ ಹಾಗೇ ಹಾರ್ಡ್ ವರ್ಕ್ ಮಾಡಿ ಕಂಪನಿ ನಾ ಒಂದ್ ಲೆವೆಲ್ ಗೇ ತಂದ್ರೆ ತುಂಬಾ ಲಾಭ ಇದೆ ಕಣೋ ಬೆಂಗಳೂರಲ್ಲಿ ಅಂತಾನೇ..


ಹು ಕೆಲಸ ಮಾಡೋಕೆ ಏನ್ ಮಗಾ ಮಾಡ್ಬೋದು.. ನಾನ್ ಕಂಪನಿ ಸ್ಟಾರ್ಟ್ ಮಾಡಿದ್ರೆ ನೀನ್ ಬರ್ತೀಯ ಅಂತಾ ಅನುಮಾನದಿಂದಾ ನೇ ಕೇಳ್ತಾನೆ ಹರ್ಷ..


ಮಗಾ ಕೇಳ್ತಿಯಲ್ಲೊ ನಂಗು ಬೇರೆ ಅವರ ಹತ್ರಾ ಕೆಲಸ ಮಾಡಿ ಮಾಡಿ ಸಾಕಾಗಿದೆ. ನನ್ ಫ್ರೆಂಡ್ ಹತ್ರಾ ನೇ ಮಾಡೋದು ಖುಷಿ ಅಲ್ವಾ.. ನೀನ್ ಬಾ ಅಂತೇಳು ನಾನ್ ಹಾಜರ್ ಆಗ್ತೀನಿ ಅಂತಾನೇ ಖುಷಿಯಿಂದ..


ಮಗಾ ಅಂಗಿದ್ರೆ ನಾನು ಆಮೇಲೆ ಪಪ್ಪಾ ಹತ್ರಾ ಮಾತಾಡಿ ಕೇಳ್ತೀನಿ ಬಟ್ ನಾನು ನಿರ್ಧಾರ ತಗೊಂಡಿದ್ದು ಆಯ್ತು ಇನ್ಮೇಲೇ ಬೆಂಗಳೂರಲ್ಲೇ ನನ್ನಾ ವಾಸ ಅಂತಾನೇ


ಕರಣ್ ಸಹ ಖುಷಿಯಾಗಿ " ಮಗಾ ಏನ್ ನಿನ್ ಪ್ಲಾನ್., ನಿಜಾ ಹೇಳು., ನೀನು ಇನ್ನು ಹರ್ಷಿ ನಾ ಪ್ರೀತಿಸ್ತಾ ಇದ್ದೀಯ..!!?? ಅದಕ್ಕಾಗಿ ನೇ ಬೆಂಗಳೂರಲ್ಲಿ ಇರ್ಬೇಕು ಅಂತಾ ಯೋಚನೆ ಮಾಡ್ತಿದೀಯ ಅಂತಾ ಕೇಳ್ತಾನೆ.


ಒಂದು ದೀರ್ಘ ಉಸಿರನ್ನಾ ತಗೊಂಡ ಹರ್ಷ.. ಕರಣ್ ಕಡೆ ನೋಡ್ತಾ " ನಿಂಗೇನ್ ಅನ್ಸುತ್ತೆ ಮಗಾ " ಅಂತಾ ಕೇಳ್ತಾನೆ.


ನಂಗೆಲ್ಲ ಗೊತ್ತಾಗುತ್ತೆ ಮಗಾ ನೀವ್ ಪ್ರೀತಿಸ್ತೀದಿರಾ ಅನ್ನೋದು.!! ಅಂತಾನೇ


ಆಗ ಹರ್ಷ ನಗ್ತಾ " ಮಗಾ ಅನುಮಾನ ನೇ ಬೇಡ., ನಾನು ಅವಳನ್ನ ಪ್ರೀತಿಸ್ತಾ ಇದೀನಿ.. ಆದ್ರೆ ಅವಳ ಬಗ್ಗೆ ನಂಗೆ ಗೊತ್ತಿಲ್ಲಾ.. ಆವತ್ತು ಸ್ಕೂಲ್ ಲಿ ಹೇಗೆ ಇರ್ತಿದ್ಲೋ ಮಗಾ ಈಗ್ಲೂ ಅಂಗೆ ಇದಾಳೆ ಕಣೋ ಯಾವುದೇ ಬದಲಾವಣೆ ಇಲ್ಲಾ ಅದ್ಕೆ ನಂಗೆ ಗೊಂದಲ ಶುರುವಾಗಿದೆ. ಅಂತಾನೇ


ಮಗಾ ನಂಗೆ ಗೊತ್ತಿತ್ತು ಕಣೋ.. ನಿಜಾ ಹರ್ಷಿ ನಿನ್ನಾ ಲವ್ ಮಾಡ್ತಿದಾಳೆ ನಂಗೇನೋ ಪಕ್ಕಾ ಅನ್ಸ್ತಿದೆ ಅಂತಾನೇ.


ಹರ್ಷ ಫುಲ್ ಖುಷಿಯಿಂದ " ನಿನ್ನಾ ಬಾಯರಿಕೆಯಿಂದ ಆಗೇ ಆಗ್ಲಿ ಕಣೋ ಅಂತೇಳಿ ಅವನ್ನ ತಬ್ಬಿಕೊಂಡು " ಮಗಾ ಹೆಂಗ್ ಹೇಳ್ತಿಯ ಅವಳು ನನ್ನಾ ಲವ್ ಮಾಡ್ತಿದಾಳೆ ಅಂತಾ ಕೇಳ್ತಾನೆ..""


ಮಗಾ ನಾವ್ ಬಂದಾಗ ನಿನ್ ಇದ್ದೇ ಅಲಾ ಆ ರೂಮ್ ಅಲ್ಲಿ ನೋಡಿದ್ಯಾ ಎಚ್ ಲವ್ಸ್ ಎಚ್ (H ಲವ್ಸ್ H) ಅನ್ನೋ ಒಂದು ಸಿಂಬಲ್ ಇದೆ ಅಂತಾನೇ..


ಹರ್ಷ ಅದನ್ನಾ ಗಮನಿಸಿ ಇರಲ್ಲಾ ಸೊ ನೋಡಿಲ್ಲಾ ಮಗಾ ಅಂಗಂದ್ರೆ ಏನು ಅಂತಾನೇ..


ಅಷ್ಟು ಗೊತ್ತಿಲ್ಲಾ ಅಂದ್ರೆ ಹೇಗೋ ಅಂತಾ ಅರ್ಥ ಹೇಳೋಕೆ ಹೋಗ್ತಾನೆ ಹರ್ಷಿತಾ ಲವ್ಸ್ ಹರ್ಷ ಅಂತಾ ಹೇಳ್ತಾನೆ


ಅದನ್ನಾ ಅರ್ಥ ಮಾಡಿಕೊಂಡ ಹರ್ಷ " ಮಗಾ ನೀನ್ ನಿಜಾ ಹೇಳ್ತಿದೀಯಾ " ಅಂತಾ ಹರ್ಷ ತುಂಬಾ ಖುಷಿ ಆಗ್ತಾನೆ..


ಮಗಾ ಎಲ್ಲಾ ಓಕೆ ಕಣೋ ಆದ್ರೆ ನಿಂಗೆ ಒಬ್ಬ ಸ್ಪರ್ದಿ ಬರ್ಬೋದು ಕಣೋ ಅಂತಾ ಹೇಳ್ತಾನೆ


ಹರ್ಷ ಅರ್ಥ ಆಗದೇ ಏನೋ ಯಾರು ಸ್ಪರ್ದಿ ಏತಕ್ಕೆ ಅಂತಾ ಕೇಳ್ತಾನೆ..


ಮಗಾ ಹರ್ಷಿ ಗೇ ನಿನ್ ಮೇಲೆ ಲವ್ ಇದ್ರೂ ಇರ್ಬೋದು ನಾವೆಲ್ಲಾ ಶಾಲೆಲಿನೇ ನೋಡಿದ್ವಿ ಆದ್ರೆ ಈಗ ಅವಳ ಲೈಫ್ ಅಲ್ಲಿ ಒಬ್ಬ ವ್ಯಕ್ತಿ ಇದಾನೆ ಕಣೋ ಅವನಿಗೆ ಅವಳು ತುಂಬಾ ಗೌರವ ಕೊಡ್ತಾಳೆ.. ಗೌರವ ಮುಂದೊಂದು ದಿನಾ ಸ್ನೇಹ ಆಗಿ ಅದು ಪ್ರೀತಿ ಗು ಹೆಡೆ ಮಾಡಿ ಕೊಡ್ಬೋದು ಅಂತಾ ಆತಂಕ ನಾ ತೋರಿಸ್ತಾನೇ..


ಆ ಆತಂಕ ಹರ್ಷ ಗು ಆಗಿ " ಏನ್ ಹೇಳ್ತಿದೀಯಾ ಮಗಾ ಯಾರೂ ಆ ವ್ಯಕ್ತಿ ಅಂತಾ ಕೇಳ್ತಾನೆ


ಮಗಾ ಅದ್ಯಾರೋ ನಂಗು ಗೊತ್ತಿಲ್ಲಾ ಆದ್ರೆ ಹರ್ಷಿ ಯಾವಾಗ್ಲೂ ಹೇಳ್ತಾ ಇರ್ತಾಳೆ.. ಈ ನನ್ ಕನಸಿನ ಹೋಟೆಲ್ಗೆಲ್ಲಾ ಸಹಾಯ ಮಾಡಿದ ಆ ವ್ಯಕ್ತಿ ಗೇ ನಾನು ತುಂಬಾ ಗೌರವ ಕೊಡ್ತೀನಿ.,ನಾನು ಇವತ್ತು ಸಮಾಜ ದಲ್ಲಿ ಏನೋ ಸಾಧನೆ ಮಾಡಿದೀನಿ ಅಂದ್ರೆ ಅವರಿಂದ ಮಾತ್ರ ಸಾಧ್ಯ ಆಗಿದ್ದು., ಅವರು ನನ್ನಾ ಪಾಲಿನ ದೇವರು ಅಂತೆಲ್ಲಾ ಹೇಳ್ತಾಳೆ ಮತ್ತೇ ಅವರು ನನ್ ಜೀವನದಲ್ಲಿ ಬಂದ್ರೆ ನನ್ನೊಷ್ಟು ಖುಷಿ ಪಡೋರು ಯಾರು ಇಲ್ಲಾ ಅಂತಾಳೆ ಸೊ ಆ ಎಚ್ ಅನ್ನೋದು ಹರ್ಷ ನಾ ಅಥವಾ ಬೇರೆ ನೋ ಗೊತ್ತಿಲ್ಲಾ ಮಗಾ ಅಂತಾ ಹೇಳ್ತಾನೆ


ಆಗ ಹರ್ಷ ನಾ ಮುಖದಲ್ಲಿ ಒಂದು ಕಿರುನಗೆ ಸಮೇತ ಮಂದಹಾಸ ಮೂಡುತ್ತೆ


ಮಗಾ ನಾನಿಲ್ಲಿ ಸೀರಿಯಸ್ ವಿಷಯ ಹೇಳಿದ್ರೆ ನೀನ್ ನಗ್ತಿದೀಯಾ ಅಂತಾನೇ


ಆಗ ಹರ್ಷ ಎದ್ದು " ನೋಡು ಮಗಾ ಹರ್ಷಿತಾ ನಾ ನಾನು ತೀರಾ ಚಿಕ್ಕವನು ಇದ್ದಾಗಿಂದನು ಪ್ರೀತಿಸ್ತಾ ಇದೀನಿ.. ಆ ದೇವರು ನಂಗೆ ಮೋಸ ಮಾಡಲ್ಲ " ಅಂತಾನೇ


ಮಗಾ " ಕೃಷ್ಣ ಪ್ರೀತಿಸಿದ್ದು ರಾಧೆ ನಾ.. ಮೀರಾ ಪ್ರೀತಿಸಿದ್ದು ಕೃಷ್ಣಾ ನ್ನಾ ಆದ್ರೆ ಕೊನೆಗೆ ಕೃಷ್ಣಾ ಸಿಕ್ಕಿದ್ದು ಯಾರಿಗೆ ಹೇಳು ರುಕ್ಮಿಣಿ ಗೇ "..ಆ ದೇವರುಗಳ ಪ್ರೀತಿ ನೇ ಸಕ್ಸಸ್ ಆಗ್ಲಿಲ್ಲ ನೀನ್ ನೋಡಿದ್ರೆ ಆ ದೇವ್ರು ನಮ್ಗೆ ಮೋಸ ಮಾಡಲ್ಲ ಅಂತೀಯಾ ಅಂತಾ ನಗ್ತಾನೇ..


ಮಗಾ ಬಿಡು ಆ ಒಂದು ವ್ಯಕ್ತಿ ಗೇ ಅವಳು ತುಂಬಾ ಗೌರವ ಕೊಡ್ತಾಳೆ ಮತ್ತೇ ಆ ವ್ಯಕ್ತಿ ನೇ ತನ್ನ ಜೀವನದಲ್ಲಿ ಒಂದು ಅವಿಭಾಜ್ಯ ಭಾಗ ಆಗಿರ್ಲಿ ಅಂತಾ ಅವಳು ಆಶಿಸಿದ್ರೆ ಅವಳು ಅನ್ಕೊಂಡಿದ್ದು ಅವಳಿಗೆ ಸಿಗ್ಲಿ ಅಂತಾನೇ..


" ಏನ್ ಮಗಾ ನೀನು ಈಗಿನು " ಹರ್ಷಿತಾ ನಾ ನಾನು ತೀರಾ ಚಿಕ್ಕವನು ಇದ್ದಾಗಿಂದನು ಪ್ರೀತಿಸ್ತಾ ಇದೀನಿ.. ಆ ದೇವರು ನಂಗೆ ಮೋಸ ಮಾಡಲ್ಲ " ಅಂದೆ ಅವಾಗ್ಲೇ ಆ ವ್ಯಕ್ತಿ ಗೇ ಬಿಟ್ಟು ಕೊಡ್ತೀನಿ ಅಂತಿದೀಯ ಅಲಾ " ಅಂತಾ ಕೇಳ್ತಾನೆ..


ಮಗಾ ಮೆಗಾ ಸೀರಿಯಲ್ ತರ ಎಳೆಯಲ್ಲಾ ನೇರವಾಗಿ ವಿಷಯ ಹೇಳಿ ಬಿಡ್ತೀನಿ.. ಹರ್ಷಿತಾ ತನ್ನ ಜೀವನದಲ್ಲಿ ತುಂಬಾ ಗೌರವ ಕೊಡ್ತಾ ಇರೋ ಆ ವ್ಯಕ್ತಿ ನಾನೇ ಅಂತಾನೇ.


ಕರಣ್ ಪೂರ್ತಿ ಗೊಂದಲದಿಂದಾ ಏನೋ ನೀನ್ ಹೇಳ್ತಾ ಇರೋದು ಅಂತಾ ಬಿಟ್ಟ ಕಣ್ಣು ಬಿಟ್ಟಂಗೆ ನೋಡಿ ಕೇಳ್ತಾನೆ..

" ಹು ಮಗಾ.. ಹರ್ಷಿತಾ ನಾ ನಾನು ತುಂಬಾ ಪ್ರೀತಿ ಮಾಡ್ತಿದ್ದೆ ಕಣೋ.. ಆ ವಯಸ್ಸಲ್ಲಿ ಅದು ಪ್ರೀತಿ ನೋ ಆಕರ್ಷಣೆ ನೋ ಗೊತ್ತಿಲ್ಲಾ ಆದ್ರೆ ಅವಳು ಮಾತ್ರ ನಂಗೆ ಚೆನ್ನಾಗಿ ಇರ್ಬೇಕು ಅಂತಾ ಅನ್ಸೋದು.. ಪಪ್ಪಾ ಏನೋ ಹೈದರಾಬಾದ್ ಲಿ ಓದೋಕೆ ಕಳಿಸಿಬಿಟ್ರು ಆದ್ರೆ ನಾನು ತುಂಬಾ ಮಿಸ್ ಮಾಡ್ತಿದ್ದೆ ಹರ್ಷಿತಾ ನಾ..ಆಗ ಒಂದಿನಾ ನಾನು ಸಾಟರ್ಡೆ ಅವಳನ್ನ ನೋಡ್ಲೇಬೇಕು ಅಂತಾ ಬಂದೆ ಬೆಂಗಳೂರಿಗೆ ಆವತ್ತು ಅವಳ ಮನೆ ಮುಂದೆ ಕಾದೆ ಕಾದೆ ಒಂಬತ್ತು ಗಂಟೆಗೆ ಅವಳ ಮನೆ ಮುಂದೆ ಒಂದು ಬೈಕ್ ಬಂದು ನಿಂತು ಹಾರ್ನ್ ಹಾಕಿದಾಗ ಬಂದ್ಲು ಹರ್ಷಿತಾ ಒಂದು ಸೈಡ್ ಬ್ಯಾಗ್ ಹಾಕೊಂಡು., ಸಲ್ವಾರ್ ಹಾಕೊಂಡು., ಉದ್ದವಾದ ಜಡೆಗೇ ಚಿಕ್ಕ ಮಲ್ಲಿಗೆ ಮುಡ್ಕೊಂಡು ಬಂದು ಆ ಗಾಡಿ ಹತ್ತಿ ಕಾಲೇಜ್ ಗೇ ಹೋದ್ಲು.,


ಆ ಕ್ಷಣ ಹೆಚ್ಚಾದ ನನ್ನಾ ಎದೆ ಬಡಿತಕ್ಕೆ ಏನೆಂದು ಕರಿಯೋದು ಅಂತಾ ನಗ್ತಾ ಮತ್ತೇ ಮಾತು ಮುಂದುವರಿಸ್ತಾನೇ......


ನಾನು ಅವಳನ್ನ ಫಾಲೋ ಮಾಡಿದೆ ಆ ಹುಡುಗ ಯಾರು ಅನ್ನೋ ಅನುಮಾನ ಕಾಡ್ತಾ ಇತ್ತು.. ಬೈಕ್ ಸ್ಪೀಡ್ ಇದ್ದಾ ಕಾರಣ ಹರ್ಷಿತಾ ಮಲ್ಲಿಗೆ ಕೆಳಗೆ ಬಿದ್ದು ಬಿಡ್ತು ಅವರು ಅದನ್ನಾ ಗಮನಿಸದೇ ಹಾಗೇ ಮುಂದೆ ಹೋಗೆ ಬಿಟ್ರು.. ನಾನ್ ಆಗ ಆ ಮಲ್ಲಿಗೆ ತಗೊಂಡೆ ಅವತ್ತೇ ಫಿಕ್ಸ್ ಮಾಡ್ಕೊಂಡೆ ಈ ಮಲ್ಲಿಗೆ ನಾ ಯಾವತ್ತಿದ್ರೂ ಆ ಮುಡಿಗೆ ನಾನೇ ಮುಡ್ಸೋದು ಅಂತಾ..!! ಆ ಹುಡುಗ ಅವಳನ್ನ ಕಾಲೇಜ್ ಲಿ ಬಿಟ್ಟು ಮುಂದೆ ಹೋಗ್ತಿದ್ದಾ ಫೋನ್ ಲಿ ಮಾತಾಡ್ತಾ..!!


ನಾನು ಇದೆ ಒಳ್ಳೆ ಸಮಯ ಅಂತಾ ಬೇಕು ಬೇಕು ಅಂತಾ ಹೋಗಿ ಅವನ ಬೈಕ್ ಗೇ ಗುದ್ದಿದೇ.. ತಕ್ಷಣ ನೇ ಕೆಳಗೆ ಬಿದ್ದೋನು..


" ಹೇ ಲೂಸ್ ಕಣ್ಣು ಕಾಣೊಲ್ವೇನೋ ನಿಂಗೆ ". ಅಂತಾ ಬೈಯೋಕೆ ಶುರು ಮಾಡ್ಬಿಟ್ಟ..


ನಾನು ಸಾರೀ ಸರ್ ಸಾರೀ ಸರ್ ಅಂತೇಳಿ ಮಿರರ್ ಹೊಡೆದು ಹೋಗಿರೋದು ನೋಡಿ ಬನ್ನಿ ನಾನೇ ಸರಿ ಮಾಡ್ಸಿ ಕೊಡ್ತೀನಿ ಅಂತಾ ಕರ್ಕೊಂಡು ಹೋದೆ..ಆ ಕ್ಷಣ ದ ನನ್ನಾ ಆಕ್ಟಿಂಗ್ ನಿಜಕ್ಕೂ ಸಿಂಪತಿ ಸ್ವಲ್ಪ ಹೆಚ್ಚಾಗೇ ಬಾರೋ ತರ ಇತ್ತು..


ಆ ಹುಡುಗ " ಅಯ್ಯೋ ಬೇಡ ಪರವಾಗಿಲ್ಲ ಬಿಡಿ.,ಇನ್ನೊಮ್ಮೆ ಸರಿಯಾಗಿ ನೋಡ್ಕೊಂಡು ಹೋಗಿ ಚಿಕ್ಕ ಮಕ್ಕಳು, ಹಿರಿಯರು ಎಲ್ಲಾ ಹೋಡಾಡ್ತ ಇರ್ತಾರೆ ಅಂತಾ ಮೆತ್ತಗೆ ಹೇಳಿದ್ದು ನೋಡಿ ಒಳ್ಳೆ ಹುಡುಗ ಅನ್ಸಿ ಸ್ವಲ್ಪ ಒಳ್ಳೆ ತರ ಮಾತಾಡಿ ಬನ್ನಿ ಅಂತಾ ಗ್ಯಾರೇಜ್ ಗೇ ಕರ್ಕೊಂಡು ಹೋದೆ..


ಮಿರರ್ ಸರಿ ಮಾಡ್ಸಿದ್ ಮೇಲೆ.. ಹಾಗೇ ಸ್ವಲ್ಪ ಕಾಲೇಜ್ ಗೇ ಹೋಗ್ತೀರಾ ಅಂತಾ ಅದು ಇದು ಮಾತಾಡಿ ಫ್ರೆಂಡ್ಶಿಪ್ ಗಳಿಸಿದ್ದು ಆಯ್ತು ಆದ್ರೆ ನಂಬರ್ ಇಸ್ಕೊ ಬೇಕಿತ್ತು ಹೇಗೆ ಅಂತಾ ಯೋಚಿಸಿದೇ ಹೊಳೀಲೇ ಇಲ್ಲಾ ಆಗಾಗಿ ಆವತ್ತು ಸುಮ್ನಾದೇ..


ಮತ್ತೇ ನೆಕ್ಸ್ಟ್ ಡೇ ಅದೇ ರೋಡ್ ಲೇ ಕಾಯ್ತಿದ್ದೆ.. ಹರ್ಷಿತಾ ಅವನು ಕಾಲೇಜ್ ಗೇ ಹೋದ್ರು.. ಅವನು ಅವಳನ್ನ ಬಿಟ್ಟು ಬರ್ತಿದ್ದ, ನನ್ನಾ ನೋಡಿ ಬೈಕ್ ನಿಲ್ಲಿಸಿದ " ಹೇ ಇಲ್ಲೇನ್ ಮಾಡ್ತಿದೀಯ " ಅಂದ..


ನಾನು ಬೈಕ್ ಬಿಟ್ಟು ಬಂದಿದ್ದೇ., ಸೊ ಬಸ್ ಗೇ ವೈಟಿಂಗ್ ಅಂದೆ..


ಓಹ್ ಹೌದ ಬಾ ನಾನ್ ಡ್ರಾಪ್ ಮಾಡ್ತೀನಿ ಎಲ್ಲಿಗೆ ಅಂತೇಳಿ ಕರ್ಕೊಂಡು ಹೋದ ನಂಗು ಇದೆ ಒಳ್ಳೆ ಟೈಮ್ ಅನ್ಸಿ ನಂಬರ್ ಕೇಳಿದೆ ಒಳ್ಳೆ ಹುಡುಗ ಅಲ್ವಾ ನಂಬರ್ ಕೊಟ್ಟ ಎಕ್ಸ್ಚೇಂಜ್ ಆಯ್ತು ಇಬ್ರುದು..


ನೆಕ್ಸ್ಟ್ ಡೇ ಯಿಂದ ನಾನು ಡೆಲ್ಲಿ ಗೇ ಬಂದು ಅಂಗೆ ಗುಡ್ ಮಾರ್ನಿಂಗ್ ಗುಡ್ ನೈಟ್ ಮೆಸೇಜ್ ಮಾಡ್ತಿದ್ದೆ.. ಒನ್ ಫೈನ್ ಡೇ ಹರ್ಷಿತಾ ಗು ಅವನಿಗೂ ಇರೋ ರಿಲೇಶನ್ಶಿಪ್ ಬಗ್ಗೆ ತಿಳ್ಕೋಲೇ ಬೇಕು ಅಂತಾ..

ಮಾತಾಡ್ತಾ ಮಾತಾಡ್ತ " ಮತ್ತೇ ಗರ್ಲ್ ಫ್ರೆಂಡ್ ಇದಾಳ "ಅಂತಾ ಕೇಳಿದೆ..


ಆಗ ಅವನು ಹೇಳಿದ " ಹೇ ಇಲ್ಲಾ ಕಣೋ ಗರ್ಲ್ಫ್ರೆಂಡ್ಸ್ ಇದಾರೆ ಬಟ್ ಈ ಜೀವನ ಪೂರ್ತಿ ಜೊತೆಗೆ ಇರ್ತೀನಿ ಅನ್ನೋ ಹುಡುಗಿ ಇನ್ನು ಸಿಕ್ಕಿಲ್ಲಾ ಅಂದ..


ಸೊ ನಂಗೆ ಪೂರ್ತಿ ಖುಷಿ ಆಯ್ತು .. ನಮ್ ಲೈನ್ ಕ್ಲಿಯರ್ ಅಂತಾ.. ಅವತ್ತಿಂದ ಅವನ ಜೊತೆಗೆ ಇನ್ನು ಹೆಚ್ಚೇ ಭಾಂದವ್ಯ ಬೆಳಿತು.. ನನ್ ಜೀವನ ದ ಏರುಪೆರುಗಳ್ನ ಅವನಿಗೆ ಹೇಳ್ತಿದ್ದೆ.. ಹಾಗೇ ಅವನ ಜೀವನ ದ ಎಲ್ಲಾ ವಿಷಯ ನು ಹೇಳೋನು..ಅವಾಗ್ಲೇ ಗೊತ್ತಾಗಿದ್ದು ಹರ್ಷಿತಾ ಅವರ ಚಿಕ್ಕಮ್ಮ ನಾ ಮಗಳು ಅವನಿಗೆ ತಂಗಿ ಅಂತಾ ಸೊ ಅವಳ ವಿಷಯ ನು ಹೇಳ್ತಿದ್ದ.. ಹಾಗೇ ಒಂದಿನಾ ಹರ್ಷಿತಾ ಹೋಟೆಲ್ ಇಡೋಕೆ ಒಳ್ಳೆ ಜಾಗ ಹುಡುಕ್ತಾ ಇದಾಳೆ ಅಂತಾ ಹೇಳಿದ.. ನಾನು ಬೆಂಗಳೂರಲ್ಲೇ ನಮ್ ಸೈಟ್ ಇದೆ ಅಂತೇಳಿ ಅಪ್ಪಾ ಗೇ ಒಮ್ಮೆ ಕೇಳಿ ನಿಂಗೆ ಹೇಳ್ತೀನಿ ಅಂದೆ ಅವನಿಗೆ.. ಹಾಗೇ ನಾನು ಅಪ್ಪಾ ಗೇ ಕೇಳಿದೆ ಮೊದಲಿಗೆ ಯಾರಿಗೂ ಕೊಡಲ್ಲಾ ಅಂದ್ರು ಆಮೇಲೆ ನಾನು ನನ್ ಪ್ರೀತಿ ವಿಷಯ ಹೇಳಿದ್ಮೇಲೆ ಸರಿ ಅಂತಾ ಒಪ್ಪಿ ಅವರೇ ಬೆಂಗಳೂರಿಗೆ ಬಂದು ಶರತ್ ಹತ್ರಾ ಮಾತಾಡಿ ಆ ಸೈಟ್ ಗೇ ಇರೋ ಬೆಲೆಗಿಂತಾ ಅರ್ಧ ಬೆಲೆ ಗೇ ಹರ್ಷಿತಾ ಗೇ ಮಾರಿದ್ರು .. ಅವಾಗಿಂದ ಹರ್ಷಿತಾ ಹೋಟೆಲ್ ಇಟ್ಲು ಇಷ್ಟು ಎತ್ತರಕ್ಕೆ ಬೆಳೆದ್ಲು ಆದ್ರೆ ಅವಳಿಗೆ ಗೊತ್ತಿಲ್ಲಾ ನಾನು ಈ ಸೈಟ್ ಓನರ್ ಅಂತಾ.. ಅಂತೇಳಿ ಹರ್ಷ ಕರಣ್ ಕಡೆ ನೋಡ್ತಾನೆ....


ಕರಣ್ ಅವನ್ನೇ ನೋಡ್ತಾ " ಏನೋ ಮಗಾ ನೀನು ಇಷ್ಟೊಂದೆಲ್ಲಾ ಮಾಡಿದೀಯ.!! ಅದು ಡೆಲ್ಲಿ ಲಿ ಇದ್ದು ಅಂತಾ ಕೇಳ್ತಾನೆ..


ಹು ಮಗಾ ಪ್ರೀತಿನೇ ಆಗೇ.. ಪ್ರೀತಿ ಗಾಗಿ ಏನ್ ಬೇಕಾದ್ರು ಮಾಡ್ಬೇಕು ಅನ್ಸುತ್ತೆ ಅಂತಾನೇ


ಮಗಾ ಮತ್ತೇ ಇದನ್ನೆಲ್ಲಾ ಹರ್ಷಿತಾ ಗೇ ಯಾವಾಗ ಹೇಳ್ತೀಯಾ ಅಂತಾ ಕೇಳ್ತಾನೆ


ಹೇಳಲ್ಲಾ ಮಗಾ ನಾನು ಅವಳ ಮೇಲಿರೋ ಪ್ರೀತಿ ಗಾಗಿ ಅಷ್ಟೆಲ್ಲಾ ಮಾಡಿದ್ದೂ.. ಅವಳಿಗೆ ಹೇಳಿ ಪಡ್ಕೊಳ್ಳೋ ಪ್ರೀತಿ ಬೇಡ ಅಂತಾನೇ


ಇಷ್ಟೆಲ್ಲಾ ಮಾಡಿದೀಯ ಬಿಡು ಅವಳಿಗೂ ಈ ವಿಷಯ ಗೊತ್ತಾದ್ರೆ ನಿಜಾ ಫಿಕ್ಸ್ ನಿಮ್ದು ಮದ್ವೆ ಅಂತಾನೇ ಭುಜ ತಟ್ಟಿ..


ಹರ್ಷ ನು ಖುಷಿಯಾಗಿ ಹೋಗೋಣ ಅಂದಾಗ ಹು ಅಂತೇಳಿ ಇಬ್ಬರು ಗೆಳಯಂದ್ರು ಹೋಗ್ತಾರೆ ಹೋಟೆಲ್ ಒಳಗೆ.. ಹರ್ಷ ಐಸ್ಕ್ರೀಂ ನೋಡಿ ನಾನ್ ತಿಂತಾ ಇರ್ತೀನಿ ನಿನೋಗಿ ಹರ್ಷಿತಾ ಮತ್ತೇ ಗೌರಿ ನಾ ಕರ್ಕೊಂಡು ಬಾ ಅಂದಿದ್ದಕ್ಕೆ ಕರಣ್ ಅವರಿದ್ದಾ ರೂಮ್ ಹತ್ರಾ ಬರ್ತಾನೇ ಅವರೇನೋ ಮಾತಡ್ತಿದ್ದಾ ವಿಷಯಕ್ಕೆ ಕಿವಿ ಯಾಗಿ ಅಲ್ಲೇ ಗೋಡೆಗೆ ಒರಗಿ ನಿಲ್ತಾನೇ..


ಇತ್ತಾ ಹರ್ಷಿತಾ ಮತ್ತೇ ಗೌರಿ ರೂಮ್ ಸೆರ್ಕೊಂತಾರೇ..


ರೂಮ್ ಫುಲ್ ರೌಂಡ್ ಹೊಡೆದ ಗೌರಿ " ಹರ್ಷಿ ನಿಜಾ ಹೇಳು ಈ ರೂಮ್ ಫುಲ್ ನೀನೇ ತಾನೇ ಡೆಕೋರೇಷನ್ ಮಾಡಿರೋದು ಅಂತಾ ಕೇಳ್ತಾಳೆ.. "


ಹು ನಾನೇ ಅದ್ರಲ್ಲಿ ಅನುಮಾನ ನೇ ಬೇಡ ಅಂತಾಳೆ.


ಗೌರಿ : ಓಹ್ ಯಾರಿಗಾಗಿ ಇದೆಲ್ಲಾ ಅಂತಾ ಹುಬ್ಬೆರಿಸಿ ಕೇಳ್ತಾಳೆ..


ಹರ್ಷಿತಾ : ಯಾರಿಗಾಗಿ ಅಂದ್ರೆ ಏನು.?? ನನಗಾಗಿ ನೇ ಇದೆಲ್ಲಾ ಅಂತಾಳೆ.


ಗೌರಿ : ನಿಜಾ ಹೇಳು ಹರ್ಷಿ., ಯಾರಿಗೇ ಅಂತಾಳೆ.


ಹರ್ಷಿ : ನಿಜಾನೇ ನನಗೆ ಇದು.. ಈ ರೂಮ್ ಅಲ್ಲಿ ಯಾರ್ ತಾನೇ ಇರ್ತಾರೆ.. ನನ್ ಹೋಟೆಲ್ ನನ್ ರೂಮ್ ಅಂತಾಳೆ..


ಸರಿ ಬಿಡು ಅಂತೇಳಿ " ಆದ್ರೂ ಹರ್ಷಿ ಇದೆಲ್ಲಾ ಹೇಗೆ ಸಾಧ್ಯ ಆಯ್ತು., ಈ ಬೆಂಗಳೂರಲ್ಲಿ ಇಷ್ಟು ದೊಡ್ಡ ಹೋಟೆಲ್ ಅದ್ರಲ್ಲೂ ಎಷ್ಟೊಂದು ಅನುಕೂಲತೇಗಳು.. ಅಷ್ಟೊಂದು ವೇಟರ್ಸ್ ಗಳಿಗೆ ಸಂಬಳ ಅಲ್ಲಾ ಹೇಗೆ ಕೊಡ್ತೀಯಾ " ಅಂತಾ ಕೇಳ್ತಾಳೆ...


ಹರ್ಷಿತಾ ಅಲ್ಲೇ ಇದ್ದಾ ಎಚ್ ಲವ್ಸ್ ಎಚ್ ಅನ್ನೋ ಸಿಂಬಲ್ ಹತ್ರಾ ಹೋಗಿ ಎಲ್ಲಾ ಪ್ರೀತಿಯಿಂದ ಸಾಧ್ಯ ಆಯ್ತು ಅಂತಾಳೆ..


ಗೌರಿ ಗೇ ಏನು ಅರ್ಥ ಆಗದೇ " ಏನೇ ಹೇಳ್ತಿದೀಯಾ ಪ್ರೀತಿಯಿಂದನಾ.. ಯಾವ್ ಪ್ರೀತಿ ಯಾರ್ ಪ್ರೀತಿ ಸ್ವಲ್ಪ ಬಿಡಿಸಿ ಹೇಳೇ ಮಾರಾಯ್ತಿ " ಅಂತಾಳೆ


ಅಷ್ಟೊಂದು ಟೆನ್ಶನ್ ಎಲ್ಲಾ ತಗೋಬೇಡ್ವೇ ಅಂತೇಳ್ತಾ ಅವಳ ಹತ್ರಾ ಕುತ್ಗೊಂಡು ಹೇಳ್ತಾಳೆ.. " ನೋಡು ಗೌರಿ ನಾನು ತೀರಾ ಚಿಕ್ಕೊಳು ಇದ್ದಾಗ ನಂಗೆ ಗೊತ್ತಿಲ್ದೇನೆ ಮನಸ್ಸಲ್ಲಿ ಒಂದು ರೀತಿಯ ಭಾವನೆಯಾ ಅನಾವರಣ ಆಗಿತ್ತು ಅದು ಪ್ರೀತಿ ನೋ ಆಕರ್ಷಣೆ ನೋ ಗೊತ್ತಿದ್ದಿಲ್ಲಾ.. ಒಟ್ನಲ್ಲಿ ಅವನ ಜೊತೆಗೆ ಇದ್ರೆ ಖುಷಿ ನೆಮ್ಮದಿ ಸಿಗೋದು.. ಅಂತಾಳೆ..


ಯಾರೇ ಅದು ನಿನ್ ಜೊತೆಗೆ ನಾನು ಇರ್ತಿದ್ದೆ ಅಲಾ ಅದೇಗೆ ನಂಗೆ ಗೊತ್ತಿಲ್ದೇನೆ ಅಂತಾ ಹರ್ಷ ಬಗ್ಗೆ ಹೇಳ್ತಿದೀಯಾ ಅಂತಾ ಕೇಳ್ತಾಳೆ..


ಅಷ್ಟೇ ಆಶ್ಚರ್ಯ!! ಗೋಡೆ ಯಾ ಹಿಂದೆಯಿಂದ ಕೇಳ್ಸ್ಕೊಂತಾ ಇದ್ದಾ ಕರಣ್ ಗು ಆಗ್ತಾ ಇರತ್ತೆ..


ಹೌದು ಕಣೇ.. ನಿಂಗೆ ಗೊತ್ತಿಲ್ದೆ ಇರೋದು ಏನಿಲ್ಲಾ.. ಅದೇ ಹರ್ಷ ನನ್ ಶ್ರೀ ಹರ್ಷ.. ಆ ವಯಸ್ಸಲ್ಲಿ ಹುಟ್ಟಿದ ಆ ಭಾವನೆ ಗೇ ಏನಂತ ಕರಿಬೇಕೊ ಗೊತ್ತಿಲ್ಲಾ.. ಅದೇ ಕಾರಣಕ್ಕೆ ಸ್ವಲ್ಪ ದಿನಾ ಮಾತಾಡಿಸದೇ ಬಿಟ್ರೆ ನಂಗೆ ಅವನ್ನ ಮತ್ತೇ ಮಾತಾಡ್ಸಬೇಕು ಅನ್ನಿಸ್ಲಿಲ್ಲ ಅಂದ್ರೆ ಕೇವಲ ಅದು ಆಕರ್ಷಣೆ ಅಂತಾ ನಾನೇ ಅನ್ಕೊಂಡಿದ್ದೇ.. ಹಾಗೇ ಮಾಡಿದೆ ಸಹ ಪಿಯುಸಿ ಗೇ ಜಾಯಿನ್ ಆದ್ಮೇಲೆ ಮಾತಾಡ್ಸ

ೋ ಪ್ರಯತ್ನ ನೇ ಮಾಡ್ಲಿಲ್ಲ ಆಟೋಗ್ರಾಪ್ ಲಿ ಅವನ ತಂದೆ ಫೋನ್ ನಂಬರ್ ಇದ್ರುನು ಬೇಡ ಮಾತಾಡ್ಸೋದು ಅಂತಾ ನಾನೇ ಗಟ್ಟಿ ಮನಸ್ಸು ಮಾಡ್ಕೊಂಡಿದ್ದೇ.. ಆದ್ರೆ ಅದ್ಯಾಕೋ ಗೊತ್ತಿಲ್ಲಾ ದಿನೇ ದಿನೇ ಹರ್ಷನಾ ಮೇಲಿದ್ದ ಆ ಭಾವನೆ ತೀವ್ರವಾಗ್ತಿತ್ತು.. ಎಷ್ಟೇ ಹೊಸ ಫ್ರೆಂಡ್ಸ್ ಸಿಕ್ರು ಎಷ್ಟೇ ಬೇರೆ ಬೇರೆ ಕೆಲಸದಲ್ಲೂ ತೊಡಗಿಸಿ ಕೊಂಡ್ರು ಅವನ ಮೇಲಿನ ಆ ಭಾವನೆ ನ ನಿಯಂತ್ರಿಸೋಕೇ ಆಗ್ಲಿಲ್ಲ ಆಗ ನಂಗೆ ಗೊತ್ತಾಯ್ತು ಇದು ಪ್ರೀತಿ ಅಂತಾ..!!


ಗೊತ್ತಿತ್ತು ಕಣೇ ನೀನು ಅವನ್ನ ಪ್ರೀತಿಸ್ತಾ ಇರೋದು ಅದ್ಕೆ ಅವನಿಗೆ ಏನ್ ಇಷ್ಟಾನೋ ಅದ್ನೇಲ್ಲಾ ಊಟಕ್ಕೆ ಮಾಡ್ಸಿದ್ದೆ ಅಲ್ವಾ ಅಂತ... ಇನ್ನು ಏನನ್ನೋ ಹರ್ಷಿತಾ ಹೇಳುವಾಗಲೇ ಮದ್ಯ ಬಾಯಿ ಹಾಕಿ ಕೇಳ್ತಾಳೆ ಗೌರಿ..


ಹು ಅಂತಾ ಹರ್ಷಿತಾ ನಗುವಾಗ..


ಅಲ್ವೇ ಅವನ ಪ್ರೀತಿ ಗು ಈ ಹೋಟೆಲ್ ಗು ಏನೇ ಸಂಭಂದ ಅಂತ ಕೇಳ್ತಾಳೆ ಗೊಂದಲದಿಂದಾ...


ವೆರಿ ಸಿಂಪಲ್ ಕಣೇ ಏನ್ ಗೊತ್ತಾ ಈ ಸೈಟ್ ಹರ್ಷ ಅವರದು.. ಅವರ ಅಪ್ಪಾ ನೇ ನಮ್ಗೆ ಮಾರಿದ್ದು ಅದು ಅರ್ಧ ಬೆಲೆ ಗೇ., ಹರ್ಷ ಅದೇಗೋ ನನ್ ಅಣ್ಣಾ ಶರತ್ ಜೊತೆಗೆ ಸ್ನೇಹ ಮಾಡ್ಕೊಂಡಿದ್ದಾ.. ಅದು ನನ್ನಾ ಪ್ರೀತಿಗಾಗಿ ಅನ್ಕೊಂಡಿದೀನಿ.. ಆವತ್ತು ಒಂದಿನಾ ಶರತ್ ಅಣ್ಣಾ ಫೋನ್ ಲಿ ಮಾತಾಡ್ತಾ ಇದ್ರೂ ನಾನು ಟೀ ಕೊಡುವಾಗ ಯಾರು ಅಂದೆ ಆಗ ಅವ ಹೇಳಿದ ಶ್ರೀ ಅಂತಾ ನಾನು ಯಾರೋ ಫ್ರೆಂಡ್ ಅನ್ಕೊಂಡು ಸುಮ್ನಾದೇ..ಬಟ್ ಬರ್ತಾ ಬರ್ತಾ ಶ್ರೀ ಜೊತೆ ಮಾತು ಕಥೆ ಜೋರಾಗಿತ್ತು ಅಣ್ಣಾ ದು.. ಆಗ ಒಂದಿನಾ ಯಾರ್ ಇರ್ಬೋದು ಅಂತಾ ವಾಟ್ಸಾಪ್ ಮತ್ತೇ ಕಾಲ್ ರೆಕಾರ್ಡ್ಸ್ ಎಲ್ಲಾ ಓಪನ್ ಮಾಡಿ ನೋಡಿದ್ ಮೇಲೆ ಆ ವಾಯ್ಸ್ ಕೇಳಿದ್ ಮೇಲೆ ಗೊತ್ತಾಯ್ತು ಅದು ನನ್ ಶ್ರೀ ಹರ್ಷ ಅಂತಾ ಬಟ್ ಅವರಿಬ್ಬರ ಫ್ರೆಂಡ್ಶಿಪ್ ಹೇಗಾಯ್ತೂ ನಂಗೊತ್ತಿಲ್ಲ.. ಒಂದಿನಾ ನಾನು ಹೀಗೇ ಸೈಟ್ ಸರ್ಚ್ ಮಾಡ್ಬೇಕು ಅಂದಾಗ ಅಣ್ಣಾ ಈ ಸೈಟ್ ತೋರಿಸಿ ಫ್ರೆಂಡ್ ದು ಅಂದಾ ನಾನು ಓಕೆ ಅಂತಾ ಹೇಳಿ ತಗೊಂಡೆ.. ಆವತ್ತೇ ಹರ್ಷ ಅವರ ಡ್ಯಾಡ್ ಬಂದು ಈ ಸೈಟ್ ನಮಗೆ ರೆಜಿಸ್ಟರ್ ಮಾಡಿ ಕೊಟ್ರು ಅದು ತೀರಾ ಕಡಿಮೆ ಬೆಲೆಗೇ ಅದುನು ಯಾಕೆ ಅಂತಾ ಗೊತ್ತಿಲ್ಲ.. ಎಲ್ಲಾ ಅಯೋಮಯ ಒಟ್ನಲ್ಲಿ ಇದ್ಕೆಲ್ಲಾ ಕಾರಣ ಪ್ರೀತಿ ನೇ ಇರ್ಬೋದು ಅನ್ನೋದು ನನ್ನಾ ನಂಬಿಕೆ ಅಂತಾಳೆ..


ಲೇ ಇಷ್ಟೆಲ್ಲಾ ಆಗಿದೆ ಏನು ಹೇಳೇ ಇಲ್ವಲ್ಲೇ ಅಂತಾ ಕೇಳ್ತಾಳೆ ಗೌರಿ


ಹೇ ಹೇಳ್ತಿದ್ದೆ ಕಣೇ ಡೈರೆಕ್ಟ್ ಆಗಿ ಸಿಕ್ಕಾಗ ಹೇಳೋಣ ಅನ್ಕೊಂಡಿದ್ದೆ.. ನೀವೋ ಯಾವಾಗ್ಲೋ ಬಂದಿದ್ದು, ಯಾವಾಗ ಕೇಳಿದ್ರು ವರ್ಕ್ ವರ್ಕ್ ಅಂತಿದ್ರಿ ಅದ್ಕೆ ಹೇಳಿದ್ದಿಲ್ಲಾ ಅಂತಾಳೆ..


ಹ್ಮ್ಮ್ ಹು ಕಣೇ ದುಡ್ಡಿದ್ರೆ ದುನಿಯಾ ಇವಾಗ ಅದ್ಕೆ ಸ್ವಲ್ಪ ಏನು ತುಂಬಾ ನೇ ಬ್ಯುಸಿ., ಕಷ್ಟ ಪಟ್ಟು ನಾನು ಕರಣ್ ದುಡಿದು ಹೇಗೋ ದುಡ್ಡು ಜೋಡಿಸ್ತಾ ಇದೀವಿ ಅಂತಾಳೆ


ಲೇ ಮದ್ವೆ ಆಗ್ರೆ ಮೊದ್ಲು ಆಮೇಲೆ ದುಡ್ಡು ಜೋಡಿಸಂತ್ರಿ ಅಂತಾಳೆ


ಆಗೋಣ ಬಿಡೇ ಅದ್ಕೇನು.. ನಿಮ್ದೇ ಈಗ ಎಲ್ಲಾ ಸೆಟಲ್ ಆಗಿದೆ ಬೇಗ ಮದ್ವೆ ಊಟ ಹಾಕಿಸಿ ಅಂತಾಳೆ


ಏನೋ ಕಣೇ ನಾನೇನು ರೆಡಿ ಆದ್ರೆ ಹರ್ಷ ಅವರ ಮನಸ್ಸಲ್ಲಿ ಏನಿದೆಯೋ ಏನೋ ಅಂತಾಳೆ ಆತಂಕದಿಂದಾ


ಲೇ ಇಷ್ಟೆಲ್ಲಾ ಮಾಡಿದಾನೇ ಅಂದ್ರೆ ಅದು ಪ್ರೀತಿಗಾಗೇ ಇರುತ್ತೆ ಖಂಡಿತಾ ಅವನು ನಿನ್ನಾ ಪ್ರೀತಿಸ್ತಾ ಇದಾನೆ ಅಂತಾಳೆ


ಏನೋ ಕಣೇ ಅಂಗೆ ಆಗಿದ್ರೇ ನಿಜಾ ನಿಮ್ಗಿಂತಾ ಮೊದ್ಲೇ ನಾನೇ ಮದುವೆ ಊಟ ಹಾಕ್ಸ್ತಿನಿ ಅಂತಾಳೆ ಖುಷಿಯಿಂದ


ಅದ್ನೇ ನೆನೆದು ಗೌರಿ., ಹರ್ಷಿತಾ ನಗ್ತಾ ಇದ್ರೇ.,,,,,, ಗೋಡೆಯ ಮರೆಯಲ್ಲಿ ಎಲ್ಲಾ ಕೇಳ್ಸ್ಕೊಂಡ ಕರಣ್

" ಎಲ್ಲಾ ಪ್ರೀತಿಗಾಗಿ " ಅಂತಾ ಮನಸ್ಸಲ್ಲೇ ನಗ್ತಾ., ಏನು ಕೇಳಿಸೇ ಕೊಂಡಿಲ್ಲ ಅನ್ನೋ ತರ ರೂಮ್ ಬಾಗಿಲು ಬಡಿದು ಬನ್ನಿ ಐಸ್ಕ್ರೀಂ ತಿನ್ನೋಣ ಅಂತೇಳಿ ಹೋಗ್ತಾನೆ ಹರ್ಷ ಹತ್ರಾ " ಯಾಕೋ ಇಷ್ಟೋತ್ತು" ಅಂದ್ರೆ ಏನಿಲ್ಲಾ ಅವರು ಬರ್ತಿದಾರೆ ಅಂತೇಳಿ ಐಸ್ಕ್ರೀಂ ತಿಂತಾನೆ ಸುಮ್ನೇ.. ಗೌರಿ ಹರ್ಷಿತಾ ಸಹ ಬಂದು ಐಸ್ಕ್ರೀಂ ತಿಂತಾರೆ..


ಸರಿ ಗೈಸ ನಾಳೆ ಎಲ್ಲಾದ್ರೂ ಹೊರಗೆ ಹೋಗೋಣ ಅಂತಾ ಕೇಳ್ತಾನೆ ಹರ್ಷ ಎಲ್ಲರನ್ನು


ಅರೇ ನಾಳೆ ಆಗಲ್ಲಾ ಕಣೋ ಇವತ್ತಿನೂ ಲೀವ್ ಹಾಕಿವಿ ಮತ್ತೇ ನಾಳೆ ಅಂದ್ರೆ ಆಗಲ್ಲಾ ಫ್ರೈಡೆ ಹೋಗೋಣ ಅಂತಾನೇ ಕರಣ್ ಅದ್ಕೆ ಗೌರಿ ಸಹ ಹು ಅಂತಾಳೆ


ನಾನೇನು ಯಾವಾಗ್ಲೂ ರೆಡಿ ಅಂತಾಳೆ ಹರ್ಷಿತಾ..


ಸರಿ ಆಗಿದ್ರೇ ಫ್ರೈಡೆ ನೇ ಹೋಗೋಣ ಅಂತಾನೇ ಹರ್ಷ..


ಎಲ್ಲಾರು ಓಕೆ ಅಂತೇಳಿದಾಗ " ಮತ್ತೇ ಬಾ ಇವತ್ತು ನನ್ ರೂಮ್ ಗೇ " ಅಂತ ಕರೀತಾನೆ ಕರಣ್


ಹರ್ಷ ಗೇ ಸ್ವಲ್ಪ ಮುಜುಗರ ಆಗುತ್ತೆ ಒಂದೇ ರೂಮ್ ಲಿ ಗೌರಿ ಸಹ ಇರ್ತಾಳೆ ಹೇಗಿರೋದು ಅಂತೇಳಿ " ಬೇಡ ಮಗಾ ನಾನಿಲ್ಲೇ ಯಾವ್ದಾದ್ರು ಹೋಟೆಲ್ ಲಿ ಇರ್ತೀನಿ ಅಂತಾನೇ


ಕರಣ್ ಗು ಅದೇ ಸರಿ ಅನ್ಸಿದ್ರು " ಹೋಟೆಲ್ ಲಿ ಯಾಕೆ ನೀನ್ ನಮ್ ಮನೆಗೆ ಬಾ " ಅಂತಾಳೆ ಹರ್ಷಿತಾ.


ಅವಳು ಕರೆದಿದ್ದು ಖುಷಿ ಆದ್ರೂ ಅದು ನೀನೊಬ್ಬಳೇ ಇರ್ತೀಯ ಬೇಡ ಅಂತಾನೇ


ಅಷ್ಟೊಂದ್ದೆಲ್ಲಾ ಯೋಚ್ನೆ ಮಾಡದು ಬೇಡ ಹರ್ಷ ಅವರೇ ಮನೇಲಿ ಎರಡು ರೂಮ್ ಇದೆ ನಿಮ್ ಪಾಡಿಗೆ ನೀವ್ ಇರಿ ಯಾರ್ ಏನೇ ಅನ್ಕೊಂಡ್ರು ವೀ ಡೊಂಟ್ ವಾಂಟ್ ದಟ್ ಅಂತಾಳೆ


ಹು ಹರ್ಷ ಹೋಗೋ ಸುಮ್ನೇ ಹೋಟೆಲ್ ಎಲ್ಲಾ ಯಾಕೆ ಅಂತಾ ಕರಣ್ ಗೌರಿ ನು ಹೇಳಿದಾಗ ಸರಿ ಅಂತಾ ಒಪ್ಕೋಂತಾನೇ ಹರ್ಷ..


ಎಲ್ಲಾರು ರಾತ್ರಿ ಊಟ ಮಾಡ್ತಾರೆ..

ಗೌರಿ ಕರಣ್ ಇಬ್ಬರು ರೂಮ್ ಗೇ ಹೋಗ್ತಾರೆ..

ಇತ್ತಾ ಹೋಟೆಲ್ ಕ್ಲೋಸ್ ಆಗೋ ವರೆಗೂ ಹರ್ಷ ಗೇ ಆ ಚಿಕ್ಕ ರೂಮ್ ಲೇ ಮಲ್ಗೊಕೆ ಹೇಳ್ತಾಳೆ ಹರ್ಷಿತಾ..

ಹರ್ಷ ಸರಿ ಅಂತೇಳಿ ರೂಮ್ ಗೇ ಬಂದು ಎಚ್ ಲವ್ಸ್ ಎಚ್ ಅನ್ನೋ ಸಿಂಬಲ್ ನಾ ನೋಡಿ ಒಂದು ಪಪ್ಪೀ ಕೊಟ್ಟು ಮಲ್ಕೊಂತಾನೆ..

ಹರ್ಷಿತಾ ನಾಳೆ ಮೆನು ನೋಡಿ ತರಕಾರಿ ಎಲ್ಲಾ ತರೋಕೆ ಗ್ರೀಷ್ಮಾ ಗೇ ಹೇಳಿ ಸ್ವಲ್ಪ ಬೇಗನೇ ಹೋಟೆಲ್ ಕ್ಲೋಸ್ ಮಾಡ್ಸಿ ಹರ್ಷ ನ್ನಾ ಕರ್ಕೊಂಡು ಮನೆಗೆ ಬರ್ತಾಳೆ..


ಹರ್ಷ ತಾನೇ ಡ್ರೈವ್ ಮಾಡ್ಕೊಂಡು ಸೀದಾ ಮನೆ ಮುಂದೆ ನಿಲ್ಲಿಸಿದಾಗ.. ಹರ್ಷಿತಾ ಏನು ಕೇಳದೇ ಇದ್ರೂ " ಅದು ಹರ್ಷಿತಾ ಕರಣ್ ಅಡ್ರೆಸ್ಸ್ ಹೇಳಿದ್ದ" ಅಂತಾನೆ,


ಹರ್ಷಿತಾ ಏನು ಹೇಳದೇ ಸುಮ್ನೇ ನಗ್ತಾ ಡೋರ್ ಬಡಿತಾಳೆ... ಯಾರು ಇಲ್ಲಾ ಅನ್ಕೊಂಡಿದ್ದೆ ಅಂತಾನೇ ಡೋರ್ ಬಡಿಯೋದು ನೋಡಿ... ಹೌದ ಅಂತಾ ಹರ್ಷಿತಾ ಏನೋ ಹೇಳುವಾಗ " ಬಾಮ್ಮ " ಅಂತೇಳಿ ಹರ್ಷಿತಾ ಅವರ ಅಮ್ಮ ಸರಿತಾ ಕರೀತಾರೆ " ಬಾ ಹರ್ಷ" ಅಂತಾ ಅವನನ್ನು ಕರೆದಾಗ ಹರ್ಷ ಗೇ ಆಶ್ಚರ್ಯ ಆಗುತ್ತೆ.. ಹರ್ಷಿತಾ ಸಹ ಬಾ ಅಂತೇಳಿ ನಗ್ತಾ ಒಳಗೆ ಹೋಗ್ತಾಳೆ..


" ಹೇಗಿದ್ದೀಯ ಹರ್ಷ " ಅಂತಾ ಹರ್ಷಿತಾಳ ಅಣ್ಣ ಒಳಗಡೆಯಿಂದ ಬಂದು ಕೇಳ್ತಾನೆ..


ಹರ್ಷ ಗೇ ಆಶ್ಚರ್ಯದ ಮೇಲೆ ಆಶ್ಚರ್ಯ ಆಗುತ್ತೆ ಎಲ್ಲಾರಿಗೂ ನನ್ ಹೆಸರು ಹೇಗೆ ಗೊತ್ತು ಎಲ್ಲಾರು ಎಷ್ಟು ಆತ್ಮೀಯರಾಗಿ ಮಾತಾಡಿಸ್ತಾ ಇದಾರೆ ಅನ್ನೋ ಗೊಂದಲವಾಗೇ.. ಒಳಗೆ ಬರ್ತಾ ಚೆನ್ನಾಗಿದಿನಿ ಅಂತಾ ಹೇಳ್ತಾನೆ..


ಹರ್ಷಿತಾ ಅವರ ಅಮ್ಮಾ ಹರ್ಷ ಗೇ ಉಳಿದುಕೊಳ್ಳೋದಕ್ಕೆ ರೂಮ್ ತೋರಿಸಿ ಊಟಕ್ಕೆ ಎಲ್ಲಾ ತಯಾರಿ ಮಾಡ್ತಾರೆ..


ಹರ್ಷ ಗೇ ತುಂಬಾ ಖುಷಿ ಆಗುತ್ತೆ ಅವರ ಅತಿಥಿ ಸತ್ಕಾರ ನಾ ನೋಡಿ.. ಎಲ್ಲಾರು ಊಟ ಮಾಡಿ ನೆಮ್ಮದಿಯಾಗಿ ಮಲಗಿದಾಗ ಹರ್ಷ ಗೇ ಇನ್ನು ನಿದ್ದೆ ಬರದೇ ಟೆರಸ್ ಮೇಲೆ ಹೋಗ್ತಾನೆ., ಅಲ್ಲಿ ನೇ ಹರ್ಷಿತಾಳ ಅಣ್ಣಾ ಫೋನ್ ನೋಡ್ತಾ ಕುತ್ಗೊಂಡಿರೋದು ನೋಡಿ ನಿದ್ದೆ ಬಂದಿಲ್ವಾ ಅಂತಾ ಹೋಗಿ ಮಾತಾಡ್ಸ್ತಾನೇ.. ಇಲ್ಲಾ ಅಂತಾ ಹರ್ಷಿತಾಳ ಅಣ್ಣಾ ಅರುಣ್ ಹೇಳ್ತಾ" ಹರ್ಷ ನಿಮ್ಮಿಂದ ಒಂದು ಹೆಲ್ಪ್ ಆಗುತ್ತಾ " ಅಂತಾ ಕೇಳ್ತಾನೆ..


ಹೇಳಿ ಬ್ರದರ್ ಏನು ಅಂತಾ


ಈಗ ಬೇಡ ಇನ್ನೊಮ್ಮೆ ಹೇಳ್ತೀನಿ ಅಂತೇಳಿ ಸುಮ್ನೇ ಆಗ್ತಾನೆ..


ಓಕೆ ಬ್ರೋ ನಿಮ್ಗೆ ಯಾವಾಗ ಕೇಳ್ಬೇಕು ಅನ್ಸುತ್ತೋ ಅವಾಗ್ಲೇ ಕೇಳಿ ನಾನು ಯಾವಾಗ್ಲೂ ರೆಡಿ ನಿಮ್ಗೆ ಸಹಾಯ ಮಾಡೋಕೆ ಅಂತಾನೇ..


ಸರಿ ಬ್ರೋ ಅಂತಾ ಯಾಕಿಲ್ಲಿ ಕೂತಿದ್ರಿ ಅಂತಾ ಕೇಳ್ತಾನೆ


ಏನಿಲ್ಲಾ ಶಕೆ ಅದ್ಕೆ ಅಂತಾನೇ...


" ಅರುಣ್ " ಅಂತಾ ಯಾರೂ ಕೂಗಿದಂಗೆ ಆಗಿ ಇಬ್ಬರು ಹಿಂದೆ ನೋಡ್ತಾರೆ.. ಹರ್ಷಿತಾ ಅವರ ಅಪ್ಪಾ ಗಣಪತಿ ಅವರು ಹಿಂದೆ ನಿಂತಿರ್ತಾರೆ.. ಇಷ್ಟೋತ್ತಲ್ಲಿ ಇಲ್ಲೇನ್ ಮಾಡ್ತಿದೀರಾ ಅಂದಾಗ... ಏನಿಲ್ಲಾ ಹೀಗೇ ಗಾಳಿಗೆ ಬಂದಿದ್ವಿ ಅಂತೇಳಿ ನಾವ್ ಕೆಳಗೆ ಹೋಗ್ತಿವಿ ಅಂತಾ ಹೇಳಿ ಹರ್ಷ ನ್ನೂ ಕರ್ಕೊಂಡು ಕೆಳಗೆ ಹೋಗ್ತಾ ಅಪ್ಪಾ ಸ್ವಲ್ಪ ಸ್ಟ್ರಿಕ್ಟ್ ಇಷ್ಟೋತ್ತಲ್ಲಿ ಎಲ್ಲಾ ಹೊರಗೆ ಇದ್ರೇ ಬೈತಾರೆ ಅಂತಾ ಹೇಳಿ ನನ್ ರೂಮ್ ಅಲ್ಲೇ ಮಲಗ್ತೀಯಾ ಅಂತಾ ಕೇಳ್ತಾನೆ ಹರ್ಷ ಹು ಅಂದಾಗ ಇಬ್ಬರೂ ಗೆಳೆಯಂದ್ರು ಸ್ವಲ್ಪ ಹೊತ್ತು ಮಾತಾಡಿ ಮಲ್ಕೊಂತಾರೆ.


ಬೆಳಗ್ಗೆ ಸಮಯ ನಾಲ್ಕು ಗಂಟೆ..!


ಒಂದೇ ಸಮನೇ ಮೊಬೈಲ್ ರಿಂಗ್ ಆಗ್ತಾ ಇರುತ್ತೇ ಹರ್ಷಿತಾ ದು..!!


ಯಾರಿದು ಇಷ್ಟೋತ್ತಿಗೆ ಕಾಲ್ ಮಾಡ್ತಿರೋದು ಅಂತಾ ಸ್ವಲ್ಪ ಗಾಬರಿ ಆಗೇ ಫೋನ್ ನೋಡ್ತಾಳೆ., ಹರ್ಷ..!! ಅಂತಾ ರಿಸೀವ್ ಮಾಡ್ತಾಳೆ..


ಹರ್ಷಿತಾ ಅರ್ಜೆಂಟ್ ಆಗಿ ಮನೆಯಿಂದ ಫೋನ್ ಬಂದಿತ್ತು ನಾನಿವಾಗ್ಲೇ ಹೋಗ್ಬೇಕು ಅಂತಾನೇ... ಯಾಕೆ ಹರ್ಷ ಅಂತಾ ಕೇಳ್ತಾ ರೂಮ್ ಯಿಂದ ಹೊರಗೆ ಬರ್ತಾಳೆ... ಹರ್ಷ ಅಲ್ಲೇ ಬ್ಯಾಗ್ ಇಡ್ಕೊಂಡು ಕೂತಿದ್ದನ್ನ ನೋಡಿ ಮತ್ತೇ ಬಂದು ಕೇಳ್ತಾಳೆ ಏನ್ ವಿಷಯ ಎಲ್ಲಾ ಸರಿ ಇದೇನಾ ಅಂತಾ... ಯಾ ಯಾ ಎಲ್ಲಾ ಸರಿ ಇದೆ ಅದೇನೋ ಸ್ವಲ್ಪ ಆಫೀಸ್ ವರ್ಕ್ ಅಂತೆ ಡ್ಯಾಡ್ ಬೇಗ ಬರೋಕೆ ಹೇಳಿದ್ರು ಅಂತಾ ಹೇಳ್ತಾ ಹರ್ಷಿತಾಳಿಗೆ ಬೇಜಾರಾಗಿದೆ ಅನ್ನೋದನ್ನ ಗಮನಿಸ್ತಾನೇ... ಅಯ್ಯೋ ಹೋಗ್ಲೇ ಬೇಕಾ ಅಂತಾ ಹರ್ಷಿತಾ ತುಂಬಾ ದುಃಖದಿಂದಾನೆ ಕೇಳ್ತಾಳೆ... ಅವಳ ಕಣ್ಣಲ್ಲಿ ಇದ್ದಾ ಆ ಭಾವನೆ ಅರ್ಥ ಆದ್ರೂ ಹೋಗ್ಲೇಬೇಕಾದ ಅನಿವಾರ್ಯತೇಯಿಂದ " ಬೇಜಾರ್ ಆಗ್ಬೇಡ ಹರ್ಷಿ ಅಂತಾ ಹತ್ತಿರ ಬಂದು ಅವಳ ಕೆನ್ನೆ ಇಡಿದು ಒನ್ ವೀಕ್ ಅಷ್ಟೇ ಮತ್ತೇ ಬರ್ತೀನಿ ನೀನೇ ಹೋಗು ಅಂದ್ರು ಹೋಗಲ್ಲಾ ಅಂತಾನೇ... ಆ ಸ್ಪರ್ಶಕ್ಕೆ ಸೋತು ಮನಸ್ಸಿಲ್ಲದ ಮನಸ್ಸಿಂದ ಹರ್ಷ ನ್ನಾ ಅವಳೇ ಹೋಗಿ ಏರ್ಪೋರ್ಟ್ ವರೆಗೂ ಬಿಟ್ಟು ಬರ್ತಾಳೆ...


ಅವತ್ಯಾಕೋ ಹರ್ಷಿತಾ ಗು., ಹರ್ಷ ಗು ಏನೋ ಒಂದು ರೀತಿಯ ಭಯ, ಬೇಜಾರು...


ಹರ್ಷ ರೀಚ್ ಅದೇ ಅಂತಾ ಫೋನ್ ಮಾಡಿದಾಗ ಏನೋ ಒಂದು ಸಮಾಧಾನ ಹರ್ಷಿತಾಗೇ...


ಗೀತಾ, ಕರಣ್ ಗು ಹರ್ಷಿತಾ ನೇ ಫೋನ್ ಮಾಡಿ ಎಲ್ಲಾ ವಿಷಯ ಹೇಳಿದಾಗ ಅವರು ಸರಿ ಬಿಡು ನೆಕ್ಸ್ಟ್ ವೀಕ್ ಮಜಾ ಮಾಡೋಣ ಅಂತಾರೆ ಆದ್ರೆ ಹರ್ಷಿತಾ ಗೇ ಮಾತ್ರ ಮನಸ್ಸಿಗೆ ನೆಮ್ಮದಿ ನೇ ಇರಲ್ಲಾ...


ಗ್ರೀಷ್ಮಾ ಗೇ ಹೋಟೆಲ್ ನೋಡ್ಕೋ ಅಂತೇಳಿ ಮದ್ಯಾಹ್ನನ್ನೇ ಮನೆಗೆ ಬಂದು ಬಿಡ್ತಾಳೆ ಹರ್ಷಿತಾ...


ಸರಿತಾ ಅವರು ಇಷ್ಟು ಬೇಗ ಬಂದ ಮಗಳನ್ನ ನೋಡಿ ಯಾಕೆ ಅಂತಾ ಕೇಳಿದ್ರು ಏನಿಲ್ಲಾ ಅಂತೇಳಿ ಸುಮ್ನೇ ಹೋಗಿ ಮಲ್ಕೊಂಡು ತಂಗಾಳಿಯಂಗೆ ಬಂದು ಬಿರುಗಾಳಿ ತರ ಹೋದ್ಯಲ್ಲಾ ಅಂತಾ ಹರ್ಷ ನ್ನಾ ನೆನೆದು, ನೆಕ್ಸ್ಟ್ ವೀಕ್ ಬರ್ತೀಯ ಅಲ್ವಾ ಅವಾಗ ಮೊದ್ಲು ನನ್ ಪ್ರೀತಿ ವಿಷಯ ಹೇಳಿ ಬಿಡ್ತೀನಿ ಅಂತಾ ಅದೇ ಬೇಜಾರಲ್ಲಿ ಮಲಗಿರ್ತಾಳೆ.,


ಡೋರ್ ಡಬ್ ಡಬ್ ಅಂತಾ ಬಡಿದ ಶಬ್ದಕ್ಕೆ ಎದ್ದು ಬಿಡ್ತಾಳೆ.. ಏನಪ್ಪಾ ಬಂದಿದ್ದು ಅಂತಾ ಕೇಳ್ತಾ ಇದ್ದಾಗ ಹಿಂದಿನಿಂದ ಸರಿತಾ ಮತ್ತೇ ಅರುಣ್ ಸಹ ಬರ್ತಾರೆ.. ಯಾಕ್ ಎಲ್ರು ಬಂದಿದೀರ ಅಂತಾ ಸ್ವಲ್ಪ ಗೊಂದಲದಿಂದಾನೇ ಕೇಳ್ತಾಳೆ..


ಪಕ್ಕಾ ಕುಳಿತ ಗಣಪತಿ ಅವರು " ಅದು ಮಗಳೇ, ರಾತ್ರಿ ಮಾತಾಡೋಣ ಅನ್ಕೊಂಡಿದ್ದೆ., ಆದ್ರೆ ನೀನು ಬೇಗ ಬಂದೆ ಅಂತಾ ಸರು ಹೇಳಿದ್ಲು ಅದ್ಕೆ ಬಂದೆ ಮಾತಾಡೋಣ ಅಂತಾರೆ.


ಹ ಸರಿ ಅಪ್ಪಾ ಹೇಳಿ ಅಂತಾ ಅವರನ್ನೇ ನೋಡ್ತಾ ಇರ್ತಾಳೆ


ಅದು ಮಗಳೇ ನಿನ್ ಮದುವೆ ಮಾಡೋಣ ಅಂತಿದೀವಿ ಅಂತಾರೆ


ಹರ್ಷಿತಾ ಗೇ ಒಮ್ಮೆಲೇ ಮದುವೆ ಅನ್ನೋ ಪದ ನೇ ಭಯ ತಂದು ಬಿಡುತ್ತೆ..

" ಯಾಕ್ ಅಪ್ಪಾ ಇಷ್ಟು ಬೇಗ ಇನ್ನು ಒಂದೆರಡು ವರ್ಷ ಬೇಡ " ಅಂತಾಳೆ...


ಇನ್ನು ಎರಡು ವರ್ಷ ನಾ!! ಮಗಳೇ ಇವಾಗ್ಲೆ ನಿಂಗೆ ಇಪ್ಪತ್ತಾರು.,ಇಪ್ಪತ್ನಾಲ್ಕ ಕ್ಕೇ ಮಾಡ್ಬೇಕು ಅನ್ಕೊಂಡಿದ್ದೆ ನೀನೋ ಹೋಟೆಲ್ ಬಿಸಿನೆಸ್ ಅದು ಇದು ಅಂದಿದ್ದಕ್ಕೆ ಇಷ್ಟು ವರ್ಷ ಸುಮ್ನೇ ಇದ್ದೇ ಆದ್ರೆ ಈಗ ಆಗಲ್ಲಾ ಮಗಳೇ ನಿಂದು ಮಾಡಿ ನಿಮ್ ಅಣ್ಣಾ ಗು ಮಾಡ್ಬೇಕು ಅವನಿಗೂ ವಯಸ್ಸು ಆಗ್ತಾ ಬಂತು ಅಂತಾರೆ..


ಅಲ್ಲಿ ಎಲ್ಲರಲ್ಲೂ ಮೌನ ಅಡಗಿರತ್ತೆ.. ಹರ್ಷಿತಾ ಏನೋ ಅಮ್ಮಾ ಗೇ ಹರ್ಷ ನ್ನಾ ಪ್ರೀತಿಸ್ತಾ ಇರೋ ವಿಷಯ ಹೇಳಿದೀನಿ ಅಮ್ಮಾ ಹೇಗೋ ಅಪ್ಪನ್ನ ಒಪ್ಪಿಸ್ತಾರೇ ಅಂತಾ ನಿರಾಳವಾಗಿ ಇರ್ತಾಳೆ..


ಮತ್ತೇ ಅಪ್ಪಾ ಹುಡುಗನ್ನಾ ಹುಡುಕೋದ ಅಂತಾ ಅರುಣ್ ಕೇಳ್ತಾನೆ..


ಇಲ್ಲಾ ಇವಾಗಾಗ್ಲೇ ನಾನು ಹುಡುಗನ್ನ ಹುಡ್ಕಿದೀನಿ ಅಂತಾರೆ..


ಗೊಂದಲದ ಗೋಡಾಗಿದ್ದ ಹರ್ಷಿತಾಳ ಮನಸ್ಸು ದುಃಖದ ಅತೀರೇಖಕ್ಕೇ ಹೋಗುತ್ತೆ..


ಆಶ್ಚರ್ಯದಿಂದಾ ಎಲ್ಲಾರು ಗಣಪತಿ ಅವರನ್ನೇ ನೋಡ್ತಾ.. ಯಾರ್ರಿ ಹುಡುಗ ಅಂತಾ ಕೇಳ್ತಾರೆ ಸರಿತಾ ಅವರು..


ಆಗ ಮಗಳ ಸನಿಹ ಬಂದ ಗಣಪತಿ ಅವರು ಹರ್ಷಿತಾಳ ತಲೆ ಸವರುತ್ತಾ " ಅದೇ ಸುಂದರ್ ರಾಜ್ ಭಟ್ ಇಲ್ವಾ ಅವರ ಮಗಾ ಅಂತಾ ಹೇಳ್ತಾ ಒಳ್ಳೆ ಜೋಡಿ ಆಗ್ತಾನೆ ನನ್ ಮಗಳಿಗೆ ಅಂತಾ ಅವರೇ ನೋಡೋಕೆ ಬರೋದಾ ಅಂತಾ ಕೇಳಿದ್ರು ಆದ್ರೆ ನಾನೇ ನಿಮ್ ಮಗನ್ನ ನಾವೆಲ್ಲರೂ ನೋಡಿದೀವಿ.. ನೀವೇನಾದ್ರು ನನ್ ಮಗಳನ್ನ ನೋಡ್ಬೇಕು ಅಂದ್ರೆ ಬನ್ನಿ ಅಂದೆ ಆದ್ರೆ ಅವರು ನಿಮ್ ಮಗಳನ್ನ ನಾವು ನೋಡಿ ಆಗಿದೆ ನನ್ ಮಗನಿಗೂ ಇಷ್ಟಾ ಆಗಿದಾಳೆ ಅವನು ಹೇಳಿದ್ದಕ್ಕೆ ನಿಮ್ಮನ್ನ ಕೇಳ್ತಾ ಇರೋದು ಅಂದ್ರು ನಂಗು ಅಂತಾ ಒಳ್ಳೆ ಮನೆತನ ದ ಹುಡುಗ ನೇ ನನ್ನಾ ಮಗಳನ್ನ ಮೆಚ್ಚಿಕೊಂಡಿದ್ದಾನೆ ಅಂದ್ರೆ ನನ್ ಮಗಳು ಚೆನ್ನಾಗಿ ಇರ್ತಾಳೆ ಅಂತಾ ಅನ್ಸಿ ಅವರಿಗೆ ಎಂಗೇಜ್ಮೆಂಟ್ ಏನು ಬೇಡ ಡೈರೆಕ್ಟ್ ಮದುವೆ ನೇ ಮಾಡೋಣ ಒಂದೊಳ್ಳೆ ದಿನಾಂಕ ನೋಡಿ ಹೇಳಿ ಅಂತಾ ನಾನು ಅವರಿಗೆ ಅವಾಗ್ಲೇ ಮಾತು ಕೊಟ್ಟು ಬಂದೆ anta ಹೇಳ್ತಾರೆ., ಮಗಳಿಗೆ ಒಳ್ಳೆ ಕುಟುಂಬ ಸಿಗುತ್ತೆ ಅನ್ನೋ ಸಂತಸದಿಂದಾ..


ಹರ್ಷಿತಾ ಗೇ ದಿಕ್ಕೇ ದೋಚದಂಗೆ ಆಗಿ ಬಿಡುತ್ತೆ.. ತನ್ನ ಹತ್ತಿರದವರೇ ಯಾರೋ ಹೃದಯಕ್ಕೇ ಚಾಕುವಿನಿಂದಾ ಇರಿದಂಗೆ ಆಗಿ ದುಃಖ ತುಂಬಿದ ಕಣ್ಣಿನಿಂದ ಅಮ್ಮಾ ನಾ ಕಡೆ ನೋಡ್ತಾಳೆ ಆದ್ರೆ ಗಂಡನ ಮಾತಿಗೆ ಎದುರಾಡೋಕೆ ಆಗದೇ ಸರಿತಾ ಅವರು ತಲೆ ತಗ್ಗಿಸಿ ಬಿಡ್ತಾರೆ.. ಅಮ್ಮಾ ನು ಒಪ್ಪಿದೆ ಅಂತಾ ಅನ್ಕೊಂಡ ಹರ್ಷಿತಾ ಗೇ ಕಣ್ಣೆಲ್ಲ ಮಂಜಾಗಿ ಹೋಗುತ್ತೆ.. ಮಾತಾಡೋಕೆ ಮಾತೇ ಬರದೇ ಗಂಟಲು ಕಟ್ಟಿದ ಆಗೇ ಆಗಿ ದುಃಖನೆಲ್ಲಾ ತನ್ನಲ್ಲೇ ಅದುಮಿ ಇಟ್ಗೊಂತಾಳೆ..


ಅಪ್ಪಾ ಒಂದು ಸರಿ ಪರಸ್ಪರ ಎಲ್ಲಾರು ನೋಡಿದ್ರೆ ಚೆನ್ನಾಗಿ ಇರೋದೇನೋ ಅಂತಾ ಕೇಳ್ತಾನೆ ಅರುಣ್..


ಅದ್ರಲ್ಲಿ ನೋಡೋದು ಏನಿದೆ ಅರುಣ್, ಅವರೆಲ್ಲಾ ನಂಗೆ ನಿಮ್ ಅಮ್ಮಾ ಗೇ ತುಂಬಾ ಗೊತ್ತಿರೋರು ಮೇಲಾಗಿ ಆ ಹುಡುಗ ತುಂಬಾ ಒಳ್ಳೆಯವನು ಅಂತಾರೆ.. ಮುಂದೆ ಮಾತೇ ಆಡಲ್ಲ ಅರುಣ್ ಅಪ್ಪಾ ನಾ ಮಾತಿಗೆ ಒಪ್ಪಿಗೆ ಸೂಚಿಸಿ ಸುಮ್ನೇ ಆಗಿ ಬಿಡ್ತಾನೆ..


ನಿನ್ ಅಭಿಪ್ರಾಯ ಏನು ಮಗಳೇ ಅಂತಾ ಕೇಳ್ತಾರೆ ಹರ್ಷಿತಾ ನ್ನಾ ಗಣಪತಿ ಅವರು..

ಅವಳಾದ್ರು ಏನ್ ಹೇಳ್ತಾಳೆ ಅಮ್ಮಾ ನೇ ತಲೆ ತಗ್ಗಿಸಿಕೂತಾಗ ಮೌನವಾಗಿ ಮನದಲ್ಲೇ ದುಃಖಿಸಿಕೊಳ್ತಾ " ನಂಗೆ ಇವತ್ತು ಒಂದಿನಾ ಸಮಯ ಕೊಡಿ ಅಪ್ಪಾ ಮದುವೆ ಗೇ ಎಲ್ಲಾ ಇನ್ನು ನಾನು ರೆಡಿ ಇಲ್ಲಾ " ಅಂತಾಳೆ ತಲೆ ತಗ್ಗಿಸಿ ಯಾರ ಮುಖ ನು ನೋಡೋಕೆ ಆಗದೇ..


ಸರಿ ಮಗಳೇ ಸಮಯ ಎಷ್ಟಾದ್ರೂ ತಗೋ ಆದ್ರೆ ನಿನ್ ಮೇಲೆ ನಂಗೆ ಸಂಪೂರ್ಣ ನಂಬಿಕೆ ಇದೆ. ಆ ಹುಡುಗ ನಾ ಜೊತೆಗೆ ನಿನ್ ಜೀವನ ಆನಂದಮಯವಾಗಿರುತ್ತೆ ಅನ್ನೋದಕ್ಕೆ ಜೀವಂತ ಸಾಕ್ಷಿ ನಾನಾಗಿದೀನಿ.. ನೀನು ನಿಮ್ ಅಪ್ಪಾ ನ ಮೇಲೆ ಸ್ವಲ್ಪ ನಂಬಿಕೆ ಇಟ್ಟು ನೋಡು ಅಂತೇಳಿ ಯೋಚ್ನೆ ಮಾಡು ಕಂದ ಅಂತಾ ಎದ್ದು ಹೋಗ್ತಾರೆ..


ಅಪ್ಪಾ ಹೋಗಿದ್ದೆ ದುಃಖದ ಕಟ್ಟೇ ಹೊಡೆದು ಕಣ್ಣಾಲಿ ಎಲ್ಲಾ ನೀರಾಗಿ ಹೋಗುತ್ತೆ.. ಸರಿತಾ ಅವರು ಎಷ್ಟೇ ಸಮಾಧಾನ ಮಾಡೋಕೆ ನೋಡಿದ್ರು ಅವಳ ಕಣ್ಣೀರು ಸ್ವಲ್ಪ ನು ಕಡಿಮೆ ಆಗೋದೇ ಇಲ್ಲಾ.. ಅರುಣ್ ಸಹ ಸ್ವಲ್ಪ ನಾವೇಳದು ಕೇಳು ಅಂದ್ರು ದುಃಖ ನಿಲ್ಲೋದಿಲ್ಲ.. ಕೊನೆಗೆ ಕಷ್ಟ ಪಟ್ಟು ಹೇಗೋ ತನ್ನೆಲ್ಲ ದುಃಖನು ತಡೆದು " ಅಮ್ಮಾ ನಿಂಗೆ ಗೊತ್ತಿತ್ತು ಅಲ್ವಾ ಅಮ್ಮಾ., ನೀನೇಕೆ ಅಪ್ಪಾ ಹತ್ರಾ ಏನು ಹೇಳಿಲ್ಲಾ!? ಅಂತಾ ಕಣ್ಣೀರನ್ನ ಓರೆಸ್ತಾ ಕೇಳ್ತಾಳೆ..


ನಿಮ್ ಅಪ್ಪಾ ಮುಂದೆ ಹೇಗ್ ತಾನೇ ಮಾತಾಡೋಕೆ ಆಗುತ್ತೆ ಅವರು ಅವಾಗ್ಲೇ ಮಾತ್ ಬೇರೆ ಕೊಟ್ಟಿದೀನಿ ಅಂತಾ ಹೇಳ್ತಿದಾರೆ ನಾನೇನು ಮಾಡೋಕೆ ಆಗ್ಲಿಲ್ಲ ಕಂದ ಅಂತಾ ಅದು ಅಲ್ದೇ ಹರ್ಷ ಸಹ ನಿಂಗೆ ಏನು ಹೇಳಿಲ್ಲಾ ಬೆಳಗ್ಗೆನೇ ಎದ್ದು ಹೋಗಿದಾನೆ. ಅಂತಾರೆ..


ನೋಡು ಹರ್ಷಿ " ನಾನು ಹರ್ಷನ್ನಾ ನಿನ್ನೇ ಕೇಳಿದೆ., " ಹರ್ಷಿತಾ ಬಗ್ಗೆ ನಿನ್ ಅಭಿಪ್ರಾಯ ಏನು !? ಅಂತಾ ಅದಕ್ಕೆ ಅವನು ಹೇಳಿದ "ಹರ್ಷಿತಾ ಒಂದೊಳ್ಳೆ ಫ್ರೆಂಡ್ ನಂಗೆ " ಅಂತಾ ಅದಕ್ಕೆ ಅಪ್ಪಾ ಹತ್ರಾ ನಾನು ಏನು ಮಾತಾಡ್ಲಿಲ್ಲ ಅಂತಾನೇ ಅರುಣ್.


ಅಣ್ಣಾ ಅದೇಗೋ ಹೇಳ್ತೀಯಾ ಅಣ್ಣಾ ನಾ ಎದುರಿಗೆ ಯಾರಾದ್ರೂ ನಿನ್ ತಂಗಿನಾ ಪ್ರೀತಿಸ್ತಾ ಇದೀನಿ ಅಂತಾ ಹೇಳ್ತಾರಾ?? ಅಂತಾ ಕೇಳ್ತಾಳೆ


ಹರ್ಷಿತಾ ನಾನೇ ಕೇಳಿದೆ ಅವನಿಗೆ ನನ್ ತಂಗಿ ನಾ ಮದುವೆ ಆಗ್ತೀಯಾ ಅಂತಾ ಆದ್ರೆ ಅವನೇ ನೋ ವೇ ಬ್ರೋ ಅವಳೊಂದು ಒಳ್ಳೆ ಸ್ನೇಹಿತೆ ಅಷ್ಟೇ ನಂಗೆ ಅಂದಿದ್ದು ಅಲ್ದೇ ನಾನು ಸಾಫ್ಟವೆರ್ ನಿಮ್ ತಂಗಿನೂ ಸಾಫ್ಟ ಸೊ ಇಬ್ಬರು ಸೇರಿದ್ರೆ ಒಂದು ಸಾಫ್ಟ್ ಕಾರ್ನರ್ ನೇ ಇರುತ್ತೆ ಹೊರತು ಜೀವನದಲ್ಲಿ ಕಷ್ಟ ಬಂದ್ರೆ ಮುನ್ನುಗ್ಗಿ ಹೋಗೋ ಮನಸ್ಥಿತಿ ನಮ್ ಇಬ್ರುದು ಇರಲ್ಲಾ.. ಅದೇ ನಂಗೆ ಹಾರ್ಡ್ವೇರ್ ಜೋಡಿ ಆದ್ರೆ ಸಾಫ್ಟ್ ಆಗಿ ನಾನು ಹಾರ್ಡ್ ಆಗಿ ಅವಳು ಏನೇ ಕಷ್ಟ ಬಂದ್ರು ಅಟ್ ಲೀಸ್ಟ್ ಅವಳಾದ್ರು ನಂಗೆ ಮುನ್ನುಗ್ಗಿ ಹೋಗೋ ಛಲನಾದ್ರೂ ಮೂಡಿಸ್ತಾಳೆ " ಅಂತಾ ಹೇಳಿದ ಅಂತಾನೇ ಬೇಜಾರಿಂದ ಅರುಣ್..


ಅಣ್ಣಾ., ಸಾಧ್ಯ ನೇ ಇಲ್ಲಾ ಹರ್ಷ ಆಗೆಲ್ಲಾ ಹೇಳಿರಲ್ಲಾ.., ಅವನಿಗೆ ನಾನಾದ್ರೆ ಇಷ್ಟಾ ಅಣ್ಣಾ.. ನನಗಾಗಿ ಡೆಲ್ಲಿಯಿಂದ ಇಲ್ಲಿಗೆ ಬಂದು ಶರತ್ ಅಣ್ಣಾ ನಾ ಪರಿಚಯ ಮಾಡ್ಕೊಂಡು ಅವರ ಸೈಟ್ ನಾ ನಂಗೆ ಕೊಟ್ಟಿದಾನೆ ಕೋಟ್ಯಂತರರೂಪಾಯಿಗೇ ಮಾರಾಟ ಆಗ್ಬೇಕಿದ್ದಾ ಸೈಟ್ ನಾ ಕೇವಲ ಇಪ್ಪತ್ತಾಐದು ಲಕ್ಷಕ್ಕೇ ಕೊಟ್ಟಿದಾರೆ ಯಾಕಾಗಿ ಗೊತ್ತಾ ನನ್ನಾ ಮೇಲಿದ್ದ ಪ್ರೀತಿಗಾಗಿ., ಫ್ರೀ ಆಗಿ ಕೊಟ್ರೆ ಅನುಮಾನ ಬರ್ಬೋದು ಅನ್ನೋ ಒಂದೇ ಕಾರಣಕ್ಕೆ ಅಷ್ಟು ದುಡ್ಡು ಹೇಳಿರೋದು., ಇದೆಲ್ಲಾ ಯಾಕಾಗಿ ಅಣ್ಣಾ ನನ್ನಾ ಮೇಲಿನ ಪ್ರೀತಿಗಾಗಿ "

ಅಂತಾ ಕೆನ್ನೆ ಜಾರಿ ಹೋಗ್ತಿದ್ದ ಕಣ್ಣೀರನ್ನ ಒರೆಸೋ ಪ್ರಯತ್ನ ಮಾಡ್ತಾಳೆ..


ಹರ್ಷಿತಾ, ನೀನ್ ಯಾಕೆ ಅತರ ಯೋಚಿಸ್ತಾ ಇದ್ದೀಯ ಅದೆಲ್ಲಾ ನಿನ್ನಾ ಮೇಲಿನ ಸ್ನೇಹಕ್ಕಾಗಿ ನೂ ಇರ್ಬೋದಲ್ವಾ?? ಅಂತಾ ಕೇಳ್ತಾನೆ ಅರುಣ್..


ಅದೇಗೆ ಅಣ್ಣಾ ಸ್ನೇಹ ! ಅಂತಾ ಎಷ್ಟೇ ತಡೆದರು ಬರ್ತಿದ್ದ ಕಣ್ಣೀರನ್ನ ಒರೆಸ್ತಾ ನೇ ಇರ್ತಾಳೆ..


ನೋಡು ಕಂದ ಅವನಿಗೆ ಇಷ್ಟಾ ಇದ್ದಿದ್ರೆ ನಿನ್ನೇ ನೇ ಹೇಳ್ತಿದ್ದ ಅಲ್ವಾ ಅಂತಾ ಕೇಳ್ತಾ ಅದು ಅಲ್ದೇ ನಿಂಗು ಅವನು ಇಷ್ಟಾ ಇದ್ದಿದ್ರೆ ನೀನು ಹೇಳಿರ್ಬೇಕಿತ್ತು ಇಷ್ಟೋತ್ತಿಗೆ ಅವಾಗ್ಲೇ ಹತ್ತು ವರ್ಷ ಆಯ್ತು ನಿಮ್ದು ಹತ್ತನೇ ತರಗತಿ ಮುಗಿಸಿ ಅದೆಲ್ಲಾ ಒಂದು ಆಕರ್ಷಣೆ ಅಷ್ಟೇ ಅಂತಾನೇ ಅರುಣ್..


ಹರ್ಷಿತಾ ತನ್ನ ಕಣ್ಣೀರನ್ನ ಓರೆಸ್ತಾ ವ್ಯಂಗ್ಯವಾಗಿ ನಕ್ಕು " ಆಕರ್ಷಣೆ !.. ಎಷ್ಟು ದೊಡ್ಡ ಪದ ಆದ್ರೆ ಇಲ್ಲಿ ಎಷ್ಟು ಚಿಕ್ಕದಾಗಿ ಬಿಡ್ತು ಅಲ್ವಾ ಅಣ್ಣಾ ಅಂತಾ ಎದ್ದು ಅಣ್ಣಾ ನಿಂಗೊತ್ತಾ ನಾನು ಹೋಟೆಲ್ ಮ್ಯಾನೇಜ್ಮೆಂಟ್ ಕೋರ್ಸ್ ನೇ ಯಾಕಾಗಿ ಓದಿದೆ? ಅಂತಾ..! ಅಣ್ಣಾ ಇಂಜಿನಿಯರ್, ಅಪ್ಪಾ ಇಂಜಿನಿಯರ್, ಅಮ್ಮ ಇಂಜಿನಿಯರ್ ಮನೆ ಮಂದಿ ಎಲ್ಲಾ ಇಂಜಿನಿಯರ್ ಆಗಿದ್ದಾಗ ನಾನ್ ಮಾತ್ರ ಯಾಕೆ ಕಾಮರ್ಸ್ ಮಾಡಿ ಎಂ ಬಿ ಎ ಮಾಡಿ ಹೋಟೆಲ್ ಮ್ಯಾನೇಜ್ಮೆಂಟ್ ಮಾಡ್ಬೇಕು ಅಂತಿದೀನಿ ಅಂತಾ ಯಾರ್ ಒಬ್ರಿಗು ಗೊತ್ತಾಗ್ಲಿಲ್ಲಾ ಅಲ್ವಾ.. ಯಾಕಾಗಿ ಗೊತ್ತಾ ಅವನ ಮೇಲಿದ್ದಾ ಪ್ರೀತಿಗಾಗಿ.. ಯಾವುದೇ ಆಕರ್ಷಣೆ ಗಾಗಿ ಅಲ್ಲಾ ಅದು ಪ್ರೀತಿ ಅವನ ಮೇಲಿದ್ದ ಪ್ರೀತಿಗಾಗಿ..! ಅವತ್ತೊಂದು ದಿನಾ ಸ್ಕೂಲ್ ಲಿ ನಾವೆಲ್ಲರೂ ಸುಮ್ನೇ ಕೂತಿದ್ದಾಗ ಹರ್ಷ ಹೇಳ್ತಿದ್ದ " ಮುಂದೆ ಎಲ್ಲ ಓದಿ ಮುಗಿಸಿ ಒಂದೊಳ್ಳೆ ಹೋಟೆಲ್ ಇಟ್ಟು.. ಗ್ರೌಂಡ್ಫ್ಲೋರ್ ಲಿ ನಾರ್ಮಲ್ ಹೋಟೆಲ್ ಮಾಡಿ., ಫಸ್ಟ್ ಫ್ಲೋರ್ ಲಿ ಫ್ಯಾಮಿಲಿ ರೆಸ್ಟೋರೆಂಟ್ ಮಾಡಿ ಅದ್ರ ಮೇಲೆ ಕ್ಲಬ್ ಅರೇಂಜ್ ಮಾಡಿ ಅದರ ಮೇಲೆ ಕೊನೆಗೆ ಒಂದು ಎರಡು ರೂಮ್ ಕಟ್ಟಿಸಿ ಚಿಕ್ಕದಾಗಿ ಚೊಕ್ಕದಾಗಿ ಮನೆ ಮಾಡಿ.. ಅಲ್ಲೇ ಹೊರಗೊಂದು ಚಿಕ್ಕ ದಿವಾನ ಕಾಟ್ ಹಾಕೊಂಡು ಆಕಾಶನಾ ತೀರಾ ಹತ್ತಿರದಿಂದ ನೋಡ್ತಾ ನಕ್ಷತ್ರಗಳ್ನ ಏಣಿಸೊ ಕೆಲಸದಲ್ಲಿ ಮಗ್ನನಾಗಿ ಅಲ್ಲೇ ಕಳೆದುಹೋಗಿ ದಿನಾ ದಿನಾ ಮತ್ತೇ ಮತ್ತೇ ಹುಟ್ಟಿ ಬರ್ಬೇಕು ಒಂದೊಂದು ಮೆಟ್ಟಿಲು ಇಳಿದು ನಾನು ಕೆಳಗೆ ಬರ್ತಿದ್ರೆ ಹೊಸ ಹೊಸ ಯೋಜನೇ ಜೊತೆಗೆ ಕೆಲಸ ಮಾಡ್ಬೇಕು ಅಂತಾ ಹೇಳಿದ್ದ ".. ನಿಂಗೆ ನೆನಪಿದೆಯಾ ಅಣ್ಣಾ.. ಹೋಟೆಲ್ ಕಟ್ಟುವಾಗ ಮೊದ್ಲು ಪಾರ್ಕಿಂಗ್ ವ್ಯವಸ್ಥೆ ನೋಡ್ತಾರೆ ಗ್ರೌಂಡ್ ಫ್ಲೋರ್ ಪಾರ್ಕಿಂಗ್ ಗೇ ಇರಲಿ ಅಂದಿದ್ದೆ ಆದ್ರೆ ನಾನು ಇಲ್ಲಾ ಹೀಗಿಗೇ ಆಗ್ಬೇಕು ಅಂತಾ ಹಟ ಮಾಡಿ ಕಟ್ಟಿಸಿದೇ ಯಾಕ್ ಗೊತ್ತಾ ಯಾರದೋ ಮೇಲಿನ ಆಕರ್ಷಣೆದಿಂದಾ ಅಲ್ಲಾ ಅಣ್ಣಾ ಹರ್ಷ ನಾ ಮೇಲಿದ್ದ ಪ್ರೀತಿಯಿಂದ! ಅಂತಾ ಅಳ್ತಾ ಅಲ್ಲೇ ಕುಸಿದು ಬಿದ್ದು ಗೋಡೆಗೆ ಒರಗಿ ಕುರ್ತಳೆ..


ಹ್ಮ್ಮ್ ಇಷ್ಟೆಲ್ಲಾ ಇದೇನಾ ಆದ್ರೆ ಅಪ್ಪಾ ನಾ ಮಾತು ನಾವು ಕೇಳ್ಳೆ ಬೇಕು ಅಲ್ವಾ ಅಂತಾನೇ ಅರುಣ್..


ಯಾಕಣ್ಣ ಹಾಗೇ., ಆವತ್ತು ಅಪ್ಪಾ ಸೈನ್ಸ್ ಗೇ ಜಾಯಿನ್ ಮಾಡೋಕೆ ಅಂತಾ ಅಪ್ಲಿಕೇಶನ್ ಫಾರಂ ಇಡಿದು ನಿಂತಾಗ ನಾನು ಕಾಮರ್ಸ್ ಮಾಡ್ಬೇಕು ಅಂತಿದೀನಿ ಅಂದಾಗ ಮತ್ತೊಂದು ಪ್ರಶ್ನೆ ಕೇಳದೇ ನಿನ್ನಿಷ್ಟ ಬಂದಿದ್ದು ಮಾಡು ಮಗಳೇ ಅಂದ್ರು.. ಎರಡು ವರ್ಷದ ಒಂದು ಕೋರ್ಸ್ ಮೂರು ವರ್ಷದ ಒಂದು ಡಿಗ್ರಿ ಮಾಡೋಕೆ ನನ್ನಿಷ್ಟ ನಾ ಕೇಳಿದ್ದೋರು..ಈಗ ಜೀವನಪರ್ಯಂತ ಜೊತೆಗೆ ಬಾಳ್ಬೇಕಿರೋ ಹುಡುಗನ್ನಾ ಅವರು ಅವರೇ ಹೇಗೆ ಸೆಲೆಕ್ಟ್ ಮಾಡ್ತಾರೆ ಅಣ್ಣಾ..


ಕಂದ., ನಾವು ಚೆನ್ನಾಗಿ ಇರಲಿ ಅನ್ನೋದು ಅವರ ಆಶಯ ಅಲ್ವಾ ಸೊ ಅಪ್ಪಾ ಏನೇ ನಿರ್ಧಾರ ತಗೊಂಡ್ರು ಅದೆಲ್ಲಾ ನಮ್ಮ ಒಳ್ಳೇದಕ್ಕೆ ಆಗಿರುತ್ತೆ.. ಅವಾಗ್ಲೇ ಅಪ್ಪಾ ಆ ಅಂಕಲ್ ಗೇ ಮಾತ್ ಬೇರೆ ಕೊಟ್ಟು ಬಂದಿದಾರೆ ಈಗ ನಿನ್ನಾ ಪ್ರೀತಿ ವಿಷಯ ಗೊತ್ತಾದ್ರೆ ಏನ್ ಆಗುತ್ತೆ ಅನ್ನೋದನ್ನ ಊಹಿಸಿಕೊಳ್ಳೋಕು ಕಷ್ಟ ಆಗ್ತಿದೆ ಅಂತಾನೇ ಆತಂಕದಿಂದಾನೆ.. ಪ್ರೀತಿ ಎಲ್ಲಾರು ಮಾಡ್ತಾರೆ ಆಗಂತ ಪ್ರೀತಿಸಿದೊರೆ ಎಲ್ಲಾರಿಗೂ ಸಿಗ್ತಾರಾ ಇಲ್ವಲ್ಲಾ ಆದ್ರೂ ಸಿಕ್ಕಿರೋ ಪ್ರೀತಿ ಲೇ ಎಲ್ಲಾರು ಖುಷಿಯಾಗಿ ಇದಾರೆ ಅಲ್ವಾ.. ಅಪ್ಪಾ ಜೀವ ಕೊಟ್ರು ನಮಗೆ., ನಮಗಾಗಿ ಜೀವನಾ ನೇ ಮುಡಿಪಾಗಿ ಇಟ್ರು ಅವರಿಗಾಗಿ ಅವರ ಮೇಲಿನ ಪ್ರೀತಿಗಾಗಿ ನಿನ್ನಾ ಪ್ರೀತಿನ ತ್ಯಾಗ ಮಾಡೋಕೆ ಆಗಲ್ವಾ ಅಂತಾ ಕೇಳ್ತಾನೆ ಅರುಣ್ ಭಾರವಾದ ಮನಸ್ಸಿಂದ..


ಅತ್ತು ಅತ್ತು ಕಣ್ಣಲ್ಲಿ ಕಣ್ಣೀರು ಸಹ ಬತ್ತಿ ಹೋಗಿರತ್ತೆ.. ತ್ಯಾಗ..!! ಅಂತಾ ವ್ಯಂಗ್ಯವಾಗಿ ನಕ್ಕು ನನ್ನಾ ಸ್ವಲ್ಪ ಒಂಟಿಯಾಗಿ ಇರೋಕೆ ಬಿಡು ಅಣ್ಣಾ ಅಂತೇಳಿ ಕಿಡಕಿ ಲಿ ಹೋಗಿ ಕುತ್ಗೊಂತಾಳೆ..


ಅರುಣ್ ಸಹ ಎದ್ದು ಹೊರಗೆ ಹೋಗ್ತಾನೆ.. ಗೋಡೆಗೆ ಕಿವಿ ಆಗಿದ್ದ ಅವರ ಅಮ್ಮಾ ಸಹ ಮಗಳ ದುಃಖ ನಾ ನೆನೆದು ಅಸಾಯಕತೆ ಅಲ್ಲಿ ಸುಮ್ನೇ ಆಗಿ ಬಿಡ್ತಾರೆ......


ಅಳ್ತಾ ಇದ್ದಾ ಹರ್ಷಿತಾ ಗೇ ಯಾವಾಗ ನಿದ್ದೆ ಆವರಿಸುತ್ತೋ ಗೊತ್ತಾಗಲ್ಲ.. ಸರಿತಾ ಅವರು ಊಟ ಮಾಡು ಬಾ ಅಂತಾ ಕರೆದಾಗ ಶಾಸ್ತ್ರ ಕ್ಕೇ ಅನ್ನೊಂಗೆ ಎರಡು ತುತ್ತು ತಿಂದು ರೂಮ್ ಗೇ ಬಂದು ಹರ್ಷ ಗೇ ಪ್ರೀತಿ ವಿಷಯ ಹೇಳಿ ಬಿಡೋಣ ಅಂತಾ ಕಾಲ್ ಮಾಡ್ತಾಳೆ ಆದ್ರೆ ಹರ್ಷ ರಿಸೀವ್ ಮಾಡದೇ ಇದ್ದಿದ್ದಕ್ಕೆ ಮತ್ತೇ ಮತ್ತೇ ಕಾಲ್ ಮಾಡ್ತಾಳೆ.. ಹರ್ಷ ಕಾಲ್ ಯು ಲೇಟರ್ ಅಂತಾ ಮೆಸೇಜ್ ಮಾಡ್ತಾನೆ. ಬ್ಯುಸಿ ಇದಾರೆ ಅಂತಾ ಗೊತ್ತಾಗಿ ಸುಮ್ನೇ ಮಲ್ಕೊಂತಾಳೆ.. ನಿದ್ದೆ ಬರದೇ ಒದ್ದಾಡ್ತಾ ಇದ್ದವಳಿಗೇ ಹರ್ಷ ನ ಕಾಲ್ ಖುಷಿ ಕೊಡುತ್ತೆ ರಿಸೀವ್ ಮಾಡಿ ಪ್ರೀತಿ ಹೇಳಿ ಬಿಡೋಣ ಅನ್ಕೊಂತಾಳೆ.. 


ಆದ್ರೆ ಅಷ್ಟು ಸುಲಭ ನಾ ಪ್ರೀತಿ ಹೇಳ್ಕೊಳೋದು..!!


ಹರ್ಷ ಸ್ವಲ್ಪ ಕುಶಲೋಪಚರಿಯನ್ನ ವಿಚಾರಿಸಿದಾಗ.. ಹರ್ಷಿತಾ ಎಲ್ಲಾ ಹೇಳಿ ಕೊನೆಗೆ ಧೈರ್ಯ ಮಾಡಿ " ಹರ್ಷ ನನ್ನಾ ಮದುವೆ ಆಗ್ತೀಯಾ?!" ಅಂತಾ ಕೇಳೇ ಬಿಡ್ತಾಳೆ..!!


ನಿರೀಕ್ಷಿಸದೇ ಬಂದ ಪ್ರಶ್ನೆಗೇ ಹರ್ಷ ಹೌಹಾರಿ ಬಿಡ್ತಾನೆ ! ಏನ್ ಹೇಳ್ತಿದೀಯಾ ಹರ್ಷಿತಾ?? ಅಂತಾ ಮತ್ತೊಮ್ಮೆ ಕೇಳ್ತಾನೆ ತಾನು ಕೇಳಿಸಿಕೊಂಡಿದ್ದು ನಿಜಾನಾ ಅಂತಾ.!


ನೀನ್ ಏನ್ ಕೇಳ್ಸ್ಕೊಂಡೊ ಅದೇ ನಿಜಾ ಹೇಳು " ಹರ್ಷ ನನ್ನಾ ಮದುವೆ ಆಗ್ತೀಯಾ? ಅಂತಾಳೆ ಮತ್ತೊಮ್ಮೆ..


ಹರ್ಷ ಗೇ ಖುಷಿ ಆದ್ರೂ ಮನೇಲಿ ಅಪ್ಪಗೆ ಮಾತ್ರ ಗೊತ್ತಿರೋದು ಅಮ್ಮಾ ಅಣ್ಣಾನೆಲ್ಲಾ ಒಪ್ಪಿಸಿ ಆಮೇಲೆ ಹೇಳಿದ್ರೆ ಆಗುತ್ತೆ ಅನ್ಕೊಂಡು..

" ಹರ್ಷಿತಾ ಏನ್ ಹೇಳ್ತಿದೀಯಾ?, ನಿನ್ನಾ ಯಾವತ್ತೂ ನಾನು ಆ ದೃಷ್ಟಿಯಿಂದ ನೋಡಿದ್ದೇ ಇಲ್ಲಾ " ಅಂತಾನೇ ಅವಳನ್ನ ಸುಮ್ನೇ ಆಟ ಆಡಿಸೋಣ ಅಂತಾ..


ಹರ್ಷಿತಾ ಗೇ ತನ್ನ ಮೇಲೆ ತನಗೆ ಬೇಜಾರಾಗಿ " ಓಕೆ ಹರ್ಷ ಅಂತೇಳಿ ಸುಮ್ನೇ ಕೇಳಿದೆ ಅಂತಾ ಹೇಳ್ತಾ ಸರಿ ಬೆಳಗ್ಗೆ ಕಾಲ್ ಮಾಡ್ತೀನಿ ಅಂತೇಳಿ ಫೋನ್ ಕಟ್ ಮಾಡ್ತಾಳೆ..


ಮತ್ತೊಮ್ಮೆ ಅತ್ತು ಸುಮ್ನೇ ಯೋಚಿಸ್ತಾ ಕುತ್ಗೊಂತಾಳೆ.. ಮಧ್ಯರಾತ್ರಿ ಆದ್ರೂ ಮಗಳ ರೂಮ್ ಲೈಟ್ ಆನ್ ಇರೋದು ನೋಡಿ ಮನದಲ್ಲೇ ಯೋಚಿಸ್ತಾ ಗಣಪತಿ ಅವರು ನಿದ್ದೆಗೆ ಜಾರ್ತಾರೆ...


ಎಂದಿನಂತೆ ಎದ್ದ ಹರ್ಷಿತಾ ತಿಂಡಿನೆಲ್ಲಾ ತಿಂದು ಇನ್ನೇನು ಹೋಟೆಲ್ ಗೇ ಹೋಗ್ಬೇಕು ಆಗ ಗಣಪತಿ ಅವರು ಬಂದು " ಮಗಳೇ ಹೋಟೆಲ್ ಕೆಲಸನ್ನೆಲ್ಲಾ ಗ್ರೀಷ್ಮಾ ಗೇ ಒಪ್ಪಿಸು ಮತ್ತೇ ಸ್ವಲ್ಪ ಕೆಲಸದವರನ್ನೆಲ್ಲಾ ಜಾಸ್ತಿನೇ ಸೇರಿಸಿಕೊ ಇದೇ ತಿಂಗಳ ಕೊನೆಗೆ ನಿನ್ನಾ ಮದುವೆ " ಅಂತಾರೆ..


ಯಾವುದೇ ಭಾವನೆಗಳಿಲ್ಲದೆ ನಿರ್ಲಿಪ್ತ ವಾಗಿ " ಸರಿ ಅಪ್ಪಾ " ಅಂತೇಳಿ .. ಹೋಟೆಲ್ ಗೇ ಹೋಗ್ತಾಳೆ.. ಅವಾಗ್ಲೇ ಗ್ರೀಷ್ಮಾ ಅವತ್ತಿನ ಮೆನು ಪ್ರಕಾರ ತಿಂಡಿಗಳನ್ನೇಲ್ಲಾ ಮಾಡ್ಸಿರ್ತಾಳೆ..

ಹರ್ಷಿತಾ ಹೋಗಿ ಕಂಪ್ಯೂಟರ್ ಆನ್ ಮಾಡಿದಾಗ


ಹರ್ಷಿತಾಳ ಕಣ್ಣು ಊದಿಕೊಂಡಿರೋದು ನೋಡಿ ಮೇಡಂ ಏನಾಯ್ತು? ಅಂತಾ ಕೇಳ್ತಾಳೆ..


ನಥಿಂಗ್ ಆಮ್ ಫೈನ್ ಅಂತೇಳಿ " ಗ್ರೀಷ್ಮಾ ಒಂದು ಹದಿನೈದು ದಿನಕ್ಕೆ ಆಗೋವಷ್ಟು ತರಕಾರಿ ಮತ್ತೇ ಬೇರೆ ಎಲ್ಲಾ ವಸ್ತುಗಳಿಗೂ ಎಷ್ಟು ಹಣ ಬೇಕಾಗತ್ತೆ ಅನ್ನೋದು ಲೀಸ್ಟ್ ಮಾಡು., ಮತ್ತೇ ಅದ್ಯಾರೋ ಕೆಲಸದವರು ಇದಾರೆ ಅಂದಿದ್ದೆ ಅಲಾ ಅವರನ್ನು ಸಾಧ್ಯ ಆದ್ರೆ ಇವತ್ತೇ ಬರೋಕೆ ಹೇಳು ಇಂಟರ್ವೀವ್ ಮಾಡಿ ಜಾಯಿನ್ ಮಾಡ್ಕೊಳೋಣ., ಅಂತಾಳೆ.


ಗ್ರೀಷ್ಮಾ ಗು ಏನ್ ಕೇಳ್ಬೇಕು ಗೊತ್ತಾಗದೆ " ಸರಿ ಮೇಡಂ ನಾನು ಎಲ್ಲಾದನ್ನು ಲೀಸ್ಟ್ ಮಾಡಿ ನಿಮಗೆ ಹೇಳ್ತೀನಿ ಹಾಗೇ ಕೆಲಸದವರಿಗೂ ಇವತ್ತೇ ಬರೋಕೆ ಹೇಳ್ತೀನಿ " ಅಂತೇಳಿ ಲೀಸ್ಟ್ ಮಾಡೋಕೆ ಶುರು ಮಾಡ್ತಾಳೆ..


ಹರ್ಷಿತಾ ಎಲ್ಲಾ ಕೆಲಸ ಮುಗಿಸಿ ರೂಮ್ ಸೇರ್ಕೊಂಡು ಎಚ್ ಲವ್ಸ್ ಎಚ್ ಅನ್ನೋ ಸಿಂಬಲ್ ಹತ್ರಾ ಹೋಗಿ ಹರ್ಷಿತಾ ಲವ್ಸ್ ಹರ್ಷಿತಾ ಇದು ಅಂತಾ ತನಗೆ ತಾನೇ ಹೇಳ್ತಿರುವಾಗ.. ಗ್ರೀಷ್ಮಾ ಬಂದು ಇಂಟರ್ವೀವ್ ಗೇ ಹುಡುಗರು ಬಂದಿದಾರೆ ಅಂತಾಳೆ ಹಾಗೇ ಹೋಗಿ ಹರ್ಷಿತಾ ಆ ಹುಡುಗರನ್ನೆಲ್ಲಾ ಇಂಟರ್ವೀವ್ ಮಾಡಿ ನಾಳೆಯಿಂದಾನೇ ಜಾಯಿನ್ ಆಗಿ ಅಂತಾಳೆ..


ಗ್ರೀಷ್ಮಾ ಕೊಟ್ಟ ಲೀಸ್ಟ್ ನೆಲ್ಲಾ ಒಮ್ಮೆ ನೋಡಿ ಅಮೌಂಟ್ ನೆಲ್ಲಾ ಹೋಟೆಲ್ ಅಕೌಂಟ್ ಗೇ ಟ್ರಾನ್ಸ್ಫರ್ ಮಾಡ್ತಾಳೆ..


ಸ್ವಲ್ಪ ತಲೆನೋವು ಬಂದಂಗೆ ಆಗಿ ಹರ್ಷಿತಾ ಸೀದಾ ಟಾಪ್ ಫ್ಲೋರ್ ಗೇ ಹೋಗಿ ಬಿಸಿಲಲ್ಲಿ ನಿಂತು ನೋಡ್ತಾಳೆ ಆಕಾಶನಾ.. ಸೂರ್ಯ ಕಣ್ಣಿಗೇ ಕುಕ್ತಾ ಇದ್ರೇ ಮನಸ್ಸಿಗೆ ಮನಸ್ಸೇ ನೋವು ಅನುಭವಿಸುತ್ತ ಇರುತ್ತೆ...


ಮನೆಗೆ ಬಂದು ಸುಮ್ನೇ ಮೊಬೈಲ್ ನೋಡ್ತಾ ಇರ್ತಾಳೆ.. ಗಣಪತಿ ಅವರು ಬಂದು " ಹೋಟೆಲ್ ಕೆಲಸ ಎಲ್ಲಾ ಗ್ರೀಷ್ಮಾ ಗೇ ಜವಾಬ್ದಾರಿ ಕೊಟ್ಯ " ಅಂತಾ ಕೇಳ್ತಾರೆ...


ಹು ಅಪ್ಪಾ ಅಂತೇಳಿ ಎದ್ದು ರೂಮ್ ಗೇ ಹೋಗ್ತಾಳೆ ಹರ್ಷಿತಾ...


ಇತ್ತಾ ದಿನದಿಂದ ದಿನಕ್ಕೆ ಹರ್ಷಿತಾಳ ಮನಸ್ಸು ಕಲ್ಲಾಗಿ ಹೋಗ್ತಾ ಇರುತ್ತೆ ಪ್ರೀತಿಗಾಗಿ ಏನೆಲ್ಲ ಮಾಡಿದೆ..??  ಆದ್ರೆ ಹರ್ಷ ಕೇವಲ ಸ್ನೇಹಕ್ಕಾಗಿ ಇಷ್ಟೆಲ್ಲಾ ಮಾಡಿದ್ನ ! ಅಂತಾ ಯೋಚಿಸಿ ಯೋಚಿಸಿ ಮೌನಿ ಆಗಿ ಬಿಡ್ತಾಳೆ...


ಮನೇಲಿ ಸಡಗರ ಸಂಭ್ರಮ!..


ಎಲ್ಲಾರು ವಿಜೃಂಭಣೆಯಿಂದ ಮದುವೆ ತಯಾರಿ ಮಾಡ್ತಾ ಇರ್ತಾರೆ... ಹರ್ಷಿತಾ ಮಾತ್ರ ನಿರ್ಜಿವ ಗೊಂಬೆ ತಾರಾ ಇರ್ತಾಳೆ... ಅರುಣ್ ಬಂದು " ಆಗೋದೆಲ್ಲಾ ಒಳ್ಳೇದಕ್ಕೆ ಚಿಂತೆ ಮಾಡ್ಬೇಡ.. ಮದುವೆ ಅನ್ನೋದು ಜೀವನದಲ್ಲಿ ಒಂದೇ ಬಾರಿ ಆಗೋದು. ಎಂಜಾಯ್ ಮಾಡು " ಅಂತಾನೇ...


ಹು ಅಣ್ಣಾ ಇನ್ನೇನಿದೆ ಜೀವನದಲ್ಲಿ ಎಂಜಾಯ್ ಮಾಡೋದೇ ಅಂತಾಳೆ ವ್ಯಂಗ್ಯವಾಗಿ ನಕ್ಕು...


ಮದುವೆಯ ಹಿಂದಿನ ದಿನಾ..!!


ಮೆಹಂದಿ ಶಾಸ್ತ್ರ.!!


ಚಪ್ಪರದ ಕೆಳಗೆ ಎಲ್ಲಾ ಹುಡುಗಿಯರು ಕುಳಿತು ಮೆಹಂದಿ ಹಾಕೋದು ಹಾಡೋದು ಕುಣಿಯೋದು ಮಾಡ್ತಾ ಇರ್ತಾರೆ..


ಯಾವುದರಲ್ಲು ಆಸಕ್ತಿನೇ ಇಲ್ಲದೇ ಸುಮ್ಮನೆ ಮೆಹಂದಿ ಹಾಕೋರಿಗೆ ಕೈ ಕೊಟ್ಟು ಕೂತಿರ್ತಾಳೆ ಹರ್ಷಿತಾ...


ಗೌರಿ ನೂ ಬರ್ತಾಳೆ " ಹೇಳಿದಂಗೆ ಮೊದಲೇ ಮದುವೆ ಊಟ ಹಾಕ್ಸ್ತೀದಿಯಾ " ಅಂತಾ ತಮಾಷೆ ಮಾಡ್ತಾಳೆ.. ಅದರ ಯಾವುದೇ ಪರಿವೇ ಇಲ್ಲದೇ ಸುಮ್ಮನೆ ಇರ್ತಾಳೆ ಹರ್ಷಿತಾ ಒಂದು ಕಿರುನಗೆ ಅಲ್ಲಿ...


ಮದುವೆಯಾ ದಿನಾ..!!


ತಿಳಿನೀಲಿ ರೇಷ್ಮೆ ಸೀರೆ ಗೇ ಮ್ಯಾಚಿಂಗ್ ಬ್ಲೌಸ್ ಹಾಕೊಂಡು, ಮೊಗ್ಗಿನ ಜಡೆಗೇ ಮಾರುದ್ದ ಮಲ್ಲಿಗೆ ಮುಡ್ಕೊಂಡು,

ಚೆಂದದ ಮುಖಕ್ಕೇ ಅಂದವಾಗಿ ಅಲಂಕಾರ ಮಾಡಿರ್ತಾರೆ ಬ್ಯೂಟಿ ಪಾರ್ಲರ್ ಅಕ್ಕಾ...


ನಗು ಒಂದೇ ಕಡಿಮೆ ಅನ್ನೋದು ಬಿಟ್ರೆ.., ಮುದ್ದಾದ ಗೊಂಬೆ ಆಗಿರ್ತಾಳೆ ಹರ್ಷಿತಾ...


ಅಚ್ಚ ಬಿಳುಪಿನಲ್ಲಿ ಸ್ವಚ್ಛವಾಗಿ ತಯಾರಾಗಿರುತ್ತೆ ಮಂಟಪ..!!


ಅಂತರ್ ಪಟದ ಹಿಂದೆ ವಧು ವರರು ನಿಂತಿರ್ತಾರೆ...


ಜೀರಿಗೆ ಬೆಲ್ಲ ಒಬ್ಬರ ತಲೆ ಮೇಲೆ ಒಬ್ಬರಿಟ್ಟು


ಅಂತರ್ ಪಟ ಸರಿದಾಗ ಮಾಲೆಗಳ ವಿನಿಮಯ ಆದ್ರು ಒಂದು ಸಣ್ಣ ದೃಷ್ಟಿ ನೂ ಬೀರಲ್ಲಾ ಹರ್ಷಿತಾ ವರನ ಮೇಲೆ..!


ಪುರೋಹಿತರು ಮಂತ್ರ ಘೋಷಣೆ ಮಾಡ್ತಾ ಹೋಮ ಮಾಡ್ಸಿದ್ರು, ಅರಿವೇ ಇಲ್ಲದೇ ಒಂದೊಂದೇ ಶಾಸ್ತ್ರ ಮುಗಿತೀರೋ ದುಃಖ ಹರ್ಷಿತಾ ಗೇ...


ವರನಿಗೆ ಖುಷಿ., ವಧುವಿಗೇ ದುಃಖ.


" ಗಟ್ಟಿಮೇಳ ಗಟ್ಟಿಮೇಳ "... ಅಂತಾ ಪುರೋಹಿತರು ಹೇಳ್ತಿದ್ರೆ...


ಹರ್ಷಿತಾಳ ಮನಸ್ಸಲ್ಲಿ ಈಗಲೂ ಮದುವೆ ನಿಲ್ಲಿಸಿ ಬಿಡ್ಲಾ ಅಂತಾ ಯೋಚಿಸುವಾಗ್ಲೆ ಮಾಂಗಲ್ಯಾ ಅವಳ ಕೊರಳ ಹತ್ತಿರ ಕುಣಿಕೆ ಆಗಿ ಅವಳಿಗೆ ಕಾಣ್ತಾ ಇರುತ್ತೆ... ಕಣ್ಣಲ್ಲಿ ಕಣ್ಣೀರು ಯಾರ ಅಪ್ಪಣೆ ನೂ ಇಲ್ಲದೇ ಹೊರಗೆ ಬರೋಕೆ ತಯಾರಾಗಿ ಇರುತ್ತೆ ಅವಾಗ ವರನೇ ಹರ್ಷಿತಾಳ ಕಿವಿ ಹತ್ತಾ ಬಾಗಿ "ನಿನ್ನಾ ಯಾವಾಗ್ಲೋ ಮದುವೆ ಆಗಿ ಬಿಟ್ಟೀನಿ., ಇದು ಸುಮ್ನೇ ಎಲ್ಲರ ಸಮಾಧಾನಕ್ಕಾಗಿ " ಅಂತಾನೇ...


ಆ ಧ್ವನಿ!!


ಕೇಳಿದ್ದೆ ಹರ್ಷಿತಾ ಆ ವರನತ್ತಾ ನೋಡ್ತಾಳೆ... ಎಲ್ಲಿಲ್ಲದ ಆನಂದ ಸಂತೋಷ ಜೊತೆಗೆ ಆನಂದಭಾಷ್ಪ...


ವರನಾಗಿ ಕೂತಿರೋದು ಹರ್ಷಿತಾ ಪ್ರೀತಿಸಿದ್ದಾ ಅದೇ


ಶ್ರೀಹರ್ಷ...!!!


ಮೂರು ಗಂಟು ಹಾಕಪ್ಪ ಮುಹೂರ್ತ ಮೀರಿ ಹೋಗುತ್ತೆ ಅಂತಾ ಪುರೋಹಿತರು ಹೇಳಿದಾಗಲೇ ಎಚ್ಚೆತ್ತಾ ಹರ್ಷ ಮೂರು ಗಂಟು ಹಾಕ್ತಾನೆ... ಎಲ್ಲರ ಸಮೂಹದಲ್ಲೇ ಅವಳ ಹಣೆಗೆ ಚುಂಬಿಸಿ ನನ್ನಾ ಪ್ರೀತಿಗಾಗಿ ಅಂತಾನೇ... ತಕ್ಷಣಕ್ಕೇ ಸಿಕ್ಕ ಮುತ್ತು ಅದು ಎಲ್ಲರ ಎದುರಲ್ಲಿ ಹರ್ಷಿತಾ ಗೇ ಮುಜುಗರ ಆದ್ರೂ ನನ್ನಾ ಪ್ರೀತಿ ಅಂತಾ ಖುಷಿ ಪಡ್ತಾ ಒಮ್ಮೆ ಅಪ್ಪಾ ನಾ ಕಡೆ ನೋಡ್ತಾಳೆ...


ಗಣಪತಿ ಅವರು, ಸರಿತಾ ಅವರು, ಅರುಣ್ ಎಲ್ಲಾರು ನಗ್ತಾ ಕಿವಿ ಇಡಿದು ಸತಾಹಿಸಿದ್ದಕ್ಕೇ ಕ್ಷಮಿಸು ಅಂತಾರೆ...


ಕೂತಲ್ಲೇ ಹರ್ಷಿತಾ ಅವರಿಗೆಲ್ಲ ಅಲ್ಲೇ ಕೈ ಮುಗಿದು ಧನ್ಯವಾದಗಳನ್ನಾ ಹೇಳ್ತಾಳೆ...


ನಮ್ಮನ್ನು ಕ್ಷಮಿಸಿ ಬಿಡಮ್ಮ ಇದ್ರಲ್ಲಿ ನಮ್ಮದು ಪಾಲಿದೇ ಅಂತಾ ಹರ್ಷ ಅವರ ತಂದೆ ತಾಯಿ ನೂ ಕೇಳ್ತಾರೆ...


ಹರ್ಷ ನೂ ಸಾರೀ ಸಾರೀ ಎಲ್ಲಾ ನಿಮ್ ಅಪ್ಪಾಜಿ ಯಿಂದ ನೇ ಆಗಿದ್ದು ಅಂತಾ ಹೇಳ್ತಾನೆ...


ಹರ್ಷಿತಾ ಕಣ್ಣೀರನ್ನ ಒರೆಸಿಕೊಂಡು ಎದ್ದು ಹೋಗಿ ಅವರ ಅಪ್ಪಾಜಿ ನಾ ತಬ್ಬಿಕೊಂಡು ಅತ್ತು ಬಿಡ್ತಾಳೆ...


ಹೇ ಕೂಸೇ ಯಾಕೋ ಅಳು ಅಂತಾ ತಮ್ಮ ಕಣ್ಣೀರನ್ನ ಮುಚ್ಚಿಡೊ ಪ್ರಯತ್ನ ಮಾಡ್ತಾ ಕೇಳ್ತಾರೆ ಗಣಪತಿ ಅವರು...


ಅಪ್ಪಾ ಕ್ಷಮಿಸಿ ಬಿಡಿ ನಿಮ್ನ ಅರ್ಥ ನೇ ಮಾಡ್ಕೊಳ್ಲಿಲ್ಲಾ ನಾನು ಅಂತಾ ಮತ್ತೇ ಅಳ್ತಾಳೆ...


ಇಲ್ಲಾ ಮಗಳೇ ನೀನು ನನ್ನಾ ಚೆನ್ನಾಗಿ ಅರ್ಥ ಮಾಡ್ಕೊಂಡಿದೀಯ., ನಿನ್ನಾ ಪ್ರೀತಿ ನೇ ನಿಂಗೆ ಸರ್ಪ್ರೈಸ್ ಆಗಿ ಕೊಡೋಣ ಅಂತಾ ನಾವೆಲ್ಲರೂ ಈ ಐಡಿಯಾ ಮಾಡಿದ್ದೂ ಅಂತಾರೆ...


ಥಾಂಕ್ ಯು ಅಪ್ಪಾ ಅಂತಾಳೆ ಕಣ್ಣೀರನ್ನ ಒರೆಸಿ... ನಮ್ ಪ್ರೀತಿ ವಿಷಯ ನಿಮಗೆ ಯಾರಪ್ಪಾ ಹೇಳಿದ್ದು?? ಅಂತಾ ಆಶ್ಚರ್ಯದಿಂದಾ ಕೇಳ್ತಾಳೆ...


ಮಗಳೇ ಇಂಜಿನಿಯರ್ ಕುಟುಂಬ ದ ಕೂಸು ಹೋಟೆಲ್ ಕಟ್ಟೋ ಕನಸಿನ ಬಗ್ಗೆ ಹೇಳಿದಾಗಲೇ ಸಣ್ಣ ಅನುಮಾನ ದ ಅಲೆ ತಲೇಲಿ ಹೊಕ್ಕಿತ್ತು.. ಅದ್ಕೆ ಅಡಿಪಾಯ ಅನ್ನೊಂಗೆ ನಿಂದು ವಿದ್ಯಾಭ್ಯಾಸ ಮುಗಿದ ತಕ್ಷಣ ನೀನು ಹೋಟೆಲ್ ಕಟ್ಟೋಕೆ ಅಂತಾ ನೋಡಿದ್ದ ಆ ಸೈಟ್., ಆವತ್ತು ರಿಜಿಸ್ಟ್ರೇಷನ್ ಆಗೋ ಮುಂಚೆ ಇಷ್ಟು ಕಡಿಮೆ ಬೆಲೆ ಗೇ ಕೊಡ್ತಿರೋದಕ್ಕೆ ಅನುಮಾನ ಬಂದು ಗುರೂಜಿ ಹತ್ರಾ ಕೇಳ್ಸಿದೇ ಎಲ್ಲಾ ಸರಿ ಇದೇ ಅಂದ್ರು... ಮತ್ಯಾಕೆ ಇವರು ಕಡಿಮೆ ಬೆಲೆ ಗೇ ಕೊಡ್ತೀರೋದು ಅಂತಾ ಅವರನ್ನೇ ಕೇಳಿದೆ. ಆಗ ಅವರು ಹೇಳಿದ್ದ ಮಾತು ನಿಜಕ್ಕೂ ಮಕ್ಕಳ ಮೇಲಿನ ಅವರ ಕಾಳಜಿ, ಗೌರವ ಗೊತ್ತಾಯ್ತು... ಅವರು ಹೇಳಿದ್ದು ಇಷ್ಟೇ..,

" ನೋಡಿ ಸರ್ ಈ ಸೈಟ್ ಮಾರೋ ಯೋಚನೆ ನೇ ನಂಗೆ ಇರ್ಲಿಲ್ಲಾ. ಇದು ನನ್ ಅಪ್ಪಾ ನಾ ಕನಸಿನ ಸೈಟ್. ನಾನು ನನ್ ಮಗನಿಗೆ ಅಂತಾ ಇಟ್ಟಿದ್ದೆ., ಅವತ್ತು ಒಂದಿನಾ ನನ್ ಮಗ ಬಂದು " ಅಪ್ಪಾ., ಬೆಂಗಳೂರಲ್ಲಿ ಇರುವಾಗ ಹೈಸ್ಕೂಲ್ ಲಿ ಒಬ್ಬಳು ಹರ್ಷಿತಾ ಅಂತಾ ಇದ್ಲು. ಒಳ್ಳೆ ಹುಡುಗಿ.. ಓದೋದ್ರಲ್ಲು ಜಾಣೆ, ಗುಣದಲ್ಲಿ ನೂ ಅಪರಂಜಿ.. ಆ ವಯಸ್ಸಲ್ಲಿ ಅದೇನೋ ಅವಳ ಜೊತೆಗೆ ಇರೋ ಕ್ಷಣ ಎಲ್ಲಾ ಒಂತರಾ ಖುಷಿ ಕೊಡ್ತಿತ್ತು... ಅದನ್ನೆಲ್ಲ ಆ ವಯಸ್ಸಲ್ಲಿ ನೂ ಪ್ರೀತಿ ಅನ್ನೋದಾದ್ರೆ, ನಿಜಾ ನಾನು ಆ ವಯಸ್ಸಿಂದನೂ ಹರ್ಷಿತಾ ನಾ ಪ್ರೀತಿಸ್ತಾ ಇದೀನಿ... ಇದೇ ಹೈದರಾಬಾದ್ ಲಿ ಎಂತೆಂತ ಹುಡುಗಿಯರನ್ನೇಲ್ಲಾ ನೋಡಿದೆ ಆದ್ರೆ ಯಾವತ್ತೂ ಸಹ ಹರ್ಷಿತಾ ಜೊತೆಗೆ ಇದ್ದಂತಾ ಆ ಖುಷಿ ನೆಮ್ಮದಿ ಸಂತಸ ಯಾವ್ ಹುಡುಗಿಯರಲ್ಲು ನಂಗೆ ಕಾಣ್ಲಿಲ್ಲ... ನನ್ನಾ ಹೋಟೆಲ್ ರೆಸ್ಟೋರೆಂಟ್ ಇಡೋ ಎಲ್ಲಾ ಕನಸ್ಸನ್ನೂ ಬಿಟ್ಟು., ನೀವ್ ಹೇಳಿದಂಗೆ ಇಂಜಿನಿಯರಿಂಗ್ ಎಲ್ಲಾ ಮಾಡಿದೆ. ನಿಮ್ ಆಸೆ ಅಂತೆ ಕಂಪನಿ ಸಹ ಶುರು ಮಾಡಿದೆ... ಈಗ ನಾನು ಒಂದೇ ಒಂದು ಕೇಳ್ತಿದಿನಿ ಅದ್ನಾ ನೀವು ಮಾಡ್ತೀರಾ " ಅಂತಾ... ಏನ್ ಹೇಳು ಅಂದಾಗ "ಹರ್ಷಿತಾ ಬಗ್ಗೆ ನಂಗೆ ಗೊತ್ತಿಲ್ಲಾ, ಪ್ರೀತಿ ಇದೇನೋ, ಇಲ್ವೋ?? !ಏನು ಗೊತ್ತಿಲ್ಲಾ ಆದ್ರೆ ನನ್ನಾ ಪ್ರೀತಿಗಾಗಿ ದಯಮಾಡಿ ಬೆಂಗಳೂರಲ್ಲಿ ಇರೋ ನಿಮ್ ಸೈಟ್ ನಾ ಹರ್ಷಿತಾ ಗೇ ಕೊಟ್ಟು ಬಿಡಿ.. ಹಣೆಬರಹ ದಲ್ಲಿ ಅವಳೇ ನನ್ನಾ ಸಂಗಾತಿ ಆದ್ರೆ ಆ ಸೈಟ್ ನಿಮ್ ಮಗನಿಗೆ ಸೇರುತ್ತೆ.!.. ಇಲ್ಲಾ ಅಂದ್ರೆ ನಿಮ್ ಮಗನ ಪ್ರೀತಿಗೆ ಸೇರುತ್ತೆ " !ಅಂತಾ...

ನನ್ನಾ ಮಗನಿಗೆ ಪ್ರೀತಿ ಮೇಲಿರೋ ನಂಬಿಕೆ ನೇ ನನ್ನಾ ಇಲ್ಲಿವರೆಗೂ ಬರೋತರ ಮಾಡಿದೆ... ನಿಮ್ ಮಗಳ ಮನಸ್ಸಲ್ಲಿ ಏನಿದೆಯೋ ಯಾರಿದ್ದಾರೋ ಗೊತ್ತಿಲ್ಲಾ., ! ಅದು ನಂಗೆ ಗೊತ್ತಾಗೋದು ಬೇಡ... ನನ್ ಮಗ ಇಟ್ಟಿರೋ ನಂಬಿಕೆ ಸುಳ್ಳಾಗ್ಬಾರದು ಅನ್ನೋದು ನನ್ನಾ ಆಸೆ... ನಿಮ್ ಮಗಳಿಗೂ ನನ್ ಮಗ ಇಷ್ಟಾ ಇದ್ರೇ ನಮ್ ಕಡೆಯಿಂದ ಆಲ್ವೇಸ್ ವೆಲ್ಕಮ್ ನಮ್ ಮನೆಯ ಮುದ್ದಿನ ಸೊಸೆಯನ್ನಾಗಿ ಮಾಡ್ಕೊಂತೀವಿ... ಇದ್ರಲ್ಲಿ ನಿಮ್ ಅಭಿಪ್ರಾಯ ಕ್ಕೇ ತುಂಬಾ ಬೆಲೆ ಇದೇ... ಒಂದು ಮಗಳಿಗೆ ತಂದೆ ಮೇಲೆ ಎಷ್ಟು ಪ್ರೀತಿ.,ನಂಬಿಕೆ ಇರುತ್ತೋ ಗೊತ್ತಿಲ್ಲಾ... ಆದ್ರೆ ಒಬ್ಬ ತಂದೆಯಾಗಿ ಅದ್ರಲ್ಲೂ ಒಂದು ಹೆಣ್ಣುಮಗಳ ಮುದ್ದಿನ ತಂದೆಯಾಗಿ ನಾನ್ ಅರ್ಥೈಸಿಕೊಳ್ಳಬಲ್ಲೆ ನಿಮ್ಮ ಈಗಿನ ಮತ್ತೇ ಮುಂದಿನ ಮನಸ್ಥಿತಿ ನಾ!... ನೋಡಿ ಯೋಚ್ನೆ ಮಾಡಿ., ನಿಮ್ ಮಗಳಿಗೆ ನನ್ ಮಗ ಎಲ್ಲಾದ್ರಲ್ಲೂ ಸೂಕ್ತ ಅನಿಸಿದ್ರೆ ಮಾತ್ರ ನನ್ ಮಗನಿಗೆ ನಿಮ್ ಮಗಳನ್ನ ಕೊಟ್ಟು ಮದುವೆ ಮಾಡಿ... ನಿಮ್ ಅಭಿಪ್ರಾಯ ನಾ ಈಗ್ಲೇ ಹೇಳ್ಬೇಕು ಅಂತೇನಿಲ್ಲ... ಈಗ ತಾನೇ ಮಗಳು ಒಂದೊಳ್ಳೆ ಹೋಟೆಲ್ ಕಟ್ತಾ ಇದಾಳೆ., ಕಟ್ಲಿ. ಜೀವನ ನಾ ತಾನೇ ಅನುಭವಿಸ್ಲೀ... ಮುಂದೊಂದು ದಿನಾ ಅವಳಿಗೆ ಮದುವೆ ಮಾಡ್ಬೇಕು ಅಂತಾ ಮನಸ್ಸು ಮಾಡ್ತಿರಲ್ಲ ಆವತ್ತು ಈ ನನ್ನಾ ಮಗನ್ನ ನೆನೆಪು ಮಾಡ್ಕೊಳ್ಳಿ... ನಿಮಗೆ ಸರಿ ಅನಿಸಿದ್ರೆ ನಿಮ್ ಅಭಿಪ್ರಾಯ ತಿಳಿಸಿ... ಅದು ಎಷ್ಟು ವರ್ಷ ಆದ್ರೂ ಪರವಾಗಿಲ್ಲ... ನನ್ ಮಗ ಕಾಯ್ತಾನೆ ಹತ್ತು ವರ್ಷ ಕಾದಿರೋನಿಗೆ ಇನ್ನು ಸ್ವಲ್ಪ ವರ್ಷದ ಕಾಯೋದು ಏನು ಕಷ್ಟ ಅನ್ನಿಸೊಲ್ಲ.!! ಅಂತಾ ಹೇಳಿ... ಇನ್ನೊಂದು ವಿಷಯ ಇದು ನಿಮಗೆ ಒಬ್ಬ ಒಳ್ಳೆ ಸ್ನೇಹಿತ ಆಗಿ ಹೇಳ್ತಿದೀನಿ " ನಿಮ್ ಸ್ಥಾನ ದಲ್ಲಿ ಯಾವುದೇ ತಂದೆ ಇದ್ದಿದ್ರು ಖಂಡಿತಾ ಪ್ರೀತಿ, ಪ್ರೇಮಾ ಅಂದ್ರೆ ಒಂದು ಕ್ಷಣ ಭಯ ಪಡೋದು ಸಹಜ ನೇ... ತಾಯಿ ಗೇ ಅಷ್ಟೊಂದೇನೂ ಅನ್ಸಲ್ಲಾ ಅಂದ್ರೆ ಅವರಿಗೂ ಭಯ ಆದ್ರೂ ನನ್ ಗಂಡ ಇದಾರೆ ಅವರು ನೋಡ್ಕೊಂತಾರೆ ಅನ್ನೋ ನೆಮ್ಮದಿ ಇರುತ್ತೆ... ಆದ್ರೆ ನಮಗೆ ಆತರ ಯಾರು ಇರಲ್ಲಾ ನೋಡಿ.. ಪ್ರೀತಿ ಅಂದಾಕ್ಷಣ ಎಲ್ಲಿ ಮಗಳು / ಮಗ ದಾರಿ ತಪ್ಪಿ ಬಿಟ್ರೋ., ನಾವು ಒಳ್ಳೆ ಸಂಸ್ಕಾರ ಕಲಿಸ್ಲಿಲ್ವಾ.,ಅಂತಾ ನಮ್ ಮೇಲೆ ನಮಿಗೆ ಅನುಮಾನ ಶುರು ಆಗಿ ಬಿಡುತ್ತೆ... ಅದು ನಮ್ ತಪ್ಪಲ್ಲಾ ಬಿಡಿ... ಈ ಟಿವಿ ಲಿ ಎಲ್ಲಾ ತೋರಿಸ್ತಾರೇ ಅಲ್ವಾ., ಸಕ್ಸಸ್ ಆಗಿರೋ ಪ್ರೀತಿ ಪ್ರೇಮಕ್ಕಿಂತ... ಪ್ರೇಮಿ ಸಿಗದೇ ಬೆಟ್ಟದಿಂದಾ ಹಾರಿದ ಪ್ರೇಯಸಿ..!., ಪ್ರೇಯಸಿ ಯಾ ಮನೆ ಅಲ್ಲಿ ಪ್ರೇಮಿಗಳಿಗೆ ವಿರೋಧ., ಮನನೊಂದ ಯುವಕ ಆತ್ಮಹತ್ಯೆ...! ಇತರದಾವೆ ಅಲ್ವಾ ಪದೇ ಪದೇ ಟಿವಿ ಲಿ ಹಾಕಿ ತೋರಿಸ್ತಾರೇ... ಅದ್ನೇ ನೋಡಿದ ನಮ್ ಜನಗಳು ಪ್ರೀತಿ ಅಂದ್ರೆ ತಪ್ಪು. ಅದೊಂತರ ಮಹಾ ಅಪರಾಧ ಅಂತಾ ನಂಬಿ ಬಿಡ್ತಾರೆ...!

ಪ್ರೀತಿ ತಪ್ಪಲ್ಲಾ ! ಸರ್., ಪ್ರೀತಿ ಮಾಡೋದ್ರು ತಪ್ಪಿಲ್ಲಾ.! ಎಲ್ಲಾ ತಪ್ಪು ಆ ಕಾಲಂದು.!! ಆ ಕಾಲ ಇದೆಯಲಾ ಎಂತೋರನ್ನು ಒಮ್ಮೆ ನಡುಗಿಸಿ ಬಿಡುತ್ತೆ..!!. ನಾವೆಲ್ಲ ಹೇಳ್ತಿವಿ ಇಪ್ಪತ್ತು., ಇಪ್ಪತ್ಐದು ವರ್ಷ ಸಾಕಿದ ತಂದೆ ತಾಯಿಗಿಂತಾ ಎರಡು ಮೂರು ವರ್ಷದ ಪ್ರೀತಿ ನೇ ದೊಡ್ಡದಾಗಿ ಬಿಡ್ತಾ ಇವರಿಗೆ ಅಂತಾ... ಆದ್ರೆ ಇಲ್ಲೇ ನಾವು ತಪ್ಪು ತಿಳ್ಕೊಳೋದು ವಿಷಯ ಎರಡು ಮೂರು ವರ್ಷದ ಪ್ರೀತಿ ಅಲ್ಲಾ ಇನ್ನು ಮೂವತ್ತು., ಅರವತ್ತು ವರ್ಷ ಜೊತೆಯಾಗಿ ಒಬ್ಬರ ಜೊತೆಗೆ ಇರ್ಬೇಕಲ್ಲಾ ಅದು ಅದನ್ನಾ ನೆನೆದು ಪ್ರೇಮಿಗಳು ಏನೇನೋ ಮಾಡ್ಕೊಂಡು ಬಿಡ್ತಾರೆ... ಇದೆಲ್ಲಾ ಪ್ರೀತಿ ನಾ ಪಡ್ಕೊಂಡೊರಿಗಿಂತಾ ಕಳ್ಕೊಂಡಿರ್ತಾರೆ ಅಲಾ ಅವರಿಗೆ ಚೆನ್ನಾಗಿ ಅರ್ಥ ಆಗುತ್ತೆ..!

ಇದ್ನೇಲ್ಲಾ ನಿಮಿಗೆ ಯಾಕೆ ಹೇಳಿದೆ ಅಂದ್ರೆ... ನನ್ ತಂದೆ ನನ್ ಪ್ರೀತಿ ನಾ ಅರ್ಥ ಮಾಡಿಕೊಳ್ಳದೆ ಅದನ್ನಾ ಶುರುವಲ್ಲೇ ಚೂಟಿ ಹಾಕಿ ಬಿಟ್ರು... ಅದೇ ತಪ್ಪನ್ನ ನಾನು ನನ್ ಮಗನ ವಿಷಯದಲ್ಲಿ ಮಾಡೋಕೆ ಇಷ್ಟಾ ಪಡಲ್ಲ ಹಾಗೇ ಬೇರೆಯವರ ಮಕ್ಕಳ ಜೀವನದಲ್ಲೂ ಆಗದೇ ಇರಲಿ ಅನ್ನೋದೇ ನನ್ನಾ ಒಂದು ಆಶಯ... ಹೆಣ್ಣು ಹೆತ್ತ ತಂದೆ ನೀವು ಒಮ್ಮೆ ಶಾಂತವಾಗಿ ಕುಳಿತು ಯೋಚ್ನೆ ಮಾಡಿ ಯಾರೊಬ್ಬರಿಗೂ ಕಷ್ಟ ಆಗದೇ ಎಲ್ಲರ ಸಮ್ಮುಖದಲ್ಲಿ ಪ್ರೀತಿ ತುಂಬಿದ ಮನಸ್ಸಿಂದಾನೇ ನನ್ನಾ ಮಗನ ಮತ್ತು ನಿಮ್ ಮಗಳ ಮದುವೆ ಆಗ್ಬೇಕು ಅನ್ನೋದು ನಮ್ ಆಸೆ "...! ಅಂತಾ


ನಿಜಕ್ಕೂ ಅವರ ಮಾತಿಗೆ ಏನೋ ಹೇಳೋಕೆ ಆಗದೇ ಸುಮ್ನಾದೇ. ನಿನ್ ಮನಸ್ಸಲ್ಲಿ ಏನಿದೆ ಅಂತಾ ತಿಳ್ಕೊ ಬೇಕಿತ್ತು... ಆದ್ರೆ ನೀನ್ ಯಾವತ್ತೂ ಹೇಳ್ಳೆ ಇಲ್ಲಾ... ಒಂದು ತಿಂಗಳ ಹಿಂದೆ ಹರ್ಷ ನ್ನಾ ನೀನೇ ಮನೆಗೆ ಕರ್ಕೊಂಡು ಬಂದೆ ಆಗ್ಲೂ ನೀನು ಒಬ್ಬ ಸ್ನೇಹಿತ ಅಂತಾನೇ ಹೇಳಿದೆ... ನಂಗು ಯಾವುದನ್ನೂ ನಂಬೋದು ಬಿಡೋದು ಅನ್ನೋದು ಗೊಂದಲದಲ್ಲಿ ಇದ್ದಾಗ... ಯಾವಾಗ ನೀನು ಗೆಸ್ಟ್ ರೂಮ್ ಬಿಟ್ಟು ನಿನ್ ಸ್ಟಡಿ ರೂಮ್ ಅಲ್ಲೇ ಉಳ್ಕೊ ಅಂತಾ ಅವನಿಗೆ ಹೇಳಿದೋ ಅವಾಗ್ಲೇ ನಂಗೆ ಕನ್ಫರ್ಮ್ ಆಯ್ತು... ಅವಾಗ್ಲೇ ಹರ್ಷ ಜೊತೆ ಮಾತಾಡೋಣ ಅಂತಾ ಹೋದೆ ಆದ್ರೆ ಅವನು ಅಲ್ಲಿ ಇರ್ಲಿಲ್ಲಾ ಟೆರೇಸ್ ಮೇಲೆ ಅರುಣ್ ಜೊತೆ ಇದ್ದ. ಈಗ ಮಾತಾಡೋದು ಬೇಡ ಬೆಳಗ್ಗೆ ಮಾತಾಡೋಣ ಅನ್ಕೊಂಡೆ ಆದ್ರೆ ಬೆಳಗ್ಗೆನೇ ಹರ್ಷ ಅವಾಗ್ಲೇ ಹೋಗಿ ಬಿಟ್ಟಿದ್ದಾ. ಯಾಕೆ ಅಂತಾ ನಾನು ಹರ್ಷ ಅವರ ಅಪ್ಪಾ ಗೇ ಕಾಲ್ ಮಾಡಿ ಕೇಳಿದೆ.. ಆಫೀಸ್ ಲಿ ಅರ್ಜೆಂಟ್ ಕೆಲಸ ಇತ್ತು ಅಂದ್ರು... ಅವಾಗ್ಲೇ ನಾನು ಒಂದು ಐಡಿಯಾ ಮಾಡಿದೆ. ಅದನ್ನಾ ಬೀಗರಿಗೂ ಹೇಳಿದೆ ಅವರು ಆಯ್ತು ಅಂತೇಳಿ ಒಪ್ಪಿದ್ರು... ನಿಂಗೆ ಸ್ವಲ್ಪ ಆಟ ಆಡಿಸೋಣ ಅಂತಾ ಸುಂದರ್ ರಾಜ್ ಅವರ ಮಗ ಅಂತಾ ಹೇಳಿದೆ... ಆತರ ಹೇಳಿಲ್ಲಾ ಅಂದಿದ್ರೆ ನಿನ್ ಪ್ರೀತಿ ಆಳ ನಮಗೆ ಹೇಗಮ್ಮಾ ಗೊತ್ತಾಗ್ತಿತ್ತು... ನಿಮ್ ಅಮ್ಮಾ ಅಷ್ಟು ದೈರ್ಯವಾಗಿ ಬಂದು " ಮಾತು ಕೊಡೋಕೆ ಮುಂಚೆ ಒಮ್ಮೆ ಮಗಳ ಅಭಿಪ್ರಾಯ ಕೇಳ್ಬೇಕು ಅಂತಾ ಅನ್ನಿಸ್ಲಿಲ್ವಾ " ಅಂತಾ ಕೇಳ್ತಿದ್ಲಾ...! ಅಂತಾ ಕಣ್ಣು ಹೊಡೆದು ಕೇಳ್ತಾರೆ...


ಹರ್ಷಿತಾ ನಿಜಕ್ಕೂ ತಾನೇ ಪುಣ್ಯವಂತೇ ಅನ್ಕೊಂತಾಳೆ...

ದೇವರಿಗೂ ಮಿಗಿಲಾದ ತಂದೆ ತಾಯಿ!...

ಪ್ರೀತಿಯೇ ಜೀವ ಆಗಿರೋ ಅತ್ತೆ ಮಾವ!...

ಪ್ರೀತಿಗಾಗಿ ಏನ್ ಬೇಕಾದ್ರು ಮಾಡೋ ಗಂಡ!...

ಇಷ್ಟು ಸಾಕಲ್ವ ಒಂದು ಹೆಣ್ಣಿಗೆ..!


ಪ್ರೀತಿ ಒಂದು ಇದ್ರೇ ಎಂತಾ ಜೀವಿ ಆದ್ರೂ ಸಂತೋಷವಾಗಿ ಇರಬಲ್ಲಾ... ಕಷ್ಟ ನೇ ಬಂದ್ರು ಸುಖಾನೇ ಹೊದ್ರು ಪ್ರೀತಿ ಮುಂದೆ ಎಲ್ಲಾ ಸಪ್ಪೆ..!


ಹರ್ಷ ಪ್ರೀತಿಯಿಂದ ತನ್ನ ಹೋಟೆಲ್ ಕನಸನ್ನ ಹರ್ಷಿತಾಳ ಮೂಲಕ ಈಡೇರಿಸಿಕೊಂಡ...

 ಹರ್ಷಿತಾ ಅವರ ಅಪ್ಪಾ ನಾ ಪ್ರೀತಿಯಿಂದ ತನ್ನ ಪ್ರೀತಿ ನಾ ಉಳಿಸಿಕೊಂಡ್ಲು... 

ಮಗನ ಮೇಲಿನ ಪ್ರೀತಿಯಿಂದ ಹೈದರಾಬಾದ್ ಬಿಟ್ಟು ಬೆಂಗಳೂರಲ್ಲೇ ನೆಲೆಸಿದ್ರು ಹರ್ಷ ನಾ ತಂದೆ ತಾಯಿ... 


ಎಲ್ಲಾ ಪ್ರೀತಿಗಾಗಿ


ವಯಸ್ಸಲ್ಲದ ವಯಸ್ಸಲ್ಲಿ ಮೂಡಿದ ಆ ಆಕರ್ಷಣೆ ನೋ., ಪ್ರೀತಿ ನೋ ಅರಿಯದ ವಯಸ್ಸಲ್ಲಿ... 

ಅದನ್ನೇ ನಂಬಿ ಬಂದ್ರು ಬದುಕಲ್ಲಿ... 

ಜಾತಿ ಅನ್ನೇ ಮರೆತರು ಮಗಳ ಪ್ರೀತಿಗಾಗಿ... 

ಊರನ್ನೇ ತೊರೆದರು ಮಗನ ಪ್ರೀತಿಗಾಗಿ... 

ತ್ಯಾಗ ಮಾಡಲು ತಯಾರಿದ್ಲು ಹರ್ಷಿತಾ 

ತನ್ನ ತಾಯಿ ತಂದೆ ಪ್ರೀತಿಗಾಗಿ... 

ಎಲ್ಲವನ್ನೂ ಎದುರಿಸಿ ನಿಲ್ಲಲು ತಯಾರಿದ್ದಾ ಹರ್ಷ 

ತನ್ನ ಮನದನ್ನೇ ಯಾ ಪ್ರೀತಿಗಾಗಿ... 


ಎಲ್ಲಾ ಪ್ರೀತಿಗಾಗಿ


ಪ್ರೀತಿಯಿಂದ ಪ್ರೀತಿಗಾಗಿ ಪ್ರೀತಿಗೋಸ್ಕರ ಎರಡು ಕುಟುಂಬ ಸಂತಸದಿ ಒಂದಾಗಿವೆ.




Rate this content
Log in

Similar kannada story from Romance