Daivika ದೈವಿಕಾ

Romance Inspirational Others

3.4  

Daivika ದೈವಿಕಾ

Romance Inspirational Others

ಪ್ರೀತಿಗೆ ಸಾವಿಲ್ಲ

ಪ್ರೀತಿಗೆ ಸಾವಿಲ್ಲ

28 mins
368


ಪ್ರೀತಿಗೆ ಸಾವಿಲ್ಲ


ಅವತ್ತೊಂದು ದಿನಾ ಔಟ್ಡೂರ್ ಗೇಮ್ಸ್ ಆಡ್ತಾ ಇದ್ವಿ ಆಗ ನಾನಿನ್ನು ಒಂಬತ್ತನೇ ತರಗತಿ... ಬಾಲ್ ಬ್ಯಾಟ್ಮಿಟನ್ ಅಂದ್ರೆ ಪ್ರಾಣ ನನಗೆ... ಸತತವಾಗಿ ಮೂರು ವರ್ಷದಿಂದಾ ವಲಯ ಮಟ್ಟದಲ್ಲಿ ಗೆದ್ದಿದ್ವಿ.... ಈ ಸಲ ರಾಜ್ಯ ಮಟ್ಟದಲ್ಲಿ ಗೆಲ್ಲಲೇಬೇಕು ಅಂತಾ ತುಂಬಾ ಪ್ರಾಕ್ಟೀಸ್ ಮಾಡ್ತಿದ್ವಿ... ಅವಾಗ ಆಗ್ಲೇ 4:30 pm ಆಗಿತ್ತು ಸ್ಕೂಲ್ ಸಹ ಬಿಟ್ಟಿತ್ತು... ನಾವೆಲ್ಲರೂ ಹಾಸ್ಟೆಲ್ ಲಿ ಇದ್ದಿದ್ರಿಂದ ಏಳು ಗಂಟೆ ವರೆಗೂ ಹೊರಗಡೆ ಇರೋ ಅವಕಾಶ ಇತ್ತು... ಕ್ಯಾಂಪಸ್ ಒಳಗಡೆ ನೇ ಹಾಸ್ಟೆಲ್ ಸಹ ಇತ್ತು... ಸ್ಕೂಲ್ ಸಹ ಬಿಟ್ಟಿದ್ರಿಂದ ಆರನೇ ತರಗತಿ ಯಿಂದ ಹತ್ತನೇ ತರಗತಿ ವರೆಗೂ ಇರೋರೆಲ್ಲ ನಾವ್ ಆಡೋದ್ನ ನೋಡ್ತಾ ಇದ್ರೂ, ಟೀಚರ್ಸ್ ಸಹ ಬಂದು ನೋಡ್ತಾಯಿದ್ರು.. ಅವರೆಲ್ಲಾ ನೋಡ್ತಿದಾರಲ್ಲಾ ಅಂತಾ ನಾವೆಲ್ಲರೂ ಇನ್ನು ಚೆನ್ನಾಗಿ ಆಡ್ತಾಇದ್ವಿ... ಆಗ ನಮ್ ಟೀಚರ್ಸ್ ಸಹ ಬಂದು ನಾವು ಜಾಯಿನ್ ಆಗ್ತಿವಿ ಅಂದಾಗ ಟೀಮ್ ಲಿ ಇರೋರು ಬಿಟ್ಟು ಸುಮ್ನೇ ಆಡೋಕೆ ಬಂದೋರೆಲ್ಲಾ ಕೋರ್ಟ್ ಯಿಂದ ಹೊರಗೆ ಹೋದ್ರು... ಒಂದ್ ಕೋರ್ಟ್ ಲಿ ನಾನು ಮತ್ತೇ ನನ್ ಫ್ರೆಂಡ್ ಶಶಿಕಲಾ ಮತ್ತೇ ಸಹನಾ ಜೊತೆಗೆ ನಮ್ ಸೈನ್ಸ್ ಸರ್ ಮತ್ತೇ ಇಂಗ್ಲಿಷ್ ಸರ್ ಬಂದಿದ್ರು...

ನಮ್ ಮುಂದಿನ ಕೋರ್ಟ್ ಲಿ ಗೀತಾ ಬಿಂದು ಲಕ್ಷ್ಮಿ ಜೊತೆಗೆ ಕನ್ನಡ ಸರ್ ಮತ್ತೇ ಗಣಿತ ಸರ್ ಇದ್ರೂ...

ನಾನು ಯಾವಾಗ್ಲು ಹಿಂದೆ ನಿಂತು ಬ್ಯಾಕ್ ಪ್ಲೇಯರ್ ಆಗಿ ಆಡೋದೇ ಇಷ್ಟಾ ಮತ್ತೇ ಹಾಗೇ ಆಡ್ತೀದ್ವಿ ಸಹ... ಆದ್ರೆ ಈ ಟೀಚರ್ಸ್ ನಮ್ ಜೊತೆಗೆ ಸೇರ್ಕೊಂಡಿದ್ದಿದ್ರಿಂದ... ನಿನ್ ಎತ್ತರ ತುಂಬಾ ಕಡಿಮಿ ಇದೆ ನೀನು ಮುಂದೆ ನಿಂತ್ಗೊ ಅಂತಾ ಸೈನ್ಸ್ ಸರ್ ಹೇಳಿದಾಗ ನನಗೆ ತುಂಬಾ ಕೋಪ ಬಂದಿತ್ತು... ಆದ್ರೆ ಸರ್ ಅಲ್ವಾ, ಹೋಗ್ಲಿ ಅಂತಾ ಹೋಗಿ ನಿಂತಿದ್ದೆ.. ನಮ್ ಕೋರ್ಟ್ ಲಿ ಬ್ಯಾಕ್ ಪ್ಲೇಯರ್ ಆಗಿ ಸೈನ್ಸ್ ಸರ್ ಮತ್ತೇ ಇಂಗ್ಲಿಷ್ Sirನಿಂತು ಮಿಡ್ಡಲ್ ಪ್ಲೇಯರ್ ಆಗಿ ಶಶಿಕಲಾ ಮತ್ತೇ ಫ್ರಂಟ್ ಪ್ಲೇಯರ್ಸ್ ಆಗಿ ನಾನು ಸಹನಾ ನಿಂತಿದ್ವಿ...


ಇನ್ನು ನಮ್ ಆಪ್ಪೋಸಿಟ್ ಲು ಅಷ್ಟೇ ಕನ್ನಡ ಸರ್ ಮತ್ತೇ ಗಣಿತ ಸರ್ ಇಬ್ರು ಬ್ಯಾಕ್ ಪ್ಲೇಯರ್ಸ್ ಆಗಿ, ಮಿಡ್ಡಲ್ ಪ್ಲೇಯರ್ ಆಗಿ ಬಿಂದು, ಫ್ರಂಟ್ ಪ್ಲೇಯರ್ಸ್ ಆಗಿ ಲಕ್ಷ್ಮಿ ಗೀತಾ ನಿಂತಿದ್ರು... ಗೇಮ್ ಸ್ಟಾರ್ಟ್ ಆಯ್ತು... ಶುರುವಲ್ಲೆ ನಮಿಗೆ ಬೇಸರ ತರಿಸಿತ್ತು ಈ ನಮ್ ಟೀಚರ್ಸ್ ಆಟ... ಯಾಕಂದ್ರೆ ನಮ್ಗೆ ಬಾಲ್ ಬಿಡ್ತಾನೆ ಇರ್ಲಿಲ್ಲಾ ಅವರು ಅವ್ರೆ ಆಡ್ತಿದ್ರು... ನಾವೆಲ್ಲರೂ ಸ್ಟೂಡೆಂಟ್ಸ್, ಈಗ ಬರುತ್ತೆ ನಮ್ ಕಡೆ ಬಾಲ್ ಅಂತೇಳಿ ಸ್ಟಡಿ ಆಗಿ ನಿಲ್ತಾ ಇದ್ವಿ ಪ್ರತಿ ಸಲ ಹೀಗೇ ಆಗ್ತಾ ಇತ್ತು... ನಮಗೂ ಕೋಪ ಬಂದು ಫ್ರಂಟ್ ಬಾಲ್ ಬರ್ಲಿಲ್ಲ ಅಂದ್ರೆ ಏನು ಬ್ಯಾಕ್ ಬರೋ ಬಾಲ್ ನೇ ಸ್ವಲ್ಪ ಹಿಂದೆನೇ ಹೋಗಿ ಹೊಡುದ್ರೆ ಆಯ್ತು ಅಂತಾ ನಾನು ಸಹನಾ ಮಾತಾಡ್ಕೊಂಡ್ಡಿದ್ವಿ... ಹಾಗೇ ನೆಕ್ಸ್ಟ್ ಬಾಲ್ ಬಂದಿದ್ದೆ ನಾನು ಹಿಂದೆ ಹೋಗಿ ಹೊಡಿಯೋಕೆ ಹೋದೆ, ಸೈನ್ಸ್ ಸರ್ ಸಹ ಹೊಡಿಯೋಕೆ ರೆಡಿ ಆಗಿದ್ರು, ಅದು ಇಬ್ರು ಬ್ಯಾಟ್ ಎತ್ತಿ ಹೊಡೆದಿದ್ದ ಪರಿಣಾಮ ಬಾಲ್ ಕೋರ್ಟ್ ದಾಟಿ ಹೊರಗೆ ಹೋಗಿ ಬಿದ್ದಿತ್ತು


ಹೇ ನೀನ್ಯಾಕೆ ಬಂದ್ಯಾಮ್ಮಾ ಫ್ರಂಟ್ ಬಂದಾಗ ಆಡ್ಬೇಕು ತಾನೇ ಅಂತಾ ಸ್ವಲ್ಪ ರೇಗಿ ಸೈನ್ಸ್ ಸರ್ ಹೇಳಿದಾಗ

ಕೋಪ ಬಂದು... ಮತ್ತೇ ಆವಾಗ್ಲೇಯಿಂದ ನೀವ್ ನೀವ್ ಟೀಚರ್ಸ್ ಗಳೇ ಆಡ್ತಿದೀರಾ ನಾವೇನು ಸುಮ್ನೇ ನೋಡ್ಬೇಕಾ ಅದ್ಕೆ ಆಡಿದೆ ಅಂದೆ... ಓಹ್ ಅಂತೇಳಿ ಸರಿ ಸರಿ ಇನ್ಮೇಲೇ ನಿನ್ ಕಡೆ ಬಂದಾಗ ಮಾತ್ರ ಆಡು ಅಂತೇಳಿ ಎಲ್ಲಾರು ನಿಂತ್ಗೊಂಡರು... ಆಗ ಬಾಲ್ ಸ್ವಲ್ಪ ನಮ್ಮೆಲ್ಲರ ಕಡೆಗೂ ಬರೋಕೆ ಶುರು ಆಯ್ತು... ಸ್ವಲ್ಪ ಹೊತ್ತ್ ಆದ್ಮೇಲೆ ಮತ್ತೇ ಟೀಚರ್ಸ್ ಗಳೇ ಆಡೋಕೆ ಶುರು ಮಾಡಿದ್ರು,, ಆದ್ರೆ ಈ ಸಲ ಫ್ರಂಟ್ ಪ್ಲೇಯರ್ ಆಗಿದ್ದ ಸಹನಾ ಕೋರ್ಟ್ ಅಲ್ಲೇ ಕೆಳಗೆ ಕೂತೇ ಬಿಟ್ಟಿದ್ಲು... ಯಾಕೆ ಅಂತಾ ಎಲ್ಲಾರು ಕೇಳಿದಾಗ... ಇನ್ನೇನು ಟೀಚರ್ಸ್ ಗಳೇ ಆಡ್ತಾರೆ ಸೊ ನಾವು ನೋಡ್ತಿವಿ ಸುಮ್ನೇ ಅಂತೇಳಿ ಕೋಪ ಮಾಡ್ಕೊಂಡು ಹೇಳಿದ್ಲು... ಅಯ್ಯೋ ಏನ್ ಹುಡ್ಗಿರಮ್ಮಾ ನೀವು ಅಂತೇಳಿ ಇಂಗ್ಲಿಷ್ ಸರ್ ಬ್ಯಾಕ್ ಪ್ಲೇಯರ್ ಆಗಿ ಆಡು ನಾನು ಫ್ರಂಟ್ ಆಡ್ತೀನಿ ಅಂತಾ ಮುಂದೆ ಬಂದ್ರು ಆದ್ರೆ ಸೈನ್ಸ್ ಸರ್ ಮಾತ್ರ ನಾನ್ ಎಷ್ಟೇ ಕೇಳಿದ್ರು ಬ್ಯಾಕ್ ಪ್ಲೇಯರ್ ಆಗಿ ಆಡೋಕೆ ಬಿಡ್ಲೇ ಇಲ್ಲಾ... ನಂಗು ಸುಮ್ನೇ ನಿಂತು ನಿಂತು ಬೇಜಾರ್ ಆಗಿ ಎಲ್ರು ಆಡ್ತಾ ಇರುವಾಗಲೇ ಕೋರ್ಟ್ ಯಿಂದ ಹೊರಗೆ ಬಂದಿದ್ದೆ... ಅರೇ ಏನಾಯ್ತು ಅಂತೇಳಿ ಗೇಮ್ ನಿಲ್ಸಿ ಎಲ್ರು ಕೇಳಿದಾಗ.. ನಿಮ್ಗೆ ಕಾಂಪಿಟೇಷನ್ ಇರೋದು ಸೊ ನೀವೆಲ್ಲಾ ಆಡಿ ಸರ್ ನಾವು ನಾಳೆ ಆಡ್ತೀವಿ ಅಂದಾಗ... ಹು ಅಂತೇಳಿ ಬಿಂದು, ಲಕ್ಷ್ಮಿ ಮತ್ತೇ ಗೀತಾ ಸಹ ಹೊರಗೆ ಬಂದ್ರು... ಟೀಚರ್ಸ್ ಎಲ್ಲಾ ಏನ್ ಮಾಡೋದು ಅಂತಾ ನೋಡುವಾಗ... ಉರಿಯೋ ಬೆಂಕಿ ಗೆ ತುಪ್ಪಾ ಸೂರಿಯೂ ತರ ರಚನಾ ಅನ್ನೋ ನಮ್ ಕ್ಲಾಸ್ಮೇಟ್ ಒಬ್ಬಳು ಬಂದು ಅವರು ಹೋದ್ರೆ ಏನಂತೆ, ನಾವು ಬರ್ತೀವಿ ಸರ್!! ಅಂತೇಳಿ ನಮ್ ಹತ್ರಾ ಬ್ಯಾಟ್ ಇಸ್ಕೊಳೋಕೆ ಬಂದ್ಲು.. ಬಿಂದು ಲಕ್ಷ್ಮಿ ಗೀತಾ ಎಲ್ರು ಬ್ಯಾಟ್ ಕೊಟ್ರು ಬಟ್ ನಾನ್ ಮಾತ್ರ ಕೊಡ್ಲಿಲ್ಲಾ... ಸೈನ್ಸ್ ಸರ್ ಜೋರಾಗಿ ಕೂಗಿ ಬ್ಯಾಟ್ ಕೊಡಿ ಅಂದ್ರು ನಾನು ಕೊಡ್ಲಿಲ್ಲ... ಇದು ನನ್ ಬ್ಯಾಟ್ ಅಂದೆ... ಅದು ಸ್ಕೂಲ್ ಬ್ಯಾಟ್ ಎಲ್ಲಾರು ಆಡೋ ರೈಟ್ಸ್ ಇದೆ ಬೇಗ ಕೊಡು ಅಂದ್ರು... ಅದ್ರಲ್ಲೂ ಆ ರಚನಾ ಬೇಕು ಬೇಕು ಅಂತಾ ಬಂದು ನನ್ ಬ್ಯಾಟ್ ಗೆ ನಿಂತಿದ್ದು ಇನ್ನು ಹೆಚ್ಚು ಕೋಪ ಬಂದು ಅಲ್ಲೇ ಹಂಪೆಯರ್ ಆಗಿ ಕೂತಿದ್ದ ಪಿಟಿ ಸರ್ ಗೆ ಕೊಟ್ಟು ಹಾಸ್ಟೆಲ್ ಗೆ ಹೋಗಿದ್ದೆ...


ನಮ್ಮ ಹಾಸ್ಟೆಲ್ ಲಿ ಸಂಜೆ ಆರಕ್ಕೆ ಟೀ ಕೊಡ್ತಿದ್ರು ಸೊ ಎಲ್ಲಾರು ರೆಡಿ ಆಗಿ ಹೋಗಿ ಮೆಸ್ಸ್ ಲಿ ಟೀ ತಗೊಂಡು ಬಂದು ಕುಡಿತಾ ಕೂತಾಗ, ನಮ್ ಟೀಚರ್ಸ್ ಸಹ ಬಂದು ಟೀ ಕುಡಿತಾ ಇದ್ರೂ, ನಾವು ಸರ್ಕಲ್ ಆಗಿ ಕೂತಿದ್ದೋರು ಟೀಚರ್ಸ್ ಬಂದಿದ್ರಿಂದ ಹಿಂದೆ ಹಿಂದೆ ಸರಿದು ಕುತ್ಗೊಂದ್ವಿ ದೊಡ್ಡ ಸರ್ಕಲ್ ಆಯ್ತು... ನನ್ ಪಕ್ಕಾ ಇಂಗ್ಲಿಷ್ ಸರ್ ನಿಂತಿದ್ರು ಅವರೇ ಕುತ್ಗೊಳೋ ಬಿಟ್ಟು ಸೈನ್ಸ್ ಸರ್ ಗೆ ಕುತ್ಗೋಳಿ ಅಂತೇಳಿ ಸರಿದು ಕೂತಾಗ ವಿಚಿತ್ರ ಅನ್ಸಿದ್ರು ನಂಗೆ ಆಡೋಕೆ ಬಿಟ್ಟಿಲ್ಲಾ ಅನ್ನೋ ಕೋಪಕ್ಕೆ ಸುಮ್ನೇ ತಲೆ ತಗ್ಗಿಸಿ ಟೀ ಕುಡಿತಿದ್ದೆ... ಟೀಚರ್ಸ್ ಎಲ್ಲಾ ನಾವ್ ಆಡೋದರ ಬಗ್ಗೆ ಹೇಳ್ತಾ ಇದ್ರೂ... 

 ನಮ್ ಸ್ಕೂಲ್ ಲಿ ಒಂದು ರೂಲ್ಸ್ ಇತ್ತು... ನಾಲ್ಕು ವರೆಗೆ ಶಾಲೆ ಬಿಟ್ರೆ ಅರ್ಧ ಗಂಟೆ ಏನಾದ್ರು ಮಾಡ್ಕೊಂಡು ( ಆಟ ಆಡ್ಬೋದು ) ಶಾರ್ಪ್ ಐದಕ್ಕೆ ಬುಕ್ಸ್ ತಂದು ಗ್ರೌಂಡ್ ಅಲ್ಲಿ ಓದ್ಕೊಂತಾ ಕುತ್ಗೊ ಬೇಕು ಏಳು ಗಂಟೆ ವರೆಗೂ... ಅಲ್ಲಿ ನಾವು ಓದುವಾಗ ಟೀಚರ್ಸ್ ಬಂದು ನೋಡ್ತಾ ಇರ್ತಿದ್ರು... 


ನಾನು ಗೇಮ್ ನಾ ಅರ್ಧ ಕ್ಕೆ ಬಿಟ್ಟು ಬಂದಿದ್ರಿಂದ ಆವಾಗ್ಲೇ ಡ್ರೆಸ್ ಚೇಂಜ್ ಮಾಡಿ ಫ್ರೆಶ್ಅಪ್ ಆಗಿ ಬುಕ್ಸ್ ತಂದಿದ್ದೆ ಆಗಾಗಿ ಟೀ ಕುಡಿದು ಅಲ್ಲೇ ಓದ್ತಾ ಕೂತಿದ್ದೆ... ಟೀ ಕಾಲಿ ಆದೂರೆಲ್ಲ ಒಬ್ಬೊಬ್ಬರೇ ರೂಮ್ ಗೆ ಹೋಗ್ತಿದ್ರು ಫ್ರೆಶ್ಅಪ್ ಆಗಿ ಬುಕ್ಸ್ ತಗೊಂಡು ಬರೋಕೆ.. ಹಾಗೇ ಟೀಚರ್ಸ್ ಸಹ ಫ್ರೆಶ್ ಅಪ್ ಆಗಿ ಬರೋಕೆ ಹೋಗ್ತಿದ್ರು 

( ಟೀಚರ್ಸ್ ಗೆ ಕ್ಯಾಂಪಸ್ ಅಲ್ಲೇ ಕ್ವಾಟ್ರಾಸ್ ಇತ್ತು )... ಹೀಗೇ ಎಲ್ಲಾರು ಹೋದಾಗ ಕೊನೆ ಅಲ್ಲಿ ಉಳ್ದಿದ್ದು ನಾನು ಮತ್ತೇ ಸೈನ್ಸ್ ಸರ್... ನಂಗು ಕೋಪ ಇದ್ದಿದ್ರಿಂದ ಏನು ಮಾತಾಡದೇ ಸುಮ್ನೇ ಸೋಶಿಯಲ್ ಸ್ಟಡೀಸ್ ಬುಕ್ ಇಡ್ಕೊಂಡು ಓದ್ತಾಯಿದ್ದೆ... ಆಗ ಸೈನ್ಸ್ ಸರ್ ನೇ ಮಾತಾಡಿ... ಏನ್ ಓದ್ತಿದೀಯಾ ಅಂತಾ ಕೇಳಿದ್ರು..?? 


ನಾನು ಮಾತಾಡದೇ ನನ್ನಾ ಬುಕ್ ನ ಮುಖ ಪುಟ ತೋರಿಸಿದೆ...

ಏನು ಮಾತಾಡಲ್ವ.. ಮೌನ ವೃತ ನಾ ಅಂದ್ರು... 

ನಂದು ಮತ್ತದೇ ಮೌನ... 

ನನ್ ಬುಕ್ ತಗೊಂಡು... ಏನು ಓದಿದೀಯ ಕ್ವೆಶ್ಚನ್ ಕೇಳ್ತೀನಿ ಆನ್ಸರ್ ಮಾಡು ಅಂತೇಳಿ ಬುಕ್ ತಗೊಂಡು ಬಿಟ್ರು... 

ನಂಗೆ ಮೊದಲೇ ಅವರ ಮೇಲೆ ಕೋಪ, ಅಂತದ್ರಲ್ಲಿ ಕ್ವೆಶ್ಚನ್ ಕೇಳ್ತೀನಿ ಅಂದ್ರೆ ರೇಗಿ, ಸುಮ್ನೇ ಹೋಗಿ ಸರ್, ಸೈನ್ಸ್ ಸರ್ ನೀವು ಸೋಷಿಯಲ್ ಬಗ್ಗೆ ನಿಮಗ್ಯಾಕೆ ಅಂತಾ ಬುಕ್ ಇಸ್ಕೊಳೋಕೆ ಕೈ ಮುಂದೆ ಮಾಡಿದೆ ಆದ್ರೆ ಉಪಯೋಗ ಆಗ್ಲಿಲ್ಲ...


ಯಾವ್ ಸಬ್ಜೆಕ್ಟ್ ಆದ್ರೆ ಏನು ಕ್ವೆಶ್ಚನ್ ಕೇಳೋ ರೈಟ್ಸ್ ನಂಗಿದೆ ಅಂತಾ ಯಾವ್ದೋ ಲೆಸೆನ್ ಓಪನ್ ಮಾಡಿ ಕ್ವೆಶ್ಚನ್ ಕೇಳಿದ್ರು ನಂಗೆ ಆನ್ಸರ್ ನೇ ಗೊತ್ತಿದ್ದಿಲ್ಲ ಸೊ ಸುಮ್ನೇ ಕೂತಿದ್ದೆ... ಸೊ ಗೊತ್ತಿದ್ರು ಹೇಳ್ತಿಲ್ಲ ಅಂತಾ ಅನ್ಕೊಂಡು ಬುಕ್ ಕೆಳಗೆ ಇಟ್ಟು ಎದ್ದು ಹೋಗ್ಬಿಟ್ರು... ಒಟ್ನಲ್ಲಿ ಹೋದ್ರಲ್ಲ ಅಂತಾ ನಾನು ಖುಷಿ ಆಗಿದ್ದೆ... 


ಹೀಗೇ ದಿನಗಳು ಸಾಗ್ತಾ ಇತ್ತು... ದಿನಾ ಸೈನ್ಸ್ ಸರ್ ನನ್ ಜೊತೆ ಒಂದು ಜಗಳ ಮಾಡೋರು ಇಲ್ಲಾ ಅಂದ್ರೆ ಪ್ರೀತಿ ಯಿಂದ ಮಾತಾಡ್ಸೋರು ಆದ್ರೆ ಯಾಕೋ ಅವತ್ತಿಂದ ಅದೇ ಬ್ಯಾಟ್ ಮಿಟಾನ್ ಲಿ ಜಗಳ ಆದಾಗಿಂದ ನನ್ ಕಡೆ ನೋಡ್ತಾನೂ ಇರ್ಲಿಲ್ಲಾ... ನಾನೇನಾದ್ರೂ ಮುಂದೆ ಬರ್ತಿದ್ರೆ ಸೈಲೆಂಟ್ ಆಗಿ ಅಲ್ಲಿಂದ ಎಸ್ಕೇಪ್ ಆಗೋರು... ಯಾಕೀಗೆ ಅಂತಾ ಯೋಚಿಸಿದೆ ಆದ್ರೂ ಉತ್ತರ ಸಿಗದೇ ಸುಮ್ನಾದೇ... 


ಅವತ್ತೊಂದು ದಿನಾ ಸೈನ್ಸ್ ಕ್ಲಾಸ್ ನಡೀತಾ ಇತ್ತು... ಸೈನ್ಸ್ ಸರ್ ಅದೇನೋ ಹೇಳ್ತಿದ್ರು ಪಾಠ ಮಾಡ್ತಾ... ನನ್ ಕಡೆ ನೋಡ್ತಾನೆ ಇಲ್ವಲಾ ಅಂತಾ ನಾನು ಅವರನ್ನೇ ದಿಟ್ಟಿಸಿ ನೋಡುವಾಗ ಏನೋ ಬೈ ಮಿಸ್ ಆಗಿ ನನ್ ಕಡೆ ನೋಡಿ ಬಿಟ್ರು ಏನೋ ನೋಡಬಾರದ್ದು ನೋಡ್ಬಿಟ್ಟೆ ಅನ್ನೋ ತರ ತಕ್ಷಣ ಕ್ಕೆ ಮುಖ ನಾ ಬೇರೆ ಕಡೆ ಮಾಡಿ ಮತ್ತೇ ಪಾಠ ಮಾಡ್ತಿದ್ರು  


ಅವರ ಆ ವಿಚಿತ್ರ ವರ್ತನೆ ನಂಗೆ ಅರ್ಥ ಆಗ್ತಾ ಇರ್ಲಿಲ್ಲಾ...

ಆದರೆ 

ಅವರು ನನ್ನಾ ನೋಡ್ತಾ ಇರ್ಬೇಕು,

ನಾನು ನೋಡದೇ ಇದ್ರೂ... 

ಮತ್ತೇ ನನ್ ಜೊತೆ ಜಗಳ ಮಾಡ್ಬೇಕು,

ವಿಷಯ ನೇ ಇಲ್ದೇ ಇದ್ರೂ... 

ಸುಮ್ ಸುಮ್ನೇ ನನ್ನಾ ಮಾತಾಡಿಸ್ಬೇಕು,

ನಾನು ಮಾತಾಡದೇ ಇದ್ರೂ... ಹಿಂಗೇ ಏನೇನೋ ಹುಚ್ಚುಚ್ಚಾ ಆಸೆ ಗಳು...


ಅವತ್ತೊಂದು ರಾತ್ರಿ ಊಟ ಮಾಡ್ತಾ ಇದ್ವಿ ಎಲ್ಲಾರು ಅಂದ್ರೆ ಆರರಿಂದ ಹತ್ತನೇ ತರಗತಿ ಯಾ ವಿದ್ಯಾರ್ಥಿ ಮತ್ತೇ ವಿದ್ಯಾರ್ಥಿಗಳು ಮೆಸ್ಸ್ ಅಲ್ಲಿ... ಗರ್ಲ್ಸ್ ಒಂದು ಕಡೆ ಅಂದ್ರೆ ಬಲಕ್ಕೆ... ಬಾಯ್ಸ್ ಒಂದು ಕಡೆ ಅಂದ್ರೆ ಎಡಕ್ಕೆ... ಮದ್ಯದಲ್ಲಿ ಟೀಚರ್ಸ್ ಕೂತು ಊಟ ಮಾಡ್ತಿದ್ರು... ಹೇಳ್ಬೇಕು ಅಂದ್ರೆ ಟೀಚರ್ಸ್ ಯಾವತ್ತೂ ಮಧ್ಯ ಕೂತು ಊಟ ಮಾಡ್ತಿದ್ದೇ ಇಲ್ಲಾ... ಅವ್ರಿಗೆ ಎಲ್ಲಿ ಇಷ್ಟಾ ಆಗುತ್ತೋ ಅತ್ವಾ ಅವರ ಮೆಚ್ಚಿನ ವಿದ್ಯಾರ್ಥಿ / ವಿದ್ಯಾರ್ಥಿನಿ ಯರ ಜೊತೆ ಮಾಡೋರು... ಆವತ್ತು ಸಹ ನಾವೆಲ್ಲರೂ ಅಂದ್ರೆ ಒಂಬತ್ತನೇ ತರಗತಿ ವಿದ್ಯಾರ್ಥಿನಿಯರು ಎಲ್ಲಾ ಒಂದ್ ಬದಿ ಕುತ್ಗೊಂಡು ಊಟ ಮಾಡುವಾಗ ಇಂಗ್ಲಿಷ್ ಸರ್ ಬಂದು ನನ್ ಮುಂದೆ ಕೂತು... ಸರ್ ಕುತ್ಗೋಳಿ.. !! ಅಂತಾ ನನ್ ಪಕ್ಕಾ ಇರೋ ಪ್ಲೇಸ್ ನಾ ಸೈನ್ಸ್ ಸರ್ ಗೆ ತೋರ್ಸಿದ್ರು...


ಸೈನ್ಸ್ ಸರ್ ಒಮ್ಮೆ ನನ್ನಾ ನೋಡಿ...ಬೇಡ ಇಲ್ಲೇ ಕುತ್ಗೊಂತಿನಿ ಅಂತಾ ಬೇಕು ಬೇಕು ಅಂತಾನೇ ರಚನಾ ಹತ್ರಾ ಹೋಗಿ ಕುತ್ಗೊಂಡ್ರು... ನಂಗೆ ಕೋಪ ಬಂದ್ರು ಅವರ ಕಡೆ ನೋಡದೇ ಬೇಗ ಬೇಗ ಊಟ ಮಾಡಿದ್ದೆ... 


ಆವತ್ತು ಬೇಕು ಬೇಕು ಅಂತ ಸರ್ ಡೌಟ್ ಇದೆ ಅಂದ್ರೆ ಬಂದು ಏನು ಅಂತ ಕೇಳಿ ಅದನ್ನಾ ಫುಲ್ ವಿವರಿಸ್ತಾ ಇದ್ರೂ ಆದ್ರೆ ತಲೆ ಸಹ ಎತ್ತಿ ನನ್ನಾ ನೋಡ್ತಾ ಇರ್ಲಿಲ್ಲಾ..


ಹೀಗೇ ಪ್ರತಿಯೊಂದು ವಿಷಯದಲ್ಲೂ ಸೈನ್ಸ್ ಸರ್ ನನ್ ವಿರುದ್ಧವಾಗೇ ಇರೋರು, ಯಾಕೀತರ ಮಾಡ್ತಿದಾರೆ ಅಂತಾ ಯೋಚಿಸಿ ನಾನು ಸುಮ್ನಾದೇ... 


ಆವತ್ತು ವಾಲೆಂಟೈನ್ಸ್ ಡೇ... ನಮಗೆ ಪ್ರೇಮಿಗಳ ದಿನಾಚರಣೇ ಅಂತಾ ಗೊತ್ತಿತ್ತು... ಆ ವಯಸ್ಸಲ್ಲಿ ಯಾವ್ ಪ್ರೀತಿ, ಪ್ರೇಮಾ ಎಲ್ಲಾ ಸೊ ನಾವೆಲ್ಲರೂ ನಾರ್ಮಲ್ ಆಗೇ ಇದ್ವಿ... ಆವತ್ತು ಸೈನ್ಸ್ ಸರ್ ಟೆಸ್ಟ್ ಮಾಡಿದ್ದೂ ಮಾರ್ಕ್ಸ್ ಹೇಳ್ತಿದ್ರು... ಮೊದ್ಲೇ ಎಲ್ಲರಿಗೂ ವಾರ್ನ್ ಮಾಡಿದ್ರು ಇಪ್ಪತ್ತೈದಕ್ಕೆ ಯಾರಾದ್ರೂ ಹದಿನೈದರ ಒಳಗೆ ತಗುದ್ರೆ ಎಷ್ಟು ಮಾರ್ಕ್ಸ್ ಕಡಿಮೆ ಇದೇನೋ ಅಷ್ಟು ಹೊಡೆತ ಬೀಳುತ್ತೆ ಅಂತಾ... ನಾವು ಸ್ವಲ್ಪ ಸೈನ್ಸ್ ಲಿ ವೀಕ್ ಸೊ ಭಯದಿಂದಾನೆ ಕೂತಿದ್ವಿ... ಒಂದ್ ಕೈಯಲ್ಲಿ ಹಸಿ ಬೇವಿನ ಕಡ್ಡಿ ಇಡ್ಕೊಂಡು ಇನ್ನೊಂದು ಕೈಯಲ್ಲಿ ಆನ್ಸರ್ ಶೀಟ್ ಇಡ್ಕೊಂಡು ಕ್ಲಾಸ್ಸ್ರೂಮ್ ಒಳಗೆ ಬಂದ್ರು ಸೈನ್ಸ್ ಸರ್...


ಚೆನ್ನಾಗೇ ಬರುತ್ತೆ ಮಾರ್ಕ್ಸ್ ಅಂತಾ ಅನ್ಕೊಂಡೊರು ಸಹ ಒಂದು ಕ್ಷಣ ಆ ಕಡ್ಡಿ ನಾ ನೋಡಿ ಹೆದರಿದ್ದು ಸುಳ್ಳಲ್ಲಾ... ಅಂತಾದ್ರಲ್ಲಿ ನಮ್ ಪಾಡ್ ಏನಾಗಿರ್ ಬೇಡ ಅಲ್ವಾ... 


ಭಯಂಕರ ಭಯ ಶುರುವಾಗಿತ್ತು ನಂಗಂತ್ರು... ಕೃಷ್ಣ ಪ್ಲೀಸ್ 15 ಮಾರ್ಕ್ಸ್ ಬಂದಿರ್ಲಿ ಅಂತಾ ಅದೇಷ್ಟು ಸಲ ಕೃಷ್ಣನ್ನಾ ಬೇಡ್ಕೊಂಡಿದ್ನೋ ಆ ದೇವಾ ನೇ ಬಲ್ಲ... 


ನಂದು ರೆಜಿಸ್ಟರ್ ನಂಬರ್ 02 ಇತ್ತು.. ಯಾವಾಗ್ಲು ಫಸ್ಟ್ ಯಿಂದ ಕೊಡ್ತಿದ್ದೋರು... ಅವತ್ತ್ಯಾಕೊ 50 ಯಿಂದ ಅಂದ್ರೆ ಕೊನೆ ಯಿಂದ ಪೇಪರ್ ಕೊಡೋಕೆ ಶುರು ಮಾಡಿದ್ರು... ನನ್ ಟೆನ್ಶನ್ ಇನ್ನು ಹೆಚ್ಚಿಗೆನೇ ಆಗ್ತಾ ಇತ್ತು...


ಎಲ್ಲರ ಪೇಪರ್ಸ್ ನು ಕೊಟ್ರು... ಕೊನೇಲಿ ನಂದು ಕೊಟ್ರು... ನೋಡಿದ್ರೆ 13 ಮಾರ್ಕ್ಸ್ ..!!! ಜೀವ ಬಾಯಿಗ್ ಬಂದಿತ್ತು... ಇನ್ನು ಎರಡು ಮಾರ್ಕ್ಸ್ ಕೊಟ್ಟಿದ್ರೆ ಏನ್ ಆಗೋದು ದೇವಾ ನಿಂಗೆ ಅಂತಾ ದೇವ್ರಿಗೆ ಸ್ವಲ್ಪ ಬೈದು... ನನ್ ಕೈ ನೋಡ್ಕೊಂಡೆ... ಇಷ್ಟು ಮೆತ್ತಗೆ ಇರೋ ಈ ಕೈಗೆ ಯಪ್ಪಾ ಕೋಲಿಂದ ಒಡೆತ ಬೇಕಾ ಅಂತಾ ಒಮ್ಮೆ ಕೈ ಗಟ್ಟಿಯಾಗಿ ಇಡ್ಕೊಂಡು ಸೈನ್ಸ್ ಸರ್ ಕಡೆ ನೋಡಿದೆ...


ಅವರು ಎದ್ದು ನಿಂತು... 15 ರ ಒಳಗೆ ಮಾರ್ಕ್ಸ್ ಬಂದೋರೆಲ್ಲ ಎದ್ದೊಳಿ ಅಂದ್ರು... ನಾವೆಲ್ಲ ಒಂದು ಹನ್ನೆರಡು ಸ್ಟೂಡೆಂಟ್ಸ್ ಇದ್ವಿ 15 ರ ಒಳಗೆ ಮಾರ್ಕ್ಸ್ ತಗೆದೋರು... ಎಲ್ಲಾ ಎದ್ದು ನಿಂತ್ವಿ... ನಂಗೋ ಇನ್ನು ಹೊಡೆದೇ ಇಲ್ಲಾ ಆವಾಗ್ಲೇ ಕಣ್ಣಲ್ಲಿ ಗಂಗೆ ತುಂಗೆ ಎಲ್ಲಾ ತುಂಬಿ ಕೊಂಡಿದ್ರು... ಒಮ್ಮೆ ನನ್ನಾ ನೋಡಿದೊರೆ...ಇದು ಒಂದ್ ಸಲ ಎಸ್ಕ್ಯೂಸ್ ಎಲ್ಲರಿಗೂ ಅಂದ್ರು... ಯಪ್ಪಾ ಹೋಗಿದ್ ಜೀವ ವಾಪಾಸ್ ಬಂದಿತ್ತು ಬದ್ಕೊಂತು ಬಡ ಜೀವ ಅಂತಾ ನೆಮ್ಮದಿಯಾಗಿ ಕೂತಿದ್ದೆ... 


ಆವತ್ತು ಹೇಗೋ ಕ್ಲಾಸ್ ಎಲ್ಲಾ ಮುಗಿತು... ಸಂಜೆ ಹೊತ್ತು ಓದ್ತಾ ಕೂತಿದ್ದಾಗ ಎಲ್ಲಾ ಟೀಚರ್ಸ್ ನು ಬಂದು ನೋಡೋದು ಮಾಡೋರು.. ಅಂಗೆ ಇಂಗ್ಲಿಷ್ ಸರ್ 10th ಸ್ಟೂಡೆಂಟ್ಸ್ ಹತ್ರಾ ಕೂತು ಏನೋ ಹೇಳಿ ಕೊಡ್ತಿದ್ರು... ಈ ಸೈನ್ಸ್ ಸರ್ ನಮ್ ಟೀಮ್ ನಾ ಪಕ್ಕದ ಟೀಮ್ ಗೆ ಬಂದು ರಚನಾ ಗೆ ಏನೋ ಹೇಳಿ ಕೊಡ್ತಿದ್ರು... ಮದ್ದೇ ಮದ್ದೇ ನನ್ನಾ ನೋಡ್ತಿದ್ರು... ನಂಗೆ ಹೇಗೆ ಗೊತ್ತಾಯ್ತು ಅಂತಾನಾ ನಾನು ನೋಡ್ತಿದ್ದೆ ಅಲ್ವಾ ಅವರನ್ನೇ... 


ಓದಿದ್ದೆಲ್ಲಾ ಆಗಿ ನಾವೆಲ್ಲ ರೂಮ್ ಗೆ ಹೋಗಿ ಸ್ವಲ್ಪ ಹೊತ್ತಲ್ಲೇ ಮೆಸ್ಸ್ ಗೆ ಊಟಕ್ಕೆ ಬಂದ್ವಿ... ಆವತ್ತು ಸೋಮವಾರ... ನಮ್ಮಲ್ಲಿ ಪ್ರತಿ ಸೋಮವಾರ ಸ್ವೀಟ್ಸ್ ಮಾಡೋರು ರಾತ್ರಿ ಊಟಕ್ಕೆ... ಹೋಳಿಗೆ ಮಾಡಿದ್ರೆ ತಿಂತಿದ್ದೆ... ಬೇರೆ ಸ್ವೀಟ್ಸ್ ನಾನು ತಿಂತಿರ್ಲಿಲ್ಲಾ ಆಗಾಗಿ ಅನ್ನ ಸಾಂಬಾರ್ ಹಾಕೊಂಡು ಬೇಗ ಬೇಗ ತಿಂದೆ ಬಟ್ ಇನ್ನು ಎಲ್ರು ಸ್ವೀಟ್ ನೇ ತಿಂತಿದ್ರು... ನಾನು ತಿಂದು ಬೇಗ ಬರ್ರೆ ಅಂತೇಳಿ ಮೆಸ್ಸ್ ಯಿಂದ ಹೊರಗೆ ಬರ್ತಿದ್ದೆ, ಅಲ್ಲಿ ಸೈನ್ಸ್ ಸರ್ ಯಾರದೋ ಜೊತೆ ಫೋನ್ ಲಿ ಮಾತಾಡ್ತಾ ನಿಂತಿದ್ರು... 

ನಾನು ಅವರ ಮುಂದೆ ಯಿಂದಾನೇ ಹೋಗ್ಬೇಕಿತ್ತು ಸೊ ಹೊರಟಿದ್ದೆ... 


ಅವರು ತಕ್ಷಣಕ್ಕೆ ಫೋನ್ ಇಟ್ಟು... ಆಯ್ತಾ ಇಷ್ಟು ಬೇಗ ಊಟ ಅಂತಾ ಕೇಳಿದ್ರು... 


ನಾನು ಹು ಅಂತೇಳಿ ಮುಂದೆ ಹೋಗ್ತಿದ್ದೆ... 


ಇರಮ್ಮಾ ಏನ್ ಅಷ್ಟು ಅವಸರ ಅಲ್ಲಿ ಹೋಗಿ ಕುತ್ಕೋಲೋಕೆ ಅಂದ್ರು... 


ನಾನು ಸಡನ್ ಆಗಿ ನೋಡಿದೆ, ನಾನು ಅಲ್ಲಿ ಹೋಗಿ ಕುತ್ಗೋಳೋದು ಇವ್ರಿಗೆ ಹೇಗ್ ಗೊತ್ತು ಅಂತಾ... 


ನೀನ್ ಹೇಗಿದ್ರು ನಿನ್ ಫ್ರೆಂಡ್ಸ್ ಬರೋ ವರೆಗೂ ಹಾಸ್ಟೆಲ್ ಒಳಗೆ ಹೋಗಲ್ಲಾ ಅಲ್ವಾ ಅಂದ್ರು... 


ಅದು ನಿಜಾನೆ ಒಬ್ಬಳೇ ನಂಗೆ ಹಾಸ್ಟೆಲ್ ಒಳಗೆ ಹೋಗೋಕೆ ಭಯ ಸೊ ಫ್ರೆಂಡ್ಸ್ ಬರೋವರೆಗೂ ಅಲ್ಲೇ ನೀರಿನ ಟಾಂಕಿ ಹತ್ರಾ ಕುತ್ಗೋಳೋದು ಅಭ್ಯಾಸ ಇತ್ತು ನಂಗೆ.. ಅವ್ರಿಗೆ ಹೇಗ್ ಗೊತ್ತಾಯ್ತು ಅಂತಾ ಸುಮ್ನೇ ಇದ್ದೇ... 


ಆಗ ಅವರೇ, ನೋಡಿದ್ದೇ ಸುಮಾರ್ ಸಲ ನೀನ್ ಅಲ್ಲಿ ಕುತ್ಗೋಳೋದು ಅಂದ್ರು... 


ನಾನು ಸರಿ ಅಂತೇಳಿ ಮುಂದೆ ಹೋಗ್ತಿದ್ದೆ... ಇರಮ್ಮಾ ಅಂತೇಳಿ ಒಂದು ಬೌಲ್ ಲಿ ಪಾಯಸ ಕೊಟ್ರು... ನಂಗೆ ಆಶ್ಚರ್ಯ ಆಗೋಯ್ತು... ಅರೇ ಇದೇನು ಪಾಯಸ ಇಲ್ಲಿ ಹೇಗೆ ಅಂದೆ... 


ನಾನೇ ತಂದಿದ್ದೆ, ನೀನ್ ತಿನ್ನಲ್ಲಾ ಅಲ್ವಾ ಅದ್ಕೆ ಅಂದ್ರು 


ನಂಗೆ ಅರ್ಥ ಆಗದೇ ಏನು ಅಂತಾ ಮತ್ತೇ ಕೇಳಿದಾಗ 


ನೀನ್ ಅನ್ನ ಸಾಂಬಾರ್ ಹಾಕೋಳೋದೂ ನೋಡಿದೆ... ಅದ್ಕೆ ಆವಾಗ್ಲೇ ನಿಂಗೆ ಅಂತಾ ಬೌಲ್ ಲಿ ಪಾಯಸ ತಂದು ನಿಂಗೆ ಕೊಡೋಣ ಅಂತಾ ಕಾಯ್ತಾ ಇದ್ದೇ ಅಂದ್ರು... 


ಅರೇ, ತಿನ್ಬೇಕು ಅನ್ಸಿದ್ರೆ ಒಳಗೆ ನೇ ತಿಂತಿದ್ದೆ... ನಾನ್ ತಿನ್ನಲ್ಲಾ ಪಾಯಸ ಅಂದೆ... 


ಆಗ ಅವರು, ಒಂದೇ ಸ್ಪೂನ್ ತಿಂದು ನೋಡು ಅಂತಾ ಅಷ್ಟು ಪ್ರೀತಿಯಿಂದ ಫೋರ್ಸ್ ಮಾಡಿದಾಗ 


ಹು ಅಂತೇಳಿ ಆ ಮಾಡಿದಾಗ ಅವರೇ ತಿನ್ನಿಸಿದ್ರು.. ಆ ಕ್ಷಣದಲ್ಲಿ ಅವರ ಕಣ್ಣು ತೇಟ್ ನಕ್ಷತ್ರ ದ ತರ ಮೀನುಗ್ತಾ ಇದ್ವು.. ಅವರ ಆ ನಗು ಯಾವ ನಿಶ್ಕಲ್ಮಶ ನು ಇಲ್ಲದ ಚಂದ್ರ ನಾ ಆಗೇ ಪ್ರಜ್ವಲಿಸ್ತಾ ಇತ್ತು... ಕೆನ್ನೆ ಮೇಲಿನ ರಂಗು ರಾತ್ರಿ ಅಲ್ಲೂ ಕೆಂಪಗೆ ಕಾಣ್ತಿತ್ತು... 


ನಾನು ಸಾಕು ಅಂದಾಗ... ಇನ್ನು ಒಂದು ಸ್ಪೂನ್ ಅಂದ್ರು... ಹೋಗ್ಲಿ ಅಂತಾ ಮತ್ತೇ ತಿಂದೆ... ಮತ್ತದೇ ಭಾವನೆ ಅವರ ಮುಖದಲ್ಲಿ... ಇನ್ನು ಇಲ್ಲೇ ಇದ್ರೆ ಎಲ್ಲಿ ಈ ನಗು ಗೆ ಸೋತು ಬಿಡ್ತೀನೋ ಅಂತಾ... ಸಾಕು ನಾನ್ ಹೋಗ್ತೀನಿ ಅಂತಾ ಮುಂದೆ ಹೆಜ್ಜೆ ಇಟ್ಟಾಗ... ಇರು ನಾನು ಬರ್ತೀನಿ ಅಂತಾ ಜೊತೆಗೆ ಹೆಜ್ಜೆ ಹಾಕ್ತಾ ಪಾಯಸ ತಿಂತಾ ಇದ್ರೂ...


ಅರೇ ಸ್ಪೂನ್ ತೊಳೆಯೋದಲ್ವಾ..?? ನಂಗೆ ತಿನ್ನಿಸಿದ್ದ ಸ್ಪೂನ್ ನಲ್ಲೆ ತೊಳಿದೇ ಹಾಗೇ ತಿಂತಿದಕ್ಕೆ ಕೇಳಿದೆ... 


ಒಮ್ಮೆ ನನ್ನಾ ನೋಡಿ...ನಡಿಯುತ್ತೆ ಅಂತೇಳಿ ಮತ್ತೇ ಅಂಗೆ ತಿಂತಿದ್ರು... 


ಗೊತ್ತೋ ಗೊತ್ತಿಲ್ದೇನೆ ನನ್ನಾ ಮುಖದಲ್ಲಿ ಒಂದು ಮಂದಹಾಸ ಮೂಡಿತ್ತು ಆ ಕ್ಷಣದಲ್ಲಿ... 


ಕೋಪ ಇಮ್ಮಡಿ ಆಗಿ, 

ಪ್ರೇಮಾ ಕ್ಕೆ ಮುನ್ನುಡಿ 

ಬರೀತಾ ಇದ್ದಾ ಆ ಚಂದ್ರ ಬಾನಲ್ಲಿ... 


ಪಾಯಸ ಎಲ್ಲಾ ಕಾಲಿ ಆದ್ಮೇಲೆ... ಸೈನ್ಸ್ ಸರ್ ನೇ ಮಾತಾಡಿ... ನೀನೇನು ಎಲ್ಲಾ ಸಬ್ಜೆಕ್ಟ್ ನು ಚೆನ್ನಾಗಿ ಓದ್ತಿಯಾ ಆದ್ರೆ ಸೈನ್ಸ್ ನಾ ಮಾತ್ರ ಯಾಕೆ ಕೇರ್ ಮಾಡ್ತಿಲ್ಲಾ ಅಂದ್ರು... 


ಅದು ನಂಗೆ ಸೈನ್ಸ್ ಸರ್ ನಾ ಯಾಕೆ ಕೇರ್ ಮಾಡ್ತಿಲ್ಲಾ ಅಂದಂಗಾಯ್ತು... ಅದಕ್ಕೆ ತಕ್ಷಣಕ್ಕೆ ಅವರ ಕಡೆ ತಿರುಗಿ,,ಆ ನಾನ್ಯಾಕೆ ನಿಮ್ನ ಕೇರ್ ಮಾಡ್ಬೇಕು ಅಂದೇ...


ಅವರೋ ನಗ್ತಾ... ಅಯ್ಯೋ ನನ್ನಲ್ಲಮ್ಮಾ. ನೀನ್ಯಾಕೆ ನನ್ನಾ ಕೇರ್ ಮಾಡ್ತೀಯ..?? ನಾನ್ ಕೇಳಿದ್ದು ನನ್ ಸಬ್ಜೆಕ್ಟ್ ಸೈನ್ಸ್ ನಾ ಯಾಕೆ ಸೀರಿಯಸ್ ಆಗಿ ಓದ್ತಾ ಇಲ್ಲಾ ಅಂತಾ ಅಂದ್ರು...

 

ನಂಗೋ ಒಂತರಾ ಅನ್ಸ್ತು ಅರೇ ಸಾರೀ ಸರ್ ಅಂತೇಳಿ... ಓದ್ಬೇಕು ಅಂತಾನೇ ಬುಕ್ ಇಡ್ಕೊಂತೀನಿ ಆದ್ರೆ ಏನ್ ಮಾಡೋದು ಬುಕ್ ಇಡ್ಕೊಂಡ ತಕ್ಷಣ ನೀವೇ ನೆನಪಾಗ್ತೀರ ಅಂತಾ ಮನಸ್ಸಲ್ಲೇ ಹೇಳ್ಕೊಂಡು... ಓದುವೆ ಇನ್ಮೇಲೇ ಅಂದೆ ಅವ್ರಿಗೆ... 


ನೋಡು ಇವತ್ತು ನಿನ್ನಿಂದಲೇ ಅವರು ಯಾರಿಗೂ ಹೊಡಿಲಿಲ್ಲ... ನಿಂಗೆ ಹೊಡಿಯೋಕೆ ಕೈ ಇರ್ಲಿ ಈವನ್ ನನ್ನಾ ಕೋಲು ಸಹ ಮುಂದೆ ಬರಲ್ಲಾ... ನೆಕ್ಸ್ಟ್ ಟೈಮ್ ಯಿಂದ ಚೆನ್ನಾಗಿ ಓದ್ಕೋ ಅಂದ್ರು... ಅವರ ಕಣ್ಣಲ್ಲಿ ಇದ್ದಾ ಆ ಕ್ಷಣ ದ ಭಾವನೆ ಅರಿಯದೆ ಹೋಗ್ಲಿಲ್ಲ ನಾನು... 


ಹು ಅಂತೇಳಿ ಸುಮ್ನೇ ಕೂತಿದ್ದಾಗ... ಅವರು ನನ್ನೇ ನೋಡ್ತಿದ್ರು... 


ಅಸ್ಟ್ರಲ್ಲೇ ಸ್ವಲ್ಪ ಹುಡ್ಗಿರು ಊಟ ಮುಗಿಸಿ ಬರ್ತಾ ಇದ್ರೂ ನಾನು ಎದ್ದು ಬಾಯ್ ಸರ್ ಹೋಗ್ತೀನಿ ಹುಡ್ಗಿರು ಬಂದ್ರು ಅಂದೆ... 


ಆಗ ಸರ್ ತಗೋ ಅಂತಾ ಒಂದು ಡೈರಿಮಿಲ್ಕ್ ಮತ್ತೇ ಒಂದು ಕವರ್ ಕೊಟ್ರು...


ಏನೀದು ಅಂದೆ... ಓಪನ್ ಮಾಡದೇ .. 


ರೂಮ್ ಗೆ ಹೋದ್ಮೇಲೆ ನೋಡು ಅಂತೇಳಿ... ಹ್ಯಾಪಿ ವಾಲೆಂಟೈನ್ಸ್ ಡೇ ಅಂದ್ರು... 


ನಂಗೋ ಆ ಕ್ಷಣಕ್ಕೆ ಏನು ಹೇಳ್ಬೇಕು ಗೊತ್ತಾಗದೆ... ಸುಮ್ನೇ ಇಸ್ಕೊಂಡು ಹಾಸ್ಟೆಲ್ ಗೆ ಬಂದಿದ್ದೆ... 


ಇನ್ನು ನಮ್ ಕ್ಲಾಸ್ಮೇಟ್ಸ್ ಬರ್ತಾ ಇದ್ರೂ ಒಬ್ಬೊಬ್ಬರೇ ಸೊ ಬೇಗ ಬೇಗ ಕವರ್ ಲಿ ಏನಿದೆ ಅಂತಾ ತಗೆದು ನೋಡಿದೆ... 



ಒಂದು ಗುಲಾಬಿ ಹೂವು ಮೊಗ್ಗು ಇನ್ನು... ಮತ್ತೇ ಒಂದು ಪೇಪರ್ ಅದರ ಮೇಲೆ ಹೀಗೇ ಬರ್ದಿತ್ತು... 


ಟು ಮೈ ಸೋಲ್... ... ಓದಿದ ನಂಗೆ ಏನೋ ಭಯ, ಏನೋ ಸಂತೋಷ, ಏನೋ ಮಧುರವಾದ ಭಾವನೆ ಯಾ ಸಂಚಲನ... 


ಪೇಪರ್ ಓಪನ್ ಮಾಡಿ ಓದೋಕೆ ಶುರು ಮಾಡಿದೆ... ಅದ್ರಲ್ಲಿ ಹೀಗಿತ್ತು... 


     ಹಾಯ್... ಇದೇನು ಮೂರ್ ಹೊತ್ತು ಕಣ್ಣು ಮುಂದೇನೆ ಇರ್ತೀನಿ ಡೈರೆಕ್ಟ್ ಆಗೇ ಹೇಳೋದು ಬಿಟ್ಟು ಹೀಗೇ ಲೆಟರ್ ಕೊಟ್ಟಿದಾರಲ್ಲಾ ಅಂತಾ ನಿಂಗೆ ಅನ್ನಿಸ್ಬೋದು, ನಿಜ ನೀನೇನೋ ಕಣ್ ಮುಂದೆ ಇರ್ತೀಯ... ಆಗ ನನ್ ಪಾಡು ಹೇಳು..!?? ನಿನ್ನಾ ಆ ನೇರ ನೇರ ಕಣ್ಣೋಟ ಮತ್ತೇ ಚಾಕುಗಿಂತ ಅರಿತವಾದ ನಿನ್ನಾ ನೇರ ನುಡಿ ನಂಗೆ ಈ ಪತ್ರ ಬರಿಯೋ ತರ ಮಾಡ್ತು... ಓದಿ ಇಷ್ಟಾ ಇದ್ರೆ ನಂಗೆ ಹೇಳು ಇಲ್ಲಾ ಅಂದ್ರು ನು ನಂಗೆ ಹೇಳು... ಆದ್ರೆ ದಯವಿಟ್ಟು ಮಾತ್ ಬಿಡೋದು ಮಾತ್ರ ಮಾಡ್ಬೇಡಮ್ಮಾ ಸಹಿಸೋಕೆ ಆಗಲ್ಲಾ... ನಿನ್ನಾ ನೂರು ಮಾತನ್ನು ಕೇಳ್ಸ್ಕೊ0ತೀನಿ ಆದ್ರೆ ನೀನ್ ಮೌನ ಮಾತ್ರ ಸಹಿಸಿ ಕೊಳ್ಳೋ ಶಕ್ತಿ ಆ ದೇವರು ನಂಗೆ ಕೊಟ್ಟಿಲ್ಲ... ಈಗ ವಿಷಯಕ್ಕೆ ಬರ್ತೀನಿ... ಈ ಪ್ರೀತಿ ಪ್ರೇಮಾ ದ ಬಗ್ಗೆ ನಿಂಗೆ ಎಷ್ಟು ಗೊತ್ತೋ ಗೊತ್ತಿಲ್ವೊ ನಂಗೊತ್ತಿಲ್ಲಾ... ಆದ್ರೂ ಹೇಳ್ತಿದೀನಿ... ನೀನಂದ್ರೆ ಇಷ್ಟಾ... ಅದೇಷ್ಟು ಅಂತಾ ಕೇಳ್ಬೇಡ... ನಂಗೊತ್ತಿಲ್ಲಾ... ಒಟ್ನಲ್ಲಿ ನೀನಂದ್ರೆ ಪ್ರಾಣ ನಂಗೆ... ಯಾವಾಗ್ಲು ಅಮ್ಮಾನ್ನಾ ಬಿಟ್ರೆ ಬೇರೆ ಹೆಣ್ಣು ಮಕ್ಕಳನ್ನ ಸಲಿಗೆ ಯಿಂದ ಮಾತಾಡಿಸ್ಬೇಕು ಅಂತಾ ಅನಿಸಿದ್ದೇ ಇಲ್ಲಾ... ಅದ್ಯಾವಾಗ ನೀನ್ ನನ್ನಾ ಹೃದಯ ದಲ್ಲಿ ಲಗ್ಗೆ ಇಟ್ಟೋ ಗೊತ್ತಿಲ್ಲಾ... ಅಮ್ಮಾ ಜೊತೆಗೆ ಮಾತಾಡಿದ್ದ ಖುಷಿ ನೇ ನಿನ್ ಜೊತೆಗೆ ಮಾತಾಡುವಾಗ ಇರುತ್ತೆ... ಸೊ ಅಮ್ಮಾ ತರ ಯಾವಾಗ್ಲು ನನ್ ಜೊತೇಲಿ ಇರ್ತೀಯಾ..?? ನಿಂಗೆ ನನ್ ಜೊತೆಗೆ ಇರೋಕೆ ಇಷ್ಟಾ ಇದ್ರೆ... ಆ ಗುಲಾಬಿ ನಾ ನೀರಲ್ಲಿ ಹಾಕಿ ಇಡು ಬೆಳಗ್ಗೆ ಅರಳಿರತ್ತೆ ಮುಟ್ಗೊಂಡು ಬಾ.. ಇಷ್ಟಾ ಇದ್ರೆ ಮಾತ್ರ.. !!


ನನ್ನವಳಿಗೆ ನಿನ್ನವ 


ಪತ್ರ ಓದಿದ್ದೆ ಏನೋ ಒಂದು ಖುಷಿ.. ಹೇಳಲಾರದ ಭಾವನೆಯ ಅನಾವರಣ... ಒಂದು ಕ್ಷಣ ಆ ಪತ್ರ ನಾ ಹೃದಯದ ಹತ್ತಿರ ಇಡಿದು ಸುಮ್ನೇ ಕಣ್ಣು ಮುಚ್ಚಿದೇ... ಮನದಲ್ಲೂ ಅವರ ಮುಗುಳುನಗೆ ಯಾ ಪ್ರತಿಬಿಂಬ ಬಂದಿದ್ದಕ್ಕೆ ನನ್ನ ಮುಖದಲ್ಲೂ ಮುಗುಳುನಗೆ ಮೂಡಿತ್ತು... 


ಆ ರಾತ್ರಿ ಹೇಗ್ ಕಳಿತೂ ಗೊತ್ತೇ ಆಗ್ಲಿಲ್ಲ... ತುಂಬಾ ಬೇಗ ಮುಗ್ದೂಯ್ತು ಅನ್ನಿಸ್ಸಿತ್ತು ಆದ್ರೂ ಒಂದು ಖುಷಿ ಸರ್ ನಾ ಬೇಗ ನೋಡ್ಬೊದಲ್ವಾ ಅಂತಾ... 


ಎಂದಿನಂತೆ ಸ್ಕೂಲ್ ಗೆ ರೆಡಿ ಆಗುವಾಗ ಗುಲಾಬಿ ನಾ ಮುಟ್ಕೊಳ್ಳಿಲ್ಲಾ ಸೀದಾ ಹೋಗಿ ಕೃಷ್ಣ ನಾ ಪಾದಕ್ಕೆ ಇಟ್ಟಿದ್ದೇ... 


ಆವತ್ತು ಪೂರ್ತಿದಿನ ಸೈನ್ಸ್ ಸರ್ ಮುಖ ಬಾಡೋಗಿತ್ತು ಕಾರಣ ನು ನಂಗೊತ್ತಿತ್ತು... ಕ್ಲಾಸ್ ನು ಕಷ್ಟ ಪಟ್ಟು ತಗೊಂಡಿದ್ರು... ಸಂಜೆ ಓದೋಕೆ ಕೂತಾಗ್ಲು ಅವರು ಬರಲೇ ಇಲ್ಲಾ... ಅಷ್ಟೊಂದು ಬೇಜಾರ್ ಆಗಿದೆ ಅನ್ನೋ ಕಲ್ಪನೆ ನಂಗಿತ್ತು... ಆದ್ರೆ ಬೇಜಾರ್ ಆಗಿದ್ದು ಮಾತ್ರ ರಾತ್ರಿ, ಯಾಕಂದ್ರೆ ಸರ್ ಊಟಕ್ಕೆ ಬಂದೆ ಇರ್ಲಿಲ್ಲಾ ... ನಾನೋ ಬರ್ಬೋದು ಅಂತಾ ನೋಡಿ ನೋಡಿ ಸಾಕಾಗಿ ಕೊನೆಗೆ ಇಂಗ್ಲೀಷ್ ಸರ್ ನಾ ಕೇಳಿದೆ ಎಲ್ಲಿ ಸರ್ ಬಂದಿಲ್ಲಾ ಊಟಕ್ಕೆ ಅಂತಾ... ಅವರಿಗೋ ಫುಲ್ ಶಾಕ್ " ಏನು ನೀನಾ ಕೇಳ್ತಿರೋದು ಅಂತಾ " ಹುಬ್ಬೆರಿಸಿ ಕೇಳಿದಾಗ.. 


ಹು ನಾನೇ ಹೇಳಿ ಸರ್ ಅಂದಾಗ 


ಅದೇನೋ ಅವ್ರಿಗೆ ತಲೆ ನೋವು ಅಂತಿದ್ರು ಅದ್ಕೆ ಊಟ ಬೇಡ ಅಂತಾ ಮಲಗಿದಾರೆ ಅಂದ್ರು 


ತಲೆ ನೋವಿಗೆ ನಾನೇ ಕಾರಣ ಅಂತಾ ಗೊತ್ತಾಯ್ತು ಆದ್ರೆ ಏನ್ ಮಾಡೋದು ರಾತ್ರಿ ಹೊತ್ತಲ್ಲಿ ಟೀಚರ್ಸ್ ಕ್ವಾಟ್ರಸ್ ಹತ್ರಾ ಹೋಗೋ ಅನುಮತಿ ಇಲ್ದೇ ಇದ್ದಾ ಕಾರಣಕ್ಕೆ ಸುಮ್ನೇ ನಿಂತಿದ್ದೆ... 


ಹಲೋ ಮೇಡಂ ಏನು ಅಂತಾ ಇಂಗ್ಲೀಷ್ ಸರ್ ಕೇಳಿದ್ರು..ನಾನು ಸುಮ್ನೇ ನಿಂತಿದ್ದು ನೋಡಿ 


ಏನ್ ಸರ್ ನೀವು ಫ್ರೆಂಡ್ ಗೆ ತಲೆ ನೋವು ಅಂದ್ರೆ ಊಟ ಮಾಡಿ ಟ್ಯಾಬ್ಲೆಟ್ ತಗೋ ಸರಿ ಹೋಗುತ್ತೆ ಅನ್ನೋ ಬಿಟ್ಟು...ಅವರನ್ನ ಮಲ್ಕೋ ಅಂತೇಳಿ ಬಿಟ್ಟು ಬಂದಿದಿರಲಾ ಅಂದೆ.. ನನ್ನಾ ಅಸಾಯಕತೆ ಅವರ ಮೇಲೆ ಕೋಪ ತರ್ಸಿತ್ತು... 

ಓಹ್ ಏನು ನಿಮ್ಗೆ ಅಷ್ಟೊಂದು ಕಾಳಜಿ ಇದ್ರೆ ನೀವೇ ಕರೀರಿ ಅಂದ್ರು... 


ನಾನು ಒಮ್ಮೆ ಅವರನ್ನ ಗುರುಗುಟ್ಟಿ ನೋಡಿ. " ನಂಗೆ ಆ ಪರ್ಮಿಷನ್ ಇದ್ದಿದ್ರೆ ನಾನೇ ಹೋಗಿ ಊಟ ನೇ ಮಾಡ್ಸ್ತೀದ್ದೇ" ಅಂತಾ ನಾಲಿಗೆ ವರ್ಗು ಬಂದ್ರು ಬಾಯಿಂದ ಹೊರಗೆ ಬರ್ಲಿಲ್ಲ ಪದಗಳು ಮನದಲ್ಲೇ ಉಳಿದು ಬಿಟ್ವು...


ನಮಗೆ ನಿಮ್ ರೂಮ್ ಗೆ ಹೋಗೋ ಪರ್ಮಿಷನ್ ಇಲ್ಲಾ ಸರ್ ಅಂತೇಳಿದೇ... 


ಒಹ್ ರೂಮ್ ಗೆ ಯಾರು ಹೋಗೋಕೆ ಹೇಳಿದ್ರು ಅಂತೇಳಿ ತಗೋ ಫೋನ್ ಮಾಡಿ ಕರಿ ಅಂತೇಳಿ ಅವ್ರಿಗೆ ಡಯಲ್ ಮಾಡಿ ಕೊಟ್ರು... 


ಆಕಡೆ ಯಿಂದ ಮಾತಾಡಿದ ಸೈನ್ಸ್ ಸರ್ " ಏನೋ ಅಂದ್ರು ಇಂಗ್ಲೀಷ್ ಸರ್ ನೇ ಕಾಲ್ ಮಾಡಿದಾರೆ ಅನ್ಕೊಂಡು "...


ನಾನು ಮೆಲ್ಲಗೆ ಸರ್ ಅಂದೆ... 


ಹೇ ನೀನ್ಯಾಕಮ್ಮಾ ಮಾಡಿದೆ ಅಂದ್ರು... ನಂಗೋ ಆಶ್ಚರ್ಯ ಕೇವಲ ನಾನು ಸರ್ ಅಂದೆ ಅಷ್ಟಕ್ಕೇ ನನ್ ವಾಯ್ಸ್ ನಾ ಕಂಡು ಇಡಿದು ಬಿಟ್ರಲ್ಲ ಅಂತಾ... 


ಹೇ ಮಾತಾಡಮ್ಮಾ ಏನಾದ್ರು ತೊಂದ್ರೇನ..?? ಅಂತಾ ಕೇಳಿದ್ರು ನಾನು ಯೋಚಿಸ್ತಾ ಮಾತಾಡದೇ ಇದ್ದಿದ್ಕೆ... 


ತಕ್ಷಣಕ್ಕೆ ಎಚ್ಚೆತ್ತು " ಹು "ಅಂದೆ 


ಅವರೋ ಗಾಬರಿ ಆಗಿ " ಏನಾಯ್ತಮ್ಮಾ ಬರ್ಲಾ ಮೆಸ್ಸ್ ಹತ್ರಾ ಅಂದ್ರು "...


ನಾನಿನ್ನು ಹು ಅಂತೀರುವಾಗ್ಲೇ ಅವರ ರೂಮ್ ಲೈಟ್ ಆನ್ ಆಗಿತ್ತು... ಖುಷಿಯಾಗಿ ಬನ್ನಿ ಅಂತೇಳಿ ಫೋನ್ ಇಟ್ಟಿದ್ದೇ... 


ನಾನು ಹೊರಗೆ ನಿಂತು ಕಾಯ್ತಾ ಇರುವಾಗ ಸರ್ ರೂಮ್ ಡೋರ್ ಹಾಕಿ ಬೇಗ ಬೇಗ ಬಂದ್ರು ಫುಲ್ ಸ್ಪೀಡ್ ಲಿ.. ಆ ನಡಿಗೆಲೇ ನನ್ನಾ ಮೇಲಿನ ಕಾಳಜಿ ಗೊತ್ತಾಗಿತ್ತು... 


ಬಂದೋರೆ.. " ಏನಾಯ್ತು "ಅಂದ್ರು ಟೆನ್ಶನ್ ಯಿಂದ... 


ಹಸಿವಾಗಿದೆ ಅಂದೆ... 


ಅರೇ ಊಟ ಕಾಲಿ ಆಯ್ತಾ ಅಂತಾ ಕೇಳಿದ್ರು... (ಅಪರೂಪ ಕ್ಕೆ ಮೆಸ್ಸ್ಲಿ ಊಟ ಕಾಲಿ ಆಗ್ತಿತ್ತು )... 


ಆಗ ನಾನು.. ನೀವು ಊಟ ಮಾಡದೇ ಇದ್ರೆ ನಾನು ಉಂಡಿದ್ದು ಹೊಟ್ಟೆ ತುಂಬಲ್ಲ ಅಂತಾ ಅವರನ್ನೇ ನೋಡ್ತಾ ಹೇಳಿದೆ. .. 


ಅವರೋ ಫುಲ್ ನಾಚಿಕೆ ನೋ ಏನೋ ಗೊತ್ತಾಗ್ಲಿಲ್ಲ "ಸರಿ ಮಾಡ್ತೇನೆ " ಅಂದ್ರು... 


ಆಗ ನಾನು... " ಸರಿ ಬೇಗ ಮಾಡಿ ಅಂತೇಳಿ ಮೊಬೈಲ್ ಕೊಟ್ಟೆ ಇಂಗ್ಲೀಷ್ ಸರ್ ಗೆ ಕೊಡಿ ಅಂತೇಳಿ "... 


ಸರಿ ಅಂತೇಳಿ ಅವರು ನಗು ಮಿಶ್ರಿತ ನಾಚಿಕೆ ಯಿಂದ ಊಟಕ್ಕೆ ಹೋದ್ರು... 


ಆ ರಾತ್ರಿ ನೆಮ್ಮದಿಯಾಗಿ ಕಳೆದಿತ್ತು ನನಿಗೂ ಮೇ ಬಿ ಅವ್ರಿಗೂ...


ಎಂದಿನಂತೆ ಸ್ಕೂಲ್ ಗೆ ಹೋದೆ ಇತ್ತೀಚಿಗೆ ಸೈನ್ಸ್ ಸರ್ ನನ್ನಾ ಕದ್ದು ಕದ್ದು ನೋಡೋ ವಿಷಯ ಗೊತ್ತಾಗ್ತಿತ್ತು... ಅದೊಂತರ ಹೊಸ ಹೊಸ ಭಾವನೆ ಗಳನ್ನ ಕೊಡ್ತಾ ಇತ್ತು... ದಿನದಿಂದ ದಿನಕ್ಕೆ ಸೈನ್ಸ್ ಸರ್ ತುಂಬಾ ಹತ್ತಿರ ದವ್ರು ಆಗೋದ್ರು...


ಅದೊಂದು ದಿನ ಮತ್ತೇ ಬ್ಯಾಟ್ ಮಿಟನ್ ಆಡ್ತಾ ಇದ್ವಿ ಆವತ್ತು ಮತ್ತೇ ಎಲ್ಲಾ ಟೀಚರ್ಸ್ ಆಡೋಕೆ ಬರ್ತೀವಿ ಅಂದಾಗ ನಾವೆಲ್ಲ ಅವರನ್ನು ಜಾಯಿನ್ ಮಾಡ್ಸ್ಕೊಂಡು ಆಡೋಕೆ ಶುರು ಇದ್ವಿ... ಆಗ ಸೈನ್ಸ್ ಸರ್ ನೀನೇ ಬ್ಯಾಕ್ ಪ್ಲೇಯರ್ ಆಗಿ ಆಡು ಅಂದ್ರು...


ಅದ್ಯಾಕೋ ನಂಗೆ ಆಡೋ ಮನಸೇ ಇರ್ಲಿಲ್ಲಾ ಸೊ ಇಲ್ಲಾ ನೀವೇ ಆಡಿ ನಾನು ಮುಂದೆ ಇರ್ತೀನಿ ಅಂದೆ... 


ಅವರೋ ಪರವಾಗಿಲ್ಲ ಹಿಂದೆ ಆಡು... ನಾನೂ ಪರವಾಗಿಲ್ಲ ನಾನು ಮುಂದೆ ಇರ್ತೀನಿ ಅಂತಾ ಹೀಗೇ ಮುಂದೆ ಹಿಂದೆ ಅನ್ಕೊಂತಾ ಐದು ನಿಮಿಷ ಹೋಗಿದ್ದೆ ಗೊತ್ತಾಗಿದ್ದಿಲ್ಲಾ...


ಆಗ ಕಬಾಬ್ ಮೇ ಹಡ್ಡಿ ಅನ್ನೊಂಗೆ ಬಂದ್ರು ಇಂಗ್ಲೀಷ್ ಸರ್ " ಹಲೋ ಇದು ಕೋರ್ಟ್, ನೀವಿಬ್ರು ಮಾತಾಡ್ಬೇಕು ಅಂದ್ರೆ ಕೋರ್ಟ್ ಯಿಂದ ಆಚೆ ಹೋಗಿ ಮಾತಾಡ್ಕೊಳ್ಳಿ ಅಂದ್ರು " 


ಆವಾಗ್ಲೇ ನಮಗೆ ಎಚ್ಚರವಾಗಿದ್ದು ಹೌದಲ್ವಾ ಅಂತಾ... ಆಗ ಎಷ್ಟೇ ಆಗ್ಲಿ ಗುರುಗಳು ಅಲ್ವಾ ಅವರ ಮಾತಿಗೆ ಒಪ್ಪಲೇ ಬೇಕಿತ್ತು.. ಸೊ ಸರಿ ಅಂತೇಳಿ ನಾನು ಬ್ಯಾಕ್ ಪ್ಲೇಯರ್ ಆಗಿ ನಿಂತು ಆಡ್ತಿದ್ದೆ...


ಆಟ ಆಡಿದ್ದಕ್ಕಿಂತ ಅವರನ್ನ ನೋಡಿದ್ದೇ ಹೆಚ್ಚು.. ಬಾಲ್ ನನ್ ಹತ್ರಾ ಬಂದ್ರು ಬಿಟ್ಟು ಬಿಡ್ತಿದ್ದೆ, ಯಾಕ್ ಗೊತ್ತಾ ನಾನು ಅವರನ್ನ ನೋಡ್ತಿದ್ದೆ ಬಾಲ್ನಾ ಅಲ್ಲಾ ಅಲಾ ಅದ್ಕೆ., !!... 


ಆಗ ಶಿವ ಪೂಜೆ ಲಿ ಕರಡಿ ಅನ್ನೊಂಗೆ ಇಂಗ್ಲಿಷ್ ಸರ್ ಬಂದು " ಬಾಲ್ ನಮ್ ಕಡೆ ಬರಲ್ಲಾ ಬರಲ್ಲಾ ಅಂತಿದ್ರಿ, ಬಂದ್ರೆ ನೀವ್ ಆಡೋ ರೀತಿ ಇದಾ ಅಂತಾ ಕೆಳಗೆ ಬಿದ್ದಿರೋ ಬಾಲ್ ತೋರ್ಸಿ ಕೇಳಿದ್ರು "...


ಕೋಪ ಬಂದಿದ್ರು ನಮ್ ಸರ್ ನಾ ಫ್ರೆಂಡ್ ಅಲ್ವಾ ಅಂತಾ ಸುಮ್ನೇ ಬಿದ್ದಿದ್ದ ಬಾಲ್ ನಾ ತಗೊಂಡಿ ನೀವ್ ಆಡಿ ಅಂತ ಸೈನ್ಸ್ ಸರ್ಗೆ ಕೊಟ್ಟಿದ್ದೆ... ಇಂಗ್ಲೀಷ್ ಸರ್ ನೋಡಿ ಸುಮ್ನೇ ಆಕಡೆ ಹೋಗಿ ನಿಂತು ಆಡ್ತಿದ್ರು... ಮತ್ತೇ ಆಟಾನ ಟೀಚರ್ಸ್ ಗಳೇ ಆಡುವಾಗ ನಾನು ಸುಮ್ನೇ ನಿಂತು ನೋಡ್ತಿದ್ದೆ... ಆಗ ಸಹನಾ ಇದ್ದು " ಹೇಳೇ ಅವ್ರ್ ಅವರೇ ಆಡ್ತಿದಾರೆ ಅಂದ್ಲು ".,,


ಅವರನ್ನೇ ನೋಡ್ತಿದ್ದ ನಾನು " ಇರಲಿ ಬಿಡೇ ಆಡ್ಲಿ, ನಾವೇನು ಡೈಲಿ ಆಡ್ತೀವಿ ಪಾಪ ಅವರೋ ಯಾವಾಗೊಮ್ಮೆ ಬರ್ತಾರೆ ಆಡ್ಲಿ ಬಿಡ್ರೀ ಅಂದೆ... " 


ಎಲ್ಲಾರು ನನ್ನೇ ನೋಡ್ತಿದ್ರು ಈವನ್ ಟೀಚರ್ಸ್ ಸಹ ನನ್ನೇ ನೋಡ್ತಿದ್ರು ಏನಾಶ್ಚರ್ಯ.. ಸೂರ್ಯ ಇವತ್ತು ಪಶ್ಚಿಮ ದಲ್ಲೇ ಮುಳುಗ್ತಿದಾನೆ ಅಲ್ವಾ ಅಂತಾ ಇಂಗ್ಲೀಷ್ ಸರ್ ಆಗ ತಾನೇ ಮುಳುಗ್ತಾ ಇದ್ದಾ ಸೂರ್ಯನ ತೋರಿಸಿ ಹೇಳ್ತಿದ್ರು... 


ಹೌದು ಸರ್ ಪಶ್ಚಿಮ ದಲ್ಲೇ ಮುಳುಗೋದು ಅಂದೆ ಗುರಾಯ್ಸ್ತ.. !


ಮತ್ತೇ ಎಲ್ಲಾರು ಆಟದಲ್ಲಿ ಮಗ್ನ ರಾಗಿ ಆಡ್ತಿದ್ರು.. ನಾನು ಸೈನ್ಸ್ ಸರ್ ನೇ ನೋಡ್ತಿದ್ದೆ ತಿರುಗಿ ತಿರುಗಿ.. ಅರೇ ಮುಂದೆ ನೋಡಮ್ಮ, ನನ್ನೇ ನೋಡ್ತಿದ್ರೆ ಹೌ ಕ್ಯಾನ್ ಐ ಪ್ಲೇ ಅಂತಾ ಸೈನ್ಸ್ ಸರ್ ಹೇಳ್ತಿದ್ರೆ... ನೀವ್ ಆಡಿ ಸುಮ್ನೇ ಅಂತೇಳಿ ಮತ್ತೇ ಅವರನ್ನೇ ನೋಡ್ತಿದ್ದೆ.. ಹೀಗೇ ಆ ಡೇ ನು ಕಳೆದು ಹೋಯ್ತು... 


ಒಂಬತ್ತನೇ ತರಗತಿ ಅದೇಗೆ ಮುಗಿತೋ ಗೊತ್ತೇ ಆಗ್ಲಿಲ್ಲ..


ಹಾಲಿಡೇ ಬಂದಾಗ ನನ್ ಹತ್ರಾ ಮೊಬೈಲ್ ಇರ್ಲಿಲ್ಲಾ.. ಸೈನ್ಸ್ ಸರ್ ಸಹ ಮಾತಾಡ್ಲೆಬೇಕು ಸದಾ ನೋಡ್ಲೇಬೇಕು ಅನ್ನೋ ತರ ಏನ್ ಇರ್ಲಿಲ್ಲಾ...


ಆವತ್ತು sslc ಹತ್ತನೇ ತರಗತಿ. ಬರೋಬ್ಬರಿ ಎರಡು ತಿಂಗಳ ನಂತ್ರ ಸೈನ್ಸ್ ಸರ್ ನಾ ನೋಡ್ತಿದ್ದೆ... ಅವರೋ ಸ್ವಲ್ಪ ಸೊರಗಿದಂಗೆ ಕಾಣ್ತಿದ್ರು... ನನ್ನ ನೋಡಿದೋರೆ ಅಸೆಂಬ್ಲಿ ಲೇ ಒಂದು ಆತ್ಮೀಯವಾದ ಕಿರು ನಗೆ ಬಿರಿದ್ರು... ಅಷ್ಟು ಸಾಕಿತ್ತು ಈ ಜೀವಕ್ಕೆ., ಆ ದಿನಾನೆಲ್ಲಾ ನೆಮ್ಮದಿಯಾಗಿ ಕಳಿಯೋಕೆ... 


ಆವತ್ತು ಸಂಜೆ ಟೀ ಕುಡಿವಾಗ.. ಸೈನ್ಸ್ ಸರ್ ಬಂದು., ಬೆಳಗ್ಗೆ ಎಷ್ಟೋತ್ತಿಗೆ ಎದ್ದೇಳೋದು ನೀನು ಅಂತ ಕೇಳಿದ್ರು.. 

ನಂಗೆ ಯಾಕೆ ಕೇಳ್ತಿದಾರೆ ಸಡನ್ ಆಗಿ ಅಂತಾ.. ಯಾಕೆ ಅಂದೆ 


ಪ್ರಶ್ನೆ ಕೇಳಿದಾಗ ಉತ್ತರ ಮಾತ್ರ ಹೇಳಮ್ಮ.. ಅದ್ಕೆ ಮತ್ತೇ ನೀನು ಪ್ರಶ್ನೆ ಕೇಳ್ಬೇಡ ಅಂದಾಗ 


ಒಹ್ ಸರಿ ಸರಿ ಅಂತೇಳಿ.. ಮನೇಲಿ ನಾಲ್ಕಕ್ಕೇ ಆದರೇ ಈ ಹಾಸ್ಟೆಲ್ ಲಿ ಐದಕ್ಕೆ ಅಂದೆ 


ಇಲ್ಲಿ ಓಕೆ ಬಟ್ ಮನೇಲಿ ಯಾಕಮ್ಮ ಅಷ್ಟು ಬೇಗ.. ಏನ್ ರಂಗೋಲಿ ಹಾಕೋಕಾ ಅಂದ್ರು... 


ನಂಗೆ ಫುಲ್ ಶಾಕ್, ನಿಜ ಅದೇ. ರಂಗೋಲಿ ಹಾಕೋಕೆನೇ ನಾನು ಬೆಳಗ್ಗೆ ಫೋರ್ ಗೆ ಎದ್ದೇಳ್ತಿದ್ದೆ ಊರಲ್ಲಿ... ಆದ್ರೆ ಇವ್ರಿಗೆ ಹೇಗೆ ಗೊತ್ತಾಯ್ತು ಅಂತಾ ನೋಡ್ತಿದ್ದೆ... 


ಆಗ ಸೈನ್ಸ್ ಸರ್ ನೇ ಮಾತಾಡಿ, ನಾನು ನಿಮ್ ಮನೆ ಹತ್ರಾ ಬಂದಿದ್ದೆ ಅಂದ್ರು 


ನಂಗೆ ಅಗೈನ್ ಶಾಕ್, ಯಾವಾಗ, ಯಾಕೆ, ಎಲ್ಲಿ ಅಂತಾ ಒಂದೇ ಸಮನೇ ಪ್ರಶ್ನೆ ಕೇಳ್ತಿದ್ದೆ... 


ಅಯ್ಯೋ ಶಾಕ್ ಆಗ್ಬೇಡಮ್ಮಾ., ಅವಾಗ ಅವಾಗ ಬರ್ತಿದ್ದೆ. ಅವತ್ತೇನೋ ಒಂದೆರಡು ಸಲ ಬೆಳ್ ಬೆಳಗ್ಗೆನೇ ಬಂದಿದ್ದೆ., ನೀನ್ ರಂಗೋಲಿ ಹಾಕ್ತಿದ್ದೆ ಅಂದ್ರು 


ನಂಗೆ ಖುಷಿಯಾಗಿ., ಮತ್ತೇ ಮಾತಾಡ್ಸಲೇ ಇಲ್ಲಲ್ಲಾ ಅಂದೆ 


ಹಾ ನಿನ್ನಾ ನೋಡಿದ್ನಲ್ಲ ಅದೇ ಖುಷಿಯಾಗಿ ಮಾತಾಡ್ಸೋಕೆ ಬರಲಿಲ್ಲ ಅಂದ್ರು 


ನಾನು ಸರಿ ಬಿಡಿ ಅಂದು ಓದೋಕೆ ಕೂತೇ.. 


ಆವತ್ತು ಊಟ ಸಹ ನನ್ ಜೊತೆಗೆ ಕೂತು ಮಾಡಿದ್ರು..


ಇಂಗ್ಲೀಷ್ ಸರ್ ಅವಾಗ ಅವಾಗ ನೀವಿರೋದು ಸಿ ಸಿ ಕ್ಯಾಮೆರಾ ದ ಕೆಳಗೆ ನೆನಪಿರಲಿ ಅಂತಾ ನೆನಪು ಮಾಡ್ತಾನೇ ಇದ್ರೂ.. 


ಗೊತ್ತಿದೆ ಬಿಡೋ ಅಂತಾ ಸೈನ್ಸ್ ಸರ್ ನಿಧಾನಕ್ಕೆ ಹೇಳ್ತಿದ್ರು..


ಆದ್ರೆ ನಾನ್ ಮಾತ್ರ ನಮ್ಗೆ ಏನ್ ಕಣ್ಣಿಲ್ವಾ ಅಂತಾ ಅವಾಜ್ ನೇ ಹಾಕ್ತಿದ್ದೆ... 


ಆಗ ಸೈನ್ಸ್ ಸರ್ ನ ಮುಖ ನೋಡಿ., ನೋಡು ನೀನಿದಿಯಾ ಅಂತಾ ಟೀಚರ್ ಅನ್ನೋ ಗೌರವ ನೇ ಇಲ್ಲಾ ನನ್ ಮೇಲೆ ಅಂತಾ ಇಂಗ್ಲೀಷ್ ಸರ್ ಉಫ್ ಅಂತಾ ಮುಖ ತಿರುಗಿಸಿ ಕುರೋರು...  


ಹೋಗ್ಲಿ ಬಿಡೋ ಚಿಕ್ಕೊಳು ಅಂತಾ ಸೈನ್ಸ್ ಸರ್ ನನ್ನಾ ತೋರಿಸಿ ಹೇಳೋರು 


ಚಿಕ್ಕೊಳಾ..!! ಮಗ ಒಮ್ಮೆ ಅವಳ ಮುಖ ನೋಡೋ ಅಂತಾ ಇಂಗ್ಲೀಷ್ ಸರ್ ನನ್ನಾ ತೋರಿಸ್ತಿದ್ರೆ, ನಾನೋ ಫುಲ್ ಚಿಕ್ಕ ಹುಡುಗಿ ತರ ಮುಖ ಮಾಡಿರ್ತೀದ್ದೇ... 


ಯಪ್ಪಾ ನಿಮ್ ಜೊತೆ ನಾನ್ ಕೂರಲ್ಲ ಅಂತೇಳಿ ಇಂಗ್ಲಿಷ್ ಸರ್ ಎದ್ದು ಜೂನಿಯರ್ಸ ಹತ್ರಾ ಹೋಗೋರು.. ಆಗ ಸೈನ್ಸ್ ಸರ್, " ಅಯ್ಯೋ ಇರಲಿ ಬನ್ನಿ ಸರ್ ಅಂತಿದ್ರು ".. ಅಂಗೆ ನಂಗೆ ಸೇಯ್ ಸಾರೀ ಅಂತಿದ್ರು... 

ನಾನೂ ಪ್ರತಿಸಲ ಇಂಗ್ಲೀಷ್ ಸರ್ ಮುನಿಸಿಕೊಂಡಾಗ.. ಸಾರೀ ಸಾರೀ ಅಂತಾ ಚಿಕ್ಕ ಮಕ್ಕಳ ತರ ಕಿವಿ ಇಡಿದು ಕೇಳ್ತಿದ್ದೆ... 


ಅಮ್ಮಯ್ಯ ನಿಮ್ ಡ್ರಾಮಾ ನೋಡೋಕೆ ಆಗ್ತಿಲ್ಲಾ ಅಂತಾ ಅವರು ನಗೋರು.. ಜೊತೆ ಸೇರಿ ನಾವು ನಗ್ತೀದ್ವಿ...


ನಮ್ಮಲ್ಲಿ ಆರನೇ ತರಗತಿ ಯಿಂದ ಹತ್ತನೇ ತರಗತಿ ವರೆಗೂ ಇತ್ತು... ಸೊ ಕೊನೆ ವರ್ಷದ ಅಂದ್ರೆ ಹತ್ತನೇ ತರಗತಿ ಗೆ ಬಂದ ವಿದ್ಯಾರ್ಥಿ/ನೀ ಗಳಿಗೆ ಪ್ರವಾಸ ಏರ್ಪಡಿಸುತ್ತಿದ್ದರು... ಪ್ರತಿಸಲದಂತೆ ನಮಗೂ ಹೇಳಿದ್ರು, ನಾವು ಎಲ್ರು ಹೋಗೋಕೆ ರೆಡಿ ಅಂದ್ವಿ... ಮೈಸೂರ್, ಮಡಿಕೇರಿ, ಯಡಿಯೂರು ಮತ್ತೇ ಅಲ್ಲಲ್ಲಿ ಪ್ರಸಿದ್ದಿ ಸ್ಥಳಗಳ್ನ ಹೇಳಿದ್ರು... 


ಅವತ್ತು ಹೊರಡೋ ದಿನ ರಾತ್ರಿ 10:30 pm ಕ್ಕೆ ಬಿಡೋದಾಗಿತ್ತು... 


ನಾವೆಲ್ಲರೂ ರಾತ್ರಿ ಚಳಿ ಇರುತ್ತೆ ಅಂತೇಳಿ ಫುಲ್ ಬಾಡಿ ಕವರ್ ಮಾಡ್ಕೊಂಡು ಬಂದಿದ್ರೆ, ಈ ರಚನಾ ಮಾತ್ರ ಮಿನಿ ಸ್ಕರ್ಟ್ ಹಾಕೊಂಡು ಸ್ಲೀವ್ ಲೆಸ್ ಟಾಪ್ ಹಾಕೊಂಡು ಬಂದಿದ್ಲು... 

ಎಲ್ಲಾ ಹುಡುಗಿರು ಅವಳ ಬಗ್ಗೆನೇ ಮಾತಾಡ್ತಾ ಇದ್ರೂ...


ಹುಡುಗರ ಬಗ್ಗೆ ನಮ್ಗೆ ಗೊತ್ತಿಲ್ಲಾ ...


ನಾವೆಲ್ಲರೂ ನಮ್ಗೆ ಇಷ್ಟಾ ಆದಂತಹ ಸೀಟ್ ಲಿ ಹೋಗಿ ಕುತ್ಗೊಂದ್ವಿ.. 


ಟೀಚರ್ಸ್ ಸಹ ಅಲ್ಲಲ್ಲಿ ಸ್ಟೂಡೆಂಟ್ಸ್ ಹತ್ರಾ ಹತ್ರಾ ಕುತ್ಗೊಂಡಿದ್ರು... 


ಬಸ್ ಮುಂದೆ ಮುಂದೆ ಹೋಗ್ತಾ.. ಸಾಂಗ್ ಹಾಕಿದ್ರು... ಸ್ವಲ್ಪ ಸ್ಟೂಡೆಂಟ್ಸ್ ಡಾನ್ಸ್ ಸಾಂಗ್ ಹಾಡ್ತಾ ಎಂಜಾಯ್ ಮಾಡ್ತಿದ್ರು... 


ಮಧ್ಯ ರಾತ್ರಿ ಆಗ್ತಾ ಆಗ್ತಾ ಸ್ವಲ್ಪ ಸ್ಟೂಡೆಂಟ್ಸ್ ನಿದ್ದೆ ಗೆ ಜಾರಿದ್ರು... 


ನನ್ ಪಕ್ಕಾ ಕೂತಿದ್ದಾ ಲಕ್ಷ್ಮಿ " ಹೇ ನಿದ್ದೆ ಮಾಡೇ " ಅಂದ್ಲು.. 


ನಂಗೋ ಜರ್ನಿ ಮಾಡುವಾಗ ನಿದ್ದೆ ಮಾತೇ ಇಲ್ಲಾ.. ಅದ್ರಲ್ಲೂ ನಿದ್ದೆ ಬಂದ್ರೆ ಪಿಲ್ಲೋ ಇಲ್ಲದೇ ಮಲಗೋ ಮಾತು ಖಂಡಿತ ಇಲ್ಲಾ.. " ನೀನ್ ಮಲಗೆ ನಂಗೆ ನಿದ್ದೆ ಬಂದಿಲ್ಲಾ " ಅಂದೆ.. 


ಒಹ್ ಸೈನ್ಸ್ ಸರ್ ನಾ ಕರಿಲಾ ಅಂದ್ಲು... 


ನಂಗೆ ಫುಲ್ ಶಾಕ್ ಆಗಿ " ಹೇ ಅವರ್ಯಾಕೆ " ಅಂದೆ.. ಎಲ್ಲಿ ನಮ್ ವಿಷಯ ಗೊತ್ತಾಗೋಯ್ತಾ ಅಂತಾ ಬೆದರಿದ್ದೇ... 


ಹೇ ನಮ್ಗೆಲ್ಲಾ ಗೊತ್ತು ಬಿಡೇ.. ಅಂದ್ಲು ನಗ್ತಾ 


ನಾನು, ಏನ್ ಗೊತ್ತೋ ಇವಳಿಗೆ ಅಂತ "ಏನೇ ಗೊತ್ತು ಅಂದೆ "..


ಲೇ ಬಿಡೇ ಇಡೀ ಸ್ಕೂಲ್ ಗೆ ಗೊತ್ತಿದೆ ನಿಮ್ ವಿಷಯ ಅಂದ್ಲು.. 


ಇಡೀ ಸ್ಕೂಲ್..!! ಗೆ ಅಂತಾ ಕೇಳಿ ಒಮ್ಮೆ ಭಯ ಆಯ್ತು ಪ್ರಿನ್ಸಿಪಾಲ್ ಗೆ ಗೊತ್ತಾ..!! ಅಂತಾ.. ನಾವು ಇನ್ನು ಏನೇನು ಮಾತಾಡುವಾಗ ಎದ್ದು ಬಂದ್ರು ಸೈನ್ಸ್ ಸರ್ " ಏನ್ರಮ್ಮಾ ನೀವು ರಾತ್ರಿ ನೂ ಮಾತಾಡೋದು ನಿಲ್ಸಲ್ಲ ಅಲಾ "ಅಂದ್ರು... 


ನಾನು ಸುಮ್ನೇ ಅವರನ್ನೇ ನೋಡ್ತಿದ್ದೆ.. ಆದ್ರೆ ಲಕ್ಷ್ಮಿ ಮಾತ್ರ ಎದ್ದು ನಾನ್ ಹಿಂದೆ ಕೂರ್ತೀನಿ ಅಂದ್ಲು.. 


ಅರೇ ಯಾಕೆ ಕುತ್ಗೊ ಇಲ್ಲೇ ಅಂದೆ.. 


ಆದ್ರೆ ಅವಳೊ, ಬೇಡ ಬೇಡ.. ನೀವ್ ಕುತ್ಗೋಳಿ ಸರ್ ಅಂತೇಳಿ ಮುಸಿ ಮುಸಿ ನಗ್ತಾ ಎದ್ದು ಹೋಗೆ ಬಿಟ್ಲು... 


ಸೈನ್ಸ್ ಸರ್ ಬಂದು ನನ್ ಪಕ್ಕಾ ಕುತ್ಗೊಂಡ್ರು... ಅಲ್ಲಾ ಸುಮ್ನೇ ಮಲಗೋಕೆ ಆಗಲ್ವಾ ಅಂದ್ರು... 


ನಾನು : ನಿದ್ದೆ ಬರಲಿಲ್ಲ 


ಸರ್ : ಯಾಕೋ..?? 


ನಾನು : ಅಂಗೆ ನಂಗೆ ಜರ್ನಿ ಲಿ ನಿದ್ದೆ ಬರಲ್ಲಾ 


ಸರ್ : ಒಹ್ ಮತ್ತೇನು ಮಾಡೋದು ಇವಾಗ 


ನಾನು : ನೀವ್ ಮಲಗಿ 


ಸರ್ : ನೀನ್ ಪಕ್ಕಾ ಕೂತು ಮಲಗು ಅಂದ್ರೆ ಹೆಂಗಮ್ಮಾ.. !!


ನಾನು : ನೀವೇ ತಾನೇ ಬಂದು ಕೂತಿರೋದು.. ಮಲಗಿ ಸುಮ್ನೇ ಅಂದೆ 


ಸರ್ : ಸರಿ.


ಅಂತೇಳಿ ಮಲಗೋಕೆ ನೋಡಿದ್ರು ಯಾಕೋ ನಿದ್ದೆ ಬರಲಿಲ್ಲ ಅನ್ಸತ್ತೆ.. ಮತ್ತೇ ನನ್ ಕಡೆ ನೋಡಿದ್ರು... 


ನಾನು, ಏನು ಅಂದೆ.. 


ಮಲ್ಕೋಳೊ ಇಲ್ಲಾ ಅಂದ್ರೆ ಬೆಳಗ್ಗೆನೇ ನಿದ್ದೆ ಬರುತ್ತೆ. ನಾವು ಐದು ಗಂಟೆಗೆ ದೇವಸ್ಥಾನ ದಲ್ಲಿ ಇರ್ಬೇಕು ಅಂದ್ರು... 


ಅಯ್ಯೋ ನಿದ್ದೆ ಬರಲಿಲ್ಲ ಅಂದ್ರೆ ನಾನೇಗೆ ಮಲ್ಕೋಳ್ಳಿ ಅಂದೆ..


ಲಾಲಿ ಹಾಡ್ಲಾ ಅಂದ್ರು 


ಅಯ್ಯೋ ಬೇಡ ಸರ್. ನಿಮ್ ಹೆಗಲನ್ನಾ ಸ್ವಲ್ಪ ಕೆಳಗೆ ಮಾಡಿದ್ರೆ, ನಾನು ಮಲಗ್ತೀನಿ ಅಂದೆ 


ಅವರೋ ಪೂರ್ತಿ ಕೆಳಗೆ ಸರಿದು ಕುತ್ಗೊಂಡ್ರು.. ನಾನು ಅವರ ಭುಜದ ಮೇಲೆ ತಲೆ ಇಟ್ಟು ಆರಾಮಾಗಿ ಮಲ್ಗಿದೆ...


ಬೆಳಗ್ಗೆ ಆಗಿದ್ದೆ ಗೊತ್ತಾಗ್ಲಿಲ್ಲಾ... 


ಒಂದು ಹಾಸ್ಟೆಲ್ ಮುಂದೆ ನಿಂತಿತ್ತು ಬಸ್. 


ನಾನು ಕಣ್ಣು ಬಿಟ್ಟು, ಇಷ್ಟು ಬೇಗ ಬಂತಾ ಅಂದೆ.. 


ಸೈನ್ಸ್ ಸರ್ ನನ್ನಾ ನೋಡಿ ಗುಡ್ ಮಾರ್ನಿಂಗ್ ಅಂದು.. " ಹಲೋ ಗೈಸ ಎಲ್ಲಾರು ಇಲ್ಲೇ ಇರೋ ಹಾಸ್ಟೆಲ್ ಲಿ ಹೋಗಿ ಬೇಗ ಬೇಗ ಸ್ನಾನ ಮಾಡ್ಕೊಂಡು ಬರ್ಬೇಕು.. ಬ್ರೇಕ್ಫಾಸ್ಟ್ ಎಲ್ಲಾ ದೇವಸ್ಥಾನ ದಲ್ಲೇ " ಅಂದ್ರು 


ಆಗ ಹಿಂದೆ ಕೂತಿದ್ದ ಒಬ್ಬ ಹುಡುಗ " ಸರ್ ಪ್ರಸಾದ ತಿಂದು ನಾವೆಲ್ಲ ಟ್ರಿಪ್ ಮಾಡೋಕೆ ಹೇಗೆ ಸಾಧ್ಯ ಸರ್, ಹೊಟ್ಟೆ ತುಂಬಲ್ಲ " ಅಂದ. 


ಇತ್ತಾ ಎಲ್ಲಾ ಸ್ಟೂಡೆಂಟ್ಸ್ ನೂ ಜೋರಾಗಿ ನಗೋಕೆ ಶುರು ಮಾಡಿದ್ರು.. ಆಗ ಸೈನ್ಸ್ ಸರ್ ನೇ ಮಾತಾಡಿ, " ಪ್ರಸಾದ ಅಲ್ಲಪಾ, ಅಲ್ಲಿ ದಿನಾ ಬೆಳಗ್ಗೆ ಅನ್ನ ದಾಸೋಹ ಇರುತ್ತೆ. ಸೊ ಹೊಟ್ಟೆ ತುಂಬಾ ತಿನ್ಬೋದು ". ಅಂದ್ರು. 


ಮತ್ತೇ ಆ ಹುಡುಗ ಮಾತಾಡಿ, ಸರ್ ಬೆಳ್ ಬೆಳಗ್ಗೆ ಅನ್ನ ನಾ..!!?? ಅಂದ. 


ಅಯ್ಯೋ ಮಾರಾಯ, ಅನ್ನ ಅಲ್ವೋ ತಿಂಡಿ ದಾಸೋಹ ಓಕೆ ನಾ ಅಂತಾ ತಲೆ ಚಚ್ಚಿಕೊಂಡು ಕನ್ನಡ ಸರ್ ಹೇಳಿದ್ರು... 


ಸರಿ ಸರಿ ಅಂತೇಳಿ ನಾವೆಲ್ಲರೂ ಹುಡುಗೀರು ಗರ್ಲ್ಸ್ ರೂಮ್ ಗೆ ಹೋಗಿ ಸ್ನಾನ ಎಲ್ಲಾ ಮಾಡ್ಕೊಂಡ್ವಿ.. ಹುಡುಗ್ರು ಸಹ ಬಾಯ್ಸ್ ಹಾಸ್ಟೆಲ್ ಗೆ ಹೋಗಿ ರೆಡಿ ಆದ್ರೂ... 


ನಾವೆಲ್ಲರೂ ಹೋಗಿ ದೇವರ ದರ್ಶನ ತಗೊಂಡು.. ತಿಂಡಿ ದಾಸೋಹ ಮುಗಿಸಿಕೊಂಡು ಮುಂದೆ ಬೇರೆ ಪ್ಲೇಸ್ ನೋಡೋಕೆ ಬಸ್ ಹತ್ತಿದ್ವಿ... 


ಹೀಗೇ ಮೈಸೂರು, ಮಡಿಕೇರಿ, ತಲಕಾಡು, ಕಾವೇರಿ ಉಗಮ ಸ್ನಾನ ಹೀಗೇ ಎಲ್ಲಾ ಪ್ರಸಿದ್ಧ ಸ್ಥಳ ಗಳ್ನ ನೋಡ್ಕೊಂಡು ಬಂದ್ವಿ ಮೂರು ದಿನಾ ಗಳಲ್ಲಿ... 


ರಾತ್ರಿ ಹನ್ನೊಂದು ಆಗಿತ್ತು ನಾವೆಲ್ಲರೂ ಹಾಸ್ಟೆಲ್ ರೀಚ್ ಆಗೋಥಿಗೆ..


ಎಲ್ಲಾರು ಸುಸ್ತಾಗಿದ್ರಿಂದ ಬಸ್ ಇಳಿದೊರೆ ಬೇಗ ಬೇಗ ರೂಮ್ ಸೇರ್ಕೊಂತಾ ಇದ್ರೂ..


ನಾನು ಇನ್ನೇನು ಹೊರಟಿದ್ದೆ ಆಗ ಕರೆದರು ಸೈನ್ಸ್ ಸರ್.. 


ಏನು ಅಂತಾ ನಾನು ಕೇಳಿ ಅಲ್ಲೇ ನಿಂತಾಗ.. 


ತಗೋ ಅಂತಾ ಒಂದು ಕವರ್ ಕೊಟ್ರು.. 


ನಾನು ಏನೀದು ಅಂತಾ ಕೇಳಿದೆ 


ರೂಮ್ ಗೆ ಹೋಗಿ ನೋಡು ಅಂದ್ರು 


ನಾನು, ಮತ್ತೇ ಲೆಟರ್ ಹಾ ಅಂದೆ.. ಹುಬ್ಬು ಹಾರಿಸಿ.. 


ಅವರೋ ಇಲ್ಲಾ ಇಲ್ಲಾ ಇದು ಬೇರೇನೇ ಅಂತಾ ಕೊಟ್ಟಾಗ.. ಸರಿ ಅಂತೇಳಿ ತಗೊಂಡು ರೂಮ್ ಗೆ ಬಂದು ಓಪನ್ ಮಾಡಿದೆ ಅದೊಂದು.. 


ರಾಧಾ ಕೃಷ್ಣಾ ಜೋಡಿಯಾಗಿ ಇದ್ದು ಮೇಲಿಂದ ನಕ್ಷತ್ರಗಳು ಹೂವುಗಳ ರೀತಿ ಬೀಳ್ತಾ ಇರೋತರ ಇಟ್ಟು ಅದರ ಹಿಂದೆ ಎರಡು ಪೆನ್ ಇಡೋ ಜಾಗ ಇತ್ತು.. ಅದ್ರಲ್ಲಿ ಸರ್ ಎರಡು ಪೇಪರ್ಸ್ ನಾ ಪೆನ್ ತರ ಮಡಚಿ ಇಟ್ಟಿದ್ರು.. ನಾನು ಅದೇನು ಅಂತಾ ತಗೆದು ಓದಿದೆ.. ಅದ್ರಲ್ಲಿ ಹೀಗಿತ್ತು.. " ನಮ್ ಪ್ರೀತಿನ ನಾನು ರಾಧೆ ಕೃಷ್ಣ ಗೆ ಹೋಲಿಕೆ ಮಾಡ್ತೀನಿ, ಕೃಷ್ಣ ಗೆ ರಾಧೆ, ರಾಧೆ ಗೆ ಕೃಷ್ಣಾ ಕೊನೆಗೆ ಸಿಗೋದೇ ಇಲ್ಲಾ ಆದ್ರೂ ಅವರ ಪ್ರೀತಿ ಮಾತ್ರ ಅಜರಾಮರ.. ಹಾಗೆ ನೇ ನಂದು..ಆದ್ರೆ ಕೃಷ್ಣಾ ನಾ ತರ ಗಟ್ಟಿ ಮನಸ್ಸು ನಂದಲ್ಲ.. ನಿನ್ನಾ ಬಿಟ್ಟು ಬದುಕೋ ಆ ಕ್ಷಣ ನೂ ನಾನು ಕಲ್ಪನೆ ಸಹ ಮಾಡ್ಕೋಳೋಕೆ ಇಷ್ಟಾ ಪಡಲ್ಲ.. ನಿನ್ನೇ ಪ್ರೀತಿಸುವ ಪ್ರೇಮಿ... ". 


ಇದ್ನ ಓದಿ ತುಂಬಾ ಖುಷಿ ಆಯ್ತು,. ಅವರ ಪ್ರೀತಿಯ ಆಳ ಅರ್ಥ ಆಯ್ತು., ನನ್ನ ಬದುಕಿನ ಸಾರ್ಥಕತೇ ಅವರ ಕೈಯಲ್ಲಿ ಇದೆ ಅಂದಗೆ ಆಯ್ತು.. ಒಟ್ನಲ್ಲಿ ಅವರು ಇದ್ರೆ ಈ ಬಾಳು ಚೆಂದ ಅನ್ನೋ ಭಾವನೆ ಬಂದಿತ್ತು.


ಹೀಗೇ ದಿನಗಳು ಸಾಗ್ತಾ ಇದ್ವು.. ಹತ್ತನೇ ತರಗತಿ ಪರೀಕ್ಷೆ ಗಳು ಹತ್ರಾ ಬಂದಿದ್ವು.. ನಾವೆಲ್ಲರೂ ತುಂಬಾ ಶ್ರದ್ದೆ ಯಿಂದ ಓದ್ತಾ ಇದ್ವಿ.. ಈ ನಡುವೆ ಸೈನ್ಸ್ ಸರ್ ಚೆನ್ನಾಗಿ ಓದ್ಕೋ ಅನ್ನೋದು ಬಿಟ್ಟು ಬೇರೇನೂ ಮಾತಾಡ್ತಾ ಇರ್ಲಿಲ್ಲಾ.. ನಾನು ಎಕ್ಸಾಮ್ ಅಂತಾ ಹಗಲು ರಾತ್ರಿ ಓದ್ತಾ ನೇ ಇರ್ತಿದ್ದೆ.. 


ಆವತ್ತು sslc ಹಾ ಬೋರ್ಡ್ ಎಕ್ಸಾಮ್ ನಾ ಹಾಲ್ ಟಿಕೆಟ್ ಕೊಡ್ತಾ ಇದ್ರೂ ಶುಕ್ರವಾರ. ನಾವೆಲ್ಲರೂ ಸ್ನಾನ ಮಾಡಿ, ಪೂಜೆ ಮಾಡ್ಕೊಂಡು.. ತುಂಬಾ ಶ್ರದ್ದೆ ಯಿಂದ ಹೋಗಿ ಹಾಲ್ ಟಿಕೆಟ್ ಇಸ್ಕೊಂಡು ಬಂದು ರೂಮ್ ಅಲ್ಲಿ ಇರೋ ಕೃಷ್ಣ ಗಣೇಶ, ಆಂಜನೇಯ, ಎಲ್ಲಮ್ಮ ದೇವಿ ಮತ್ತೇ ಸರಸ್ವತಿ ದೇವಿ ಮುಂದೆ ಎಲ್ಲರ ಹಾಲ್ ಟಿಕೆಟ್ನ್ನೂ ಇಟ್ಟು ಪೂಜೆ ಮಾಡಿದ್ವಿ..  


ಸೋಮವಾರ ಆವತ್ತು ಮೊದಲನೇ ಪರೀಕ್ಷೆ ಕನ್ನಡ .. ನಾವೆಲ್ಲರೂ ತುಂಬಾ ಭಯದಿಂದ ನೇ ಹೋಗಿದ್ವಿ.. 

ನಮ್ ಜೊತೆಗೆ ಬೇರೆ ಶಾಲೆಯ ಮಕ್ಕಳು ಬಂದಿದ್ರು ಪರೀಕ್ಷೆ ಬರಿಯೋಕೆ.. ನಾವೆಲ್ಲರೂ ಬೇಗ ಬೇಗ ಹೋಗಿ ನಮ್ ರೆಜಿಸ್ಟರ್ ನಂಬರ್ ಹತ್ರಾ ಕುತ್ಗೊಂಡು.. ಪ್ರಶ್ನೆ ಪತ್ರಿಕೆ ಗೆ ಕಾಯ್ತಾ ಇದ್ವಿ.. ಪ್ರಶ್ನೆ ಪತ್ರಿಕೆ ಕೈ ಗೆ ಸಿಕ್ಕಾಗ ಇರೋ ಬರೋ ಎಲ್ಲಾ ದೇವರನ್ನು ನೆಂಸ್ಕೊಂಡು.. ಪ್ರಶ್ನೆ ಪತ್ರಿಕೆ ನೋಡಿದೆ.. ನಿಜ್ವಾಗ್ಲೂ ಅಲ್ಲಿ ಬಂದಿದ್ದ ಎಲ್ಲರಿಗೂ ಕೇಳಿಸೋ ಆಗೇ ಜೋರಾಗೆ ನಕ್ಕಿದ್ದೇ.. ಅಲ್ಲಿ ಬಂದಿದ್ದಂತಹ ಎಕ್ಸಾಮಿನರ್ ಸಹ ಬಂದು " ಯಾಕಮ್ಮ ನಗ್ತಿದೀಯಾ, ಎಕ್ಸಾಮ್ ಅದ್ರಲ್ಲೂ ಫಸ್ಟ್ ಪೇಪರ್ ಅಂತಾ ಎಲ್ರು ಭಯದಿಂದಾ ಬರೀತಾ ಇದಾರೆ ನೀನ್ ನೋಡಿದ್ರೆ ನಗ್ತಿದೀಯಾ, ಏನು ಕನಸೇನಾದ್ರೂ ಕಂಡ್ಯಾ ಅಂದ್ರು "..


ನಾನು, ನನ್ ದಡ್ಡ ತನಕ್ಕೆ ನಕ್ಕು ಇಲ್ಲಾ ಸರ್ ಆಗೇನಿಲ್ಲ ಅಂತೇಳಿ ಸುಮ್ನೇ ಬರಿಯೋಕೆ ಶುರು ಮಾಡಿದೆ...


ಅಕ್ಟುಲ್ಯ್ ನಾನು ನಕ್ಕಿದ್ದು ಯಾಕೆ ಅಂದ್ರೆ ಪ್ರಶ್ನೆ ಪತ್ರಿಕೆ ಬಾಳ ಈಸಿ ಇತ್ತು.. ಈಸಿ ಅಂದ್ರೆ ಈಸಿ ಇತ್ತು.. ಅಯ್ಯೋ ಅಷ್ಟೊಂದು ಟೆನ್ಶನ್ ತಗೊಂಡು ಎಕ್ಸಾಮ್ ಬರಿಯೋಕೆ ಬಂದ್ರೆ ಇಷ್ಟು ಈಸಿ ನಾ ಕೊಡೋದು..!! ಅಂತಾ ನಂಗೆ ನಗು ಬಂದಿತ್ತು...


ಪರೀಕ್ಷೆ ಮುಗಿತು.. ಎಲ್ಲರ ಬಾಯಲ್ಲೂ ಅದೇ ಪೇಪರ್ ಬಾಳ ಈಸಿ ಇತ್ತು ಅನ್ನೋದೇ.. 


ನೆಕ್ಸ್ಟ್ ಪೇಪರ್ ಬರಿಯೋಕೆ ರೆಡಿ ಆದ್ವಿ.. ಇಂಗೆ ಇಂಗ್ಲೀಷ್, ಮ್ಯಾಥ್ಸ್, ಸೈನ್ಸ್ ಪರೀಕ್ಷೆ ಗಳು ಮುಗಿದಿದ್ವ..ಇನ್ನೇನು ಸೋಶಿಯಲ್ ಸ್ಟಡೀಸ್ ಮತ್ತೇ ಹಿಂದಿ ಎಕ್ಸಾಮ್ ಇತ್ತು.. ಆವಾಗ್ಲೇ ನಂಗೆ ಜ್ವರ ಬಂದು ಬಿಟ್ಟಿತ್ತು.. ಆದ್ರೂ sslc ಎಕ್ಸಾಮ್ ಅಂತಾ ಹೇಗೋ ಕಷ್ಟ ಪಟ್ಟು ಓದ್ತಾ ಇದ್ದೇ... ಬಟ್ ಈ ತಲೆನೋವು ಜ್ವರ ನನ್ನಾ ಹಾಸ್ಪಿಟಲ್ ಮೆಟ್ಟಿಲು ಹತ್ತೋ ತರ ಮಾಡಿಬಿಟ್ಟಿತ್ತು... 


ಹಾಸ್ಟೆಲ್ ಲಿ ನರ್ಸ್ ಮೇಡಂ ಇದ್ರೂ.. ಅವರು ಎಕ್ಸಾಮ್ ಬೇರೆ ಇದೆ ಇಂಗೆ ಇಲ್ಲೇ ಟ್ರೀಟ್ಮೆಂಟ್ ಕೊಟ್ರೆ ಆಗಲ್ಲಾ.. ಹಾಸ್ಪಿಟಲ್ ಗೆ ಕರ್ಕೊಂಡು ಹೋಗಿ ಒಂದು ಇಂಜೆಕ್ಷನ್ ಹಾಕ್ಸೋಣ ಅವಾಗ ಬೇಗ ಉಷಾರಾಗುತ್ತೇ ಅಂದ್ರು.. ತಡ ಮಾಡದೇ ಸೈನ್ಸ್ ಸರ್ ಒಂದು ಆಟೋ ಕರೆಸಿ ನರ್ಸ್ ಮೇಡಂ ಜೊತೆಗೆ ನನ್ನಾ ಕರ್ಕೊಂಡು ಹಾಸ್ಪಿಟಲ್ ಗೆ ಬಂದೆ ಬಿಟ್ಟಿದ್ರು... ನಾನು ಎಷ್ಟು ಬೇಡ ಅಂದ್ರು ಇಂಜೆಕ್ಷನ್ ಚುಚ್ಚಿಸಿದ್ರು.. ನಾನು ಅಳೋದು ನೋಡೋಕೆ ಆಗದೇ ಸೈನ್ಸ್ ಸರ್ ಹೊರಗೆ ಹೋಗಿದ್ರು... ನರ್ಸ್ ಮೇಡಂ ನನ್ನಾ ನಿಧಾನಕ್ಕೆ ಹಾಸ್ಪಿಟಲ್ಯಿಂದ ಆಟೋ ಹತ್ರಾ ಕರ್ಕೊಂಡು ಬರುವಾಗ ಸೈನ್ಸ್ ಸರ್ ಬಂದ್ರು ಅವರ ಕಣ್ಣು ರೆಡ್ ಆಗಿತ್ತು.. ಅತ್ತಿರ್ಬೋದು ಅನ್ಸ್ತು.. ಅಯ್ಯೋ ರಾಮ ಅನ್ಕೊಂಡು ನಾನು ಸುಮ್ನೇ ಕೂತಿದ್ದೆ.. ಆಗ ಸೈನ್ಸ್ ಸರ್ ಒಂದು ಆಪಲ್ ಕೊಟ್ರು ಕಟ್ ಮಾಡಿ ಆಟೋ ದಲ್ಲೇ... ನಾನು ಸುಮ್ನೇ ತಿಂತಿದ್ದೆ..

ನರ್ಸ್ ಮೇಡಂ ಗೆ ಎಲ್ಲಾ ಅಯೋಮಾಯ.. ಇಷ್ಟೊಂದು ಕಾಳಜಿ ಅವಶ್ಯಕತೆ ಇದೆಯಾ..!!?? ಒಂದು ಗರ್ಲ್ ಸ್ಟೂಡೆಂಟ್ ಗೆ ಒಬ್ಬ ಬಾಯ್ ಸರ್ ಯಿಂದ ಅಂತಾ... ಮೇಡಂ ಗೆ ಏನೋ ಒಂದು ಅನುಮಾನ ಶುರು ಆಗಿತ್ತು... 


ಸೈನ್ಸ್ ಸರ್ ಕಾಳಜಿಯಿಂದ ಮತ್ತೇ ಅನುಮಾನ ದಿಂದಾ ನೇ ಅನುಮತಿನೇ ಪಡೆಯದೇ ಬೇಡ ಬೇಡ ಅಂದ್ರು ನರ್ಸ್ ಮೇಡಂ ಗುಳಿಗೆ ಕೊಟ್ಟು ಗಂಜಿ ಕುಡಿಸಿ ಬೇಗ ನೇ ಉಷಾರು ಮಾಡಿದ್ರು... 


ಆವತ್ತು ಹಿಂದಿ ಎಕ್ಸಾಮ್ ಇತ್ತು.. ಹೇಗೋ ಸ್ವಲ್ಪ ಉಷಾರಾಗಿದ್ರಿಂದ ನಾನು ಏನೇನೋ ಓದ್ಕೊಂಡಿದ್ದೇ.. ಬೆಳಗ್ಗೆನೇ ಐದು ಗಂಟೆಗೆ ಎಲ್ರು ಓದೋಕೆ ಅಂತಾ ಗ್ರೌಂಡ್ ಗೆ ಹೋಗಿದ್ರು ನಾನು ಹೋಗ್ಬೇಕಿತ್ತು ಆದ್ರೆ ಉಷಾರಿಲ್ಲ ಅಂತಾ ಎರಡು ದಿನಾ ಸ್ನಾನ ನೇ ಮಾಡಿದ್ದಿಲ್ಲ ಅದ್ಕೆ ಫಸ್ಟ್ ಸ್ನಾನ ಮುಗಿಸಿಕೊಂಡು ಆಮೇಲೆ ರಿವಿಸನ್ ಮಾಡೋಣ ಅಂತಾ.. ತಲೆ ಸ್ನಾನ ಮಾಡಿದ್ದೆ..


ಅಸ್ಟ್ರಲ್ಲೇ ಸೈನ್ಸ್ ಸರ್, ಗ್ರೌಂಡ್ ಹತ್ರಾ ಬಂದಿದ್ರು... ಎಕ್ಸಾಮ್ ಟೈಮ್ ಲಿ ಯಾವ್ ಎಕ್ಸಾಮ್ ಇರುತ್ತೋ ಆ ಟೀಚರ್ಸ್ ಬರ್ತಿದ್ರು ಗ್ರೌಂಡ್ ಗೆ ಸೊ ಇವತ್ತು ಹಿಂದಿ ಇದೆ ಹಿಂದಿ ಮಿಸ್ ಬರ್ಬೇಕಿತ್ತು ಇವ್ರ್ಯಾಕೆ ಬಂದಿದಾರೆ ಅಂತಾ ನಾನು ಕಿಡಕಿಯಿಂದ ನೇ ನೋಡ್ತಾ ಇದ್ದೇ... ನಾನು ತಲೆ ಒರೆಸಿಕೊಂಡು.. ರೆಡಿ ಆಗಿ ಬುಕ್ ತಗೊಂಡು ಹೋದೆ ಗ್ರೌಂಡ್ ಲಿ ಓದ್ಕೊಳೋಣ ಅಂತಾ.. 


ನಾನು ಹೋಗುವಾಗ ಸೈನ್ಸ್ ಸರ್ ನನ್ ಹತ್ರಾ ನೇ ಬಂದು.. ಉಷಾರಾಗಿದ್ದಿಯಾ ತಾನೇ ಅಂದ್ರು..!!??  


ಇದ್ನ ಕೇಳೋಕೆ ಇಷ್ಟು ಬೇಗ ಎದ್ದು ಬರೋ ಅವಶ್ಯಕತೆ ಇತ್ತಾ ಅಂತಾ ಯೋಚಿಸ್ತಾ.. " ಹು ನಿನ್ನೇನೆ ಉಷಾರಾಯ್ತು ಸರ್ " ಅಂದೆ. 


ಹ್ಯಾಪಿ ಬರ್ತ್ಡೇ ಅಂದ್ರು.. 


ನಿಜಕ್ಕೂ ಎಕ್ಸಾಮ್ ಅನ್ನೋ ಟೆನ್ಶನ್ ಗೊ ಅಥವಾ ಉಷಾರಿಲ್ಲ ಅನ್ನೋ ಕಾರಣಕ್ಕೋ ನನ್ ಬರ್ತ್ಡೇ..!! ದಿನಾ ನೇ ನಂಗೆ ಮರೆತು ಹೋಗಿತ್ತು......!!!!!!  


ಒಹ್ ಥಾಂಕ್ ಯು ಸರ್. ನಂಗೆ ಮರೆತೇ ಹೋಗಿತ್ತು ಅಂದೆ.. 


ಸರಿ ಅಂತೇಳಿ ಸರ್ ಓದ್ಕೋ ಅಂತೇಳಿ ಹೋಗುವಾಗ.. " ಇಷ್ಟು ಬೆಳಗ್ಗೆನೇ, ಅದ್ರಲ್ಲೂ ಉಷಾರಿಲ್ಲ ಬೇಕಿತ್ತಾ ಈ ತಲೆ ಸ್ನಾನ " ಅಂದು ಹೋದ್ರು  ಹೌದಲ್ವಾ ಅಂದ್ರು ನನ್ ಬರ್ತ್ಡೇ ಗು ತಲೆ ಸ್ನಾನ ಮಾಡಿದಂಗೆ ಆಯ್ತು ಅನ್ಕೊಂಡು ಸುಮ್ನಾದೇ.. 


ಅಂಗೆ ಎಲ್ಲಾ ಎಕ್ಸಾಮ್ ತರ ಹಿಂದಿ ಮತ್ತೇ ಸೋಶಿಯಲ್ ಸ್ಟಡೀಸ್ ಸಹ ಮುಗಿತು... 


ಎಸ್ ಎಸ್ ಎಲ್ ಸಿ ಅನ್ನೋ ಒಂದು ದೊಡ್ಡ ಘಟ್ಟಾ ನಾ ದಾಟಿದ್ವಿ... 


ಆವತ್ತು ಹಾಸ್ಟೆಲ್ ನ, ಸ್ಕೂಲ್ ನ ಬಿಟ್ಟು ಹೋಗ್ಬೇಕಿತ್ತು ಐದು ವರ್ಷ ಅದೇ ಸ್ಕೂಲ್ ಲೇ ಓದಿದ್ದು... ಈಗ ಬಿಟ್ಟು ಹೋಗ್ಬೇಕು ಅಂದ್ರೆ ತುಂಬಾ ಕಷ್ಟ ಆಗ್ತಿತ್ತು... ಆದ್ರೂ ಬಿಟ್ಟೋಗೋ ಅನಿವಾರ್ಯತೆ ಇತ್ತು... 


ಸೈನ್ಸ್ ಸರ್ ಬಂದು ನನ್ನಾ ಮುಂದೆ ನಿಂತ್ರು ಮಾತಿಲ್ಲ ಕಥೆ ಇಲ್ಲಾ ಬರೇ ಮೌನದ ವಿನಿಮಯ...


ನಾನು ಸುಮ್ನೇ ನಿಂತಿದ್ದೆ... 


ಸೈನ್ಸ್ ಸರ್ ನೇ ಮೌನ ಮುರಿದು.. ಮುಂದೆ ಏನ್ ಓದ್ಬೇಕು ಅಂತಿದೀಯ..!!?? ಅಂದ್ರು. 


ನಾನು, ಟೀಚರ್ ಆಗ್ಬೇಕು ಅನ್ಕೊಂಡಿದೀನಿ.. ಸೊ ರಿಸಲ್ಟ್ ಬಂದ್ಮೇಲೆ ಏನು ಓದ್ಬೇಕು ಅಂತಾ ಡಿಸೈಡ್ ಮಾಡ್ತೀನಿ ಅಂದೆ.. 


ಸರಿ ಅಂದ್ರು.. 


ಮತ್ತದೇ ಮೌನ.. 


ಸರ್ ಮುಖ ಬಾಡೊಗಿತ್ತು.. 


ಸರ್ ಏನಾಯ್ತು ಅಂದೆ.. 


ಏನಿಲ್ಲಾ ಅಂತೇಳಿ ಅವರು ಸುಮ್ನಾದ್ರು.. 


ಮತ್ತದೇ ಮೌನ.. ಸಹಿಸೋಕೆ ಆಗ್ಲಿಲ್ಲ.. 


ನಿಮ್ ನಂಬರ್ ಕೊಡಿ ಅಂದೆ.. 


ಅವರು ಒಂದು ಪೇಪರ್ ಲಿ ಬರೆದು ಕೊಟ್ಟು.. ಕಾಯ್ತಾ ಇರ್ತೀನಿ ಮನೆ ಮುಟ್ಟಿದ ತಕ್ಷಣ ಕಾಲ್ ಮಾಡ್ಬೇಕು ಅಂದ್ರು.. 


ನಾನು ಸರಿ ಅಂತೇಳಿ.. ಲಗೇಜ್ ಎಲ್ಲಾ ತಗೊಂಡು ಹೊರಟು ಊರಿಗೆ ಬಂದೆ... 


ನಮ್ ಮನೇಲಿ ಇದ್ದಿದ್ದು ಒಂದೇ ಲ್ಯಾಂಡ್ ಲೈನ್ ಅಷ್ಟೇ.. 


ಅದ್ರಿಂದ ಕಾಲ್ ಮಾಡೋಕೆ ಭಯ.. ಅಮ್ಮಾ ಅಣ್ಣ ಎಲ್ಲಾರು ಇರ್ತಿದ್ರು.. ಆದ್ರೂ ಧೈರ್ಯ ಮಾಡಿ ಕಾಲ್ ಮಾಡಿ ಮುಟ್ಟಿದೆ ಅಂತಾ ಹೇಳಿದ್ದೆ.. 


ಹೀಗೇ ಅಪರೂಪ ಕ್ಕೆ ಒಮ್ಮೆ ಕಾಲ್ ಮಾಡ್ತಿದ್ದೆ.. 


ಅದಾದ ಮೇಲೆ ಒಂದಿನಾ ಅಮ್ಮಾ ಬಟ್ಟೆ ಎಲ್ಲಾ ಪ್ಯಾಕ್ ಮಾಡ್ಕೋ ಅಂದಾಗ.. ಯಾಕೆ ಅಂದೆ.. ಬೆಂಗಳೂರಿಗೆ ಹೋಗೋಣ ಅಲ್ಲೇ ಇನ್ಮೇಲೆ ನೀನು ಓದೋದು ಅಂತು.. ನಂಗಂತೂ ಫುಲ್ ಖುಷಿ ಆಯ್ತು ಬೆಂಗಳೂರು ಸಿಲಿಕಾನ್ ಸಿಟಿ ಮಹಾನಗರ ಕ್ಕೆ ನಾನು ಓದೋಕೆ ಹೋಗ್ತಿದೀನಿ ಅಂತಾ ಖುಷಿಲಿ ಏನೇನೋ ಬಟ್ಟೆ ತಗೊಂಡಿದ್ದೆ.. ಆವತ್ತು ರಾತ್ರಿ ನೇ ಬೆಂಗಳೂರು ಗೆ ಹೊರಟು ಬೆಳಗ್ಗೆನೇ ನಾಲ್ಕು ಗಂಟೆಗೆ ರೀಚ್ ಆಗಿದ್ವಿ.. ಯಪ್ಪಾ ಬೆಂಗಳೂರಿನ ಆ ವಾಹನಗಳ ಸಂಚಲನ ಕಿಕ್ಕಿರಿದ ಜನ ಸಾಗರದ ಜಂಗುಳಿ ನೋಡಿದ ನನ್ನಾ ಕಣ್ಣುಗಳು ಕೆಲ ದಿನಗಳು ಪ್ರಪಂಚನೇ ಮರೆತಿದ್ದು ಸುಳ್ಳಲ್ಲ... 


ಮಾಲ್, ಪಿವಿಆರ್ ಸಿನಿಮಾಸ್,ಒರಿಯನ್, ಮಂತ್ರಿ ಮಾಲ್, ಇಸ್ಕಾನ್ ಟೆಂಪಲ್, ಚಿಕ್ಕ ಚಿಕ್ಕ ಬಟ್ಟೆ ಹಾಕೊಂಡು, ಕೆಜಿ ಮೇಕ್ಅಪ್ ಹಾಕೊಂಡು ಹೋಗೊ ಹುಡ್ಗಿರು, ಇವುನೆಲ್ಲಾ ನೋಡಿದ್ದ ನನ್ನಾ ಕಣ್ಣುಗಳಿಗೆ ಏನೋ ಒಂದು ಸಂಭ್ರಮ.. 


ಅಲ್ಲೇ ಕಾಲೇಜ್ ಜಾಯಿನ್ ಆದೇ.. ಓದೋದು ಬರಿಯೋದು ಈಗೆ ಜೀವನ ನಡೀತಾ ಇತ್ತು ಕ್ರಮೇಣ ನಾನು ಸೈನ್ಸ್ ಸರ್ ನ ನೆನೆಸಿಕೊಳ್ಳೋದು ಕಡಿಮೆ ಆಗಿತ್ತು...


ಅತ್ತಾ ಸೈನ್ಸ್ ಸರ್ ಏನಾದ್ರು ಅನ್ನೋದು ನಂಗೆ ಗೊತ್ತೇ ಆಗ್ಲಿಲ್ಲ ಅಲ್ಲಿ ಇಲ್ಲಿ ಫ್ರೆಂಡ್ಸ್ ಗೆ ಕಾಂಟೆಕ್ಟ್ ಮಾಡೋಕೆ ಪ್ರಯತ್ನ ಪಟ್ಟೆ ಆದ್ರೆ ಯಾರೊಬ್ಬರೂ ಮೊಬೈಲ್ ನೇ ಬಳಸ್ತಾ ಇರ್ಲಿಲ್ಲಾ... 


ಇನ್ನು ನನ್ನಾ ಓದು ಮನೆ ನೇ ಜೀವನ ಆಗೋಯ್ತು.. 


*********-***--*-*-************


ಆರು ವರ್ಷಗಳ ನಂತರ... 


ನನ್ನಾ ಕಾಲೇಜ್ ಪಕ್ಕದಲ್ಲಿ ಒಂದು ಕಿಡ್ಸ್ ಸ್ಕೂಲ್ ಇತ್ತು... ಅದ್ರಲ್ಲಿ ಇದ್ದಾ ಒಬ್ಬರು ಮೇಡಂ ನನ್ ಪಿಜಿ ಪಕ್ಕದ ಮನೆ ಅವರು ಆಗಿದ್ರು.. ಅವರು ಪ್ರೆಗ್ನೆಟ್ ಇದ್ದಾ ಕಾರಣ ನಂಗೆ ಕೇಳಿದ್ರು," ನಿಮ್ ಪಿಜಿ ಲಿ ಯಾರಿಗಾದ್ರೂ ಟೀಚಿಂಗ್ ಇಂಟರೆಸ್ಟ್ ಇದೇನಾ..!!? ಇದ್ರೆ ಕೇಳಿ ನೋಡು ಒಂದು ಸಿಕ್ಸ್ ಮಂತ್ಸ್ ಕಿಡ್ಜಿ ಲಿ ಟೀಚಿಂಗ್ ಮಾಡ್ತಾರಾ ಅಂತಾ " ಅಂದ್ರು... 

ಆಗ ನಂಗೆ ಖುಷಿಯಾಗಿ " ಒಹ್ ನಾನೇ ಮಾಡ್ತೀನಿ. ಹೇಗಿದ್ರು ನಾನು ಕಾಲೇಜ್ ಗೆ ರೆಗ್ಯುಲರ್ ಆಗಿ ಏನು ಹೋಗೋದು ಇರಲ್ಲಾ " ಅಂದೆ. 


ಅವರು ಫುಲ್ ಖುಷಿಯಾಗಿ ಸರಿ ಆಗಿದ್ರೆ ನಾಳೆ ನನ್ ಜೊತೆಗೆ ಸ್ಕೂಲ್ ಗೆ ಬನ್ನಿ ಪ್ರಿನ್ಸಿಪಾಲ್ ಹತ್ರಾ ಮಾತಾಡ್ತೀನಿ ಅಂದ್ರು.. 


ನಂಗು ಮಕ್ಕಳ ಜೊತೆಗೆ ಕಾಲ ಕಳಿಯೋದು ತುಂಬಾ ಇಷ್ಟಾ ಇದ್ದಿದ್ರಿಂದ ಖುಷಿ ಹೆಚ್ಚೇ ಆಗಿತ್ತು.. 


ಎಂದಿನಂತೆ ಬೆಳಗ್ಗೆ ನೇ ಎದ್ದು ರೆಡಿ ಆಗಿ ಆ ಮೇಡಂ ಜೊತೆಗೆ ಹೋದೆ ಸ್ಕೂಲ್ ಗೆ.. ಮೇಡಂ ಮೊದಲೇ ಎಲ್ಲಾ ಮಾತಾಡಿದ್ರು ಸೊ ಅವರು ಸಹ ಮಂಡೇ ಯಿಂದ ಬನ್ನಿ ಅಂದ್ರು.. ನನ್ನಾ ಖುಷಿ ಗೆ ಪಾರವೇ ಇರ್ಲಿಲ್ಲಾ...


ಮಂಡೇ ಬೆಳಗ್ಗೆನೇ ರೆಡಿ ಆಗಿ ಸ್ಕೂಲ್ ಗೆ ಹೋಗಿದ್ದೆ.. ಅಸೆಂಬ್ಲಿ ಅಲ್ಲಿ ನೇ ಯುವರ್ಸ ನ್ಯೂ ಇಂಗ್ಲೀಷ್ ಟೀಚರ್ ದೈವಿಕಾ ಅಂತಾ ಇಂಟ್ರುಡುಸ್ ಮಾಡಿದ್ರು... ಎಲ್ಲಾ ಮಕ್ಕಳು ಅಷ್ಟೇ ಖುಷಿಯಿಂದ ವೆಲ್ಕಮ್ ಮಿಸ್ ಅಂದ್ರು...


ಎಲ್ಲಾ ಮಕ್ಕಳು ಶಾಲೆ ಒಳಗೆ ಹೋದ್ಮೇಲೆ ನಾನು ಸ್ಟಾಫ್ ರೂಮ್ ಲಿ ಕೂತಿದ್ದಾಗ ಮೇಡಂ ಕೊಟ್ಟ ಬುಕ್ಸ್ ಓದ್ತಾ ಇದ್ದೇ... 


ಒಂದು ಚಿಕ್ಕ ಹುಡುಗಿ ಡೋರ್ ಹತ್ರಾ ಬಂದು " ಮೇ ಐ ಕಮ್ ಇನ್ ಮಿಸ್.?? " ಅಂತಾ ಕೇಳ್ತು. 

ಎಷ್ಟು ಚೆಂದ ಇತ್ತು ಆ ಧ್ವನಿ.. ಒಂದು ಇಂಪಾದ ಕೋಗಿಲೆ ನೇ ಮಾತಾಡಿದ ಹಾಗೇ.. 


ಎಸ್ ಕಮ್ ಇನ್. ಅಂದೆ 


ಆ ಹುಡುಗಿ ಒಳಗೆ ಬರುತ್ತಾ " ನನ್ ಡೈಲಿ ಹೋಮ್ ವರ್ಕ್ ಡೈರಿ ನಾ ಮಮ್ಮಿ ಬ್ಯಾಗ್ ಲಿ ಇಟ್ಟೇ ಇಲ್ಲಾ,. ಅದ್ನಾ ಹೇಳಿದೀನಿ ಅದ್ಕೆ ತಗೊಂಡು ಬರ್ತಾರಂತೆ. ಅಲ್ಲಿ ತನಕ ನಾನು ಇಲ್ಲೇ ಕೂತಿರ್ಲಾ " ಅಂತ ಕೇಳಿದ್ಲು 


ಅಷ್ಟು ಚಿಕ್ಕ ಹುಡುಗಿ.. ಅಷ್ಟು ನೀಟಾಗಿ,, ಅಷ್ಟುದ್ದ ಹೇಳಿದ್ದು ಕೇಳಿ ನಂಗೆ ನಗು ನೇ ಬಂತು.. " ಸರಿ ಕುತ್ಕೊ ಅಂತೇಳಿ.. ವಾಟ್ ಇಸ್ ಯುವರ್ ನೇಮ್..?? ಅಂದೇ. 


ಮೈ ನೇಮ್ ಇಸ್ ಅನುಷಾ ಅಂತು.. 


ನಂಗೆ ಆ ಹೆಸರು ಕೇಳಿದ್ದೆ ಖುಷಿಯಾಗಿ.. ಆ ಹುಡುಗಿಯ ಕಣ್ಣೇ ನೋಡ್ತಿದ್ದೆ.. ಅವು ನಕ್ಷತ್ರ ದ ತರ ಮಿನುಗ್ತಾ ಇದ್ವು.. ಯಾರನ್ನೂ ಹೋಲುವ ಪರಿ ಎದ್ದು ಕಾಣ್ತಿತ್ತು...


ಕ್ಲಾಸ್ ರೂಮ್ ಲಿ ಕುತ್ಕೊಬೋದಲ್ವಾ ಅಂತಾ ಕೇಳಿದೆ.. 


ಇಲ್ಲಾ. ಕ್ಲಾಸ್ ನಡಿವಾಗ ಮದ್ಯದಲ್ಲಿ ಹೋಗೋ ಆಗಿಲ್ಲಾ, ಬರೋ ಆಗಿಲ್ಲಾ ಅಂತು ಆ ಚಿಕ್ಕ ಹುಡುಗಿ 


ಅಮ್ಮಯ್ಯ ಈ ಚಿಕ್ಕ ವಯಸ್ಸಲ್ಲಿ ಎಷ್ಟೊಂದು ಬುದ್ಧಿ ಶಿಸ್ತು ಅಂತಾ ಯೋಚಿಸ್ತಾ ಇರುವಾಗ ಅವರ ಅಮ್ಮಾ ಬಂದ್ರು ಅನ್ಸುತ್ತೆ..


ಅಮ್ಮಾ ಬಂದ್ರು ಅಂತಾ ಆ ಹುಡುಗಿ ಹೋಯ್ತು.. 


ಆದ್ರೆ ಅವಳು ಹೇಳಿದ್ದ ಮಾತುಗಳೇ ಕಿವಿ ಲಿ ಗುನುಗುಟ್ಟುತ್ತ ಇದ್ವು... 


ಸೈನ್ಸ್ ಸರ್ ಸಹ ಯಾವಾಗ್ಲು ಹೇಳೋರು " ಶಿಸ್ತು ಮೊದಲು ಮುಖ್ಯ ಅಂತಾ ",,


ನಾನು ಕ್ಲಾಸ್ ತಗೊಳೋಣ ಅಂತಾ ಹೋದೆ... ಎಲ್ಲಾ ಸ್ಟೂಡೆಂಟ್ಸ್ ರಾಗವಾಗಿ ಗುಡ್ ಮಾರ್ನಿಂಗ್ ಮಿಸ್ಸ್ ಅಂತಿದ್ರು... ನಂಗೆ ನನ್ ಹೈ ಸ್ಕೂಲ್ ನೆನಪಾಯ್ತು.. 


ಆವತ್ತು ಕೇವಲ ಎಲ್ಲರ ಪರಿಚಯ ಮಾಡ್ಕೊಳೋದೆ ಆಯ್ತು ಅದ್ರಲ್ಲೂ ಆ ಹುಡುಗಿ, ಆ ಕಣ್ಣುಗಳು, ಆ ಮಾತುಗಳು ಮನಸ್ಸಿಗೆ ತುಂಬಾ ಇಡಿಸಿದ್ವು... 


ಹೀಗೇ ಕಾಲೇಜ್, ಸ್ಕೂಲ್ ಆ ಹುಡುಗಿಯಾ ಚಟ್ ಪಟ್ ಮಾತುಗಳ ಜೊತೆಗೆ ಜೀವನ ಸಾಗ್ತಾ ಇತ್ತು,. ಆರು ತಿಂಗಳು ಮುಗಿದಿದ್ದೇ ಗೊತ್ತಾಗ್ಲಿಲ್ಲ.. ಈ ಮಧ್ಯ ನಂಗೆ ಕೆಲಸ ಕೊಟ್ಟ ಆ ಮೇಡಂ ಗೆ ಡೆಲಿವರಿ ಆಗಿ ನಾಲ್ಕು ತಿಂಗಳ ಮುದ್ದಾದ ಮಗು ಇತ್ತು.. ಅವರು ಇನ್ನೇನು ಸ್ಕೂಲ್ ಗೆ ಬರೋಕೆ ರೆಡಿ ಆಗ್ತಿದ್ರು... 


ಅವತ್ತೊಂದು ದಿನಾ ಶಾಲೆ ಲಿ ಆನ್ಯೂವಲ್ ಡೇ ಇತ್ತು.. ಎಲ್ಲಾ ಮಕ್ಕಳು ಎಷ್ಟು ಮುದ್ದು ಮುದ್ದಾಗಿ ರೆಡಿ ಆಗಿದ್ರು... ಅದ್ರಲ್ಲೂ ಆ ಹುಡುಗಿ ಎಷ್ಟು ಕ್ಯೂಟ್ ಆಗಿ ರೆಡಿ ಆಗಿದ್ಲು.. ಅವರದ್ದು ಒಂದು ಡಾನ್ಸ್ ಪ್ರೋಗ್ರಾಮ್ ಇತ್ತು.. ಇನ್ನು ರೆಡಿ ಆಗ್ತಾ ಇದ್ಲು.. ನಾನು ಬಂದಿದ್ದು ನೋಡಿ.. " ಹಾಯ್ ಮಿಸ್, ಲುಕಿಂಗ್ ಸೂಪರ್ " ಅಂದ್ಲು..


ನಿಜಕ್ಕೂ ಹತ್ತು ನಿಮಿಷ ಕನ್ನಡಿ ಮುಂದೆ ನಿಂತಿದ್ದಕ್ಕೂ ಸಾರ್ಥಕ ಅನ್ನಿಸ್ಸಿತ್ತು.. ಹೇ ಯು ಲುಕಿಂಗ್ ಕ್ಯೂಟ್ ಅಂತೇಳಿ ಒಂದು ಪಪ್ಪೀ ಕೊಟ್ಟೆ.. 


ಆ ಹುಡುಗಿ ಥಾಂಕ್ ಯು ಮಿಸ್ ಅಂತೇಳಿ.. ಮತ್ತೇ ಬಂದು ಅಯ್ಯೋ ನೋಡಿ ಇಲ್ಲಿ ಲಿಪ್ಸ್ಟಿಕ್ ಆಗಿದೆ ಅಂದ್ಲು.. 


ಅಯ್ಯೋ ಸಾರೀ ಅಂತೇಳಿ ಅವಳ ಕೆನ್ನೆ ಮೇಲೆ ಹತ್ತಿದ್ದಾ ನನ್ನಾ ಲಿಪ್ಸ್ಟಿಕ್ ನಾ ಒರೆಸೋಕೇ ಹೋದೆ.. ಅಸ್ಟ್ರಲ್ಲೇ ಹೇ ಮಮ್ಮಿ ಬಂದ್ರು ಅಂತೇಳಿ.. ಮಿಸ್ ನೀವು ಬನ್ನಿ ಇವತ್ತು ಡ್ಯಾಡಿ ನೂ ಬಂದಿದಾರೆ ಅಂತಾ ಕೈ ಇಡಿದು ಕರ್ಕೊಂಡು ಹೋಗೆ ಬಿಟ್ಲು.. 


ಓಕೆ ಓಕೆ ಕೂಲ್ ಅಂತೇಳಿ ನಾನು ಅವರ ಮಮ್ಮಿ ಮುಂದೆ ಹೋದೆ.. 


ಮಮ್ಮಿ ಮಮ್ಮಿ ಇವ್ರೇ ದೈವಿ ಮಿಸ್ ನಾನೇಳಿದದ್ನ ಇವ್ರೇ ಅಂತಾ ಅವರ ಅಮ್ಮಾ ಗೆ ಪರಿಚಯ ಮಾಡ್ಸಿದ್ಲು... 


ನಾನೂ, ಇವಳು ಏನ್ ಹೇಳಿದ್ಲು ಅಂತಾ ಅವರ ಅಮ್ಮಾ ನಾ ಕೇಳಿದೆ.. ಅವರ ಪರಿಚಯ ಆದ್ಮೇಲೆ.. 


ಏನ್ ಹೇಳೋದು ಮೇಡಂ, " ಯಾವಾಗ್ಲು ನಿಮ್ ಬಗ್ಗೆನೇ ಹೇಳ್ತಾ ಇರ್ತಾಳೆ.. ದೈವೀ ಮಿಸ್ ಹಾಗೇ, ದೈವೀ ಮಿಸ್ ಹೀಗೇ.. ದೈವೀ ಮಿಸ್ ತುಂಬಾ ಒಳ್ಳೇವ್ರು.. ನನ್ನಾ ಕಂಡ್ರೆ ಅವರಿಗೆ ಬಾಳ ಇಷ್ಟಾ.. ನಂಗಂತೂ ಅವರು ಅಂದ್ರೆ ಬಾಳ ಬಾಳ ಇಷ್ಟಾ.. ಅವರು ನನ್ ಜೊತೆಗೆ ಬಾಳ ಮಾತಾಡ್ತಾರೆ.. ಅಂತೆಲ್ಲಾ ತುಂಬಾ ಹೇಳ್ತಾಳೆ ನಿಮ್ ಬಗ್ಗೆನೇ " ಅಂದ್ರು. 


ನಂಗೆ ಎಲ್ಲಿಲ್ಲದ ಆನಂದ.. ದೊಡ್ಡೋರು ಹೋಗೋಳೋದು ಬೈಯೋದು ಇವೆಲ್ಲವೂ ಅಂತಾ ದೊಡ್ಡ ವಿಷಯ ಏನಲ್ಲ.. ಆದ್ರೆ ಈ ಚಿಕ್ಕ ಮಕ್ಕಳ ಬಾಯಲ್ಲಿ ಇಂತ ವಿಷಯ ಬಂದಾಗ ನಿಜಕ್ಕೂ ಜೀವನದಲ್ಲಿ ನಾವು ಏನೋ ಮಾಡಿದೀವಿ ಅಂತ ಅನ್ಸುತ್ತೆ.. 


ಖುಷಿಯಾಗಿ ನಾನು ನೂ.. ಹೌದು ಅವಳ ಪಟ ಪಟ ಮಾತುಗಳು ತುಂಬಾ ಇಷ್ಟಾ ಆಗುತ್ತೆ ಅಂತೆ.. 


ಅಸ್ಟ್ರಲ್ಲೇ ಆ ಹುಡುಗಿ ಅಯ್ಯೋ ನನ್ ರೆಕ್ಕೆ ನೇ ಹಚ್ಚಿಲ್ಲಾ.. ಇರಿ ಬಂದೆ ಹಚ್ಚಿಸಿಕೋಂಡು ಅಂತ ಹೋಗಿ, ಮತ್ತೇ ವಾಪಾಸ್ ಬಂದ್ಲು " ಮಮ್ಮಿ, ಪಪ್ಪಾ ಎಲ್ಲಿ ಅವ್ರಿಗೆ ಪರಿಚಯ ಮಾಡ್ಸಬೇಕು ಮಿಸ್ ನಾ ಅಂದ್ಲು ",.


ಹಾ ನಾನು ಮಾಡ್ಸ್ತೀನಿ. ನೀನು ರೆಕ್ಕೆ ಹಾಕೊಂಡು ಬಾ ಅಂತ ಅವರ ಅಮ್ಮಾ ಹೇಳಿ ಕಳ್ಸಿ " ಈಗೆ ಅವರ ಪಪ್ಪಾಗಂತೂ.. ಇವತ್ತು ಬರಲೇಬೇಕು.. ನಮ್ ಮಿಸ್ ನಾ ಮೀಟ್ ಮಾಡ್ಬೇಕು ಅಂತ ಹಟ ಮಾಡಿದ್ಲು " ಅಂದ್ರು,


ಅರೇ ಯಾಕಿಷ್ಟು., ಇತರ ಈ ಹುಡುಗಿ ಗೆ ನನ್ ಮೇಲೆ ಅಭಿಮಾನ ನಾ ಪ್ರೀತಿ ನಾ ಅರಿಯದೆ ನಿಂತಿದ್ದೆ.. 


ನಮ್ ಹಸ್ಬೆಂಡ್ ಬಂದಿದಾರೆ, ಇಲ್ಲೇ ಫೋನ್ ಬಂತು ಅಂತ ಮಾತಾಡ್ತಿದ್ರು ಅಂತ ಹೇಳುವಾಗ್ಲೇ ಅಲ್ಲಿ ಒಬ್ರು ಬಂದ್ರು.. ಅವರನ್ನ ತೋರಿಸಿ " ಹಾ ಇವ್ರೇ ನನ್ ಹಸ್ಬೆಂಡ್. ಅಂತ ಪರಿಚಯ " ಮಾಡ್ಸ್ತೀದ್ರು.. ಆದ್ರೆ ಆವಾಗ್ಲೇ ನನ್ ಕಿವಿ ಹೋಗಿತ್ತು ಕಣ್ಣೆಲ್ಲಾ ಮುಂದೆ ಇರೋ ವ್ಯಕ್ತಿ ಮೇಲೇನೆ ಇತ್ತು.. ಅವರು ಸಹ ಕ್ಷಣ ಕಾಲ ನನ್ನೇ ದಿಟ್ಟಿಸಿ ನೋಡ್ತಾ ಇದ್ರೂ... 


ಅನುಮಾನ ನೇ ಇಲ್ಲಾ ಅವರೇ ಇವರು. ನಮ್ ಸೈನ್ಸ್ ಸರ್..!!!



ರಿ ನಮಸ್ತೇ ಹೇಳ್ರಿ.. ಇವ್ರೇ ದೈವಿಕಾ ಅಂತ ಚಿನ್ನಿ ಹೇಳ್ತಾ ಇರ್ತಾಳೆ ಅಲಾ ದೈವೀ ಮಿಸ್ ದೈವೀ ಮಿಸ್ ಅಂತ.. ಅವರೇ ಇವರು ಅಂದ್ರು..

ಆದ್ರೆ ಸರ್ ಮಾತ್ರ ಮಾತೇ ಆಡ್ಲಿಲ್ಲಾ.. ಸುಮ್ನೇ ನನ್ನೇ ನೋಡ್ತಿದ್ರು..

ಅವರ ಹೆಂಡತಿ ಒಮ್ಮೆ ಅವರ ಕೈಗೆ ತಿವಿದು.. ಏನ್ ಹಾಗ್ ನೋಡ್ತಿದೀರಾ.. ಚಿನ್ನಿ ಮಿಸ್ ದೈವಿಕಾ ಅಂತ ಸ್ವಲ್ಪ ಜೋರಾಗೆ ಹೇಳಿದ್ರು...

ಆಗ ಸೈನ್ಸ್ ಸರ್ ಮಾತಾಡಿ " ಹಾ ಹಾ..!! ಗೊತ್ತಾಯ್ತು ಅಂದು.. ಒಂದ್ ನಿಮಿಷ ಬಂದೆ ಅಂತೇಳಿ ಹೋಗೆ ಬಿಟ್ರು...

ಯಾಕೆ ಅಂತ ಗೊತ್ತೇ ಆಗ್ಲಿಲ್ಲಾ..

ನಾನು ಪ್ರೋಗ್ರಾಮ್ ನಡಿಯೋ ಹತ್ರಾ ಹೋದೆ..

ಆ ಹುಡುಗಿ ಅಲ್ಲೇ ರೆಕ್ಕೆ ಹಾಕೊಂಡು ನಿಂತಿತ್ತು ಮುದ್ದು ಬಟರ್ಫ್ಲೈ ತರ ಕಾಣ್ತಿತ್ತು...

ಒಂದು ಫೋಟೋ ತಗೊಂಡೆ ಆ ಹುಡುಗಿ ಜೊತೆಗೆ.

ಆಮೇಲೆ ಒಂದೊಂದೇ ಪ್ರೋಗ್ರಾಮ್ ಶುರು ಆಯ್ತು..

ನಾನು ಅಲ್ಲೇ ಒಂದೊಂದು ಪ್ರೋಗ್ರಾಮ್ಸ್ ನೂ ನೋಡ್ತಾ.. ಸೈನ್ಸ್ ಸರ್ ನನ್ನಾ ಯಾಕೆ ಮಾತಾಡ್ಸ್ಲೀಲ್ಲಾ ಅಂತ ಯೋಚಿಸ್ತಾ ಇದ್ದೇ..

ಹಿಂದಿನಿಂದ ಯಾರೋ ನನ್ನಾ ಕರೆದಾಗೆ ಆಯ್ತು. ತಿರುಗಿ ನೋಡಿದ್ರೆ,

ಸೈನ್ಸ್ ಸರ್..!!

ಖುಷಿಯಾಗಿ ಅವರ ಮುಂದೆ ಹೋಗಿ ನಿಂತೇ.. ಅವರೋ ಯಾವಾಗ್ಲು ಅಷ್ಟೇ ಮೌನಿ..

ನಾನೇ ಎರಡು ಚೇರ್ ತಂದು, ನಾನು ಕೂತು ಅವ್ರಿಗೂ ಕುತ್ಗೊಳೋಕೆ ಹೇಳಿದೆ...

ಸೈನ್ಸ್ ಸರ್ : ಏನಮ್ಮಾ ನೀನೀಲ್ಲಿ

ನಾನು : ಯಾಕೆ ಬರಬಾರದಿತ್ತಾ..??

Ss : ಅಂಗಲ್ಲಮ್ಮಾ.. ನಿನ್ನಾ ನೋಡಿ ತುಂಬಾ ಖುಷಿ ಆಯ್ತು.. ಆದರೇ ಇಲ್ಲಿ ಸಡನ್ ಆಗಿ ಅದು ಟೀಚರ್ ಆಗಿ.. !!

ನಾನು : ಹೂ.. ಪಾರ್ಟ್ ಟೈಮ್ ಟೀಚರ್ ಅಷ್ಟೇ ಇನ್ನೇನು ಒನ್ ವೀಕ್ ಲಿ ಹೋಗ್ತೀನಿ ಇಲ್ಲಿಂದ..

Ss : ಯಾಕೆ

ನಾನು ಬಂದಿದ್ದು ಮೇಡಂ ಪ್ರೆಗ್ನೆಟ್ ವಿಷಯ ಎಲ್ಲಾ ಹೇಳಿದೆ.

Ss: ಒಹ್ ಓಕೆ.

ಮತ್ತೇ ಸರ್ ಆ ಮಗು ನಿಮ್ಮದಾ ಅಂದೆ..

ಹಾ ಹೌದು ಅಂದ್ರು..

ಒಹ್ ಕ್ಯೂಟ್ ಗರ್ಲ್ ಅಂದೆ

ಥಾಂಕ್ ಯು ಅಂದ್ರು..

ಅದೇನ್ ಸರ್ ಇಷ್ಟು ವರ್ಷದ ಮೇಲೆ ಸಿಕ್ಕಿದಿನಿ.. ನೀವ್ ನೋಡಿದ್ರೆ ಹಾ ಹೂ ಅಂತ ಅಷ್ಟೇ ಮಾತಾಡ್ತಾ ಇದ್ದೀರಾ ಅಂದೆ ಬೇಜಾರಲ್ಲಿ...

ಸೈನ್ಸ್ ಸರ್ ಚೇರ್ ಯಿಂದ ಎದ್ದು, " ಏನು ಅಂತ ಹೇಳಲಿ, ಇಷ್ಟು ದಿನಾ ಎಲ್ಲಿದ್ದೆ ಅಂತ ಕೇಳ್ ಲಾ..!? ಅಥವಾ ಇಷ್ಟು ದಿನಾ ಆದ್ರೂ ಯಾಕೆ ಕಾಲ್ ಮಾಡ್ಲಿಲ್ಲ ಅಂತ ಕೇಳ್ ಲಾ..!? ಇಲ್ಲಾ ಬೆಂಗಳೂರಿಗೆ ಹೋಗೋಕೂ ಮುಂಚೆ ಒಂದು ಕಾಲ್ ಮಾಡ್ಬೇಕು ಅಂತ ಅನ್ಸ್ಲೆ ಇಲ್ವಾ ಅನ್ಲಾ .. ಅಂತ ಬೇಜಾರಲ್ಲಿ ಕೇಳಿದ್ರು

ಹೌದು ನಂದು ತಪ್ಪಿತ್ತು ಆದ್ರೆ ಏನ್ ಮಾಡ್ಲಿ ಹೋಗೋ ಅರ್ಜೆಂಟ್ ಲಿ ನಿಮ್ ನಂಬರ್ ಬರೆದು ಇಟ್ಟಿದ್ದ ನೋಟ್ ಬುಕ್ ಊರಲ್ಲೇ ಬಿಟ್ಟು ಬಂದಿದ್ದೆ.. ಆದ್ರೂ ಸ್ವಲ್ಪ ಫ್ರೆಂಡ್ಸ್ ನೆಲ್ಲಾ ಕೇಳಿದೆ ಆದ್ರೆ ಎಲ್ಲೂ ನಂಬರ್ ಸಿಕ್ಕಿಲ್ಲಾ ಅಂದೆ.. ಮತ್ತೇ ನೆನಪಾಯ್ತು ಅರೇ ನಾನ್ ಬೆಂಗಳೂರಿಗೆ ಹೋಗಿದ್ದು ನಿಮ್ಗೆ ಹೇಗೆ ಗೊತ್ತಾಯ್ತು ಅಂತ ಕೇಳಿದೆ

ಹೂ., ದಿನಾ ನಿಮ್ ಮನೆ ಮುಂದೆ ಹೋಗ್ತಿದ್ದೆ.. ಡೋರ್ ಹಾಕಿತ್ತು.. ತುಂಬಾ ದಿನಾ ಆದ್ರೂ ಓಪನ್ ಆಗದೇ ಇದ್ದಿದ್ದಕ್ಕೆ ನಾನೇ ಪಕ್ಕದ ಮನೆ ಅವ್ರ್ನ ಕೇಳಿದೆ.. ಅವರು ಹೇಳಿದ್ರು ನೀವ್ ಇನ್ಮೇಲೇ ಬೆಂಗಳೂರಲ್ಲೆ ಇರ್ತೀರಾ ಅಂತ.. ಬೇಜಾರಾಯ್ತು ಹೇಳಿ ಹೋಗ್ಬೋದಿತ್ತಲ್ಲ ಅಂತ.. ಕಾದೆ ಕಾದೆ ಫೋನ್ ಮಾಡೇ ಮಾಡ್ತೀಯ ಅನ್ನೋ ನಂಬಿಕೆ ಮೇಲೆ ಆದ್ರೆ ನೀವ್ ಮಾಡ್ಲೇ ಇಲ್ಲಾ.. ಸ್ವಲ್ಪ ತಿಂಗಳಲ್ಲಿ ಅಮ್ಮಾ ತೀರಿ ಹೋದ್ರು.. ಸಡೆನ್ ಆಗಿ ಮನೆ ಮನಸ್ಸು ಎಲ್ಲಾ ಕಾಲಿ ಕಾಲಿ ಅನ್ಸೋಕೆ ಶುರು ಆಯ್ತು.. ವರ್ಷ ತುಂಬೋದ್ರೊಳಗೆ ಮನೇಲಿ ಶುಭ ಕಾರ್ಯ ಮಾಡ್ಬೇಕು ಅಂದ್ರು.. ಮನೇಲಿ ಒಂದು ಹೆಣ್ಣಿನ ಅವಶ್ಯಕತೆ ತುಂಬಾ ಇತ್ತು.. ಆಗ ಅಪ್ಪ ನಾ ಮನಸ್ಸು ನೋಹಿಸೋಕೆ ಆಗದೇ ಅವರು ತೋರಿಸಿದ ಹುಡುಗಿ ನಾ ಮದುವೆ ಆದೇ.. ಅವಳೇ ಈ ಸರಳ..!! ಅಂತ ಅಲ್ಲೇ ದೊರದಲ್ಲೆ ಕೂತಿದ್ದ ಹೆಂಡತಿ ನಾ ತೋರ್ಸಿದ್ರು...

ಐಮ್ ರಿಯಲಿ ಸಾರೀ ಸರ್ ಅಂದೆ

ಬಿಡು ಹೋಗ್ಲಿ ಹಣೆಬರಹ ಹೀಗೇ ಇತ್ತು ಅನ್ಸತ್ತೆ ಅಂದ್ರು..

ನಾನು ಪರಿಸ್ಥಿತಿ ನಾ ತಿಳಿ ಮಾಡೋಣ ಅಂತ. " ಅದೇನು ನಿಮ್ ಮಗಳಿಗೆ ನನ್ನಾ ಹೆಸರು ಅಂದೆ ",,

ಏನ್ ಮಾಡೋದು ಕುಂತ್ರು ನಿಂತ್ರು ನಿಂದೆ ಹೆಸರು ಬರೋದು ಮನಸ್ಸಲ್ಲಿ ಸೊ ಮಗಳಿಗೂ ಅದೇ ಹೆಸರು ಇಟ್ರೆ.. ನಿದ್ದೇಲಿ ಏನಾದ್ರು ಕನವರಿಸಿದ್ರೆ ಮಗಳನ್ನ ನೆಂಸ್ಕೊಂಡಿದಾನೆ ಅನ್ಕೊಂತಾರೆ ಅಂತ ಇಟ್ಟೇ ಅಂದ್ರು ನಗ್ತಾ..

ವಿಷಯ ಅದಲ್ಲ ಅನ್ನೋದು ಗೊತ್ತಿತ್ತು.. ನಾನು ಹೆಚ್ಚಾಗಿ ಏನು ಕೇಳದೇ.. ಅವರ ನಗು ಗೆ ಜೊತೆ ಆದೇ..

ಮತ್ತೇ ನಿಮ್ ಹೆಂಡತಿ ಗೆ ಮಗುನ ಹೆಸರಿನ ಒಳ ಅರ್ಥ ಗೊತ್ತಾ ಅಂದೆ

ಹೂ ಗೊತ್ತು.. ನಾನು ಪ್ರೀತಿಸಿದ್ದ ಹುಡುಗಿ ಯಾ ಹೆಸರೇ ಅನುಷಾ ಅದನ್ನೇ ನನ್ ಮಗಳಿಗೆ ಇಟ್ಟಿದೀನಿ ಅನ್ನೋದು ಗೊತ್ತು.. ಆದ್ರೆ ಅದೇ ಅನುಷಾ ಈಗ ತನ್ನ ಹಳೇ ಹೆಸರನ್ನ ಬದಲಾಹಿಸಿಕೊಂಡು ದೈವಿಕಾ ಆಗಿ ನನ್ನಾ ಮಗಳ ಫೇವರಿಟ್ ದೈವೀ ಮಿಸ್ ಆಗಿದಾಳೆ ಅನ್ನೋದು ಅವಳಿಗೆ ಗೊತ್ತಿಲ್ಲಾ ಅಂದ್ರು..

ಮತ್ತದೇ ನಗು ಇಬ್ಬರಲ್ಲೂ.....

ಆಗ ಅದೇ ತಾನೇ ಡಾನ್ಸ್ ಮುಗಿಸಿಕೊಂಡು ಬಂದ ಆ ಪುಟ್ಟ ಹುಡುಗಿ ನಮ್ಮನ್ನ ನೋಡಿ ಓಡಿ ಬಂತು.. ಪಪ್ಪಾ ಇವ್ರೇ ದೈವೀ ಮಿಸ್ ಅಂತು

ಹಾ ಕಂದ ನೋಡಿದೆ ಮಾತಾಡ್ಸಿದೆ ಅಂದ್ರು ಸರ್.

ಆಗ ಅವಳ ಕೆನ್ನೆ ಮೇಲಿದ್ದ ಲಿಪ್ಸ್ಟಿಕ್ ಮಾರ್ಕ್ ನೋಡಿ " ಅರೇ ಯಾರೋ ಇತರ ಪಪ್ಪೀ ಕೊಟ್ಟಿರೋದು " ಅಂತ ಕೇಳಿದ್ರು 

ಆಗ ಆ ಪುಟ್ಟ ಹುಡುಗಿ ಹೇಳ್ತು. " ಇದೆ ದೈವೀ ಮಿಸ್ ಪಪ್ಪಾ ಅಂತ "..

ಒಹ್ ಅಂತೇಳಿ ಸರ್ ಒಮ್ಮೆ ನನ್ ಕಡೆ ನೋಡಿ, ಮತ್ತೇ ಆ ಮಗು ಕಡೆ ನೋಡಿ, " ಯಾರಿಗೇ ಏನ್ ಕೊಡ್ಬೇಕೋ ದೇವ್ರು ಅದನ್ನೇ ಕೊಡೋದು " ಅಂತೇಳಿ ನೀನ್ ಹೋಗು ಅಮ್ಮಾ ಅಲ್ಲಿದಾರೆ ಅಂತ ಕಳ್ಸಿದ್ರು.. 

ನಾನು ಏನ್ ಸರ್ ಅಂದೆ

ಏನಿಲ್ಲಮ್ಮಾ ಉಷಾರು  ಖುಷಿಯಾಗಿರು ಅಂದು ಒಂದು ಕಿರು ನಗೆ ಅಲ್ಲಿ ಅಲ್ಲಿಂದ ಹೊರಟು ಹೋದ್ರು..

ಅವರು ನನ್ನಾ ಪ್ರೀತಿಸಿದ್ದು ಎಷ್ಟು ನಿಜಾನೋ ಅಷ್ಟೇ ಸತ್ಯ ನನ್ನಾ ಹುಡುಕಿದ್ದು ಸಹ..

ಅವರು ಅವರ ಹೆಂಡತಿ ಗೆ, ಅವರನ್ನ ನೋಡೋಕೆ ಹೋಗುವಾಗಲೇ ಅಂದ್ರೆ ಮದುವೆಗೆ ಮೊದಲೇ ನಮ್ಮ ಪ್ರೀತಿ ವಿಷಯ ನಾ ಹೇಳಿದ್ರು..

ಮೇ ಬಿ ಅವರ ಎದೆ ಮೇಲೆ ಅನು ಅನ್ನೋ ನನ್ನಾ ಹೆಸರಿನ ಹಚ್ಚೆ ಇರ್ಲಿಲ್ಲಾ ಅಂದಿದ್ರೆ ಅವರ ಹೆಂಡತಿ ಗೆ ಪ್ರೀತಿ ವಿಷಯ ನೇ ಹೇಳ್ತಾ ಇರ್ಲಿಲ್ಲಾ ಅಥವಾ ಹೇಳಿದ್ರು ಹೇಳ್ತಿದ್ರೆನೋ ಗೊತ್ತಿಲ್ಲಾ ಬಟ್ ನನ್ ಬಗ್ಗೆ ಅವರ ಹೆಂಡತಿ ಗೆ ಬಾಳ ಅಭಿಮಾನ ಇದೆ.. ಅವರೇ ಮಗಳಿಗೆ ನೀವ್ ಪ್ರೀತಿಸಿದ ಹುಡುಗಿಯಾ ಹೆಸರೇ ಇಡೋಣ ಅಂದಿದ್ದಂತೆ.. ಅಂದ್ರೆ ಸೈನ್ಸ್ ಸರ್ ನನ್ ಬಗ್ಗೆ ಏನೆಲ್ಲಾ ಹೇಳಿರ್ಬೋದು ಅವರ ಹೆಂಡತಿ ಗೆ...

ಅಲ್ವಾ.....!!!!!!

ಅವರು ಅವರ ಮಗಳ ನಗುವಲ್ಲಿ ನನ್ನಾ ಕಾಣ್ತಾರೆ..

ಅವರ ಹೆಂಡತಿ ಯಾ ಚೇಷ್ಟೆ ಅಲ್ಲಿ ನನ್ನಾ ಕಾಣ್ತಾರೆ..

ತಮ್ಮ ನಾ ತಪ್ಪಲ್ಲಿ ನನ್ನಾ ಕಾಣ್ತಾರೆ..

ಅಪ್ಪ ನಾ ಕಾಳಜಿ ಅಲ್ಲಿ ನನ್ನಾ ಕಾಣ್ತಾರೆ..

ಒಳ್ಳೆ ಮನಸ್ಸಿಂದ ಏನೇ ಮಾಡಿದ್ರು ದೇವರು ಒಳ್ಳೇದೇ ಮಾಡ್ತಾನೇ ಅದಕ್ಕೆ ಜೀವಂತ ಸಾಕ್ಷಿ

ಸೈನ್ಸ್ ಸರ್..!!!

ಎನಿವೇ ಒಳ್ಳೆ ಸರ್ ಗೆ ಒಳ್ಳೆ ಹೆಂಡತಿ ನೇ ಸಿಕ್ಕಿದ್ದಾರೆ ಅನ್ನೋದೇ ಖುಷಿ...

ಮೊನ್ನೆ ಅನುಷಾ ಅಂದ್ರೆ ಸೈನ್ಸ್ ಸರ್ ಮಗಳು ಕಾಲ್ ಮಾಡಿದ್ಲು ಅವಳು ಮಾತಾಡಿದ್ ಮೇಲೆ ಸೈನ್ಸ್ ಸರ್ ಸಹ ಮಾತಾಡಿದ್ರು.. " ಸ್ವಲ್ಪ ಮೊಬೈಲ್ ಉಪಯೋಗಿಸೋದು ಕಡಿಮೆ ಮಾಡಮ್ಮ. ಕಣ್ಣೆಲ್ಲಾ ಹಾಳಾಗುತ್ತೆ ಅಷ್ಟೇ. " ಅಂದ್ರು

ನಾನು ಸರಿ ಸರ್ ಅಂದೆ..

ಇವತ್ತಿಗೂ ಅವ್ರಿಗೆ ನನ್ ಮೇಲೆ ಕಾಳಜಿ ಇದೆ.. ಪ್ರೇಮಾ ಇದೆ.. ನಂಬಿಕೆ ಇದೆ..

ಇದ್ಕೆಲ್ಲಾ ಏನಂತ ಕರಿಯೋದು ..

ಯಾವ ಸಂಬಂಧ ದ ಹೆಸರಲ್ಲಿ ಕರಿಯೋದು..

ಕೆಲವೊಂದು ಸಂಭಂದ ಕ್ಕೆ ಹೆಸರಿನ ಅವಶ್ಯಕತೆ ನೇ ಇರಲ್ಲಾ.

ಪ್ರೇಮಿಗಳು ದೂರ ಆಗ್ಬೋದು,

ಪ್ರೇಮಿಗಳ ಹೃದಯ ನೇ ಹೊಡೆದು ಹೋಗ್ಬೋದು,

ಕೊನೆಯಲ್ಲಿ ಪ್ರೇಮಿಗಳು ಶಾಶ್ವತವಾಗಿ ಈ ಪ್ರಪಂಚ ನೇ ಬಿಟ್ಟು ಹೊಗ್ಬೋದು ಆದ್ರೆ ಅವರ ಮದ್ಯೆ ಇದ್ದಾ ಆ " ಪ್ರೀತಿ " ಸಾಯಲ್ಲ..

ಅದು ಯಾವ ರೀತಿಯ ಪ್ರೇಮಿಗಳು ಆದ್ರೂ ಆಗ್ಬೋದು..

ಅಪ್ಪ - ಅಮ್ಮಾ, ಅಣ್ಣಾ - ತಂಗಿ, ಅಕ್ಕಾ - ತಮ್ಮ,

ಫ್ರೆಂಡ್ಸ್ - ಫ್ರೆಂಡ್ಸ್ ಗುರು - ಶಿಷ್ಯ, ದೇವರು - ಭಕ್ತ,

ಗುರುಗಳು - ವಿದ್ಯಾರ್ಥಿ ಹೀಗೇ ಯಾವ ತರದ್ದೇ ಪ್ರೀತಿ ಆದ್ರೂ ಅದಕ್ಕೆ ಸಾವಿಲ್ಲ.....ಪ್ರೀತಿಗೆ ಸಾವಿಲ್ಲ...


Rate this content
Log in

Similar kannada story from Romance