STORYMIRROR

ದೈವಿಕಾ ಕೆ

Romance

4.0  

ದೈವಿಕಾ ಕೆ

Romance

ಮಾಂಗಲ್ಯ ಬಂಧನ

ಮಾಂಗಲ್ಯ ಬಂಧನ

14 mins
1.4K



ಎಂದಿನಂತೆ ಎದ್ದ ದೈವೀಕಾ ಬೆಳಗ್ಗೆನೇ ಎಲ್ಲಾ ಮನೆಯಾ ಕಸ ಗುಡಿಸಿ, ಅಂಗಳವನ್ನು ಶುದ್ಧಗೊಳಿಸಿ, ದೀಪದ ಒಂದು ದೊಡ್ಡ ರಂಗೋಲಿ ಹಾಕಿ ಅದ್ಕೆ ಒಪ್ಪೋ ಅಂತಾ ಬಣ್ಣ ತುಂಬಿ ಅದ್ನೇ ನೋಡ್ತೀರ್ತಾಳೆ.. ಯಾರ್ ದೃಷ್ಟಿನು ತಾಕದಿರಲಿ ಅಂತಾ ಒಂದ್ ಸಲ ದೃಷ್ಟಿ ನು ತಗೆದು ಒಳಗೆ ಅಡುಗೆ ಮೆನೆ ಎಲ್ಲಾ ಸ್ವಚ್ಛ ಮಾಡ್ತಾಳೆ..


ಆಗ ಬಂದ ಶಾರದಾ ಅವರು ಮಗಳೇ, ನೀನೋಗಿ ಸ್ನಾನ ಮಾಡು.. ನಾನು ತಿಂಡಿ ಮಾಡ್ತೀನಿ ಅಂತಾರೆ.. 


ಸರಿನಮ್ಮ ಅಂತೇಳಿ ಸ್ನಾನ ಮಾಡೋಕೆ ಹೋಗುವಾಗ ಮತ್ತೆ ಏನೋ ನೆನಪಾಗಿ ಮರಳಿ ಬಂದು ಅಮ್ಮಾ ಇವತ್ತು ಪುಳಿಯೋಗರೆನೇ ಮಾಡು ಅಂತೇಳಿ ಮನಸ್ಸಲ್ಲೇ ಖುಷಿ ಪಡ್ತಾ ಮುಂದಿಂದು ನೆನೆದು ಹೋಗ್ತಾಳೆ.. 


ಅರೇ ನಿನ್ನೇ ಇನ್ನು ಪುಳಿಯೋಗರೆ ಮಾಡಿದೀನಿ ಮತ್ತೆ ಮಾಡು ಅಂತಾಳಲಾ ಅಂತಾ ಯೋಚಿಸಿ.. ಹೇಳಿದಾಳಾಲ ಮಾಡೋಣ ಅಂತೇಳಿ ಪುಳಿಯೋಗರೆನೇ ಮಾಡ್ತಾರೆ.. 


ಇತ್ತಾ ಸ್ನಾನ ಮುಗುಸಿ ಬಂದ ದೈವೀಕಾ.. ಅಮ್ಮಾ ಗುಡಿಗೆ ಹೋಗಿ ಮಾಲೆ ಕೊಟ್ಟು ಬರ್ತೀನಿ ಅಂತಾ ಹೋದ ದೀಪಾವಳಿ ನೇ ನೆನೆದು ಹೋಗ್ತಾಳೆ.. 


ಗುಡಿಯಲ್ಲಿ ಸುತ್ತಲೂ ಇಟ್ಟಿದ್ದ ಮಣ್ಣಿನ ಹಣತೆ.. ಅಲ್ಲಲ್ಲಿ ಬಿಡಿಸಿದ್ದಾ ರಂಗೋಲಿಯಾ ಬಣ್ಣದ ಚಿತ್ತಾರ.. ಬಂದಿರೋ ಎಲ್ಲರ ಕಣ್ಮನ ಸೆಳೆತಾ ಇರುತ್ತೆ.. ದೈವೀಕಾ ಳ ನ್ನು ಸಹ..


ಅದ್ನೇಲ್ಲಾ ನೋಡ್ತಿದ್ದ ದೈವೀಕಾಳ ಮನಸ್ಸು ಹಿಂದಿನ ವರ್ಷದ ದೀಪಾವಳಿ ಯಾ ಸಮಯದಲ್ಲಿ ತಾನು ಅಲ್ಲಿಗೇ ಬಂದಿದ್ದು.. ಅಲ್ಲೇ ಅವಳಿಗೆ ಆದ ಆ ಕಾಳಿದಾಸ ನಾ ಭೇಟಿಯ ಎಲ್ಲಾ ನೆನಪುಗಳು ಮರಕಳಿಸುತಾವೇ ಒಂದೊಂದೇ ಚಿತ್ತಾರ ಕಣ್ ಮುಂದೆ ಬರುತ್ತೆ.. 


ತಗೋಳಿ ಅರ್ಚಕರೇ ಅಂತಾ ಮಾಲೆಗಳಿದ್ದಾ ದೊಡ್ಡ ದೊಡ್ಡ ಎರಡೂ ಚೀಲಗಳ್ನ ಅರ್ಚಕರ ಕೈಗೆ ಕೊಡ್ತಾಳೆ ದೈವೀಕಾ.. 


ಮಾಲೆ ಒಂದು ಬಾಕಿ ಇತ್ತು ಅಂತೇಳಿ ನಗು ಮುಖದಿಂದ ತಗೆದುಕೊಂಡ ಅರ್ಚಕರು ದೇವಿಗೆ ಮಾಲೆ ಮೂಡುಸ್ತಾ ಇರುವಾಗ,, ಅರ್ಚಕರೇ ಇದು ಒಂದು ತಗೋಳಿ ಅಂತಾ ಒಂದು ಚಿಕ್ಕದಾದ ಮಾಲೆ ನ ಕೊಡ್ತಾನೆ ಒಬ್ಬ ಯುವಕ.. 


ಎರಡೂ ಮಾಲೆಗಳ್ನ ಸೇರಿಸಿ ಅರ್ಚಕರು ದೇವಿಗೆ ಮೂಡುಸ್ತಾರೇ.. 


ದೈವೀಕಾ ಮನೆ ಯಿಂದ ತಂದ ಒಂದು ಪುಟ್ಟ ಹಣತೆ ಗೆ ಬತ್ತಿ ಇಟ್ಟು, ಎಣ್ಣೆ ಹಾಕಿ ಕಡ್ಡಿ ಪೆಟ್ಟಿಗೆ ತಂದೆ ಇಲ್ವಾಲಾ..!!?? ಇಲ್ಲೇ ಯಾವದಾದ್ರು ದೀಪದಿಂದ ಹಚ್ಚಿಕೊಳ್ಳೋಣ ಅಂತಾ ನೋಡ್ತೀರ್ವಾಗ.. ಒಂದು ಪುಟ್ಟ ಹೃದಯಾಕಾರದ ಹಣತೆ ಹಚ್ಚಿಕೊಂಡು ಬಂದ ಆ ಯುವಕ. . ಅದೇ ಹಣತೆಯಿಂದ ಅಲ್ಲಿದ್ದ ದೈವೀಕಾಳ ಹಣತೆ ಗು ಹಚ್ತಾನೇ... ಹಾಗೇ ಅವನ ದೀಪ ನಾ ಬಲಕ್ಕೆ, ಅವಳ ದೀಪ ನಾ ಎಡಕ್ಕೆ ಇಡ್ತಾನೇ.. 


ಅದ್ನಾ ನೋಡಿದ ದೈವೀಕಾ.. ನನ್ ಹಣತೆ ಅದು ಅಂತಾಳೆ..


ಹಾ.. ಹಣತೆ ಯಾರ್ದಾದ್ರೆ ಏನು..?? ಕತ್ತಲೆ ಅಲ್ಲಿ ಬೆಳಕು ಮೂಡಿಸೋದು ತಪ್ಪಾ ಅಂತಾ ಕೇಳ್ತಾ ಅವನು ಪ್ರದಕ್ಷಿಣೆ ಹಾಕೋಕೆ ಹೋಗ್ತಾನೆ.. 


ಇಲ್ಲಾ ತಪ್ಪಿಲ್ಲ ಅಂತಾ ಹೇಳ್ತಾ ಗರ್ಭಗುಡಿಯಲ್ಲಿ ದೇವಿ ಗೆ ಕೈ ಮುಗಿದು ಪ್ರದಕ್ಷಿಣೆ ಹಾಕೋಕೆ ಹೋಗ್ತಾಳೆ.. ದೇವಿಯ ಹಿಂದಿನಾ ಬಾಗಿಲಲ್ಲಿ ಯಾರೋ ಕುಂಕುಮ ಕೊಡ್ತೀನಿ ಅಂತಾ ಹರಕೆ ಹೊತ್ತುಕೊಂಡೋರು ಕೊಡ್ತಾ ಇರ್ತಾರೆ.. ಆದ್ರೆ ದೈವೀಕಾ ಅಲ್ಲಿಗೇ ಹೋಗೋದ್ರೋಳಗೆ ಕುಂಕುಮ ಕಾಲಿ ಆಗಿ ಬಿಟ್ಟಿರತ್ತೇ.. ಆಗ ದೈವೀಕಾ, ಅಯ್ಯೋ ಕುಂಕುಮ ನೇ ಸಿಗ್ಲಿಲ್ಲ ಅಂತಾ ಬೇಜಾರಲ್ಲಿ ಎರಡನೇಯಾ ಸುತ್ತು ಪ್ರದಕ್ಷಿಣೆ ಹಾಕುವಾಗ.. ಅಲ್ಲೇ ನಿಂತಿದ್ದ ಆ ಯುವಕ ಬಂದು ತಗೋಳಿ ಅಂತಾ ಕುಂಕುಮ ನಾ ಕೊಡ್ತಾನೆ.. ಯಾವ್ದೋ ರೂಪದಲ್ಲಿ ದೇವಿನೇ ನಂಗೆ ಕುಂಕುಮ ಕಳ್ಸಿದಾಳೆ ಅಂತಾ ಅನ್ಕೊಂಡು ದೈವೀಕಾ ಕುಂಕುಮ ತಗೊಂಡು ಹಣೆಗೆ ಹಚ್ಕೊಂತಾಳೆ..... 


ಐದು ಪ್ರದಕ್ಷಿಣೆ ಹಾಕಿದ ದೈವೀಕಾ ಮತ್ತೆ ಆ ಯುವಕ ಗರ್ಭಗುಡಿಯ ಮುಂದೆ ಬಂದು ದೀರ್ಘ ದಂಡ ನಮಸ್ಕಾರ ಮಾಡ್ತಾರೆ.. ದೇವಿಯ ಮಹಾ ಮಂಗಳಾರತಿ ಆಗುವಾಗ ಆ ಯುವಕ ದೇವಿ ಸುತ್ತಿ ಹೇಳ್ತೀರ್ತಾನೇ.. ಅದ್ನೇ ಕೇಳ್ತಿದ್ದ ದೈವೀಕಾ, ಎಂತಾ ಕಂಠ ಇದು ಸಾಕ್ಷಾತ್ ಆ ಕಾಳಿದಾಸ ನೇ ಹೇಳ್ತಿರೋ ಹಾಗೇ ಇದೆ ಅಂತಾ ಮನಸಲ್ಲೇ ಹೇಳ್ತಾ ಆನಂದಿಸ್ತಾಯಿರ್ತಾಳೆ.. ಅರ್ಚಕರು ಬಂದು ಎಲ್ಲರಿಗೂ ಪ್ರಸಾದ ನೀಡಿ ಹೂವು ಕೊಟ್ಟಾಗ.. ದೈವೀಕಾಳ ಹೂವು ಕೆಳಗೆ ಬಿದ್ದು ಬಿಡತ್ತೆ.. ಅಯ್ಯೋ ಏನಿದು ಅಪಶಕುನ..?? ಅಂತಾ ಅರ್ಚಕರನ್ನೇ ಕೇಳ್ತಾಳೆ.. 


ದೇವರ ಸನ್ನಿದಿ ಅಲ್ಲಿ ಅಪಶಕುನ ಆಗೋಕೆ ಸಾಧ್ಯನಾ..?? ಅಂತೇಳಿ ಕೆಳಗೆ ಬಿದ್ದಿದ್ದಾ ಹೂವನ್ನ ತಗೊಂಡು ಆ ಯುವಕ ನೇ ದೈವೀಕಾ ಳ ಕೈ ಗೆ ಕೊಟ್ಟು ಮುಂದೆ ಹೋಗಿ ಅಲ್ಲೇ ಒಂದು ಮೆಟ್ಟಿಲಲ್ಲಿ ಕುತ್ಗೊಂತಾನೇ.. ಹಿಂದೆನೇ ಬಂದ ದೈವೀಕಾ ಹೂವನ್ನ ತಲೇಲಿ ಇಟ್ಗೊಂತಾ ಬಂದು, ರಿ ಇವ್ರೇ ತಗೋಳಿ ಅಂತ ಪುಳಿಯೋಗರೆ ಯಾ ಪ್ರಸಾದಾನ ಕೊಡ್ತಾಳೆ.. ಧನ್ಯೋಸ್ಮಿ ನಂಗೆ ತುಂಬಾ ಇಷ್ಟಾ ಪುಳಿಯೋಗರೆ ಅಂತೇಳಿ ಪ್ರಸಾದ ತಿಂತಾನೆ ಆ ಯುವಕ .. ಇವ್ರೇ ನೀವ್ ಹೇಳಿದ ದೇವಿ ಸುತ್ತಿ ತುಂಬಾ ಚೆಂದ ಇತ್ತು ಹಾಗೇ ನಿಮ್ಮ ಧ್ವನಿ ನು ಸಹ ಆ ಕವಿರತ್ನ ಕಾಳಿದಾಸ ನೇ ಭುವಿ ಗೆ ಬಂದು ಹೇಳ್ತಿದ್ದಾನೇನೋ ಅನ್ನೋ ತರ ಇತ್ತು ಅಂತಾ ಹೇಳಿ ಮುಂದೆ ಹೋಗ್ತಾಳೆ.. ಆಗ ದೈವೀಕಾಳನ್ನ ಕರೀತಾನೆ ಆ ಯುವಕ.. ಏನು ಅಂತೇಳಿ ಮುಂದೆ ಬಂದ ದೈವೀಕಾಳಿಗೆ ಕುತ್ಗೋಳಿ ಅಂತಾ ಹೇಳ್ತಾನೆ.. ಪಕ್ಕದಲ್ಲೇ ಕುತ್ಗೊಂಡ ದೈವೀಕಾಳಿಗೆ ಧನ್ಯವಾದಗಳು ನಿಮ್ ಹೊಗಳಿಕೆ ಅಂತಾನೇ.. ಒಂದು ಕಿರು ನಗೆ ಬೀರಿದ ದೈವೀಕಾ ಅಲ್ಲೇ ಇದ್ದಾ ಗಣೇಶ್ ಮೂರ್ತಿಯನ್ನೇ ದಿಟ್ಟಿಸಿ ನೋಡ್ತಾ ಇರ್ತಾಳೆ.. 


ಆಗ ಆ ಯುವಕ, ಏನ್ ನೋಡ್ತಿದೀರಾ..?? ಆ ಬ್ರಹ್ಮಚಾರಿ ಗಣೇಶನ್ನ ಅಂತಾನೇ 


ಹೂ..!! ಆ ಗಣೇಶ ಸ್ವಲ್ಪ ನಿಮ್ ತರಾನೇ ಇದೆ ಅಂತಾಳೆ..


ಆಗ ಆ ಯುವಕ ಸಹ ಹೌದ..!! ಅಂತೇಳಿ ಅವಳ ನೋಟಕ್ಕೆ ಜೊತೆ ಆಗ್ತಾನೆ..


ಇಬ್ಬರನ್ನು ಆವಾಗ್ಲೇ ಯಿಂದ ಗಮನಿಸುತಿದ್ದ ಎರಡೂ ಕಣ್ಣುಗಳು ಬಂದು.. ನೂರ್ ಕಾಲ ಹೀಗೇ ಜೊತೆಯಾಗಿ ಇರಿ ಅಂತಾರೆ ಅದ್ನಾ ಕೇಳಿಸಿಕೊಂಡು ಇಬ್ಬರು ಒಂದು ಮುಗುಳುನಗೆ ಅಲ್ಲೇ ಒಬ್ಬರನ್ನು ಒಬ್ಬರು ನೋಡ್ಕೊಂತಾರೇ.. 


ಆಗ ಆ ಯುವಕ ನಾ ಫೋನ್ ವೈಬ್ರೆಟ್ ಆಗತ್ತೆ.. ಸರಿ ನಾನ್ನೀನ್ನು ಬರ್ತೀನಿ ಅಂತೇಳಿ.. ಅವನು ಹೋಗ್ತಿದ್ರೆ,, 

ಇತ್ತಾ ದೈವೀಕಾ ಅವನು ಮರೆಯಾಗೋವರೆಗೂ ಅದೇ ರಸ್ತೆ ನೇ ನೋಡ್ತಿರ್ತಾಳೆ.... 


ನೂರ್ ಕಾಲ ಜೊತೆ ಆಗಿರಿ ಅಂತ ಹರಸಿದ್ದಾ ಆ ಎರಡು ಕಣ್ಣುಗಳು ಮತ್ತೆ ದೈವೀಕಾ ಒಬ್ಳೆ ನಿಂತಿರೋದು ನೋಡಿ ನಿಮ್ ಗಂಡ ಎಲ್ಲಿ ಹೋದ್ರಮ್ಮಾ..?? ಅಂತಾ ಕೇಳ್ತಾರೆ.. 


ಅಮ್ಮಾ ನೀವ್ ಅನ್ಕೊಂಡಿರೋ ಹಾಗೇ ಅವರು ನನ್ನಾ ಗಂಡ ಅಲ್ಲಾ ಆದ್ರೆ ಅವರು ನನ್ ಗಂಡ ಆಗ್ಲಿ ಅನ್ನೋದು ನನ್ನಾ ಕೋರಿಕೆ ಅಂತಾಳೆ.. ಕೊನೆ ಮಾತು ಅವ್ಳಿಗೆ ಅರಿವೇ ಇಲ್ಲದೇ ಬಂದಿರತ್ತೆ.. ಅರೇ ನಾನ್ ಏನ್ ಹೇಳಿದೆ ಅಂತಾ ತನ್ನನ್ನೇ ತಾನು ಪ್ರಶ್ನೆ ಮಾಡ್ಕೊಂಡು.. ನೋಡಿದ ಒಂದೇ ನೋಟಕ್ಕೆ ಮನಸ್ಸು ಸೋತು ಹೋಯ್ತಾ ಅಂತಾ ಯೋಚಿಸ್ತಾ ಇರುವಾಗ.....!!!!


ಒಹ್ ಹೌದ,,ಅಂಗೆ ಆಗ್ಲಿ.. ನೀವಿಬ್ರು ಹಚ್ಚಿದ ದೀಪ, ಕೊಟ್ಟ ಮಾಲೆ, ಅವರು ಕೊಟ್ಟ ಹೂವು, ಕುಂಕುಮ ಮತ್ತೆ ನೀವಿಬ್ರು ಇಲ್ಲಿ ಜೊತೆಯಾಗಿ ಕೂತಿದ್ದು ಇವುನೆಲ್ಲಾ ನೋಡಿ ಗಂಡ ಹೆಂಡತಿ ಅನ್ಕೊಂಡಿದ್ದೆ.. ನಿಂಗು ಅದೇ ಆಸೆ ಇದ್ರೆ, ನಿನ್ ಕೋರಿಕೆ ಲಿ ಯಾವುದೇ ಕಲ್ಮಶ ಇಲ್ದೇ ಇದ್ರೆ ಬರೋ ಮುಂದಿನ ದೀಪಾವಳಿ ಲಿ ನೀವಿಬ್ರು ಜೊತೆಯಾಗಿ ಆ ದೇವಿ ಮುಂದಿರೋ ಆ ಜೋಡಿ ದೀಪ ಹಚ್ತೀರಾ ಅಂದ್ರು 


ಮನದ ಮೊಲೆಯಲ್ಲಿ ಎಲ್ಲೊ ಬೆಳಕು ಮೂಡಿದಂಗೆ ಆಗಿ ದೇವಿಗೆ ನಮಸ್ಕಾರ ಮಾಡಿರ್ತಾಳೆ ದೈವೀಕಾ


ಯಾಕಮ್ಮ ಹೂವು ತಂದು ಇಲ್ಲೇ ನಿಂತು ಬಿಟ್ಟಿದೀಯ..?? ಆವಾಗ್ಲೇ ಯಿಂದ ಅರ್ಚಕರು ನಿನ್ನೇ ಕರೀತಿದಾರೆ.. ಅಂತಾ ಒಬ್ಬ ಭಕ್ತ ಬಂದು ಹೇಳಿದಾಗ್ಲೇ,,.. ಗತಕಾಲದ ನೆನಪಿನಿಂದ ವಾಸ್ತವಕ್ಕೆ ಬರ್ತಾಳೆ ದೈವೀಕಾ.. ಅಯ್ಯೋ ನನ್ ಬುದ್ಧಿಗಿಷ್ಟು ದೇವಸ್ಥಾನಕ್ಕೆ ಬಂದು ಹಳೇ ನೆನಪುಗಳ್ನ ಮಾಡ್ಕೊಂತಾ ಇದೀನಾಲಾ ಅನ್ಕೊಂತಾ.. ತಪ್ಪಾಯ್ತು ಅರ್ಚಕರೇ.. ಅವಾಗ್ಲೇ ಬಂದೆ ಆದ್ರೆ ಅನ್ಕೊಂತಾ ಹೂವಿನ ಚೀಲ ಕೊಡ್ತಾಳೆ.. ಪರವಾಗಿಲ್ಲ ಬಿಡಮ್ಮ ಅಂತಾ ಅದೇ ಮುಗುಳುನಗೆ ಅಲ್ಲೇ ಹೂವನ್ನ ತಗೊಂಡು ದೇವಿಗೆ ಮೂಡುಸ್ತಾರೇ..  


ಆದ್ರೆ, ಎಲ್ಲಿ ಆ ಕಾಳಿದಾಸ..?? ಬರ್ಬೇಕಿತ್ತು ಇಷ್ಟ್ರಲ್ಲೇ.. ನನ್ ಜೊತೆಗೆ ಆ ದೇವಿಗೆ ಹೂವನ್ನು ಕೊಡ್ಬೇಕಿತ್ತು ಅಂತಾ ಒಮ್ಮೆ ಸುತ್ತಲೂ ದೇವಸ್ಥಾನ ನಾ ನೋಡ್ತಾಳೆ. ಆದ್ರೆ ಎಲ್ಲಿಯೂ ಅವರು ಕಾಣೋದೇ ಇಲ್ಲಾ.. ಬೇಜಾರಲ್ಲೇ ಹೋಗಿ ಈ ಸಲ ಹೃದಯಾಕಾರದ ಹಣತೆ ಅವಳೇ ತಂದಿರ್ತಾಳೆ ಅದನ್ನೇ ಅವರು ಹೋಲುವ ತರ ಇರೋ ಗಣೇಶ್ ನಾ ಮುಂದೆ ಹಚ್ತಾಳೆ.. ಈಗಾದ್ರೂ ಅವರು ಬಂದ್ರೇನೋ ಅಂತಾ ಮತ್ತೆ ನೋಡ್ತಾಳೆ ಆದ್ರೆ ಅವರ ಸುಳಿವೇ ಇರಲ್ಲಾ.. ಮತ್ತೆ ಆ ದೇವಿಯಲ್ಲಿ ಬೇಡ್ತಾ ಪ್ರದಕ್ಷಿಣೆ ಹಾಕ್ತಾ ಇರ್ತಾಳೆ.. ಎಲ್ಲಿಂದಲೋ ಬಂದ ಗಾಳಿ ಲಿ ಮನಸ್ಸಿನ ಮೂಲೆ ಗೆ ಬೆಳಕು ಸಂಚರಿಸಿದ ಹಾಗೇ ಆಗುತ್ತೆ.. ಕಾಳಿದಾಸ ನ ಆಗಮನ ಆಯ್ತಾ ಅಂತಾ ಒಮ್ಮೆ ದೇವಸ್ಥಾನ ದ ಮುಂಬಾಗಿಲ ಕಡೆ ನೋಡ್ತಾಳೆ.. ಅವಳ ನಂಬಿಕೆ ಸುಳ್ಳಾಗಿರಲ್ಲಾ.. ಅಲ್ಲಿ ನಿಜವಾಗ್ಲೂ ಅವಳ ಕಾಳಿದಾಸ ಆ ಯುವಕ ಬರ್ತಾ ಇರ್ತಾರೆ ಅದೇ ನಗು ಅದೇ ಕಣ್ಣುಗಳು ಅದೇ ಮಾಲೆ.. ಅವರನ್ನೇ ನೋಡ್ತಿದ್ದ ದೈವೀಕಾ ಳ ಕಣ್ಣುಗಳು ಸಂತೋಷದಿಂದ ಕುಣಿದು ಕುಪ್ಪಳಿಸುವಾಗ ಒಮ್ಮೆಲೇ ದುಃಖ ಬೇಸರ ಒತ್ಥಳಿಸಿ ಬರುತ್ತೆ.. ಆ ಯುವಕ ಬಾ ಅಂತೇಳಿ ಒಂದು ಹುಡುಗಿಯ ಕೈ ಇಡಿದು ಗರ್ಭಗುಡಿಯ ಒಳಗೆ ಹೋಗ್ತಾರೆ ಅದನ್ನ ನೋಡಿದ ದೈವೀಕಾ ಅಲ್ಲೇ ಒಮ್ಮೆ ಕುಸಿದು ಕುಳಿತುಬಿಡ್ತಾಳೆ.. 


ಆ ಹುಡುಗಿಯ ಕೈ ತುಂಬಾ ಹಸಿರು ಬಳೆ, ಗಿಳಿಹಸಿರು ಸೀರೆ, ಕಿವಿಯಲ್ಲಿ ಜುಮುಕಿ, ಉದ್ದವಾದ ಜಡೆ ಗೆ ಮಲ್ಲಿಗೆ ಕನಕಾಂಬರಿ ಸೇರಿ ಮುಡಿದಿರೋ ಆ ಹುಡುಗಿ ಯಾ ಆ ಚೆಂದದ ನಗು ಇಷ್ಟೇ ಇದ್ದಿದ್ರೆ ದೈವೀಕಾ ಗೆ ಖಂಡಿತಾ ಬೇಸರ ಆಗ್ತಾ ಇರ್ಲಿಲ್ಲಾ ಆದ್ರೆ ಅವಳು ನೋಡಿದ್ದು ಮಾಂಗಲ್ಯ.. ಆ ಹುಡುಗಿ ಯಾ ಕೊರಳಲ್ಲಿ ಇದ್ದಾ ಇನ್ನು ಈಗತಾನೇ ಚಿನ್ನದ ಪ್ರತಿ ಎಳೆಯಿಂದ ಮಾಡಿದ್ದ ಆ ಮಾಂಗಲ್ಯ ನಾ ನೋಡಿ ಕುಸಿದು ಬಿದ್ದಿದ್ಲು.. 


ಅಲ್ಲೇ ಭಕ್ತರು ಬಂದು ಏನಾಯ್ತಮ್ಮ ಅಂತಾ ದೈವೀಕಾಳನ್ನ ಎಬ್ಬಿಸಿದಾಗ.. ಏನಿಲ್ಲಾ ಉಪವಾಸ ಇದ್ದೇ ಅದು ಅಲ್ದೇ ಬಿಸಿಲಿಗೆ ಸ್ವಲ್ಪ ತಲೆ ತಿರುಗಿದಂಗೆ ಆಯ್ತು ಅಂತೇಳಿ ಪ್ರದಕ್ಷಿಣೆ ಮುಗಿಸಿ ಗರ್ಭಗುಡಿಗೆ ಬರ್ತಾಳೆ.. ಅದ್ಯಾಕೋ ಮುಂದೆ ನಿಲ್ಲೋಕೆ ಧೈರ್ಯ ನೇ ಸಾಲದೇ ಹಿಂದೆನೇ ಉಳಿದು ಬಿಡ್ತಾಳೆ.. ಆ ಯುವಕ ಮತ್ತೇ ಯುವತಿ ಮುಂದೆನೇ ನಿಂತು ಪೂಜೆ ಮಾಡ್ಸುವಾಗ ಆ ಯುವಕ ಮತ್ತೆ ಕೊನೆಯ ವರ್ಷದ ದೀಪಾವಳಿ ಅಲ್ಲಿ ಹೇಳಿದ ದೇವಿ ಸುತ್ತಿ ಅನ್ನೆ ಹೇಳ್ತಾನೆ..


ಅದೇ ಧ್ವನಿ ಅದೇ ಸುತ್ತಿ ಕೇಳ್ತಿದ್ದ ದೈವೀಕಾ ಗೆ ಬೇಸರ ಆಗಿ......

ನನ್ ಪ್ರೀತಿಲಿ ಅದ್ಯಾವ ಕಲ್ಮಶ, ಕಪಟ ಇತ್ತು ತಾಯಿ..

ಒಂದು ವರ್ಷದಿಂದ ಅವರನ್ನ ಬಿಟ್ಟು ಬೇರೆ ಯಾರನ್ನು ಕನಸಲ್ಲೂ ನೆನೆಸಿಲ್ಲಾ..

ನಿನ್ನಾ ಹತ್ರಾ ಅವರ ಬಗ್ಗೆ ಬಿಟ್ಟು ಬೇರೆ ಮಾತಾಡಿಲ್ಲ..

ಅವರು ಯಾರು ಏನು ಏನಂದ್ರೆ ಏನು ಗೊತ್ತಿಲ್ದೆ ಇದ್ರೂ ಅವರನ್ನೇ ಮನಸಾರೆ ಪ್ರೀತಿಸಿದ್ದೇ.. ಇದ್ರಲ್ಲಿ ಯಾವ ಮೋಸ, ಯಾವ ಕಪಟ ಕಾಣ್ತು ತಾಯಿ ನಿಂಗೆ,.. ಕೊನೆ ಪಕ್ಷ ಅವರ ಹೆಸರು ಸಹ ನಂಗೆ ಗೊತ್ತಿಲ್ದೇನೆ ಪ್ರೇಮಿಸಿದ್ದೇ.. ಯಾಕೆ ತಾಯಿ ನಾನು ಕೇಳದೇನೇ ಇದ್ರೂ ಎಲ್ಲಾ ಸಂತೋಷ ನು ಕೊಟ್ಟ ನೀನು, ನಾನು ಕೇಳಿದ ಜೀವ ನ ಮಾತ್ರ ಯಾಕೆ ಕೊಡ್ಲಿಲ್ಲಾ ಅಂತಾ ಮೌನವಾಗಿ ಮನದಲ್ಲೇ ರೋದಿಸ್ಸ್ತೀದ್ಲು.. ಜಾಸ್ತಿ ಹೊತ್ತು ಅಲ್ಲಿ ಅವಳ ಕಾಳಿದಾಸ ಮತ್ತೆ ಆ ಹುಡುಗಿ ನಾ ನೋಡೋಕೆ ಆಗದೇ ಅಲ್ಲಿಂದ ಎಲ್ಲೂ ನಿಲ್ಲದೇ ಮನೆ ದಾರಿ ಇಡಿದು ಬಿಡ್ತಾಳೆ.. 


ಶಾರದಾ ಅವರು ತಿಂಡಿ ತಿನ್ನು ಬಾ ಅಂದ್ರು,, ಹೂ ಬರ್ತೀನಿ ಅಂತೇಳಿ ರೂಮ್ ಗೆ ಹೋಗಿ ಬಿಕ್ಕಿ ಬಿಕ್ಕಿ ಅಳ್ತಾಳೆ.. ಜೀವನದಲ್ಲಿ ಮೊದಲನೇ ಬಾರಿ ತನಗಾಗಿ ಕೇಳಿದ್ದೆ ಸಿಗ್ಲಿಲ್ಲಾ ಅಲಾ ಅನ್ನೋ ನೋವು ಇಂಚಿಂಚಾಗಿ ಅವಳನ್ನ ಕುಸಿಯೂ ತರ ಮಾಡ್ತೀರತ್ತೇ.. 


ಇತ್ತಾ ಶಾರದಾ ಅವರು ಇವಳೇನು ಪುಳಿಯೋಗರೆ ಮಾಡು ಅಂತೇಳಿ ತಿನ್ನದೇ ಅಂಗೆ ಹೋದ್ಲಲ್ಲಾ ಅಂತಾ ಮತ್ತೊಮ್ಮೆ ಕರೀತಾರೆ.. ಪಾಪ ಅವಳಾದ್ರೂ ಹೇಗೆ ಬರ್ತಾಳೆ..? ತಾನು ಪ್ರೀತಿಸಿದ ಹುಡುಗನ್ನ ಇನ್ನೊಂದು ಹುಡುಗಿ ಜೊತೆ ನೋಡಿದಾಗ ಬೇಸರ ಆಗಿ ಅಳ್ತಾ ಕೂತಿರ್ತಾಳೆ.. 


ಇನ್ನೊಮ್ಮೆ ಮತ್ತೆ ಶಾರದಾ ಅವರು ಕರೆದಾಗ ಕಣ್ಣುಗಳ್ನ ಒರೆಸಿ ಮುಖ ತೊಳೆದು ನಗು ಮುಖದ ಮುಖವಾಡ ಹೊತ್ತು ನನ್ ಹಣೆಬರಹ ನೇ ಹೀಗೇ ಇದ್ರೆ ಏನು ಮಾಡೋಕಾಗಲ್ಲ ಬಂದಂಗೆ ಬರ್ಲಿ ಅಂತಾ ಮನಸಲ್ಲೇ ತನಗೆ ತಾನೇ ಸಮಾಧಾನ ಮಾಡ್ಕೊಂಡು ಅಡುಗೆ ರೂಮ್ ಗೆ ಹೋಗಿ ಪುಳಿಯೋಗರೆ ತಿಂತಾ ಇರ್ತಾಳೆ.. ಶಾರದಾ ಅವರು ಬಂದು ಸಪ್ಪಗೆ ಇರೋ ಮಗಳ ಮುಖ ನೋಡಿ ಏನಾಯ್ತು ಮಗಳೇ ಅಂತಾರೆ.. ಏನಿಲ್ಲಾ ಮ ದೀಪ ಎಲ್ಲಾ ತಗಿ ತೊಳಿತೀನಿ ಅಂತಾ ತಿಂಡಿ ತಿಂದು ಮುಗಿಸಿ ದೀಪ ಎಲ್ಲಾ ತೊಳೆದು ವರೆಸ್ತಾ ಇರ್ತಾಳೆ.. 


ಇತ್ತಾ ಮನೆ ಡೋರ್ ಯಾರೋ ಬಡಿದಂಗೆ ಆಗಿ ಶಾರದಾ ಅವರು ತಗಿತಾರೆ ನೋಡಿದ್ರೆ ಇವ್ರು ದಿನಾ ಹೂವನ್ನ ಕಟ್ಟಿ ಮಾಲೆ ಮಾಡಿ ಕೊಡೊ ಆ ದೇವಸ್ಥಾನ ದ ಅರ್ಚಕರು ಬಂದಿರ್ತಾರೆ.. 


ಹಬ್ಬದ ದಿನಾ ಅರ್ಚಕರು ಮನೆಗೆ ಬಂದಿದ್ದು ಖುಷಿ ಆಗಿ ಬನ್ನಿ ಒಳಗೆ ಅಂತಾ ಶಾರದಾ ಅವರು ವಿನಯದಿಂದ ಕರೀತಾರೆ 


ಅದೇ ನಗು ಮುಖ ಹೊತ್ತ ಅರ್ಚಕರು ಒಳಗೆ ಬಂದಾಗ ಮಹಾಶಯ ಬಂದು ಕಾಲಿಗೆ ಬಿದ್ದು ನಮಸ್ಕಾರ ಮಾಡಿ.. ಗುರುಗಳೇ ನೀವಿಲ್ಲಿ..?? ಏನಾದ್ರು ಕೆಲಸ ಇತ್ತಾ..?? ಹೇಳಿ ಕಳ್ಸಿದ್ರೆ ನಾನೇ ಬರ್ತಿದ್ದೆ ಅಲಾ ಅಂತಾನೇ.. 


ಆಗ ಅರ್ಚಕರು., ಕೆಲಸ ಇತ್ತು ಅದು ನಿಮ್ಮ ಮನೇಲೇ ಮಾತೋಡೋದು ಅಂತಾರೆ ನಗ್ತಾ. 


ಏನಿರ್ಬೋದು ಅದು ಅರ್ಚಕರು ಮನೆಗೆ ಬಂದು ಮಾತಾಡೋ ಅಂತದ್ದು ಅಂತಾ ಶಾರದಾ ಮತ್ತೆ ಮಹಾಶಯ ಯೋಚಿಸ್ತಾ ಅಂತದ್ ಏನ್ ಗುರುಗಳೇ..?? ಅಂತಾರೆ ಆಶ್ಚರ್ಯದಿಂದಾನೆ.. 


ನೋಡಿ ಈ ಹುಡುಗ ನ ಫೋಟೋ, ನಮ್ ದೈವೀಕಾಳಿಗೆ ಹೇಳಿ ಮಾಡ್ಸಿರೋ ಜೋಡಿ ತರ ಇದಾನೆ ಅಂತಾ ಒಂದು ಫೋಟೋ ಕೊಡ್ತಾರೆ..


ಇತ್ತಾ ಶಾರದಾ ಮತ್ತೆ ಮಹಾಶಯ.. ದೈವೀಕಾಳ ಮದ್ವೆ ಬಗ್ಗೆ ಇನ್ನು ಯೋಚನೆನೇ ಮಾಡದೇ ಇದ್ದೋರಿಗೆ ಅನಿರೀಕ್ಷಿತವಾಗಿ ಬಂದ ಅರ್ಚಕರ ವಾಣಿ ಸೂಜಿಗ ಅನ್ಸಿದ್ರು ಒಮ್ಮೆ ಫೋಟೋ ನೋಡ್ತಾರೆ.. 


ಎಂತ.. !! ಹುಡುಗ ತುಂಬಾ ಲಕ್ಷಣವಾಗಿ ಇದಾನೆ ಅಂತಾರೆ.. 


ಹೂ.. ಒಳ್ಳೆ ಹುಡುಗ ವೃತ್ತಿ ಅಲ್ಲಿ ಒಂದು ಕಾಲೇಜ್ ಅಲ್ಲಿ ಲೆಕ್ಚರರ್ ಆಗಿ ಕೆಲಸ ಮಾಡ್ತಿದಾನೆ. ಒಳ್ಳೆ ಕುಟುಂಬ ಎಲ್ಲಾರು ನಂಗೆ ಗೊತ್ತಿರೋರೇ ಇತ್ತೀಚಿಗೆ ಅವರ ತಂಗಿ ಮದ್ವೆ ಮಾಡಿದ್ರು.. ತಂಗಿ ಅಮೇರಿಕಾ ಗೆ ಹೋಗ್ತಿದಾಳೆ ಅಸ್ಟ್ರಲ್ಲೇ ಅಣ್ಣನ ನಿಶ್ಚಿತಾರ್ಥ ಆದ್ರೂ ಮಾಡ್ಲೇ ಬೇಕು ಅಂತಾ ಹಠ ಮಾಡ್ತಿದ್ದಳಂತೆ ಅದ್ಕೆ ನಿಮ್ಗೆ ಹೇಳ್ತಿದೀನಿ ಅಂತಾ ಅರ್ಚಕರು ಹೇಳಿ ಅವರನ್ನೇ ನೋಡ್ತಾ ಇರ್ತಾರೆ.. 


ಇತ್ತಾ ಶಾರದಾ ಅವರಿಗೆ ಹುಡುಗ ಇಷ್ಟಾ ಆದ್ರೂ ಮಗಳಿಗೆ ಇಷ್ಟು ಬೇಗ ಮದುವೆ ನಾ ಅನ್ನೋ ಚಿಂತೆ ಕಾಡುತ್ತೆ.. ಆದ್ರೂ ಒಮ್ಮೆ ಯಾವತ್ತಿದ್ರೂ ಮಾಡೋದೇ ಅದ್ರಲ್ಲೂ ಅರ್ಚಕರೇ ತಂದಿರೋ ಸಂಭಂದ ಒಳ್ಳೇದೇ ಆಗಿರತ್ತೆ ಅನ್ಕೊಂಡು ಒಮ್ಮೆ ಮಗಳಿಗೆ ಫೋಟೋ ತೋರಿಸ್ತೀನಿ ಅಂತಾ ದೀಪ ಕ್ಲೀನ್ ಮಾಡ್ತಾ ತನ್ನದೇ ದುಃಖ ದಲ್ಲಿ ಇದ್ದಾ ದೈವೀಕಾಳಿಗೆ ತೋರಿಸೋಕೇ ಹೋಗ್ತಾರೆ.. 


ಇತ್ತಾ ಅರ್ಚಕರ ಎಲ್ಲಾ ಮಾತನ್ನು ಕೇಳ್ಸ್ಕೊಂಡಿರ್ತಾಳೆ ದೈವೀಕಾ..... ಆಗ ಅಮ್ಮಾ ಬಂದು ಫೋಟೋ ನೋಡು ಅಂದಾಗ.. " ಅಮ್ಮಾ ನಂಗೆ ಯಾವ್ ಫೋಟೋ ನು ತೋರಿಸ್ಬೇಡ, ನೀವೇಗೆ ಹೇಳ್ತಿರೋ ನಾನ್ ಆಗೇ ಕೇಳ್ತೀನಿ" ಅಂತಾಳೆ ತನ್ನ ಎಲ್ಲಾ ನೋವನ್ನು, ಕಾಳಿದಾಸನನ್ನು ಮರೆಮಾಚಿ.. 


ಅಯ್ಯೋ ಅಂಗದ್ರೆ ಹೆಂಗಮ್ಮಾ.. !? ನಿನ್ ಸ್ವಂತ ಅಭಿಪ್ರಾಯ ಇಲ್ದೇ ನಾವು ಮುಂದುವರಿಯೋಕೆ ಆಗಲ್ಲಾ.. 


ಅಮ್ಮಾ ಹೇಳಿಲ್ವ ನಿಮ್ ಇಷ್ಟಾ ನೇ ನನ್ ಇಷ್ಟಾ ಅಂತೇಳಿ ದೀಪ ನೆಲ್ಲಾ ಹಚ್ಚಿ ಇಡ್ತಾಳೆ.. 


ಸರಿ ಅಂತೇಳಿ ಶಾರದಾ ಅವರು ಮತ್ತೇ ಮಹಾಶಯ ಫೋಟೋ ನೋಡಿ, ಹುಡುಗ ಚೆಂದ ಇದಾನೆ ಮತ್ತೇ ಒಳ್ಳೆ ಕೆಲಸ ಸಹ ಇದೆ ಒಮ್ಮೆ ಮುಖ ಭೇಟಿ ಮಾಡಿ ನೋಡೋಣ ಅಂತಾರೆ 


ಅರ್ಚಕರಿಗೆ ಖುಷಿಯಾಗಿ ನಾಳೆ ದೀಪಾವಳಿ ಮನೆಗೆ ಬೆಳಕಾಗಿ ಅಳಿಯ ಬಂದ್ರೆ ಒಳ್ಳೇದಲ್ವಾ ಅಂತಾ ಹೇಳಿ ನಾಳೇನೇ ಹುಡುಗನ ಮನೆಯವರಿಗೆ ಬರೋಕೆ ಹೇಳ್ಳಾ ಮತ್ತೇ ಅಂತಾ ಕೇಳ್ತಾರೆ .. 


ಅರೇ ನಾಳೇನೇನಾ ನಾವಿನ್ನು ಏನು ರೆಡಿ ಆಗಿಲ್ಲಾ ಅಂತಾ ಶಾರದಾ ಅವರು ಹೇಳಿದ್ರೆ ಮಹಾಶಯ ಅಯ್ಯೋ ಬಿಡಮ್ಮ ಅದ್ರಲ್ಲಿ ಏನು ರೆಡಿ ಆಗೋದು ನೀವು ಕರೆಸಿ ಗುರುಗಳೇ ಅಂತಾನೇ.. 


ಅರ್ಚಕರು ಖುಷಿಯಿಂದ ಸರಿ ನಾಳೆ ಅವರು ಬರ್ತಾರೆ ಅಂತೇಳಿ ಎಲ್ಲಿ ಮಗಳು ಕಾಣ್ಸ್ತಿಲ್ಲ ಅಂದಾಗ.. ದೈವೀಕಾ ಒಳಗಿಂದ ಪಾನಕ ಮಾಡ್ಕೊಂಡು ಬಂದು ಕೊಟ್ಟು ಆಶೀರ್ವಾದ ತಗೊಂತಾಳೆ.. ಸರಿ ಅಂತೇಳಿ ಅರ್ಚಕರು ಬೀಳ್ಕೊಡ್ತಾರೇ.... 


ಮರುದಿನ ಬೆಳಗ್ಗೆನೇ ಎಂದಿನಂತೆ ಎಲ್ಲಾ ದೀಪಾವಳಿ ಯಾ ಸಕಲ ಸಿದ್ಧತೆ ಗಳನ್ನು ಮಾಡ್ತಾ ಇರ್ತಾರೆ ದೈವೀಕಾ ಮತ್ತೇ ಶಾರದಾ ಅವರು.. ಇತ್ತಾ ಮಹಾಶಯ ಸಹ ಅವ್ರಿಗೆ ಸಹಾಯ ಮಾಡ್ತಾ ಇರ್ತಾನೇ.. ಸ್ವಲ್ಪ ಹೊತ್ತಲ್ಲೇ ಶಾರದಾ ಅವರು " ಮಗಳೇ ನಿನೋಗಿ ಸೀರೆ ಹಾಕೊಂಡು ತಯಾರಾಗಿ ಬಿಡು " ಅಂತಾರೆ.. 


ಆದ್ರೆ ದೈವೀಕಾ ಅಷ್ಟೋತ್ತು ತನ್ನ ಪ್ರೀತಿ ನ ಮರೆತು ಹಬ್ಬದ ತಯಾರಿಲಿ ಮೈ ಮರೆತವಳು ಅಮ್ಮಾ ನಾ ಮಾತು ಕೇಳಿ ಸಿಡಿಲೆ ಬಡಿದಂಗೆ ಆಗುತ್ತೆ.. ಆದ್ರೂ ಎಷ್ಟು ಚಿಂತೆ ಮಾಡಿದ್ರು ಆ ಕಾಳಿದಾಸ ನನ್ನೋನು ಆಗಲ್ಲಾ ಅಂತಾ ಯೋಚಿಸಿ ಸರಿ ನಮ್ಮ ಅಂತೇಳಿ ರೆಡಿ ಆಗೋಕೆ ಹೋಗ್ತಾಳೆ.. 


ಇತ್ತಾ ಅರ್ಚಕರು ನೋಡಿದ ಹುಡುಗನ್ನು ಮತ್ತೇ ಅವರ ಅಪ್ಪ ಅಮ್ಮಾ ತಂಗಿ ನಾ ಕರ್ಕೊಂಡು ಬರ್ತಾರೆ.. 


ಖುಷಿಯಿಂದ ಶಾರದಾ ಅವರು ಮತ್ತೇ ಮಹಾಶಯ ಅವರನ್ನೆಲ್ಲಾ ಬರಮಾಡಿಕೊಳ್ತಾರೆ.. 


ಎಲ್ಲಾರು ಕೂತು ಮಾತಾಡುವಾಗ.. ಹುಡುಗನ ತಾಯಿ ಮಾತಾಡಿ, " ನಿಮ್ ಮಗಳು ರಂಗೋಲಿ ತುಂಬಾ ಚೆನ್ನಾಗಿ ಹಾಕ್ತಾಳೆ.. ಅಂತಾರೆ 


ಹೌದು ಅವ್ಳಿಗೆ ಚಿಕ್ಕೊಳು ಇರುವಾಗಿಂದನು ಬಾಳ ಇಷ್ಟಾ ದಿನಾ ದಿನಾ ಹೀಗೇ ಹೊಸ ಹೊಸ ಡಿಸೈನ್ ಅವಳೇ ಕಂಡು ಹಿಡಿದು ಹಾಕ್ತಾಇರ್ತಾಳೆ ಅಂತಾರೆ ಶಾರದಾ ಅವರು.. 


ಒಹ್. ಒಳ್ಳೇದು ಆಯ್ತು ಬಿಡಿ ನಮ್ ಮನೆ ಮುಂದೆ ಜಾಗ ನೇ ಇರ್ಲಿಲ್ಲಾ. ಇತ್ತೀಚಿಗೆ ಜಾಗ ಮಾಡೀವಿ. ರಂಗೋಲಿ ಹಾಕ್ಬೋದು

ಅಂತಾರೆ ನಗ್ತಾ.. 


ಆಗ ಹುಡುಗ ನಾ ಅಪ್ಪ ಮಾತಾಡಿ, ನೀವು ಹೆಣ್ ಮಕ್ಳು ಹಿಂಗೇ ಮಾತಾಡ್ತಾ ಇರ್ತೀರಾ ಅತ್ವಾ ನನ್ ಸೊಸೆ ನು ಕರೀತೀರಾ ಅಂತಾರೆ.. ಅಲ್ಲಿದ್ದ ಎಲ್ಲಾರು ನಗು ಮುಖದಿಂದಾ ನೇ ಹುಡುಗಿಯ ನಿರೀಕ್ಷೆ ಯಲ್ಲೇ ಕಾಯ್ತಾ ಇರ್ತಾರೆ.. 


ಹುಡುಗನ ಎದೆ ಬಡಿತ ಅವನಿಗೆ ಕೇಳೋ ಅಷ್ಟು ಜೋರಾಗಿ ಇರುತ್ತೆ.. 


ಶಾರದಾ ಅವರು ಒಳಗೆ ಹೋಗಿ ದೈವೀಕಾ ಳನ್ನ ಕರೆದು ಹಾಲ್ ಅಲ್ಲಿ ಇರೋ ಎಲ್ಲರಿಗೂ ಜಾಮೂನ್ q ಹೇಳ್ತಾರೆ.. 


ಮನಸ್ಸಿಲ್ಲದ ಮನಸ್ಸಿಂದ ಟ್ರೇ ಇಡಿದು,.. ಯಾರ್ ಮುಖನೂ ನೋಡದೇ ಎಲ್ಲರಿಗೂ ಜಾಮೂನ್ ಇರೋ ಬೌಲ್ ಕೊಡ್ತಾಳೆ.. ಅಮ್ಮಾ ನ ಆಜ್ಞೆ ಅಂತೆ ಅಮ್ಮಾ ಮತ್ತೇ ಅಣ್ಣ ನ ಮಧ್ಯ ಕೂರೋಕೆ ಹೋಗುವಾಗ.. ಹುಡುಗನ ಅಮ್ಮಾ "ಬಾಮ್ಮ ಇಲ್ಲಿ ಕುತ್ಗೊ ಅಂತೇಳಿ ಸರಿದಾಗ ಹೋಗಿ ಅತ್ತೆ ಮಾವ ಮಧ್ಯ ಕುತ್ಗೊಂತಾಳೆ.. 


ಮನಸ್ಸಲ್ಲೇ ನನ್ನಾ ಕಾಳಿದಾಸ ಇಲ್ಲಿ ಇದ್ದಿದ್ರೆ ಅನ್ನೋ ಆಶಾಭಾವನೆ ಮೂಡಿ ಅವಳ ಎದೆ ಬಡಿತ ಯಾಕೋ ಜೋರಾಗುತ್ತೆ.. ಅರೇ ಇದೇನು ಇಗಾಗ್ತಿದೇ ನನ್ನಾ ಕಾಳಿದಾಸ ಇಲ್ಲೇ ಇಲ್ಲೋ ಇದ್ದಂಗೆ ಅನ್ಸ್ತಿದೆ ಅಂತಾ ಯೋಚಿಸ್ತಿರುವಾಗ.. 


" ಯಾಕಮ್ಮ ತಲೆ ಬಗ್ಗಿಸಿಕೊಂಡೆ ಇದ್ದೀಯ. ನಮ್ನೆಲ್ಲಾ ನೋಡ್ಬಾರ್ದು ಅಂತಾ ಹರಕೆ ಹೋತ್ಗೊಂಡಿಯೇನು.. !!?? ಅಂತಾ ಹುಡುಗ ನಾ ತಾಯಿ ಸಂಗೀತ ಅವರು ಕೇಳಿದ್ರು.


ಆಗೇನಿಲ್ಲ ಅಮ್ಮಾ ಅಂತ, ಭಾರವಾದ ತಲೆ ಎತ್ತಿ ನೋಡಿ ಹೇಳಿದ್ಲು ದೈವಿಕಾ 


ನೀನು ಚಟ್ ಪಟ್ ಅಂತ ಮಾತಾಡೋ ಪಟಾಕಿ ಅಂದ್ರು ಅರ್ಚಕರು.. ನೀನೇನಮ್ಮ ನೋಡಿದ್ರೆ ಮೌನ ಗೌರಿ ಆಗಿದೀಯ ಅಂತಾ ಸಂಗೀತಾ ಅವರು ಮತ್ತೇ ಮಾತಿಗೆಳೀತಾರೇ ದೈವಿಕಾಳನ್ನ., 


ಆದ್ರೆ ದೈವಿಕ ಮಾತ್ರ ತನ್ನ ಮನದರಸನಾ ನೆನಪಲ್ಲೇ, ಚಡಪಡಿಕೆಯಲ್ಲೇ ಇರ್ತಾಳೆ.. 


ಇವಳು ನನ್ ಮಗಳು ಹರಿಣಿ ಅಂತಾ ನೋಡು ಅಂದಾಗ.. ಅವರ ಒತ್ತಾಯಕ್ಕೆ ಒಮ್ಮೆ ತಲೆ ಎತ್ತಿ ನೋಡ್ತಾಳೆ.. ಅವ್ಳಿಗೆ ಒಮ್ಮೆಲೇ ಶಾಕ್ ಆಗುತ್ತೆ ಅರೇ ಈ ಹುಡುಗಿ ನಾ ಎಲ್ಲೊ ನೋಡಿದೀನಿ ಅಲಾ ಅನ್ಕೊಂತಾ ಅವಳನ್ನೇ ದಿಟ್ಟಿಸಿ ನೋಡುವಾಗ.. 


ಹಲೋ ಅತ್ತಿಗೆ., ಏನ್ ಹಾಗೇ ನನ್ನೇ ನೋಡ್ತಿದೀರಾ.. !!?? ನೀವ್ ನೋಡ್ಬೇಕಿರೋದು ನನ್ನಲ್ಲಾ ಇದೆ ಈ ನಮ್ ಅಣ್ಣನ್ನ ಅಂತಾ ಅಲ್ಲೇ ಕೂತಿದ್ದ ಅವಳ ಅಣ್ಣನ್ನ ತೋರಿಸ್ತಾಳೆ.


ಹರಿಣಿ ತೋರಿಸಿದ್ದ ಕೈ ಅತ್ತ ನೋಡಿದ ದೈವಿಕಳಿಗೆ ಏನ್ ನೋಡ್ತಿದೀನಿ ನಾನು ಇದೆಲ್ಲಾ ನಿಜಾನಾ..!! ಅನ್ಸುತ್ತೆ.. 

ನನ್ ಕಣ್ಣು ನಂಗೆ ಮೋಸ ಮಾಡಲ್ಲ, ಹೌದು ಇದು ಅವ್ರೆ.. ಆ ದೇವಿ ಸನ್ನಿದಿ ಲಿ ಹಾಡಿದ್ದ ಆ ಕಾಳಿದಾಸ...!!!  

ಒಂದು ವರ್ಷದಿಂದಾ ಪ್ರೀತಿಸಿದ್ದ ಆ ನನ್ನ ಕಾಳಿದಾಸ...!!! 

ಪ್ರತಿ ಕ್ಷಣ ನನ್ನ ಮನ ಬಯಸುತ್ತಿದ್ದ ಅದೇ ಕಾಳಿದಾಸ...!!!

ಇಂದು ನನ್ನ ನೋಡೋಕೆ ಬಂದಿರೋದು ಅದೇ ಕಾಳಿದಾಸ...!!! ಅನ್ನೋದನ್ನ ನೆನೆದು "ಅಯ್ಯೋ ತಾಯಿ ಸುಮ್ನೇ ನಾನು ನಿಂಗೆ ಏನೇನೋ ಕೇಳ್ಬಿಟ್ಟೆ, ಸ್ವಲ್ಪ ತಾಳ್ಮೆ ಇರ್ಬೇಕಿತ್ತು ನನ್ನಲ್ಲಿ ಕ್ಷಮಿಸು ತಾಯಿ ಅಂತಾ ಆ ದೇವಿಗೆ ಮನದಲ್ಲೇ ಕ್ಷಮೆಯಾಚಿಸ್ಸ್ತಾಳೆ .. 


ಅವಳಿಗೆ ಅರಿವೇ ಇಲ್ಲದೇ ಕಣ್ಣಲ್ಲಿ ನೀರು ಜಿನುಗುತ್ತೆ.. ಕಾಳಿದಾಸ ನಾ ನೋಡಿದ ಸಂತೋಷಕ್ಕೋ.. ಅತ್ವಾ ಆ ದೇವಿ ನಾ ತಪ್ಪಾಗಿ ಅರ್ಥಮಾಡಿಕೊಂಡು ಬಿಟ್ಟೇ ಅನ್ನೋದಕ್ಕೋ ಅವಳಿಗೆ ಅರ್ಥ ಆಗಲ್ಲಾ.. ಆ ಕ್ಷಣ ಅವಳಲ್ಲಿ ಮಧುರವಾದ ಒಂದು ಅನುಭೂತಿ ಮೂಡಿರತ್ತೆ..


ಇತ್ತಾ ಆ ಕಾಳಿದಾಸ ಅಯ್ಯೋ ಇವಳಿಗೆ ಏನಾಯ್ತು..?? ಯಾಕೆ ಕಣ್ಣಲ್ಲಿ ನೀರು...??? ನಾನು ಇಷ್ಟಾ ಆಗ್ಲಿಲ್ವಾ...?? ಅಂತಾ ಒಂದೇ ಸಮನೇ ಏನು ಅರ್ಥ ಆಗದೇ ಏನೀ ಕಣ್ಣೀರ ಅರ್ಥ ಅಂತಾ ಅವಳನ್ನೇ ನೋಡ್ತಿರ್ತಾನೇ.. 


ಯಾಕಮ್ಮ ಕಣ್ಣಲ್ಲಿ ನೀರು.. !!?? ನನ್ ಮಗ ಇಷ್ಟಾ ಆಗ್ಲಿಲ್ವಾ ಅಂತಾ ಸಂಗೀತಾ ಅವರು ಸ್ವಲ್ಪ ಆತಂಕದಲ್ಲೇ ಕೇಳ್ತಾರೆ.. 


ಇತ್ತಾ ಎಲ್ಲರ ಆತಂಕನು ಅದೇ ಆಗಿರತ್ತೆ... 


ಬರುತ್ತಿದ್ದ ಕಣ್ಣೀರನ್ನು ಒರೆಸಿಕೊಳ್ತಾ ದೈವಿಕಾ, ಆ ಕಾಳಿದಾಸ ನಾ ಅಮ್ಮಾ ನ ಮುಂದೆ ಮಂಡಿ ಊರಿ ಕುತ್ಗೊಂಡು ಅವರ ಕೈ ಮೇಲೆ ತನ್ನ ಕೈಯಿಟ್ಟು ಅವರ ಮುಂದೆ ತಲೆ ಬಾಗಿ ಹೇಳ್ತಾಳೆ "ಅಯ್ಯೋ ಅಮ್ಮಾ ಇಲ್ಲಾ, ಅವರನ್ನ ಬೇಡ ಅನ್ನೋ ಅಷ್ಟು ದೊಡ್ಡ ಮನಸ್ಸು ನಂಗಿಲ್ಲ., ನಂದು ಚಿಕ್ಕ ಹೃದಯ. ಈ ಹೃದಯದಲ್ಲಿ ಅವರನ್ನ ತುಂಬಾ ಆರಾದಿಸ್ತೀದೀನಿ. ಒಂದು ವರ್ಷದಿಂದಾ ಅವರ ಹೆಸರು ಸಹ ಗೊತ್ತಿಲ್ದೇನೆ ಆ ದೇವಿ ನೇ ನಂಬಿ ಅವರಿಗೋಸ್ಕರ ಕಾಯ್ತಿದ್ದೆ.. ಎಲ್ಲಿ ಅವರು ಸಿಗದೇ ನನ್ ಪ್ರೀತಿ ಸತ್ತೋಗಿ ಬಿಡುತ್ತೆ ಅನ್ಕೊಂಡಿದ್ದೆ. ನಿನ್ನೇನು ಸಹ ಅವರ ಜೊತೆ ನಿಮ್ ಮಗಳನ್ನ ನೋಡಿ ತಪ್ಪಾಗಿ ತಿಳಿದು ನನ್ ಅದೃಷ್ಟ ನೇ ಸರಿ ಇಲ್ಲಾ ಅಂತಾ ರಾತ್ರಿ ಎಲ್ಲಾ ಅತ್ತಿದಿನಿ.. ಅಂತೋಳು ನಾನು. ಅಂತಾದ್ರಲ್ಲಿ ಈಗ ಪ್ರತ್ಯಕ್ಷವಾಗಿ ನನ್ ಕಣ್ಣು ಮುಂದೇನೆ ಇರೋ ನನ್ನ ಆರಾಧ್ಯ ದೇವರನ್ನ ನಾನು ಬೇಡ ಅನ್ಲಾ.. !!?? 


ಅಲ್ಲಿ ಇದ್ದಾ ಎಲ್ಲರಿಗೂ ಆಶ್ಚರ್ಯ...!!! ಸ್ವತಹ ಕಾಳಿದಾಸ ನಿಗೂ ಆಶ್ಚರ್ಯ ಆಗುತ್ತೆ.. ನಾನೇ ಭಗ್ನ ಪ್ರೇಮಿ ಅನ್ಕೊಂಡ್ರೆ ನಂಗಿಂತ ದೊಡ್ಡ ಪ್ರೇಮಿ ನನ್ನವಳು ಅನ್ಕೊಂಡು ಮನಸ್ಸಲ್ಲೇ ಖುಷಿ ಪಡ್ತಾನೆ...  


ನಿನ್ನೊಷ್ಟು ಪ್ರೀತಿ ಮಾಡೋ ಹುಡುಗಿ ನನ್ ಮಗನಿಗೆ ಸಿಗುವಾಗ ಅದ್ಕಿಂತ ಬೇರೆ ಖುಷಿ ನಮಗೆಲ್ಲಿ ಇದೆ. ನೀನಂದ್ರೆ ನನ್ ಮಗನಿಗೂ ಪ್ರಾಣ ನಮ್ಮ ಅಂತಾರೆ ಸಂಗೀತಾ ಅವರು. 


ಇದನೆಲ್ಲ ಕೇಳಿಸಿಕೊಳ್ತಿದ್ದ ದೈವಿಕಾ ಳ ತಾಯಿ ಮತ್ತೇ ಅಣ್ಣ ಇದೆಲ್ಲಾ ಏನು..!? ನನ್ ಮಗಳು ಪ್ರೀತಿ ಮಾಡ್ತಿದ್ಲ...!!!??? ಅಂತಾ ಒಬ್ಬರ ಮುಖನ ಒಬ್ಬರು ಆಶ್ಚರ್ಯದಿಂದಾ ನೋಡ್ತಾ ಮೂಕವಿಸ್ಮಿತ ರಾಗಿ ನೋಡ್ತಾ ಇರ್ತಾರೆ.. 


ಆಗ ಅರ್ಚಕರು ಮಾತಾಡಿ, ನೀವೆಲ್ಲಾ ಖುಷಿ ಪಡೋದು ಆಮೇಲೆ ಇದ್ದಿದ್ದೇ.. ಮೊದಲು ಹುಡುಗ ಹುಡುಗಿ ಮಾತಾಡ್ಲಿ ಅಂದಾಗ ಎಲ್ಲಾರು ಸಮ್ಮತಿ ಸೂಚಿಸ್ತಾರೆ.


ಆ ಕಾಳಿದಾಸ ಮತ್ತೇ ದೈವಿಕಾ ಇಬ್ರು ಹೊರಂಗಣದಲ್ಲಿ ಬಂದು ಮಾತೇ ಬಾರದ ಮೂಖರಾಗಿರ್ತಾರೇ.. 


ಆಗ ದೈವಿಕಾ ನೇ ಮಾತಾಡಿ, ನಿಮ್ಮನ್ನ ನೋಡಿ ತುಂಬಾ ಖುಷಿ ಆಯ್ತು ಅಂತಾಳೆ 


ನಂಗೇನ್ ಅಂಗೆ ಅಸ್ನ್ಲಿಲ್ಲ ಅಂತಾನೇ 


ಯಾಕೆ ಅಂತಾ ಪ್ರಶ್ನಾರ್ಥಕವಾಗಿ ದೈವಿಕ ನೋಡಿದಾಗ.. 


ಆ ಕಾಳಿದಾಸ ಮುಗುಳುನಗ್ತಾ, ದಿನಾ ನಿಮ್ಮನ್ನ ದೇವಸ್ಥಾನದಲ್ಲಿ ನೋಡ್ತಿದ್ದೆ ಇವತ್ತು ಸ್ವಲ್ಪ ತಡವಾಗಿ ನಿಮ್ ಮನೇಲೇ ನೋಡಿದೀನಿ ಆಗಾಗಿ ಯಾವಾಗ್ಲು ಇದ್ದಾ ಸಂತೋಷ ನೇ ಈಗ್ಲೂ ಇದೆ ಅಂತಾನೇ.. 


ಆಗ ದೈವಿಕ, ದಿನಾ ನಾ..!?? ಅಂದ್ರೆ ನನ್ನ ನೋಡೋಕೆ ಇವ್ರು ದಿನಾ ದೇವಸ್ಥಾನ ಕ್ಕೆ ಬರ್ತಿದ್ರಾ..!!!??? ಮತ್ತೇ ನಂಗೆ ಕಂಡೆ ಇಲ್ಲಾ ಅಂತಾ ನೆನಪು ಮಾಡ್ಕೊಂತಾ ಇರುವಾಗ.. 


ನಿಮ್ಮನ್ನ ಮೊದಲನೇ ಸಲ ಆ ದೇವಿ ಸನ್ನಿದಿಲಿ ನೋಡಿದ್ದು., ಆವತ್ತು ಅಮ್ಮಾ ಬಾ ದೇವಸ್ಥಾನಕ್ಕೆ ಅಂತಾ ತುಂಬಾ ಬಲವಂತ ಮಾಡಿದ್ದಕ್ಕೆ ಬಂದಿದ್ದೇ. ಆದ್ರೆ ನಿಜವಾಗಲೂ ಆಗ ಗೊತ್ತಿದ್ದಿಲ್ಲ, ನನ್ನ ಜೀವನ ದ ಅಮೂಲ್ಯವಾದ ರತ್ನ ಒಂದು ಆವತ್ತು ನಂಗೆ ಸಿಗುತ್ತೆ ಅಂತಾ...!!! ಅವತ್ತಿಂದ ಒಂದು ದಿನಾ ನು ಬಿಟ್ಟಿಲ್ಲಾ ಆ ದೇವಸ್ಥಾನಕ್ಕೆ ಬರೋದು. ಆ ದೇವಿ ದರ್ಶನಕ್ಕೆ ಜೊತೆಗೆ ನನ್ನ ಈ ದೇವಿ ದರ್ಶನಕ್ಕೂ ಅಂತಾ ನಕ್ಕು ಹೇಳಿದಾಗ..


ದೈವಿಕ ಸ್ವಲ್ಪ ನಾಚಿಕೆ ಯಿಂದ " ಮತ್ತೇ ನನ್ನಾ ಆವಾಗ್ಲೇ ಮಾತಾಡ್ಸ್ಬೊದಿತ್ತಲ್ಲಾ?? " ಅಂತಾ ಕೇಳ್ತಾಳೆ. 


ಒಂದೊಳ್ಳೆ ದಿನಾ ನನ್ನಾ ಮನದರಸಿಯನ್ನ ಭೇಟಿ ಮಾಡೋ ಆಸೆ ಇತ್ತು. ಆದ್ರೆ ನೀವೇ ಆವತ್ತು ಬಂದು ಪುಳಿಯೋಗರೆ ಪ್ರಸಾದ ಕೊಟ್ಟಾಗ ಮಾತಾಡ್ಸಿದೆ ಅವತ್ತಿನ ನನ್ನಾ ಆ ಖುಷಿ ನಾ ಹೇಳೋಕೆ ಅಸಾಧ್ಯ ಅಂತೇಳಿ ಒಂದು ಚಿಕ್ಕ ಹೃದಯಾಕಾರದ ದೀಪ ಕೊಟ್ಟು ಹೇಳ್ತಾನೆ


" ಬತ್ತಿ ಆಗಿ ನಾನು,

  ಎಣ್ಣೆ ಆಗಿ ನೀನು,

  ಪ್ರೀತಿಯೇಂಬ ದೀಪ ನ ಬೆಳಗಿಸೋಣ. 

  ಇಂತ ನೂರ್ ದೀಪಾವಳಿ ಬಂದು ಹೋಗುತ್ತೆ, 

 ಆದ್ರೆ ನಮ್ ಮನೇಲಿ ಈ ಪ್ರೀತಿಯೇಂಬ ದೀಪ ನಾ        ದಿನಾಲೂ ಬೆಳಗಿಸಿ ನಿತ್ಯ ದೀಪಾವಳಿ ಮಾಡೋಣ." 


ಅಂತಾ ಅವಳನ್ನೇ ನೋಡ್ತಿದ್ದಾಗ.. ದೈವಿಕ ಅದ್ನಾ ನೋಡಿ.. 

ವಾವ್ ಎಷ್ಟು ಚೆಂದ ಇದೆ ದೀಪ ಅಂತೇಳಿ ಇರಿ ಬಂದೆ ಅಂತಾ ಒಳಗೆ ಹೋಗಿ ಎಣ್ಣೆ ಬತ್ತಿ ತಗೊಂಡು ಬಂದು ದೀಪ ಹಚ್ಚಿ ಅಲ್ಲೇ ತುಳಸಿ ಗಿಡದ ಮುಂದೆ ಇಡ್ತಾಳೆ.. 


ನಿಮ್ಗೆ ಒಂದು ಸರ್ಪ್ರೈಸ್ ಇದೆ ಬನ್ನಿ ಒಳಗೆ ಅಂತಾ ಇಬ್ರು ಹೋದಾಗ ಎಲ್ರು ಇವರನ್ನೇ ನೋಡ್ತಾ ಇರ್ತಾರೆ.. 


ಇವ್ರು ಇಬ್ರು ಮಾತಾಡಿ ಬರೋದ್ರೋಳಗೆ ಅಲ್ಲೇ ಅರ್ಚಕರು ಮದ್ವೆಗೆ ದಿನಾಂಕ ಸೂಚಿಸಿರ್ತಾರೆ.. 


ಕಾಳಿದಾಸ ಬಂದು ಕುತ್ಗೊಂಡಾಗ ಏನು ಫುಲ್ ಖುಷ್ ಹಾ ಅಂತಾ ತಂಗಿ ಹರಿಣಿ ಕೇಳಿದಾಗ ಅವನ ನಗೂನೇ ಅಲ್ಲಿ ಎಲ್ಲರಿಗೂ ಉತ್ತರ ಕೊಟ್ಟಿರತ್ತೇ.. 


ಇತ್ತಾ ದೈವಿಕ ಅಡುಗೆ ಮನೆ ಸೇರ್ಕೊಂಡಾಗ.. ಮಗಳು ಏನೋ ಮಾಡ್ತಿದಾಳೆ ಅಂತಾ ಶಾರದಾ ಅವರು ಬಂದು ಅವ್ಳಿಗೆ ಅಡುಗೆ ಮಾಡೋಕೆ ಸಹಾಯ ಮಾಡ್ತಾರೆ.. 


ಮಹಾಶಯ ಎಲ್ಲರನ್ನು ಊಟಕ್ಕೆ ಕರೆದು ಬಾಳೆ ಎಲೆ ಹಾಕ್ತಾನೆ.. ಎಲ್ಲಾರು ಖುಷಿಯಾಗಿ ಊಟಕ್ಕೆ ಕುಳಿತಾಗ ದೈವಿಕ ಮೊದಲು ಎಲ್ಲರಿಗೂ ಹೋಳಿಗೆ ಬಡಿಸಿ ಸೈಡ್ ಅಲ್ಲಿ ಕುಸುಮ್ಬರಿ, ಕಡಲೆ ಕಾಯಿ ಪಲ್ಯ, ಹಪ್ಪಳ, ತುಪ್ಪಾ ಬಡಿಸ್ತಾಳೆ.. 


ಎಲ್ಲಾರು ಖುಷಿಯಾಗಿ ಊಟ ಮಾಡುವಾಗ ಕಾಳಿದಾಸ ನಾ ಮೂಗಿಗೆ ಯಾವ್ದೋ ಪರಿಮಳ ದ ಸೂಚನೆ ಸಿಗುತ್ತೆ.. ಅವನು ಏನಿರಬಹುದು ನಾನ್ ಅನ್ಕೊಂಡಿದ್ದೆ ಇರ್ಬೋದಾ ಅಂತಾ ಪದೇ ಪದೇ ಅಡುಗೆ ಕೋಣೆ ಕಡೆನೇ ನೋಡುವಾಗ.. ಅವನನ್ನೇ ನೋಡ್ತಿದ್ದ ಹರಿಣಿ " ಅಣ್ಣ, ಇನ್ನು ಸ್ವಲ್ಪ ದಿನಾ ತಾಳ್ಮೆ ಇಟ್ಗೊಳೋ ಆಮೇಲೆ ಅತ್ತಿಗೆ ಮುಖಾನೇ ನೋಡ್ಕೊಂತಾ ಇರಂತೆ ಅಂತಾಳೆ ಅಲ್ಲಿ ಎಲ್ಲಾರು ಅದೇ ನಿಜ ಅನ್ಕೊಂಡು ನಗ್ತಾ ಇರ್ತಾರೆ.. ಏನೋ ಮುಜುಗರ ಆದೂರ ತರ ಸುಮ್ನೇ ತಲೆ ಬಗ್ಗಿಸಿ ಊಟ ಮಾಡ್ತಾ ಇರ್ತಾನೇ.. ಹೊರಗಿನ ಸಂಭಾಷಣೆ ಕೇಳಿಸ್ಕೊಂಡ ದೈವಿಕಾ ನಗ್ತಾ ಒಂದು ಪಾತ್ರೆ ಲಿ ಅಡುಗೆ ತಗೊಂಡು ಬಂದು ಕಾಳಿದಾಸ ನಾ ಮುಂದೆ ಇಡ್ತಾ,. ಅವನಿಗೆ ಬಡುಸ್ತಾಳೆ..


ಓಹ್ ಓಹ್ ಏನೋ ಅಣ್ಣಾ ಇವಾಗ್ಲೆ ಅತ್ತಿಗೆ ನಿಂಗೆ ಇಷ್ಟಾ ಆಗಿರೋದ್ದನ್ನೇ ಮಾಡಿದಾರೆ ಅಂತಾ ಅಣ್ಣಾ ಗೆ ಹೇಳ್ತಾಳೆ ಹರಿಣಿ.. 


ಸುಮ್ನೇ ನಕ್ಕು ದೈವಿಕ ಎಲ್ಲರಿಗೂ ಬಡಿಸಿ ಅಡುಗೆ ಕೋಣೆ ಸೇರ್ಕೊಂತಾಳೆ.. 


ಇತ್ತಾ ಊಟ ಎಲ್ಲಾ ಮುಗಿಸಿ ಕೈ ತೊಳಿಯೋಕೆ ಬಂದ ಕಾಳಿದಾಸ., ಹಿಂದಿಂದ ದೈವಿಕಾಳನ್ನ ತಬ್ಬಿ ಕೈಗೊಂದು ಮುತ್ತಿಕ್ಕಿ ಹೊರಗೆ ಹೋಗ್ತಾನೆ.. ಇತ್ತಾ ದೈವಿಕಾ ಕ್ಷಣಾರ್ದದಲ್ಲಿ ಆದ ಮಧುರವಾದ ಅನುಭೂತಿಯನ್ನ ನೆನೆದು ಮನಸ್ಸಲ್ಲೇ ಸಂಭ್ರಮ ಪಡ್ತಾಳೆ.. 


ಎಲ್ಲಾರು ಹೊರಟು ನಿಂತಾಗ ಭಾರವಾದ ಮನಸ್ಸಿಂದ ದೈವಿಕಾ,ಕಾಳಿದಾಸನ್ನ ಬೀಳ್ಕೊಡ್ತಾಳೆ. 


ಇತ್ತಾ ಮನೆಗೆ ಬಂದ ಕಾಳಿದಾಸ, ಹರಿಣಿ, ಸಂಗೀತಾ ಅವರು ಮದ್ವೆಗೆ ಒಂದೇ ತಿಂಗಳು ಇರೋದು ಅಂತಾ ಏನೇನು ತರ್ಬೇಕು ಅದು ಇದು ಅಂತಾ ಎಲ್ಲಾ ಶುರು ಮಾಡ್ತಾರೆ.. 


ಇತ್ತಾ ದೈವಿಕಾ ಮನೇಲೂ ಸಂಭ್ರಮ ಮನೆ ಮಾಡಿರತ್ತೇ.. 


ದೈವಿಕ ಕಾಳಿದಾಸ ಒಬ್ಬರಿಗೊಬ್ಬರು ನೋಡದೇ ದಿನಗಳು ಯುಗದಂತೆ ಕಳೀತಾ ಇರುತ್ತೆ.. 


ಹೀಗೇ ಒಂದಿನಾ ಕಾಳಿದಾಸ ನಾ ನೆನಪಲ್ಲೇ ದೈವಿಕಾ ಏನನ್ನೋ ನೋಡುತ್ತಿದ್ದಾಗ., ಪೋಸ್ಟ್ ಬರತ್ತೆ.. ಈಗಿನ ಕಾಲದಲ್ಲಿ ಪೋಸ್ಟ್ ಯಾರು ಮಾಡ್ತಾರೆ ಅಂತಾ ಹೋಗಿ ಹೆಸರನ್ನ ಇನ್ನೊಂದು ಸಲ ಖಚಿತಪಡ್ಸ್ಕೊಂಡು ತಂದು ಓದೋಕೆ ಶುರು ಮಾಡ್ತಾಳೆ 


         " ನನ್ನಾ ಪ್ರೀತಿಯ ದೈವೀ ಗೆ,. ನಿನ್ನಾ ಹರ್ಷನಿಂದ ಒಂದು ಸಿಹಿ ಮುತ್ತು.....


ಇಷ್ಟು ಓದಿದ್ದೇ ದೈವಿಕಾಳಿಗೆ ಗೊಂದಲ ಶುರು ಆಗುತ್ತೆ.. ಇದ್ಯಾರು ನನ್ ಮದ್ವೆ ನಿಶ್ಚಯ ಆಗಿರೋ ಸಮಯದಲ್ಲಿ ಇತರ ಸಿಹಿಮುತ್ತು ಅಂತೆಲ್ಲಾ ಅದು ಪೋಸ್ಟ್ ಕಲ್ಸಿದಾರೆ, ಯಾರಿದು ಹರ್ಷ ಅಂತಾ ಮುಂದೆ ಓದ್ತಾಳೆ. 


 ನಿಮ್ನ ನೋಡದೇ ಇರೋಕೆನೇ ಆಗ್ತಿಲ್ಲಾ, ನೀವೇನ್ರಿ ಒಳ್ಳೆ ಆಯಸ್ಕಾಂತ ನಾ..!!?? ಯಾವಾಗ್ಲು ನಿಮ್ ಕಡೆನೇ ಸೆಳೆತಾ ಇರ್ತೀರಾ..!! ಒಂದೊಂದು ದಿನಾ ನು ಒಂದೊಂದು ಯುಗದ ತರ ಆಗ್ತಿದೆ.. ನಿಮ್ನ ನೋಡೋ ತವಕ ಹೆಚ್ಚಾಗಿದೆ.. ನೀವ್ ದೇವಸ್ಥಾನಕ್ಕೂ ಬರ್ತಾ ಇಲ್ಲಾ. ಕಾರಣ ನಂಗೆ ಬೇಡ ಆದ್ರೂ ಒಮ್ಮೆ ನಿಮ್ಮನ್ನ ನೋಡೋ ಆಸೆ ಹೇಗೆ ಅಂತಾ ನಂಗೊತ್ತಿಲ್ಲಾ. ಆದ್ರೂ ಹೇಳ್ತೀನಿ ಇವತ್ತು ರಾತ್ರಿ ಕನಸಲ್ಲಿ ಆದ್ರೂ ಬಾ.. ಹಾ ಇನ್ನೊಂದು ಮಾತು, ನಂಗೆ ನಿನ್ನನ್ನ ಮಿಸ್ಸೇಸ್ ಹರ್ಷ ಅಂತಾ ಕರಿಯೋ ಬದಲು "ಶ್ರೀಮತಿ ದೈವಿಕಾ ಹರ್ಷ" ಅಂತಾ ಎಲ್ಲಾರು ನಿನ್ನಾ ಕರಿಬೇಕು ಅನ್ನೋದೇ ನನ್ನಾ ಆಸೆ. ಇದು ಯಾವಾಗ ಹಿಡೇರುತ್ತೋ ಅಂದೆ ನನ್ನಾ ಜೀವನ ಸಾರ್ಥಕ.. 


    ನನ್ನಾ ಮುದ್ದು ಪೆದ್ದು ಹುಡುಗಿ ಯೇ     

    ಶ್ರೀಮತಿ ದೈವಿಕಾ ಹರ್ಷ...!!! ಎಂದೆದಿಗೂ ನಿನ್ನೊಂದಿಗೆ ಬಾಳುವ ನಿನ್ನಾ ಕಾಳಿದಾಸ ಹರ್ಷ


ಕೊನೆಯ ಆ ಮೂರು ಸಾಲನ್ನ ಮತ್ತೇ ಮತ್ತೇ ಓದ್ತಾಳೆ ತನಗೆ ಅರಿವೇ ಇಲ್ಲದೇ ದೈವಿಕಾ.. ಅಂದ್ರೆ ನನ್ನಾ ಕಾಳಿದಾಸ ನಾ ಹೆಸರು ಹರ್ಷ ಅಂತ ನಾ ಅಯ್ಯೋ ನಾನ್ ಕೇಳೇ ಇಲ್ವಲಾ ಅಂತಾ ತನ್ನ ಪೆದ್ದು ತನಕ್ಕೆ ನಕ್ಕು ಮತ್ತೇ ಮತ್ತೇ ಆ ಪತ್ರ ನಾ ಓದ್ತಾಳೆ..  


ಖುಷಿಗೆ ಅವಳ ಮುಖ ತಾವರೆ ಹೂವಿನಂಗೆ ಅರಳಿರುತ್ತೆ.. ಇದನ್ನೆಲ್ಲಾ ಗಮನಿಸಿದ ಶಾರದಾ ಅವರು ಮಗಳ ನಗು ಮುಖವನ್ನ ಕಣ್ತುಂಬಿ ಕೊಳ್ತಾರೆ.. 


ಅಂದು ಕಾರ್ತಿಕ ಮಾಸದ ಮೊದಲನೇ ವಾರದ ಶುಭ ಶುಕ್ರವಾರ ದೈವಿಕಾ ಳ ಮನೆಯ ಮುಂದೆ ಚಪ್ಪರ ಹಾಕೋ ಶಾಸ್ತ್ರ ನೆಡಿತಾ ಇರುತ್ತೆ.. 


ಇತ್ತಾ ಹರ್ಷ ಅವರ ಮನೇಲೂ ಅದೇ ಶಾಸ್ತ್ರ ನಡೀತಾ ಇರುತ್ತೆ.. 


ಆವತ್ತು ರಾತ್ರಿ ದೈವಿಕಾ ಳಿಗೆ ಮೆಹಂದಿ ಹಾಕೋಕೆ ಬಂದ ಹುಡುಗಿ ದೈವಿಕಾ ಳ ಕೈಯಲ್ಲಿ ಶ್ರೀಮತಿ ದೈವಿಕಾ ಹರ್ಷ ಅಂತಾನೇ ಬರ್ದಿರ್ತಾಳೆ, ಜೊತೆಗೆ ಒಂದು ಮೈಕ್ ಚಿತ್ರ ಬಿಡಿಸಿ ಅದರ ಮುಂದೆ ದೈವಿಕಾ ಮತ್ತೇ ಹರ್ಷ ನಿಂತು ಹಾಡೋ ತರ ಮೆಹಂದಿ ಹಾಕಿರ್ತಾಳೆ... ಅದೆಷ್ಟು ಬಾರಿ ದೈವಿಕಾ ಆ ಮೆಹಂದಿ ಹಾಕೋ ಹುಡುಗಿ ಗೆ ಧನ್ಯವಾದಗಳು ಹೇಳಿದ್ದ್ಲೋ ಆ ದೇವನೇ ಬಲ್ಲ.. ಆ ರಾತ್ರಿ ಪೂರ್ತಿ ದೈವಿಕಾ ಆ ಮೆಹಂದಿ ನೇ ನೋಡಿರ್ತಾಳೆ.. 


ಇತ್ತಾ ಹರ್ಷ, ದೈವಿಕಾ ಳ ನ್ನ ನೆನೆದು ಅವಳ ಇಷ್ಟದಂತೆ ತನ್ನ ಕೋಣೆನೆಲ್ಲಾ ಬದಲಾವಣೆ ಮಾಡಿರ್ತಾನೇ.. ತನ್ನ ಮನದರಸಿ ಬಂದಾಗ ಅವಳಿಗೆ ಯಾವ ಒಂದು ಕೊರತೆ ನು ಕಾಣ್ಬಾರದು ಅನ್ನೋದು ಅವನ ಹಂಬಲ.. 


ಅಂದು ಭಾನುವಾರ.. ಅವರ ಮದುವೆ ದಿನಾ..


ಅವರು ಮೊದಲನೇ ಸಲ ಭೇಟಿಯಾದ ಅದೇ ದೇವಿ ದೇವಸ್ಥಾನ ದಲ್ಲಿ ಮದುವೆ ತಯಾರಿ ನಡೀತಾ ಇರುತ್ತೆ.. 


ಇತ್ತಾ ದೈವಿಕಾ ಕೆಂಪು ಮತ್ತೇ ಹಳದಿ ಮಿಶ್ರಿತ ಸೀರೆ ಯಲ್ಲಿ ಮಿಂಚ್ಚ್ತಾ ಇದ್ರೆ, ಅತ್ತಾ ಹರ್ಷ ಶುದ್ಧ ಬಿಳಿ ಅಂಗಿ ಕೆಂಪು ಬಾರ್ಡರ್ ಇರೋ ಪಂಚೆ ಯಲ್ಲಿ ಜನಮನ ಸೆಳಿತಾ ಇರ್ತಾನೇ.. 


ಪುರೋಹಿತರು ಮಂತ್ರ ಗೋಷ್ಠಿ ಯನ್ನಾ ಹೇಳುವಾಗ.. ಅಂತರ್ ಪಟದ ಹಿಂದೆ ನಿಂತಿರ್ತಾರೆ ದೈವಿಕಾ ಹರ್ಷ.. 


ಅಂತರ್ ಪಟ ಸರಿದ ಕೂಡಲೇ ನಾಚಿಕೆ ಯಿಂದ ದೈವಿಕಾ ತಲೆ ತಗ್ಗಿಸಿದ್ರೆ,, ತನ್ನ ಮನದರಸಿ ನಾ ಎಲ್ಲರ ಸಮ್ಮುಖದಲ್ಲಿ ಕೈ ಹಿಡಿತಿದಿನಿ ಅಂತಾ ಹರ್ಷ ಹೆಮ್ಮೆ ಯಿಂದ ತಲೆ ಎತ್ತಿ ನಿಂತಿರ್ತಾನೇ.. 


ಹಸಿಮಣೆ ಮೇಲೆ ಕೂತ ಜೋಡಿ

ಮಾಡಿರತ್ತೆ ಎಲ್ಲರಿಗೂ ಮೋಡಿ


ಪುರೋಹಿತರು ಗಟ್ಟಿಮೇಳ ಗಟ್ಟಿಮೇಳ ಅಂದಾಗ ಮಂಗಳವಾದ್ಯ ಶುರುವಾಗುತ್ತೆ. ಜೊತೆಗೆ ಮಂತ್ರ ಗೊಷ್ಠಿನು..


‘‘ಮಾಂಗಲ್ಯಮ್‌ ತಂತುನಾನೇನ ಮಮ ಜೀವನ ಹೇತುನಾ। ಕಂಠೆ ಬಧ್ನಾಮಿ ಸುಭಗೇ ತ್ವಂ ಜೀವ ಶರದಾಂ ಶತಮ್‌।।’’ 


ಕಾಯ ವಾಚಾ ಮನಸ್ಸಾ ಅಂತಾ ದೈವಿಕಾ ಳ ಕೊರಳಿಗೆ ಮೂರು ಗಂಟು ಹಾಕ್ತಾನೆ ಹರ್ಷ.

ಎರಡು ಮನಸ್ಸುಗಳು, ಎರಡೂ ಮನೆಗಳು ಆ ಮೂರು ಗಂಟಲ್ಲಿ ನಂಟಾಗಿ ಇರ್ತಾವೆ.. 


ಏಳು ಹೆಜ್ಜೆ ಇಡ್ತಾ ಸಪ್ತಪದಿ ತುಳೀತಾರೆ ನವಜೋಡಿ. 


ಒಂದನೇ ಹೆಜ್ಜೆಯು : ನಿನ್ನಾ ಹೃದಯದ ಬಡಿತ ನನ್ನಾ        ಹೃದಯದ ಬಡಿತ ಒಂದೇ ಆಗಿರ್ಬೇಕು ಅಂತಾ ಒಂದನೇ ಹೆಜ್ಜೆ ಇಡ್ತಾರೆ. 


ಎರಡನೇ ಹೆಜ್ಜೆಯು : ಸುಖ ದುಃಖ ದಲ್ಲೂ ಜೊತೆಯಾಗಿರೋಣ ಅಂತಾ ಎರಡನೇ ಹೆಜ್ಜೆ ಇಡ್ತಾರೆ. 


ಮೂರನೇ ಹೆಜ್ಜೆ : ಮೂರು ಕಾಲದಲ್ಲೂ ಮುಖ್ಯ ನೀನೇ ಎಂದು ಬಾಳುವೆ ಅಂತಾ ಮೂರನೇ ಹೆಜ್ಜೆ ಇಡ್ತಾರೆ. 


ನಾಲ್ಕನೇ ಹೆಜ್ಜೆ : ಎಂದೆಂದಿಗೂ ನಮ್ ನಡುವೆ ಪ್ರೀತಿ ಗೌರವ ಶಾಶ್ವತವಾಗಿ ಉಳಿಯಲಿ ಅಂತಾ ನಾಲ್ಕನೇ ಹೆಜ್ಜೆ ಇಡ್ತಾರೆ.


ಐದನೇ ಹೆಜ್ಜೆ : ಸದ್ಗುಣ ಮತ್ತೇ ವಿವೇಕವುಳ್ಳ ಮಕ್ಕಳು ನಮ್ಗೆ ಆಗಲಿ ಅಂತಾ ಆ ದೇವಿ ಯನ್ನ ಪ್ರಾರ್ಥನೆ ಮಾಡ್ತಾ ಐದನೇ ಹೆಜ್ಜೆ ಇಡ್ತಾರೆ. 


ಆರನೇ ಹೆಜ್ಜೆ : ಎಂತಾ ನೋವು ನಲಿವಲ್ಲೂ ನಾನು ನಿನ್ನವ ಅಂತಾ ಮಾತು ಕೊಡ್ತಾ ಆರನೇ ಹೆಜ್ಜೆ ಇಡ್ತಾರೆ.


ಏಳನೇ ಹೆಜ್ಜೆ : ಏಳೇಳು ಜನ್ಮದಲ್ಲೂ ನಾವು ಹೀಗೇ ಜೊತೆ ಆಗಿ ಇರ್ಬೇಕು ಅಂತಾ ಬೇಡ್ತಾ ಏಳನೇ ಹೆಜ್ಜೆ ಇಟ್ಟು ಸಪ್ತಪದಿಯನ್ನ ಮುಗಿಸ್ತಾರೆ. 


ಮದುವೆ ಅನ್ನೋ ಸುಂದರ ಬಂಧನ ದಿ ಹರ್ಷ ಮತ್ತೇ ಶ್ರೀಮತಿ ದೈವಿಕಾ ಹರ್ಷ ಒಂದಾಗ್ತಾರೆ. 


ಜೊತೆಯಲಿssssss ಜೊತೆ ಜೊತೆಯಲಿ ಇರುವೆನು ಈಗೇ ಎಂದು ಅಂತಾ ವಿರಹಗೀತೆಯ ಪರದಿಯನ್ನ ಸರಿಸಿ ಪ್ರೇಮಾಗೀತೆಯ ಜೊತೆ ದಾಂಪತ್ಯಗೀತೆ ಹಾಡೋಕೆ ತಯಾರಾಗ್ತಾರೆ.



Rate this content
Log in

Similar kannada story from Romance