ಶಾಯಿನಾ ಇಮ್ರಾನ್

Romance Tragedy Fantasy

4  

ಶಾಯಿನಾ ಇಮ್ರಾನ್

Romance Tragedy Fantasy

ಪ್ರೇಮೋತ್ಸವ....

ಪ್ರೇಮೋತ್ಸವ....

6 mins
334



ಧೀರಜ್ ಇದೇನಿದು ಹೊಸ ಡ್ರಾಮ. ನೀನು ಹೀಗೆ ನಡೆದುಕೊಳ್ಳೋದು ನೋಡಿದರೆ ನನಗಂತೂ ಬಾರೀ ತಮಾಷೆ ಅನಿಸುತ್ತದೆ. ನಾವಿಬ್ಬರೂ ಪ್ರೀತಿಸೋಕೆ ಮುಖ್ಯ ಕಾರಣವೇ ಫ್ರಿಡಂ ಅಲ್ವಾ?!... ಆದರೆ ನೀನೇನು ಈಗ ಇದ್ದಕ್ಕಿದ್ದಂತೆ ನನ್ನನ್ನು ಅದು ಮಾಡಬೇಡ, ಇದು ಮಾಡಬೇಡ ಅಂತ. ಡಿಸ್ಕಸ್ಟಿಂಗ್ ಅನಿಸುತ್ತೆ ಗೊತ್ತಾ!..ಎಂದು ಅನುಪಮಾ ಗಹಗಹಿಸಿ ನಕ್ಕಳು.


ಸ್ಟಾಪಿಡ್ ಅನು. ಹೌದು ನಾವು ಫ್ರಿಡಂ ಫ್ರಿಡಂ ಅಂತಾನೆ ಪ್ರೀತಿಸಿದ್ದು. ಆದರೆ ಈಗ ಅದೇ ಫ್ರಿಡಂ ಅತಿಯಾಗುತ್ತಿದೆ ಬೇಡ ನಮಗೆ ಅದೆಲ್ಲ ಅನ್ನಿಸುತ್ತೆ ಕಣೆ. ಪ್ಲೀಸ್ ನನ್ನ ನೀನು ಹೇಗ್ ಬೇಕಾದ್ರೂ ಅಂದ್ಕೊ. ಆದರೆ ನನಗೆ ನಿನ್ನನ್ನ ಇನ್ ಮುಂದೆ ಅವರಿವರ ಜೊತೆ ಡೇಟಿಂಗ್ ಹೆಸರಲ್ಲಿ ನೋಡೋಕೆ ಆಗಲ್ಲ. ಇನ್ನು ಸೋಷಿಯಲ್ ಮಿಡಿಯಾದಲ್ಲಿ ಸಿಂಗಲ್ ಅಂತ ಪ್ರೊಫೈಲ್ ಇಟ್ಟುಕೊಳ್ಳುವ ತೊಂದರೆ ಕೂಡ ಬೇಡ. ನಾವು ಮದುವೆಯಾಗೋಣ. ಮ್ಯಾರಿಡ್ ಅಂತ ಚೇಂಜ್ ಮಾಡಿಕೊಳ್ಳೋಣ. ನಾವು ಇದೆಲ್ಲ ಬಿಟ್ಟು ಗಂಡ ಹೆಂಡತಿಯಾಗಿ ಖುಷಿ ಖುಷಿಯಾಗಿ ನನಗೆ ನೀನು ನಿನಗೆನಾನು ಅಂತ ನಮಗಾಗಿ ಜೊತೆಜೊತೆಯಾಗಿ ಬಾಳೋಣ ಅನು. 


ಏನಾಫ್ ಧೀರಜ್. ಅಲ್ಲ ನೀನೇನು ನನ್ನ ಫೂಲ್ ಮಾಡ್ತ ಇದ್ದೀಯಾ ಇಲ್ಲ ಶಾಕ್ ಕೊಡ್ತಾ ಇದ್ದೀಯಾ?!... ಕಾಮನ್ ಯಾ ಯಾಕೆ ಹೀಗೆ ಸುಮ್ನೆ ಸಿಲ್ಲಿಯಾಗಿ ನನ್ನ ಪೆಶೇನ್ಸ್ ಚೆಕ್ ಮಾಡ್ತಿಯಾ. ಸರಿ ನಾನು ಸಂಜೆ ಬರೋವಾಗ ತಡ ಆಗತ್ತೆ. ನೀನು ಡಿನ್ನರ್ ಮುಗಿಸಿಕೊಂಡು ಮಲ್ಕೊ. ಒಂದ್ ಕೀ ಹೇಗೂ ನನ್ ಜೊತೆ ಇದ್ಯಲ್ಲ. ಸೋ ನೀನು ನಿಶ್ಚಿಂತೆಯಿಂದ ಮಲಗು ಬಾಯ್. ಎಂದು ಅನು ಹೊರಡಲು ಧೀರಜ್ ಅವಳನ್ನು ತಡೆಯುತ್ತಾನೆ. ಅವನು ತಡೆಯುವ ರಭಸಕ್ಕೆ ಅನು ಇವನಲ್ಲಿನ ನಿಜ ರೂಪದ ಬದಲಾವಣೆಯನ್ನು ಗಮನಿಸುವಳು. ಓಹ್!..ಅಂದ್ರೆ ನೀನು ನಿಜಕ್ಕೂ ಬದಲಾಗಿ ಬಿಟ್ಟಿದ್ದೀಯಾ?!.. ಅಲ್ಲ ಅಲ್ಲ ಸ್ವಾರಿ ನಿನ್ನ ನಿನ್ನ ನಿಜರೂಪದ ಮುಖವಾಡವನ್ನು ಕಳಚುವುದರ ಮೂಲಕ ತೋರಿಸುತ್ತಿದ್ದಿಯಾ ಅಂತ ಆಯಿತು ಎಂದು ಕೊಂಕು ಮಾತಾಡುತ್ತಾ ನಗುವಳು. 


ನೋಡು ಅನು. ನಾನು ಆಗಲೇ ಹೇಳಿದ ಹಾಗೆ ನೀನು ಹೇಗೆ ಬೇಕಾದರೂ ಇದನ್ನು ಅರ್ಥ ಮಾಡಿಕೋ ನನಗೆ ತೊಂದರೆ ಇಲ್ಲ. ಆದರೆ ನೀನು ಇನ್ನು ಮುಂದೆ ಡೇಟಿಂಗ್ ಅಂತ ಹೋಗ ಕೂಡದು. ಪಾರ್ಟಿ ಅಂತ ಹೊರಗಡೆ ಹೋದರೆ ಅದು ನಿರ್ಧಿಷ್ಟ ಸಮಯ ಮತ್ತು ನಿರ್ಧಿಷ್ಟ ವ್ಯಕ್ತಿಗಳ ನಡುವೆ ಮಾತ್ರ ಆಗಿರಬೇಕು. ದಯವಿಟ್ಟು ಅರ್ಥ ಮಾಡಿಕೋ ಅನು. 

ಅಲ್ಲ....ಇದ್ದಕ್ಕಿದ್ದಂತೆ ನಿನಗೆ ಏನು ಆಯಿತು ಧೀರಜ್ ಡಾರ್ಲಿಂಗ್. ನಾವಿಬ್ಬರೂ ಲಿವಿಂಗ್ ಟೂಗೆದರ್ ರಿಲೇಶನ್ ಶಿಪ್ ಇರುವುದು ನಿನಗೆ ಮರೆತಿಲ್ಲವಲ್ಲ. ಅದು ಈ ವಿಷಯ ಇನ್ನು ನಮ್ಮ ಮನೆಯವರಿಗೂ ಕೂಡ ಗೊತ್ತಿಲ್ಲ. ಏನೋ ಪುಣ್ಯ ಒಂದೊಮ್ಮೆ ನಾವಿಬ್ಬರು ಮನಸ್ಸು ಬದಲಾಯಿಸಿ ಮದುವೆ ಮಾಡಿಕೊಂಡ ಮೇಲೆ ನೀನು ಇಂತಹ ವ್ಯಕ್ತಿ ಅಂತ ಗೊತ್ತಾಗಿದ್ದರೆನಾನು ಏನು ಮಾಡಬೇಕಿತ್ತು. ಈಗಲೇ ನೀನು ಹೀಗೆ ಅಂತ ಗೊತ್ತಾಗಿದ್ದು ಥ್ಯಾಂಕ್ ಗಾಡ್ ಎಂದು ನಿಟ್ಟುಸಿರು ಬಿಟ್ಟಳು ಅನುಪಮ.


ಹಾಗಲ್ಲ ಅನು. ನಿನಗೆ ನಾನು ಈಗ ಬದಲಾಗುತ್ತಿದ್ದೇನೆ ಅನಿಸುತ್ತೆ ಕಣೆ ಆದರೆ ಮುಂದೆ ಇವನು ಹೀಗಾಗಿದ್ದೇ ಒಳ್ಳೆಯದು ಅಂತ ಅನಿಸುತ್ತೆ ಅನು. ನಾನು ನಿನ್ನ ಪ್ರೀತಿಯಲ್ಲಿ ಹುಚ್ಚ ಆಗಿದ್ದೀನಿ ನಿಜ ಕಣೆ. ಹಾಗಂತ ನಿನ್ನ ಪ್ರೀತಿ ಎಲ್ಲಾ ಪಡೆದುಕೊಂಡು ಆಮೇಲೆ ದೂರ ಹೋಗೋ ವ್ಯಕ್ತಿ ನಾನಲ್ಲ ಕಣೆ. ಈ ವಯಸ್ಸು ಈ ಅಂದ ಚೆಂದ ಎಲ್ಲ ಕೇವಲ ವರ್ಷ ಮಾತ್ರ ನಮ್ಮ ಜೊತೆಗಿರುವುದು ಅದು ದೇವರು ಭಾಗ್ಯ ಕರುಣಿಸಿದ್ದಲ್ಲಿ. ಇಲ್ಲವಾದರೆ ಯಾವ ಕ್ಷಣದಲ್ಲೂ ಏನು ಕೂಡ ಆಗಬಹುದು. ಆದರೆ ಈಗ ನನ್ನ ಮನಸ್ಥಿತಿ ಬದಲಾಗಿದೆ ಕಣೆ. ಸಾಯೋವರೆಗೂ ನಿನ್ನನ್ನು ಕಾಪಾಡಬೇಕು ನಿನಗೆ ಆಸರೆಯಾಗಿ ನಾನು ಇರಬೇಕು ಅಂತ ಅಂದುಕೊಂಡಿರುವೆ ಅನು. ಪ್ಲೀಸ್ ಇಲ್ಲ ಅಂತ ಹೇಳಬೇಡ ಕಣೆ. 


ಧೀರಜ್ ನೀನು ನನ್ನ ಎಮೋಶನಲ್ ಬ್ಲ್ಯಾಕ್ಮೈಲ್ ಮಾಡ್ತಾ ಇರೋದಾ?!.. ವಾಟ್ ಅ ಫನ್ನಿ .... ನಾನ್ ಏನು ನನ್ ಗತ್ತು ಏನು. ಹಣ ಬಿಸಾಕಿದ್ರೆ ಯಾವ ಬ್ಯುಟಿ ಬೇಕಾದ್ರೂ ಕೊಂಡುಕೊಳ್ಳಬಹುದು ಅನ್ನೋದನ್ನ ನೀನು ಮರೆತಿದ್ಯಾ ಚಿನ್ನಾ ಎಂದು ನಗುತ್ತಾ , ಅಲ್ಲ ಧೀರಜ್ ಈ ಬ್ಯುಟಿ ಬೇಡ ಬಿಡು ದುಡ್ಡು ಕೊಟ್ರೆ ಬ್ಯುಟಿ ವಯಸ್ಸು ಏನು ಇಲ್ಲದವರಿಗೂ ಡೇಟ್ ಮಾಡೋಕೆ ಬರ್ತಾರೆ ಕಣೋ ಅಂದಳು... 


ಅವಳ ಮಾತು ಸಹಿಸದ ಧೀರಜ್ ಸಾಕು ಅನು ನಿನ್ನ ಆ ಮಾತುಗಳನ್ನು ನಾನಿನ್ನು ಕೇಳಲಾರೆ. ಅದೆಲ್ಲ ಹೊಲಸು ಜೀವನ. ನಾನು ಇಲ್ಲಿಯವರೆಗೆ ಇದಕ್ಕಿಂತಲೂ ಹೆಚ್ಚೇ ತಪ್ಪು ಮಾಡಿದ್ದೇನೆ. ಈಗ ನನಗೆ ನನ್ನ ತಪ್ಪು ಅರಿವಾಗಿದೆ. ಹಾಗೆ ನನ್ನ ಉತ್ತಮವಾದ ಗೆಳತಿ , ಪ್ರೇಯಸಿ ಅದ ನಿನ್ನನ್ನು ನಾನು ತಪ್ಪು ಮಾಡಲು ಬಿಡದೆ ನನ್ನ ಕಾಳಜಿಯಲ್ಲಿ ಇರಿಸುವ ಪ್ರಯತ್ನ ಕಣೆ ಅನು. ನಿನ್ನ ಬಿಟ್ಟು ಇರೋ ಶಕ್ತಿನನಗಿಲ್ಲ ಅಂತ ಅಲ್ಲ. ಆದರೆ ನೀನು ನನಗೆ ಬೇಕು ಕಣೆ. ನಾನು ನಿನ್ನನ್ನು ಜೀವನಪರ್ಯಂತ ಪ್ರೀತಿಸಬೇಕು ಜೊತೆ ಜೊತೆಯಾಗಿ ನಾವಿಬ್ಬರು ಇರಬೇಕು ಕಣೆ. 


ಇಲ್ಲ. ನನ್ನಿಂದ ಇದು ಸಾಧ್ಯವಿಲ್ಲ. ನೀನು ಅಂತಹ ಯಾವ ನಿರೀಕ್ಷೆ ನನ್ನ ಜೊತೆ ಇಡಬೇಡ. ನೀನೀಗ ಸಂಸಾರಿ ಆಗಬೇಕು ಎಂದು ಹೊರಟಿರೋಹಾಗಿದೆ. ಆದರೆ ನಾನು ಹಾಗಲ್ಲ. ನೀನೇ ಹೇಳಿದ್ಯಲ್ಲ ಈಗ ಇರೋರು ಇನ್ನೊಂದು ಕ್ಷಣ ಇರುತ್ತಾರೋ ಇಲ್ವೋ ಅಂತ. ಹಾಗೆ ಇರೋ ಆ ಕ್ಷಣದಲ್ಲೆಲ್ಲ ಬಿಂದಾಸ್ ಆಗಿ ಬದುಕಬೇಕು ಅನ್ನೋದು ನನ್ನ ಆಸೆ. ಮದುವೆ ಮಕ್ಕಳು ಮರಿ ಮನೆ ಕೆಲಸ ಗಂಡ ಅತ್ತೆ ಮಾವ ಎನ್ನುವ ಹೈ ಡ್ರಾಮಾ ನೋಡ್ಕೊಂಡು ಇರೋದಕ್ಕಾಗಲ್ಲ ನಂಗೆ. ನಿನ್ಗೆ ಅಂತವಳೇ ಬೇಕು ಎಂದಾದರೆ ನನ್ನಿಂದ ಯಾವ ತಡೆಯೂ ಇಲ್ಲ ನಿನಗೆ. ನಿನ್ ದಾರಿ ನೀನ್ ನೋಡ್ಕೋ, ನನ್ ದಾರಿ ನಾನ್ ನೋಡ್ಕೋಳ್ತ್ತೇನೆ. ಏನಾದರೂ ನನ್ ನೆನಪಾದಾಗ , ಅವಶ್ಯಕತೆ ಇದ್ದಾಗ ನನ್ ಸಹಾಯ ಬೇಕಿದ್ರೆ ಅಥವಾ ನಾನೇ ಬೇಕಿದ್ರೆ ಕಾಲ್ ಮಾಡು. ಗುಡ್ ಬಾಯ್ ಧೀರಜ್ ಎಂದು ಅನು ಕಾಲು ಕಿತ್ತೇ ಬಿಟ್ಟಳು.


ಧೀರಜ್ ಅವಳನ್ನು ತಡೆಯಲು ಆಗದೇ ಸೋತು ಹೋದ. ಅವಳ ಗುಂಗಲ್ಲೇ ಆಲೋಚಸಲುಶುರು ಮಾಡುತ್ತಾನೆ. ಹೇಗೆ ಇವಳಿಗೆ ನನ್ ಪ್ರೀತಿ ಅರ್ಥ ಮಾಡಿಸೋದು. ಪ್ರೀತಿ ಅಂದ್ರೇನೇ ಕಾಮಿಡಿ , ಡ್ರಾಮ ಅಂತ ಹೇಳಿ ಬದುಕುತ್ತಿದ್ದ ನಮಗೆ ಪ್ರೀತಿ ಬಗ್ಗೆ ಸಡನ್ನಾಗಿ ನಂಬಿಕೆನೇ ಬರಲ್ಲ. ನಂಬಿಕೆ ಬಂದ್ರು ಅದೊಂದು ಇಕ್ಕಟ್ಟು ಅಂತ ಅದನ್ನೆಲ್ಲ ಹತ್ತಿರಕ್ಕೂ ಸುಳಿಯೋಕೆ ಬಿಡುತ್ತಿರಲಿಲ್ಲ. ಈಗ ಇದ್ದಕ್ಕಿದ್ದ ಹಾಗೆ ಅಂತಹವನುಪ್ರೀತಿ ಪ್ರೇಮ ಅಂತ ಹೇಳಿದ್ರೆ ಪಾಪ ಅನು ಆದ್ರೂ ಹೇಗೆ ನಂಬುತ್ತಾಳೆ. ಅವಳಿಗೂ ಸಮಯ ಕೊಡೋಣ ಎಂದು ಮುಖದಲ್ಲೊಂದು ಕಿರುನಗೆ ಬರಿಸಿಕೊಳ್ಳುತ್ತಾ ಧೀರಜ್ ತಾವು ಮೊದಲು ಜೊತೆಯಾದ ದಿನಗಳನ್ನು ಮೆಲುಕು ಹಾಕಿದ.


ಅದ್ಯಾಕೆ ಅಷ್ಟೊಂದು ಅಳ್ತಿಯೇ ರಜನಿ!..ಎಂದು ಅನು ತನ್ನ ಗೆಳತಿ ರಜನಿಯ ಬಳಿ ಕೇಳುತ್ತಿರಲು , ಹೋಗೆ ಅನು ಸುಮ್ನೆ ನನ್ ಮನಸು ಇನ್ನಷ್ಟು ಹಾಳ್ ಮಾಡಬೇಡ ಕಣೆ ಅನು ಎಂದು ಚಿಟ್ಟಣೆ ಚೀರಿದಳು ರಜನಿ. ಅರೆ!..ಆಯ್ತು ಮರೈತಿ. ಇದ್ದದ್ದು ಇದ್ದ ಹಾಗೆ ಹೇಳಿದರೆ ಆಗೋದಿಲ್ಲ ಜನಕ್ಕೆ ಏನು ಮಾಡುವುದು. ಅವನು ಯವೋಳೋ ಹುಡುಗಿಯನ್ನು ಡೇಟ್ ಮಾಡೋಕೆ ಕರ್ಕೊಂಡು ಹೋದ ಅಂತ ಇವಳು ಗೋಳೋ ಅಂತ ಅಳೋದು. ಅವನ್ ಮಾಡೋ ಮನೆಹಾಳ್ ಕೆಲ್ಸ ಎಲ್ಲ ಮಾಡಿ ಮುಗಿಸಿಕೊಂಡು ಬಂದು ಇವಳ ಜೊತೆ ಸ್ವಾರಿ ಕಣೆ ರಂಜು ಅಂತ ಹೈಡ್ರಾಮ ಮಾಡೋದು. ಅವನ್ ಡ್ರಾಮ ನಿಜ ಅನ್ಕೊಂಡು ಇವಳು ಕರಗಿ ಅವನ ಜೊತೆ ಹಲ್ ಕಿರಿದು ಮತ್ತೆ ಮೊದಲಿನ ಹಾಗೆ ಆಗೋದು. ಮತ್ತೊಂದು ಸ್ವಲ್ಪ ಸಮಯ ಬಿಟ್ಟು ಆ ಮಹಾರಾಯ ಮತ್ತೆ ಅದನ್ನೇ ಮಾಡೋದು ಇವಳಿಗೂ ಬುದ್ಧಿ ಇಲ್ಲ ಅವನನ್ನು ಮತ್ತೆ ಮತ್ತೆ ನಂಬೋದು. ಇದೆಲ್ಲ ಯಾವ ಸೀಮೆ ಪ್ರೀತಿ. ಅದೇ ಅವನು ಒಂದ್ ಹುಡುಗಿನ ಜೊತೆ ಡೇಟ್ ಹೋದ್ರೆ ಇವಳು ಇನ್ನೊಂದ್ ಹುಡುಗನ ಜೊತೆ ಡೇಟಿಂಗ್ ಹೋದ್ರೆ ಮುಗೀತಪ್ಪ. ಆಗ ಅವನಿಗೂ ನಿನಗೂ ಏನು ವ್ಯತ್ಯಾಸ ಇರಲ್ಲ ನಿಜ. ಆದರೆ ಅವನ ನಾಟಕಕ್ಕೆ ನೀನು ಬಲಿಯಾಗಬೇಕು ಎಂದು ಇರುವುದಿಲ್ಲ. ಇಗೆಲ್ಲ ಹಾಗೆ ಕಣೆ ರಂಜು. ಮದುವೆಯಾಗದೇ ಜೊತೆಗೆ ಇದ್ದು ಹೇಗ್ ಬೇಕೋ ಹಾಗೆ ಇರಬಹುದು. ಅಲ್ಲಿ ಅವನು ಗಂಡನ ಹಾಗೆ ದರ್ಪ , ಆಜ್ಞೆ ಇದಾವುದೂ ಮಾಡೋ ಹಾಗಿಲ್ಲ. ಹೆಂಡತಿಯಾಗಿ ಅವನಿಗೆ ಹೆಜ್ಜೆ ಹೆಜ್ಜೆಗೂ ಭಯ ಪಡೋಹಾಗಿಲ್ಲ. ಹಾಗೆ ಅವನಿಗೂ ಅಷ್ಟೆ. ಮನೆ ಹೊರಗೆ ಯಾವ ವ್ಯವಹಾರ ಬೇಕಾದರೂ ಇಟ್ಟುಕೊಳ್ಳುವ ಸ್ವಾತಂತ್ರ್ಯ ಇರುತ್ತೆ. ಇಬ್ಬರು ದುಡಿಯುವವರಾದರಂತೂ ಖರ್ಚು ಕೆಲ್ಸ ಸಮಾನ. ಇನ್ನು ಇಷ್ಟ ಬಂದ ಹಾಗೆ ನಮ್ಮನ್ನ ನಾವು ತೊಡಗಿಸಿಕೊಳ್ಳುವ ಮುಕ್ತ ಸ್ವಾತಂತ್ರ್ಯ ಅಲ್ಲಿ ಇರುತ್ತೆ ಕಣೆ. ಇದನ್ನೆಲ್ಲ ದೂರದಲ್ಲೇ ನಿಂತು ಕೇಳಿಕೊಂಡ ಧೀರಜ್ ಗೆ ಅಂದು ಅನುಪಮಾ ಮೇಲೆ ಬಹಳ ಆಸಕ್ತಿ ಹುಟ್ಟುತ್ತದೆ. ಅಲ್ಲಿಂದ ಅವರಿಬ್ಬರ ಒಡನಾಟ ಶುರುವಾಗುತ್ತದೆ. 

ಮುಂದೆ ಇಬ್ಬರು ಒಪ್ಪಿ ಲಿವಿಂಗ್ ಟೂಗೆದರ್ ಬದುಕು ಅರಿಸಿಕೊಳ್ಳುತ್ತಾರೆ. ಎಲ್ಲವೂ ಚೆನ್ನಾಗಿಯೇ ಇತ್ತು ಎನ್ನುವಾಗ ಧೀರಜ್ ತನ್ನ ನಿರ್ಧಾರವನ್ನು ಬದಲಾಯಿಸಲು ಶುರು ಮಾಡಲು ಕಾರಣ ನಿಜವಾದ ಪ್ರೀತಿಯೊಂದು ಅವನಲ್ಲಿ ಚಿಗುರೊಡೆದದ್ದು ಆಗಿತ್ತು. ಆದರೆ ಅದು ಅನುಪಮಾಳಿಗೆ ಅರ್ಥ ಆಗದೇ ಅವಳು ತನ್ನ ಖಡಕ್ ನಿರ್ಧಾರದೊಂದಿಗೆ ಸಂಜೆ ಮನೆಗೆ ಬೇಗ ಮರಳುತ್ತಾಳೆ.


ಧೀರಜ್ ನಾನು ನಾಳೇನೇ ಈ ಮನೆ ಖಾಲಿ ಮಾಡುತ್ತಿದ್ದೇನೆ. ಇನ್ನು ಈ ಮನೆಯ ಸಂಪೂರ್ಣ ಜವಾಬ್ದಾರಿ ನಿನ್ನದಾಗುತ್ತೆ. ನಿನಗೆ ಬೇಕಾದಲ್ಲಿ ಈ ಮನೆಯಲ್ಲೇ ಇದ್ದು ನೀನೇ ಸಂಪೂರ್ಣ ಖರ್ಚು ನೋಡಿಕೊ. ನನಗೂ ಈ ಮನೆಗೆ ನಾಳೆಯಿಂದ ಯಾವ ಸಂಬಂಧ ಇರುವುದಿಲ್ಲ. ಇನ್ನು ನೀನು ಹೇಳಿದ ಈ ಮದುವೆ ಕಾನ್ಸೆಪ್ಟ್ ನಾನು ಯಾವತ್ತು ಒಪ್ಪಿಕೊಳ್ಳುತ್ತೇನೆ ಅಂತ ನೀನು ಭ್ರಮೆಯಲ್ಲಿ ಇರಬೇಡ. ಎಂದು ಹೇಳಲು ಧೀರಜ್ ಸರಿ ನೀನು ಹೋಗು ಆದರೆ ಯಾವತ್ತಾದರೂ ಒಂದು ದಿನ ನಾನು ಹೇಳಿದ್ದು ಸರಿ ನಾನೇ ನಿನಗೆ ಬೇಕು ಎಂದಾದಲ್ಲಿ ನೀನು ಬಾ... ನಾನು ಕಾಯುವೆ. ಎಂದು ಹೇಳಲು ರಂಜು ನಕ್ಕಳು ಮತ್ತು ಅಂತಹ ಕನಸನ್ನೆಲ್ಲ ನನ್ನ ಬಗ್ಗೆ ಕಾಣೋದು ಕೂಡ ನನಗೆ ಇಷ್ಟ ಆಗಲ್ಲ ಧೀರ ಡಾರ್ಲಿಂಗ್ ಎಂದು ಕೋಣೆಯ ಕಡೆಗೆ ಹೊರಟುಹೋದಳು. 


ಮರು ದಿನ ತನ್ನ ಲಗೇಜ್ ಜೊತೆ ಹೊರಟು ಹೋದಳು ಅನು. ಅವಳ ನೆನಪಲ್ಲೇ ಮೂರು ವರ್ಷ ಕಳೆಯುತ್ತಾನೆ ಮುಂದೆ ಧೀರಜ್. ಮೂರು ವರ್ಷಗಳ ಬಳಿಕ ಒಂದು ಸೂಸೈಡ್ ಸ್ಥಳದಲ್ಲಿ ಬಂದು ನಿಂತು ತನ್ನ ಬದುಕನ್ನೇ ಕೊಂದುಕೊಳ್ಳಲು ಹೊರಟ ಅನುಪಾಳನ್ನು ಪ್ರಪಾತಕ್ಕೆ ಬೀಳದಂತೆ ಕೈ ಹಿಡಿದು ಧೀರಜ್ ಎಳೆಯಲು ಅನುಪಮಾಳಿಗೆ ದುಃಖ ಉಮ್ಮಳಿಸಿ ಬಂದು ಅವನನ್ನು ತಬ್ಬಿಕೊಂಡು ಅತ್ತಳು. ರಾಕೇಶ್ ಎನ್ನುವ ಭೂಗತ ಪಾತಕಿಯ ಜಾಲದಲ್ಲಿ ತಾನು ಬಿದ್ದು ಇದ್ದಬದ್ದವರಿಗೆಲ್ಲ ಆಹಾರವಾಗಿ ಕೊನೆಗೆ ಹೇಗೋ ತಪ್ಪಿಸಿಕೊಂಡು ಮತ್ತೆ ಹೊಸ ಬದುಕು ಕಟ್ಟಿಕೊಳ್ಳುವ ಪ್ರಯತ್ನ ಮಾಡಿದೆ ಧೀರಜ್. ಆದರೆ ಬದುಕು ಕಟ್ಟಿಕೊಳ್ಳುವುದು ಬಿಡು ಒಂದು ಹೊತ್ತಿನ ಊಟವನ್ನು ಕೂಡ ಮಾಡಲುಭಾಗ್ಯ ಸಿಗಲಿಲ್ಲ. ಇನ್ನು ನಿನ್ನ ಹುಡುಕಾಡುವ ಯಾವ ಶಕ್ತಿಯೂ ನನಗೆ ಇಲ್ಲ. ಒಂದೊಮ್ಮೆ ಇದ್ದರೂ ಹೇಗೆ ಈ ಮುಖ ಹೊತ್ತು ನಿನ್ನ ಮುಂದೆ ಬರುವುದು ನೀನೇ ಹೇಳು. ನನ್ನ ಬದುಕಿನ ಸರ್ಟಿಫಿಕೇಟ್ ಹಾಳುಮಾಡಿದ್ದಲ್ಲದೆ ನನ್ನ ಎಲ್ಲಾ ಪದವಿಯ ಕೆಲಸದ ಸರ್ಟಿಫಿಕೇಟ್ ಅನ್ನು ನಾಶ ಮಾಡಿದ ರಾಕೇಶ್. ಈಗ ಉಳಿದಿರುವ ದಾರಿ ಇದೊಂದೇ ಸಾವು ಎಂದು ಬಂದಿರುವೆ. ನೀನು ಹೇಗೆ ಬಂದೆ ಇಲ್ಲಿಗೆ ಧೀರಜ್. ನಾನು ಇವತ್ತಿಗೂ ಉಸಿರಾಡುತ್ತಿರುವುದು ನಿನಗೋಸ್ಕರ ಅನು. ನಿನ್ನ ಮೇಲೆ ಒಂದು ಕಣ್ಣು ಸದಾ ಇಟ್ಟಿದ್ದೆ. ನೀನು ಮುಂಬೈ ಹೋದಾಗಲೂ ಅಲ್ಲೂ ನಾನು ಬಂದು ನಿನ್ನ ಹಿಂಬಾಲಿಸುತ್ತಿದ್ದೆ. ಆ ರಾಖಿಜೊತೆಗೆ ನಿನ್ನ ಒಡನಾಟ ನೇಮ್ ಫೆಮ್ ಎಲ್ಲವನ್ನು ತಿಳಿದಿದ್ದೆ. ಆದರೆ ಒಂದು ದಿನ ನೀನು ಮಾಯವಾಗಿ ಹೋದೆ. ಅದೇಷ್ಟೆಲ್ಲ ಹುಚ್ಚನ ಹಾಗೆ ಹುಡುಕಾಡಿದೆ ಅಲೆದಾಡಿದೆ ನಿನಗಾಗಿ ನಾನು. ಆ ರಾಖಿ ಜೊತೆಗೂ ಗುದ್ದಾಡಿದೆ. ಆದರೆ ಅವನು ಅವಳು ಇನ್ನವನನ್ನೋ ಹುಡುಕಿಕೊಂಡು ಹೋದಳು ಮರೆಯಾ ಎಂದು ಒಂದಿಷ್ಟುಕಾರಣಗಳ ಸಹಿತ ಹೇಳಿದ. ಮದುವೆ ಎನ್ನುವ ಕಾನ್ಸೆಪ್ಟ್ ಬಂದಾಗ ನೀನು ಮಯವಾದೆ ಎಂದುಅವನು ಹೇಳಲು ನಾನು ನನಗಾದ ಅನುಭವಕ್ಕೆ ತಾಳೆ ಹಾಕಿ ವಿಧಿ ಇಲ್ಲದೇ ಒಪ್ಪಿದೆ. ಆದರೂ ನಿನ್ನನ್ನು ಸರಿ ದಾರಿಗೆ ತರಬೇಕು ಎಂದು ತುಂಬಾನೇ ಹುಡುಕಾಡಿದೆ. ಇಂದೂ ಕೂಡ ನಾನು ನಿನ್ನನ್ನು ಹುಡುಕಾಡುತ್ತಲೇ ಇದ್ದೆ. ಮುಸುಕು ಹೊತ್ತುಕೊಂಡು ಅತ್ತಿತ್ತ ನೋಡಿಕೊಂಡು ಬರುವ ನಿನ್ನ ಮುಖ ಒಮ್ಮೆ ನನಗೆ ಕಾಣಿಸಿತು. ತೊಂಭತ್ತು ಶೇಕಡಾ ನೀನು ಅಲ್ಲಾ ಎಂದು ಹೇಳಿದರೂ ಇನ್ನು ಶೇಕಡ ಹತ್ತು ಇದು ನನ್ನ ಅನುಪಮ ಎಂದು ಸೂಚಿಸುತ್ತಿತ್ತು. ಯಾರಾದರೂ ಏನು ಸಾವಿನ ಬಾಯಿಗೆ ಹೋಗುತ್ತಿದ್ದಾರೆ ಅವರನ್ನು ತಡೆಯಲೇ ಬೇಕು ಎಂದು ನಾನಿಲ್ಲಿ ಬಂದು ನಿನ್ನನ್ನು ತಡೆದೆ. ದೇವರು ದೊಡ್ಡವನು ಕೊನೆಗೂ ನನಗೆ ನೀನು ಸಿಗುವಂತೆ ಮಾಡಿದ ಎಂದು ಧೀರಜ್ ಅನುಪಮಾಳನ್ನು ಅಪ್ಪಿಕೊಂಡು ಮುತ್ತಿಕ್ಕಿದ. ಧೀರಜನ ಪ್ರೀತಿಯನ್ನು ಅರ್ಥ ಮಾಡಿಕೊಳ್ಳದೇ ಅಂದು ಹೊರನಡೆದ ಅನುಪಮಾಳಿಗೆ ಇಂದು ತನ್ನ ಅಸಹ್ಯ ಬದುಕಿನ ಬಗ್ಗೆ ತಪ್ಪಿನ ಅರಿವಾಗುತ್ತದೆ. 


ತಾನು ಇನ್ನು ಮುಂದೆ ದೀರಜನಿಗೆ ತೊಂದರೆಯಾಗಿ ಇರಬಾರದು ಎಂದು ನಾನು ನನ್ನ ಹಳೆಯ ದಾರಿಯನ್ನು ತುಳಿಯದೆ ಸ್ವಾತಂತ್ರ್ಯವಾಗಿ ಅಂದರೆ ನಾನೇ ದುಡಿಯುತ್ತಾ ಉತ್ತಮವಾಗಿ ಬದುಕುವೆ ಎಂದು ಧೀರಜನಿಗೆ ಹೇಳಲು... ಹಾಗಾದರೆನೀನು ಈಗಲೂ ನನ್ನನ್ನು ಮದುವೆಯಾಗಲು ಒಪ್ಪುವುದಿಲ್ಲ ಎಂದಾಯಿತು. ಮತ್ತೆ ನಿನಗೆ ಅದೇ ಸ್ವಾತಂತ್ರ್ಯದ ಬದುಕೇ ಬೇಕು ಎಂದಾಯಿತು ಎಂದು ಧೀರಜ್ ಹೇಳಲು. ಅಲ್ಲ ಕಣೋ ಹಾಗಾದ್ರೆ ನೀನಿನ್ನು ಮದುವೆ ಅಗಲಿಲ್ಲವಾ?!.. ಹಾಗೆ ಇದ್ದೀಯಾ.. ಅವತ್ತು ಏನೋ ಅವಸರ ಅನ್ನೋ ಹಾಗೆ ಮಾಡಿದೆ ಮತ್ತೆ. ಅವತ್ತು ಅವಸರ ಮಾಡಿದ್ದು ಮದುವೆ ಅಗೋಣ ಅಂತ ಅಲ್ಲ ಅನು. ನೀನು ಯಾರ್ಯಾರಿಗೋ ಡೇಟ್ ಆಗೋದು ಬೇಡ ನಾವಿಬ್ಬರೂ ನಮಗಾಗಿ ಬಾಳಿ ಬದುಕೋಣ ಅಂತ. ಈಗಲಾದರೂ ಒಪ್ಪಿಕೊಳ್ಳೆ ಮರಾಯ್ತಿ. ಆದರೆ ಈಗ ನಾನು...!... ಈಗ ನೀನು ಏನು....ಅದೆಲ್ಲ ಹಳೆಯ ಕಹಿ ಘಟನೆ ಅಂತ ಮರೆತು ಬಿಡು. ಈಗ ಮತ್ತೆ ಒಂದಾಗಿದ್ದೀವಿ. ಈ ಬಾರಿ ಪ್ರೇಮೋತ್ಸವ ಮಾಡೋಣ. ಪ್ರೀತಿಯಿಂದ ಪ್ರೀತಿಗೋಸ್ಕರ ಬದುಕೋಣ ಎಂದು ಇಬ್ಬರು ಒಬ್ಬರಿಗೊಬ್ಬರು ಅಪ್ಪಿಕೊಂಡು ಮುತ್ತಿಕ್ಕುವರು.


ಮುಕ್ತಾಯ...


Rate this content
Log in

More kannada story from ಶಾಯಿನಾ ಇಮ್ರಾನ್

Similar kannada story from Romance