murali nath

Children Stories Fantasy Inspirational

4.5  

murali nath

Children Stories Fantasy Inspirational

ಶಿಲ್ಪಿಯ ದುಃಖ

ಶಿಲ್ಪಿಯ ದುಃಖ

1 min
56



ಒಮ್ಮೆ ಒಬ್ಬ ಶಿಲ್ಪಿ ಉರಿಬಿಸಿಲಿನಲ್ಲಿ ಒಂದು ಕಲ್ಲು ಬಂಡೆಯನ್ನ ವಿಗ್ರಹಕ್ಕಾಗಿ ಕಡಿಯುತ್ತಾ ಕುಳಿತಿದ್ದಾಗ ಅವನಿಗೆ ತಲೆಯಲ್ಲಿ ಒಂದು ಆಲೋಚನೆ . ನಾನೇ ಸೂರ್ಯನಾದರೆ ಈ ಬಿಸಿಲಿನ ತಾಪತ್ರಯವೇ ಇರದು ಅಲ್ಲವೇ. ಹಾಗೆ ಯೋಚಿಸುತ್ತ ಇರುವಾಗಲೇ ಸೂರ್ಯನಾಗಿಬಿಟ್ಟ.ಸಂಜೆಯ ಹೊತ್ತಿಗೆ ಕಪ್ಪನೆಯ ಭಾರಿ ಮೋಡಗಳುಭರದಿಂದ ಸಾಗುತ್ತಿದೆ ಹಾಗೆ ಸೂರ್ಯನನ್ನೇ ಮುಚ್ಚುವಂತೆ ಅಡ್ಡಬಂದಾಗ ನನಗಿಂತಲೂ ಈ ಮೋಡಗಳೆ ಮೇಲು ಅಂದುಕೊಂಡು ನಾನು ಮೊಡವಾಗಬಾರದೇಕೆ ಎಂದುಕೊಂಡ ತಕ್ಷಣ ಕಪ್ಪನೆಯ ಮೊಡವಾಗಿ ಆಕಾಶದಲ್ಲಿ ಸ್ವಚ್ಛಂದವಾಗಿ ಚಲಿಸುತ್ತಿದ್ದಾಗ ದೊಡ್ಡ ಬೆಟ್ಟ   ಒಂದಕ್ಕೆ ಡಿಕ್ಕಿ ಹೊಡೆದ. ಆಗ ಅವನಿಗೆ ಹೊಳೆದದ್ದು ಈ ಎತ್ತರದ ಬೆಟ್ಟವೇ ನಾನಾದರೆ ಹೇಗೆ ಅಂತ. ಬಯಸಿದಂತೆ ಕ್ಷಣದಲ್ಲಿ ಬೆಟ್ಟವಾದ. ಬೆಟ್ಟವಾಗಿ ಆಕಾಶದೆತ್ತರಕ್ಕೆ ತಲೆ ಇದ್ದಂತೆ ಭಾಸವಾಗಿ ನನಗಿಂತಲೂ ದೊಡ್ಡವರು ಯಾರೂ ಇಲ್ಲವೆಂದು ಕೊಂಡಾಗ ತನ್ನ ಕಾಲು ಬುಡದಲ್ಲಿ ಏನೋ ಶಬ್ದ. ಬಾಗಿ ನೋಡಿದರೇ ಹತ್ತು ಹಲವಾರು ಬುಲ್ಡೋಜರ್ ಗಳು ಲಾರಿ ಟ್ರ್ಯಾಕ್ಟರ್ ಕಲ್ಲು ಕುಟುಕರು, ಸಿಡಿಮದ್ದು ಇಟ್ಟು ಬಂಡೆ ಒಡೆಯುವರು, ಹೀಗೆ ನೂರಾರು ಜನರನ್ನು ಕಂಡು ಬೆಚ್ಚಿದ. ಆಗ ಜ್ಞಾನೋದಯವಾಯಿತು. ನಾನು ನನ್ನ ಕಾಯಕ ಮಾಡಿಕೊಂಡಿದ್ದರೆ ಎಷ್ಟು ಚೆನ್ನಾಗಿತ್ತು .ಈಗಿನ ಸ್ಥಿತಿಯಲ್ಲಿ ಎಂದೋ ಒಂದು ದಿನ ಉರುಳುವುದಂತೂ ಸತ್ಯ ಶಿಲ್ಪಿಯಾಗಿ ಕೆತ್ತುಕೊಟ್ಟ ನೂರಾರು ವಿಗ್ರಹಗಳು ದೇವರುಗಳಾಗಿ ಜನರಿಂದ ಇಂದು ಪೂಜೆ ಗೊಳ್ಳುತ್ತಿದೆ ಎನ್ನುವ ಸಂತೋಷವಾದರೂ ಇತ್ತು.ಈಗ ಅದನ್ನೂ ಕಳೆದುಕೊಂಡೆ ಎಂದು ಬೆಟ್ಟವಾಗಿ ದುಃಖ ಪಟ್ಟರೂ ಪ್ರಯೋಜನವಿಲ್ಲ.


Rate this content
Log in