Vijayalaxmi C Allolli

Comedy Drama Others

4  

Vijayalaxmi C Allolli

Comedy Drama Others

ಮದುವೆ

ಮದುವೆ

2 mins
263



ಲತಾ ,ನಿತಾ ಇಬ್ಬರೂ ಸ್ನೇಹಿತೆಯರು.ಚಿಕ್ಕವರಿಂದ ಹಿಡಿದು ಮೊನ್ನೆ ಮೊನ್ನೆ ತಮ್ಮ ಗಂಡು ಮಕ್ಕಳಿಗೆ ಮದುವೆ ಮಾಡೊವರೆಗೂ ಸ್ನೇಹವನ್ನು ಉಳಿಸಿ ಕೊಂಡು ಬಂದವರು..ಮಕ್ಕಳಿಗೆ ಮದುವೆ ಮಾಡಿದ ಖುಷಿ ಒಂದೆಡೆಯಾದರೆ,ಸೊಸೆ ಹೇಗೆ ಹೊಂದಿಕೊಳ್ಳುತ್ತಾಳೊ ಅನ್ನೋ ಚಿಂತೆ....


ತಿಂಗಳು ಕಳೆಯಿತು..ಲತಾ-ಲತಾನ ಸೊಸೆ ತುಂಬಾ ಚೆನ್ನಾಗಿ ಹೊಂದು ಕೊಂಡರು..ಮನೆಗೆ ಬೇಕಾದ ಸಾಮಗ್ರಿಗಳನ್ನು ಪಟ್ಟಿ ಮಾಡುವುದು,ಖರ್ಚು-ವೆಚ್ಚದ ಬಗ್ಗೆ ಇಬ್ಬರೂ ಅತ್ತೆ-ಸೊಸೆ ಚರ್ಚೆ ಮಾಡುತ್ತಿದ್ದರು.ಕಾಲೇಜು ಮುಗಿಸುವ ತಿಂಗಳ ಮುಂಚೆಯೇ ಮದುವೆ ನಿರ್ಧಾರವಾದ್ದರಿಂದ.ಕಾಲೇಜಿಂದ ಸೀದಾ ಅತ್ತೆ ಮನೆಗೆ ಬರುವಂತಾಯಿತು ಲತಾಳ ಸೊಸೆಯದು..


ಮೊದ-ಮೊದಲು ಹೆದರುತ್ತಿದ್ದ ಸೊಸೆಯನ್ನು ಕಂಡು ಅತ್ತೆ,

"ಹೇದರಿಕೆ ಯಾಕೆ?ನಾವೆಲ್ಲಾ ಎಲ್ಲವನ್ನೂ ಕಲಿತು ಬಂದಿರುವುದಿಲ್ಲ..ದಿನ ಕಳೆದಂತೆ ಕಲಿತಾ ಹೋಗಬೇಕು"ಎಂದು ತಾಯಿಯ ಹಾಗೆ ಹೇಳಿ ಕೊಡುತ್ತಿದ್ದಳು.ಅಡುಗೆ,ಮನೆಯ ಆಗು-ಹೋಗುಗಳ ಬಗ್ಗೆ ಎಲ್ಲವನ್ನೂ ಸಮಾಧಾನದಿಂದ ಕಲಿಸಿ ಕೊಡುತ್ತಿದ್ದಳು...ವಾರಾಂತ್ಯದಂದು ಮಗ-ಸೊಸೆಯನ್ನು ಊಟಕ್ಕೆ ಹೋಗುವಂತೆ,ಕಳಿಸುತ್ತಿದ್ದಳು..


ಹೀಗೆ ಆರು ತಿಂಗಳು ಕಳೆಯಿತು.ನೀತು,ಲತಾಗೆ ಕಾಲ್ ಮಾಡಿದಳು...


ಲತಾ:

ಹಲೋ! ನೀತೂ.......ಬಹಳ ದಿನಾ ಆಯ್ತು ನೀನು ಕಾಲ್ ಮಾಡಿ...


ನೀತು:

ಹುಂ! ಹೇಗಿದಿಯಾ ನೀನೂ?


ಆರಾಮ ಅದಿನಿ..


ನೀನು ಹೇಗಿದಿಯಾ? ನೀತು


ಎಲ್ಲಾ ಸೊಸೆ ದಯೆಯಿಂದ, ಹೋಗೊಳು ಇಲ್ಲೆ ಇದಿನಮ್ಮ!!!


ಯಾಕೆ?


ಅವಳಿಗೆ ಎಲ್ಲಾ ಹೇಳಿ ಕೊಡೊಷ್ಟತ್ತಿಗೆ ನಂಗೆ ಸಾಕು ಸಾಕಾಗಿದೆ..ಒಂದಾ ಎರಡಾ ಅವಳು ಮಾಡೋದು..

'ಗ್ಯಾಸ್ ಹಚ್ಚಿಟ್ಟು ಪಾತ್ರೆ ಹುಡ್ಕತಾಳೆ'...


'ಗೋದಿನಾ ಸ್ವಚ್ಛ ಮಾಡಿ, ಹಿಟ್ಟ ಮಾಡಿಸೋಣಾ ಅಂದ್ರೆ,"ಅತ್ತೆ ಆಶಿರ್ವಾದನೋ, ಮತ್ತೊಂದು ತರೋಣಾ' ಅಂತಾಳೆ..ಗೋಧಿ ತಂದು ಹಿಟ್ಟ ಮಾಡಿಸೋಕು, ರೆಡಿಮೆಡ್ ಹಿಟ್ಟಿಗೂ ಅಜಗಜಾಂತರ ರೊಕ್ಕ ಅಲ್ವೇನೆ...


ಲತಾ:

ಈಗಿನ ಕಾಲದ ಸೊಸೆರು ಅಲ್ವಾ,ಸ್ವಲ್ಪ ಹೋಂದಿಕೊಳ್ಳೋಕೆ ಸಮಯ ತಗೋತಾರೆ..ನೀನೆ ತಿಳಿಸಿ ಹೇಳು.


ನೀತು:

ಹೇಗಿದಾಳೆ?ನಿನ್ನ ಸೊಸೆ...


ಪರವಾಗಿಲ್ಲ ಇದ್ರಲ್ಲೆ ಸ್ವಲ್ಪ ಉತ್ತಮ...


ಏನಾದರೂ ನಿನ್ನ ಅವಳ ಮಾತು ಕತೆ...


ಲತಾ:

ಆಗಾಗ ಬರತ್ತೆ,ಹೋಗತ್ತೆ...


ಮೊನ್ನೆ ಅವಳು,'ಅತ್ತೆ,ಇವತ್ತು ಶ್ಯಾವಿಗೆ ಇಡ್ಲಿ ಮಾಡ್ಲಾ ಅಂದಳು'

'ಬೇಡಮ್ಮ ನೀರ-ನೀರಾಗಿರೊ ಶ್ಯಾವಿಗೆ ಉಪ್ಪಿಟ್ಟನ್ನ ಇಡ್ಲಿ ಪಾತ್ರೆಗೆ ಹಾಕಿ,ಬೇಯಿಸೊದೆ ಶ್ಯಾವಿಗೆ ಇಡ್ಲಿ ಅಲ್ವಾ?'ಅದರ ಬದಲು ಉಪ್ಪಿಟ್ಟೆ ಮಾಡಬೀಡು' ಅಂದೆ ಅಷ್ಟಕ್ಕೆ ಸುಮ್ಮನಾದಳು..


ನೀತು:

ಪುಣ್ಯ ಮಾಡಿ ಲತಾ...ಅತ್ತೆ ಮಾತ ಕೇಳೊ ಸೊಸೆ ಸಿಕ್ಕಾಳ ನಿಂಗೆ...


ನನ್ನ ಸೊಸೆ,'ಆಲೂ ಪರೋಠಾ ಮಾಡತಿನಿ ಅಂದಳು,'

'ಚಪಾತಿ-ಆಲೂಗಡ್ಡೆ ಪಲ್ಯ ಮಾಡು,ಅದಕ್ಕೂ ಪರೋಠಾ ಹಾಕೋದನ್ನೆ ಹಾಕತಿವಲಾ'ಅಂದದ್ದೆ

ತಗೋ ಕಣ್ಣಲ್ಲಿ ಗಂಗಾ-ಕಾವೇರಿ-ಯಮುನಾ ಎಲ್ಲಾ ನದಿಗಳು ಬಂದವು...


ಲತಾ:

ನೀತು,ನಮ್ಮ ಕಾಲಾನೆ ಬೇರೆ,ಈಗಿನದೆ ಬೇರೆ..ನಾವು ಗ್ಯಾಸ್ ಜಾಸ್ತಿ ಬಳಸಿದ್ರೆ, ಬೇಗ ಖಾಲಿ ಆಗತ್ತೆ.ಅಂತಾ ಕಟ್ಟಿಗೆ ಒಲೆ ಹೆಚ್ಚು ಬಳಸತಿದ್ವಿ.

ವಾಕಿಂಗ್ ಅಂತಾ ಹೋಗಿ ಬೇಲಿಲಿರೊ ಜಾಲಿಗಿಡದ್ದ ಕಟ್ಟಿಗೆ ತರತಿದ್ವಿ..

ಇಗಿನೋರೊ jolly ಮಾಡಾಕ ಹೋಗಿ ಪಿಜ್ಜಾ,ಬರ್ಗರ್ ತಿಂದ,ವಾಕಿಂಗ್ ಮಾಡೋ ಮಷಿನ್ ತಂದು ಅದಕ್ಕೂ ರೊಕ್ಕ ಸುರಿತಾರ...


ನೀತು:

ಹೌದೆ,ನೀನು ಹೇಳಿದ್ದು ಬಹಳ ನಿಜಾ ಐತಿ...


ಲತಾ:

'ನಮ್ಮ ಮಾವನವರು ಹೊಲ ಹಿಡದಿದ್ದರು,ಅದರ ಬೆಲೆ ಹತ್ತು ಪಟ್ಟು ಹೆಚ್ಚಾಗೈತಿ,


ನಮ್ಮ ಮನೆಯವರು ಮನೆ ಕಟ್ಟಿಸಿದರು,ಮಾರಿದ್ರ ಹೆಚ್ಚು ಹಣ ಸಿಗತೈತಿ,ಕೊಟ್ರ ಬಾಡಿಗೆ ಬರತೈತಿ...


ಇವಾ ನನ್ನ ವಂಶೋದ್ಧಾರಕ ವರ್ಷಕ್ಕೊಂದು ಫೋನ್ ತಗೋತಾನ,update ಆಗಬೇಕು ಅಂತಾ ಹಳೆದು ಮೂಲ್ಯಾಗ ಒಗದು,ಹೊಸಾದ ತಗೋತಾನ...


ನೀತು:

ಹೌದಮ್ಮಾ! ಹೌದು!!ಈ ತಂತ್ರಜ್ಞಾನದ ಹಿಂದ ಬಿದ್ದು..ನಮ್ಮ ಮುಂದಿನ ತಲೆಮಾರುಗಳ ತಲೆನೆ ಇರಲಾರದಂಗ ಆಗೇತಿ...


ಮತ್ತೆ ಫೋನ್ ಮಾಡತಿನಿ ಲತಾ....




Rate this content
Log in

Similar kannada story from Comedy