STORYMIRROR

kaveri p u

Drama Crime Others

4  

kaveri p u

Drama Crime Others

ದೃಶ್ಯ

ದೃಶ್ಯ

2 mins
425

ನಾನ್ ಸ್ಟಾಪ್ ನವೆಂಬರ್ ಮಧ್ಯಂತರ ಹಂತ


ಈ ಸಿನಿಮಾದಲ್ಲಿ ವಿಲನ್ ಒಬ್ಬನು ತನ್ನ ಗೆಳತಿಗೆ ಬ್ಲ್ಯಾಕ್ ಮೇಲ್ ಮಾಡುತ್ತ, ಒಂದು ರಾತ್ರಿ ಇರಬೇಕೆಂದು ಬಹಳ ದಿನಗಳಿಂದ ಕಾಡಿಸುತ್ತಿರುತ್ತಾನೆ . ಬರದಿದ್ದರೆ ಅವಳು ಡ್ರೆಸ್ ಬದಲಾಯಿಸುತ್ತಿದ್ದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತೇನೆ ಎಂದು ಬೆದರಿಸುತ್ತಿರುತ್ತಾನೆ. ಮಾತಿನ ಚಕಮಕಿಯಲ್ಲಿ ಹುಡುಗಿ ಮತ್ತವಳ ತಾಯಿ ಸೇರಿ ಅವನನ್ನು ಕೊಂದೇ ಬಿಡುತ್ತಾರೆ. ಈ ಸನ್ನಿವೇಶವನ್ನು ನನ್ನ ದೃಷ್ಟಿಯಲ್ಲಿ ಬದಲಿಸುವುದಾದರೆ,


ತರುಣ್ : ಸಿಂಧು ನಿನ್ನ ಜೊತೆ ಮಾತಾಡ್ಬೇಕು.


ಸಿಂಧು : ಒಹ್ ಹಾಯ್ ತರುಣ್! ಏನ್ ನಮ್ಮ ಮನೆ ಕಡೆ ಪ್ರಯಾಣ ಬೆಳ್ಸಿದಿಯ? ಏನ್ ಸಮಾಚಾರ?


ತರುಣ್ : ಸಿಂಧು ನಿಂಗೊಂದ್ ವಿಡಿಯೋ ತೋರ್ಸೋದಿತ್ತು, ಅದು ನನ್ನ ಫ್ರೆಂಡ್ ನನಗೆ ಕಳ್ಸಿದ್ದು.


ಸಿಂಧು : ಏನ್ ತೋರ್ಸು ತರುಣ್.


ತರುಣ್ : (ಸಿಂಧುವಿಗೆ ಸಿಂಧು ಬಟ್ಟೆ ಬದಲಿಸುತ್ತಿದ್ದ ವಿಡಿಯೋವನ್ನು ತೊಸಿರುತ್ತಾನೆ)


ಸಿಂಧು : ತರುಣ್! ಏನಿದು?


ತರುಣ್ : ನೋಡ್ ಸಿಂಧು ಇದೆಲ್ಲ ತುಂಬಾ ಸಿಂಪಲ್ ವಿಷಯ. ಯಾಕೀಷ್ಟು ಪ್ಯಾನಿಕ್ ಆಗ್ತಿದೀಯಾ? ಜಸ್ಟ್ ನೀನು ಕೋ-ಆಪರೇಟ್ ಮಾಡು ಅಷ್ಟೇ. ಒಂದೇ ಸಲ ನನ್ನ ಜೊತೆ ಇದ್ಬಿಟ್ಟು ಹೋಗು, ಆಮೇಲೆ ನಾನೇ ಆ ವಿಡಿಯೋ ಡಿಲೀಟ್ ಮಾಡ್ತೀನಿ.


ಸಿಂಧು : ತರುಣ್ ನೀನಾ ಈ ಮಾತು ಹೇಳ್ತಿರೋದು! ನಿಜವಾಗ್ಲೂ ಇದು ನಮ್ಮ ತರುಣ್ ಹೇಳ್ತಿರೋದಾ? ನೀನು ಅವತ್ತು ನಾನೊಬ್ಬನೇ ಮಗ, ನಂಗೆ ಅಕ್ಕ ತಂಗಿರು ಯಾರೂ ಯಾರೂ ಇಲ್ಲ ಅಂದಾಗ ನಿನ್ನನ್ನ ನನ್ನ ಅಣ್ಣ ಅಂತ ಅನ್ಕೊಂಡು, ನಿನಗೆ ತಂಗಿಯಾಗಿದ್ದೆ. ಈಗ ಅದೇ ತಂಗಿನ ನೀನು, ನಿನ್ನ ಜೊತೆ ಮಲಗೋಕೆ ಕರೀತಿದಿಯ? ಯಾಕ್ರೋ ನೀವೆಲ್ಲ ಹೀಗೆ? ಸ್ವಂತ ತಂಗಿ ಮಾತ್ರ ತಂಗಿನಾ ನಿಮಗೆ? ನನ್ನ ಜಾಗದಲ್ಲಿ ನಿನ್ನ ತಂಗಿ ವಿಡಿಯೋ ಇದ್ದು, ಬೇರೆ ಯಾವನೋ ಅವಳನ್ನ ಹಾಸಿಗೆಗೆ ಕರ್ದಿದ್ರೆ ನೀನು ಕಳಿಸ್ತಿದ್ದೆಯಾ? ಹೇಳೋ ತರುಣ್? ನನ್ನ ಅಮ್ಮನ ಮುಂದೆ ನಂಗೊಬ್ಬ ಅಣ್ಣಾ ಸಿಕ್ಕಿದ್ದಾನೆ ಅಂತ ನಿನ್ನ ಫೋಟೋ ತೋರ್ಸಿದ್ದೆ, ನೀನು ನೋಡಿದ್ರೆ ನನ್ನ ಬಯಸ್ತೀದೀಯಾ? ಸರಿ ಬಾ ತರುಣ್, ಈ ಕ್ಷಣಿಕ ಸುಖಾನೇ ನಿನಗೆ ಮುಖ್ಯ ಅನ್ಸಿದ್ರೆ, ಸಂಬಂಧ ಎಲ್ಲ ಸುಳ್ಳು ಅನಿಸಿದ್ರೆ ಬಾ, ಬಾರೋ ಈಗ್ಲೇ "


ತರುಣ್ : ಸಿಂಧು..... ಸಿಂಧೂ...!

ನನ್ನ ಕ್ಷಮಿಸು ಪ್ಲೀಸ್. ನಿನಗೆ ಮುಖ ತೋರ್ಸೋಕೂ ನನಗೆ ನಾಚಿಕೆ ಆಗ್ತಿದ್ದೆ. ಹೆಣ್ಣು ಅಂದ್ರೆ ಬರೀ ಸುಖ ಕೊಡೋಕೆ ಅನ್ಕೊಂಡಿದ್ದೆ. ನನ್ನ ಕಣ್ಣು ತೆರೆಸಿದೆ ನೀನು. ತಪ್ಪಾಯ್ತು ಸಿಂಧು, ಇನ್ಮೇಲೆ ನೀನು ನಂಗ್ ತಂಗಿ ಅಲ್ಲಾ ತಾಯಿ! ಮಗ ಅನ್ಕೊಂಡು ನನ್ನ ತಪ್ಪೆಲ್ಲ ಕ್ಷಮಿಸು ಸಿಂಧು "


ಸಿಂಧು : ತರುಣ್, ಈ ವಿಷಯ ಇಲ್ಲಿಗೆ ಬಿಟ್ಬಿಡು. ಇನ್ಮೇಲಿಂದ ನೀನು ನಾನು ಒಂದೇ ತಾಯಿ ಮಕ್ಕಳು. ಆಯ್ತಾ. ಸರಿ ನಡೀ ಈಗ ಊಟಕ್ಕೆ ಹೋಗೋಣ.


Rate this content
Log in

Similar kannada story from Drama