ಬಲವಂತ ದಾನ
ಬಲವಂತ ದಾನ


ಬಹಳ ಹಿಂದೆ ಒಂದುಹಳ್ಳಿ ಯಲ್ಲಿ ಒಂದು ಬಡ ಕುಟುಂಬ. ಗಂಡ ಹೆಂಡತಿ ಮತ್ತು ಮಗು. ಬಡತನ ಅಂದರೆ ಏನು ಅಂತ ನೋಡಬೇಕಂದ್ರೆ ಈ ಕುಟುಂಬವನ್ನ ನೋಡಬೇಕು. ಒಂದು ದಿನ ಊಟಮಾಡಿದ್ರೆ ಎರಡು ದಿನ ಉಪವಾಸ . ಆ ಊರಿಗೆ ಒಬ್ಬ ಸನ್ಯಾಸಿ ಬಂದ. ಇವರ ಮುರುಕಲು ಮನೆ ಎದುರೇ ಒಂದು ಗುಡಿಸಲು ಕಟ್ಟಿಕೊಂಡ ಜೊತೆಯಲ್ಲಿ ಇಬ್ಬರು ಶಿಷ್ಯರು. ಊರಿನವರಿಗೆಲ್ಲ ಇವನ ಮೇಲೆ ಏನೋ ಭಕ್ತಿ. ಏನು ಕೇಳಿದರು ತಂದು ಕೊಡ್ತಿದ್ರು. ನಮಸ್ಕಾರ ಮಾಡ್ತಿದ್ರು. ಏನೂ ಕೆಲಸ ಮಾಡದೇ ಮೂರುಜನ ಆರಾಮವಾಗಿ ಜೀವನ ಮಾಡ್ಕೊಂಡಿದ್ರು. ಗುಡಿಸಲು ಹೋಗಿ ದೊಡ್ಡ ಮಠ ಆಯ್ತು ರಾಜಕಣಿಗಳು ಆಗಾಗ ಬರಕ್ಕೆ ಪ್ರಾರಂಭ. ಇವರಿಂದ ರಸ್ತೆ ಚೆನ್ನಾಗಾಯ್ತು. ಕುಡಿಯುವ ನೀರಿಗೆ ಅನುಕೂಲವಾಯ್ತು. ಎಲ್ಲಾ ಸೌಕರ್ಯ ವೂ ಆಯ್ತು. ಈ ಬಡವನ ಪರಿಸ್ಥಿತಿ ಮಾತ್ರ ಸುಧಾರಿಸಲಿಲ್ಲ.
ಮಠದಲ್ಲಿ ಉಳಿದ ಬಿಸಾಡುವ ಆಹಾರವನ್ನಾದರೂ ಅವನಿಗೆ ಕೊಡಬಹುದಿತ್ತು. ಆದರೆ ಕೊಡುತ್ತಿರಲಿಲ್ಲ ಅದಕ್ಕೆ ಕಾರಣ ಅವನ ಮುರುಕಲು ಮನೆ.
ದೊಡ್ಡಮನುಷರುಗಳು ಬರ್ತಾರೆ ನಿನ್ನ ಮನೆ ಮಠದ ಎದುರಿಗೆ ಇದೆ ಅಸಹ್ಯವಾಗುತ್ತೆ . ಸ್ವಲ್ಪ ಹಣ ಕೊಡ್ತಿವಿ ಮಠಕ್ಕೆ ಕೊಟ್ಟುಬಿಡು ಅಂತ ಬಲವಂತ ಮಾಡ್ತಿದ್ರು. ಆದರೆ ಅವನ ಹೆಂಡತಿ ಮಾರಲು ಒಪ್ಪುತ್ತಿರಲಿಲ್ಲ. ಮಠದಲ್ಲಿ ಸಣ್ಣಪುಟ್ಟ ಕೆಲಸ ಮಾಡ್ತೀವಿ ಸಂಬಳ ಕೊಡಿ ಅಂತ ಕೇಳಿದ್ರು ನೀವು ಕಳ್ಳತನ ಮಾಡೋಜನ. ಮಠದಲ್ಲಿ ಬೇಕಾದಷ್ಟು ಬೆಲೆಬಾಳುವ
ಸಾಮಾನುಗಳಿವೆ. ಆಗಲ್ಲ ಅಂದುಬಿಟ್ಟರು.
ಈ ವಿಷಯ ಮಠಕ್ಕೆ ಆಗಾಗ ಬರುತ್ತಿದ್ದ ಒಬ್ಬ ಶ್ರೀಮಂತರಿಗೆ ತಿಳಿದು ಅವನನ್ನ ಕರೆಸಿ ಮಾರಲೇ ಬೇಕೆಂದು ಒತ್ತಾಯಿಸಿದರು. ಅವನು ಒಂಟಿಯಾದ ಧ್ವನಿ ಇಲ್ಲದಾದ . ಅವನ ವಿರುಧ್ದ ಕಳ್ಳತನ ಆರೋಪ ಹೊರೆಸಿ ಮನೆಯಿಂದ ಆಚೆ ಹಾಕಿದರು. ಹಳ್ಳಿಯಲ್ಲಿ ಒಬ್ಬನಾದರೂ ಇವನ ಪರ ಧ್ವನಿ ಎತ್ತಲಿಲ್ಲ ಎಲ್ಲರೂ ಆ ಗಲೀಜು ಮನೆ ತೆರವಾದರೆ ಮಠಕ್ಕೆ ಒಳ್ಳೆ ಲಕ್ಷಣ ಎನ್ನುವವರೇ ಇದ್ದರು. ಬೈದಾಡುತ್ತ ಕೈಗೆ ಸಿಕ್ಕ ಸಾಮಾನಿನೊಂದಿಗೆ ಊರು ಬಿಟ್ಟು ಎಲ್ಲೋ ಹೊರಟು ಹೋಯ್ತು ಆ ಬಡ ಕುಟುಂಬ. ಮಠ ಇನ್ನೂ ದೊಡ್ಡದಾಯ್ತು ಜನರೂ ಹೆಚ್ಚಾದ್ರು. ಶ್ರೀಮಂತ ವಾಯ್ತು .
ಒಂದು ದಿನ ಆ ಸನ್ಯಾಸಿ ಗೊತ್ತಿಲ್ದೆ ಹೋದ್ರು ತಾನೇ ಡ್ರೈವ್ ಮಾಡ್ತೀನಿ ಅಂತ ಮಠಕ್ಕೆ ಯಾರೋ ದಾನಿಗಳು ಕೊಟ್ಟ ಹೊಸ ಕಾರ್ ನಲ್ಲಿ ಹೋಗಿ ಮೋರಿಗೆ ಬಿದ್ದು ಪ್ರಾಣ ಕಳ್ಕೊಂಡ. ಅವನ ಹೆಣವನ್ನ ಮಠದಲ್ಲೇ ಸಮಾಧಿ ಮಾಡಿದ್ರು. ವಿಪರ್ಯಾಸ ಅಂದ್ರೆ ಈ ಸಮಾಧಿ ಬಡವನಿಂದ ಕಿತ್ತುಕೊಂಡ ಜಾಗದಮೇಲೆ ಆಗಿತ್ತು.
ಒಂದುದಿನ ಆ ಸನ್ಯಾಸಿಯ ನೆಚ್ಚಿನ ಶಿಷ್ಯನ ಕನಸಲ್ಲಿ ಬಂದು ಹೇಳಿದ್ರಂತೆ ನಾಳೆ ಬೆಳಗ್ಗೆ ಇಲ್ಲಿ ಒಂದು ಬೋರ್ಡ್ ಬರೆಸಿ ಹಾಕು. ಆ ಬಡವನ ಹೆಸರು ಬರೆದು ದಾನ ಕೊಟ್ಟಜಾಗ ಅಂತ ಬರೆಸು. ಇಲ್ಲದಿದ್ದರೆ ನಾನು ದೆವ್ವನೋ ಭೂತಾನೋ ಆಗ್ತೀನಿ ಅಂದನಂತೆ.
ಇದೊಂದು ಕಾಲ್ಪನಿಕ ಕಥೆಯಾದರೂ ಎಲ್ಲೋ ಒಂದು ಹಳ್ಳಿಯಲ್ಲಿ ಹೀಗೆಯೇ ಆಗಿತ್ತು ಅಂತ ಕೇಳಿದ್ದೆ ಅದೇ ಇದಕ್ಕೆ ಆಧಾರ.