Read #1 book on Hinduism and enhance your understanding of ancient Indian history.
Read #1 book on Hinduism and enhance your understanding of ancient Indian history.

Kalpana Nath

Drama Inspirational Others


4  

Kalpana Nath

Drama Inspirational Others


ಭರವಸೆ

ಭರವಸೆ

2 mins 75 2 mins 75

 


Dr ಕಲ್ಪನಾ ಒಬ್ಬ ಖ್ಯಾತ ಡೆಂಟಿಸ್ಟ್. ಇವರ ಒಬ್ಬಳೇ ಮಗಳು ಕಾರುಣ್ಯ. Lions club ಸ್ಪಾನ್ಸರ್ ಮಾಡಿದ್ದಾರೆಂದು ಏನೂ ತೊಂದರೆ ಆಗದೆಂದು ಹೇಳಿ ಬೇಡವೆಂದರೂ ಕೇಳದೆ ಹಠ ಮಾಡಿ ಒಂದು ತಿಂಗಳು ಉತ್ತರ ಭಾರತ ಪ್ರವಾಸ ಹೊರಟೇ ಬಿಟ್ಟಳು. ಇವಳೊಂದಿಗೆ ಒಂಭತ್ತು ಜನ ಹುಡುಗಿಯರು. ಜೊತೆಗೆ ಇವರ ಗೈಡ್ ಹೇಮಲತಾ ಮೇಡಂ ಒಬ್ಬರೇ. 


ಮೈಸೂರಿನಲ್ಲಿ ಇರೋ ಅಮ್ಮನಿಗೆ ಫೋನ್ ಮಾಡಿ ಹೇಳಿದ್ರು ನೋಡಮ್ಮ, ಮುಂದಿನ ತಿಂಗಳು ಇವಳ operation date ಫಿಕ್ಸ್ ಆಗಿದ್ದರೂ ಟೂರ್ ಹೋಗ್ಬೇಕೆ. ಅಮ್ಮನ ಮಾತು ಕೇಳದೆ ಹೋದ್ರೆ ಇನ್ಯಾರ ಮಾತು ಕೇಳ್ತಾಳೆ ಇವಳು. ನಾರ್ಮಲ್ ಮಕ್ಕಳಾದರೆ ಪರವಾಗಿಲ್ಲ ಅನ್ನಬಹುದು. ಗೈಡ್ ಒಬ್ಬರು ಬಿಟ್ಟರೆ ಎಲ್ಲಾ ಹುಡುಗಿಯರು ಇವಳ ತರಾನೇ. ಹೇಗೆ manage ಮಾಡ್ತಾರೋ ದೇವರೇ ಕಾಪಾಡಬೇಕು. ಮೊದಲು ಒಂದುವಾರ ದಿನಾ ಫೋನ್ ಮಾಡ್ತಿದ್ದವಳು ಈಗ ಹದಿನೈದು ದಿನಾ ಆದ್ರೂ ನೆಟ್ ವರ್ಕ್ ಇಲ್ಲ ಅಂತ ಕಾರಣ ಹೇಳಿ ತಪ್ಪಿಸಿ ಕೊಳ್ತಾಳೆ. ನನ್ನ ಕಷ್ಟ ಯಾರಿಗೆ ಹೇಳ್ಕೋಳ್ಳೋದು ಅಂತ ಗೊತ್ತಿಲ್ಲ ನನಗಂತೂ ಅವಳನ್ನ ಇಷ್ಟು ದಿನ ಬಿಟ್ಟು ಅಭ್ಯಾಸ ಇಲ್ಲ. ಅದಕ್ಕೆ ನಿಂಗೆ ಫೋನ್ ಮಾಡಿದ್ದು . ಪಾಪ ನೀನಾದ್ರೂ ಏನ್ ಮಾಡ್ತಿ. ಅವಳು ಬಂದ ಮೇಲೆ ಫೋನ್ ಮಾಡ್ತೀನಿ. ಕ್ಲಿನಿಕ್ ಗೆ ಟೈಮ್ ಆಯ್ತು ಹೋಗ್ತೀನ ಅಂತ disconnect ಮಾಡಿದಾಗ ಫೋನ್ ರಿಂಗ್ ಆಗಿ ನೋಡಿದ್ರೆ ಯಾವುದೊ unknown ನಂಬರ್ . ಹಲೋ ಹಲೋ ಅಂದ್ರೆ ಲೈನ್ connect ಆಗ್ತಿಲ್ಲ. ಬೀಗ ತೆಗೆದು ಟೆರೇಸ್ ಮೇಲೆ ಓಡಿದ್ರು. ಅಬ್ಬಾ ಕೇಳಿಸ್ತು ಆದರೆ ಇವಳ ಧ್ವನಿ ಅಲ್ವಲ್ಲ. ಹಲೋ ಯಾರು?, ಅಮ್ಮಾ ನಾನೇ, ಇದು ಮೇಡಂ ಸೆಲ್ ಫೋನ್. ನಂದು ಏನೋ ಪ್ರಾಬ್ಲಮ್ ಆಗಿದೆ. ಏನಮ್ಮ ಎಲ್ಲರೂ ಹೇಗಿದೀರಿ. ನಿನ್ನ call ಗೆ ಹಗಲು ರಾತ್ರಿ ಕಾಯೋ ತರ ಮಾಡಿ ಬಿಟ್ಟಿಯಲ್ಲಮ್ಮ ಅಂದ್ರು. ಅಮ್ಮ ಇವತ್ತು ಡೆಲ್ಲಿ ಗೆ ಹೋಗ್ತಾ ಇದೀವಿ. ಒಂದು ವಾರ ಅಲ್ಲೇ ಇದ್ದು ಬರ್ತೀವಿ. ಏನಾದ್ರೂ ಮಾಡ್ಕೊಳಿ ನಿಮ್ಮಿಷ್ಟ. ಹೋಗ್ಲಿ Operation date ಜ್ಞಾಪಕ ಇದ್ಯಾ. ಬಿಡಮ್ಮ ನನಗೇನು ಅದರಲ್ಲಿ ನಂಬಿಕೆ ಇಲ್ಲ. ನಮ್ಮ ಮೇಡಂ ಕೂಡ ಕಷ್ಟ ಅಂತಾರೆ. ಹಾಗೆಲ್ಲ ಹೇಳ್ಬೇಡ. ಅಡ್ವಾನ್ಸ್ ಹಣ ಕೊಟ್ಟು ಆಗಿದೆ. ನಂಬಿಕೆ ಮುಖ್ಯ. ದೇವರ ಮೇಲೆ ಭಾರ ಹಾಕೋಣ. ಒಳ್ಳೇದೇ ಆಗುತ್ತೆ. ಹುಷಾರು ನನಗೆ ಟೈಮ್ ಆಯ್ತು ಬರ್ತೀನಿ ಅಂತ phone disconnect ಮಾಡಿದರು ಕಲ್ಪನಾ. 


ಒಂದು ತಿಂಗಳ ಟೂರ್ ಮುಗಿಸಿ ಮನೆಗೆ ಮಗಳು ಬಂದಳು. ಡಾಕ್ಟರ್ ಬಹಳ ಕ್ಲೋಸ್ ಫ್ರೆಂಡ್ ಆದ್ದರಿಂದ ಮಗಳಿಗೆ ಆಪರೇಷನ್ ಮಾಡ್ಸೋದಕ್ಕೆ ಧೈರ್ಯ ಕೊಟ್ಟಿದಾರೆ. ಆದ್ರೆ ಮಗಳಿಗೇ ನಂಬಿಕೆ ಇಲ್ಲ. ಇವಳ ಮಾತಿಗೆ ತಾಳ ಹಾಕಕ್ಕೆ ಆ ಹೇಮಲತಾ ಮೇಡಂ ಬೇರೆ. ಅಂತೂ ಇವಳನ್ನ ಒಪ್ಪಿಸಿ ಆಪರೇಷನ್ ಮಾಡಿದ್ರು. ದೇವರ ದಯೆ ಎಲ್ಲಾ ಒಳ್ಳೇದೇ ಆಯ್ತು. ಅಂತೂ ಎಲ್ಲರ ಹಾಗೆ ಪ್ರಪಂಚ ನೋಡೋ ಹಾಗಾದಳು. ಎರಡು ವರ್ಷ ಆದರೂ ಅವಳಿಗೆ ಏನೂ ಸ್ಪಷ್ಟ ವಾಗಿ ಕಾಣುತ್ತಿರಲಿಲ್ಲ ಆಪರೇಷನ್ ಮಾಡಿದೋರು ದೃಷಿ ಬರೋದು ಕಷ್ಟ ಅಂದು ಬಿಟ್ಟಿದ್ದರು.ಇವರ ಜೊತೆಯಲ್ಲೇ PU ವರೆಗೂ ಓದಿದ್ದ ವರುಣ್ ಒಳ್ಳೆ ನೇತ್ರ ತಜ್ಞ. ಸ್ಪೆಸಲ್ ಕೇಸ್ ಅಂತ ಸ್ಟಡಿ ಮಾಡಿ ಡೆಲ್ಲಿಯಲ್ಲಿದ್ದ ಇಬ್ಬರು ಸ್ಪೆಸಿಲಿಸ್ಟ್ ಗಳನ್ನೂ ಕರಸಿ ಆರುಗಂಟೆ ಕಾಲ ಆಪರೇಷನ್ ಮಾಡಿ ದೇಶದಲ್ಲೇ ಮೊಟ್ಟ ಮೊದಲ ಆಪರೇಷನ್ ಅಂತ ಪ್ರೆಸ್ ಮೀಟ್ ಮಾಡಿ ಆಸ್ಪತ್ರೆಗೂ ಹೆಸರು ಗಳಿಸಿಕೊಟ್ಟ. ನನಗಂತೂ ಆಕಾಶದಲ್ಲಿ ಹಾರ್ತಾ ಇರೋ ಹಾಗೇ ಅನುಭವ ಅಂದರು. ಅಲ್ಲಿದ್ದವರಿಗೆಲ್ಲಾ ಸ್ವೀಟ್ ಹಂಚಿದ Dr ಕಲ್ಪನಾ. ಹದಿನೈದು ದಿನದ ನಂತರ ಕಣ್ಣು ಪಟ್ಟಿ ಬಿಚ್ಚಿ ಮೊದಲು ನಿನಗೆ ಯಾರನ್ನು ನೋಡಕ್ಕೆ ಇಷ್ಟ ಅಂತ ಕೇಳಿದ್ರು Dr ವರುಣ್. ಕುತೂಹಲದಿಂದ ಎಲ್ಲರೂ ಯಾರ ಹೆಸರು ಹೇಳ್ತಾಳೋ ಅಂತ ಕಾತರದಿಂದ ಕಾದರು. ಆದರೆ ಅದು ಅವಳನ್ನ ಸಂದಿಗ್ದ ಸ್ಥಿತಿಗೆ ದೂಡಿತ್ತು. ಯಾವಾಗಲೂ ಹೊರದೇಶಗಳ ಸುತ್ತಾಡಿ ಎಂದೋ ಒಂದು ದಿನ ಬರೋ ಅಪ್ಪ, ತನಗಾಗಿ ಇಷ್ಟು ಕಷ್ಟ ಪಟ್ಟ ಅಮ್ಮ, ಪ್ರೀತಿ ತೋರಿಸುವ ಅಜ್ಜಿ., ಕಣ್ಣುಕೊಟ್ಟ ಡಾಕ್ಟರ್ ಹೀಗೆ, ಯಾರ ಹೆಸರು ಹೇಳೋದು ಅಂತ ಬಹಳ ಯೋಚಿಸಿ ಕೊನೆಗೆ ಹೇಳಿದ್ದು ನನ್ನ ಅಮ್ಮ ಅಂತ. 

ಅಷ್ಟು ಹೊತ್ತಿಗೆ ಕಣ್ಣು ಪಟ್ಟಿಬಿಚ್ಚಿ ಹತ್ತಿ ತೆಗೆಯ ಬೇಕು ಅನ್ನುವಷ್ಟರಲ್ಲಿ ಒಂದು ದೊಡ್ಡ ಕನ್ನಡಿ ಹಿಡಿದು ಮಗಳು ತನ್ನನ್ನೇ ಮೊದಲು ನೋಡುವಂತೆ ಮಾಡಿ ಎಲ್ಲರನ್ನೂ ಚಕಿತಗೊಳಿಸಿದರು ಅಮ್ಮ Dr ಕಲ್ಪನಾ.


Rate this content
Log in

More kannada story from Kalpana Nath

Similar kannada story from Drama