Surabhi Latha

Drama Thriller Others

4  

Surabhi Latha

Drama Thriller Others

ಅನಾಮಿಕ

ಅನಾಮಿಕ

2 mins
270



ಎಲ್ಲೆಲ್ಲೂ ಕತ್ತಲು . ಕಣ್ಣು ಅಗಲಿಸಿದರೂ ಏನೊಂದೂ ಕಾಣದು. ನೆನಪಿಗೆ ಬಂತು ಇಂದು ಅಮಾವಾಸ್ಯೆ ಎಂದು. ಸುತ್ತಲೂ ಮರಗಳು. ಕಾಡು ದಾರಿ. ದೂರ ದೂರದವರೆಗೂ ಒಂದು ನರಪಿಳ್ಳೆಯೂ ಇಲ್ಲ. ತಾನೊಬ್ಬಳೇ ನಡೆದು ಸಾಕಾಯಿತು. ಪಂಕಜ ಹೇಳಿದ್ದಳು ಹೊತ್ತು ಮುಳುಗುವ ಮುನ್ನ ಮನೆ ಸೇರೆಂದು.


ನಾನೇ " ಊರಿನ ದಿಬ್ಬದ ಮುಳುಗುವ ಸೂರ್ಯನ ನೋಡಿ ಬಂದು ಬಿಡುವೆ " ಎಂದು ಬಂದಿದ್ದೆ. ಬರುವಾಗ ದಾರಿ ತಪ್ಪಿತ್ತು. ಕೇಳಲು ಇಲ್ಲಿ ಯಾರೂ ಕಾಣುತ್ತಿಲ್ಲ. ರಜಕ್ಕೆ ಬಂದ ನಾವು ಐದು ಜನ ಗೆಳತಿಯರಿಗೂ ಇಲ್ಲಿನ ವಾತಾವರಣ ಇಷ್ಟವಾಗಿತ್ತು ನೆನ್ನೆ ಜಾತ್ರೆಯಲ್ಲಿ ಸುತ್ತಾಡಿ . ಇಂದು ಕಾಲುನೋವೆಂದು ಯಾರು ಮನೆಯಿಂದ ಹೊರ ಬಂದಿರಲಿಲ್ಲ. ನಾನೊಬ್ಬಳೇ ಮುಳುಗುವ ಸೂರ್ಯನ ನೋಡುವ ಬಯಕೆಯಿಂದ ಬಂದಿದ್ದೆ. ತಪ್ಪು ಮಾಡಿದೆನೆನೋ ಅನ್ನಿಸುತ್ತಿದೆ . ಹೋ..ತಡೆಯಲು ಸಾದ್ಯವೇ ಇಲ್ಲ.. ಊರಿನ ಸುಳಿವೇ ಇಲ್ಲ. Phone ಮಾಡಲು ಇಲ್ಲಿ network ಇರಲ್ಲ ಅಂತ ಅದೂ ತರಲಿಲ್ಲ  ಹೋ..ದೇವರೇ ಏನು ಮಾಡಲಿ.. ನಡೆದು ಸಾಕಾದವಳಿಗೆ ಅಲ್ಲಿ ಒಂದು ಪಾಳುಬಿದ್ದ ಮಂಟಪ ಕಾಣಿಸಿತು. 

ಅಲ್ಲಿ ಹೋಗಿ ಕುಳಿತಳು. ಚಳಿ ಮೈ ಕೊರೆಯುತ್ತಿತ್ತು. ವಿಧಿ ಇಲ್ಲ .ಬೆಳಿಗ್ಗೆ ಯವರೆಗೂ ಇಲ್ಲೆ ಕುಳಿತು ಕೊಳ್ಳಬೇಕು .ಬೆಳಗ್ಗೆ ಯಾರಾದರು ಹುಡುಕಿಕೊಂಡು ಬರಲಿ..ಎಂದು ಹಾಗೆ ಕಲ್ಲಿಗೆ ಒರಗಿ ಕೂತಳು. ಯಾವಾಗ ನಿದ್ದೆ ಬಂದಿತೋ ತಿಳಿಯಲಿಲ್ಲ. ಇದ್ದಕ್ಕಿದ್ದಂತೆ ಮೈ ಬಿಸಿಯಾಯಿತು. ಕಣ್ಣು ಬಿಟ್ಟಳು.


ಅರೇ...ನಾನು ನೆಲದ ಮೇಲೆ ಇಲ್ಲ . ಏನಾಗುತ್ತಿದೆ ಎಚ್ಚರ ಮಾಡಿಕೊಂಡಳು. ಯಾರೋ ನನ್ನ ಹೊತ್ತು ನಡೆಯುತ್ತಿದ್ದಾರೆ.. ಸ್ವಲ್ಪವೇ ಕಣ್ಣು ಬಿಟ್ಟು ನೋಡಿದಳು .

ಇಲ್ಲ ಬರೀ ಕತ್ತಲು ಏನೂ ಕಾಣುತ್ತಿಲ್ಲ ಯಾರೋ  ಅಜಾನು ಬಾಹು ವ್ಯಕ್ತಿ ನನ್ನ ಹೊತ್ತು ನಡೆಯುತ್ತಿದೆ  ಕೇಳಲು ಧೈರ್ಯಸಾಲಲಿಲ್ಲ . ತುಂಬಾ ದೂರ ಹೊತ್ತು ನಡೆಯುತ್ತಲೇ ಇದೆ. ಮತ್ತೆ  ಅವಳಿಗೆ ನಿದ್ದೆ ಹತ್ತಿತು . ಸೂರ್ಯ ಕಿರಣಗಳು ಕಣ್ಣು ಚುಚ್ಚಿದ ಹಾಗಾಯ್ತು. ಕಣ್ಣು ಬಿಟ್ಟು ಸುತ್ತಲೂ ನೋಡಿದಳು. ವಿಶಾಲವಾದ ಕೊಠಡಿ.ದೊಡ್ಡ ದೊಡ್ಡ ಕಿಟಕಿಗಳು 

ತಾನು ದೊಡ್ಡ ದಾದ ಮೆತ್ತನೆಹಾಸಿಗೆ ಯಲ್ಲಿ ಇದ್ದಳು. ಅವಳಿಗೆ ಆಶ್ಚರ್ಯ.. ಈ ಹಳ್ಳಿಯಲ್ಲಿ ಇಂಥಾ ಮನೆ  ಇರಬಹುದೆಂದು ಅವಳು  ಊಹಿಸಿರಲಿಲ್ಲ.


" Good morning"ಸ್ವರ  ಬಂದ ಕಡೆ ತಿರುಗಿದಳು. ಅದೇ ಅಜಾನು ಬಾಹು.. ಅವನು ಹಾಲಿನಂತ ಬಣ್ಣ..ಹೂವಿಂತಾ ನಗು. ಅವನ ಕೈ ನಲ್ಲಿ ಬಿಸಿ ಬಿಸಿ ಹೊಗೆಯಾಡುವ ಕಾಫಿ  ಎರಡು   ಕಪ್  ಇತ್ತು ಒಂದನ್ನು  ನನ್ನ ಮುಂದೆ  ಹಿಡಿದು  

"ಕಾಫಿ ಕುಡಿಯಿರಿ ಆಮೇಲೆ ನಿಮ್ಮ ಅನುಮಾನ ಪರಿಹಾರ  ಮಾಡುತ್ತೇನೆ  ಎಂದು  ಕಾಫಿ ಕುಡಿಯಿಲು ಕುಳಿತ..ನಾನು ಕುಡಿದು ಮುಗಿಸಿದೆ.


ನೀವು  ಸ್ನಾನ ಮಾಡಿ ಬನ್ನಿ.ಆಮೇಲೆ ಕೂತು ಮಾತನಾಡೋಣ ಎಂದವನು ಹೊರಗೆ ನಡೆದ. ಪಕ್ಕದಲ್ಲಿದ್ದ ಬಾತ್ರೂಮಿಗೆ    ನಡೆದಳು ಅಲ್ಲಿ ಎಲ್ಲಾ ರೆಡಿ ಮಾಡಿರುವ ಹಾಗೆ ಕಾಣಿಸಿತು  

ಹೊಸ ಸಾಬೂನು ಟರ್ಕಿ ಟವೆಲ್ . ಸ್ನಾನ  ಮಗಿಸಿ  ಹೊರ  ಬಂದಳು . ಒಬ್ಬಳು ಹೆಂಗಸು ನಗೆ ಬೀರಿ ಒಳಬಂದಳು ಅವಳ ಕೈ ನಲ್ಲಿ ಎರಡು ಪ್ಲೇಟ್ ಗಳಲ್ಲಿ ದೋಸೆತಂದಿದ್ದಳು .


ಅವಳ ಹಿಂದೆ ಅದೇ ನಗು   ಮೊಗದ  ವ್ಯಕ್ತಿ  ಒಳ ಬಂದ . ಆಕೆ ಹೊರಟು ಹೋದಳು.


" ಬನ್ನಿ ತಿಂಡಿ ತಿನ್ನುತ್ತಾ  ಮಾತನಾಡೋಣ ",


 " ಈಗ ಹೇಳಿ ನಾನು ಮೊದಲು ನನ್ನ ಪರಿಚಯ ಹೇಳುತ್ತೇನೆ . ನಾನು ಮೋಹನ್ ಅಂತ . ಇಲ್ಲಿ ಸುತ್ತಲೂ ಇರುವ ಎಸ್ಟೇಟ್  ಎಲ್ಲಾ  ನನ್ನದೆ.  ನನಗೆ  ತಂದೆ  ತಾಯಿ ಯಾರು ಇಲ್ಲ.ಇರುವ ಒಬ್ಬಳೇ ಅಕ್ಕ  . ಗಂಡಮಕ್ಕಳೊಂದಿಗೆ ಬೇರೆ ದೇಶದಲ್ಲಿ  ಇದ್ದಾಳೆ.ನಾನು  ಬೆಂಗಳೂರಿನಲ್ಲಿಇರುತ್ತೇನೆ .ಆಗಾಗ  

ಇಲ್ಲಿ  ಬಂದು   ಹೋಗಿ  ಮಾಡುತ್ತೇನೆ   ಈಗ ಹೇಳಿ ನೀವು ಯಾಕೆ ರಾತ್ರಿ ಒಬ್ಬರೆ  ಅಲ್ಲಿ   ಎಚ್ಚರ ತಪ್ಪಿ  ತಪ್ಪಿ ಬಿದ್ದಿರಿ  ?


ಅವಳಿಗೆ ನಗು  ಬಂತು   

" ನಾನು  ಸ್ವಾತಿ ಬೆಂಗಳೂರಿನಿಂದ ಇಲ್ಲಿಗೆ  ನನ್ನ  ಗೆಳತಿ   ಪಂಕಜಳ  ಮನೆಗೆ  ನನ್ನ friends  ಜೊತೆ  ಬಂದಿದ್ದೆವು.  ನಂತರ  ನಡೆದ  ವಿಷಯವೆಲ್ಲಾ  ಹೇಳಿದಳು.


"ಹೋ... ಅವರು ನನಗೆ   ತಿಳಿದವರೆ ಇಲ್ಲಿಂದ  ಮೂರು  ಕಿಲೋಮೀಟರ್ ಆಗತ್ತೆ  ಅವರ ತಂದೆ  ಇಲ್ಲಿ work  ಮಾಡುತ್ತಾರೆ  so don't warry  ನಾನು ನಿಮ್ಮನ್ನು  ಅಲ್ಲಿ  ಬಿಟ್ಟು  ಬರುತ್ತೇನೆ   ಅವಳನ್ನುಮನೆಯವರೆಗೆ  ಬಿಟ್ಟು ಹೊರಟು ಹೋದ. ಎಲ್ಲರಿಗೂ  ನಡೆದ  ವಷಯ ತಿಳಿಸಿದಳು   


ಮಾರನೆಯ ದಿನ ಊರಿಗೆ  ಹೊರಟಾಗಲೇ ಆನಂದ್ ನೆನಪಾಗಿ ಕೇಳಲು  ಅವನು ನೆನ್ನೆಯೇ ಹೊರಟು  ಹೋದ ವಿಷಯ ತಿಳಿಯಲು ನಾನು ಎಂಥಾ ಪೆದ್ದು ವಿಳಾಸವೂ ಕೇಳಲಿಲ್ಲ ಎಂದು ಕಾರು ಹತ್ತಿದಳು.  ಕಾರು  ಬೆಂಗಳೂರು ದಾರಿ ಹಿಡಿದು ಸಾಗಿತು  ಅವಳ ಮನಸ್ಸು ಮಾತ್ರ  ಅವನ  ನೆನಪಲ್ಲೇ ಇತ್ತು  .




Rate this content
Log in

Similar kannada story from Drama