ಹೊಸ ಆರಂಭ
ಹೊಸ ಆರಂಭ


ಜೀವನ ಪಯಣದಲ್ಲಿ ಸೇರಿತು
ಮತ್ತೊಂದು ಅಧ್ಯಾಯ
ಹೊಸ ಅಧ್ಯಾಯಕ್ಕೆ ಹೊಸ ಪುಟ
ತೆರೆಯುತ್ತಿದೆ ಮತ್ತಿದೇ ಬಾಳು
ಏಳು ಬೀಳಿನ ಪಾಠದೊಂದಿಗೆ
ಸಿಹಿ ಕಹಿ ನೆನಪುಗಳನ್ನು ಜೊತೆ ಸೇರಿಸಿ
ನಾಲ್ಕು ದಿನದ ಬಾಳು ಮುಗಿಯದ ಗೋಳು
ಅತ್ತರೂ ನಕ್ಕರೂ ನಮಗೆ ನಾವೇ ಇಲ್ಲಿ
ನನ್ನೀ ಬಾಳಿನ ಈ ಹೊಸ ದಿನಕ್ಕೆ
ಹತ್ತಾರು ನನಸಾಗದ ಕನಸುಗಳ
ಜೊತೆ ಜೊತೆಗೆ
ಹಲವಾರು ಭರವಸೆಗಳ ಹೊತ್ತು
ಹೆಜ್ಜೆ ಹಾಕುತ್ತಿರುವೆ
ಜೊತೆಗೆ ನಿಮ್ಮ ಪ್ರೀತಿ ಇರುವುದೆಂಬ
ಧೈರ್ಯದಲ್ಲಿ..!!
ಎಲ್ಲಾ ಓದುಗ ಮಿತ್ರರಿಗೂ ಮನದಾಳದ ಧನ್ಯವಾದಗಳು.
ಲವ್ ಯೂ ಆಲ್