ಈ ಸಂಭಾಷಣೆ
ಈ ಸಂಭಾಷಣೆ
ತಂಪಾದ ಸಂಜೆ
ಕೇಳಿದಳು
ನನ್ನಾಕೆ
ನಿಮಗೆ ನನ್ನ
ಮೇಲಿಲ್ಲ ಪ್ರೀತಿ
ಏಕೆ
ಇದೇನು ನೀನು
ಕೇಳುವುದು
ಎಂದೆ ನಾ ನಗುತ
ಇಬ್ಬರು ಮಕ್ಕಳ ಕಡೆ
ನೋಡುತ
ಮುನಿಸಲಿ ಎಂದಳು
ಎಂದಾದರು ಕರೆದಿದ್ದೀರ
ನೀವು ನನ್ನ
ಪ್ರೀತಿಯಿಂದ
ಚಿನ್ನ ರನ್ನ
ನಸು ನಕ್ಕು ನಾನೆಂದೆ
ಏಕಿ ಕೋಪ ನನ್ನ
ಮೇಲೆ ನಿನಗೆ
ಜಾಣೆ ಹೇಳೆ
ಬಂಗಾರದ
ಬಣ್ಣದ
ಮೈಯ್ಯೋಳೆ
ಹಾಗೆಲ್ಲ ಕರೆದರೆ
ಸುಮ್ಮನಿರುವಳೆ
ಅವಳು....
ಚೋಟುದ್ದ ಜಡೆಯ
ನಿನ್ನ ಮಗಳು
ದಿನಕ್ಕೊಂದು ರೀತಿ
ನೀತಿ ಮುಗಿಯದ
ಬೇಡಿಕೆಗಳ
ಬವಣೆ
ಸಿಟ್ಟಾದರವಳು
ಇರುವುದೇ
ನಮಗೆ ಸಹಿಸುವ
ಸೈರಣೆ
ಕರೆಯದಿದ್ದರೇನಂತೆ
ಚಿನ್ನ ರನ್ನ ಎಂದು
ಬಾಯ್ತುಂಬ
ನಿನ್ನ ಮೇಲಿದೆ
ಪ್ರೀತಿ ನನ್ನ
ಮನತುಂಬ
ಏಕೀ ಮುನಿಸು
ಕೋಪ ತಾಪ
ಈ ಹೊತ್ತು
ನಾವಿಬ್ಬರಷ್ಟೇ
ಇದ್ದೇವೆ
ಕೊಡಬಾರದೆ
ಒಂದು.....