ಕೂಸಿಗೆ ಮುನ್ನ ಕುಲಾವಿ
ಕೂಸಿಗೆ ಮುನ್ನ ಕುಲಾವಿ


ನೂತನ ಕವಿ ದಂಪತಿಯ
ರಾತ್ರಿ ಇಡೀ ಜಗಳದಲ್ಲಿ
ಹುಟ್ಟಿತೊಂದು ಕವಿತೆ
ಛಂದಸ್ಸಿಗೆ ಚರಮ ಗೀತೆ ಹಾಡಿ
ವ್ಯಾಕರಣದ ವ್ಯಾಕುಲತೆಯಲ್ಲಿ
ಪದಗಳಿಗೆ ಪರದಾಡಿ
ಉದಯವಾಗದ ಕವಿತೆಗೆ
ನಾಮಕರಣದ ಕಚ್ಚಾಟ
"ಅಸಮ್ಮತ "ವೇ ಸಮ್ಮತಿ ಎಂದು
ಸಮಾಧಾನದಿ ಮಲಗಿದವರಿಗೆ
ಕನಸಿನಲ್ಲೂ ಬಂದು ಕಾಡಿತ್ತು
ಕಣ್ಣು ತೆರೆಯದ ಪಾಪದಕೂಸು