ಪ್ರತ್ಯುಪಕಾರ
ಪ್ರತ್ಯುಪಕಾರ

1 min

232
ಹಳ್ಳಿ ಹುಡುಗನೊಬ್ಬ
ಅವನೇ ನಮ್ಮ ಸಿದ್ದ
ಕಾಡಿನ ರಸ್ತೆಯಲ್ಲೆ
ಶಾಲೆಗೆ ಹೋಗುತ್ತಿದ್ದ
ಏನೋ ಶಬ್ದವಾಗಿ
ನೋಡಲು ಅಲ್ಲೇ ಇದ್ದ
ರೆಕ್ಕೆ ಬಡಿದು ಚೀರುತಿದ್ದ
ಕಂಡ ಒಂದು ಹದ್ದ
ಹುತ್ತದಿಂದ ಕಾಲ ಸುತ್ತಿ
ಎಳೆವ ಸರ್ಪ ಉದ್ದ
ಬಿಡಿಸಲದನು ತಾನು
ನೋಡಿ ಹಾವ ಒದ್ದ
ಹದ್ದು ಮೇಲೆ ಹಾರಿ
ಮಾಡಿತೊಂದು ಸದ್ದ
ಹಲವು ದಿನದ ಬಳಿಕ
ಅಲ್ಲೇ ಬರುತ ಇದ್ದ
ಹಾವ ಕಂಡು ಹೆದರಿ
ಓಡುವಾಗ ಬಿದ್ದ
ಕಾಲ ಬಳಿ ಇದ್ದ ನಾಗ
ಬುಸುಗುಟ್ಟುತಲಿದ್ದ
ಹಾರಿ ಬಂದ ಹದ್ದು
ಉರಗವ ತುಂಡರಿಸಿದ್ದ
ಪ್ರತ್ಯುಪಕಾರಕೆ ವಂದಿಸಿದ
ಮರೆಯದೆ ನಮ್ಮ ಸಿದ್ದ