Become a PUBLISHED AUTHOR at just 1999/- INR!! Limited Period Offer
Become a PUBLISHED AUTHOR at just 1999/- INR!! Limited Period Offer

Vijaya Bharathi.A.S.

Classics Inspirational Others

5  

Vijaya Bharathi.A.S.

Classics Inspirational Others

ಭಾರತ ಭೂಮಿ

ಭಾರತ ಭೂಮಿ

1 min
539



ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವ ದ ಹಾರ್ದಿಕ ಶುಭಾಶಯಗಳು.


ಭಾರತ ಭೂಮಿ 



ಭೂಮಂಡಲದ ಮುಕುಟ ಮಣಿ 

ಈ ನನ್ನ ಭಾರತ ಭೂಮಿ

ದೇವತೆಗಳ ಪರಮ ಪ್ರೀತಿಯ ಭುವಿ

ಈ ನನ್ನ ಜನ್ಮ ಭೂಮಿ 

ದಿವಿ ಭುವಿಯ ಮಾರ್ಗ ಸೇತು

ಈ ನನ್ನ ಮಾತೃ ಭೂಮಿ


ದೇವಗಂಗೆ ಇಳಿದು ಬಂದ ಧರೆ

ಈ ನನ್ನ ಭಾರತ ಭೂಮಿ

ಭವ ಸಾಗರ ದಾಟಿಸುವ ಮುಕ್ತಿ ಸ್ಥಳ

ಈ ನನ್ನ ಜನ್ಮ ಭೂಮಿ

ಸುಕೃತಿ ಚೇತನರ ಪ್ರಸವ ಭೂಮಿ

ಈ ನನ್ನ ಮಾತೃ ಭೂಮಿ 


ಬ್ರಹ್ಮ ಜ್ಞಾನಿಗಳ ತಪೋಭೂಮಿ

ಈ ನನ್ನ ಭಾರತ ಭೂಮಿ

ಭಗವದವತರಣಿಕೆಗಳ ಪಾವನ ಧರಣಿ

ಈ ನನ್ನ ಜನ್ಮ ಭೂಮಿ

ಹರಿ ಹರರ ಆವಾಸದ ಮೇರು ಭೂಮಿ

ಈ ನನ್ನ ಮಾತೃ ಭೂಮಿ


ಹಿಮಗಿರಿ ಮುಕುಟಧಾರಿಣಿ ಸಮನೋಹರಿ

ಈ ನನ್ನ ಭಾರತ ಭೂಮಿ

ಸಂತಮಹಾಂತರು ಜನಿಸಿದ ಧರ್ಮ ಭೂಮಿ

ಈ ನನ್ನ ಜನ್ಮ ಭೂಮಿ

ದೇಶಭಕ್ತ ಹುತಾತ್ಮರ ವೀರ ಭೂಮಿ 

ಈ ನನ್ನ ಮಾತೃ ಭೂಮಿ 


ವಿಜ್ಞಾನ ತಂತ್ರಜ್ಞಾನದ ವೈಜ್ಞಾನಿಕ ತಾಣ

ಈ ನನ್ನ ಭಾರತ ಭೂಮಿ 

ವಿಶ್ವ ಭೂಪಟದೊಳು ವಿರಾಜಿತೆ ವಿಜೇತೆ

ಈ ನನ್ನ ಜನ್ಮ ಭೂಮಿ 

ನನಗೆ ಜನ್ಮ ನೀಡಿದ ನನ್ನ ಹೆಮ್ಮೆಯ ದೇಶ

ಈ ನನ್ನ ಮಾತೃ ಭೂಮಿ 



ವಂದೇಮಾತರಂ 



Rate this content
Log in