ಹಣತೆ
ಹಣತೆ
ಕಳೆಯಲಿ ಕತ್ತಲು
ಬೆಳಗಲಿ ಹಣತೆಯು
ಬೆಳಕನು ಹರಡಲಿ ಎಲ್ಲೆಲ್ಲೂ
ಒಳಹೊರ ಕತ್ತಲು
ಕಳೆಸುತ ಹರಸಲಿ
ಬೆಳಕಿನ ದೀಪವು ಎಲ್ಲರನೂ
ಬಣ್ಣ ಬಣ್ಣದ
ಮಣ್ಣಿನ ಹಣತೆಯು
ಕಣ್ಣಿಗೆ ಮುದವನು ನೀಡುತಲಿ
ಎಣ್ಣೆಯ ತುಂಬುತ
ಸಣ್ಣನೆ ಬತ್ತಿಯ
ಚಿಣ್ಣರ ದೀಪವ ಬೆಳಗಸುವ
ದೀಪವು ಬೆಳಗುತ
ಪಾಪವು ತೊಲಗಿತು
ತಾಪವು ಕಳೆಯಿತು ಜನಪದರ
ಆಪದ ಕಳೆಯಿತು
ಸಂಪದ ಹೆಚ್ಚಿತು
ದೀಪವು ಬೆಳಗಿತು ಜೀವನವ
ವಿಜಯಭಾರತೀ.ಎ.ಎಸ್.
