STORYMIRROR

Vijaya Bharathi.A.S.

Abstract Classics Others

5  

Vijaya Bharathi.A.S.

Abstract Classics Others

ಅಕ್ಷರ ಮಾಲಾ ಸ್ತುತಿ

ಅಕ್ಷರ ಮಾಲಾ ಸ್ತುತಿ

1 min
710

ಅಷ್ಟದರಿದ್ರಗಳಾ  ನೀಗಿಸುತ

ಆನಂದವ ನೀಡು ಆದಿಯೋಗಿ

ಇಷ್ಟಾರ್ಥಗಳ ಕರುಣಿಸುತ

ಈತಿಭಾದೆಯ ನೀಗಿಸು ಈಶಾನ

ಉಪಟಳವ ಕಳೆಯಿಸುತ

ಊರ್ಜಿತಗೊಳಿಸು ಉಮೇಶ

ಋಷಿ ಹೃದಯವ ನೀಡುತ

ಋಜು ಮಾರ್ಗವ ತೋರು ಋಷಿಧುರ್ಯ

ಎಡರು ತೊಡರುಗಳ ತೊಡೆದು

ಏಕಾಗ್ರತೆ ಪಾಲಿಸು ಏಕದಂತ ಪಿತ

ಐಸಿರಿ ಕರುಣಿಸಿ ಸದ್ಬುದ್ಧಿ ನೀಡು ಈಶ್ವರನೆ

ಒಡಲುರಿಯ ತಣಿಸುತ

ಓದನವ ಕರುಣಿಸು ಓಂಕಾರೇಶ್ವರ

ಔದ್ದತ್ಯವ ತೊಲಗಿಸು ಔದಾರ್ಯ ಪ್ರಭು

ಅಂಧಕಾರವ ಕಳೆಯಿಸು ಅಂಧಕಾರೇಶ್ವರ

ಕಂಟಕಗಳ ತೊಡೆ ಕಂದರ್ಪಹರ

ಖುಷಿಯನು ನೀಡು ಖಂಡಪರಶು

ಗಮನಿಗಳ ದಮನಮಾಡು ಗಂಗಾಧರ

ಘನತೆಯ ಹೆಚ್ಚಿಸು ಗೌರಾಂಗ

ಚಡಪಡಿಕೆ ಯ ಕಳೆ ಚಂದ್ರಚೂಡ

ಛಾಂದಸ ಪ್ರಿಯ ಚಂದ್ರಶೇಖರ

ಜಗದ ಜಟಿಲಗಳ ಪರಿಹರಿಸುತ

ಝಣತ್ಕರಿಸು ನಿನಾದವ ಜಗದೀಶ

ಟಂಕಾರ ಮಾಡುತ ಢಕ್ಕೆಯ ಬಡಿದು

ಠಕ್ಕರ ನಡುಗಿಸು ನಟರಾಜ

ಡಂಬಕತನವನು ಅಟ್ಟೋಡಿಸುತ

ಢಮರುಗ ಮೊಳಗಿಸು ಪರಮೇಶ

ತಪಸ್ವಿಗಳ ತಾಪವ ತಗ್ಗಿಸಿ

ಥಟ್ಟನೆ ವರಕೊಡು ಶಿವಶಂಕರ

ದುಷ್ಟರ ದಂಡಿಸಿ ಶಿಷ್ಟರ ರಕ್ಷಿಸು

ಧರ್ಮವನುಳಿಸು ಧೂರ್ಜಟಿಯೇ

ನಂಜನು ನುಂಗಿ ವಿಶ್ವ ವನುಳಿಸಿದ

ಪರಮ ಕಾರುಣ್ಯ ನಂಜುಂಡೇಶ್ವರ

ಫಣಿಯನು ಧರಿಸಿಹ ಪಾಶುಪತಿ

ಬಾಗುವೆ ಶಿರವನು ನಿನ್ನ ಡಿಗೆ

ಭಕುತರ ಕಾಯೋ ಭವಹರನೇ

ಮದವನು ಮೆಟ್ಟಿ ಮನವನು ಅರಳಿಸಿ

ಯೋಗದಲ್ ನೆಲೆಸೋ ಮಹಾಯೋಗಿ

ರಕ್ಷಿಸು ಶಂಕರ ಮತ್ತಭಯಂಕರ

ಲಿಂಗರೂಪಿ ಮಹಾಲಿಂಗ

ವಿಶ್ವವ ರಕ್ಷಿಸಿ ರೋಗವ ತೊಲಗಿಸಿ

ಶಾಂತಿಯ ನೀಡು ಶಾಂಭವನೇ

ಷಣ್ಮುಖ ಪ್ರಿಯ ಷಡಕ್ಷರಿ ಮಂತ್ರರೂಪಿ

ಸರ್ವರಿಗೂ ಸುಖ ಶಾಂತಿ ಗಳ ನೀಡು

ಹರ ಹರ ಮಹಾದೇವ ಶಂಭೋ


ಸೂಚನೆ

ಗಮನಿ = ಮೋಸಗಾರ

ಟಂಕಾರ= ಬಿಲ್ಲಿನ ಝೇಂಕಾರ

ಛಾಂದಸ = ಛಂದಶ್ಶಾಸ್ತ್ರಜ್ಞ

ಋಷಿಧುರ್ಯ=ಶಿವ



Rate this content
Log in

Similar kannada poem from Abstract