ಸಂಗೀತ ಶಾರದೆ
ಸಂಗೀತ ಶಾರದೆ


ಕರೆಯುವಳು ಬಯಸಿ
ಬರುವ ಎಲ್ಲ ಜನರನ್ನ
ಆದರಿಸುವಳು ಅವಳು
ಕೆಲವೇ ಕೆಲವರನ್ನ
ಬೆನ್ನು ತಟ್ಟಿ ಕಳುಹಿಸುವಳು
ಪೂರ್ಣ ಕಲಿಯದವರನ್ನ
ತನ್ನಲ್ಲೇ ಉಳಿಸಿಕೊಳ್ಳುವಳು
ತಾನು ಇಷ್ಟಪಟ್ಟವರನ್ನ
ಶಾರೀರದಲ್ಲಿ ಕೂತು ಕಾಣುವಳು
ಸಂಗೀತವೇ ಉಸಿರೆನ್ನುವರನ್ನ
ತಾನು ಹಿಡಿದ ಕೈ ಸಡಿಲಿಸುವಳು
ಪ್ರಶಸ್ಥಿಯ ಹಿಂದೆ ಓಡುವರನ್ನ
ಕಷ್ಟಕೊಟ್ಟು ಪರೀಕ್ಷಿಸುವಳು
ಸಂಗೀತವೇ ಜೀವನವೆನ್ನುವರನ್ನ
ಕೈಬಿಡದೆ ಕಾಪಾಡುವಳು
ಸಂಗೀತವನ್ನ ಪೂರ್ಣ ನಂಬಿದವರನ್ನ