STORYMIRROR

Prajna Raveesh

Abstract Classics Others

4  

Prajna Raveesh

Abstract Classics Others

ಕಾಡುವ ಕನಸುಗಳು

ಕಾಡುವ ಕನಸುಗಳು

1 min
297

ನಿದ್ದೆಯಲ್ಲಿ ಸುಸ್ವಪ್ನಗಳು ಕಾಡಿದಾಗ

ಆಹಾ ಹೃನ್ಮನಕೆ ಎಂತಾ ಆನಂದವು

ಜೀವನದಲ್ಲಿ ನಡೆಯದ ಘಟನೆಗಳ

 ಮಾಯಾಲೋಕಕ್ಕೆ ಕೊಂಡೊಯ್ಯುವವು


ಸುಡು ಬವಣೆಯ ಜೀವನದಲಿ ಬೆಂದ ಜೀವಕ್ಕೆ

ರಾತ್ರಿಯ ಹೊತ್ತು ಹಿತವಾಗಿ ನಿದ್ದೆ ಸೋಕಿದಾಗ

ಸುಸ್ವಪ್ನಗಳು ಪದೇ ಪದೇ ಕಾಡಿದಾಗ ಮುದವು

ಕಣ್ಣೀರಿನ ಬಾಳಿನಲೂ ನೋವ ಮರೆಸುವುದು


ಸುಸ್ವಪ್ನಗಳು ಕಾಡಬೇಕು ನವೋಲ್ಲಾಸ ತುಂಬಲು

ನೀರಸ ಬದುಕಿನಲ್ಲಿ ಬಣ್ಣದ ಚಿತ್ತಾರ ಮೂಡಿಸಲು 

ನಾಳೆಯ ಬದುಕಿನ ಭರವಸೆ, ಗೆಲ್ಲುವೆನೆಂಬ ಛಲಕೆ

ಕಾಡುವ ಒಳ್ಳೆಯ ಕನಸುಗಳು ಸ್ಪೂರ್ತಿದಾಯಕವು


ಕಾಡುವ ದುಸ್ವಪ್ನಗಳಿಗೆ ಮನವು ನೋಯುವುದು

ಹೃನ್ಮನಕೆ ಆತಂಕ, ದಿಗಿಲು, ಬೇಸರ ಮೂಡಿಸುವುದು

ನಾಳೆಯ ಬದುಕಿನಲ್ಲಿ ನಿರಾಸೆ, ಅತೃಪ್ತಿಯ ತರುವುದು

ಬಾಳಿನಲ್ಲಿ ಸಾಧನೆಯ ಹಾದಿಗೆ ಭಂಗವನು ತರುವುದು


ನಿದ್ದೆಯಲಿ ಎಂದಿಗೂ ನವಿರಾದ ಸ್ವಪ್ನಗಳು ಮೂಡಲಿ

ಕಾಡುವ ದುಸ್ವಪ್ನಗಳಿಗೆ ದೇವರ ಸ್ಮರಣೆಯೇ ಮಾರ್ಗ

ಸ್ವಪ್ನಗಳೆಂಬುದು ಸುಪ್ತ ಮನದೊಳಗಿನ ಅಭಿಲಾಷೆಯು

ಮನದಾಕಾಂಕ್ಷೆಗಳು ಕನಸುಗಳಾಗಿ ಮುದ ನೀಡುವುದು.


Rate this content
Log in

Similar kannada poem from Abstract