STORYMIRROR

Vijaya Bharathi.A.S.

Abstract Classics Others

4  

Vijaya Bharathi.A.S.

Abstract Classics Others

ಮರಳಿ ಬಾ ಮುರಳಿ

ಮರಳಿ ಬಾ ಮುರಳಿ

1 min
227


ಎಲ್ಲಿಹೆಯೋ ನೀ ಯದು ಕುಲತಿಲಕನೆ?

ಮಧುರೆಗೆ ಪೋಗಿ ನೀ ಎನ್ನನು ಮರೆತೆಯಾ?

ಕಾದು ಕಾದು ಎನ್ನ ಕಂಗಳು ದಣಿದವೋ

ಎಂದು ಬರುವೆಯೋ ಕೃಷ್ಣ ಬೃಂದಾವನಕೆ?


ಯಮುನಾ ತಟದೊಳು ನಿನಗಾಗಿ ಕಾದಿಹೆನು

ಚಂದದ ಗೋಪೀ ಜನ ಗೋಪಿಯರೊಡನೆ

ನಿನ್ನಯ ವಿರಹದಿ ಬಳಲಿ ಬೆಂಡಾಗಿಹೆನೋ

ಎಂದು ಬರುವೆಯೋ ನೀ ಬೃಂದಾವನಕೆ?


ಗೋಪೀ ಲೋಲ ಹೇ ಗೋಪಾಲ ಗೋವಿಂದನೆ

ಮಂದಹಾಸದ ಮುರಳೀ ಲೋಲ ಮುಕುಂದನೆ

ನಿನ್ನ ಆ ಕೊಳಲ ದನಿಗೆ ಎನ್ನ ಕಿವಿ ಕಾದಿಹುದು

ಎಂದು ಬರುವೆಯೋ ಮುರಳಿ ಬೃಂದಾವನಕೆ?


ನಿನ್ನ ಪ್ರಾಣ ಸಖಿ ರಾಧೆಯ ಮರೆತೆಯಾ ?

ನೀನಿಲ್ಲದೆ ಅವಳಿಲ್ಲ ಎಂದರಿಯೆಯಾ ನೀ ?

ಮರಳಿ ಬೇಗ ಬಾರೆಯಾ ಕರುಣೆಯ ತೋರಿ?

ಎಂದು ಬರುವೆಯೋ ಮುರಾರಿ ಬೃಂದಾವನಕೆ?


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract