ಗೊಂಬೆ ಹಬ್ಬ
ಗೊಂಬೆ ಹಬ್ಬ
ಬಂದಿತು ಬಂದಿತು
ಗೊಂಬೆ ಹಬ್ಬ
ತಂದಿತು ತಂದಿತು
ಸಡಗರ ಸಂಭ್ರಮ
ಮನೆಮನೆಗಳಾ
ತೊಟ್ಟಿಯ ತುಂಬಾ
ಬಂದು ಕುಳಿತವು
ಹೊಸ ಬಟ್ಟೆ ಉಟ್ಟು
ಸುಂದರ ಮುಖದ
ಚೆಂದದ ಗೊಂಬೆ
ಪಟ್ಟದ ಮಹಾರಾಜ
ಮಹಾರಾಣಿ ಗೊಂಬೆ
ದವಸಧಾನ್ಯಗಳ
ಮುಂದೆ ಹರಡಿ
ದಪ್ಪ ಹೊಟ್ಟೆಯ
ಶೆಟ್ಟರ ಗೊಂಬೆ
ಅರಮನೆ ಅಂಗಳದ
ಅಂಬಾರಿ ಆನೆಗಳು
ಕುದುರೆ ಪ್ರಾಣಿಗಳು
ಚತುರಂಗ ಬೊಂಬೆ
ಮದುವೆ ಮಂಟಪ
ಮದು ಮಕ್ಕಳ ಬೊಂಬೆ
ಕ್ರೀಡಾ ಪಟುಗಳು
ಆಟಗಳ ಗೊಂಬೆ
ಮಕ್ಕಳ ಮೆಚ್ಚಿನ
ಉದ್ಯಾನವನದ
ಮಾಡೆಲ್ ಗೊಂಬೆ
ಸಾಲು ಸಾಲುಗಳಲ್ಲಿ
ನಿಂತವು ಗೊಂಬೆಗಳು
ಜೀವಂತವೆನಿಸುವ
ಭ್ರಮೆ ಹುಟ್ಟಿಸುತ
ಬಂದವು ಬಂದವು
ವಿಧ ವಿಧ ಗೊಂಬೆ
ಗೊಂಬೆ ಹಬ್ಬದಿ
ನಕ್ಕು ನಗಿಸಿದವು
ವಿಜಯಭಾರತೀ ಎ.ಎಸ್.
