ಸ್ವಾತಂತ್ರ್ಯ
ಸ್ವಾತಂತ್ರ್ಯ
ಬೆಚ್ಚಗಿನ ರಾತ್ರಿಯಲಿ
ತಲೆ ಹುಚ್ಚು ಹಿಡಿಸೋ ಹಾಗೆ
ಮೈ ರೊಚ್ಚಿಗೇಳಿಸುವಂತೆ
ಸ್ವಾತಂತ್ರ್ಯ ಸಂಗ್ರಾಮದ
ಕಿಚ್ಚು ಹತ್ತಿತ್ತು ಜನಕೆ !
ಸಲುಹಿದ ತಾಯಿ ಮೆಚ್ಚುವಂತೆ
ಆಂಗ್ಲರ ನುಚ್ಚು ನೂರಾಗಿಸುತ
ಪರದೇಶಿ ಇಚ್ಛೆ ದೂರೆಸೆದು
ಭಾರತಾಂಬೆ ನೆಚ್ಚುವಂದದಿ
ಕೆಚ್ಚೆದೆ ಕುವರರು
ಕಂಚಿನಾ ಕಂಠದಲಿ
ಕೆಂಚು ಕೂದಲಿನವರಿಗೆ
ದೈವತ್ವವನ್ನೇ ಹಂಚಿ ತಿಂದರಿಗೆ
ಕೊಂಚ ಕಟುವಾಗಿಯೆ
ಕೂಗಿ ಹೇಳಿದ್ದರು, ವಂದೇ ಮಾತರಂ
ಮಂತ್ರ ಸಾರಿದ್ದರು!
ಸ್ವಛಂದ ಆಗಸದಿ
ತಮ್ಮಿಚ್ಛೆಯಾ ಭುವಿಯಲ್ಲಿ
ವೀರ ಲಾಂಛನ ನೆಟ್ಟಿದ್ದರು!
ಸುಟ್ಟಿತ್ತು ಸೂರ್ಯಾಸ್ತ ಕಾಣದ ದೇಶ
ಅದೇ ಶಾಖದಲಿ
ನೆಲ ಕಚ್ಚಿತ್ತು ಸಾಮ್ರಾಜ್ಯ
ಚಳಿ ಬಿಟ್ಟಿತ್ತು ಜನಕೆ!