ಜಲಧಾರೆ
ಜಲಧಾರೆ


ಕಿವಿಗಿಂಪು ಕೃಷ್ಣ,
ಕೊಳಲೂದೆ ಕಾನನದಿ
ಕರೆದವು ಬಿಳಿ ಹಾಲ,
ಕರೆದೆಲ್ಲ ಗೋವುಗಳು
ಮಳೆಬಿಲ್ಲು ಮೂಡಿತು,
ಮಲೆನಾಡ ಮಡಿಲಲಿ
ತುಂಬಿ ಹರಿದಳು ನೋಡು,
ಕಾವೇರಿ ಕೃಷ್ಣೆ!
ಕಾರ್ಮೋಡ ಕವಿದೊಡೆ,
ಕರಿ ಶಾಯಿ ಆಗಸದಿ
ಕಣ್ಗೆಂಪು ಸೂರ್ಯ
ಕಣ್ಮರೆಯಾದ!
ಮಳೆಬಂತು ನೋಡು!
ಆಹಾ!! ಧಾರಾಕಾರ
ಮುಗಿಲು ಮುಟ್ಟಿತು ನೋಡು
ಜನರ ಚೀತ್ಕಾರ
ಓ! ಮಳೆರಾಯ,
ನೀನೆಷ್ಟು ಕೂೃರ
ಅತಿವೃಷ್ಟಿಯ ಸಾವು,
ಅನಾವೃಷ್ಟಿಯ ನೋವು
ಹೀಗೆಕೆ ಎಮಗೆ?
ಬರಿ ಕೊಂಕು ಸಲಿಗೆ?!
ಅಬ್ಬರದಿ ಬಂದಿಹೆ,
ಬೊಬ್ಬೆ ಹೊಡೆದರು ಬಗ್ಗದೆ
ಸಾಕು ನಿನ್ನಯ ಕೋಪ,
ಏಕೀ ಪ್ರತಾಪ?!!
ಬಾ ಗಂಗೆಯಾಗಿ,
ಶಿವನ ಮುಡಿಗೇರಲು
ಕಾವೇರಿಯಾಗಿ,
ಕಣ್ ಒರೆಸಲು!
ತುಂಗಭದ್ರೆಯು ನೀನೆ,
ಬ್ರಹ್ಮಪುತ್ರಿಯು ನೀನೆ
ಬ್ರಹ್ಮ ಮಾನಸ ಪುತ್ರಿ!
ಸಾಕ್ಷಾತ್ ಸರಸ್ವತಿ!