STORYMIRROR

Nagalakshmi K.P.

Abstract Classics Inspirational

4  

Nagalakshmi K.P.

Abstract Classics Inspirational

ದಾರಿ

ದಾರಿ

1 min
632

ನನ್ನ ಬದುಕಿನ ದಾರಿ 

ನಡೆವವರು ಯಾರು?

ನಾನೇ ಅಲ್ಲವೇ? 

ಉಪಮೇಯವೇನು?


ನಾ ನಡೆಯುವ ದಾರಿ, 

ನನದು ಮಾತ್ರವೆ ನೋಡು

ಅವನದಲ್ಲ ಇವಳದಲ್ಲ, 

ಯಾರದೂ ಅಲ್ಲ


ದಾರಿಗ ಸಮನಾದರು, 

ದಾರಿ ಸಮನಲ್ಲ!

ಒಂದೊಮ್ಮೆ ಸಮವಾದರು, 

ಎಂದೂ ಸಮವಲ್ಲ.


ನಾ ಹಾದು ಹೋದರೂ, ಹಿಂಬಾಲಿಸುವವರಾರು?

ಯಾರು ನಡೆಯದ ದಾರಿಯಲಿ 

ಸಾಗುವ ಧೈರ್ಯ ಇದೆಯೇನು?


ಹೀಗೆ ಸಾಗಿದರೆ, 

ದಾರಿಗ ದೂರಾದನೇ?

ನಮ್ಮಿಂದ ದೂರಾದರು 

ತನ್ನ ಗುರಿಗೆ ಹತ್ತಿರನಾದ.


ದೂರದಾ ಬೆಟ್ಟವದು 

ನುಣ್ಣಗಿದ್ದರೂ ಸಹಿತ,

ಕಲ್ಲು ಮುಳ್ಳುಗಳನ್ನು 

ಹಾಯುವುದು ಖಚಿತ.


ದಾರಿಗ ದೂರಾದರು 

ದಾರಿ ದೂರಾಗದು,

ಇಲ್ಲೇ ಇರುವೆನೆಂದು 

ಕೈ ಬೀಸಿ ಕರೆಯುತಿಹುದು.


ಇ೦ದೇ ಸಾಗೋಣ 

ನಮ್ಮ ದಾರಿಯಲಿ

ಗುರಿಯತ್ತ ನುಗ್ಗಿ ಎ೦ದೂ 

ಹಿ೦ದಿರುಗದೆಯೇ!


Rate this content
Log in

Similar kannada poem from Abstract