STORYMIRROR

JAISHREE HALLUR

Abstract Classics Others

4  

JAISHREE HALLUR

Abstract Classics Others

--- ಮಾನಸಿಕ ಅಸ್ವಸ್ತತೆ????---

--- ಮಾನಸಿಕ ಅಸ್ವಸ್ತತೆ????---

1 min
167


ಇದೋ ಈ ನಯನದೊಳಗೊಮ್ಮೆ ಹೊಕ್ಕು ನೋಡು

ಆಳವೇ ಅಳೆಯಲಾಗದಷ್ಟು ಪ್ರೀತಿಯ ಒರತೆಯಿಹುದು


ದಡದೊಳು ಕುಳಿತು ದಿಟ್ಟಿಸುವೆಯೇಕೆ ಶೂನ್ಯದೊಳು

ಯಾವುದೂ ಶಾಶ್ವತವಲ್ಲವಿಲ್ಲಿ ಅಗೋಜರವೇ ಎಲ್ಲ


ಎಣಿಸಲು ಲೆಕ್ಕಕ್ಕೆ ಸಿಗದ ಅನಿಸಿಕೆ ಅನುಮಾನಗಳು

ಮಣಿಯಲು ಬಾಗುವವು ನೂರು ಬಿಗುಮಾನಗಳು


ಕರದಲಿ ಸಡಗರವನ್ನಿಟ್ಟು ಅಟ್ಟವೇರಿ ಕುಳಿತೆಯೇಕೆ

ಕುಣಿದು ಕುಪ್ಪಳಿಸಲು ಅರಮನೆಯಾವರಣ ಬೇಕಿಲ್ಲ 


 ಸಣ್ಣ ಕನಸಿನ ತುಣುಕೊಂದೇ ಸಾಕು ತಾ ಚಿಗುರಲು

ಬಣ್ಣ ಬಳಿದು ಕುಣಿದಾಡುವವು ಹಗಲಿರುಳೆನ್ನದೆ


ಬೆರಳತುದಿಗೆ ತಾಕಿದಷ್ಟೇ ಪಾಲಿಗೆ ಬಂದ ಪಂಚಾಮೃತ

ಹೆರಳ ನೇವರಿಸಿ ದಡವಿ ಬೆಸುಗೈದ ಗಳಿಗೆ ಅಧೀಕೃತ


ಕಪ್ಪಿಟ್ಟ ಕಣ್ಣ ಕೊನೆಯಲಿ ಜಿನುಗಿದ ಹನಿಯೇ ಸಾಕ್ಷಿ

ಹೆಪ್ಪಿಟ್ಟ ಸನಾತನ ಧರ್ಮದಂತೆ ಘನೀಕೃತವೇ ನಿನ್ನಾತ್ಮ


ಕರಗದ ಹೆಬ್ಬಂಡೆ ಮರುಗದ ಮರದ ತೊಲೆಯಂತಾಗೆ

ಎರಗುವ ಎರವಲು ಚಿಂತೆಗೆ ಗೋಡೆಯಗಲವಾದಂತೆ


ಬಿರಿದು ಬಾಯಾರಿ ವನಿತೆಯೊಡಲು ಮಳೆಯ ಬೇಡಿದಂತೆ

ನಿನ್ನೊಳಗಿನ ನನ್ನನು ನಾ ಏಕೀಕರಿಸಲಾರದೆ ಕದಡಿದಂತೆ


ಆವಿರ್ಭಿಸು ಒಮ್ಮೆ ಭೋರ್ಗರೆವ ಕಡಲಿನಲೆಯಂತೆ

ಸಮಸ್ತ ಚಿಂತೆಗಳಿಗೂ ಚಿತಾಬಸ್ಮದ ತರ್ಪಣ ಗೈದಂತೆ..


Rate this content
Log in

Similar kannada poem from Abstract